ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್,[೧] (೧೯೯೨-) ಎಂದು ಈಗ ಪ್ರಸಿದ್ಧರಾಗಿರುವ ಯದುವೀರರನ್ನು ಯದುವಂಶದ ೨೭ನೆಯ ಅಧಿಕಾರಿಯಾಗಿ, 'ಮಹಾರಾಣಿ ಪ್ರಮೋದಾದೇವಿ'ಯವರು ೨೦೧೫ ರ, ಫೆಬ್ರವರಿ ೨೩, ರಂದು ದತ್ತುಪುತ್ರನಾಗಿ ಸ್ವೀಕರಿಸಿದರು. 'ದಿ.ಶ್ರೀಕಂಠದತ್ತ ಒಡೆಯ ಯದುವೀರ್, ರ ಮೊದಲಹೆಸರು, 'ಯದುವೀರ್ ಗೋಪಾಲರಾಜೇ ಅರಸ್,' ಎಂದು. ದತ್ತು ಸ್ವೀಕಾರ ಸಮಾರಂಭದ ಸಮಯದಲ್ಲಿ ಈ ಹೆಸರನ್ನು ಬದಲಾಯಿಸಲಾಯಿತು. ಶ್ರೀಕಂಠದತ್ತ ಒಡೆಯರ್ ಮತ್ತು ಪ್ರಮೋದಾ ದೇವಿ ದಂಪತಿಗಳಿಗೆ ಮಕ್ಕಳಿಲ್ಲದ್ದರಿಂದ ಈ ನಿರ್ಧಾರ ಕೈಗೊಳ್ಳಬೇಕಾಯಿತು. 'ದಿ.ಶ್ರೀಕಂಠದತ್ತ ಒಡೆಯರು ನಿಧನರಾದ ೧೪ ತಿಂಗಳ ಬಳಿಕ, ೧೫೦ ವರ್ಷಗಳ ಇತಿಹಾಸದ ಯದುವಂಶಕ್ಕೆ ಒಬ್ಬ ಸಮರ್ಥ ಉತ್ತರಾಧಿಕಾರಿಯನ್ನು ಹುಡುಕಲಾಯಿತು. [೨] ಹೊರಗಿನ ಕುಡಿ,ಯದುವೀರ ತಂದೆ ಬೆಟ್ಟದ ಕೋಟೆ ಅರಸು ಪರಂಪರೆಯವರು. ಜಯಚಾಮರಾಜ ಒಡೆಯರ ಮರಿಮಗ. 'ದಿ.ಶ್ರೀಕಂಠದತ್ತ ಒಡೆಯ'ರ ಹಿರಿಯ ಸೋದರಿ 'ದಿ|ಗಾಯತ್ರಿ ದೇವಿ', ಮತ್ತು 'ದಿ|ರಾಮಚಂದ್ರ ಅರಸ್' ರ ಪುತ್ರಿ 'ತ್ರಿಪುರಸುಂದರೀದೇವಿ' ಮತ್ತು 'ಸ್ವರೂಪ್ ಗೋಪಾಲ ರಾಜೇ ಅರಸ್', ರವರ ಏಕೈಕ ಪುತ್ರ. ಯದುವೀರ್ ಗೆ ಒಬ್ಬ ಸೋದರಿ 'ಜಯಾತ್ಮಿಕಾ' ಇದ್ದಾಳೆ.
ಶಿಕ್ಷಣ[ಬದಲಾಯಿಸಿ]
'ಯದುವೀರ್,' ಬೆಂಗಳೂರಿನ, 'ವಿದ್ಯಾನಿಕೇತನ್ ಶಿಕ್ಷಣ ಸಂಸ್ಥೆ'ಯಲ್ಲಿ 'ಎಸ್. ಎಸ್.ಎಲ್.ಸಿ'. ತರಗತಿ ಮುಗಿಸಿ, 'ಕೆನೆಡಿಯನ್ ಅಂತಾರಾಷ್ಟ್ರೀಯ ಶಾಲೆ'ಯಲ್ಲಿ ೧೨ ನೆಯ ತರಗತಿಯವರೆಗೆ ಓದಿರುವ ಅಮೆರಿಕದಲ್ಲಿ 'ಬಾಸ್ಟನ್ ವಿಶ್ವವಿದ್ಯಾಲಯ'ದಲ್ಲಿ ಅರ್ಥಶಾಸ್ತ್ರ ಮತ್ತು ಆಂಗ್ಲಭಾಷಾ ವಿಷಯಗಳಲ್ಲಿ ಬಿ.ಎ; ಪದವಿಗಾಗಿ ಅಧ್ಯಯನ ನಡೆಸುತ್ತಿದ್ದಾರೆ. ೨೦೧೫ ರ, 'ದಸರಾ' ಹಬ್ಬದವೇಳೆಗೆ ಅವರಿಗೆ ಪಟ್ಟಾಭಿಷೇಕಮಾಡಾಲಾಗುತ್ತದೆ. ಅರಮನೆಯ ಆವರಣದಲ್ಲಿನ ೧೪ ದೇವಾಲಯಗಳ ಅರ್ಚಕರುಗಳು, ಅಪಾರ ಬಂಧು-ಬಾಂಧವರು, ಹಿತೈಷಿಗಳು, ಮಿತ್ರರು, ದತ್ತು ಸ್ವೀಕಾರ ಸಮಯದಲ್ಲಿ ಹಾಜರಿದ್ದರು. [೩]
೫೫೦ ವರ್ಷಗಳ ರಾಜ ಪರಂಪರೆ[ಬದಲಾಯಿಸಿ]
ಮೈಸೂರು ರಾಜಮನೆತನದ ಇತಿಹಾಸ ಅತ್ಯಂತ ರೋಚಕವಾಗಿದೆ.[೪]
೪೧ ವರ್ಷಗಳ ಬಳಿಕ ಪಟ್ಟಾಭಿಷೇಕ[ಬದಲಾಯಿಸಿ]
೨೨ ವರ್ಷ ಹರೆಯದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರಿಗೆ ೨೦೧೫ ರ ಮೇ, ೨೮, ಗುರುವಾರ ವಿಧ್ಯುಕ್ತವಾಗಿ ೨೭ ನೇ ರಾಜರಾಗಿ ಪಟ್ಟಾಭಿಷೇಕ ಮಹೋತ್ಸವವನ್ನು ಆಚರಿಸಿಕೊಂಡಿದ್ದರು. ಈ ದಸರಾಹಬ್ಬದಲ್ಲಿ ಮೈಸೂರಿನ ಅರಮನೆಯಲ್ಲಿ ಅದೇ ಸಮಾರಂಭ ರಾಜಗೌರವಗಳೊಂದಿಗೆ ವಿಜೃಂಭಣೆಯಿಂದ ಜರುಗಲಿದೆ. ಯದುವೀರರು, ಮೇ,೨೭, ಬುಧವಾರ ಇಲ್ಲಿಯ ಅಂಬಾವಿಲಾಸ ಅರಮನೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. [೫]
೨೦೧೫ ರ ದಸರಾ ಹಬ್ಬದ ಆಚರಣೆ[ಬದಲಾಯಿಸಿ]
ವರ್ಷ ೨೦೧೫ ರ ಮೈಸೂರು ದಸರಾ ಹಬ್ಬಕ್ಕೆ ಚಾಲನೆಯಾಯಿತು. ಮೈಸೂರು ದಸರಾ ಆಕರ್ಷಣೆಯಲ್ಲೊಂದಾದ ಖಾಸಗಿ ದರ್ಬಾರ್ ಅಂಬಾವಿಲಾಸ ಅರಮನೆಯಲ್ಲಿ ಜರುಗುತ್ತದೆ. ೨೦೧೫ ರ ಮೇ 28 ರಂದು ಮೈಸೂರು ರಾಜವಂಶದ ೨೭ ನೇ ಅರಸರಾಗಿ ಸಿಂಹಾಸನವೇರಿದ ನಂತರ ಯುವರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ೨೦೧೫ ರ, ನವರಾತ್ರಿ ಸಂದರ್ಭದಲ್ಲಿ ಮೊದಲ ಬಾರಿಗೆ ಒಂಬತ್ತು ದಿನಗಳ ಕಾಲ ಖಾಸಗಿ ದರ್ಬಾರ್ ನಡೆಸಿಕೊಟ್ಟರು. [೬]
ರಾಜಕುಮಾರಿಯೊಡನೆ ಮದುವೆಯಾದರು[ಬದಲಾಯಿಸಿ]
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, ತಮ್ಮ ಪಟ್ಟಾಭಿಷೇಕವಾಗಿ ಸಿಂಹಾಸನಾರೋಹಣ ಮಾಡಿದ ಒಂದು ವರ್ಷದ ತರುವಾಯ ೨೭, ಜೂನ್ ೨೦೧೬ ರಲ್ಲಿ ತ್ರಿಶಿಖಾಕುಮಾರಿಯವರನ್ನು ಮದುವೆಯಾದರು.[೭] ತ್ರಿಶಿಖಾಕುಮಾರಿಯವರು ರಾಜಾಸ್ಥಾನದ ಡುಂಗರ್ಪುರ್ ರಾಜವಂಶದ ಹರ್ಷ್ ವರ್ಧನ್ ಸಿಂಗ್, ಮತ್ತು ಮಹೇಶ್ರಿ ಕುಮಾರಿಯವರ ಪುತ್ರಿ. ತ್ರಿಶಿಖಾಕುಮಾರಿ ಅವರು, ೬, ಡಿಸೆಂಬರ್, ೨೦೧೭ ರಂದು, ಗಂಡುಮಗು, ಆದ್ಯವೀರ್ ನರಸಿಂಹರಾಜ ಒಡೆಯರ್ ಎಂಬ ಮಗುವಿಗೆ ಜನ್ಮಕೊಟ್ಟರು.೨೦೧೯ ರಲ್ಲಿ ಆದ್ಯವೀರ್ ನರಸಿಂಹರಾಜ ಒಡೆಯರಿಗೆ ವರ್ಧಂತ್ಯೋತ್ಸವದ ಸಂಭ್ರಮ.[೮]
ಉಲ್ಲೇಖಗಳು[ಬದಲಾಯಿಸಿ]
- ↑ 'ಯದುವೀರ್ ಗೋಪಾಲರಾಜೇ ಅರಸ್ ಒಡೆಯರ್ ಉತ್ತರಾಧಿಕಾರಿ', News Hunt, 12 Feb 2015
- ↑ 'ಇಂದಿನಿಂದ ಮೈಸೂರಿನ ಸಿಂಹಾಸನಕ್ಕೆ ರಾಜಕಳೆ,' 'kannada duniya'
- ↑ 'ಮಲೆನಾಡು ಮೀಡಿಯ', 'ದತ್ತು ಸ್ವೀಕಾರ ಪೂರ್ಣ':ಮೈಸೂರು ಒಡೆಯರ ಉತ್ತರಾಧಿಕಾರಿ ಯದುವೀರ್, February 23,2015
- ↑ One India (Kannada), May 27, 2015, 'ಮೈಸೂರು ಮಹಾರಾಜರ 550 ವರ್ಷಗಳ ಭವ್ಯ ಇತಿಹಾಸ', ೪ ಸಂಪುಟಗಳಲ್ಲಿ
- ↑ Prajavani, 05-28-2015, ಯದುವೀರಗೆ ಇಂದು ಪಟ್ಟಾಭಿಷೇಕ
- ↑ ಒನ್ ಇಂಡಿಯ (ಕನ್ನಡ) ಪತ್ರಿಕೆಯ ವರದಿ,ಅಕ್ಟೋಬರ್,೧೫, ೨೦೧೫
- ↑ he big royal Wedding : When Mysuru Went gaga, Mumbai Mirror,June, 28, 2016, TOI
- ↑ 'ಮೈಸೂರು ರಾಜವಂಶದ ಕುಡಿಗೆ ವರ್ಧಂತಿ ಸಂಭ್ರಮ : ಫೋಟೋಗಳು, ೧೫,ಡಿಸೆಂಬರ್,೨೦೧೯,Suvarnanews.com
ಬಾಹ್ಯ ಸಂಪರ್ಕಗಳು[ಬದಲಾಯಿಸಿ]
- ಆಧಾರ :'ತರಂಗ ಪ್ರತ್ಯಕ್ಷದರ್ಶಿ ವರದಿ'-"ಯದುವೀರ ದತ್ತು ಸ್ವೀಕಾರ"-ಮೈಸೂರು ಸಿಂಹಾಸನಕ್ಕೆ ವಿಧ್ಯುಕ್ತ ಉತ್ತರಾಧಿಕಾರಿ-ಡಾ.ಯು. ಬಿ.ರಾಜಲಕ್ಷೀ. ತರಂಗ ೧೨, ಮಾರ್ಚ್,೨೦೧೫. ಪುಟ ೧೨,