ವಿಷಯಕ್ಕೆ ಹೋಗು

ಮೈಸೂರು ರಾಜ್ಯ ವಿಧಾನಸಭೆ ಚುನಾವಣೆ, 1951

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೈಸೂರು ರಾಜ್ಯ ವಿಧಾನ ಸಭೆ ಚುನಾವಣೆ
1951
ಭಾರತ
1957
99 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ
ಬಹುಮತ ಪಡೆದ ಪಕ್ಷಪ್ರಮುಖ ವಿರೋಧ ಪಕ್ಷ
ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಕಿಸಾನ್ ಮಜ್ದೂರ್ ಪ್ರಜಾ ಪಕ್ಷ
ಈಗ ಗೆದ್ದ ಸ್ಥಾನಗಳು15018
ಹಿಂದಿನ ಮುಖ್ಯಮಂತ್ರಿಚುನಾಯಿತ ಮುಖ್ಯಮಂತ್ರಿ
ಸ್ವತಂತ್ರಾ ನಂತರದ ಮೊದಲ ಚುನಾವಣೆಕೆ. ಚೆಂಗಲರಾಯ ರೆಡ್ಡಿ ಕಾಂಗ್ರೆಸ್

ಮೈಸೂರು ರಾಜ್ಯ ವಿಧಾನಸಭೆ ಚುನಾವಣೆ, 1951 – ಇದು ಮೈಸೂರು ರಾಜ್ಯದ ಸ್ವತಂತ್ರಾ ನಂತರದ ಮೊದಲನೆಯ ವಿಧಾನಸಭೆಗೆ ಚುನಾವಣೆ. ಈ ಚುನಾವಣೆಗಳು ಹಳೆಯ ಮೈಸೂರು ಪ್ರಾಂತಗಳಿಗೆ ಅನ್ವಯಿಸುತ್ತವೆ. ಹೀಗಾಗಿ ಒಟ್ಟು ಸ್ಥಾನಗಳಲ್ಲಿ ದೊಡ್ಡ ಮಟ್ಟದ ಬದಲಾವಣೆ ಕಾಣುತ್ತದೆ. ಇದನ್ನು ಮೊಟಕುಗೊಳಿಸಿದ ಕರ್ನಾಟಕದ ಭಾಗದ ಚುನಾವಣೆ ಎಂದು ಹೇಳಬಹುದು ಏಕೆಂದರೆ ಇದು ಕರ್ನಾಟಕದ ಏಕೀಕರಣಕ್ಕೂ ಮುಂಚಿನ ಚುನಾವಣೆ. ಒಟ್ಟು ಸ್ಥಾನಗಳು 99. ಚುನಾವಣೆಯಲ್ಲಿ 74 ಸ್ಥಾನಗಳನ್ನು ಕಾಂಗ್ರೆಸ್ ಪಡೆದರೆ, ಅತಿ ದೊಡ್ಡ ವಿರೋಧ ಪಕ್ಷವಾದ ಕಿಸಾನ್ ಮಜ್ದೂರ್ ಪ್ರಜಾ ಪಕ್ಷವು 8 ಸ್ಥಾನಗಳನ್ನು ಗಳಿಸಿದೆ. ಚುನಾವಣೆಯ ನಂತರ ಕೆ. ಚೆಂಗಲರಾಯ ರೆಡ್ಡಿ ಮುಖ್ಯಮಂತ್ರಿಯಾಗುತ್ತಾರೆ. ಈ ವಿಧಾನಸಭೆಯು 18 ಜೂನ್ 1952ರಿಂದ 31 ಮಾರ್ಚ್ 1957ರ ವರೆಗೂ ಆಸ್ತಿತ್ವದಲ್ಲಿತ್ತು. ಇದರ ಅವಧಿಯಲ್ಲಿಯೇ ಕರ್ನಾಟಕದ ಏಕೀಕರಣವಾಯಿತು (ಮೈಸೂರು ರಾಜ್ಯವಾಗಿ). ಈ ಅವಧಿಯಲ್ಲಿ ಕೆಂಗಲ್ ಹನುಮಂತಯ್ಯ, ಕಡಿದಾಳ್ ಮಂಜಪ್ಪ ಮತ್ತು ಎಸ್. ನಿಜಲಿಂಗಪ್ಪ ಸಹ ಮುಖ್ಯಮಂತ್ರಿಗಳಾದರು.

ಪಲಿತಾಂಶ

[ಬದಲಾಯಿಸಿ]
ಮೈಸೂರು ವಿಧಾನಸಭೆ ಚುನಾವಣೆ, 1951[]
ಚುನಾವಣೆಯಲ್ಲಿ ಜಯಗಳಿಸಿದ ಪಕ್ಷಗಳ ವಿವರ
ಪಕ್ಷಗಳುಸ್ಪರ್ದಿಸಿದ
ಸ್ಥಾನಗಳು
ಗೆಲುವುಠೇವಣಿ ನಷ್ಟಒಟ್ಟಾರೆ ಮತಗಳುಶೇಕಡವಾರು
ಮತಗಳು
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್8874012,76,31846.35
ಕಿಸಾನ್ ಮಜ್ದೂರ್ ಪ್ರಜಾ ಪಕ್ಷ598253,91,65314.22
ಸಮಾಜವಾದಿ ಪಕ್ಷ473222,40,3908.73
ಅಖಿಲ ಭಾರತ ಸೆಡ್ಯೂಲ್ ಕ್ಯಾಸ್ಟ್ ಫೆಡರೇಶನ್72447,9161.74
ಭಾರತೀಯ ಕಮ್ಯುನಿಷ್ಟ್ ಪಕ್ಷ51425,1160.91
ಅಖಿಲ ಭಾರತ ಭಾರತೀಯ ಜನ ಸಂಘ2301862,1182.26
ಪಕ್ಷೇತರರು15411927,10,35925.79
ಮೊತ್ತ3949918527,53,870100.00
ಕನಿಷ್ಠ ಒಂದು ಸ್ಥಾನ ಪಡೆದ ಅಥವಾ ಶೇ 1ರಷ್ಟು ಒಟ್ಟು ಮತ ಪಡೆದ ಪಕ್ಷಗಳನ್ನು ತೋರಿಸಲಾಗಿದೆ.

ಆಧಾರಗಳು

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]
  1. STATISTICAL REPORT ON GENERAL ELECTION, 1951 TO THE LEGISLATIVE ASSEMBLY OF MYSORE ELECTION Archived 2016-10-18 ವೇಬ್ಯಾಕ್ ಮೆಷಿನ್ ನಲ್ಲಿ. Election Commission of India, New Delhi, Page 9, Retrieved on 2016-12-02