ಯಯಾತಿ(ನಾಟಕ)

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

'ಯಯಾತಿ,' 'ಗಿರೀಶ್ ಕಾರ್ನಾಡ್ ಬರೆದು ಆಡಿದ ಪ್ರಪ್ರಥಮ ನಾಟಕ. ಇದೇ ಹೆಸರಿನ ಕಾದಂಬರಿಯನ್ನು ಮರಾಠಿಯಲ್ಲಿ ವಿ.ಎಸ್. ಖಾಂಡೇಕರ್ ಅವರು ಬರೆದಿದ್ದು ಅದಕ್ಕೆ ಜ್ಞಾನಪೀಠ ಪ್ರಶಸ್ತಿ ಬಂದಿದ್ದು ಕನ್ನಡಕ್ಕೆ ಅದನ್ನು ವಿ.ಎಂ.ಇನಾಂದಾರ್ ಅನುವಾದ ಮಾಡಿದ್ದಾರೆ.

ಕಥಾಸಾರ[ಬದಲಾಯಿಸಿ]

ಯಯಾತಿಯು ಪೌರಾಣಿಕ ವ್ಯಕ್ತಿ. ಪಾಂಡವರ ಪೂರ್ವಜರಲ್ಲಿ ಒಬ್ಬ. ನಹುಷನ ಮಗ. ಅವನಿಗೆ ಇಬ್ಬರು ಹೆಂಡತಿಯರು- ಶರ್ಮಿಷ್ಠೆ ಮತ್ತು ದೇವಯಾನಿ. ಶರ್ಮಿಷ್ಠೆ ರಾಕ್ಷಸರಾಜನ ಮಗಳು. ದೇವಯಾನಿ ಅಸುರರ ಗುರು ಶುಕ್ರಾಚಾರ್ಯರ ಮಗಳು. ಶುಕ್ರಾಚಾರ್ಯರು ಯಯಾತಿಗೆ ಮುಪ್ಪು ಬರಲಿ ಎಂದು ಶಾಪ ಕೊಟ್ಟರು. ನಂತರ ಶರ್ಮಿಷ್ಠೆಯ ಮಗನಾದ ಪುರುವು ತಂದೆಯ ಮುಪ್ಪನ್ನು ತಾನು ತೆಗೆದುಕೊಂಡು ತನ್ನ ಯೌವನವನ್ನು ಅವನಿಗೆ ಕೊಟ್ಟನು. ಕೆಲವು ಕಾಲ ಯೌವನವನ್ನು ಅನುಭವಿಸಿ ಯಯಾತಿಯು ತನ್ನ ಯೌವನವನ್ನು ಪುರುವಿಗೆ ಮರಳಿಸಿದನು. ದೇವಯಾನಿಯ ಮಗ ಯದು. ಇವನಿಂದ ಯಾದವ ವಂಶ ಆರಂಭವಾಯಿತು. ಶ್ರೀಕೃಷ್ಣನು ಇದೇ ವಂಶಕ್ಕೆ ಸೇರಿದವನು.ಮಹಾಭಾರತದ ಆದಿಪರ್ವ ಮತ್ತು ಭಾಗವತ ಪುರಾಣದಲ್ಲಿ ಇವರ ಕಥೆ ವಿವರಿಸಲಾಗಿದೆ.