ಮರದರಶಿನ
ಮರದರಶಿನವನ್ನು ಹಳದಿ ಬಳ್ಳಿ ಎಂದೂ ಕರೆಯುತ್ತಾರೆ. ಇದು ದಕ್ಷಿಣ ಏಷ್ಯಾ ಮತ್ತು ಮೈನ್ಲ್ಯಾಂಡ್ ಮೂಲದ ಮರದ ಮೇಲೆ ಹರಡುವ ಹೂಬಿಡುವ ಬಳ್ಳಿ. ಇದೊಂದು ಅಳಿವಿನಂಚಿನಲ್ಲಿರುವ ಸಸ್ಯ. ಮರದರಶಿನ ಫೆನೆಸ್ಟ್ರಾಟಮ್ ಸಸ್ಯ ಕುಟುಂಬದ ಸದಸ್ಯ. ಈ ಸಸ್ಯವು ವಿಭಿನ್ನ ಹೆಸರಿನಿಂದ ಕರೆಯಲ್ಪಡುತ್ತದೆ.[೧]
ವಿವರಣೆ[ಬದಲಾಯಿಸಿ]
ಮರದರಶಿನ ಹೊಳೆಯುವ ಎಲೆಗಳು ಮತ್ತು ಹಳದಿ ಬಣ್ಣದ ಗಟ್ಟಿಯಾದ ಮರದ ಮೇಲೆ ವ್ಯಾಪಿಸಿ ಬೆಳೆಯುವ ವುಡಿ ಕ್ಲೈಂಬರ್ ಆಗಿದೆ. ಆಗಸ್ಟ್ ತಿಂಗಳಿನಿಂದ ಅಕ್ಟೋಬರ್ ತಿಂಗಳು ಈ ಬಳ್ಳಿಯ ಹೂಬಿಡುವ ಮತ್ತು ಫಲವತ್ತತೆಯ ಸಮಯ. ಈ ಸಸ್ಯವು 25 ವರ್ಷಗಳ ಒಂದು ತಲೆಮಾರಿನ ಅವಧಿಯನ್ನು ಹೊಂದಿದೆ. [೨]
ಬೆಳೆಯುವ ಪ್ರದೇಶಗಳು[ಬದಲಾಯಿಸಿ]
ಮರದರಶಿನ ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾದ ಭಾಗಗಳಾದ ಭಾರತ ಹಾಗೂ ಇಂಡೋನೇಷ್ಯಾದಲ್ಲಿ ಬೆಳೆಯುತ್ತದೆ. ಇದು ಕೇವಲ ಉಷ್ಣವಲಯದ ಹವಾಮಾನದಲ್ಲಿ ಬೆಳೆಯುತ್ತದೆ. ಫಲವತ್ತಾದ ಮಣ್ಣು ಮತ್ತು ಹೆಚ್ಚಿನ ತೇವಾಂಶ ಮಿಶ್ರಿತ ಪ್ರದೇಶದಲ್ಲಿ ಮರದರಶಿನ ಬೆಳೆಯುತ್ತದೆ. ಈ ಸಸ್ಯವು ಶ್ರೀಲಂಕಾ ಮತ್ತು ಭಾರತದಲ್ಲಿನ ಪಶ್ಚಿಮ ಘಟ್ಟಗಳ ಮೂಲ ಎಂದು ಹೇಳಲಾಗುತ್ತದೆ.[೩]
ಬಳಕೆ[ಬದಲಾಯಿಸಿ]
ಮರದರಶಿನ ಬೆಳೆಯುವ ಪ್ರದೇಶದಲ್ಲಿ ಇದನ್ನು ಸಾಂಪ್ರದಾಯಿಕ ಔಷಧಿಗಳಿಗೆ ಬಳಸುತ್ತಾರೆ. ಇದನ್ನು ಭಾರತದಲ್ಲಿ ಆಯುರ್ವೇದ, ಯುನಾನಿ ಮತ್ತು ಸಿದ್ಧ ವೈದ್ಯಕೀಯ, ಶ್ರೀಲಂಕಾದಲ್ಲಿ ಸಿಂಹಳ ಔಷಧ, ಕಾಂಬೋಡಿಯಾದಲ್ಲಿನ ಕ್ರು ಖಮೇರ್ ಚಿಕಿತ್ಸೆಗಳಿಗೆ ಬಳಸುತ್ತಾರೆ. ಈ ಸಸ್ಯವನ್ನು ಜ್ವರ,ಉದರದ ಕಾಯಿಲೆ ಮಧುಮೇಹ ಮತ್ತು ಹಾವಿನ ಕಡಿತದ ಚಿಕಿತ್ಸೆಗೆ ಹೆಚ್ಚಾಗಿ ಬಳಸುತ್ತಾರೆ. ಈ ಸಸ್ಯವು ಪ್ರಬಲವಾದ ಜೈವಿಕ ಗುಣಲಕ್ಷಣಗಳನ್ನು ಹೊಂದಿದೆ ಎಂದು ಪ್ರಯೋಗಾಲಯದ ಪರೀಕ್ಷೆಗಳು ಧ್ರಡೀಕರಿಸಿವೆ.[೪]