ಮಾರಿಯಾ ಗೈಟಿನ ಆಗ್ನೆಸಿ

ವಿಕಿಪೀಡಿಯ ಇಂದ
Jump to navigation Jump to search
ಮಾರಿಯಾ ಗೈಟಿನ ಆಗ್ನೆಸಿ
Maria Gaetana Agnesi.jpg
ಜನನ೧೬ ಮೇ ೧೭೧೮
ಮಿಲನ
ಮರಣ೧೬ ಮೇ ೧೭೧೮
ಮಿಲನ್
ಕಾರ್ಯಕ್ಷೇತ್ರಗಣಿತಶಾಸ್ತ್ರಾದ ಪ್ರಾಧ್ಯಾಪಕರು
ಸಂಸ್ಥೆಗಳುಬೊಲೊಗ್ನಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಪಕರು

ಮಾರಿಯಾ ಗೈಟಿನ ಆಗ್ನೆಸಿ (೧೬ ಮೇ ೧೭೧೮-೯ ಜನವರಿ ೧೭೯೯) ಇಟಾಲಿಯನ್ ಗಣಿತಜ್ಞಿ ಮತ್ತು ತತ್ವಜ್ಞಾನಿ. ಪಾಶ್ಚಿಮಾತ್ಯದ ಕಡೆ ಗಣೆತಶಾಸ್ತ್ರದಲ್ಲಿ ಖ್ಯಾತಿ ಪಡೆದ ಮೊದಳ ಮಹಿಳೆ ಎಂದು ಪರಿಗಣಿಸಲಾಗಿದೆ. ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರದ ಪ್ರಾಧ್ಯಪಕಿಯಾಗಿ ನೇಮಕಯಾದವರಲ್ಲಿ ಮತ್ತು ಗಣಿತಶಾಸ್ತ್ರದ ಕೈಪಿಡಿಯನ್ನು ಬರದ ಮೊದಲ ಮಹಿಳೆ ಆಗ್ನೆಸ್ಸಿ. ಬೇದಾತ್ಮಕ (ಡಿಫ್‌ರೆಂನ್‌ಷಿಯಲ್ ಕಾಲ್ಕ್‌ಲಸ್) ಮತ್ತು ಅನುಕಲನ (ಇಂಟಿಗ್ರಲ್ ಕಾಲ್ಕ್‌ಲಸ್) ಎನ್ನುವ ಎರಡು ಪುಸ್ತಕವನ್ನು ಬರೆದು ಅದನ್ನು ಚರ್ಚಿಸುವುದರಲ್ಲಿ ಕೀರ್ತಿಯನ್ನು ಪಡೆದಿದ್ದಾಳೆ. ಬೊಲೊಗ್ನಾ ವಿಶ್ವವಿದ್ಯಾಲಯದಲ್ಲಿ ವಿಭಾಗ ಸದಸ್ಯಳಾಗಿದ್ದಳು. ತನ್ನ ಜೀವನದ ಕೊನೆಯ ನಾಲ್ಕು ದಶಕಗಳ ಕಾಲ ದೇವತಾ ಶಾಸ್ತ್ರ (ತಿಯೋಲಜಿ) ಓದುವದರಲ್ಲಿ ತೊಡಗಿ ಬಡವರಿಗೆ ಸಹಾಯ ಮಾಡಲು ಮನೆಯಲ್ಲಿ ಒಂದು ಆಸ್ಪತ್ರೆಯನ್ನು ನಿರ್ಮಿಸಿದಳು. ಅನಾರೋಗ್ಯದಿಂದ ಬಳಲುತ್ತಿರುವವರು ಅನಾರೋಗ್ಯದ ಸಹಾಯಕ್ಕೆ ಇವಳ ಮನೆಗೆ ಬರುತ್ತಿದ್ದರು, ಇವಳು ಶ್ರದ್ದಾವಂತ ಕ್ಯಾಥೊಲಿಕ್ ಆಗಿದ್ದು, ಬೌಧಿಕ ಅನ್ವೇಷಣೆ ಮತ್ತು ಅತೀಂದ್ರಿಯ ಧ್ಯಾನದ ನಡುವೆ ನಡೆಯುವ ಮದುವೆಯ ಬಗ್ಗೆ ತನ್ನ "ಇಲ್ ನಿಯೆಲೊ ಮೆಸ್‌ಟಿಕೊ" ಎನ್ನುವ ಪ್ರೌಢಪ್ರಬಂಧದಲ್ಲಿ ಬರೆದಿದ್ದಾಳೆ. ಯೇಸು ಕ್ರಿಸ್ತನ ಜೀವನ-ಮರಣದ ಚಿಂತೆ ಮತ್ತು ಪ್ರಾಥನೆಯ ಪೂರಕವಾಗಿ ದೇವರ ತರ್ಕಬದ್ಧ ಚಿಂತನೆ ಅವಳಿಗೆ ಕಂಡಿತು ಅವಳ ತಂಗಿ ಮಾರಿಯಾ ತೆರೇಸಾ ಆಗ್ನೆಸಿ ಪಿನೋಟಿನಿ[೧]

ಆರಂಭಿಕ ಜೀವನ[ಬದಲಾಯಿಸಿ]

ಬೊಲೊಗ್ನ ವಿಶ್ವವಿದ್ಯಾಲಯದಲ್ಲಿ ಆಗ್ನೆಸಿಯಾ ಡಿಪ್ಲೋಮ

ಶ್ರೀಮಂತ ಮತ್ತು ವಿದ್ಯಾಭ್ಯಾಸ ಹೊಂದಿದ್ದ ಕುಟುಂಬದಲ್ಲಿ ೧೬ ಮೇ ೧೭೧೮ರಂದು ಮಿಲನ್‌ನಲ್ಲಿ ಜನಿಸಿದಳು. ಅವರು ರೇಷ್ಮೆಯಿಂದ ಬಂದ ಹಣದಿಂದ ಜೀವನವನ್ನು ಸಾಗಿಸುತ್ತಿದ್ದರು.[೨] ತಂದೆ ಪಿಯೆಟ್ರೊ ಆಗ್‌ನೆಸ್ಸಿ ಬೊಲೊಗ್ನಾ ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ಮಿಲಿನೀಸ್ ಗಣ್ಯರ ಕುಟುಂಬದ ರೀತಿ ಮೇಲೇರಲು ಪಿಯೆಟ್ರೊ ಆಗ್‌ನೆಸ್ಸಿ ಬಯಸಿದ್ದರು. ತನ್ನ ಗುರಿಯನ್ನು ಸಾದಿಸುವ ಸಲುವಾಗಿ ಅವರು ಅಣ್ಣಾ ಫಾರ್‌ಟುನಾಟ ಬ್ರಿವಿಯೋ ಎಂಬುವಳನ್ನು ೧೭೧೭ರಂದು ವಿವಾಹವಾದನು. ಕೆಲವು ವರ್ಷಗಳ ನಂತರ ಅಣ್ಣಾ ಫಾರ್‌ಟುನಾಟ ಬ್ರಿವಿಯೋರವರ ತಾಯಿ ತೀರಿಕೊಂಡಳು. ಆಗ ಅವಳು ಸಾರ್ವಜನಿಕ ಜೀವನದಿಂದ ನಿವೃತ್ತಿ ಹೊಂದಿ ಮನೆಯ ಕೆಲಸವನ್ನು ವಹಿಸಿಕೊಂಡಳು. ಮಾರಿಯಾ[೩] ಐದು ವರ್ಷವಿದ್ದಾಗ ಇಟಾಲಿಯನ್ ಮತ್ತು ಪ್ರೆಂಚ್ ಮಾತನಾಡುತ್ತಿದ್ದಳು. ಹನ್ನೊಂದು ವರ್ಷದ ಹುಟ್ಟು ಹಬ್ಬ ಬರುವಷ್ಟರಲ್ಲಿ ಗ್ರೀಕ್, ಹೀಬ್ರೂ, ಸ್ಪಾನಿಷ್, ಜರ್ಮನ್ ಮತ್ತು ಲ್ಯಾಟಿನ್ ಭಾಷೆಯನ್ನು ಕಲಿತಳು. ಇವಳನ್ನು "ಏಳು ನಾಲಿಗೆಯ ವಾಗ್ಮಿ" ಎಂದು ಉಲೇಖಿಸಿದರು. ತನ್ನ ತಮ್ಮಂದಿರಿಗೆ ವಿದ್ಯಾಭ್ಯಾಸವನ್ನು ಕಲಿಸುತ್ತಿದ್ದಳು. ಹೆಣ್ನು ಮಕ್ಕಳಿಗೆ ಕಡ್ದಾಯ ಶಿಕ್ಷಣ ಎಂಬುವ ವಿಷಯವನ್ನು ಸಂಯೋಜಿಸಿ ಅದನ್ನು ಅತ್ಯಂತ ವಿಶೇಷ ಬುದ್ಧಿಜೀವಿಗಳ ಮುಂದೆ ಒಂದು ಗಂಟೆಯ ಕಾಲ ಲ್ಯಾಟಿನ್ನಲ್ಲಿ ಭಾಷಣವನ್ನು ಮಾಡಿದಳು. ಹನ್ನೊಂದನೇ ವಯಸ್ಸಿನಲ್ಲಿ ನಿಗೂಢ ಕಾಯಿಲೆ ಬಂದ್ದಿದ್ದರಿಂದ ಹುರುಪಿನ ನೃತ್ಯ ಮತ್ತು ಕುದುರೆ ಸವಾರಿ ಮಾಡುವುದನ್ನು ಶಿಫಾರಸು ಮಾಡಿದಳು. ತೀವ್ರ ಸೆಳವುದರ ಬಗ್ಗೆ ಅನುಭವುಸಲು ಪ್ರಾರಂಭಿಸಿದ ನಂತರ ಅದನ್ನು ಮಿತವಾಗಿ ಮುಂದುವರಿಸಲು ಪ್ರೇರೇಪಿಸುತ್ತಾಳೆ. ಹದಿನಾಲ್ಕು ವರ್ಷವಿದ್ದಾಗ ಕ್ಷಿಪಣಿ ಮತ್ತು ರೇಖಾಗಣಿತ ವಿಷಯದ ಬಗ್ಗೆ ಅಧ್ಯಾಯನ ಮಾಡುತ್ತಿದ್ದಳು. ಹದಿನೈದು ವರ್ಷವಿದ್ದಾಗ ತಂದೆ ಅತ್ಯಂತ ಕಲಿತ ಗಣ್ಯ ವ್ಯಕ್ತಿಗಳನ್ನು ಮನೆಗೆ ಕರೆದು ತಾತ್ವಿಕ ಪ್ರಶ್ನೆಗಳ ಮೇಲೆ ಪ್ರೌಢ ಪ್ರಬಂಧಗಳ ಸರಣಿಯನ್ನು ನಿರ್ವಹಣೆ ಮಾಡುತ್ತಿದ್ದರು. ಈ ಸಭೆಗಳ ದಾಖಲೆಗಳನ್ನು ಚಾರ್ಲ್ಸ್ ಡಿ ಬ್ರೊಸಿಸ್‌ರವರ ಲೆಟರ್ಸ್‌ಸುರ್ ಎಲ್ ಇಟಲಿಕ್‌ನಲ್ಲಿ ಮತ್ತು ಪ್ರೊಪೊಸಿಷನ್ ಫಿಲೋಸೊಪಿಕೇನಲ್ಲಿ ಕೊಟಿದ್ದರು. ಪ್ರೊಪೊಸಿಷನ್ ಫಿಲೋಸೊಪಿ ೧೭೩೮ ರಂದು ಪ್ರಕಟವಾಹಿತು. ಮಾರಿಯಾ ತುಂಬಾ ನಾಚಿಕೆ ಸ್ವಭಾವವೊಂದಿದ ಹೆಣ್ಣು ಮತ್ತು ತುಂಬ ಮುಜುಗರ ಪಡೆಯುತ್ತಿದ್ದರಿಂದ ಸಭೆಗಳಿಗೆ ಹೋಗಲು ಇಷ್ಟಪಡುತ್ತಿರಲ್ಲಿಲ. ಮಾರಿಯಾ[೪] ತನ್ನ ತಾಯಿಯನ್ನು ಕಳೆದುಕೊಂಡ ನಂತರ ಅವರ ತಂದೆ ಎರಡು ಬಾರಿ ವಿವಾಹವಾದರು. ಇವರಿಗೆ ೨೧ ಮಕ್ಕಳು ಅದರಲ್ಲಿ ಮಾರಿಯಾ ಗೈಟಿನ ಆಗ್ನೆಸ್ಸಿ ಹಿರಿಯವಳಾಗಿದ್ದಳು. ಇವಳು ತನ್ನ ತಮ್ಮಂದಿರಿಗೆ ಪಾಠವನ್ನು ಕಲಿಸುತ್ತಿದ್ದಳು. ಈ ಕಾರಣದಿಂದ ಕಾನ್ವೆಂಟ್‌ಗೆ ಹೋಗಲು ಮತ್ತು ವಿವಾಹವಾಗಳು ಸಧ್ಯಾವಾಗಲ್ಲಿಲ್ಲ. ಅವರ ತಂದೆಯೂ ಸಹ ಪ್ರೋತ್ಸಹ ನೀಡಲ್ಲಿಲ್ಲ. ಕೆಲವೊಮ್ಮೆ ಸಹಾಯ ಮಾಡುತ್ತಿದ್ದರು. ಮಾರಿಯಾ ದಾರ್ಮಿಕ ಪುಸ್ತಕಗಳನ್ನು ಓದುವುದರಲ್ಲಿ ಮತ್ತು ಗಣಿತಶಾಸ್ತ್ರವನ್ನು ಕಲಿಯುವುದರಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಳು ಆ ಸಮಯದಲ್ಲಿ ಅವರು ದಿ ಎಲ್ ಹಾಸ್ಪಿಟಲ್ಸ್‌ ಎನ್ನುವ ವಾಖ್ಯಾನ ಬರೆದರು. ಆದರೆ ಅದು ಪ್ರಕಟವಾಗಲ್ಲಿಲ್ಲ, ಸರಿಯಾದ ಬೋಧನೆ ಇಲ್ಲದೆ ಗಣಿತವನ್ನು ಕಲಿಯುವುದು ಅಸಾಧ್ಯಾವಾದ ಕೆಲಸ ಎಂದು ಭಾವಿಸಿದ ಅವಳು ೧೭೩೯ ರಂದು ಟ್ರಯಿಟಿ ಅನಲಿಟಿಕ್ ಡಿಸ್ ಸೆಕ್ಷ್‌ನ್ಸ್ ಕೊನಿಕ್ಸ್ ಆಫ್ ದಿ ಮರ್ಕ್ಯುಸ್‌ ಎನ್ನುವ ಪುಸ್ತಕ ಓದಿದ ನಂತರ ರಮಿರೊ ರಾಮ್‌ಫಿನಿಲ್ಲಿ ರವರ ಮೂಲಕ ೧೭೪೦ರಂದು ಗಣಿತಶಾಸ್ತ್ರ ಕ್ಷೇತ್ರಕ್ಕೆ ಪರಿಚಯವಾದಳು. ರಮಿರೊ ರಮ್‌ಫಿನಿಲ್ಲಿರವರು ರೋಮ್ ಮತ್ತು ಬೊಲೊಗ್ನಾ ವಿಶ್ವವಿದ್ಯಾಲಯದಲ್ಲಿ ಇಟಾಲಿಯನ್ ಗಣಿತಜ್ಞರಾಗಿದ್ದರು. ಇವರ ಸಹಾಯದಿಂದ ಬೇದಾತ್ಮಕ ಮತ್ತು ಅನುಕಲನ ಕಲಿತಳು. ತತ್ವಜ್ಞಾನಿಗಳು ಇವಳನ್ನು ಮೆಚ್ಚಿದರು. ಮಿಲನ್‌ನಲ್ಲಿ ಶ್ರೀಮಂತ ಹುಡುಗಿ ಎಂದು ಅವಳ ಪೋಷಕರು ಭಾವಿಸಿದರು. ರಮಿರೊ ರಮ್‌ಫಿನಿಲ್ಲಿರವರು ಮಾರಿಯಾ ಗೈಟಿನ ಆಗ್‌ನೆಸ್ಸಿಗೆ ಬೋದನೆಯ ಪಠ್ಯವಾಗಿ ಕಲನಶಾಸ್ತ್ರದ ಬಗ್ಗೆ ಒಂದು ಪುಸ್ತಕವನ್ನು ಬರೆಯಲು ಪ್ರೋತ್ಸಾಹಿಸಿದರು. ಆಗ ಮಾರಿಯಾ ಇಟಾಲಿಯನ್‌ನಲ್ಲಿ ಪುಸ್ತಕ ಬರೆದು ಬೊಲೊಗ್ನಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಪಕಿಯಾಗಿದ್ದಳು.

ಗಣಿತಕ್ಕೆ ನೀಡಿದ ಕೊಡುಗೆಗಳು[ಬದಲಾಯಿಸಿ]

"ಇನ್ಸ್‌ಟಿಟುಜಿಯೋನಿ ಅನಲಿಟ್ಚಿ"ಯ ಮೊದಲ ಪುಟ (1748)

ಡಿರ್ಕ್ ಜನ್ ಸ್ಟ್ರೂಯಿಕ್ ರವರ ಪ್ರಕಾರ ಮಾರಿಯಾ ಗೈಟಿನಿ ಆಗ್‌ನೆಸ್ಸಿ ಮೂದಲ ಗಣಿತಜ್ಞಿ. ತನ್ನ ಕಾರ್ಮಿಕರ ಅತ್ಯಮೂಲ್ಯವಾದ ಪರಿಣಾಮವೆನೆಂದರೆ ಇನ್ಸ್‌ಟಿಟುಜಿಯೋನಿ ಅನಲಿಟಿಕ್ ಯುಎಸ್‌ಒ ಡೆಲ್ಲಾ ಜಿಯೋಮೆಂಟೊ.(ಇಟಾಲಿಯನ್ ಯುವ ಜನರ ಬಳಕೆಗಾಗಿ ವಿಶ್ಲೇಷಣಾತ್ಮಕ ಸಂಸ್ಥೆಗಳು) ಇದು ಮಿಲನ್‌ನಲ್ಲಿ ೧೭೪೮ರಂದು ಪ್ರಕಟವಾಯಿತು. ಇದು ಯೂಲರ್ ಕೆಲಸಕ್ಕೆ ಪರಿಚಯ ಉಪಲಬ್ಧವೆಂದು ಪರಿಗಣಿಸಲಾಯಿತು. ಈ ಕೆಲಸದ ಮುಖ್ಯ ಗುರಿ ಏನೆಂದರೆ ಅತ್ಯಲ್ಪ ಕಲನಶಾಸ್ತ್ರದ ವಿಭಿನ್ನ ಫಲಿತಾಂಶಗಳನ್ನು ಮತ್ತು ಪ್ರಮೇಯಗಳನ್ನು ಸ್ವತಃ ಅವರೇ ವಿವರಣೆ ನೀಡುವುದು. ಚಾರ್ಲ್ ರೆನ್ನೆ ರೆನಿಯೋ ರವರ ಲೆ ಕ್ಯಾಲ್ಕ್‌ಸ್ ಡಿಫರೆನ್‌ಶಿಯಲ್ ಇಟ್ ಇಂಟಿಗ್ರಲ್ ಡಾನ್ಸ್ ಎನ್ನುವ ಗ್ರಂಥ ಅವಳ ಗ್ರಂಥಕ್ಕೆ ಮಾದರಿಯಾಗಿತ್ತು. ಗ್ರಂಥದಲ್ಲಿ ಬೀಜಗಣಿತದ ಜೊತೆಗೆ ಗಣಿತಶಾಸ್ತ್ರೀಯ ವಿಶ್ಲೇಷಣೆ ಮಾಡಿದ ಸಂಯೋಜನೆ ಇತ್ತು. ಅದರಲ್ಲಿ ಸೀಮಿತ ಪ್ರಮಾಣದ ವಿಶ್ಲೇಷಣೆ ಮೊದಲ ಸಂಪುಟ ಮತ್ತು ಅತ್ಯಲ್ಪ ವಿಶ್ಲೇಷಣೆ ಎರಡನೇ ಸಂಪುಟ, ಪಿ ಟಿ ಡಿ ಆನ್‌ಟೆಲ್ಮಿ ಮತ್ತು ಚಾರ್ಲ್ಸ್ ಬೊಸ್ಸುತ್ ರವರು ಎರಡನೇ ಸಂಪುಟವನ್ನು ಫ್ರೆಂಚ್‌ ಭಾಷೆಗೆ ಅನುವಾದಿಸಿ ೧೭೭೫ ರಂದು ಪ್ಯಾರಿಸ್‌ನಲ್ಲಿ ಪ್ರಕಟಿಸಿದರು. ಅವಳಿಗೆ ೨೦ ವರ್ಷವಿದ್ದಾಗ ಭೇಧಾತ್ಮಕ ಮತ್ತು ಅನುಕಲನ ವ್ಯವಹರಿಸುವ ವಿಶ್ಲೇಷಣಾತ್ಮಕ ಶಿಕ್ಷಣ ಸಂಸ್ಥೆಗಳ ಜೂತೆ ಕೆಲಸ ಮಾಡಲು ಶುರು ಮಾಡಿದಳು, ಅದರ ಬಗ್ಗೆ ಒಂದು ಪುಸ್ತಕವನ್ನು ಬರೆದು ಅದನ್ನು ತಮ್ಮಂದಿರಿಗೆ ಪುಸ್ತಕವನ್ನಾಗಿ ಮಾಡಿದಳು. ಬಾರನ್ ಮಸೆರೆಸ್‌ರವರ ವೆಚ್ಚದಲ್ಲಿ ಇದನ್ನು ೧೮೦೧ ರಂದು ಪ್ರಕಟಿಸಿದರು. ಇವಳ ಈ ಕೆಲಸವನ್ನು ಮೆಚ್ಚಿ ಮಾರಿಯಾ ತೇರೆಸಾ, ಅಗ್‌ನೆಸ್ಸಿಗೆ ಡೈಮಂಡ್ ಉಂಗುರವನ್ನು ನೀಡಿ ಹೊಗಳಿದರು. ಮತ್ತು ಪೊಪಿ ಬೆನಿಡಿಕ್ಟ್ XIV[೫] ರವರು ಗಣಿತವನ್ನು ಯುವ ವಯಸ್ಸಿನಲ್ಲಿ ಓದಿದವರು. ಅವರು ಮಾರಿಯ ಪುಸ್ತಕವನ್ನು ಓದಿದ ನಂತರ ಬೊಲೊಗ್ನಾ ಮತ್ತು ಇಟಾಲಿಯನ್ ವಿಶ್ವವಿದ್ಯಾಲಯಕ್ಕೆ ಒಳ್ಳೆಯ ಕ್ರೆಡಿಟ್ ತರುತ್ತಾಳೆ ಎಂದು ಬರೆದರು. ಪೊಪಿ ಬೆನಿಡಿಕ್ಟ್ XIV ಮತ್ತು ಬೊಲೊಗ್ನಾ ವಿಶ್ವವಿದ್ಯಾಲಯದ ಆಧ್ಯಕ್ಷರು ಮತ್ತು ಪ್ರಾಧ್ಯಪಕರು ಮಾರಿಯಾ ಗೈಟಿನ ಆಗ್‌ನೆಸ್ಸಿನನ್ನು ಗಣಿತಶಾಸ್ತ್ರದ ಪೀಠಕ್ಕೆ ಆಹ್ವಾನಿಸಿದರು. ಪೊಪಿ ಬೆನಿಡಿಕ್ಟ್ XIVರವರು ಪುಸ್ತಕವನ್ನು ಓದಿದ ನಂತರ ಮಾರಿಯಾನನ್ನು ಹೊಗಳಿ ಚಿನ್ನದ ಪದಕವನ್ನು ನೀಡಿ ಪುಸ್ತಕವನ್ನು ಅನೇಕ ಭಾಷೆಗಳಿಗೆ ಅನುವಾದಿಸಿದರು. ರಾಮಿರೊ ರಾಮ್‌ಪಿನಿಲ್ಲಿ ಮತ್ತು ಜಕೋಪೋ ರಿಕಟ್ಟಿ ಇವರಿಬ್ಬರು ಮಾರಿಯಾಗೆ ಸಹಾಯ ಮಾಡಿದವರು. ಗಣಿತಶಾಸ್ತ್ರದ ವಿಶ್ಲೇಷಣೆಯಲ್ಲಿ ವಿಶ್ಲೇಷಣಾತ್ಮಕ ಶಿಕ್ಷಣ ಸಂಸ್ಥೆಗಳು[೬] ರಾಜ್ಯಕ್ಕೆ ಜ್ಞಾನದ ಸಾರಂಶವನ್ನು ನೀಡುತ್ತಿತ್ತು. ವಿಶ್ಲೇಷಣಾತ್ಮಕ ಶಿಕ್ಷಣ ಸಂಸ್ಥೆಯ ಮೊದಲ ವಿಭಾಗ ಸೀಮಿತ ಪ್ರಮಾಣದ ವಿಶ್ಲೇಷಣೆಯನ್ನು (ಅನಲೈಸಿಸ್ ಆಫ್ ಫೈನೇಟ್ ಕ್ವಾಂಟಿಟಿಸ್) ವ್ಯವಹರಿಸುತ್ತದೆ. ಇದು ಪ್ರಾಥಮಿಕ ಮ್ಯಾಕ್ಸಿಮಾ ಸಮಸ್ಯೆ, ರೂಪನಿಷ್ಪತ್ತಿ ಅಂಕಗಳ ಸಮಸ್ಯೆ, ಸ್ಪರ್ಶಕ ಸಮಸ್ಯೆ, ಮತ್ತು ಕನಿಷ್ಠ ಸಮಸ್ಯೆಯನ್ನು ಸಹ ವ್ಯವಹರಿಸುತ್ತದೆ. ಎರಡನೇಯ ವಿಭಾಗ ಕೊನೆಯಿಲ್ಲದ ಸಣ್ಣ ಪ್ರಮಾಣದ ವಿಶ್ಲೇಷಣೆಯನ್ನು(ಅನಲೈಸಿಸ್ ಆಫ್ ಇನ್‌ಫೈನೇಟ್ಲಿ ಸ್ಮಾಲ್ ಕ್ವಾಂಟಿಟಿಸ್) ಚರ್ಚಿಸುತ್ತದೆ. ಮೂರನೇಯ ವಿಭಾಗ ಅನುಕಲನದ(ಇಂಟಿಗ್ರಲ್ kyಅಲ್‌ಕುಲಸ್) ಬಗ್ಗೆ ತಿಳಿಸುತ್ತದೆ. ಕೊನೆಯ ವಿಭಾಗ ಸ್ಪರ್ಶಕಗಳನ್ನು ಮತ್ತು ವಿಕಲನ ಸಮಿಕರಣಗಳ ವಿಲೋಮ ವಿಧಾನವನ್ನು ವ್ಯವಹರಿಸುತ್ತದೆ.

ವಿಟ್ಚ್ ಆಫ್ ಆಗ್‌ನೆಸ್ಸಿ[ಬದಲಾಯಿಸಿ]

ವಿಟ್ಚ್ ಆಪ್ ಆಗ್ನೆಸ್ಸಿ ಲೇಬಲ್ ಬಿಂದುಗಳೊಂದಿಗೆ

ಮಾರಿಯಾ ಗೈಟಿನ ಅಗ್‌ನೆಸ್ಸಿ 'ವಿಟ್ಚ್ ಆಫ್ ಆಗ್‌ನೆಸ್ಸಿ'[೭] ಎಂಬ ರೇಖೆಯಿಂದ ಚಿರಪರಿಚಿತರಾಗಿದ್ದಾಳೆ. ಆಗ್‌ನೆಸ್ಸಿ ರೇಖೆಯ ಸಮೀಕರಣವನ್ನು y=sqrt(a*x-x*x/x) ಈ ರೂಪದಲ್ಲಿ ಬರೆದಳು. ಯಾಕೆಂದರೆ ಇವಳು ‍‍x ಆಕ್ಸಿಸ್‌ನನ್ನು ಲಂಬ ಅಕ್ಷವಾಗಿ ಮತ್ತು y ಆಕ್ಸಿಸ್‌ನನ್ನು ಸಮತಲವಾಗಿರುವ ಅಕ್ಷ ಎಂದು ಪರಿಗಣಿಸಿದಳು. x ಆಕ್ಸಿಸ್‌ನನ್ನು ಸಮತಲವಾಗಿರುವ ಅಕ್ಷ ಮತ್ತು y ಆಕ್ಸಿಸ್‌ನನ್ನು ಲಂಬ ಅಕ್ಷವಾಗಿ ರೆಫರೆನ್ಸ್ ಫ್ರೇಮ್‌ರವರು ಬಳಸುತ್ತಾರೆ. ರೇಖೆಯ ಸಮೀಕಿರಣವನ್ನು ಕಾರ್ಟಿಷಿಯನ್ ಸಮೀಕರಣದ ಮೂಲಕ ನೀಡಿದಳು YX^2=a^2(a-y) ಅಥಾವ y=a^3(x^2+a^2). ಫರಮಟ್ ಓದಿದ ಪ್ರಕಾರ ಇದೊಂದು ಸ್ಯೆನ್ ರೇಖೆ. ಇದನ್ನು ವರ್‌ಸೀರ (versiera) ಎಂದು ಕರೆಯುತ್ತಾರೆ. ಈ ಪದ ಲ್ಯಾಟಿನ್ ವರ್‌ಟಿರ್ ಇಂದ ಬಂದಿದ್ದು. ಇದರ ಅರ್ಥ ಟರ್ನ್, ಆದರೆ ಇದು ಅವ್ವೆರ್‌ಸಿರ ಇಟಾಲಿಯನ್ ಪದಕ್ಕೆ ಸಂಕ್ಷೀಪಣವಾಗಿತ್ತು ಅರ್ಥ ವೈಫ್ ಆಫ್ ಡೇವಿಲ್, ಮಾರಿಯಾ ಪಠ್ಯಗಳನ್ನು ಇಂಗ್ಲೀಷ್ಗೆ ಅನುವಾದ ಮಾಡಲಾಯಿತು, ವರ್ಸೀಯಾ ಎಂಬ ಪದ ವಿಟ್ಚ್‌ ಎನ್ನುವ ಗೊಂದಲಕ್ಕೆ ಸಿಕ್ಕಿತು ಮತ್ತು ರೇಖೆಯನ್ನು ವಿಟ್ಚ್ ಆಪ್ ಆಗ್ನೆಸ್ಸಿ[೮] ಎಂದು ಪರಿಗಣಿಸಲಾಯಿತು. ಅಥವಾ

ಕೆಲವೊಮ್ಮೆ ಗಣಿತದಲ್ಲಿ ವಿಟ್ಚ್ ಆಪ್ ಆಗ್ನೆಸ್ಸಿ ಎಂಬುದನ್ನು ವಿಟ್ಚ್ ಆಪ್ ಮಾರಿಯಾ ಆಗ್ನೆಸಿ ಎಂದು ಕರೆಯುತ್ತಾರೆ. ವೃತ್ತದಲ್ಲಿ ಮೂಲವಾದ ಬಿಂದು 'O'. ಒಂದು ಬಿಂದುವನ್ನು ವೃತ್ತದಲ್ಲಿ ಆಯ್ಕೆ ಮಾಡಿ ಅದಕ್ಕೆ 'A' ಎಂದು ಹೆಸರಿಸಿ, ವೇದಕ ಲೈನ್ OA ಯನ್ನು ಸೇರಿಸಿ. 'M' ಬಿಂದುವು ನೇರವಾಗಿ 'O' ಬಿಂದುವಿಗೆ ವಿರುದ್ಧವಾಗಿದೆ. ಬಿಂದು 'N' ನಲ್ಲಿ OA ಲೈನ್, 'M' ಸ್ಪರ್ಶಕವನ್ನು ಸಂಧಿಸುತ್ತದೆ. 'N' ಮೂಲಕ 'OM'ಗೆ ಸಮಾನಾಂತರವಾಗಿರುವ (ಪಾರ್‌ಲಲ್) ಲೈನ್ ಮತ್ತು 'A' ಮೂಲಕ 'OM'ಗೆ ಲಂಬವಾಗಿರುವ(ಪರ್‌ಪೆಂಡಿಕುಲರ್) ಲೈನ್‌ಗಳು 'P' ಬಿಂದುವಿಗೆ ಸಂಧಿಸುತ್ತದೆ. ಬಿಂದು 'A' ವಿವಿಧವಾದಷ್ಟು, 'P' ಮಾರ್ಗವನ್ನು ವಿಟ್ಚ್ ಆಪ್ ಆಗ್ನೆಸ್ಸಿ ಎಂದು ಕರೆಯುತ್ತಾರೆ.

ಸಮೀಕರಣಗಳು[ಬದಲಾಯಿಸಿ]

ಅಗ್ನೆಸಿ ಮಂತ್ರವಾದಿ ನಿರ್ಮಾಣ ತೋರಿಸುವ ಒಂದು ಅನಿಮೇಷನ್

ವೃತ್ತದಲ್ಲಿ 'O'ಎಂಬುದು ಮೂಲವಾದ ಬಿಂದು, 'M' ಎಂಬುದು ಧನಾತ್ಮಕ Yಅಕ್ಷ ಮತ್ತು ವೃತ್ತದ ತ್ರಿಜ್ಯ a ಆಗಿದ್ದರೆ ತಿರುವಿಗೆ ಕಾರ್ಟೀಷಿಯನ್‌ ಸಮೀಕರಣವಿರುತ್ತದೆ.

ಗಮನಿಸಿ: ಒಂದು ವೇಳೆ a=1/2 ಆದಲ್ಲಿ ಸಮೀಕರಣ ಇನ್ನು ಸರಳವಾಗಿರುತ್ತದೆ.

ಇದು ಉತ್ಪನದ ಅರ್ಧಚಂದ್ರಾಕೃತಿಕ ಸ್ಪರ್ಶಕದ ಅನುಪಾತ(ಡಿರೈವೇಟಿವ್ ಆಫ್ ಆರ್ಕ್ ಟಾನ್‌ಜೇಂಟ್) 'OM' ಮತ್ತು 'OA' ನಡುವಿನ ಕೋನ ಆದಲ್ಲಿ ತಿರುವನ್ನು : ಪ್ರದಕ್ಷಿಣವಾಗಿ ಅಳತೆ ಮಾಡಿ ಈ ಸಮೀಕರಣದಿಂದ ವ್ಯಾಖ್ಯಾನಿಸಲಾಗಿದೆ. 'OA' ಮತ್ತು Xಅಕ್ಷ ನಡುವಿನ ಕೋನ ಆದಲ್ಲಿ ತಿರುವನ್ನು : ಅಪ್ರದಕ್ಷಿಣವಾಗಿ ಅಳತೆ ಮಾಡಿ ಈ ಸಮೀಕರಣದಿಂದ ವ್ಯಾಖ್ಯಾನಿಸಲಾಗಿದೆ.

ಗುಣಗಳು[ಬದಲಾಯಿಸಿ]

ದಿ ವಿಟ್ಚ್ ಆಪ್ ಆಗ್ನೆಸ್ಸಿ ನಿಯತಾಂಕಗಳೊಂದಿಗೆa =1, a = 2, a = 4, and a = 8

ಕೆಳಗಿನ ಗುಣಲಕ್ಷಣಗಳನ್ನು ಅನುಕಲನದಿಂದ ಪಡೆಯದಾಗಿದೆ.

 • ವಿಟ್ಚ್ ಮತ್ತು ಎಸಿಂಟೋಟಿ ನಡುವಿನ ಪ್ರದೇಶ ನಾಲ್ಕು ಬಾರಿ ಸ್ಥಿರ ವೃತಕ್ಕೆ ಪ್ರದೇಶವಾಗಿದೆ. (i.e., ).
 • ಇದರ ಮಧ್ಯಬಿಂದುಗಳ ಪ್ರದೇಶ ಕೆಟ್ಟ-ನಿರ್ವಹಣೆಯಾಗಿದೆ.[೯]
 • ಮಧ್ಯಬಿಂದುಗಳು ಉತ್ಪಾದಿಸುವ ವೃತ್ತ (ವ್ಯಾಸ=2) 0,a ನಲ್ಲಿ ಇದೆ.
 • ಎಂಬುದು ವಿಟ್ಚ್ ಆಪ್ ಆಗ್ನೆಸ್ಸಿಯ ಕ್ರಾಂತಿಯ ಪರಿಮಾಣ

ನಂತರದ ಜೀವನ[ಬದಲಾಯಿಸಿ]

ಮಿಲನ್‌ನಲ್ಲಿ ಮಾರಿಯಾ ಗೈಟಿನ ಆಗ್ನೆಸಿಯ ಪ್ರತಿಮೆ.

೧೭೫೦-೧೭೫೨ರವರಿಗೆ ಬೊಲೊಗ್ನಾ ವಿಶ್ವವಿದ್ಯಾಲಯದಲ್ಲಿ ಒಳ್ಳೆಯ ಗೌರವವನ್ನು ಬೆಳೆಸಿಕೊಂಡಲು. ತಂದೆ ೧೭೫೨ರಂದು ತೀರಿಕೊಂಡರು. ನಂತರ ಮಾರಿಯಾ ಗೈಟಿನ ಅಗ್‌ನೆಸ್ಸಿ ವೈಜ್ನಾನಿಕ ಚಟುವಟಿಕೆಗಳನ್ನು ಹಿಂದೆ ಹಾಕಿದಳು. ೧೯೬೨ ಗಣಿತಶಾಸ್ತ್ರದಿಂದ ಹೊರಗೆ ಹೋಗಿ ದಾರ್ಮಿಕ ಪುಸ್ತಕವನ್ನು ಓದುವುದರಲ್ಲಿ ಮತ್ತು ಸಮಾಜ ಸೇವೆಯಲ್ಲಿ ತೊಡಗಿದಳು ಮತ್ತು ಪ್ಯಾರಿಸ್‌ನಲ್ಲಿ ಬಡ ಮಕ್ಕಳಿಗೆ ವಸ್ತುತ್ಯಾಗ ಮಾಡುತ್ತಾ ಉದಾರತೆಗೆ ಕೆಲಸ ಮಾಡಲು ಶುರುಮಾಡಿದಳು. ಅದಕ್ಕಾಗಿ ಹೆಚ್ಚು ಹಣವನ್ನು ವ್ಯಚ್ಚ ಮಾಡಿ ಬಡತನಳಾಗಿ ಒಂದು ಕಳಪೆ ಮನೆಯಲ್ಲಿ ಸತ್ತುಹೋದಳು.

ಹೊರಗಿನ ಕೊಂಡಿಗಳು[ಬದಲಾಯಿಸಿ]

ಉಲೇಖಗಳು[ಬದಲಾಯಿಸಿ]

 1. "ಮಾರಿಯಾ ತೆರೇಸಾ ಆಗ್ನೆಸಿ ಪಿನೋಟಿನಿ".
 2. "ಮಾರಿಯಾ ಗೈಟಿನ ಆಗ್ನೆಸಿ ವಿಶ್ವಕೋಶ".
 3. "ಮಾರಿಯಾ ಗೈಟಿನ ಆಗ್ನೆಸಿ".
 4. "ಮಾರಿಯಾ ಮಾಕ್‌ಟುಟರ್ ಜೀವನಚರಿತ್ರೆ".
 5. "ಪೊಪಿ ಬೆನಿಡಿಕ್ಟ್ XIV".
 6. "ವಿಶ್ಲೇಷಣಾತ್ಮಕ ಶಿಕ್ಷಣ ಸಂಸ್ಥೆಗಳು".
 7. "ವಿಟ್ಚ್ ಆಫ್ ಆಗ್‌ನೆಸ್ಸಿ".
 8. "ವಿಟ್ಚ್ ಆಪ್ ಆಗ್ನೆಸ್ಸಿ ಚಿತ್ರಗಳು".
 9. "ಕೌಚಿ ವಿತರಣೆ".