ಮಲೆಟ್
ಮಲೆಟ್ | |
---|---|
ಮ್ಯೂಜಿಲ್ ಸಿಫ಼್ಯಾಲಸ್ | |
Scientific classification | |
ಕ್ಷೇತ್ರ: | ಯೂಕ್ಯಾರ್ಯೋಟಾ |
ಸಾಮ್ರಾಜ್ಯ: | ಅನಿಮೇಲಿಯ |
ವಿಭಾಗ: | ಕಾರ್ಡೇಟಾ |
ವರ್ಗ: | ಆ್ಯಕ್ಟಿನೋಟೆರಿಜೀ |
(ಶ್ರೇಣಿಯಿಲ್ಲದ್ದು): | ಅಕ್ಯಾಂತೊಮೊರ್ಫ಼ಾ |
ಮೇಲ್ಗಣ: | ಅಕ್ಯಾಂತೊಪ್ಟೆರಿಜಿಯಿ |
ಏಕಮೂಲ ವರ್ಗ: | ಪೆರ್ಕೊಮೊರ್ಫಾ |
(ಶ್ರೇಣಿಯಿಲ್ಲದ್ದು): | ಓವಾಲೆಂಟಾರಿಯಾ |
ಗಣ: | ಮ್ಯೂಜಿಲಿಫ಼ಾರ್ಮೀಸ್ |
ಕುಟುಂಬ: | ಮ್ಯೂಜಿಲಿಡೀ Jarocki, 1822 |
Type species | |
ಮ್ಯುಜಿಲ್ ಸಿಫ಼್ಯಾಲಸ್ Linnaeus, 1758
|
ಮಲೆಟ್ ಮ್ಯೂಜಿಲಾಯ್ಡಿ ಉಪಗಣದ ಮ್ಯೂಜಿಲಿಡೀ ಕುಟುಂಬಕ್ಕೆ ಸೇರಿದ ಒಂದು ಜಾತಿಯ ಅಸ್ಥಿಮೀನು. ಈ ಕುಟುಂಬದ 20 ಜಾತಿ ಮತ್ತು ಸುಮಾರು 78 ಪ್ರಭೇದಗಳು ಪ್ರಪಂಚದ ಉಷ್ಣವಲಯಗಳ ಮತ್ತು ಉಪೋಷ್ಣವಲಯಗಳ ಉಪ್ಪು ನೀರಿನಲ್ಲಿ ವಾಸಿಸುತ್ತವೆ.[೧]
ಭಾರತದಲ್ಲಿ
[ಬದಲಾಯಿಸಿ]ಭಾರತದಲ್ಲಿ 7 ಜಾತಿಗಳಿವೆ. ಮುಜಿಲ್, ಲಿಜ, ರೈನೋಮುಜಿಲ್, ವಾಲಾಮುಜಿಲ್, ಸಿಕಾಮುಜಿಲ್ ಮತ್ತು ಪ್ಲಿಕೊಮುಜಿಲ್ ಎಂಬುವೇ ಈ ಜಾತಿಗಳು. (ಇವೆಲ್ಲವನ್ನು ಒಟ್ಟಾಗಿ ಗ್ರೇ ಮಲೆಟ್ಸ್ ಎಂದು ಕರೆಯುವುದು ರೂಢಿ). ಇವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾಲ, ಮಾಲು ಮತ್ತು ಪಾರೆ ಎಂಬ ಸ್ಥಳೀಯ ಹೆಸರುಗಳಿಂದ ಕರೆಯುವುದುಂಟು.
ವ್ಯಾಪ್ತಿ
[ಬದಲಾಯಿಸಿ]ರೈನೋಮುಜಿಲ್ ಕಾರ್ಸುಲಾ ಎಂಬ ಶಾಸ್ತ್ರೀಯ ಹೆಸರಿನ ಮೀನಿಗೆ ಸಿಹಿ ನೀರಿನ ಮಲೆಟ್ ಎಂದು ಹೆಸರು. ಈ ಪ್ರಭೇದವನ್ನು ಬಿಟ್ಟು ಉಳಿದ ಎಲ್ಲ ಪ್ರಭೇದಗಳು ಕರಾವಳಿ ಪ್ರದೇಶದಲ್ಲೂ ಅಳಿವೆಗಳಲ್ಲೂ ಜೀವಿಸುತ್ತವೆ. ಕೆಂಪು ಸಮುದ್ರ, ಭಾರತದ ಕರಾವಳಿಯ ಪ್ರದೇಶಗಳನ್ನೊಳಗೊಂಡು, ಮಲಯ ದ್ವೀಪ ಸ್ತೋಮಗಳು ಮತ್ತು ಅವುಗಳಿಂದಾಚೆಯ ಅನೇಕ ದೇಶಗಳ ತೀರ ಪ್ರದೇಶಗಳಲ್ಲಿ ಮತ್ತು ಅಳಿವೆಗಳಲ್ಲಿ ಈ ಮೀನುಗಳ ವ್ಯಾಪ್ತಿ ಉಂಟು.
ದೇಹರಚನೆ
[ಬದಲಾಯಿಸಿ]ಇವುಗಳಲ್ಲೆಲ್ಲ ಮುಳ್ಳುಸಹಿತವಾದ ಮತ್ತು ಮೃದುವಾದ ಎರಡು ಈಜು ರೆಕ್ಕೆಗಳಿವೆ. ದೇಹ ಉದ್ದವಾಗಿದ್ದು ತಲೆ ಅಗಲವಾಗಿಯೂ ಮತ್ತು ಸುಮಾರಾಗಿ ಚಪ್ಪಟೆಯಾಗಿಯೂ ಇದೆ. ಶಲ್ಕಗಳಲ್ಲಿ ಉದ್ದನೆಯ ರಂಧ್ರಗಳುಂಟು. ದೇಹದ ಮೇಲ್ಭಾಗ ಬೂದು ಬಣ್ಣದ್ದಾದರೆ ಕೆಳಭಾಗ ಸಾಧಾರಣವಾಗಿ ಬೆಳ್ಳಿ ಬಣ್ಣದ್ದು. ಹೆಚ್ಚು ಕಡಿಮೆ ಎಲ್ಲ ಪ್ರಭೇದಗಳು 10-15 ಸೆಂಮೀ ಉದ್ದ ಬೆಳೆದರೆ, ಮುಜಿಲ್ ಸಿಫ್ಯಾಲಸ್ ಎಂಬ ಪ್ರಭೇದ 90 ಸೆಂಮೀ ಉದ್ದ ಬೆಳೆಯುತ್ತದೆ. ಪಶ್ಚಿಮ ಬಂಗಾಳ ಮತ್ತು ಒರಿಸ್ಸ ರಾಜ್ಯಗಳ ಕರಾವಳಿ ಪ್ರದೇಶಗಳಲ್ಲಿ ಈ ಮೀನುಗಳು ಹೆಚ್ಚಾಗಿ ಸಿಕ್ಕುತ್ತವೆ.
ಸಂತಾನೋತ್ಪತ್ತಿ
[ಬದಲಾಯಿಸಿ]ಕೆಲವು ಪ್ರಭೇದಗಳಲ್ಲಿ ಚಳಿಗಾಲದಲ್ಲೂ ಮತ್ತೆ ಕೆಲವು ಪ್ರಭೇದಗಳಲ್ಲಿ ಮುಂಗಾರು ಮಳೆ ಸಮಯದಲ್ಲೂ ಸಂತಾನೋತ್ಪತ್ತಿಯಾಗುತ್ತದೆ. 1.5 ಕೆ.ಜಿ. ತೂಗುವ ವಯಸ್ಕ ಮುಜಿಲ್ ಸಿಫ್ಯಾಲಸ್ ಮೀನು 15 ರಿಂದ 20 ಲಕ್ಷ ತತ್ತಿಗಳನ್ನಿಡುತ್ತದೆ. ಎಲ್ಲ ಮಲೆಟ್‌ಗಳೂ ಒಳ್ಳೆಯ ಆಹಾರದ ಮೀನುಗಳೆನಿಸಿವೆ.
ಉಲ್ಲೇಖಗಳು
[ಬದಲಾಯಿಸಿ]- ↑ "Family Mugilidae - Mullets". Fishbase. Retrieved 25 March 2017.
ಹೆಚ್ಚಿನ ಓದಿಗೆ
[ಬದಲಾಯಿಸಿ]- J.S. Nelson, Fishes of the World. ISBN 978-0-471-25031-9.
- Froese, Rainer, and Daniel Pauly, eds. (2012). "Mugilidae" in FishBase. June 2012 version.
- Sepkoski, Jack (2002). "A compendium of fossil marine animal genera". Bulletins of American Paleontology. 364: 560. Retrieved 2011-05-19.