ಮಯಾಂಕ್ ಅಗರ್ವಾಲ್

ವಿಕಿಪೀಡಿಯ ಇಂದ
Jump to navigation Jump to search

ಮಯಾಂಕ್ ಅನುರಾಗ್ ಅಗರ್ವಾಲ್ ಅವರು ೧೬ ಫೆಬ್ರವರಿ ೧೯೯೧ರಲ್ಲಿ ಜನಿಸಿದರು.[೧] ಇವರು ಕರ್ನಾಟಕದವರಾಗಿದ್ದು ಬಲಗೈ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಆಡುವ ಭಾರತದ ಅಂತಾರಾಷ್ಟ್ರೀಯ ಕ್ರಿಕೆಟಿಗ. ಅವರು ೨೬ ಡಿಸೆಂಬರ್ ೨೦೧೮ ರಂದು ಆಸ್ಟ್ರೇಲಿಯಾ ವಿರುದ್ಧ ಭಾರತದ ಪರವಾಗಿ ಅಂತಾರಾಷ್ಟ್ರೀಯ ಪಂದ್ಯಾವಳಿಗೆ ಪಾದಾರ್ಪಣೆ ಮಾಡಿದರು.[೨]

ಆರಂಭಿಕ ವೃತ್ತಿಜೀವನ[ಬದಲಾಯಿಸಿ]

ಅವರು ಬಿಷಪ್ ಕಾಟನ್ ಬಾಲಕರ ಶಾಲೆ ಮತ್ತು ಬೆಂಗಳೂರಿನ ಜೈನ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿದ್ದಾರೆ.[೩]

೨೦೦೮-೦೯ ರಲ್ಲಿ ನಡೆದ ಅಂಡರ್ -19 ಕೂಚ್ ಬೆಹರ್ ಟ್ರೋಫಿಯಲ್ಲಿ ಅವರು ತೋರಿದ ಸಾಧನೆಗಳಿಂದ ಬೆಳಕಿಗ ಬಂದ ಇವರು, ಇದಕ್ಕೆ ಮಾನ್ಯತೆವೆಂಬಂತೆ ೨೦೧೦ ರ ಐಸಿಸಿ ಅಂಡರ್ -19 ಕ್ರಿಕೆಟ್ ವಿಶ್ವಕಪ್‌ನಲ್ಲೂ ಅವರು ಸ್ಥಾನ ಪಡೆದರು. ಈ ಪಂದ್ಯಾಕೂಟದಲ್ಲಿ ಅವರು ಭಾರತದ ಪ್ರಮುಖ ರನ್ ಗಳಿಸುವವರಾಗಿದ್ದರು.[೪] ೨೦೧೦ ರಲ್ಲಿ ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಅವರನ್ನು ಮ್ಯಾನ್ ಆಫ್ ದಿ ಸೀರೀಸ್ ಎಂದು ಆಯ್ಕೆ ಮಾಡಲಾಯಿತು. ಆ ಪಂದ್ಯಾವಳಿಯಲ್ಲಿ ಅವರು ಒಂದು ಶತಕವನ್ನೂ ಗಳಿಸಿದ್ದರು.[೫]

ದೇಶೀಯ ಕ್ರಿಕೆಟ್[ಬದಲಾಯಿಸಿ]

ನವೆಂಬರ್ ೨೦೧೭ ರಲ್ಲಿ, ಅವರು ಪ್ರಥಮ ದರ್ಜೆ ಕ್ರಿಕೆಟ್‌ನ ತಮ್ಮ ಚೊಚ್ಚಲ ತ್ರಿಶತಕವನ್ನು ಗಳಿಸಿದರು. ಅವರು ೨೦೧೭-೧೮ ರಣಜಿ ಟ್ರೋಫಿಯಲ್ಲಿ ಮಹಾರಾಷ್ಟ್ರದ ವಿರುದ್ಧ ಕರ್ನಾಟಕದ ಪರವಾಗಿ ೩೦೪* ಹೊಡೆದಿದ್ದರು.[೬] ಇದು ಭಾರತದ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ದಾಖಲಾದ ೫೦ ನೇ ತ್ರಿಶತಕವಾಗಿದೆ.[೭] ಅದೇ ತಿಂಗಳಲ್ಲಿ, ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ೧,೦೦೦ ರನ್ ಪೂರ್ಣಗೊಳಿಸಿದರು.[೮][೯] ಅವರು ೨೦೧೭-೧೮ರ ರಣಜಿ ಟ್ರೋಫಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದವರಾಗಿದ್ದು, ಪಂದ್ಯಾವಳಿಯನ್ನು ೧,೧೬೦ ರನ್‌ಗಳೊಂದಿಗೆ ಮುಗಿಸಿ ಸ್ಮರಣೀಯಗೊಳಿಸಿದರು.[೧೦]

೨೦೧೮ ರ ಜನವರಿಯಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ಅವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಖರೀದಿಸಿತು.[೧೧] ಫೆಬ್ರವರಿ ೨೦೧೮ ರಲ್ಲಿ ಅವರು, ೨೦೧೭-೧೮ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಎಂಟು ಪಂದ್ಯಗಳಲ್ಲಿ ೭೨೩ ರನ್ ಗಳಿಸಿ ಹೆಚ್ಚು ರನ್ ಗಳಿಸಿದವರಾಗಿ ಗುರುತಿಸಲ್ಪಟ್ಟರು.[೧೨] ೨೦೧೭-೧೮ರ ದೇಶೀಯ ಕ್ರಿಕೆಟ್ ಋತುವಿನಲ್ಲಿ ಅವರು ಎಲ್ಲಾ ಸ್ವರೂಪಗಳಲ್ಲಿ ಒಟ್ಟು ೨,೧೪೧ ರನ್ ಗಳಿಸಿದ್ದರು. ಇದು ಭಾರತೀಯ ದೇಶೀಯ ಋತುವಿನಲ್ಲಿ ಯಾವುದೇ ಬ್ಯಾಟ್ಸ್‌ಮನ್ ಗಳಿಸಿದ ಗರಿಷ್ಠ ಮೊತ್ತವಾಗಿದೆ.[೧೩] ಜೂನ್ ೨೦೧೮ ರಲ್ಲಿ, ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರಿಗೆ ನೀಡುವ ಮಾಧವರಾವ್ ಸಿಂಧಿಯಾ ಪ್ರಶಸ್ತಿಯನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನೀಡಿತು.[೧೪]

ಅವರು ೨೦೧೮-೧೯ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕದ ಪರ ಏಳು ಪಂದ್ಯಗಳಲ್ಲಿ ೨೫೧ ರನ್ ಗಳಿಸಿದ್ದಾರೆ.[೧೫]

ಅಂತರ್ರಾಷ್ಟ್ರೀಯ ಕ್ರಿಕೆಟ್ ಜೀವನ[ಬದಲಾಯಿಸಿ]

ಸೆಪ್ಟೆಂಬರ್ ೨೦೧೮ ರಲ್ಲಿ, ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗಾಗಿ ಭಾರತದ ಟೆಸ್ಟ್ ತಂಡದಲ್ಲಿ ಅವರನ್ನು ಹೆಸರಿಸಲಾಯಿತು, ಆದರೆ ಅವರಿಗೆ ಆಡಲು ಅವಕಾಶ ಸಿಗಲಿಲ್ಲ.[೧೬] ಗಾಯದಿಂದಾಗಿ ಪೃಥ್ವಿ ಶಾ ಭಾರತ ತಂಡದಿಂದ ಹೊರಗುಳಿದ ನಂತರ, ಡಿಸೆಂಬರ್ ೨೦೧೮ ರಲ್ಲಿ, ಆಸ್ಟ್ರೇಲಿಯಾ ವಿರುದ್ಧದ ಸರಣಿಗಾಗಿ ಭಾರತದ ಟೆಸ್ಟ್ ತಂಡಕ್ಕೆ ಅವರನ್ನು ಸೇರಿಸಲಾಯಿತು.[೧೭] ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ, ೨೬ ಡಿಸೆಂಬರ್ ೨೦೧೮ ರಂದು ಆಸ್ಟ್ರೇಲಿಯಾ ವಿರುದ್ಧ ಚೊಚ್ಚಲ ಅಂತರ್ರಾಷ್ಟ್ರೀಯ ಕ್ರಿಕೆಟ್ ಪಂದ್ಯವಾಡಿದ ಅವರು, ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿಯೇ ಎಪ್ಪತ್ತಾರು ರನ್ ಗಳಿಸಿರು.[೧೮] ೧೯೪೭ರಲ್ಲಿ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (ಎಸ್‌ಸಿಜಿ) ದತ್ತು ಫಡ್ಕರ್ ಅವರು ನಿರ್ಮಿಸಿದ ೫೧ ರನ್‌ಗಳ ದಾಖಲೆಯನ್ನು ಮೀರಿ ಆಸ್ಟ್ರೇಲಿಯಾದಲ್ಲಿ ನಡೆದ ಚೊಚ್ಚಲ ಟೆಸ್ಟ್ ಪಂದ್ಯವೊಂದರಲ್ಲಿ ಇದು ಭಾರತೀಯ ಕ್ರಿಕೆಟಿಗರ ಅತ್ಯಧಿಕ ಸ್ಕೋರ್ ಆಗಿದೆ.[೧೯][೨೦]

ಜುಲೈ ೨೦೧೯ ರಲ್ಲಿ, ಅವರನ್ನು ೨೦೧೯ ರ ಕ್ರಿಕೆಟ್ ವಿಶ್ವಕಪ್ಗಾಗಿ ಭಾರತದ ತಂಡಕ್ಕೆ ಸೇರಿಸಲಾಯಿತು. ಗಾಯದಿಂದಾಗಿ ಟೂರ್ನಿಯ ಉಳಿದ ಭಾಗಗಳಿಂದ ಹೊರಗುಳಿದಿದ್ದ ವಿಜಯ್ ಶಂಕರ್ ಅವರ ಬದಲಿಗೆ ಇವರನ್ನು ಸೇರಿಸಲಾಗಿತ್ತು.[೨೧]

ಅಕ್ಟೋಬರ್ ೨೦೧೯ ರಲ್ಲಿ, ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ, ಅಗರ್ವಾಲ್ ರವರು ಅಂತರ್ರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ಶತಕವನ್ನು ಗಳಿಸಿದರು.[೨೨] ಟೆಸ್ಟ್ ಇನ್ನಿಂಗ್ಸ್ ಒಂದರಲ್ಲಿ ೩೭೧ ಎಸೆತಗಳಿಂದ, ೨೩ ಬೌಂಡರಿ ಮತ್ತು ೬ ಸಿಕ್ಸರ್ ಗಳೊಂದಿಗೆ ೨೧೫ ರನ್ ಗಳಿಸಿ ಔಟಾದರು. ತಮ್ಮ ಚೊಚ್ಚಲ ಶತಕವನ್ನೇ ದ್ವಿಶತಕವಾಗಿ ಪರಿವರ್ತಿಸಿದ್ದರು.[೨೩]

ವೈಯಕ್ತಿಕ ಜೀವನ[ಬದಲಾಯಿಸಿ]

ಅಗರ್ವಾಲ್ ರವರು ವಿಪಶ್ಯಾನನ ಧ್ಯಾನ ತಂತ್ರವನ್ನು ಅಭ್ಯಾಸ ಮಾಡುತ್ತಾರೆ. ಅವರಿಗೆ ಇದನ್ನು ಅವರ ತಂದೆ ಅನುರಾಗ್ ಅಗರ್ವಾಲ್ ರವರು ಪರಿಚಯಿಸಿರುತ್ತಾರೆ. ಜೋಸೆಫ್ ಮರ್ಫಿ ರವರ ಪುಸ್ತಕ ದಿ ಪವರ್ ಆಫ್ ದಿ ಸಬ್‌ಕಾನ್ಷಿಯಸ್ ಮೈಂಡ್‌ನಿಂದ ಅವರು ಸ್ಫೂರ್ತಿ ಪಡೆದಿದ್ದಾರೆ ಎನ್ನಲಾಗಿದೆ.[೨೪][೨೫]

೨೦೧೮ ರ ಜನವರಿಯಲ್ಲಿ ಅಗರ್ವಾಲ್ ರವರು ಬೆಂಗಳೂರು ಪೊಲೀಸ್ ಆಯುಕ್ತರಾದ ಪ್ರವೀಣ್ ಸೂದ್ ಅವರ ಪುತ್ರಿ ಆಶಿತಾ ಸೂದ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಮತ್ತು ಅದೇ ವರ್ಷ ಜೂನ್ ತಿಂಗಳಲ್ಲಿ ಅವರನ್ನು ಮದುವೆಯಾದರು.[೨೬]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

 1. http://www.espncricinfo.com/india/content/player/398438.html
 2. https://www.icc-cricket.com/news/954317
 3. http://www.jainuniversity.ac.in/Sports.htm
 4. http://stats.espncricinfo.com/u19wc2010/engine/records/batting/most_runs_career.html?id=5324;team=1854;type=tournament
 5. http://www.espncricinfo.com/kpl-10/content/story/478477.html
 6. http://www.espncricinfo.com/series/8050/report/1118648/day/3/
 7. http://www.espncricinfo.com/story/_/id/21154978/triple-tons-india-28,-rest-world-31
 8. http://www.espncricinfo.com/series/8050/report/1118687/day/3/
 9. http://www.wisdenindia.com/match-report/group-a-agarwal-tops-1000-runs-season/280360
 10. http://stats.espncricinfo.com/ci/engine/records/batting/most_runs_career.html?id=12014;type=tournament
 11. http://www.espncricinfo.com/story/_/id/22218394/ipl-2018-player-auction-list-sold-unsold-players
 12. http://stats.espncricinfo.com/ci/engine/records/batting/most_runs_career.html?id=12016;type=tournament
 13. http://www.espncricinfo.com/series/8890/report/1118795/karnataka-vs-saurashtra-final-vijay-hazare-trophy
 14. http://www.espncricinfo.com/india/content/story/1148763.html
 15. http://stats.espncricinfo.com/ci/engine/records/averages/batting_bowling_by_team.html?id=11523;team=1923;type=tournament
 16. http://www.bcci.tv/news/2018/press-releases/17671/indian-team-for-paytm-test-series-against-windies-announced
 17. https://www.icc-cricket.com/news/947012
 18. http://www.espncricinfo.com/ci/engine/match/1144995.html
 19. https://www.indiatvnews.com/sports/cricket-boxing-day-test-mayank-agarwal-misses-out-on-debut-hundred-but-shows-nerves-of-steel-at-mcg-495571
 20. https://timesofindia.indiatimes.com/sports/cricket/india-in-australia/Mayank-agarwal-records-top-score-for-an-indian-test-debutant-in-australia/articleshow/67252837.cms
 21. https://www.espncricinfo.com/story/_/id/27094798/vijay-shankar-world-cup-toe-injury-agarwal-called-up
 22. https://www.indiatoday.in/sports/cricket/story/mayank-agarwal-1st-test-hundred-india-vs-south-africa-vizag-test-rohit-sharma-1605762-2019-10-03
 23. https://www.indiatoday.in/sports/cricket/story/india-vs-south-africa-1st-test-day-2-mayank-agarwal-maiden-double-hundred-200-vizag-1605882-2019-10-03
 24. https://www.cricbuzz.com/cricket-news/98813/mayank-agarwals-new-approach-has-fetched-him-big-scores
 25. https://www.mensxp.com/sports/cricket/49060-mayank-agarwal-rsquo-s-journey-to-international-debut-has-been-an-emotional-roller-coaster.html
 26. https://timesofindia.indiatimes.com/city/bengaluru/mayank-agarwal-gets-engaged/articleshow/62708676.cms