ಮಾಕಸಿನ್ ಹಾವು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Agkistrodon piscivorus
Temporal range: Pleistocene - present[೧][೨]
Conservation status
Scientific classification e
ಕ್ಷೇತ್ರ: ಯೂಕ್ಯಾರ್ಯೋಟಾ
ಸಾಮ್ರಾಜ್ಯ: ಅನಿಮೇಲಿಯ
ವಿಭಾಗ: ಕಾರ್ಡೇಟಾ
ವರ್ಗ: ರೆಪ್ಟೀಲಿಯಾ
ಗಣ: ಸ್ಕ್ವಾಮೇಟಾ
ಉಪಗಣ: ಸರ್ಪೆಂಟೀಸ್
ಕುಟುಂಬ: ವೈಪರಿಡೇ
ಕುಲ: ಅಗ್‍ಕಿಸ್ಟ್ರೊಡಾನ್
ಪ್ರಜಾತಿ:
A. piscivorus
Binomial name
Agkistrodon piscivorus
(Lacépède, 1789)
Synonyms[೪]
click to expand
  • Vipera aquatica (not a binomial)
    Catesby, 1743
  • Crot[alus]. Piscivorus
    Lacépède, 1789
  • C[rotalus]. Aquaticus
    Bonnaterre, 1790
  • Scytale piscivora
    Sonnini & Latreille, 1801
  • Coluber Aquaticus
    Shaw, 1802
  • Ancistrodon piscivorus
    Cope, 1860
  • A[ncistrodon]. pugnax
    Cope, 1860
  • T[rigonocephalus]. piscivorus var. pugnax
    Jan, 1863
  • Vipera Cench[ris]. Piscivorus
    — Higgins, 1873
  • Ancistrodon piscivorus Lacépède, ssp. piscivorus
    — Cope, 1875
  • Ancistrodon piscivorus Lacépède, ssp. pugnax
    — Cope, 1875
  • Ancistrodon piscivorus piscivorus
    Yarrow, 1882
  • Ancistrodon piscivorus pugnax
    — Yarrow, 1882
  • •[Ancistrodon piscivorus] Var. pugnax
    Garman, 1884
  • Agkistrodon piscivorus
    — Garman, 1890
  • Ancistrodon piscivorus
    Boulenger, 1896
  • Agkistrodon piscivorus piscivorus
    Gloyd & Conant, 1943
  • Ancistrodon piscivorus piscivorus
    Schmidt, 1953
  • Agkistrodon piscivorus laurae
    Stewart, 1974
  • Agkistrodon piscivorus
    — Gloyd & Conant, 1990disk,e,d

ಮಾಕಸಿನ್ ಹಾವು ಅಮೆರಿಕ ಸಂಯುಕ್ತ ಸಂಸ್ಥಾನಗಳ ಆಗ್ನೇಯ ಹಾಗೂ ದಕ್ಷಿಣ ಭಾಗದಲ್ಲಿ ಕಂಡುಬರುವ ವಿಷಪೂರಿತ ಹಾವು.[೫] ಮಿಸಿಸಿಪ್ಪಿ ಮತ್ತು ಫ್ಲಾರಿಡ ರಾಜ್ಯಗಳ ಜವುಗು ಪ್ರದೇಶಗಳಲ್ಲಿ ಇದು ಬಲು ಸಾಮಾನ್ಯ. ವೈಪರಿಡೀ ಕುಟುಂಬದ ಕ್ರೋಟಾಲಿನೀ ಉಪಕುಟುಂಬಕ್ಕೆ ಸೇರಿದ ಇದು ಬುಡಬುಡಿಕೆ ಹಾವು (ರ‍್ಯಾಟಲ್ ಸ್ನೇಕ್), ಕೆಂಪುತಲೆ ಹಾವು (ಕಾಪರ್ ಹೆಡ್) ಕುಳಿಮಂಡಲ ಹಾವುಗಳಿಗೆ (ಪಿಟ್ ವೈಪರ್ಸ್) ಹತ್ತಿರ ಸಂಬಂಧಿಯಾಗಿದೆ. ಅಗ್‌ಕಿಸ್ಟ್ರೊಡಾನ್ ಪಿಸಿವೊರಸ್ ಇದರ ಶಾಸ್ತ್ರೀಯ ನಾಮ. ವಾಟರ್ ಮಾಕಸಿನ್ ಅಥವಾ ಕಾಟನ್ ಮೌತ್ (ಅರಳೆ ಬಾಯಿಯ ಹಾವು) ಎಂದೂ ಹೆಸರಿದೆ.

ದೇಹರಚನೆ[ಬದಲಾಯಿಸಿ]

ಇದು ಮಧ್ಯಮ ಗಾತ್ರದ ಹಾವು: 2 ಮೀ.ಉದ್ದಕ್ಕೆ ಬೆಳೆಯುವ ದಾಖಲೆ ಇದೆಯಾದರೂ[೬] ಇದರ ಉದ್ದ ಸಾಧಾರಣವಾಗಿ 1 ಮೀ. ಮೀರದು.[೭] ಇದರ ಮೈಬಣ್ಣ ಕಂದು ಮಿಶ್ರಿತ ಬೂದು.

ನಡವಳಿಕೆ[ಬದಲಾಯಿಸಿ]

ಇದು ನೆಲವಾಸಿಯಾದರೂ ಸಾಮಾನ್ಯವಾಗಿ ನೀರಿನಲ್ಲಿ ಇಲ್ಲವೆ ನೀರಿಗೆ ಹತ್ತಿರದಲ್ಲಿ ವಾಸಿಸುತ್ತದೆ. ಕೆರೆ, ನದಿಗಳ ಅಂಚಿನಲ್ಲಿ[೮] ಅಥವಾ ನೀರಿನಲ್ಲಿರುವ ದಿಮ್ಮಿಗಳ ಮೇಲೆ ಬಿಸಿಲಿಗೆ ಮೈಯೊಡ್ಡಿರುತ್ತದೆ.

ಆಹಾರ[ಬದಲಾಯಿಸಿ]

ಇದರ ನೆಲೆ ನೀರಾದ್ದರಿಂದ ಕಪ್ಪೆ, ಮೀನು, ಮೆತುಬೆನ್ನಿನ ಆಮೆ ಮುಂತಾದ ಜಲಚರಿಗಳೇ ಇದರ ಪ್ರಧಾನ ಆಹಾರ.[೯]

ಸ್ವಭಾವ[ಬದಲಾಯಿಸಿ]

ಇದು ಮಂದಸ್ವಭಾವದ ಹಾವು. ಸಮೀಪಿಸಿದಾಗ ಓಡಿಹೋಗದು. ಇದರಿಂದ ಇದರ ಬಗ್ಗೆ ಹುಷಾರಿರುವುದು ಅಗತ್ಯ. ಆದರೆ ಕೆಣಕಿದಾಗ ಒಮ್ಮಲೆ ಕಚ್ಚದೆ ತಲೆಯೆತ್ತಿ ಬಾಯಂಗಳ ಕಾಣುವಂತೆ ಬಾಯನ್ನು ಅಗಲಿಸಿ ತನ್ನ ಕೋಪವನ್ನು ವ್ಯಕ್ತಪಡಿಸುತ್ತದಾಗಿ ಕಚ್ಚಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಬಹುದು. ಬಾಯನ್ನು ತೆರೆದಾಗ ಒಳಗಿನ ಭಾಗ ಬೆಳ್ಳಗೆ ಅರಳೆಯಂತೆ ಕಾಣುತ್ತದೆ. ಆದ್ದರಿಂದಲೇ ಇದಕ್ಕೆ ಕಾಟನ್‍ಮೌತ್ ಎಂಬ ಹೆಸರು ಬಂದಿದೆ.

ಸಂತಾನೋತ್ಪತ್ತಿ[ಬದಲಾಯಿಸಿ]

ಇದರ ಸಂತಾನವೃದ್ಧಿಯ ಕಾಲ ಸೆಪ್ಟೆಂಬರ್. ಒಂದು ಸಲಕ್ಕೆ ಎಂಟು ಮರಿಗಳನ್ನು ಪಡೆಯುತ್ತದೆ. ಹುಟ್ಟುವಾಗ ಸುಮಾರು 16 ಸೆಂಮೀ ಉದ್ದವಿರುವ ಇವುಗಳ ಮೈಮೇಲೆ ಹೊಳೆಯುವ ಪಟ್ಟೆಗಳಿರುವುದಲ್ಲದೆ ಬಾಲ ಹಳದಿ ಬಣ್ಣದ್ದಾಗಿರುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. "Fossilworks: Agkistrodon ". Archived from the original on 2022-11-28. Retrieved 2023-10-13.
  2. Douglas, Michael E.; Douglas, Marlis R.; Schuett, Gordon W.; Porras, Louis W. (2009). "Climate Change and Evolution of the New World Pitviper Genus Agkistrodon (Viperidae)". Journal of Biogeography. 36 (6): 1164–1180. doi:10.1111/j.1365-2699.2008.02075.x. JSTOR 40305884. S2CID 84267462.
  3. Hammerson, G.A. (2007). "Agkistrodon piscivorus ". IUCN Red List of Threatened Species. 2007: e.T64298A12756313. doi:10.2305/IUCN.UK.2007.RLTS.T64298A12756313.en. Retrieved 19 November 2021.
  4. ಉಲ್ಲೇಖ ದೋಷ: Invalid <ref> tag; no text was provided for refs named McD99
  5. Perritano, John (8 July 2019). "Water Moccasin, Cottonmouth: Different Names, Same Venomous Snake". HowStuffWorks. Retrieved 8 October 2020.
  6. Campbell JA, Lamar WW (2004). The Venomous Reptiles of the Western Hemisphere. Ithaca and London: Comstock Publishing Associates. 870 pp. 1,500 plates. ISBN 0-8014-4141-2.
  7. Kardong, Kenneth Victor (1982). "Comparative study of changes in prey capture behavior of the cottonmouth (Agkistrodon piscivorus) and Egyptian cobra (Naja haje)". Copeia 1982: 337-343.
  8. Behler JL, King FW (1979). The Audubon Society Field Guide to North American Reptiles and Amphibians. New York: Alfred A. Knopf. 743 pp. 657 plates. LCCCN 79-2217. ISBN 0-394-50824-6. (Agkistrodon piscivorus, pp. 684-685 + Plates 654, 656, 657).
  9. "Agkistrodon piscivorus (Conanti)". Animal Diversity Web.

ಹೊರಗಿನ ಕೊಂಡಿಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: