ಮೇ ೨೦೧೫ ನೇಪಾಳ ಭೂಕಂಪ
ದಿನಾಂಕ | 12 ಮೇ 2015 |
---|---|
ಉಂಟಾದ ಸಮಯ | ೧೨:೩೫:೧೯ ನೇಪಾಳದ ಸಮಯ |
ಪ್ರಮಾಣ | ೭.೩ Mw[೧] |
ಆಳ | ೧೮.೫ ಕಿ.ಮೀ (೧೧.೫ ಮೈ) |
ಬಗೆ | ಪಳಕು[೨] |
ಹಾನಿಗೊಳಗಾದ ಪ್ರದೇಶಗಳು | |
ಸಾವು ನೋವುಗಳು | ೬೮ ಮರಣ ೧,೨೫೦+ ಗಾಯಾಳುಗಳು |
೧೨ಮೇ ೨೦೧೫ ಸುಮಾರು ೧೨ː೩೫ಕ್ಕೆ ರಿಕ್ಟರ್ ಮಾಪಕದಲ್ಲಿ 7.4ರಷ್ಟು ತೀವ್ರತೆಯ ಭೂಕಂಪ ನೇಪಾಳದ ಕೊಡರಿಯಿಂದ ೧೮ಕಿ.ಮೀ ಆಗ್ನೇಯ ಕಡೆಯಲ್ಲಿ ದಾಖಲಾಗಿದೆ. ಏಪ್ರಿಲ್ ತಿಂಗಳಲ್ಲಿ ನೆಡೆದ ಭೂಕಂಪದ ಉತ್ತರಾಘಾತವೆಂದು ಇದನ್ನು ಪರಿಗಣಿಸಲಾಗುತ್ತಿದೆ.[೨] ಭಾರತದ ಉತ್ತರ ಭಾಗದಲ್ಲಿರುವ ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಇತರೆ ರಾಜ್ಯಗಳಲ್ಲಿಯೂ ಕಂಪನ ಕಾಣಿಸಿಕೊಂಡಿತು.[೩]
ಕೆಲ ನಿಮಿಷಗಳ ನಂತರ, ರಿಕ್ಟರ್ ಮಾಪಕದಲ್ಲಿ ೬.೩ರಷ್ಟು ತೀವ್ರತೆಯ ಮತ್ತೊಂದು ಭೂಕಂಪವು ಕಠ್ಮಂಡುವಿನಿಂದ ಪೂರ್ವದಲ್ಲಿರುವ ರಾಮೆಚ್ಚಪ್ ನಲ್ಲಿ ಕಾಣಿಸಿತು. ಇದರ ಕಂಪನವು ಬಾಂಗ್ಲಾದೇಶ, ಚೀನಾ ಮತ್ತು ಭಾರತದ ರಾಜಧಾನಿ ದೆಹಲಿಯೂ ಸೇರಿದಂತೆ ಉತ್ತರ ಭಾಗದ ಹಲವು ರಾಜ್ಯಗಳಲ್ಲಿ ಅನುಭವವಾಯಿತು.[೪]
ಸಾವುನೋವು
[ಬದಲಾಯಿಸಿ]ನೇಪಾಳದಲ್ಲಿ ಕನಿಷ್ಠ ೫೦ ಮಂದಿಯಾದರೂ ಮೃತಪಟ್ಟರೆ, ಸುಮಾರೂ ೧,೨೫೦ಕ್ಕಿಂತ ಹೆಚ್ಚು ಮಂದಿ ಗಾಯಾಳುಗಳಾಗಿದ್ದಾರೆ.[೫][೬]ನೇಪಾಳದ ೭೫ ಜಿಲ್ಲೆಗಳಲ್ಲಿ ೩೨ಜಿಲ್ಲೆಗಳು ಭೂಕಂಪದಿಂದ ಪೀಡಿತವಾಗಿವೆ. ಎವರೆಷ್ಟ್ ಪರ್ವತದ ಸುತ್ತಮುತ್ತದ ಪ್ರದೇಶಗಳೂ ಹಾನಿಯಾಗಿವೆ.[೫]
ಭಾರದಲ್ಲಿಯೂ ಸುಮಾರು ೧೭ಜನ ಭೂಕಂಪದಿಂದ ಸಾವಿಗೀಡಾಗಿದ್ದಾರೆ. ಇವರಲ್ಲಿ ೧೬ಜನ ಉತ್ತರ ಪ್ರದೇಶದಲ್ಲಿ ಬಲಿಯಾದರೆ, ಒಬ್ಬರು ಬಿಹಾರದಲ್ಲಿ ಮೃತಪಟ್ಟಿದ್ದಾರೆ.[೬] ಹಾಗೂ ಟಿಬೆಟ್ ಪ್ರಾಂತದ ಚೀನದಲ್ಲಿಯೂ ಒಬ್ಬ ಮಹಿಳೆ ಮೃತಳಾಗಿದ್ದಾಳೆ.[೫]
ದೇಶ |
ಮೃತಪಟ್ಟವರು |
ಗಾಯಾಳುಗಳು |
---|---|---|
ನೇಪಾಳ | ೫೦ |
೧,೨೬೧ |
ಭಾರತ | ೧೭ |
|
ಚೀನಾ | ೧ | |
ಒಟ್ಟು |
೬೮ |
೧,೨೬೧+ |
ರಕ್ಷಣಾ ಕಾರ್ಯಚರಣೆ ಮತ್ತು ಪರಿಹಾರ
[ಬದಲಾಯಿಸಿ]ನೇಪಾಳ ಸೇನೆ ತನ್ನ ಆಪರೇಶನ್ ಸಂಕಟ ಮೊಚನವನ್ನು ಭಾರತ ಸೈನ್ಯದ ಜೊತೆಗೂಡಿ ಮುಂದುವರೆಸಿ ಸುಮಾರು ಟನ್ ಗಟ್ಟಳೆ ಪರಿಹಾರ ಸಾಮಗ್ರಿಗಳನ್ನು ಜನರಿಗೆ ತಲುಪಿಸುತ್ತಿದೆ.[೭]
ಉಲ್ಲೇಖಗಳು
[ಬದಲಾಯಿಸಿ]- ↑ "Nepal earthquake, magnitude 7.3, strikes near Everest". BBC News. Retrieved 12 May 2015.
- ↑ ೨.೦ ೨.೧ "M7.3 - 18km SE of Kodari, Nepal". USGS Earthquake Hazards Program.
- ↑ "7.3 Magnitude Earthquake hits North India including Bihar". news.biharprabha.com. 12 May 2015. Retrieved 12 May 2015.
- ↑ "Nepal Earthquake on 12 May 2015: Magnitude, Epicenter, Damages and Relief Operations". news.biharprabha.com. Ventuno/AFP. 12 May 2015. Retrieved 12 May 2015.
- ↑ ೫.೦ ೫.೧ ೫.೨ Greg Botelho; Jethro Mullen (12 May 2015). "At least 68 dead after another major quake centered in Nepal". CNN. Retrieved 12 May 2015.
- ↑ ೬.೦ ೬.೧ "LIVE: 42 killed, over 1000 injured in Nepal earthquake; toll in India rises to 17". The Indian Express. 12 May 2015. Retrieved 12 May 2015.
- ↑ "Operation Maitri by Indian Army continues after 12 May Earthquake". news.biharprabha.com. 12 May 2015. Retrieved 12 May 2015.