ರತ್ನಮಾಲಾ ಪ್ರಕಾಶ್

ವಿಕಿಪೀಡಿಯ ಇಂದ
Jump to navigation Jump to search

ಅತ್ಯಂತ ಮಧುರ, ಹಾಗೂ ಹೃದಯಕ್ಕೆ ತಟ್ಟುವಂತೆ ಹಾಡಿದ ಭಾವಗೀತೆಗಳು ಕನ್ನಡ ರಸಿಕರಿಗೆ ದೊರಕಿದ್ದು ರತ್ನಮಾಲಾರವರು ಬಂದಮೇಲೆ. ಅದೇನೋ ಆ ಭಾವ ವರ್ಣನೆಗೆ ಸಿಲುಕದೆ ಅತಿ ಎತ್ತರಕ್ಕೆ ಸಾಗುವ ಅನುಭವ. ಮಧುರಸ್ವರ, ಭಾವ ಗೀತೆಯ ಅರ್ಥವಂತಿಕೆ, ಹಾಗೂ ಸ್ಪಷ್ಟ ಉಚ್ಚಾರಣೆಗಳು ಭಾವಗೀತೆಯನ್ನು ಕೇಳುಗರಿಗೆ ಮತ್ತೆ-ಮತ್ತೆ ಕೇಳುವಂತೆ ಪ್ರಚೋದಿಸುತ್ತವೆ.

ಜನನ ಹಾಗೂ ಪರಿವಾರ[ಬದಲಾಯಿಸಿ]

ಬೆಂಗಳೂರಿನಲ್ಲಿ ಸನ್.೧೯೫೨ ರ, ಆಗಸ್ಟ್, ೧೯ ರಂದು, ಜನಿಸಿದ ರತ್ನಮಾಲಾರ ತಂದೆ, ಸುಪ್ರಸಿದ್ಧ ಸಂಗೀತ ವಿದ್ವಾಂಸ,'ಡಾ.ಆರ್.ಕೆ.ಶ್ರೀಕಂಠನ್'. ತಾಯಿ 'ಮೈತ್ರೇಯಿ'. ಚಿಕ್ಕವರಾಗಿದ್ದಾಗಿನಿಂದ ತಂದೆಯವರ ಸಂಗೀತ ಪಾಠದ ಗರಡಿಯಲ್ಲಿ ಬೆಳೆದರು. ಆದರೆ ಅವರು ಆಯ್ದುಕೊಂಡಿದ್ದು ಸುಗಮ ಸಂಗೀತವನ್ನು.

 • ಮೈಸೂರು ಅನಂತಸ್ವಾಮಿ
 • ಸಿ ಅಶ್ವಥ್,
 • ಪದ್ಮಚರಣ,
 • ಎಚ್.ಕೆ.ನಾರಾಯಣ,

ಮೊದಲಾದ ದಿಗ್ಗಜರ ಸಂಗೀತ ನಿರ್ದೇಶನದಲ್ಲಿ ತಮ್ಮ ಗಾಯನವನ್ನು ಪ್ರಸ್ತುತಪಡಿಸಿ,'ಸೈ'ಎನ್ನಿಸಿಕೊಂಡರು.

ಸಿಡಿ,ಕ್ಯಾಸೆಟ್ ಗಳಲ್ಲಿ ಧ್ವನಿಮುದ್ರಿಕೆಗಳು[ಬದಲಾಯಿಸಿ]

ಐನೂರಕ್ಕೂ ಮಿಗಿಲಾದ 'ಸಿಡಿ'ಗಳಲ್ಲಿ 'ಕ್ಯಾಸೆಟ್' ಗಳಲ್ಲಿ ತಮ್ಮ ಧ್ವನಿಯನ್ನು ಮುದ್ರಿಸಲಾಗಿದೆ.

 • ಕೆಂ ಗುಲಾಬಿ
 • ಮೈಸೂರು ಮಲ್ಲಿಗೆ
 • ಭಾವ ಸಂಗಮ
 • ಡಾ.ರಾಜ್ ಕುಮಾರ್ ಜೊತೆಗೆ ಹಾಡಿರುವ 'ಅನುರಾಗ'
 • ಮಂಕು ತಿಮ್ಮನ ಕಗ್ಗ
 • ಚೈತ್ರ
 • ರೂಪಸಿ
 • ಭಾವೋತ್ಸವ
 • ಕವಿತಾ
 • ಸ್ಪಂದನ
 • ನೆನಪಿನಾಳದಲ್ಲಿ
 • ನೀಲಾಂಬರಿ,
 • ಅಣಿಮುತ್ತುಗಳು

ಖ್ಯಾತ ಸಂಗೀತ ನಿರ್ದೇಶಕರ ಜೊತೆ[ಬದಲಾಯಿಸಿ]

 • ಟಿಜಿ ಲಿಂಗಪ್ಪ
 • ಹಂಸಲೇಖ
 • ರಾಜನ್ ನಾಗೇಂದ್ರ
 • ವಿಜಯ ಭಾಸ್ಕರ
 • ಅಶ್ವಥ್-ವೈದಿ,

ಮುಂತಾದವರ ನಿರ್ದೇಶನದಲ್ಲಿ ಹಾಡಿದ ಚಲನಚಿತ್ರ ಗೀತೆಗಳು ಅಪಾರ.

ಡಾ.ರಾಜ್ ಜೊತೆ ಹಾಡಿದ್ದು[ಬದಲಾಯಿಸಿ]

ವಿಶೇಷವಾಗಿ ನೆನೆಸುವುದಾದರೆ,ಡಾ.ರಾಜ್ ರೊಡನೆ, 'ಗುರಿ', ಡಾ. ಎಸ್.ಪಿ.ಬಾಲಸುಬ್ರಮಣ್ಯಂ ರೊಡನೆ ಹಾಡಿದ, 'ಏಳು ಸುತ್ತಿನ ಕೋಟೆ' ಚಿತ್ರಗಳಿಗೆ ಹಾಡಿದ ಹಾಡುಗಳು. ಆಕಾಶವಾಣಿ,ದೂರದರ್ಶನದಲ್ಲಿ ಪ್ರಸಾರವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಪ್ರಸಂಗಗಳು.

ಮತ್ತೆ ಕೆಲವು ಮರೆಯಲಾರದ ಅನುಭವಗಳು[ಬದಲಾಯಿಸಿ]

 • ಸೋವಿಯೆಟ್ ರಶ್ಯಾದಲ್ಲಿ ಜರುಗಿದ 'ಭಾರತದ ಉತ್ಸವದಲ್ಲಿ ಪಂಡಿತ್ ರವಿಶಂಕರ್ ತಂಡದಲ್ಲಿ ಭಾಗವಹಿಸಿ ಹಾಡಿದ ಹೆಗ್ಗಳಿಕೆ'.
 • ದೇಶ-ವಿದೇಶಗಳಲ್ಲಿ ಹಾಡಿದ ಖ್ಯಾತಿ. ದುಬೈ,ಸಿಂಗಪುರ್ ಕನ್ನಡ ಸಂಘ, ಶಾರ್ಜಾ, ಅಬುದಾಬಿಯಲ್ಲಿ ಮೈಸೂರು ಅನಂತ ಸ್ವಾಮಿ ತಂಡದಲ್ಲಿ ಹಾಡಿದರು.
 • ಅಮೇರಿಕಾದ ಫಿನಿಕ್ಸ್, ಹಾಗೂ ಹೂಸ್ಟನ್ ಕನ್ನಡ ಸಂಘದಲ್ಲಿ ಭಾಗವಹಿಸಿ ಹಾಡಿದ ಅತ್ಯದ್ಭುತ ಅನುಭವಗಳು.
 • 'ರಮಾ ಫೌಂಡೇಶನ್' ಅಡಿಯಲ್ಲಿ ಬಾಲಪ್ರತಿಭೆಗಳಿಗೆ ಕೊಟ್ಟ ಉತ್ತೇಜನ,
 • 'ಕರ್ನಾಟಕ ವೈಜಯಂತಿ ಮೂಲಕ ಕರ್ನಾಟಕದಾದ್ಯಂತ ಹಮ್ಮಿಕೊಂಡ ಕಾರ್ಯಕ್ರಮಗಳು.

ಪ್ರಶಸ್ತಿ,ಪುರಸ್ಕಾರಗಳು[ಬದಲಾಯಿಸಿ]

 • 'ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ'ಯಿಂದ 'ಕರ್ನಾಟಕ ಕಲಾ ತಿಲಕ' ಪ್ರಶಸ್ತಿ.
 • 'ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ',
 • 'ಆರ್ಯ ಭಟ ಪ್ರಶಸ್ತಿ',
 • 'ದುಬೈ,ಸಿಂಗಪುರ ಅಬುದಾಬಿ,ಕನ್ನಡಸಂಘಗಳಿಂದ ದೊರೆತ ಪ್ರಶಸ್ತಿಗಳು ಮುಖ್ಯವಾದವುಗಳು.