ವಿ.ಎಂ.ಇನಾಂದಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿ.ಎಂ.ಇನಾಂದಾರ ಅವರ ಪೂರ್ಣ ಹೆಸರು ವೆಂಕಟೇಶ ಮಧ್ವಾರಾಯ ಇನಾಂದಾರ.ಕನ್ನಡ ಸಾಹಿತ್ಯದ ಶ್ರೇಷ್ಠ ಕಾದಂಬರಿಕಾರರು, ವಿಮರ್ಶೆಕರು, ಅನುವಾದಕರಾಗಿ ಸೇವೆಗೈದ ಅನುಪಮ ವ್ಯಕ್ತಿ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಹುದವಿಯಲ್ಲಿ; ೧೯೧೨ರ ಅಕ್ಟೋಬರ್ ಒಂದರಂದು. ತಂದೆ:ಮಧ್ವರಾವ್, ತಾಯಿ: ಕಮಲಾಬಾಯಿ. ಬೆಳಗಾವಿ, ಅಥಣಿ, ವಿಜಯಪುರ, ಮುಂಬಯಿಗಳಲ್ಲಿ ಅವರ ಶಿಕ್ಷಣ ನಡೆಯಿತು.

ವೃತ್ತಿ ಜೀವನ[ಬದಲಾಯಿಸಿ]

ಬಿ.ಎ ಪದವಿ ಪಡೆದು ವಿಜಯಪುರದ ನ್ಯಾಯಲಯದಲ್ಲಿ ಭಾಷಾಂತರಕಾರರಾಗಿ ವೃತ್ತಿಜೀವನ ಆರಂಭಿಸಿದರು. ಆನಂತರ ೧೯೩೮ರಲ್ಲಿ ವಕೀಲ ಪರೀಕ್ಷೆ ಪಾಸು ಮಾಡಿ ೧೯೪೧ರಲ್ಲಿ ಇಂಗ್ಲಿಷ್ ಎಂ.ಎ ಪದವಿ ಪಡೆದರು. ಕಾಲೇಜು ಅಧ್ಯಾಪಕರಾಗಿ ತಾವು ಹಲವಾರು ಕಡೆಗಳಲ್ಲಿ ಕೆಲಸ ಮಾಡಿದ್ದಾರೆ.

  • ಮುಂಬಯಿ
  • ಧಾರವಾಡ
  • ಅಹಮದಬಾದ್
  • ಮಂಗಳೂರು
  • ಉಡುಪಿ
  • ಶಿವಮೊಗ್ಗ
  • ಬೆಂಗಳೂರು

ಕೆಲಕಾಲ ಬೆಂಗಳೂರಿನ ವಿಶ್ವವಿದ್ಯಾನಿಲಯದಲ್ಲಿ ಯುಜಿಸಿ ಗೌರವ ಪ್ರಾಧ್ಯಾಪಕರಾಗಿಯೂ ತಮ್ಮನ್ನು ಹೆಸರಿಸಿಕೊಂಡಿದ್ದಾರೆ.

ಕಾದಂಬರಿಗಳು[ಬದಲಾಯಿಸಿ]

  • ಮೂರಾಬಟ್ಟೆ (೧೯೪೬) ಮೊದಲ ಕಾದಂಬರಿ
  • ಕನಸಿನ ಮನೆ (೧೯೪೭)
  • ವಿಜಯಯಾತ್ರೆ (೧೯೪೮)
  • ಶಾಪ (೧೯೪೯)
  • ಸ್ವರ್ಗದ ಬಾಗಿಲು(೧೯೫೦)
  • ಕಟ್ಟಿದ ಮನೆ (೧೯೫೩)
  • ಮುಗಿಯದ ಕತೆ (೧೯೫೩)
  • ಈ ಪರಿಯ ಸೊಬಗು (೧೯೫೩)
  • ಚಿತ್ರಲೇಖಾ (೧೯೬೧)
  • ಮಂಜುಮುಸುಕಿದ ದಾರಿ (೧೯೬೬)
  • ಊರ್ವಶಿ (೧೯೬೮)
  • ನೌವಿಲು ನೌಕೆ (೧೯೭೧)
  • ಯಾತ್ರಿಕರು (೧೯೭೬)
  • ಕತ್ತಲೆಯ ಕಡಲು (೧೯೭೨)
  • ಬಾಡಿದ ಹೂವು (೧೯೭೨)
  • ತ್ರಿಶಂಕು (೧೯೮೮)

ಅನುವಾದ ಕಾದಂಬರಿಗಳು[ಬದಲಾಯಿಸಿ]

  • ಎರಡು ಧ್ರುವ (೧೯೩೭)
  • ಯಯಾತಿ (೧೯೭೭)

ವಿ.ಸ.ಖಾಂಡೇಕರ್ ಅವರ ಮರಾಠಿ ಕೃತಿಯ ಅನುವಾದ ಯಯಾತಿ ಹೆಸರಿನಲ್ಲಿ ಮಾಡಿದ್ದಾರೆ. ವಿಮರ್ಶೆ ಕ್ಷೇತ್ರದಲ್ಲಿ ಅವರ ಕೊಡುಗೆ ಇದೆ.

ಪೌರ್ಯಾತ್ಯ ಪಾಶ್ಚಾತ್ಯ ಸಾಹಿತ್ಯಗಳೆರಡರಲ್ಲು ಅವರ ಪಾಂಡಿತ್ಯ ಹೊಂದಿದ್ದರು. ಇಂಗ್ಲಿಷನಲ್ಲೂ ಅವರು ಹಲವಾರು ಕೃತಿಗಳನ್ನು ಬರೆದಿದ್ದಾರೆ. 'ಶಾಪ' ಕಾದಂಬರಿ ಚಲನಚಿತ್ರವಾಗಿದೆ. ಖಾಂಡೇಕರರ ಇನ್ನೊಂದು ಕಾದಂಬರಿ 'ದೋನಧ್ರುವ' ಅನ್ನು ಎರಡು ಧ್ರುವ ಕಾದಂಬರಿಯಾಗಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ.

ಸಾಹಿತ್ಯ ವಿಮರ್ಶೆ[ಬದಲಾಯಿಸಿ]

  • ಪಾಶ್ಚಾತ್ಯ ವಿಮರ್ಶೆಯ ಪ್ರಾಚೀನ ಪರಂಪರೆ (೧೯೭೩)
  • ವಿ.ಸೀ.೭೫ (ಸಂಪಾದನೆ ೧೯೭೪)
  • ಶಿವರಾಮ ಕಾರಂತರ: ಬದುಕು-ಬರಹ (೧೯೭೮)
  • ಕುವೆಂಪು ಕಾದಂಬರಿಗಳು (೧೯೭೮)
  • ಶ್ರೀರಾಮಪಟ್ಟಾಭಿಷೇಕ (೧೯೮೦)
  • ಶ್ರೀನಿವಾಸರ ಕಾದಂಬರಿಗಳಲ್ಲಿ ಜೀವನ ದರ್ಶನ (೧೯೮೦)
  • ಆಲೋಕ (೧೯೦೧)
  • ಪಾಶ್ಚಾತ್ಯ ಕಾವ್ಯ ಮೀಮಾಂಸೆ (೧೯೮೨)
  • ಬಿ.ಎಂ.ಶ್ರೀ: ಬದುಕು-ಬರಹ (೧೯೮೩)

ಅಭಿನಂದನ ಗ್ರಂಥ[ಬದಲಾಯಿಸಿ]

  • ನವನೀತ
  • ಕಾದಂಬರಿ ಲೋಕ

ನಿಧನ[ಬದಲಾಯಿಸಿ]

೧೯೮೬ರ ಜನವರಿ ೨೬ ರಂದು ದೈವಾಧೀನರಾದರು.

ಉಲ್ಲೇಖಗಳು[ಬದಲಾಯಿಸಿ]

  • ಮಾಹಿತಿ ಕೃಪೆ: ಕಣಜ.