ರಕ್ತಕಾರಿ ಹುಳು
ರಕ್ತಕಾರಿ ಹುಳು | |
---|---|
ಶಿಸ್ಟೊಸೋಮಾ ಮ್ಯಾನ್ಸೋನಿಯ ಮೊಟ್ಟೆ | |
Scientific classification | |
ಕ್ಷೇತ್ರ: | ಯೂಕ್ಯಾರ್ಯೋಟಾ |
ಸಾಮ್ರಾಜ್ಯ: | ಅನಿಮೇಲಿಯ |
ವಿಭಾಗ: | ಪ್ಲ್ಯಾಟಿಹೆಲ್ಮಿಂತಸ್ |
ವರ್ಗ: | ಟ್ರೆಮಟೋಡಾ |
ಗಣ: | ಡಿಪ್ಲೊಸ್ಟೋಮಿಡಾ |
ಕುಟುಂಬ: | ಶಿಸ್ಟೋಸೊಮ್ಯಾಟಿಡೀ |
ಉಪಕುಟುಂಬ: | ಶಿಸ್ಟೋಸೊಮ್ಯಾಟಿನೀ |
ಕುಲ: | ಶಿಸ್ಟೋಸೊಮಾ Weinland, 1858 |
ಪ್ರಭೇದಗಳು | |
ಶಿಸ್ಟೋಸೊಮಾ ಬಾಮ್‍ಫ಼ೋರ್ಡಿ |
ರಕ್ತಕಾರಿ ಹುಳು ಎಂಬುದು ಪ್ರಾಣಿಪ್ರಪಂಚದ ಚಪ್ಪಟೆಹುಳುಗಳು (ಪ್ಲಾಟಿಹೆಲ್ಮಿಂತಿಸ್) ವಂಶಕ್ಕೆ ಸೇರಿದ ಪರತಂತ್ರಜೀವಿ (ಬ್ಲಡ್ ಫ್ಲೂಕ್). ಈ ಹುಳುಗಳು ಮನುಷ್ಯ ಮತ್ತು ಇತರ ಕಶೇರುಕ ಪ್ರಾಣಿಗಳ ರಕ್ತನಾಳಗಳಲ್ಲಿ ಪರತಂತ್ರ ಜೀವಿಗಳಾಗಿ ಇರುತ್ತವೆ. ಮನುಷ್ಯರಲ್ಲಿ ಕಂಡುಬರುವ ರಕ್ತಕಾರಿ ಹುಳುವಿನ ಜೈವಿಕನಾಮ ಸಿಸ್ಟೊಸೋಮ ಹೆಮಟೋಬಿಯಮ್. ಇನ್ನಿತರ ಕಶೇರುಕಗಳಲ್ಲಿ ಪರತಂತ್ರ ಜೀವಿಗಳಾಗಿರುವಂಥವು ಎಂದರೆ ಸಿ. ಮ್ಯಾನ್ಸೊನಿ, ಸಿ. ನೆಸಾಲೆ, ಸಿ. ಬೊವಿಸ್ ಮುಂತಾದವು.
ದೇಹರಚನೆ
[ಬದಲಾಯಿಸಿ]ಗಂಡು ಮತ್ತು ಹೆಣ್ಣುಗಳ ನಡುವೆ ಸಾಕಷ್ಟು ಭಿನ್ನತೆ ಇದೆ. ಲೈಂಗಿಕ ದ್ವಿರೂಪತೆ (ಸೆಕ್ಷುಯಲ್ ಡೈಮಾರ್ಫಿಸಮ್) ಈ ಪ್ರಭೇದಗಳ ಸಾಮಾನ್ಯ ಗುಣ, ಚಿಕ್ಕ ಗಂಡು ಮತ್ತು ಹೆಣ್ಣು ಹುಳುಗಳು ಬೇರೆಬೇರೆಯಾಗಿದ್ದರೆ, ಪ್ರೌಢ ಗಂಡುಹುಳು ಹೆಣ್ಣನ್ನು ಮೈಮೇಲೆ ಇಟ್ಟುಕೊಂಡು ಜೊತೆಗೂಡಿರುತ್ತದೆ. ಗಂಡು ಹುಳುವಿನ ದೇಹದ ಮೇಲೆ ತೋಡುರಚನೆ (ಗ್ರೂವ್) ಇದೆ. ಇದಕ್ಕೆ ಕೆನಾಲಿಸ್ ಗೈನೆಕೊಫೊರಸ್ ಎಂದು ಹೆಸರು. ಈ ತೋಡು ರಚನೆಯಲ್ಲಿ ಹೆಣ್ಣುಹುಳು ಆಶ್ರಯ ಪಡೆದು ಗಂಡಿನೊಂದಿಗೆ ಇರುತ್ತದೆ.[೧] ಗಂಡು ಹುಳುಗಳು ಚಿಕ್ಕದಾಗಿದ್ದರೂ ದಷ್ಟಪುಷ್ಟವಾಗಿರುತ್ತವೆ. ಇವುಗಳ ಉದ್ದ 10-15 ಸೆಂ.ಮೀ; ಅಗಲ 1 ಮಿಮೀ. ಹೀರುತಟ್ಟೆಗಳು (ಸಕರ್ಸ್) ಚೆನ್ನಾಗಿ ಬೆಳೆದಿದ್ದು ಅವುಗಳಲ್ಲಿ ಸೂಕ್ಷ್ಮ ತೆರನಾದ ಮುಳ್ಳುಗಳಿರುತ್ತವೆ. ಈ ಹುಳುಗಳು ಆತಿಥೇಯ ಪ್ರಾಣಿಯ ಚರ್ಮವನ್ನು ಭೇದಿಸಿ ದೇಹದೊಳಕ್ಕೆ ನುಸುಳುತ್ತದೆ.
ಹರಡುವ ರೀತಿ
[ಬದಲಾಯಿಸಿ]ಹೆಣ್ಣು ಹುಳುಗಳು ಇಟ್ಟ ಮೊಟ್ಟೆಗಳು ಮೂತ್ರದ ಮೂಲಕ ಹೊರಬರುತ್ತವೆ.[೨] ಮೊಟ್ಟೆಗಳಿಂದ ಹೊರಬಂದ ಮಿರಸಿಡಿಯಮ್ ಎಂಬ ಡಿಂಬ ಈ ಹುಳುವಿನ ಬೆಳೆವಣಿಗೆಯ ಒಂದು ಹಂತ. ಈ ಡಿಂಬ ನೀರಿನಲ್ಲಿ ಸ್ವಲ್ಪ ಹೊತ್ತು ಈಜುತ್ತಲಿದ್ದು, ಮಧ್ಯವರ್ತಿ ಆತಿಥೇಯ ಪ್ರಾಣಿಯಾದ ಬಸವನಹುಳುವಿನ ದೇಹದಲ್ಲಿ ಸೇರಿಕೊಳ್ಳುತ್ತದೆ.[೩] ಕ್ರಮೇಣ ಮತ್ತಷ್ಟು ಬೆಳವಣಿಗೆ ಹೊಂದಿ ಸಿರ್‌ಕೇರಿಯ ಡಿಂಬ ಎಂಬ ರೂಪತಳೆಯುತ್ತದೆ. ಸಿರ್‌ಕೇರಿಯ ಎಂಬ ಡಿಂಬವು ಬಸವನಹುಳುವಿನ ದೇಹದಿಂದ ಹೊರಬಂದು ನೀರಿನಲ್ಲಿ ಈಜುತ್ತಿರುವಾಗ ಮನುಷ್ಯ ದೇಹವನ್ನು ಸ್ಪರ್ಶಿಸಿದರೆ ಅದು ಚರ್ಮವನ್ನು ಭೇದಿಸಿ ರಕ್ತನಾಳಗಳನ್ನು ಸೇರುತ್ತದೆ.
ಕೆಲವು ಪ್ರಭೇದಗಳು
[ಬದಲಾಯಿಸಿ]ಮನುಷ್ಯರಲ್ಲಿ ಪರತಂತ್ರಜೀವಿಯಾದ ಸಿ. ಹೆಮಟೊಬಿಯಮ್ ಆಫ್ರಿಕ ಖಂಡದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಪ್ರೌಢಹುಳುಗಳು ರಕ್ತಮೂತ್ರ (ಹೆಮಟ್ಯೂರಿಯ) ರೋಗಕ್ಕೆ ಕಾರಣವೆನಿಸುತ್ತದೆ. ಭಾರತದಲ್ಲಿ ಸಿ. ಇಂಡಿಕಮ್, ಸಿ. ಸ್ಪಿಂಡಿಯಾಲಿಸ್ ಮತ್ತು ಸಿ. ಬೋವಿಸ್ ಎಂಬ ರಕ್ತಹುಳುಗಳು ದನಗಳಲ್ಲಿ ಪರತಂತ್ರಜೀವಿಗಳಾಗಿ ಇರುತ್ತವೆ.[೪]
ಉಲ್ಲೇಖಗಳು
[ಬದಲಾಯಿಸಿ]- ↑ Hicks, R; Newman, J (1977). "The surface structure of the tegument of Schistosoma haematobium". Cell Biology International Reports. 1 (2): 157–167. doi:10.1016/0309-1651(77)90036-4. PMID 608178.
- ↑ Barakat, Rashida M.R. (2013). "Epidemiology of Schistosomiasis in Egypt: Travel through Time: Review". Journal of Advanced Research. 4 (5): 425–432. doi:10.1016/j.jare.2012.07.003. PMC 4293883. PMID 25685449.
- ↑ Liu L, Mondal MM, Idris MA, Lokman HS, Rajapakse PJ, Satrija F, Diaz JL, Upatham ES, Attwood SW (July 2010). "The phylogeography of Indoplanorbis exustus (Gastropoda: Planorbidae) in Asia". Parasites & Vectors. 3: 57. doi:10.1186/1756-3305-3-57. PMC 2914737. PMID 20602771.
- ↑ Attwood SW, Fatih FA, Mondal MM, Alim MA, Fadjar S, Rajapakse RP, Rollinson D (December 2007). "A DNA sequence-based study of the Schistosoma indicum (Trematoda: Digenea) group: population phylogeny, taxonomy and historical biogeography". Parasitology. 134 (Pt.14): 2009–20. doi:10.1017/S0031182007003411. PMID 17822572. S2CID 22737354.
ಹೊರಗಿನ ಕೊಂಡಿಗಳು
[ಬದಲಾಯಿಸಿ]- British Department for International Development Control of Schistosomiasis
- The World Health Organisation page on Schistosomiasis
- University of Cambridge Schistosome Laboratory Archived 2014-07-14 ವೇಬ್ಯಾಕ್ ಮೆಷಿನ್ ನಲ್ಲಿ.
- Schistosoma parasites overview, biology, life cycle image at MetaPathogen