ಮೈಸೂರು ರಾಜ್ಯ ವಿಧಾನಸಭೆ ಚುನಾವಣೆ, 1957

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೈಸೂರು ರಾಜ್ಯ ವಿಧಾನ ಸಭೆ ಚುನಾವಣೆ
1957
ಭಾರತ
1951 1962
208 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ
ಬಹುಮತ ಪಡೆದ ಪಕ್ಷ ಪ್ರಮುಖ ವಿರೋಧ ಪಕ್ಷ
ನಾಯಕ ಎಸ್. ನಿಜಲಿಂಗಪ್ಪ
ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರಜಾ ಸಮಾಜವಾದಿ ಪಕ್ಷ
ಈಗ ಗೆದ್ದ ಸ್ಥಾನಗಳು 150 18
ಹಿಂದಿನ ಮುಖ್ಯಮಂತ್ರಿ ಚುನಾಯಿತ ಮುಖ್ಯಮಂತ್ರಿ
ಎಸ್. ನಿಜಲಿಂಗಪ್ಪ ಕಾಂಗ್ರೆಸ್ ಎಸ್. ನಿಜಲಿಂಗಪ್ಪ ಕಾಂಗ್ರೆಸ್

ಮೈಸೂರು ರಾಜ್ಯ ವಿಧಾನಸಭೆ ಚುನಾವಣೆ, 1957 – ಇದು ಮೈಸೂರು ರಾಜ್ಯದ ಎರಡನೆಯ ವಿಧಾನಸಭೆಗೆ ಚುನಾವಣೆ. ಇದು ಕರ್ನಾಟಕದ ಏಕೀಕರಣ ನಂತರದ ಮೊದಲ ವಿಧಾನಸಭೆ ಚುನಾವಣೆ. ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿಯಾಗಿ ಎಸ್. ನಿಜಲಿಂಗಪ್ಪ ಅಧಿಕಾರ ಸ್ವೀಕರಿಸಿದ್ದರು ಮತ್ತು ಚುನಾವಣೆಯಲ್ಲಿ ಅವರೇ ನಾಯಕರಾಗಿದ್ದರು. ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಬಹುಮತ ಗಳಿಸಿತು. ಹೀಗಾಗಿ ಎಸ್. ನಿಜಲಿಂಗಪ್ಪನವರೇ ಮತ್ತೆ ಮುಖ್ಯಮಂತ್ರಿಯಾದರು. ಈ ವಿಧಾನಸಭೆಯು 10 ಜೂನ್ 1952ರಿಂದ 1 ಮಾರ್ಚ್ 1962ರವರೆಗೂ ಆಸ್ತಿತ್ವದಲ್ಲಿತ್ತು. ಈ ವಿಧಾನಸಭೆಯ ಅವಧಿಯಲ್ಲಿಯೇ ಬಿ. ಡಿ. ಜತ್ತಿಯವರು ಸಹ ಮುಖ್ಯಮಂತ್ರಿಯಾದರು

ಪಲಿತಾಂಶ[ಬದಲಾಯಿಸಿ]

ಮೈಸೂರು ವಿಧಾನಸಭೆ ಚುನಾವಣೆ, 1957[೧]
ಚುನಾವಣೆಯಲ್ಲಿ ಜಯಗಳಿಸಿದ ಪಕ್ಷಗಳ ವಿವರ
ಪಕ್ಷಗಳು ಸ್ಪರ್ದಿಸಿದ
ಸ್ಥಾನಗಳು
ಗೆಲುವು ಠೇವಣಿ ನಷ್ಟ ಒಟ್ಟಾರೆ ಮತಗಳು ಶೇಕಡವಾರು
ಮತಗಳು
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 207 150 1 33,43,839 52.08
ಪ್ರಜಾ ಸಮಾಜವಾದಿ ಪಕ್ಷ 78 18 19 9,02,373 14.06
ಅಖಿಲ ಭಾರತ ಸೆಡ್ಯೂಲ್ ಕ್ಯಾಸ್ಟ್ ಫೆಡರೇಶನ್ 6 2 1 83,542 1.30
ಪೀಸೆಂಟ್ಸ್ ಅಂಡ್ ವರ್ಕರ್ಸ್ ಪಾರ್ಟಿ 2 2 0 35,462 0.55
ಭಾರತೀಯ ಕಮ್ಯುನಿಷ್ಟ್ ಪಕ್ಷ 20 1 9 1,23,403 1.92
ಅಖಿಲ ಭಾರತ ಭಾರತೀಯ ಜನ ಸಂಘ 20 0 14 86,084 1.34
ಪಕ್ಷೇತರರು 228 35 113 18,45,456 28.75
ಮೊತ್ತ 561 208 157 64,20,159 100.00
ಕನಿಷ್ಠ ಒಂದು ಸ್ಥಾನ ಪಡೆದ ಅಥವಾ ಶೇ 1ರಷ್ಟು ಒಟ್ಟು ಮತ ಪಡೆದ ಪಕ್ಷಗಳನ್ನು ತೋರಿಸಲಾಗಿದೆ.

ಆಧಾರಗಳು[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. STATISTICAL REPORT ON GENERAL ELECTION, 1957 TO THE LEGISLATIVE ASSEMBLY OF MYSORE ELECTION Archived 2012-01-11 ವೇಬ್ಯಾಕ್ ಮೆಷಿನ್ ನಲ್ಲಿ. Election Commission of India, New Delhi, Page 11, Retrieved on 2016-12-02