ಮಾಂಸರೋಹಿಣಿ

ವಿಕಿಪೀಡಿಯ ಇಂದ
Jump to navigation Jump to search
SOYMIDA FEBRIFUGA

ಇದು ಮಧ್ಯಮ ಪ್ರಮಾಣದ ಪರ್ಣಪಾತಿ ಮರ. ಇದು ನೇರವಾದ ಕಾಂಡ ಹಾಗೂ ಕಂದು ಬಣ್ಣದ ತೊಗಟೆಯನ್ನು ಹೊಂದಿದೆ.ಎಲೆಗಳು ಸಮಲತಾ ಸಂಯುಕ್ತಪರ್ಣಿಗಳನ್ನು ಹೊಂದಿರುತ್ತದೆ. ಇವು ಮಲೆನಾಡಿನ ಅರಣ್ಯಗಳಲ್ಲಿ ಕಂಡುಬರುತ್ತವೆ. 60-150 ಸೆಂ.ಮೀ.ಮಳೆ ಬೀಳುವ ಪ್ರದೇಶದಲ್ಲಿಇದು ವ್ಯಾಪಿಸುತ್ತದೆ. ಹೊಸ ತಳಿರು ಏಪ್ರಿಲ್-ಮೇ ತಿಂಗಳಲ್ಲಿ ಬರುತ್ತವೆ. ಬಿಳಿಯ ಬಣ್ಣದ ಹೂವುಗಳು ಗೊಂಚಲು ಹೊಸ ತಳಿರಿನೊಂದಿಗೆ ಅರಳುತ್ತದೆ. ಬಲಿತ ಬೀಜಗಳು ಜುಲೈ-ಆಗಸ್ಟ್‍ನಲ್ಲಿಉದುರುತ್ತವೆ. ಬೀಜಗಳು 3.7-4.5 ಸೆಂ.ಮೀ.ಉದ್ದ ಹಾಗೂ 1.2 ಸೆಂ.ಮೀ ಅಗಲವಿರುತ್ತದೆ.ಬೀಜಗಳ ಜೀವಶಕ್ತಿಅತೀಕಡಿಮೆ.ಸಸಿಗಳ ಬೆಳವಣಿಗೆ ನಿಧಾನವಾಗಿರುತ್ತದೆ.ಇದರದಾರುವುಕಪ್ಪುಕಂದು ಬಣ್ಣ ಹೊಂದಿ ಅತೀಗಡುಸಾಗಿದ್ದು, ಹೆಚ್ಚು ಬಾಳಿಕೆ ಬರುತ್ತದೆ.ಬರಸ್ಥಿತಿ ಹಾಗೂ ಬೆಂಕಿ ಧಗೆಗಳನ್ನು ತನ್ನ ಸಹವರ್ತಿ ಮರಗಳಿಗಿಂತ ಹೆಚ್ಚು ಸಹಿಸಬಲ್ಲದು. ಸ್ವಾಭಾವಿಕ ಪುನರುತ್ಪತ್ತಿಯು ಸರಿಯಾದ ಮಳೆ ಬಿದ್ದು ಭೂಮಿ ಹದವಾಗಿದ್ದಲ್ಲಿಬೀಜಗಳು ಮೊಳೆತು ಸಸಿಗಳು ಬೆಳೆಯುತ್ತವೆ. ಕೃತಕ ಪುನರುತ್ಪತ್ತಿಯನ್ನು 30 ಸೆಂ.ಮೀ.ಎತ್ತರದ ಸಾಲ್ಚರಂಡಿಗಳ ಒಡ್ಡುಗಳ ಮೇಲೆ ಬೀಜ ಬಿತ್ತಬಹುದು.[೧][೨][೩][೪][೫]

ವ್ಶೆಜ್ಞಾನಿಕ ಹೆಸರು[ಬದಲಾಯಿಸಿ]

ಸೋಯ್ಮಿಡ ಫಾಬ್ರಿಫುಗ


ಇತರ ಹೆಸರುಗಳು[ಬದಲಾಯಿಸಿ]

ಸೋಮೇ ಮರ, ಸ್ವಾಮಿ ಮರ, ಕೆಮ್ಮರ, ನವಿಲು ಮೆಟ್ಟು

ಉಪಯೋಗಗಳು[ಬದಲಾಯಿಸಿ]

 1. ದೇವಾಲಯಗಳ ನಿರ್ಮಾಣದಲ್ಲಿ ಬಳಸುತ್ತಾರೆ.
 2. ಪೀಠೋಪಕರಣಗಳ ತಯಾರಿಕೆಯಲ್ಲಿ ಬಳಸಬಹುದು.
 3. ಕೃಷಿ ಉಪಕರಣಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.
 4. ಒಳ ತೊಗಟೆಯನ್ನುಔಷಧಿಯಾಗಿ ಬಳಸಬಹುದು.
 5. ಗೆದ್ದಲಿನ ಉಪಟಳವನ್ನು ತಡೆಯಲು ಬಳಸುತ್ತಾರೆ.
 6. ಒಳ ತೊಗಟೆಯನ್ನುಔಷಧಿಗೆ ಬಳಸುತ್ತಾರೆ. ಹಾಗೂ ಇದುಟ್ಯಾನಿನ್ ಒದಗಿಸುತ್ತದೆ.

ಹೊರ ಸಂಪರ್ಕ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

 1. ವನಸಿರಿ. ಅಜ್ಜಂಪುರ ಕೃಷ್ಣಸ್ವಾಮಿ. ಸ್ವರ್ಣಾಂಬ ಪಬ್ಲಿಕೇಶನ್ಸ್
 2. https://www.flowersofindia.net/catalog/slides/Indian%20Redwood.html
 3. http://tropical.theferns.info/viewtropical.php?id=Soymida+febrifuga
 4. http://www.efloraofgandhinagar.in/tree/soymida-febrifuga
 5. http://bioinfo.bisr.res.in/project/domap/plant_details.php?plantid=0101&bname=Soymida%20febrifuga