ಮಿಲಾಗ್ರೀಸ್ ಚರ್ಚು (ಮಂಗಳೂರು)
13°23′44″N 74°44′10″E / 13.39556°N 74.73611°E
ಮಿಲಾಗ್ರೀಸ್ ಚರ್ಚು (ಮಂಗಳೂರು) | |
---|---|
ಹಳೆಯ ಹೆಸರುಗಳು | Igreja de Nossa Senhora dos Milagres |
ಇತರೆ ಹೆಸರುಗಳು | ಪವಾಡ ಮಾತೆಯ ಚರ್ಚು |
ಸಾಮಾನ್ಯ ಮಾಹಿತಿ | |
ನಗರ ಅಥವಾ ಪಟ್ಟಣ | ಹಂಪನಕಟ್ಟೆ, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ, |
ದೇಶ | ಭಾರತ |
ಮುಕ್ತಾಯ | ೧೬೮೦ |
ವಿನ್ಯಾಸ ಮತ್ತು ನಿರ್ಮಾಣ | |
ವಾಸ್ತುಶಿಲ್ಪಿ | ಬಿಷಪ್ ಥೋಮಸ್ ದೆ ಕಾಸ್ಟ್ರೊ |
ಈತಿಹಾಸಿಕ ರೋಮನ್ ಕಥೋಲಿಕ ಚರ್ಚು "ಮಿಲಾಗ್ರೀಸ್ ಚರ್ಚು" (ಪೋರ್ಚುಗೀಸ್:Igreja de Nossa Senhora dos Milagres, ಆಂಗ್ಲ:Church of Our Lady of Miracles) ಮಂಗಳೂರುನಗರದ ಹಂಪನಕಟ್ಟೆ ಯಲ್ಲಿದ್ದು. ಚರ್ಚು ಕಟ್ಟಡವನ್ನು ೧೬೮೦ ರಲ್ಲಿ ಬಿಷಪ್ ಥೋಮಸ್ ದೆ ಕಾಸ್ರ್ಟೊ ಅವರು ಸ್ಥಾಪಿಸಿದ್ದು, ಗೋವಾದ ದಿವಾರ್ ಗಳ ಮಾದರಿಯಲ್ಲಿದೆ. ಪ್ರಸ್ತುತ ಸ್ಮಶಾನವಿರುವ ಸ್ಥಳದಲ್ಲಿ ಮೂಲ ಚರ್ಚ್ ಕಟ್ಟಡವನ್ನು ನಿರ್ಮಿಸಲಾಗಿತ್ತು.[೧] It is one of the oldest churches in Dakshina Kannada.[೨]
ಮೊದಲ ಮಿಲಾಗ್ರೀಸ್ ಚರ್ಚ್(೧೬೮೦−೧೭೮೪)
[ಬದಲಾಯಿಸಿ]೧೭ನೇ ಶತಮಾನದಲ್ಲಿ ರೋಮನ್ ಕಥೋಲಿಕ ಜನಸ್ಂಖ್ಯೆಯು ಗಣನೀಯ ಪ್ರಮಾನದಲ್ಲಿ ಇದ್ದ ಕಾರಣ ಚರ್ಚ್ ಆಡಳಿತ ಪ್ರಕ್ರಿಯೆಯಲ್ಲಿ ಮಂಗಳೂರು ಪ್ರದೇಶವು ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ.[೪] ಪೋರ್ಚುಗೀಸರು ತಮ್ಮ ವಸಾಹತುಗಳನ್ನು ಕರಾವಳಿಯಲ್ಲಿ ಮುಗಿಸಿದಾಗ ಇಲ್ಲಿನ ಗುರುಗಳು ಗೋವಾಕ್ಕೆ ಮರಳಿ ಹೋಗಬೇಕಾಗಿ ಬಂತು. ಹಾಗಾಗಿ ಕರಾವಳಿ ಪ್ರದೇಶಕ್ಕೆ ವಲಸೆ ಬಂದ ಗೋವಾ ಕಥೋಲಿಕರಿಗೆ ಕ್ರೈಸ್ತ ಧರ್ಮಗುರುಗಳಿರಲಿಲ್ಲ.[೪] ೧೬೫೮ರಲ್ಲಿ, a ಕಾರ್ಮೆಲಿತ ಮಿಷನರಿಗಳಾದ, ವಂ. ವಿನ್ಸೆಂಟೊ ಮರಿಯ ದೆ ಸಾಂತಾ ಕತ್ರೀನಾ ಕರಾವಳಿಗೆ ಭೇಟಿ ನೀಡಿ ಕ್ರೈಸ್ತ ಧರ್ಮದ ಶೊಚನೀಯ ಸ್ಥಿತಿಯನ್ನು ರೋಮ್ಗೆ ವಿವರಿಸಿದರು.[೪] ಹೀಗಾಗಿ ಕ್ರೈಸ್ತರ ಅಭಿವೃದ್ಧಿಗಾಗಿ ರೋಮ್ನಿಂದ ಸಹಾಕಾರ ಲಭಿಸಿತು, ಮತ್ತು ಥಿಯೆಟೈನ್ ಅವರನ್ನು ನೇಮಿಸಿದರು, ಬಿಷಪ್ ಥೋಮಸ್ ದೆ ಕಾಸ್ರ್ಟೊ ಅವರು ಅಪೋಸ್ತಲಿಕ ವಿಕಾರ್ ಆಗಿ ಕರಾವಳಿ ಮತ್ತುಮಲಬಾರ್ಗೆ ೧೬೭೪ರಲ್ಲಿ ಬಂದರು.[೪] ಬಿಷಪ್ ದೆ ಕಾಸ್ಟ್ರೊ ಅವರು ೧೬೭೭ರಲ್ಲಿ ಮಂಗಳೂರಿಗೆ ಬಂದರು, ಮತ್ತು ಕೆಳದಿ ರಾಜ್ಯದ ಚೆನ್ನಮ್ಮ ಅವರಿಂದ ಜಮೀನನ್ನು ಉಡುಗೊರೆಯಾಗಿ ಪಡೆದರು.[೪] ೧೬೮೦ರಲ್ಲಿ ಚರ್ಚ್ ಕಟ್ಟಡವನ್ನು ಕಟ್ಟಿದ ನಂತರ, ಅವರು ತಮ್ಮ ನಿವಾಸದಲ್ಲಿ ವಾಸವಾದರು.[೪] ಬಿಷಪ್ ದೆ ಕಾಸ್ಟ್ರೊ ಅವರು ೧೬ ಜುಲೈ ೧೬೮೪ರಲ್ಲಿ ನಿಧನರಾದರು, ಮತ್ತು ಅವರ ಪ್ರಾರ್ಥಿವ ಶರೀರವನ್ನು ಸ್ಮಶಾನದ ದಕ್ಷಿಣದ ಮೂಲೆಯಲ್ಲಿ ಸಮಾಧಿ ಮಾಡಲಾಗಿದ್ದು, ಅದನ್ನು ಕಂಚಿನ ಚಪ್ಪಡಿಯಲ್ಲಿ ಸಂ. ಮೋನಿಕಾ ಅವರ ಪ್ರಾರ್ಥನಾಲಯದ ಬಳಿಯಲ್ಲಿ ಗುರುತಿಸಬಹುದಾಗಿದೆ.[೪]
ರಾಣಿ ಚೆನ್ನಮ್ಮ ಅವರ ಮರಣಾನಂತರ ಅವರ ಉತ್ತರಾಧಿಕಾರಿಯಾದ ರಾಜ ಬಸಪ್ಪ ಅವರು ಸ್ಥಳವನ್ನು ಮರಳಿ ಪಡೆದರು. ೧೭೧೫ರಲ್ಲಿ, ಸ್ಥಳೀಯ ಗುರು ವಂ. ಪಿಂಟೊ ಅವರು ಮತ್ತೆ ಸ್ಥಳವನ್ನು ದ್ವಿತೀಯ ಸೋಮಶೇಖರ ಅವರಿಂದ ಮರಳಿ ಪಡೆದರು. ಅವರ ಸೋದರಳಿಯ ವಂ. ಆಲ್ಫ್ರೆಡ್ ಪಿಂಟೊ ಅವರ ನಂತರ ಮುಂದುವರೆಸಿ, ಪ್ರಸ್ತುತ ಸ್ಥಳದಲ್ಲಿರುವ ಚರ್ಚ್ ಕಟ್ಟಡವನ್ನು ೧೭೫೬ರಲ್ಲಿ ಕಟ್ಟಿದರು. ೧೭೬೩ರಲ್ಲಿ, ಕರಾವಳಿಯು ಹೈದರ್ನ ಆಡಳಿತಕ್ಕೊಳಗೊಂಡು, ತದನಂತರ ೧೭೮೨ರವರೆಗೆ ಅವನ ಮಗ ಟಿಪ್ಪು ಸುಲ್ತಾನನನ ಅಧೀನದಲ್ಲಿತ್ತು. ದ್ವಿತೀಯ ಆಂಗ್ಲೋಮೈಸೂರು ಯುದ್ಧದ ಸಮಯದಲ್ಲಿ ಕೆಲವು ಕ್ರೈಸ್ತರು ಈತನ ವಿರುದ್ಧವಾಗಿ ಬ್ರಿಟಿಷರೊಂದಿಗೆ ಶಾಮೀಲಾಗಿದ್ದರು ಎಂದು ನಂಬಲಾಗಿದ್ದು; ಟಿಪ್ಪು ಸುಮಾರು ೬೦,೦೦೦ ಮಂಗಳುರು ಕ್ರೈಸ್ತರನ್ನು ೨೪ ಫೆಬ್ರುವರಿ ೧೭೮೪ರ ಬೂದಿ ಬುಧವಾರದಂದು ಬಂಧಿಸಿ, herded them ಅವರನ್ನು ರಾಜಧಾನಿಶ್ರೀರಂಗಪಟ್ಟಣಕ್ಕೆ ಕರೆದೊಯ್ದನು.[೫] ಆ ವರ್ಷದಲ್ಲೇ, ಅವನು ೨೭ ಚರ್ಚುಗಳನ್ನು ಕೆಡವಿ ಹಾಕಿದ್ದು, ಇದರಲ್ಲಿ ಮಿಲಾಗ್ರೀಸ್ ಚರ್ಚ್ ಸಹ ಸೇರಿದೆ.[೬]
ಪ್ರಸ್ತತ ವಿನ್ಯಾಸ
[ಬದಲಾಯಿಸಿ]ಟಿಪ್ಪು ೪ ಮೇ ೧೭೯೯ರನಾಲ್ಕನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಬ್ರಿಟಿಷರಿಂದ ಸಾವನ್ನಪ್ಪಿದಾಗ, ಮಂಗಳೂರು ಕ್ರೈಸ್ತರನ್ನು ಬಂಧಮುಕ್ತಗೊಳಿಲಾಯಿತು ಮತ್ತು ಹಲವಾರು ಮಂದಿ ಮಂಗಳೂರಿಗೆ ಮರಳಿದರು. ಕೆಡವಿ ಹಾಕಿದ ಚರ್ಚ್ ಬದಲಾಗಿ ಪ್ರಾರ್ಥನಾಲಯವನ್ನು ಕಟ್ಟಿದ ಬೇಕರ್ ಲಾರೆನ್ಸ್ ಬೆಲ್ಲೊ ಅವರು ಹಿಂತಿರುಗಿದವರಲ್ಲಿ ಪ್ರಮುಖರು, ಅವರು ಇದನ್ನು ರು. ೪೦೦ ವಚ್ಚದಲ್ಲಿ ಕಟ್ಟಿದ್ದು, ವಂ. ಮೆಂಡಿಸ್ ಅವರು ಅದಕ್ಕೆ ಬೇಕಾದ ಪೀಠೋಪಕರಣಗಳನ್ನು ಒದಗಿಸಿದರು, ಮತ್ತು ಟಿಪ್ಪುವಿನ ಮಾಜಿ ಮುನ್ಶಿ ಆಗಿದ್ದ ಸಾಲ್ವೊದೊರ್ ಪಿಂಟೊ ಅವರೊಂದಿಗೆ ಸೇರಿ ಹಣವನ್ನು ಹೊಂದಿಸಿ ಸುಮಾರು ರು.೬೦೦ಗಳನ್ನು ಸರಕಾರದಿಂದ ಪಡೆದು ಚರ್ಚ್ ಕಟ್ಟಿದರು. ೧೮೧೧ರಲ್ಲಿ ಅವರು ವಿಸ್ತಾರವಾದ ಚರ್ಚ್ ಕಟ್ಟಡಕ್ಕಾಗಿ ಮೂಲ ಕಲ್ಲನ್ನು ಆಶೀರ್ವದಿಸಿ ಇಟ್ಟರು.[೭] ೧೯೧೧ರಲ್ಲಿ, ಚರ್ಚ್ ಮುಂಭಾಗವು ಹಾನಿಗೊಳಗಾಯಿತು, ಹಾಗಾಗಿ ಅಂದಿನ ಧರ್ಮಗುರುಗಳಾದ ವಂ.ಫ್ರಾಂಕ್ ಪಿರೇರಾ ಅವರು ಪ್ರಸ್ತುತ ಚರ್ಚ್ ಕಟ್ಟಡ ಕಾಮಗಾರಿಯನ್ನು ಮಾಡಿದ್ದು, ವಂ Fr. ದಿಯಾಮಂತಿ ಯೆ.ಸ. ಅವರ ವಿನ್ಯಾಸದಲ್ಲಿ ಚರ್ಚ್ ಕಟ್ಟಲಾಗಿದೆ. ಮುಖಮಂಟಪವನ್ನು ತದನಂತರ ಸೇರಿಸಲಾಗಿದೆ.
ಟಿಪ್ಪಣಿಗಳು
[ಬದಲಾಯಿಸಿ]- ↑ Prabhu 1999, p. 159
- ↑ Pinto 1999, p. 156
- ↑ Monteiro 2005
- ↑ ೪.೦ ೪.೧ ೪.೨ ೪.೩ ೪.೪ ೪.೫ ೪.೬ ಉಲ್ಲೇಖ ದೋಷ: Invalid
<ref>
tag; no text was provided for refs named'Pinto'
- ↑ Prabhu 1999, p. 231
- ↑ D'Souza 1983, N. 11, p. 40
- ↑ Farias 1999, p. 215
ಉಲ್ಲೇಖಗಳು
[ಬದಲಾಯಿಸಿ]- D'Souza, A. L. P. (1983), History of the Catholic Community of South Kanara, Desco Publishers.
- Farias, Kranti K. (1999), The Christian Impact on South Kanara, Church History Association of India.
- Monteiro, John B. (2005-12-08), Tippu Sultan’s Footprints in Tulunad, Daijiworld Media Pvt Ltd Mangalore, archived from the original on 2012-03-21, retrieved 2011-11-07
- Pinto, Pius Fidelis (1999). History of Christians in Coastal Karnataka, 1500–1763 A.D. Mangalore: Samanvaya Prakashan.
{{cite book}}
: Invalid|ref=harv
(help). - Prabhu, Alan Machado (1999). Sarasvati's Children: A History of the Mangalorean Christians. Bangalore: I.J.A. Publications. ISBN 978-81-86778-25-8.
{{cite book}}
: Invalid|ref=harv
(help).
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Official website Archived 2015-11-17 ವೇಬ್ಯಾಕ್ ಮೆಷಿನ್ ನಲ್ಲಿ.