ಮ್ಯಾಕ್‌ಬುಕ್‌ ಏರ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
MacBook Air
ManufacturerApple Inc.[೧][೨]
TypeLaptop/Notebook
Release dateಜನವರಿ 29, 2008 (2008-01-29) (original release)
ಅಕ್ಟೋಬರ್ 20, 2010 (2010-10-20) (current model)
Retail availabilityಜನವರಿ 30, 2008 (2008-01-30)[೩]
Operating systemMac OS X[೧][೪]
Websiteapple.com/macbookair

ಮ್ಯಾಕ್‌ಬುಕ್‌ ಏರ್‌ ಗಣಕ ಉತ್ಪನ್ನವರ್ಗವು ಆಪಲ್‌ನ ಬಹುಹಗುರ ಮ್ಯಾಕಿಂತೋಷ್‌ ನೋಟ್‌ಬುಕ್‌ ಗಣಕಗಳ ಉತ್ಪನ್ನ ಸರಣಿಯಾಗಿದೆ.

ಮೊತ್ತಮೊದಲ ಮ್ಯಾಕ್‌ಬುಕ್‌ ಏರ್‌ ೧೩.೩" ಮಾದರಿಯದಾಗಿದ್ದು, 'ವಿಶ್ವದ ಅತ್ಯಂತ ತೆಳುವಾದ ನೋಟ್‌ಬುಕ್‌' ಎಂದು ಪ್ರಚುರಪಡಿಸಲಾಗಿತ್ತಲ್ಲದೇ ಮ್ಯಾಕ್‌ವರ್ಲ್ಡ್‌ ಕಾನ್‌ಫರೆನ್ಸ್‌ & ಎಕ್ಸ್‌ಪೋ ವಸ್ತುಪ್ರದರ್ಶನದಲ್ಲಿ ಜನವರಿ ೧೫, ೨೦೦೮ರಂದು ಇದನ್ನು ಪರಿಚಯಪಡಿಸಲಾಗಿತ್ತು.[೫] ಮ್ಯಾಕ್‌ಬುಕ್‌ ಏರ್‌ನ ಮೂಲ ಮಾದರಿಯು ಗ್ರಾಹಕೀಯಗೊಳಿಸಿದ[೬] ಇಂಟೆಲ್‌ ಮೆರಾಮ್‌‌ CPU ಜೊತೆಗೆ ಇಂಟೆಲ್‌ GMA ಪ್ರದರ್ಶನ ತಂತ್ರಜ್ಞಾನವನ್ನು ಹೊಂದಿತ್ತು, ಇವುಗಳನ್ನು ನಂತರ ನವೀಕರಿಸಿ ೨೦೦೮ರ ಕೊನೆಭಾಗದಲ್ಲಿ ಹೆಚ್ಚಿನ ವೇಗದ ಗ್ರಾಹಕೀಯಗೊಳಿಸದ ಪೆನ್ರಿನ್‌ CPU ಹಾಗೂ ಎನ್‌ವಿಡಿಯಾ ಜಿಇಫೋರ್ಸ್‌ ಪ್ರದರ್ಶನ ತಂತ್ರಜ್ಞಾನಗಳನ್ನು ಅಳವಡಿಸಲಾಗಿತ್ತು. ಇವುಗಳೊಂದಿಗೆ ದೃಢ ಮುದ್ರಿಕೆ ಸಾಮರ್ಥ್ಯವನ್ನು ಕೂಡಾ ಹೆಚ್ಚಿಸಿ ಸೂಕ್ಷ್ಮ-DVI ವಿಡಿಯೋ ಪೋರ್ಟ್‌ಅನ್ನು ಬದಲಿಸಿ ಕಿರು ದರ್ಶಕ ಪೋರ್ಟ್‌ಅನ್ನು ಅಳವಡಿಸಲಾಗಿತ್ತು[೭][೮] ೨೦೦೯ರ ಮಧ್ಯಭಾಗದಲ್ಲಿ ಚುರುಕುಗೊಳಿಸಿದ ಉತ್ಪನ್ನವಾಗಿ ಮ್ಯಾಕ್‌ಬುಕ್‌ ಪ್ರೋ ಉತ್ಪನ್ನವರ್ಗದ ಜೊತೆಗೆ ಪರಿಚಯಿಸಿದ ಆವೃತ್ತಿಯು ಸ್ವಲ್ಪ ಹೆಚ್ಚಿನ-ಸಾಮರ್ಥ್ಯದ ವಿದ್ಯುತ್ಕೋಶ ಹಾಗೂ ಇನ್ನೂ ಅಧಿಕ ವೇಗದ ಪೆನ್ರಿನ್‌ CPU ಅವಕಾಶಗಳನ್ನು ಹೊಂದಿತ್ತು.[೯]

ಅಕ್ಟೋಬರ್‌‌ ೨೦, ೨೦೧೦ರಂದು, ಆಪಲ್‌ ಸಂಸ್ಥೆಯು ನವೀನ ಹಗುರ ಹೊರಾವರಣವನ್ನು, ಹೆಚ್ಚಿನ ಸ್ಪಷ್ಟತೆಯ ಪರದೆಯನ್ನು, ಅಧಿಕ ಸಾಮರ್ಥ್ಯದ ವಿದ್ಯುತ್ಕೋಶವನ್ನು ಮತ್ತು ದೃಢ ಮುದ್ರಿಕೆಯ ಬದಲಿಗೆ ಫ್ಲ್ಯಾಶ್‌ ಸಂಗ್ರಹಣೆಗಳನ್ನು ಒದಗಿಸಿದ ಮರುವಿನ್ಯಾಸಗೊಳಿಸಿದ ೧೩.೩" ಮಾದರಿಯನ್ನು ಬಿಡುಗಡೆ ಮಾಡಿತು. ಇಷ್ಟು ಮಾತ್ರವಲ್ಲದೇ ೧೩.೩" ಮಾದರಿಗೆ ಸಾಪೇಕ್ಷವಾಗಿ ಕಡಿಮೆ ವೆಚ್ಚ, ತೂಕ, ವಿದ್ಯುತ್ಕೋಶದ ಬಳಕೆಯಅವಧಿ, ಹಾಗೂ ನಿರ್ವಹಣಾ ಸಾಮರ್ಥ್ಯಗಳನ್ನು ಹೊಂದಿರುವ ಆದರೆ ಸಾಧಾರಣ ನೆಟ್‌ಬುಕ್‌ ಗಣಕಗಳಿಗಿಂತ ಉತ್ತಮ ಸಾಮರ್ಥ್ಯವನ್ನು ತೋರುವ ೧೧.೬" ಮಾದರಿಯನ್ನು ಕೂಡಾ ಮೊದಲ ಬಾರಿಗೆ ಬಿಡುಗಡೆ ಮಾಡಲಾಯಿತು.[೧೦][೧೧][೧೨][೧೩][೧೪]

ಆಪಲ್ ಸಿಲಿಕಾನ್ ಮ್ಯಾಕ್‌ಬುಕ್ ಏರ್ ಸೀರೀಸ್

ಆಪಲ್ ಸಿಲಿಕಾನ್ ಮ್ಯಾಕ್‌ಬುಕ್ ಏರ್ ಸರಣಿಯು ಆಪಲ್‌ನ ಕಸ್ಟಮ್-ವಿನ್ಯಾಸಗೊಳಿಸಿದ ARM-ಆಧಾರಿತ ಪ್ರೊಸೆಸರ್‌ಗಳಿಂದ ಚಾಲಿತ ಲ್ಯಾಪ್‌ಟಾಪ್‌ಗಳನ್ನು ಹೊಂದಿದೆ, ಇದು ಇಂಟೆಲ್‌ನಿಂದ ಗಮನಾರ್ಹ ಬದಲಾವಣೆಯನ್ನು ಗುರುತಿಸುತ್ತದೆ. ಪ್ರಮುಖ ಮಾದರಿಗಳು ಇಲ್ಲಿವೆ:

M1 (2020)

ನವೆಂಬರ್ 2020 ರಲ್ಲಿ, Apple M1 ಮ್ಯಾಕ್‌ಬುಕ್ ಏರ್ ಅನ್ನು ಪ್ರಾರಂಭಿಸಿತು, ಅದರ ನಯವಾದ 2018 ವಿನ್ಯಾಸವನ್ನು ಉಳಿಸಿಕೊಂಡಿದೆ. ಈ ಮಾದರಿಯು ಫ್ಯಾನ್‌ಲೆಸ್ ವಿನ್ಯಾಸ, Wi-Fi 6, USB4 / Thunderbolt 3, ಮತ್ತು ವೈಡ್ ಕಲರ್ (P3) ಅನ್ನು ಪರಿಚಯಿಸಿತು.[೧೫] ಇದು ಒಂದು ಬಾಹ್ಯ ಪ್ರದರ್ಶನವನ್ನು ರನ್ ಮಾಡಬಹುದು ಮತ್ತು FaceTime ಕ್ಯಾಮರಾ ಗುಣಮಟ್ಟ ಸುಧಾರಣೆಗಳನ್ನು ಕಂಡಿತು. M1 ಮ್ಯಾಕ್‌ಬುಕ್ ಏರ್ ಅದರ ಜ್ವಲಂತ ಕಾರ್ಯಕ್ಷಮತೆ ಮತ್ತು ದೀರ್ಘ ಬ್ಯಾಟರಿ ಬಾಳಿಕೆಗಾಗಿ ಪ್ರಶಂಸೆಯನ್ನು ಪಡೆಯಿತು. ಮೇ 2023 ರಂತೆ, ಇದು $999 USD ಯಿಂದ ಪ್ರಾರಂಭವಾಗುತ್ತದೆ.

M2 (2022)

2022 WWDC ಯಲ್ಲಿ, ಆಪಲ್ M2 ಚಿಪ್ ಮತ್ತು ಮರುವಿನ್ಯಾಸಗೊಳಿಸಲಾದ ಮ್ಯಾಕ್‌ಬುಕ್ ಏರ್ ಅನ್ನು ಅನಾವರಣಗೊಳಿಸಿತು. ಈ ಮಾದರಿಯು 2021 ರ ಮ್ಯಾಕ್‌ಬುಕ್ ಪ್ರೊ ಮಾದರಿಗಳಿಗೆ ಹೋಲುವ ವಿನ್ಯಾಸದಲ್ಲಿ ತೆಳುವಾದ ಮತ್ತು ಸಮತಟ್ಟಾಗಿದೆ. ಇದು ಮ್ಯಾಗ್‌ಸೇಫ್ 3, ಎತ್ತರದ ಲಿಕ್ವಿಡ್ ರೆಟಿನಾ ಡಿಸ್‌ಪ್ಲೇ, 1080p ಫೇಸ್‌ಟೈಮ್ ಕ್ಯಾಮೆರಾ ಮತ್ತು ಹೆಚ್ಚಿನದನ್ನು ಒಳಗೊಂಡಿದೆ.[೧೬] M1 ಮಾದರಿಗಳಂತೆಯೇ, ಮ್ಯಾಕ್‌ಬುಕ್ ಏರ್ ಮತ್ತು ಮ್ಯಾಕ್‌ಬುಕ್ ಪ್ರೊ ಥಂಡರ್‌ಬೋಲ್ಟ್‌ನಲ್ಲಿ ಒಂದೇ ಬಾಹ್ಯ ಪ್ರದರ್ಶನವನ್ನು ಮಾತ್ರ ಬೆಂಬಲಿಸುತ್ತವೆ.[೧೭] ಜೂನ್ 5, 2023 ರಿಂದ 13-ಇಂಚಿನ M2 ಮ್ಯಾಕ್‌ಬುಕ್ ಏರ್‌ನ ಬೆಲೆಗಳು $1099 USD ನಿಂದ ಪ್ರಾರಂಭವಾಗುತ್ತವೆ. 2023 WWDC ನಲ್ಲಿ 15-ಇಂಚಿನ ಆಯ್ಕೆಯನ್ನು ಘೋಷಿಸಲಾಯಿತು, ಮುಂಗಡ-ಆರ್ಡರ್‌ಗಳು ಜೂನ್ 5 ರಂದು ಪ್ರಾರಂಭವಾಗುತ್ತದೆ ಮತ್ತು ಜೂನ್ 13 ರಂದು ಲಭ್ಯವಿರುತ್ತದೆ.

ವಿನ್ಯಾಸ[ಬದಲಾಯಿಸಿ]

11-ಅಂಗುಲಗಳ ಮ್ಯಾಕ್‌ಬುಕ್‌ ಏರ್‌ನ ಎಡಬದಿ. ಎಡದಿಂದ ಬಲಕ್ಕೆ , ಮ್ಯಾಗ್‌ಸೇಫ್‌ ವಿದ್ಯುಚ್ಛಕ್ತಿ‌ ಸಂಪರ್ಕಕ, USB ಪೋರ್ಟ್, ಹೆಡ್‌ಫೋನ್‌/ಶಿರೋಶ್ರವಣಸಾಧನದ ಸಂಪರ್ಕಗಂಡಿ ಹಾಗೂ ಅಂತರ್ನಿವಿಷ್ಟ ಧ್ವನಿಗ್ರಾಹಕ.

ಮ್ಯಾಕ್‌ಬುಕ್‌ ಏರ್‌ ಗಣಕವನ್ನು ತೆಳುವಾಗಿರುವಿಕೆಗಾಗಿಯೇ ವಿನ್ಯಾಸ ಮಾಡಲಾಗಿದೆ; ಇದು ಬಹುತೇಕ ಪ್ರತಿಸ್ಪರ್ಧಿ ಮಾದರಿಗಳಿಗಿಂತ ಹಗುರವಾಗಿಯೂ ಇದೆ.[೧೮][೧೯] ಈ ಗಣಕವು ಹೊಳಪು ಮೈನ LED ಹಿಂಬೆಳಕಿನ ದರ್ಶಕ ಹಾಗೂ ಪೂರ್ಣ ಗಾತ್ರದ ಕೀಲಿಮಣೆ, ಹಾಗೂ ದೊಡ್ಡದಾದ ಟ್ರ್ಯಾಕ್‌ಪ್ಯಾಡ್‌ಅನ್ನು ಹೊಂದಿದ್ದು ಇದು ಐಪ್ಯಾಡ್‌-ಸಂಬಂಧಿತ ಬಹುವಿಧ-ಸ್ಪರ್ಶ ಅಂಗಚಲನೆಗಳಾದ ಒತ್ತುವಿಕೆ, ಹಾಯಿಸುವಿಕೆ/ಉಜ್ಜುವಿಕೆ ಹಾಗೂ ಸುತ್ತಿಸುವಿಕೆಗಳಿಗೆ ಪ್ರತಿಕ್ರಿಯಿಸುವಂತಹುದಾಗಿರುತ್ತದೆ.[೨೦] ಮ್ಯಾಕ್‌ OS X ಸ್ನೋ ಲೆಪರ್ಡ್‌ನ ಬಿಡುಗಡೆಯೊಂದಿಗೆ, ಏರ್‌‌'ಶ್ರೇಣಿಯ ಬಹುವಿಧ-ಸ್ಪರ್ಶ ಟ್ರ್ಯಾಕ್‌ಪ್ಯಾಡ್‌ ಚೀನೀ ಅಕ್ಷರಗಳ ಬರವಣಿಗೆಗಳ ಅಭಿಜ್ಞಾನದ ಬೆಂಬಲವನ್ನು ಕೂಡಾ ಕೊಡುತ್ತದೆ.[೨೧]

೧೧-ಅಂಗುಲಗಳ ಮ್ಯಾಕ್‌ಬುಕ್‌ ಏರ್‌ ಗಣಕದಲ್ಲಿ ಗಣಕದ ಎಡಭಾಗವು ಮ್ಯಾಗ್‌ಸೇಫ್‌/ಕಾಂತತೆಸುರಕ್ಷಿತ ವಿದ್ಯುಚ್ಛಕ್ತಿ ಸಂಪರ್ಕಕವನ್ನು, ಒಂದು USB ಪೋರ್ಟ್, ಹೆಡ್‌ಫೋನ್‌/ಶಿರೋಶ್ರವಣಸಾಧನದ ಸಂಪರ್ಕಗಂಡಿ ಹಾಗೂ ಧ್ವನಿಗ್ರಾಹಕಗಳನ್ನು ಹೊಂದಿರುತ್ತದೆ.[೧][೨೦] ಗಣಕದ ಬಲಭಾಗವು ಒಂದು USB ಪೋರ್ಟ್‌ಅನ್ನು ಹಾಗೂ ಒಂದು ಕಿರು ದರ್ಶಕ ಪೋರ್ಟ್‌ಅನ್ನು ಹೊಂದಿರುತ್ತದೆ. ಪರದೆಯ ಅಂಚಿನ ಮೇಲ್ಭಾಗದಲ್ಲಿ ಒಂದು ಐಸೈಟ್‌ ಅಂತರ್ಜಾಲಛಾಯಾಗ್ರಾಹಿ/ವೆಬ್‌ಕ್ಯಾಮ್‌ ಇದ್ದು, ಅದನ್ನು ಈಗ ಫೇಸ್‌ಟೈಮ್‌ ಛಾಯಾಗ್ರಾಹಿ ಎಂದು ಕರೆಯಲಾಗುತ್ತಿದೆ.[೧][೨೦]

೨೦೦೬ರಲ್ಲಿ ಸಂಪೂರ್ಣ ಸೌಲಭ್ಯಸಹಿತವಾದ ೧೨" ಪವರ್‌ಬುಕ್‌‌ G೪ಅನ್ನು ಸ್ಥಗಿತಗೊಳಿಸಿದ ನಂತರ ಮ್ಯಾಕ್‌ಬುಕ್‌ ಏರ್‌ ಗಣಕವು ಆಪಲ್‌ ನೀಡುತ್ತಿರುವ ಪ್ರಥಮ ಉಪಅಡಕ ಮಡಿಲಗಣಕವಾಗಿದೆ. ಇದು ಐಚ್ಛಿಕ ಘನ ವಿದ್ಯುನ್ಮಾನ ಸಂಗ್ರಹಣಾ ಮುದ್ರಿಕೆ ಹೊಂದಿರುವ ಆಪಲ್‌ ನ ಪ್ರಪ್ರಥಮ ಗಣಕ ಕೂಡಾ ಆಗಿದೆ.[೨೨] ಆರ್ಸ್‌ಟೆಕ್ನಿಕಾ ಸಂಸ್ಥೆಯು ನಡೆಸಿದ ಸಾಮರ್ಥ್ಯ ಪರೀಕ್ಷೆಗಳಲ್ಲಿ ಮಾನಕ ೮೦ GB ದೃಢ ಮುದ್ರಿಕೆಗಳಿಗಿಂತ ಪ್ರಥಮ ಪೀಳಿಗೆಯ ಏರ್‌‌ ಮಾದರಿಯ ೬೪ GB[note ೧] ಘನ ವಿದ್ಯುನ್ಮಾನ ಮುದ್ರಿಕೆ‌ಗಳಲ್ಲಿ "ಮಧ್ಯಮ ಮಟ್ಟದ " ಸಾಮರ್ಥ್ಯ ಸುಧಾರಣೆಗಳನ್ನು ಕಂಡುಕೊಳ್ಳಲಾಗಿತ್ತು. ಅಕ್ಟೋಬರ್‌‌ ೧೪, ೨೦೦೮ರಂದು ೧೨೮ GB (ಘನ ವಿದ್ಯುನ್ಮಾನ ) ಹಾಗೂ ೧೨೦ GB (ದೃಢ ಮುದ್ರಿಕೆ)ಗಳಷ್ಟು ಸುಧಾರಿತ ಸಾಮರ್ಥ್ಯಗಳ ನವೀನ ಮಾದರಿಗಳನ್ನು ಘೋಷಿಸಲಾಯಿತು.[೨೩] ೨೦೧೦ರ ಕೊನೆಯ ಭಾಗದಲ್ಲಿ ಬಿಡುಗಡೆಯಾದ ಮ್ಯಾಕ್‌ಬುಕ್‌ ಏರ್‌ಗಳಲ್ಲಿ ೧೧" ಮಾದರಿಯಲ್ಲಿ ೬೪ ಅಥವಾ ೧೨೮GB ಸಾಮರ್ಥ್ಯಗಳ ಹಾಗೂ ೧೩" ಮಾದರಿಯಲ್ಲಿ ೧೨೮ ಅಥವಾ ೨೫೬GB ಸಾಮರ್ಥ್ಯಗಳ ಕೇವಲ SSD ಸಂಗ್ರಹಣೆಯು ಲಭ್ಯವಾಗಿತ್ತು.

ಮ್ಯಾಕ್‌ಬುಕ್‌ ಏರ್‌ ಸರ್ವೇ ಸಾಧಾರಣವಾಗಿ ೨ GB RAMನೊಂದಿಗೆ ಲಭ್ಯವಿದ್ದು, ಇದು ಸ್ಥಿರವಾಗಿದ್ದು ನವೀಕರಿಸಲಾಗದಂತಹುದಾಗಿರುತ್ತದೆ[note ೨][೨೩] ೨೦೧೦ರ ಕೊನೆಯ ಭಾಗದಲ್ಲಿ ಮ್ಯಾಕ್‌ಬುಕ್‌ ಏರ್‌ ಕೊಳ್ಳುಗರು ಖರೀದಿಯ ಸಮಯದಲ್ಲಿ ೪GB ಸಾಮರ್ಥ್ಯದ RAM ಬೇಕೆಂದು ಸೂಚಿಸುವ ಅವಕಾಶ ನೀಡಲಾಗಿದೆ.

ಮೂಲ ಮಾದರಿಯ ಮ್ಯಾಕ್‌ಬುಕ್‌ ಏರ್‌ನಲ್ಲಿನ CPUವು ಗ್ರಾಹಕೀಯಗೊಳಿಸಿದ ಇಂಟೆಲ್‌ ಕೋರ್‌ ೨ ಡ್ಯುವೋ ಮೆರಾಮ್‌ ಚಿಪ್‌ ಸಂಸ್ಕಾರಕವಾಗಿದ್ದು ಅದು ಆ ಸಮಯದಲ್ಲಿ ಸಾರ್ವಜನಿಕವಾಗಿ ಲಭ್ಯವಿದ್ದ ಚಿಪ್‌ಗಳ ಪ್ರತಿಶತ ೪೦ರಷ್ಟು ಮಾತ್ರವೇ ಗಾತ್ರವನ್ನು ಹೊಂದಿತ್ತು.[೨೪] ಈ CPUವಿನ ಬದಲಾಗಿ ೨೦೦೮ರ ಕೊನೆಯ ಭಾಗದ ನಂತರದ ಎಲ್ಲಾ ಮಾದರಿಗಳಲ್ಲಿ ೧೦೬೬ MHz ಸಾಮರ್ಥ್ಯದ ವಾಹಕ ವ್ಯೂಹದ ಮೇಲೆ ಕಾರ್ಯ ನಿರ್ವಹಿಸುವ ಮಾನಕ ಕಡಿಮೆ ವಿಭವಾಂತರದ ೬ MBಗಳಷ್ಟು ತ್ವರಿತಸ್ಮರಣೆಯನ್ನು ಹೊಂದಿದ್ದ ಕೋರ್‌ ೨ ಡ್ಯುವೋ ಪೆನ್ರಿನ್‌ ಚಿಪ್‌ಅನ್ನು ಅಳವಡಿಸಲಾಯಿತು.[೨೫]

ಮ್ಯಾಕ್‌ಬುಕ್‌ ಏರ್‌ ಗಣಕವು ಬಳಕೆದಾರರು ಬದಲಿಸಬಹುದಾದಂತಹಾ ಯಾವುದೇ ಭಾಗಗಳನ್ನು ಹೊಂದಿರುವುದಿಲ್ಲ. ಫ್ಲ್ಯಾಶ್‌ ಸ್ಮರಣೆ , RAM ಮತ್ತು ವಿದ್ಯುತ್ಕೋಶಗಳನ್ನು ಗಣಕದ ಒಳಭಾಗದೊಳಗೆಯೇ ಸೇರಿಸಲಾಗಿರುತ್ತದೆ, RAMಅನ್ನು ನೇರವಾಗಿ ಗಣಕದ ಲಾಜಿಕ್‌ ಫಲಕಕ್ಕೆ ನೇರವಾಗಿ ಬೆಸುಗೆ ಹಾಕಲಾಗಿರುತ್ತದೆ. ಫ್ಲ್ಯಾಶ್‌ ಸ್ಮರಣೆಯನ್ನು ಗಣಕದ ಲಾಜಿಕ್‌ ಫಲಕಕ್ಕೆ ನೇರವಾಗಿ ಬೆಸುಗೆ ಹಾಕುವುದಿಲ್ಲವಾದರೂ, ಅದರ ಗಮ್ಯತೆಯನ್ನು ವಿಪರೀತ ಕಷ್ಟಕರವಾಗಿರುವಂತೆ ವಿನ್ಯಾಸಗೊಳಿಸಲಾಗಿದೆ ಹಾಗೂ ಲಾಜಿಕ್‌ ಫಲಕದೊಂದಿಗೆ mSATA ಸಂಪರ್ಕವನ್ನು ಇದು ಹೊಂದಿರುತ್ತದೆ.[೨೬][೨೭] ಮ್ಯಾಕ್‌ಬುಕ್‌ ಏರ್‌'ನ ವಿದ್ಯುತ್ಕೋಶವನ್ನು ಆವರಣದೊಳಗೆ ಇರಿಸಲಾಗಿದ್ದರೂ ಸಾಧಾರಣ ತಿರುಪುಸಾಧನ/ಸ್ಕ್ರ್ಯೂ ಡ್ರೈವರ್‌ನ ಮೂಲಕ ಇದನ್ನು ಬದಲಿಸಲಾಗುವಂತೆ ಏರ್ಪಡಿಸಲಾಗಿರುತ್ತದೆ, ಆದರೆ ಈ ಪ್ರಕ್ರಿಯೆಯು ಗಣಕದ ಖಾತರಿ ಸೌಲಭ್ಯವನ್ನು ಅನೂರ್ಜಿತಗೊಳಿಸುತ್ತದೆಯೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ.[೨೮][೨೯] ಖಾತರಿ ಅವಧಿಯ ನಂತರದ ಸೇವೆಯ ಭಾಗವಾಗಿ ಆಪಲ್‌ ಕಂಪೆನಿಯು ನಿರ್ದಿಷ್ಟ ಶುಲ್ಕವನ್ನು ವಿಧಿಸಿ ವಿದ್ಯುತ್ಕೋಶವನ್ನು ಬದಲಿಸಿಕೊಳ್ಳುವ ಅವಕಾಶವನ್ನು ನೀಡುತ್ತದೆ.[೩೦]

ಐಚ್ಛಿಕ ಮ್ಯಾಕ್‌ಬುಕ್‌ ಏರ್‌ ಸೂಪರ್‌ಡ್ರೈವ್‌.

ಆಪಲ್‌ ಕಂಪೆನಿಯು ಮ್ಯಾಕ್‌ಬುಕ್‌ ಏರ್‌ನ ವಿನ್ಯಾಸದಲ್ಲಿ ಅದನ್ನು ಮತ್ತಷ್ಟು "ಪರಿಸರ ಸ್ನೇಹಿ"ಯನ್ನಾಗಿ ಮಾಡಲು ಸೀಸದಂತಹಾ ವಿಷಕಾರಕ ವಸ್ತುಗಳನ್ನು ಕಡಿಮೆ ಮಾಡುವಂತಹಾ ಅನೇಕ ವೈಶಿಷ್ಟ್ಯತೆಗಳನ್ನು ಒದಗಿಸಿದೆ. ಮ್ಯಾಕ್‌ಬುಕ್‌ ಏರ್‌ ಗಣಕವು ಯಾವುದೇ BFRಗಳನ್ನು ಹೊಂದಿರುವುದಿಲ್ಲ ಹಾಗೂ PVC ವೈರಿಂಗ್‌ಗಳನ್ನು ಹೊಂದಿರುವುದಿಲ್ಲ, ಎನರ್ಜಿ ಸ್ಟಾರ್‌‌ ಶಿಷ್ಟತೆಯ ೫.೦ನೇ ಆವೃತ್ತಿಯ ಅಗತ್ಯತೆಗಳನ್ನು ಒದಗಿಸಿದೆ, ಮರುಬಳಕೆಯಾಗಬಲ್ಲ ಹೊರಾವರಣವನ್ನು ಹೊಂದಿದ್ದು EPEAT ಸ್ವರ್ಣ ಮಾನಕವನ್ನು ಹೊಂದಿದೆ; ಇದರ ದರ್ಶಕಪರದೆಯನ್ನು ಆರ್ಸೆನಿಕ್‌-ಮುಕ್ತ ಗಾಜಿನಿಂದ ನಿರ್ಮಿಸಲಾಗಿದ್ದು ಅದು ಪಾದರಸವನ್ನು ಹೊಂದಿರುವುದಿಲ್ಲ.[೧][೩೧][೩೨] ಗಣಕದ ಗಾತ್ರ ಹಾಗೂ ತೂಕಗಳನ್ನು ಕಡಿಮೆಗೊಳಿಸಲು ಹಲವು ಸೌಲಭ್ಯಗಳನ್ನು ಹೊರತುಪಡಿಸಲಾಗಿದೆ. ಪವರ್‌ಬುಕ್‌‌ ೨೪೦೦c ನಂತರದ ಅಂತರ್ನಿವಿಷ್ಠ ತೆಗೆಯಬಹುದಾದ ಮುದ್ರಿಕೆಯನ್ನು ಹೊಂದಿಲ್ಲದ ಆಪಲ್‌ನ ಮೊದಲ ನೋಟ್‌ಬುಕ್‌ ಆಗಿದೆ.[೩೩] ಇದರಲ್ಲಿ ಫೈರ್‌ವೈರ್‌ ಪೋರ್ಟ್‌, ಈಥರ್‌ನೆಟ್‌ ಪೋರ್ಟ್‌, ಲೈನ್‌-ಇನ್‌, ಮಾಧ್ಯಮ ಕಾರ್ಡ್‌ಗಳ ಕಂಡಿಗಳನ್ನು (SD ಕಾರ್ಡ್‌‌ ಕಂಡಿಯನ್ನು ಹೊಂದಿರುವ ೧೩" ೨೦೧೦ ಮಾದರಿಯನ್ನು ಹೊರತುಪಡಿಸಿ), ಹಾಗೂ ಕೆನ್ಸಿಂಗ್‌ಟನ್‌ ಸುರಕ್ಷತಾ ಕಂಡಿಯನ್ನು ಕೂಡಾ ತೆಗೆದುಬಿಡಲಾಗಿದೆ.[೩೪]

ದ್ಯುತಿ/ಆಪ್ಟಿಕಲ್‌ ಮುದ್ರಿಕೆಯ ಸೌಲಭ್ಯಗಳನ್ನು ಮರಳಿ ಪಡೆದುಕೊಳ್ಳಲು, ಬಳಕೆದಾರರು ಪ್ರತ್ಯೇಕವಾಗಿ ಲಭ್ಯವಿರುವ ಬಾಹ್ಯ USB ಸೂಪರ್‌ಡ್ರೈವ್‌ ಅಥವಾ ಮತ್ತೊಂದು ಗಣಕದ ದ್ಯುತಿ ಮುದ್ರಿಕೆಯನ್ನು ಓದಲು ಇದರೊಂದಿಗೆ ಒದಗಿಸಿದ ರಿಮೋಟ್‌‌ ಡಿಸ್ಕ್‌ ತಂತ್ರಾಂಶಗಳನ್ನು ಬಳಸಬಹುದಾಗಿದೆ. ಆದಾಗ್ಯೂ,ಈ ವಿಧಾನವು ಡಿಸ್ಕ್‌ಗಳ ವಿಷಯಾವಲೋಕನ ಮಾಡಲು ಅಥವಾ ತಂತ್ರಾಂಶ ಸ್ಥಾಪನೆಗಳಿಗಾಗಿ ಮಾತ್ರವೇ ಬಳಸಬಹುದಾಗಿದ್ದು; DVD ಅಥವಾ CDಗಳ ಚಲನಚಿತ್ರಗಳನ್ನು ವೀಕ್ಷಿಸಲು ಅಥವಾ ಸಂಗೀತವನ್ನು ಕೇಳಲು ಇದರಿಂದ ಸಾಧ್ಯವಿರುವುದಿಲ್ಲ.[೧][೩೫] ಈ ಗಣಕವು ರಿಮೋಟ್‌ ಡಿಸ್ಕ್‌ ತಂತ್ರಾಂಶವನ್ನು ಅಳವಡಿಸಿದ ಮತ್ತೊಂದು ಮ್ಯಾಕ್‌‌ ಅಥವಾ ವಿಂಡೋಸ್‌ PCಯ ದ್ಯುತಿ ಮುದ್ರಿಕೆಯನ್ನು ನಿಸ್ತಂತುರೀತಿಯಲ್ಲಿ ಸಂಪರ್ಕ ಸಾಧಿಸುವ ಮೂಲಕ ರಿಮೋಟ್‌ ಡಿಸ್ಕ್‌ ಸಾಮರ್ಥ್ಯವನ್ನು ಪಡೆದುಕೊಳ್ಳಬಹುದಾಗಿದೆ.[೩೬][೩೭] ಒದಗಿಸಲಾದ ಅನುಸ್ಥಾಪನಾ DVDಯಿಂದ ವ್ಯವಸ್ಥಾ ತಂತ್ರಾಂಶವನ್ನು ಮರುಸ್ಥಾಪನೆಗೊಳಿಸಲು ಕೂಡಾ ಇದನ್ನು ಬಳಸಬಹುದಾಗಿದೆ.[೩೮] ರಿಮೋಟ್‌ ಡಿಸ್ಕ್‌ ತಂತ್ರಾಂಶವು ನೆಟ್‌ಬೂಟಿಂಗ್‌ ಸೌಲಭ್ಯವನ್ನು ಹೊಂದಿರುವ ಕಾರಣ ಮ್ಯಾಕ್‌ಬುಕ್‌ ಏರ್‌ ಗಣಕವು ಮತ್ತೊಂದು ಗಣಕದ ಮುದ್ರಿಕೆಯಲ್ಲಿರುವ ತನ್ನ ಸ್ಥಾಪನಾ DVDಯಿಂದ ಆರಂಭಗೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಸೌಲಭ್ಯವು ಕಾರ್ಯಗತವಾಗಲು ಅಸನ್ನಿಹಿತ ಗಣಕದಲ್ಲಿ ಅಸನ್ನಿಹಿತ ಸ್ಥಾಪನಾ ಸಾಮರ್ಥ್ಯವುಳ್ಳ ಮ್ಯಾಕ್‌ OS X ಚಾಲನೆಯಲ್ಲಿರಬೇಕಾಗುತ್ತದೆ. ಈ ತಂತ್ರಾಂಶವು ಸಂಗೀತ/ವಿಡಿಯೋ ಮುಂತಾದುವುಗಳ ವೀಕ್ಷಣೆ ಅಥವಾ ಕೇಳುವಿಕೆಗಳ ಸೌಲಭ್ಯವನ್ನಾಗಲಿ ಅಥವಾ DVDಗಳು ಅಥವಾ CDಗಳ ಮಾಹಿತಿಯ ಅವಲೋಕನವನ್ನಾಗಲಿ ಕೈಗೊಳ್ಳಲು ಅವಕಾಶ ನೀಡುವುದಿಲ್ಲ ಹಾಗೂ ಮೈಕ್ರೋಸಾಫ್ಟ್‌ ವಿಂಡೋಸ್‌ನ ಸ್ಥಾಪನೆಗೆ ಕೂಡಾ ಇದು ಅವಕಾಶ ನೀಡುವುದಿಲ್ಲ.[೩೫] ಇಂತಹಾ ಸೌಲಭ್ಯಗಳಿಗಾಗಿ ಒಂದು ಬಾಹ್ಯ USB ಮುದ್ರಿಕೆ ಬೇಕಾಗುತ್ತದೆ.[೩೫] ೨೦೧೦ರ ಪರಿಷ್ಕೃತ ಆವೃತ್ತಿಯು ಸ್ಟೀರಿಯೋ ಧ್ವನಿಗಾಗಿ ಎರಡು ಧ್ವನಿವರ್ಧಕಗಳನ್ನು ಹೊಂದಿದೆ, ಹಿಂದಿನ ಆವೃತ್ತಿಗಳು ಕೀಲಿಮಣೆಯ ಕೆಳಗೆ ಕೇವಲ ಒಂದೇ ಧ್ವನಿವರ್ಧಕವನ್ನು ಹೊಂದಿದ್ದವು.[೧]

ಮ್ಯಾಕ್‌ಬುಕ್‌ ಏರ್‌ ಗಣಕವು ಆಪಲ್‌ನ ಐಲೈಫ್‌ ಬಹುಮಾಧ್ಯಮ ತಂತ್ರಾಂಶ ಮಾಲಿಕೆಯೊಂದಿಗೆ ಪೂರ್ವ-ಸ್ಥಾಪಿತವಾಗಿರುವ ಮ್ಯಾಕ್‌ OS X ಸ್ನೋ ಲೆಪರ್ಡ್‌ ವ್ಯವಸ್ಥಾ ತಂತ್ರಾಂಶವನ್ನು ಹೊಂದಿರುತ್ತದೆ.

ಈ ನೋಟ್‌ಬುಕ್‌ ಗಣಕದ ೨೦೦೮ರ ಪರಿಷ್ಕೃತ ಆವೃತ್ತಿಗಳೊಂದಿಗೆ ತಂತಿಸಹಿತ ಈಥರ್‌ನೆಟ್‌ ಸಂಪರ್ಕವನ್ನು ಪಡೆಯಲು ಪ್ರತ್ಯೇಕವಾಗಿ ಲಭ್ಯವಿರುವ USB-ಇಂದ-ಈಥರ್‌ನೆಟ್‌ ಸಂಯೋಜಕದ ಬಳಕೆ ಅಗತ್ಯವಾಗಿರುತ್ತದೆ. ಆದಾಗ್ಯೂ ೨೦೦೯ರ ಪರಿಷ್ಕೃತ ಆವೃತ್ತಿಗಳಲ್ಲಿ ಈ ಸಂಯೋಜಕವನ್ನು ಗಣಕದೊಟ್ಟಿಗೆಯೇ ನೀಡಲಾಗುತ್ತಿತ್ತು.[೩೯] ಇವುಗಳಿಗೆ ಹೆಚ್ಚುವರಿಯಾಗಿ ೨೦೦೮ರ ಪರಿಷ್ಕೃತ ಆವೃತ್ತಿಯಲ್ಲಿ ದೃಢ ಮುದ್ರಿಕೆ , ಪ್ರದರ್ಶನ ತಂತ್ರಜ್ಞಾನ, ಫ್ರಂಟ್‌ಸೈಡ್‌ ಬಸ್‌ , ಸಂಸ್ಕಾರಕ, ಸ್ಮರಣೆ , ವಿದ್ಯುತ್ಕೋಶ ಮತ್ತು ಪೋರ್ಟ್‌ ಸಂಪರ್ಕಗಳ ಸಾಮರ್ಥ್ಯಗಳನ್ನು ಉನ್ನತೀಕರಿಸಲಾಗಿತ್ತು.

ಉಪಕ್ರಮಣ ಹಾಗೂ ದೊರಕಿದ ಸ್ವಾಗತ[ಬದಲಾಯಿಸಿ]

2008ರ ಪ್ರಧಾನ ಭಾಷಣದ ಸಂದರ್ಭದಲ್ಲಿ ಒಂದು ಮ್ಯಾಕ್‌ಬುಕ್‌ ಏರ್‌ ಗಣಕದೊಂದಿಗೆ ಸ್ಟೀವ್‌ ಜಾಬ್ಸ್‌.

ತನ್ನನ್ನು ಮಾರುಕಟ್ಟೆಗೆ ಪರಿಚಯಿಸಿದಾಗ ಮ್ಯಾಕ್‌ಬುಕ್‌ ಏರ್‌ ಗಣಕಕ್ಕೆ ಮಿಶ್ರ ರೀತಿಯ ಸ್ವಾಗತವು ದೊರಕಿತು. ವಿಮರ್ಶೆಗಳಲ್ಲಿ ಮ್ಯಾಕ್‌ಬುಕ್‌ ಏರ್‌ ಗಣಕದ ಸುವಾಹ್ಯತೆ/ಸಾಗಿಸಲು ಸಾಧ್ಯವಾಗುವಿಕೆಯು ಅತ್ಯಂತ ಪ್ರಶಂಸೆಗೆ ಪಾತ್ರವಾದರೂ, ಅದಕ್ಕಾಗಿ ಹೊರತುಪಡಿಸಬೇಕಾದ ಸೌಲಭ್ಯಗಳ ವಿಚಾರವಾಗಿ ಕಟು ಟೀಕೆಗಳು ವ್ಯಕ್ತವಾದವು.[೪೦][೪೧][೪೨] ಪೂರ್ಣಗಾತ್ರದ ಕೀಲಿಮಣೆ , ತೂಕ , ತೆಳುವಾಗಿರುವಿಕೆ ಹಾಗೂ ಬಹುವಿಧ-ಸ್ಪರ್ಶ ಸೌಲಭ್ಯದ ಟ್ರ್ಯಾಕ್‌ಪ್ಯಾಡ್‌ಗಳಂತಹಾ ಸೌಲಭ್ಯಗಳು ವಿಮರ್ಶೆಗಳಲ್ಲಿ ಪ್ರಶಂಸೆಗೆ ಪಾತ್ರವಾದರೆ, ಮಿತವಾದ ಅಳವಡಿಕಾ ವ್ಯವಸ್ಥೆಗಳ ಆಯ್ಕೆಗಳು, ಕಡಿಮೆ ವೇಗ(SSDಯಲ್ಲದ ಮಾದರಿಗಳಲ್ಲಿ), ಬಳಕೆದಾರರು ಬದಲಿಸಲಾಗದ ವಿದ್ಯುತ್ಕೋಶ, ಸಣ್ಣ ದೃಢ ಮುದ್ರಿಕೆ ಮತ್ತು ಬೆಲೆಗಳು ಟೀಕೆಗೆ ಪಾತ್ರವಾದವು.[೪೦][೪೧]

ತನ್ನನ್ನು ಮಾರುಕಟ್ಟೆಗೆ ಪರಿಚಯಿಸಿದಾಗ ಮ್ಯಾಕ್‌ಬುಕ್‌ ಏರ್‌ ಗಣಕಕ್ಕೆ ಮಿಶ್ರ ರೀತಿಯ ಸ್ವಾಗತವು ದೊರಕಿತು. ವಿಮರ್ಶೆಗಳಲ್ಲಿ ಮ್ಯಾಕ್‌ಬುಕ್‌ ಏರ್‌ ಗಣಕದ ಸುವಾಹ್ಯತೆ/ಸಾಗಿಸಲು ಸಾಧ್ಯವಾಗುವಿಕೆಯು ಅತ್ಯಂತ ಪ್ರಶಂಸೆಗೆ ಪಾತ್ರವಾದರೂ, ಅದಕ್ಕಾಗಿ ಹೊರತುಪಡಿಸಬೇಕಾದ ಸೌಲಭ್ಯಗಳ ವಿಚಾರವಾಗಿ ಕಟು ಟೀಕೆಗಳು ವ್ಯಕ್ತವಾದವು.[೪೦][೪೧][೪೨] ಪೂರ್ಣಗಾತ್ರದ ಕೀಲಿಮಣೆ , ತೂಕ , ತೆಳುವಾಗಿರುವಿಕೆ ಹಾಗೂ ಬಹುವಿಧ-ಸ್ಪರ್ಶ ಸೌಲಭ್ಯದ ಟ್ರ್ಯಾಕ್‌ಪ್ಯಾಡ್‌ಗಳಂತಹಾ ಸೌಲಭ್ಯಗಳು ವಿಮರ್ಶೆಗಳಲ್ಲಿ ಪ್ರಶಂಸೆಗೆ ಪಾತ್ರವಾದರೆ, ಮಿತವಾದ ಅಳವಡಿಕಾ ವ್ಯವಸ್ಥೆಗಳ ಆಯ್ಕೆಗಳು, ಕಡಿಮೆ ವೇಗ(SSDಯಲ್ಲದ ಮಾದರಿಗಳಲ್ಲಿ), ಬಳಕೆದಾರರು ಬದಲಿಸಲಾಗದ ವಿದ್ಯುತ್ಕೋಶ, ಸಣ್ಣ ದೃಢ ಮುದ್ರಿಕೆ ಮತ್ತು ಬೆಲೆಗಳು ಟೀಕೆಗೆ ಪಾತ್ರವಾದವು.[೪೦][೪೧]

CNETನ ಡ್ಯಾನ್‌ ಆಕರ್‌ಮ್ಯಾನ್‌ರು ಮೂಲ ಮಾದರಿಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿ ಹೀಗೆಂದರು, "ಮ್ಯಾಕ್‌ಬುಕ್‌ ಏರ್‌ನಲ್ಲಿ ಅಳವಡಿಸಲಾಗಿರುವ ವಿನ್ಯಾಸ ಹಾಗೂ ತಂತ್ರಜ್ಞಾನಗಳು ಅಸಾಧಾರಣವಾದವು ಹಾಗೂ ಇದು ಖಂಡಿತಾ ಮಾನಕ ೧೩-ಅಂಗುಲಗಳ ಮ್ಯಾಕ್‌ಬುಕ್ ಗಣಕಕ್ಕಿಂತ ವಿಶಿಷ್ಟತೆಗೊಳಿಸಲಾದ ಉತ್ಪನ್ನವಾಗಿದೆ."[೪೨] ಸೀಮಿತ ಅಂತರ್ಜಾಲ ಸಂಪರ್ಕಸಾಧ್ಯತೆ, ಕಡಿಮೆ ವೇಗ, ಸಣ್ಣ ದೃಢ ಮುದ್ರಿಕೆ , ವಿದ್ಯುತ್ಕೋಶ ಹಾಗೂ SSD ದೃಢ-ಮುದ್ರಿಕೆ/ಡ್ರೈವ್‌ ಆಯ್ಕೆಯ ಬೆಲೆಗಳನ್ನು ಆಕರ್‌ಮನ್‌ರಿಗೆ ಹಿಡಿಸಿರಲಿಲ್ಲ , ಆದಾಗ್ಯೂ ಅದರ ತೆಳುವಾಗಿರುವಿಕೆ, ಗಟ್ಟಿಮುಟ್ಟಾಗಿರುವಿಕೆ ಹಾಗೂ ಬಹುವಿಧಸ್ಪರ್ಶ ಅಂಗಚಲನೆ ಸೌಲಭ್ಯಗಳನ್ನು ಪ್ರಶಂಸಿಸಿದ್ದರು. ಮ್ಯಾಕ್‌ವರ್ಲ್ಡ್‌ನ ಜೇಸನ್‌ ಸ್ನೆಲ್‌ರು ಅದರ ಸುವಾಹ್ಯತೆ/ಸಾಗಿಸಲು ಸಾಧ್ಯವಾಗುವಿಕೆಯನ್ನು ಪ್ರಶಂಸಿಸಿದರೂ, "ಮ್ಯಾಕ್‌ಬುಕ್‌ ಏರ್‌ ಗಣಕವು ಕೊಳ್ಳಬೇಕೆನ್ನಿಸುವಂತಿದೆಯೇ ಎಂಬುದರ ನಿರ್ಧಾರವನ್ನು ಕೇವಲ ೧ ಪ್ರಶ್ನೆಗೆ ಉತ್ತರಿಸುವ ಮೂಲಕವೇ ಕಂಡುಕೊಳ್ಳಬಹುದು: ನೀವು ಎಷ್ಟರಮಟ್ಟಿಗೆ ರಾಜಿ ಮಾಡಿಕೊಳ್ಳಲು ಸಿದ್ಧರಿದ್ದೀರಿ?" ಎಂದು ಟಿಪ್ಪಣಿ ಬರೆದಿದ್ದರು

ಚಿತ್ರ:MacBook Air television advertisement (screenshot).jpg
ಮೊದಲ (ಎಡಗಡೆಯದು) ಮತ್ತು ಎರಡನೆಯ (ಬಲಗಡೆಯದು) ಜಾಹೀರಾತುಗಳಿಂದ ತೆಗೆದ ಚಿತ್ರಭಿತ್ತಿ. ಎಡಗಡೆಯಲ್ಲಿರುವುದು ಪರಿಚಯಿಸಿದ ಸಂದರ್ಭದ ಮ್ಯಾಕ್‌ಬುಕ್‌ ಏರ್‌ ಜಾಹಿರಾತು ; ಬಲಗಡೆಯಲ್ಲಿರುವುದು 2010ರ ಕೊನೆಯ ಅವಧಿಯ ಜಾಹೀರಾತು.

ತನ್ನ ತೆಳುವಾದ ವಿನ್ಯಾಸವನ್ನು ಎತ್ತಿ ತೋರುವ ಕಿರುತೆರೆ ಜಾಹಿರಾತಿನೊಂದಿಗೆ ಮ್ಯಾಕ್‌ಬುಕ್‌ ಏರ್‌ ಗಣಕದ ಮಾರುಕಟ್ಟೆಯ ಪ್ರವೇಶವನ್ನು ಕಂಡಿತ್ತು. ಈ ಜಾಹೀರಾತಿನಲ್ಲಿ, ಮನಿಲಾ ಲಕೋಟೆಯನ್ನು ತೆರೆದು ಮ್ಯಾಕ್‌ಬುಕ್‌ ಏರ್‌ ಗಣಕವೊಂದನ್ನು ಹೊರತೆಗೆಯುವ ಕೈಯೊಂದು ಅದನ್ನು ತೆರೆದು ಸುಪ್ತತೆಯಿಂದ ಹೊರಬರುವಂತೆ ಮಾಡುತ್ತದೆ. ಆಗ ಹಿನ್ನೆಲೆಯಲ್ಲಿ ನುಡಿಸಲಾಗುವ ಸಂಗೀತವು ಯೇಲ್‌ ನೈಯಿಮ್‌ರು ಸಂಯೋಜಿಸಿದ್ದ "ನ್ಯೂ ಸೌಲ್‌‌" ಆಗಿತ್ತು.[೪೩]

ಎರಡನೇ-ಪೀಳಿಗೆಯ ಮ್ಯಾಕ್‌ಬುಕ್‌ ಏರ್‌ನಲ್ಲಿನ CPUಗಳು ಹೆಚ್ಚು ಪರಿಪಕ್ವಗೊಂಡ ತಯಾರಿಕಾ ಪ್ರಕ್ರಿಯೆಯಿಂದಾಗಿ ೨೦೦೮ರ ಕೊನೆಭಾಗದಲ್ಲಿ ಹೊರಬಂದ ಮೊದಲ-ಪೀಳಿಗೆಯ ಮ್ಯಾಕ್‌ಬುಕ್‌ ಏರ್‌ ಗಣಕಗಳ ಸರಣಿಯದ್ದೇ ಆದರೂ, ಒತ್ತಡದ ಸಂದರ್ಭದಲ್ಲಿ ಹೆಚ್ಚು ಸಮರ್ಥವಾಗಿ ಕಾರ್ಯನಿರ್ವಹಿಸುತ್ತದೆ ಆದರೆ ಮೊದಲ-ಪೀಳಿಗೆಯ ಚಿಪ್‌ಗಳು ವಿಪರೀತ ತಾಪಕ್ಕೇರುತ್ತಾ ಇದ್ದುದರಿಂದ ಹೆಚ್ಚು ಬಿಸಿಯಾಗದಂತೆ ತಡೆಯಲು ಸಂಸ್ಕಾರಕವನ್ನು ಕಡಿಮೆ ವೇಗದಲ್ಲಿ ನಡೆಸುತ್ತಿದ್ದುದರಿಂದ ಅದರ ಸಾಮರ್ಥ್ಯವು ಮತ್ತಷ್ಟು ಕಡಿಮೆಯಾಗಿರುತ್ತಿತ್ತು.[೪೪]

ಅನೇಕ ಟೀಕಾಕಾರರು ೧೧-ಅಂಗುಲಗಳ ಮ್ಯಾಕ್‌ಬುಕ್‌ ಏರ್‌ ಗಣಕವನ್ನು ಹಾಗೆಂದು ಪ್ರಚುರಪಡಿಸಿರದಿದ್ದರೂ ನೆಟ್‌ಬುಕ್‌ ಗಣಕಕ್ಕೆ ಅವಶ್ಯವಾದ ಗುಣಲಕ್ಷಣಗಳನ್ನು ಹೊಂದಿರುವುದೆಂದೂ ಹಾಗೆಯೇ ತುಲನಾತ್ಮಕವಾಗಿ ಅದರ ಅಧಿಕ ಬೆಲೆಯನ್ನು ಎತ್ತಿ ತೋರಿದ್ದರು.[೪೫][೪೬][೪೭][೪೮][೪೯]

"ತೆಳುವಾದುದು " ಎಂಬುದರ ಬಗೆಗಿನ ತಕರಾರುಗಳು[ಬದಲಾಯಿಸಿ]

ಜನವರಿ ೨೦೦೮ರಲ್ಲಿ ಮೂಲ ಮಾದರಿಯ ಮ್ಯಾಕ್‌ಬುಕ್‌ ಏರ್‌ನ ಉಪಕ್ರಮಣದ ಸಂದರ್ಭದಲ್ಲಿ ಆಪಲ್‌ ಸಂಸ್ಥೆಯು ವಿಶ್ವದಲ್ಲೇ "ಅತ್ಯಂತ ತೆಳುವಾದ ಮಡಿಲಗಣಕ ‌"ವೆಂದು ಹೇಳಿಕೊಂಡಿತ್ತು. ಆದಾಗ್ಯೂ ಆ ಹೊತ್ತಿಗೆ ಸ್ಥಗಿತಗೊಂಡಿದ್ದ ೧೯೯೮ರಲ್ಲಿ ಬಿಡುಗಡೆಯಾಗಿದ್ದ ಮಿತ್ಸುಬಿಷಿ ಪೆಡಿಯಾನ್‌ ಗಣಕವು , ತನ್ನ ಚತುಷ್ಕೋನಾಕಾರ ದ ಕಾರಣದಿಂದಾಗಿ ತನ್ನ ಆವರಣದ ತುದಿಭಾಗಗಳಲ್ಲಿ ಮ್ಯಾಕ್‌ಬುಕ್‌ ಏರ್‌ಗಿಂತ ಹೆಚ್ಚು ತೆಳುವಾಗಿತ್ತು 0.72 inches (18 mm).[೫೦][೫೧] ಮೂಲಮಾದರಿಯ ಮ್ಯಾಕ್‌ಬುಕ್‌ ಏರ್‌ ಗಣಕವು ತನ್ನ ದಪ್ಪನಾದ ಭಾಗದಲ್ಲಿ ಇನ್ನೂ ದಪ್ಪವಾಗಿದ್ದು (0.76 inches (19 mm)), ಆದರೆ ನಂತರ ಇದನ್ನು ಚೂಪಾಗಿಸಿ 0.16 inches (4 mm)ಕ್ಕೆ ಇಳಿಸಲಾಗಿತ್ತು , ಇದರಿಂದಾಗಿ "ಅತ್ಯಂತ ತೆಳುವಾದ" ಮಡಿಲಗಣಕವೆಂಬ ಹೇಳಿಕೆಯ ಬಗ್ಗೆ ವಿವಾದವನ್ನು ಹುಟ್ಟುಹಾಕುವ ಹಾಗಾಗಿತ್ತು.

ಅದೇ ತರಹದಲ್ಲಿ ಸ್ಥಗಿತಗೊಂಡಿದ್ದ ಷಾರ್ಪ್‌ ಆಕ್ಟಿಯಸ್‌ MM೧೦ ಮುರಾಮಾಸಾಸ್‌ ಗಣಕವನ್ನು ಕೂಡಾ ಕೆಲ ಮಾಹಿತಿಸ್ರೋತಗಳಲ್ಲಿ ಮ್ಯಾಕ್‌ಬುಕ್‌ ಏರ್‌ಗಿಂತ ತೆಳುವಾದುದೆಂದು ವರ್ಣಿಸಲಾಗಿತ್ತು , ಏಕೆಂದರೆ ಅದು ತನ್ನ ಕನಿಷ್ಟ ದಪ್ಪವಿರುವ ಕಡೆ 0.54 inches (14 mm)ರಷ್ಟು ದಪ್ಪವಿತ್ತು.[೫೨] ಅದೂ ಕೂಡಾ ಮ್ಯಾಕ್‌ಬುಕ್‌ ಏರ್‌ ಗಣಕದಂತೆಯೇ ಚೂಪಾಗಿಸಿಕೊಂಡ ವಿನ್ಯಾಸವನ್ನು ಹೊಂದಿದ್ದು ಅದರ ಗರಿಷ್ಟ ಎತ್ತರವು 0.78 inches (20 mm)ರಷ್ಟಿತ್ತು, ವಾಸ್ತವವಾಗಿ ಮ್ಯಾಕ್‌ಬುಕ್‌ ಏರ್‌ಗಿಂತ ಸ್ವಲ್ಪಮಟ್ಟಿಗೆ ದಪ್ಪವಾಗಿತ್ತು.[೫೩]

ಮೂಲಮಾದರಿಯ ಮ್ಯಾಕ್‌ಬುಕ್‌ ಏರ್‌ ಗಣಕ ಬಿಡುಗಡೆಯಾದಂದಿನಿಂದ, ಮಾರ್ಚ್‌ ೨೦೦೯ರಲ್ಲಿ ಬಿಡುಗಡೆಯಾಗಿದ್ದ ಒಂದೇ ಮಟ್ಟದಲ್ಲಿ 0.65 inches (17 mm)ರಷ್ಟು ದಪ್ಪವಾಗಿದ್ದ ಡೆಲ್‌ ಅಡಾಮೋ,[೫೪] ಹಾಗೂ ಮತ್ತಷ್ಟು ತೆಳುವಾಗಿದ್ದ ಕೇವಲ 0.39 inches (10 mm)ರಷ್ಟು ದಪ್ಪವಿದ್ದ ಸೆಪ್ಟೆಂಬರ್‌ ೨೦೦೯ರಲ್ಲಿ ಬಿಡುಗಡೆಯಾಗಿದ್ದ ಅಡಾಮೋ XPSಗಳೂ ಸೇರಿದಂತೆ ಹಲವು ತೀರಾತೆಳುವಾದ ಮಡಿಲಗಣಕಗಳನ್ನು ಬಿಡುಗಡೆ ಮಾಡಲಾಗಿದೆ. ಅಷ್ಟು ಮಾತ್ರವಲ್ಲದೇ ಅಕ್ಟೋಬರ್‌‌ ೨೦೦೯ರಲ್ಲಿ ಬಿಡುಗಡೆ ಮಾಡಲಾಗಿದ್ದ ಸೋನಿ VAIO X-ಸರಣಿಯ ಉತ್ಪನ್ನಗಳು ತಮ್ಮ ಸಂಪೂರ್ಣ ಆವರಣದುದ್ದಕ್ಕೂ ೦.೫೫ ಅಂಗುಲಗಳಷ್ಟು (೧೪ mm) ದಪ್ಪವಿದ್ದವು. ಅದೇ ರೀತಿಯಲ್ಲಿ ಜೂನ್‌ ೨೦೦೮ರಲ್ಲಿ (ಏರ್‌‌ನ ಬಿಡುಗಡೆಯಾದ ಕೆಲವೇ ತಿಂಗಳುಗಳ ನಂತರ) ಬಿಡುಗಡೆಯಾದ HPಯ ವೂಡೂPC ENVY ೧೩೩ ಸರಣಿಯ ಗಣಕಗಳೂ ಕೂಡಾ ತಮ್ಮ ಸಂಪೂರ್ಣ ಆವರಣದುದ್ದಕ್ಕೂ ೦.೭೦ ಅಂಗುಲಗಳಷ್ಟು ದಪ್ಪವಿದ್ದವು. ಇದಾದ ತರುವಾಯ ಆಪಲ್‌ ಕಂಪೆನಿಯು 'ವಿಶ್ವದಲ್ಲೇ ಅತ್ಯಂತ ತೆಳುವಾದ ಮಡಿಲಗಣಕ‌ ' ಎಂಬ ಹೇಳಿಕೆಯನ್ನು ತಮ್ಮ ಪ್ರಚಾರಗಳಿಂದ ಹೊರಗಿಟ್ಟಿತು.

ವಿವಾದಾಂಶಗಳು[ಬದಲಾಯಿಸಿ]

ಮೂಲಮಾದರಿ ಮ್ಯಾಕ್‌ಬುಕ್‌ ಏರ್‌ ಗಣಕದ ಬದಿಯಲ್ಲಿರುವ ಕೆಳಗೆ ಮಡಿಕೆಯಂತಿರುವ ಕಂಡಿಯು ಕೆಲ ಹೆಡ್‌ಫೋನ್‌/ಶಿರೋಶ್ರವಣಕ ಪ್ಲಗ್‌/ಬಿರಡೆಗಳಿಗೆ ಹಾಗೂ USB ಸಾಧನಗಳಿಗೆ ತೀರ ಬಿಗಿಯಾಗುತ್ತಿದ್ದುದರಿಂದ ಬಳಕೆದಾರರು ಅನಿವಾರ್ಯವಾಗಿ ವಿಸ್ತರಣಾ ಕೇಬಲ್‌ಗಳನ್ನು ಖರೀದಿಸಬೇಕಾಗುತ್ತಿತ್ತು. ಆಪಲ್‌ ಬಹುತೇಕ ಇತರೆ ಮಡಿಲಗಣಕಗಳಲ್ಲಿ ಲಭ್ಯವಿರುವ ತೆರಪಿರುವ ಸಂಪರ್ಕ ಪೋರ್ಟ್‌ಗಳ ಪರವಾಗಿ ‌ ೨೦೧೦ರ ಕೊನೆಯ ಭಾಗದ ಮಾದರಿಯಲ್ಲಿ ಕೆಳಗೆ ಮಡಿಕೆಯಂತಿರುವ ಕಂಡಿಗಳನ್ನು ತೆಗೆದುಹಾಕಿತ್ತು.[೫೫][೫೬] ಮೊದಲ-ಪೀಳಿಗೆಯ ಉತ್ಪನ್ನಗಳ ಬಿಡುಗಡೆಯಾದಂದಿನಿಂದಲೇ ಕೆಲವು ಮ್ಯಾಕ್‌ಬುಕ್‌ ಏರ್‌ ಬಳಕೆದಾರರು ಅದು ವಿಪರೀತ ಬಿಸಿಯಾಗಿ ಅದರ ಪರಿಣಾಮವಾಗಿ CPU ಸ್ಥಗಿತಗೊಳ್ಳುವಂತೆ ಆಗುತ್ತಿದೆಯೆಂದು ದೂರು ನೀಡಿದ್ದರು. 150 °F (66 °C)ದಷ್ಟು ಕೆಳಮಟ್ಟಿಗಿನ CPUವಿನ ತಾಪಮಾನಗಳಲ್ಲೇ ಇದರ ಪರಿಣಾಮ ಕಂಡುಬರುವಂತಿದ್ದು ವಿಪರೀತ ಮಟ್ಟಿಗಿನ ತಾಪಮಾನಗಳಲ್ಲಿ ಇದು ಇನ್ನೂ ತೀವ್ರತೆಯನ್ನು ಪಡೆದುಕೊಳ್ಳಬಹುದು. ಆಪಲ್‌ ೨೦೦೮ರ ಮಾರ್ಚ್‌ರ ಆದಿಭಾಗದಲ್ಲಿ ಆ ಸಮಸ್ಯೆಯನ್ನು ಪರಿಹರಿಸುವ ಒಂದು ತಂತ್ರಾಂಶ ನವೀಕರಣವನ್ನು ಬಿಡುಗಡೆ ಮಾಡಿ ಮಿಶ್ರಿತ ಫಲಿತಾಂಶಗಳನ್ನು ಪಡೆಯಿತು : ೧ CPU ಕೋರ್‌ಅನ್ನು ಸ್ಥಗಿತಗೊಳಿಸಿ ಅದನ್ನು ತಕ್ಕಮಟ್ಟಿಗೆ ಸರಿಪಡಿಸಿದಂತಿತ್ತು ; ಆದಾಗ್ಯೂ ಕನಿಷ್ಠ ಕೆಲವು ಬಳಕೆದಾರರ ಮಟ್ಟಿಗಾದರೂ ಕರ್ನಲ್‌ನ ಸಮಸ್ಯೆಯು ಉಳಿದುಕೊಂಡೇ ಇತ್ತು.[೫೭][೫೮] ವಿಡಿಯೋ ಚಾಲನೆ ಅಥವಾ ವಿಡಿಯೋ ಚಾಟಿಂಗ್‌ನಂತಹಾ ತೀವ್ರ ಸಂಸ್ಕರಣೆ ಕಾರ್ಯ ಬೇಡುವ ಚಟುವಟಿಕೆಗಳಿಂದ ಈ ಸಮಸ್ಯೆಯು ಇನ್ನೂ ಹೆಚ್ಚಾಗಿರುತ್ತದೆ.[೫೯]

ನಿರ್ದಿಷ್ಟ ವಿವರಣೆಗಳು[ಬದಲಾಯಿಸಿ]

ಸ್ಥಗಿತಗೊಂಡಿರುವ ಉತ್ಪನ್ನ ಪ್ರಸಕ್ತ
ಮಾದರಿಗಳ ಕೋಷ್ಟಕ
ಮಾದರಿ 2008ರ ಆದಿಭಾಗ[೬೦] ೨೦೦೮ರ ಅಂತ್ಯದಲ್ಲಿ[೭][೮] ೨೦೦೯ರ ಮಧ್ಯಭಾಗ[೬೧][೬೨] 2010ರ ಅಂತ್ಯದಲ್ಲಿ
ಮಾದರಿ ಐಡೆಂಟಿಫೈಯರ್‌/ಗುರುತುಮಾಹಿತಿ ೦–೧ ೦–೧ ೦–೧
ಮಾದರಿ ಸಂಖ್ಯೆ MB೦೦೩LL/A MB೫೪೩LL/A, MB೯೪೦LL/A MC೨೩೩LL/A, MC೨೩೪LL/A MC೫೦೫LL/A, MC೫೦೩LL/A
ದರ್ಶಕ
ಸಂಪೂರ್ಣವಾಗಿ ಹೊಳಪಿನ ಮೈಯುಳ್ಳ ಅಗಲವಾದ ಪರದೆ LED ಹಿಂಬದಿಬೆಳಕಿನೊಂದಿಗೆ
ಅನ್ವಯಿಸುವುದಿಲ್ಲ/ಲಭ್ಯವಿಲ್ಲ ೧೧.೬", ೧೩೬೬ × ೭೬೮
೧೩.೩", ೧೨೮೦ × ೮೦೦ ೧೩.೩", ೧೪೪೦ × ೯೦೦
ಪ್ರದರ್ಶನ ತಂತ್ರಜ್ಞಾನ
ಗಣಕದ ಸ್ಮರಣೆಯೊಂದಿಗೆ ಹಂಚಿಕೊಂಡ ಸ್ಮರಣೆ
೧೪೪ MBನಷ್ಟು DDR೨ SDRAM ಬಳಸುವ ಇಂಟೆಲ್‌ GMA X೩೧೦೦ ಸೂಕ್ಷ್ಮ-DVI ಔಟ್‌ಪುಟ್‌ನೊಂದಿಗೆ ೨೫೬ MBನಷ್ಟು DDR೩ SDRAM ಬಳಸುವ ಎನ್‌ವಿಡಿಯಾ ಜಿಇಫೋರ್ಸ್‌ ೯೪೦೦M ಕಿರು ದರ್ಶಕಪೋರ್ಟ್‌ ಔಟ್‌ಪುಟ್‌ನೊಂದಿಗೆ ೨೫೬ MBನಷ್ಟು DDR೩ SDRAM ಬಳಸುವ ಎನ್‌ವಿಡಿಯಾ ಜಿಇಫೋರ್ಸ್‌ ೩೨೦M ಕಿರು ದರ್ಶಕಪೋರ್ಟ್‌ ಔಟ್‌ಪುಟ್‌ನೊಂದಿಗೆ
ಫ್ರಂಟ್‌ ಸೈಡ್‌ ಬಸ್‌ ೮೦೦ MHz ೧೦೬೬ MHz ೮೦೦ ಅಥವಾ ೧೦೬೬ MHz
ಸೂಕ್ಷ್ಮಸಂಸ್ಕಾರಕ ೧.೬ GHz (P೭೫೦೦) ಅಥವಾ ೧.೮ GHz (P೭೭೦೦) ಇಂಟೆಲ್‌ ಕೋರ್‌ ೨ ಡ್ಯುವೋ ೪ MB ಆನ್‌-ಚಿಪ್‌ L೨ ಕ್ಯಾಷೆಯೊಂದಿಗೆ ೧.೬ GHz (SL೯೩೦೦) ಅಥವಾ ೧.೮೬ GHz (SL೯೪೦೦) ಇಂಟೆಲ್‌ ಕೋರ್‌ ೨ ಡ್ಯುವೋ ೬ MB ಆನ್‌-ಚಿಪ್‌ L೨ ಕ್ಯಾಷೆಯೊಂದಿಗೆ ೧.೮೬ GHz (SL೯೪೦೦) ಅಥವಾ ೨.೧೩ GHz (SL೯೬೦೦) ಇಂಟೆಲ್‌ ಕೋರ್‌ ೨ ಡ್ಯುವೋ ೬ MB ಆನ್‌-ಚಿಪ್‌ L೨ ಕ್ಯಾಷೆಯೊಂದಿಗೆ ೧.೪ GHz (SU೯೪೦೦) ಇಂಟೆಲ್‌ ಕೋರ್‌ ೨ ಡ್ಯುವೋ ೩ MB ಆನ್‌-ಚಿಪ್‌ L೨ ಕ್ಯಾಷೆಯೊಂದಿಗೆ
ಐಚ್ಛಿಕ ೧.೬ GHz (SU೯೬೦೦) ಇಂಟೆಲ್‌ ಕೋರ್‌ ೨ ಡ್ಯುವೋ ೩ MB ಆನ್‌-ಚಿಪ್‌ L೨ ಕ್ಯಾಷೆಯೊಂದಿಗೆ
೧.೮೬ GHz (SL೯೪೦೦) ಇಂಟೆಲ್‌ ಕೋರ್‌ ೨ ಡ್ಯುವೋ ೬ MB ಆನ್‌-ಚಿಪ್‌ L೨ ಕ್ಯಾಷೆಯೊಂದಿಗೆ
ಐಚ್ಛಿಕ ೨.೧೩ GHz (SL೯೬೦೦) ಇಂಟೆಲ್‌ ಕೋರ್‌ ೨ ಡ್ಯುವೋ ೬ MB ಆನ್‌-ಚಿಪ್‌ L೨ ಕ್ಯಾಷೆಯೊಂದಿಗೆ
ಸ್ಮರಣೆ
ಲಾಜಿಕ್‌ ಫಲಕಕ್ಕೆ ಬೆಸುಗೆ ಹಾಕಿದ ಸ್ಮರಣೆ [೨೭]
೨ GB ಸಾಮರ್ಥ್ಯದ ೬೬೭ MHz DDR೨ SDRAM ೨ GB[note ೩] ಸಾಮರ್ಥ್ಯದ ೧೦೬೬ MHz DDR೩ SDRAM ೨ GB ಸಾಮರ್ಥ್ಯದ ೧೦೬೬ MHz DDR೩ SDRAM
ಐಚ್ಛಿಕ ೪ GB
ಹೆಚ್ಚುವರಿ ಸಂಗ್ರಹಣೆ ೮೦ GB ೧.೮-ಅಂಗುಲಗಳATA, ೪೨೦೦-rpm HDD ಅಥವಾ ೬೪ GB SSD ೧೨೦ GB ೧.೮-ಅಂಗುಲಗಳ ಸೀರಿಯಲ್‌ ATA, ೪೨೦೦-rpm HDD ಅಥವಾ ೧೨೮ GB SSD ೬೪, ೧೨೮, ಅಥವಾ ೨೫೬ GB ಸಾಮರ್ಥ್ಯದ ಫ್ಲ್ಯಾಶ್‌ ಸಂಗ್ರಹಣೆ
ದ್ಯುತಿ/ಆಪ್ಟಿಕಲ್‌ ಸಂಗ್ರಹಣೆ ಲಭ್ಯವಿಲ್ಲ, ಐಚ್ಛಿಕ ಬಾಹ್ಯ USB ಸೂಪರ್‌‌ಡ್ರೈವ್೪× DVD+/-R DL ಬರೆಯುವ ಸಾಮರ್ಥ್ಯದ ಡ್ರೈವ್‌ , ೮× DVD+/-R ಓದುವ/ಬರೆಯುವ ಸಾಮರ್ಥ್ಯದ ಡ್ರೈವ್‌ , ೮× DVD+RW ಬರೆಯುವ ಸಾಮರ್ಥ್ಯದ ಡ್ರೈವ್‌ , ೬× DVD-RW ಬರೆಯುವ ಸಾಮರ್ಥ್ಯದ ಡ್ರೈವ್‌ , ೨೪× CD-R ಬರೆಯುವ ಸಾಮರ್ಥ್ಯದ ಡ್ರೈವ್‌ , ಮತ್ತು ೧೬× CD-RW ರೆಕಾರ್ಡಿಂಗ್‌‌, ೮× DVD ಓದುವಿಕೆ, ೨೪× CD ಓದುವಿಕೆ
ಕೀಲಿಮಣೆ ಶ್ವೇತ/ಬಿಳಿ ಅಕ್ಷರಗಳು , ಹಿಂಬದಿ ಬೆಳಕಿನೊಂದಿಗೆ ಬೂದು ಅಕ್ಷರಗಳು , ಹಿಂಬದಿ ಬೆಳಕಿರುವುದಿಲ್ಲ
ಸಂಪರ್ಕಶೀಲತೆ
ತಂತಿಸಹಿತ ಈಥರ್‌ನೆಟ್‌ ಲಭ್ಯವಿರುವುದಿಲ್ಲ
ಅಂತರ್ಗತವಾದ ೮೦೨.೧೧a/b/g ಹಾಗೂ ಡ್ರಾಫ್ಟ್‌‌-n
ಬ್ಲ್ಯೂಟೂತ್‌ ೨.೧ + EDR
ಅಂತರ್ನಿವಿಷ್ಟ ಅವಕೆಂಫು (IR) ಗ್ರಾಹಕ ಆಪಲ್‌ ರಿಮೋಟ್‌ ನಿಯಂತ್ರಕ
ಅಂತರ್ಗತವಾದ ೮೦೨.೧೧a/b/g/n
ಬ್ಲ್ಯೂಟೂತ್‌ ೨.೧ + EDR
ಆಪಲ್‌ ರಿಮೋಟ್‌ ನಿಯಂತ್ರಕದ ಬೆಂಬಲವಿಲ್ಲ
ವಿದ್ಯುತ್ಕೋಶ ಅನ್ವಯಿಸುವುದಿಲ್ಲ/ಲಭ್ಯವಿಲ್ಲ ೩೫-ವ್ಯಾಟ್‌-ಅವರ್‌ಗಳ ತೆಗೆಯಲುಬಾರದ ಲಿಥಿಯಮ್‌-ಐಯಾನ್‌ ಪಾಲಿಮರ್‌ (೧೧″)
೩೭-ವ್ಯಾಟ್‌-ಅವರ್‌ಗಳ ತೆಗೆಯಲುಬಾರದ ಲಿಥಿಯಮ್‌-ಐಯಾನ್‌ ಪಾಲಿಮರ್‌ (೧೩″) ೪೦-ವ್ಯಾಟ್‌-ಅವರ್‌ಗಳ ತೆಗೆಯಲುಬಾರದ ಲಿಥಿಯಮ್‌-ಐಯಾನ್‌ ಪಾಲಿಮರ್‌ (೧೩″) ೫೦-ವ್ಯಾಟ್‌-ಅವರ್‌ಗಳ ತೆಗೆಯಲುಬಾರದ ಲಿಥಿಯಮ್‌-ಐಯಾನ್‌ ಪಾಲಿಮರ್‌ (೧೩″)
ಘಟಕ/ಏಕಮಾನ ತೂಕ ಅನ್ವಯಿಸುವುದಿಲ್ಲ/ಲಭ್ಯವಿಲ್ಲ 2.3 lb (1.04 kg) (೧೧″)
2.9 lb (1.32 kg) (೧೩")
3.0 lb (1.36 kg)
ಪರಿಮಾಣಗಳು 12.8 in (330 mm) ಅಗಲ × 8.94 in (227 mm) ಆಳ × 0.16 in (4.1 mm) – 0.76 in (19 mm) ಎತ್ತರ (೧೩″) 11.8 in (300 mm) ಅಗಲ × 7.56 in (192 mm) ಆಳ × 0.11 in (2.8 mm) – 0.68 in (17 mm) ಎತ್ತರ (೧೧″)
12.8 in (330 mm) ಅಗಲ × 8.94 in (227 mm) ಆಳ × 0.11 in (2.8 mm) – 0.68 in (17 mm) ಎತ್ತರ (೧೩″)
ಬಾಹ್ಯೋಪಕರಣ ಸಂಪರ್ಕಗಳು * ೧× USB ೨.೦
* ೧× ೩.೫mm ಹೆಡ್‌ಫೋನ್‌/ಶಿರೋಶ್ರವಣಕ ಪ್ಲಗ್‌/ಬಿರಡೆ
ಸೂಕ್ಷ್ಮ-DVI ವಿಡಿಯೋ ಪೋರ್ಟ್‌
* ೧x USB ೨.೦
* ೧× ೩.೫mm ಹೆಡ್‌ಫೋನ್‌/ಶಿರೋಶ್ರವಣಕ ಪ್ಲಗ್‌/ಬಿರಡೆ
ಸಣ್ಣ ದರ್ಶಕ ಪೋರ್ಟ್‌ ವಿಡಿಯೋ ಪೋರ್ಟ್‌
* ೨× USB ೨.೦
* ೧× ೩.೫mm ಹೆಡ್‌ಫೋನ್‌/ಶಿರೋಶ್ರವಣಕ ಪ್ಲಗ್‌/ಬಿರಡೆ
ಡಿಜಿಟಲ್‌ ದರ್ಶಕ ಇಂಟರ್‌ಫೇಸ್‌ಗೆ ಸಣ್ಣ ದರ್ಶಕ ಪೋರ್ಟ್‌
* ೨× USB ೨.೦
* ೧× ೩.೫mm ಹೆಡ್‌ಫೋನ್‌/ಶಿರೋಶ್ರವಣಕ ಪ್ಲಗ್‌/ಬಿರಡೆ
* ೧× SD ಕಾರ್ಡ್‌ ಕಂಡಿ (೧೩″)
ಡಿಜಿಟಲ್‌ ದರ್ಶಕ ಇಂಟರ್‌ಫೇಸ್‌ಗೆ ಸಣ್ಣ ದರ್ಶಕ ಪೋರ್ಟ್‌
  1. REDIRECT Template:Timeline of MacBook family models

ಟಿಪ್ಪಣಿಗಳು[ಬದಲಾಯಿಸಿ]

  1. ಈ ಲೇಖನದಲ್ಲಿ, ಗಣಕ ಸಂಗ್ರಹಣೆಯನ್ನು ಬಿಂಬಿಸುವ ಸಾಂಪ್ರದಾಯಿಕ ಪೂರ್ವಪ್ರತ್ಯಯಗಳು ಆಧಾರಸಂಖ್ಯೆ -೧೦ರ ಮೌಲ್ಯಗಳನ್ನು ಸೂಚಿಸುತ್ತವೆ ಆ ಮೂಲಕ "ಕಿಲೋಬೈಟ್‌" (KB) = ೧೦ಬೈಟ್‌ಗಳು, "ಮೆಗಾಬೈಟ್‌" (MB) = ೧೦ ಬೈಟ್‌ಗಳು ಹಾಗೂ "ಗಿಗಾಬೈಟ್‌" (GB) = ೧೦ ಬೈಟ್‌ಗಳು ಆಗಿರುತ್ತವೆ.
  2. ಈ ಲೇಖನದಲ್ಲಿ ಗಣಕ RAM ಸ್ಮರಣೆಯನ್ನು ಬಿಂಬಿಸುವ ಸಾಂಪ್ರದಾಯಿಕ ಪೂರ್ವಪ್ರತ್ಯಯಗಳು ಆಧಾರಸಂಖ್ಯೆ-೨ರ ಮೌಲ್ಯಗಳನ್ನು ಸೂಚಿಸುತ್ತವೆ ಆ ಮೂಲಕ "ಕಿಲೋಬೈಟ್" (KB) = ೨೧೦ ಬೈಟ್‌ಗಳು , "ಮೆಗಾಬೈಟ್" (MB) = ೨೨೦ ಬೈಟ್‌ಗಳು and "ಗಿಗಾಬೈಟ್" (GB) = ೨೩೦ ಬೈಟ್‌ಗಳು ಆಗಿರುತ್ತವೆ.
  3. ಈ ಲೇಖನದಲ್ಲಿ ಗಣಕ RAM ಸ್ಮರಣೆಯನ್ನು ಬಿಂಬಿಸುವ ಸಾಂಪ್ರದಾಯಿಕ ಪೂರ್ವಪ್ರತ್ಯಯಗಳು ಆಧಾರಸಂಖ್ಯೆ-೨ರ ಮೌಲ್ಯಗಳನ್ನು ಸೂಚಿಸುತ್ತವೆ ಆ ಮೂಲಕ "ಕಿಲೋಬೈಟ್" (KB) = ೨೧೦ ಬೈಟ್‌ಗಳು , "ಮೆಗಾಬೈಟ್" (MB) = ೨೨೦ ಬೈಟ್‌ಗಳು and "ಗಿಗಾಬೈಟ್" (GB) = ೨೩೦ ಬೈಟ್‌ಗಳು ಆಗಿರುತ್ತವೆ.

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ ೧.೨ ೧.೩ ೧.೪ ೧.೫ ೧.೬ "MacBook Air Technical Specifications". Apple Inc. Retrieved 2010-11-26.
  2. "Jobs Unveils 'World's Thinnest Notebook'". Wired.com. Wired Magazine. 01-15-08. Archived from the original on 2013-01-05. Retrieved 2010-08-10. {{cite web}}: |first= missing |last= (help); Check date values in: |date= (help)
  3. Neumayr, Tom. "MacBook Air Now Shipping". Apple Inc. Retrieved 2010-05-25.
  4. "MacBook Air Environmental Report" (PDF). Apple Inc. Retrieved 2010-05-25.
  5. "Apple Introduces MacBook Air—The World's Thinnest Notebook". Apple. 15 January 2008. Retrieved 19 November 2009.
  6. ದ ಮ್ಯಾಕ್‌ಬುಕ್‌ ಏರ್‌ CPU ಮಿಸ್ಟರಿ: ಮೋರ್‌ ಡೀಟೇಲ್ಸ್‌ ರಿವೀಲ್ಡ್‌
  7. ೭.೦ ೭.೧ Technical specifications of MB543LL/A from Apple's knowledge base and from EveryMac.com. Retrieved 2010-06-08.
  8. ೮.೦ ೮.೧ Technical specifications of MB940LL/A from Apple's knowledge base and from EveryMac.com. Retrieved 2010-06-08.
  9. Evans, Bill. "Apple Updates MacBook Pro Family with New Models & Innovative Built-in Battery for Up to 40% Longer Battery Life". Apple Inc. Retrieved 2010-05-22.
  10. ಆಪಲ್‌ ನ ನವೀನ 11.6-in. ಮ್ಯಾಕ್‌ಬುಕ್‌ ಏರ್‌ : ಅದನ್ನು ನೆಟ್‌ಬುಕ್‌ ಎಂದು ಕರೆಯಬೇಡಿ
  11. "Apple Special Event". Apple Inc.
  12. ಆಪಲ್‌ ನವೀನ ಮ್ಯಾಕ್‌ಬುಕ್‌ ಏರ್‌ ಅನ್ನು ಸಾದರಪಡಿಸುತ್ತಿದೆ , ಲಯನ್‌ ಕಾರ್ಯಾಚರಣೆ ವ್ಯವಸ್ಥೆಯೊಂದಿಗೆ
  13. "ಮ್ಯಾಕ್‌ಗಣಕಗಳು ಐಪ್ಯಾಡ್‌ನಂತಹ ಮತ್ತಷ್ಟು ಸೌಲಭ್ಯಗಳನ್ನು ಹೊಂದುತ್ತಲಿವೆ". Archived from the original on 2012-03-03. Retrieved 2011-03-27.
  14. "Apple Reinvents Notebooks With New MacBook Air" (Press release). Apple Inc.
  15. "Apple Announces New 13-inch MacBook Pro With M1 Apple Silicon". MacRumors. November 10, 2020. Archived from the original on November 25, 2020. Retrieved November 10, 2020.
  16. Apple unveils all-new MacBook Air, supercharged by the new M2 chip - Apple Newsroom
  17. Monitors for M2 MacBook Air - TechieTechTech
  18. "Apple - MacBook Air - Remarkably thin, yet full size". Apple Inc. Retrieved 12 June 2010.
  19. "Apple - MacBook Pro design - The breakthrough aluminum unibody". Apple Inc. Retrieved 12 June 2010.
  20. ೨೦.೦ ೨೦.೧ ೨೦.೨ "MacBook Air features". Apple Inc. Retrieved 2010-11-26.
  21. "Apple – Mac OS X Snow Leopard – Refining the user experience". Apple Inc. Retrieved 8 June 2010.
  22. Choney, Suzanne (೨೦೦೮-೦೧-೨೪). "Lighter laptops move to flash-based drives". Newsweek. Archived from the original on 2012-11-04. Retrieved ೨೦೦೮-೦೧-೨೪. {{cite web}}: Check date values in: |accessdate= and |date= (help); Cite has empty unknown parameter: |7= (help)
  23. ೨೩.೦ ೨೩.೧ "MacBook Air – Buy MacBook Air notebook computers – Apple Store (U.S.)". Apple Inc. Retrieved 2010-05-19.
  24. Cohen, Peter (೨೦೦೮-೦೧-೧೫). "Apple introduces MacBook Air". Macworld. Retrieved ೨೦೦೮-೦೧-೨೧. {{cite web}}: Check date values in: |accessdate= and |date= (help)
  25. "Intel comments on chips in new MacBook". CNET. Archived from the original on 2011-03-30. Retrieved 2010-05-25.
  26. Morgenstern, David (೨೦೧೦-೧೦-೨೨). "MacBook Air storage: Not a DIMM". ZDNet. {{cite web}}: Check date values in: |date= (help)
  27. ೨೭.೦ ೨೭.೧ "Apple MacBook Air (Mid 2009) review". PC Advisor. Retrieved 10 June 2010.
  28. "Sources: MacBook Air battery replacements take only minutes". AppleInsider. ೨೦೦೮-೦೧-೧೮. Retrieved ೨೦೦೮-೦೧-೧೯. {{cite web}}: Check date values in: |accessdate= and |date= (help)
  29. "First Look at MacBook Air". iFixit. 2008-02-01. Retrieved 2008-02-01.
  30. "MacBook Air Out-of-Warranty Battery Replacement Program". Apple Inc. Retrieved 2008-01-15.
  31. "Apple Introduces MacBook Air—The World's Thinnest Notebook". Retrieved 2008-01-16.
  32. Jobs, Steve. "A Greener Apple". Apple Inc. Retrieved 2010-06-01.
  33. "Apple Macintosh 2400c/180 specs". EveryMac.com. Retrieved ೮ June ೨೦೧೦. {{cite web}}: Check date values in: |accessdate= (help)
  34. "MacBook Air's tradeoffs". Macworld. Retrieved 10 June 2010.
  35. ೩೫.೦ ೩೫.೧ ೩೫.೨ Mossberg, Walter S. (೨೦೦೮-೦೧-೨೪). "Apple's MacBook Air Is Beautiful and Thin, But Omits Features". The Wall Street Journal. Retrieved 2008-01-24. {{cite news}}: Check date values in: |date= (help)
  36. Yager, Tom. "MacBook Air, a detailed preview". Infoworld. Archived from the original on ೨೦೦೮-೦೬-೧೭. Retrieved ೨೦೧೦-೦೫-೨೫. {{cite web}}: Check date values in: |accessdate= and |archivedate= (help)
  37. "MacBook Air". Apple Inc. Archived from the original on 2008-07-25. Retrieved 2008-01-15.
  38. "MacBook Air – Guided Tour". Apple Inc. Retrieved 2008-01-15.
  39. "Buy MacBook Air: What's Included". Apple Inc. Retrieved 2010-05-22.
  40. ೪೦.೦ ೪೦.೧ ೪೦.೨ ೪೦.೩ Snell, Jason. "Apple MacBook Air/1.6 GHz". Retrieved 10 June 2010.[ಶಾಶ್ವತವಾಗಿ ಮಡಿದ ಕೊಂಡಿ]
  41. ೪೧.೦ ೪೧.೧ ೪೧.೨ ೪೧.೩ Block, Ryan. "MacBook Air review". Engadget. Retrieved 10 June 2010.
  42. ೪೨.೦ ೪೨.೧ ೪೨.೨ Ackerman, Dan. "MacBook Air review". CNET Reviews. Retrieved 10 June 2010.
  43. "Mac Ad Raises Yael Naim Mac Ad Raises Yael Naim's Profile: NPR Music's Profile: NPR Music". NPR. Retrieved 8 June 2010.
  44. ಆಪಲ್‌ ನ 2010ರ ಸಾಲಿನ ಮ್ಯಾಕ್‌ಬುಕ್‌ ಏರ್‌ (11 & 13 ಅಂಗುಲಗಳು) ಸಂಪೂರ್ಣವಾಗಿ ವಿಮರ್ಶಿತವಾಗಿದೆ
  45. ಮ್ಯಾಕ್‌ಬುಕ್‌ ಏರ್‌ - ನನ್ನ ನವೀನ ಅಚ್ಚುಮೆಚ್ಚಿನ ನೆಟ್‌ಬುಕ್‌ - ಫೈನಾನ್ಷಿಯಲ್‌ ಟೈಮ್ಸ್
  46. ಮ್ಯಾಕ್‌ಬುಕ್‌ ಏರ್‌ ಎ ಗ್ರೇಟ್‌ ವಿಂಡೋಸ್‌ ನೆಟ್‌ಬುಕ್‌ ಫಾರ್‌ ಎ ಪ್ರೈಸ್ Archived 2011-04-23 ವೇಬ್ಯಾಕ್ ಮೆಷಿನ್ ನಲ್ಲಿ. - CNET.com
  47. ಆಪಲ್‌ ನ ನವೀನ ಮ್ಯಾಕ್‌ಬುಕ್‌ ಏರ್‌ : ಯಾವುದೋ ಹೆಸರಿನಿಂದ ಕರೆಯಲ್ಪಡುತ್ತಿರುವ ಒಂದು ನೆಟ್‌ಬುಕ್ Archived 2011-01-29 ವೇಬ್ಯಾಕ್ ಮೆಷಿನ್ ನಲ್ಲಿ. - ಕಂಪ್ಯೂಟರ್‌ವರ್ಲ್ಡ್‌
  48. ಆಪಲ್‌ ಸ್‌ ನೆಟ್‌ಬುಕ್? ದ 11.6" ಮ್ಯಾಕ್‌ಬುಕ್‌ ಏರ್‌ ಡಿಬಟ್ಸ್ - ಕಂಪ್ಯೂಟರ್‌ ವೀಕ್ಲಿ
  49. ಆಪಲ್‌ ನೆಟ್‌ಬುಕ್‌ ಒಂದನ್ನು ಸಾದರಪಡಿಸುತ್ತಿದೆ : ಒಂದು 11-ಅಂಗುಲಗಳ ಮ್ಯಾಕ್‌ಬುಕ್‌ ಏರ್‌ Archived 2011-01-23 ವೇಬ್ಯಾಕ್ ಮೆಷಿನ್ ನಲ್ಲಿ. - ವೈರ್‌ಡ್‌
  50. Kanellos, Michael. "Mitsubishi unveils notebook – CNET News". News.cnet.com. Retrieved 2010-05-19.
  51. "Mitsubishi Pedion Thinner Than MacBook Air | Gadget Lab". Wired.com. 2008-01-16. Retrieved 2010-05-19.
  52. Kanellos, Michael (2008-01-16). "Update: Thinnest notebook crown belongs to Sharp". CNET News.com. Archived from the original on 2018-09-13. Retrieved 2010-05-25.
  53. "Official Data Sheet" (PDF). Sharp Corporation. 2008-01-18. Archived from the original (PDF) on 2011-05-20. Retrieved 2008-01-18.
  54. Ackerman, Dan (2009-03-16). "Hands-on with the Dell Adamo | Crave – CNET". Crave (CNET). Archived from the original on 2011-11-09. Retrieved 2010-05-19.
  55. "Adding insult to injury: USB 3G modems and even some thumb drive and mp3 players will not fit in MacBook Air flip down USB port". Engadget. Retrieved ೨೦೧೦-೦೫-೨೫. {{cite web}}: Check date values in: |accessdate= (help)
  56. Cheng, Jacqui (2008-02-03). "Thin is in: Ars Technica reviews MacBook Air". Ars Technica. Retrieved 2010-05-25.
  57. Elmer-DeWitt, Philip (13 March 2008). "Apple's MacBook (hot) Air problem". CNN Fortune. Archived from the original on 8 ಜುಲೈ 2009. Retrieved 10 June 2010.
  58. ಆಪಲ್‌ 'ನ ಮ್ಯಾಕ್‌ಬುಕ್‌ (ಹಾಟ್‌) ಏರ್‌‌ ಪ್ರಾಬ್ಲಮ್ Archived 2009-07-08 ವೇಬ್ಯಾಕ್ ಮೆಷಿನ್ ನಲ್ಲಿ., ಫಿಲಿಪ್‌ ಎಲ್ಮರ್‌-ಡೆವಿಟ್, CNN ಫಾರ್ಚ್ಯೂನ್‌ ಆಪಲ್‌ ೨.೦ ಬ್ಲಾಗ್‌, ೧೩ ಮಾರ್ಚ್‌ ೨೦೦೮.
  59. Asher, Moses. "Apple fans burned by hot Airs". The Age. Retrieved 2010-06-07.
  60. Technical specifications of MB003LL/A from Apple's knowledge base and from EveryMac.com. Retrieved 2010-06-08.
  61. Technical specifications of MC233LL/A from Apple's knowledge base and from EveryMac.com. Retrieved 2010-06-08.
  62. Technical specifications of MC234LL/A from Apple's knowledge base and from EveryMac.com. Retrieved 2010-06-08.

ಬಾಹ್ಯ ಕೊಂಡಿಗಳು‌[ಬದಲಾಯಿಸಿ]