ವಿಷಯಕ್ಕೆ ಹೋಗು

ಮಣಿಪುರಿ ಜನರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೈತೆಯಿ ಜನರು
ಒಟ್ಟು ಜನಸಂಖ್ಯೆ 1,648,000[೧]
ಗಮನಾರ್ಹ ಜನಸಂಖ್ಯೆ ಪ್ರದೇಶಗಳು ಮಣಿಪುರ್‌
ಭಾಷೆ ಮೈತೆಯಿಲಾನ್ (ಮಣಿಪುರಿ)
ಧಾರ್ಮಿಕತೆ ಹಿಂದುಧರ್ಮ, ಕ್ರೈಸ್ತಧರ್ಮ & ಸನಮಾಹಿಸಂ

<ಸೇರುವುದಿಲ್ಲ>

ಮೀತೈ ಗಳು ಅಥವಾ ಮೈತೆಯಿ ಗಳು ಭಾರತದ ಮಣಿಪುರದ ಬಹುಸಂಖ್ಯಾತ ಜನಾಂಗೀಯ ಗುಂಪು. ಈ ಕಾರಣದಿಂದ ಅವರನ್ನು ಕೆಲವುಬಾರಿ ಮಣಿಪುರಿಗಳು ಎಂದು ಉಲ್ಲೇಖಿಸಲಾಗುತ್ತದೆ. ಸಾಮಾನ್ಯ ಭಾಷೆಯಲ್ಲಿ ಮೈತೆಯಿ ಸ್ವನಾಮ(ಸ್ವತಃ ಕರೆದುಕೊಳ್ಳುವ ಹೆಸರು)(ಎಂಡೋನಿಂ)ವಾಗಿದ್ದರೆ, ಮಣಿಪುರಿಯು ಸ್ಥಳದ ಹೆಸರು(ಎಕ್ಸೊನಿಂ). ಮೈತೆಯಿ ಜನರು ಎಂಟು ಕುಲಗಳಿಂದ ರಚನೆಯಾಗಿದ್ದಾರೆ. ಅವರ ಲಿಖಿತ ಇತಿಹಾಸವು ಕ್ರಿ.ಶ.33 ರಲ್ಲಿ ಕಾಣಸಿಗುತ್ತದೆ.

ನೆಲ ಮತ್ತು ಜನತೆ

[ಬದಲಾಯಿಸಿ]

ಮಣಿಪುರ ಅಥವಾ ಮೈತೆಲೈಪಾಕ್ ಅಥವಾ ಮೈತ್ರಾಬಾಕ್ ಅಥವಾ ಕಂಗೇಲಿಪಾಕ್ ಬೌಗೋಳಿಕವಾಗಿ 93.2 0 Eಮತ್ತು 94.47 0 E ರೇಖಾಂಶ ಮತ್ತು 23.5 0 N and 25.41 0 N ಅಕ್ಷಾಂಶದಲ್ಲಿದೆ. ಇದು ಭಾರತದ ಈಶಾನ್ಯ ಗಡಿಯಲ್ಲಿ ನೆಲೆಗೊಂಡಿದ್ದು, ಪೂರ್ವ ಮತ್ತು ದಕ್ಷಿಣದಲ್ಲಿ ಮ್ಯಾನ್ಮಾರ್ ಗಡಿಯನ್ನು ಹೊಂದಿದೆ. ಮಣಿಪುರದ ಬಹುತೇಕ ಜನರು ಮೈತೆಯಿಗಳಾಗಿದ್ದು, ಅವರು ಮುಖ್ಯವಾಗಿ ಸಮತಟ್ಟು(ಬಯಲು)ಪ್ರದೇಶಗಳಲ್ಲಿ ವಾಸಿಸುತ್ತಾರೆ. ಗುಡ್ಡಗಾಡು ಪಂಗಡಗಳು ಗುಡ್ಡಗಾಡು ಪ್ರದೇಶಗಳಲ್ಲಿ ಪ್ರಾಬಲ್ಯ ಹೊಂದಿದ್ದು, ಅವರನ್ನು ಸಾಮಾನ್ಯವಾಗಿ “ಚಿಂಗ್ಮೀಸ್”. ಎಂದು ಕರೆಯಲಾಗುತ್ತದೆ. ಮಣಿಪುರದ ಪ್ರಸಕ್ತ ರಾಜ್ಯದ ಎಲ್ಲಾ ಸ್ಥಳೀಯ ಜನಾಂಗೀಯ ಗುಂಪುಗಳು ಒಂದು ಕಾಲದಲ್ಲಿ ಮೈತೆಯಿಲೇಪಾಕ್‌ನ ಮೈತೆಯಿನ ಒಂದೇ ಕುಲಕ್ಕೆ ಸೇರಿದವರಾಗಿದ್ದರು. ಮೈತೆಯಿಗಳನ್ನು ಮೀತೈ ಎಂದು ಕೂಡ ಬರೆಯಲಾಗುತ್ತದೆ. ಆದರೆ "ಮೈತೆಯಿ" ಎನ್ನುವುದು ನಿಜವಾದ ಹೆಸರಾಗಿದೆ.ಕಚಾರ್(ಅಸ್ಸಾಂ)ನಲ್ಲಿ ಅಸಂಖ್ಯಾತ ಮೈತೆಯಿಗಳು ವಾಸಿಸಿದ್ದು, ಮ್ಯಾನ್ಮಾರ್‌ನಲ್ಲಿ ಕೂಡ ಈ ಜನರು ನೆಲೆಗೊಂಡಿದ್ದಾರೆ. ಐತಿಹಾಸಿಕವಾಗಿ ಏಳು ವರ್ಷಗಳ ಬಿಕ್ಕಟ್ಟಿನ ಬಳಿಕ ಅವರು ಸರಿಸುಮಾರು ಕ್ರಿ.ಶ.1815ಯಲ್ಲಿ ಅಲ್ಲಿಗೆ ವಲಸೆ ಹೋಗಿದ್ದು ಇದು ಮೈತೆಯಿ ಭಾಷೆಯಲ್ಲಿ(ಚಾಹಿ ಟಾರೆಟ್ ಖುಂಟಾಕ್ಪಾ/7 ವರ್ಷಗಳ ನಂತರ ಗ್ರಾಮವನ್ನು ತೊರೆಯುವುದು)ಎಂದು ಹೆಸರಾಗಿದೆ. ಜನರಲ್ ಬಾಂದುಲಾ ನೇತೃತ್ವದ ಬರ್ಮೀಯರು ಮಣಿಪುರಿ ಪ್ರಭುತ್ವದ ಮೇಲೆ ಆಕ್ರಮಣ ಮಾಡಿದ ನಂತರ ಅವರು ವಲಸೆ ಹೋಗಿದ್ದರು.17ನೇ ಶತಮಾನದ ಪೂರ್ವದಲ್ಲಿ ಕಚಾರಿ ಪ್ರಭುತ್ವದ ರಾಜ ಗೋವಿಂದನನ್ನು ಚಂದ್ರಕೀರ್ತಿ ಮಹಾರಾಜ ಸೋಲಿಸಿದಾಗ, ಕಚಾರ್ ಒಂದೊಮ್ಮೆ ಮಹಾ ಮಣಿಪುರ ಸಾಮ್ರಾಜ್ಯದ ಭಾಗವಾಗಿತ್ತು.ಹಿಂದು ಧರ್ಮದ ವೈಷ್ಣವ ಪಂಥದ ರಾಧಾ ಕೃಷ್ಣನಿಗೆ ಮುಡಿಪಾದ ದೇವಸ್ಥಾನವನ್ನು ಇನ್ನೂ ಅಲ್ಲಿ ಕಾಣಬಹುದು. ಇದನ್ನು 17ನೇ ಶತಮಾನದಲ್ಲಿ ನಿರ್ಮಿಸಲಾಗಿದೆ.ದೇವಸ್ಥಾನದ ವಿಗ್ರಹವನ್ನು ಕೆತ್ತಲು ಬಳಸಲಾದ ಮರವು ಮಣಿಪುರದ ರಾಜಮನೆತನದ ದೇವಸ್ಥಾನದ ಕೃಷ್ಣನ ಮೂರ್ತಿಯನ್ನು ಕೆತ್ತಲು ಬಳಸಿಕೊಂಡ ಹಲಸಿನ ಮರವಾಗಿದೆ ಎನ್ನುವುದು ಜನಪದ ಕಥೆಯಾಗಿದೆ.19ನೇ ಶತಮಾನದ ಆದಿಭಾಗದಲ್ಲಿ ಮಹಾರಾಜ ಚಂದ್ರಕೀರ್ತಿ ಈ ದೇವಸ್ಥಾನಕ್ಕೆ ಭೇಟಿ ನೀಡಿದ ಬಗ್ಗೆ ಅನೇಕ ಜನಪದ ಕಥೆಗಳು ಹುಟ್ಟಿಕೊಂಡಿವೆ.

ಮೈತೆಯಿ ಸಮಾಜವು ಗುಡ್ಡಪ್ರದೇಶಗಳಲ್ಲಿ ಮುಖ್ಯವಾಗಿ ವಾಸಿಸುವ ಇನ್ನೆರಡು ಪ್ರಬಲ ಸಮುದಾಯಗಳಾದ ನಾಗಾಗಳು ಮತ್ತು ಕುಕಿಗಳ ಜತೆ ಹಂಚಿಕೆಯಾಗಿದೆ. ಮೈತೆಯಿನ ಏಳು ಕುಲಗಳು ಮುಖ್ಯವಾಗಿ ಕಣಿವೆಯಲ್ಲಿ ವಿಭಿನ್ನ ಸಂಸ್ಥಾನಗಳಲ್ಲಿ ಆಳ್ವಿಕೆ ನಡೆಸುತ್ತವೆ. ನಿಂಗ್‌ತೌಜಾ ಸಾಮ್ರಾಜ್ಯದ ರಾಜ ಪಕಾಂಗ್ಬಾ ಏಳು ಕುಲಗಳನ್ನು ಒಂದುಗೂಡಿಸಿ ಸಿಂಹಾಸನವನ್ನು ಏರಿದಾಗ, ಮೈತೆಯಿ ಊಳಿಗಮಾನ್ಯ ಪ್ರಭುತ್ವ ಕ್ರಿ.ಶ. ೩೩ರಲ್ಲಿ ಆರಂಭವಾಯಿತು. ಮೈತೆಯಿ ಪದವು ಈಗ ನಾಲ್ಕು ಸಾಮಾಜಿಕ ಗುಂಪುಗಳನ್ನು ಉಲ್ಲೇಖಿಸುತ್ತದೆ. ಮೈತೆಯಿ ಮರುಪ್(ಮೈತೆಯಿ ಸಂಸ್ಕೃತಿ ಮತ್ತು ದೇವರಲ್ಲಿ ಮಾತ್ರ ನಂಬಿಕೆ ಇರಿಸುತ್ತದೆ), ಮೈತೆಯಿ ಗೌರಾ(ಮೈತೆಯಿ ಮತ್ತು ಹಿಂದು ದೇವರುಗಳು ಎರಡರಲ್ಲೂ ನಂಬಿಕೆ ಇರಿಸಿದೆ) ಮತ್ತು ಮೈತೆಯಿ ಬ್ರಾಹ್ಮಣರು(ಸ್ಥಳೀಯವಾಗಿ ಬಾಮೋನರು ಎಂದು ಕರೆಯಲಾಗುತ್ತದೆ) ಮತ್ತು ಮೈತೆಯಿ ಮುಸ್ಲಿಮರು(ಮೈತೆಯಿ ಪಾಂಗಳ್ ಅಥವಾ ಕೇವಲ ಪಾಂಗಳ್ ಎಂದು ಕರೆಯಲಾಗುತ್ತದೆ). ಎಲ್ಲರೂ ಅವರ ಮಾತೃಭಾಷೆಯಾಗಿ ಮೈತೆಯಿಲೋನ್ ಬಳಕೆ ಮಾಡುತ್ತಾರೆ.

ಮೈತೆಯಿ ಮಹಿಳೆಯರು ಮಣಿಪುರದಲ್ಲಿ ಸದಾ ಆರ್ಥಿಕ ಮತ್ತು ಸಾಮಾಜಿಕ ಸ್ಥಾನಮಾನವನ್ನು ಅನುಭವಿಸುತ್ತಾರೆ ಮತ್ತು ಇಂದು ಅವರು ಸಮಾಜದ ಪ್ರತಿಯೊಂದು ಸಾಮಾಜಿಕ/1} ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಾರೆ. ನಿರ್ದಿಷ್ಟವಾಗಿ ಅವರು ಸಾಂಪ್ರದಾಯಿಕ ಚಿಲ್ಲರೆ ಮಾರಾಟ ಸೇರಿದಂತೆ ಮೈತೆಯಿ ಮಾರುಕಟ್ಟೆಗಳನ್ನು ಮತ್ತು ತರಕಾರಿಗಳು ಮತ್ತು ಸಾಂಪ್ರದಾಯಿಕ ಉಡುಪಿನ ವ್ಯಾಪಾರವನ್ನು ನಿಯಂತ್ರಿಸುತ್ತಾರೆ. 'ನೂಪಿ ಕೈಥೆಲ್' ಮೈತೆಯಿ ಮಹಿಳೆಯರು ಮಾತ್ರ ನಡೆಸುವ ಮಾರುಕಟ್ಟೆಯಾಗಿದೆ. ಅವುಗಳಲ್ಲಿ ಅತೀ ಪ್ರಮುಖವಾದ್ದು ಇಂಫಾಲದ ಭವ್ಯ ಮಾರುಕಟ್ಟೆಯಾದ ಸಾನಾ ಕೈಥೆಲ್(ಪ್ರವಾಸಿಗಳಿಗೆ ಮತ್ತು ಮೈತೆಯಿಯೇತರ ಭಾರತೀಯರಿಗೆ ಇಮಾ ಕೈಥೇಲ್ ಎಂದು ಹೆಸರಾಗಿದೆ).

ಮಹಿಳೆಯರ ಸಾಂಪ್ರದಾಯಿಕ ಉಡುಪಿನ ಶೈಲಿಯು "ಫಾನೆಕ್" ಎಂದು ಕರೆಯುವ ಸಾರೋಂಗ್(ಸಡಿಲ ಲಂಗ)ಆಗಿದೆ. ಇದನ್ನು ಸೊಂಟದಿಂದ ಕಣಕಾಲಿನವರೆಗೆ ಅಥವಾ ತೋಳಿನ ಕೆಳಗೆ, ಮೇಲ್ಭಾಗದ ದೇಹ ಮತ್ತು ಕೆಳಗೆ ಮೀನಖಂಡದ ಮಧ್ಯದವರೆಗೆ ಮುಚ್ಚುವಂತೆ ಧರಿಸಲಾಗುತ್ತದೆ. ಫ್ಯಾನೆಕ್ ಎತ್ತರದ ಸ್ಥಾನದಲ್ಲಿ ಧರಿಸಿದ್ದಾಗ, ಸಾಂಪ್ರದಾಯಿಕವಾಗಿ ಮಹಿಳೆಯರು ಕುಪ್ಪಸ ಧರಿಸುವುದಿಲ್ಲ. ಇದು ಕುಪ್ಪಸ ಮತ್ತು ಹೊದಿಕೆಯಿಂದ ಪೂರ್ಣವಾಗಿರುತ್ತದೆ. ಪುರುಷರು ಥಾಯ್ ಮತ್ತು ಕೇಮರ್ ಪುರುಷರ ಉಡುಪಿಗೆ ಹೋಲಿಕೆಯಾಗುವ "ಖುಡೈ" ಧರಿಸುತ್ತಾರೆ. ಇದು ಮಂಡಿಯವರೆಗೆ ಧರಿಸುವ ಉಡುಪಾಗಿದ್ದು, ಸೊಂಟದ ಬಳಿ ಪದರಗಳಲ್ಲಿ ಮಡಚಲಾಗಿರುತ್ತದೆ. ಇತ್ತೀಚಿನ ವರ್ಷಗಳಲ್ಲಿ, ಪುರುಷರ ಔಪಚಾರಿಕ ಉಡುಪು ಉದ್ದದ,ಕಣಕಾಲಿನವರೆಗಿನ ರೂಪವಾದ "ಫೈಜಾಮ್" ಆಗಿದ್ದು, ಇದು ಭಾರತದ ಧೋತಿಯನ್ನು ಹೋಲುತ್ತದೆ.

ಮೈತೆಯಿ ಜನರು ಅವರ ಕ್ರೀಡಾ ಕೌಶಲ್ಯಕ್ಕೆ ಹೆಸರಾಗಿದ್ದು, ಹಾಕಿ ಮತ್ತು ಪೋಲೊ ಅವರ ಸಾಂಪ್ರದಾಯಿಕ ಕ್ರೀಡೆಗಳಾಗಿವೆ ಮತ್ತು ಮೈತೆಯಿ ಸ್ವರೂಪದ ಸಮರಕಲೆ ತಾಂಗ್ ಟಾ ವನ್ನು ಇತ್ತೀಚೆಗೆ ಅಂತಾರಾಷ್ಟ್ರೀಯ ಸಮರಕಲೆಗಳ ಅಧಿಕೃತ ರೂಪವೆಂದು ಗುರುತಿಸಲಾಗಿದೆ. ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಹೆಸರಾಂತ ಸ್ಥಾನ ಗಳಿಸಿರುವ ಪೋಲೊ ಮಣಿಪುರದಲ್ಲಿ ಹುಟ್ಟಿದೆಯೆಂದು ಪರಿಚಿತವಾಗಿದ್ದು, ಅದರ ಮೂಲ ಹೆಸರು 'ಸಾಗೋಲ್ ಕಾಂಜೈ' ರಾಜರು ಮತ್ತು ಮಣಿಪುರದ ರಾಜಕುಟುಂಬ ಆಡುತ್ತಿದ್ದ ರಾಜಮನೆತನದ ಆಟವಾಗಿತ್ತು.

ಧಾರ್ಮಿಕತೆ

[ಬದಲಾಯಿಸಿ]

ಮೈತೆಯಿನ ಬಹುತೇಕ ಜನರು ವೈಷ್ಣವ ಹಿಂದುಧರ್ಮವನ್ನು ಸನಮಾಹಿ ಲೈನಿಂಗ್(ಸರಳವಾಗಿ ಸನಮಾಹಿ) ಎಂದು ಹೆಸರಾದ ಅವರ ಪ್ರಾಚೀನ ಮೈತೆಯಿ ಧರ್ಮಕ್ಕೆ ಮಿಶ್ರಣ ಮಾಡಿ ಅನುಸರಿಸುತ್ತಾರೆ. ಬಹುತೇಕ ಮೈತೆಯಿಯರು ಸನಮಾಹಿಯನ್ನು ತಮ್ಮ ಜೀವನದ ಭಾಗವೆಂದು ಪರಿಗಣಿಸುತ್ತಾರೆ. ವೈಷ್ಣವ ಧರ್ಮವು ರಾಜ ಪಾಂಹೈಬಾ 18ನೇ ಶತಮಾನದಲ್ಲಿ ರಾಜ್ಯದ ಧರ್ಮವನ್ನಾಗಿ ಮಾಡಿದ ಮತ್ತು 1891ರಲ್ಲಿ ಬ್ರಿಟಿಷರು ಮಣಿಪುರವನ್ನು ಸೋಲಿಸುವ ತನಕ ಅದು ಹಾಗೆಯೇ ಉಳಿದಿತ್ತು. ಮೈತೆಯಿನ ಸರಿಸುಮಾರು ಐದನೇ ಒಂದು ಭಾಗದಷ್ಟು ಜನರು ಸನಮಾಹಿಸಂ ಅನುಸರಿಸುತ್ತಾರೆ. 2001ನೇ ಜನಗಣತಿಯಲ್ಲಿ ಅಂದಾಜು ಮಾಡಿರುವ ಪ್ರಕಾರ, ಮಣಿಪುರದ ಸುಮಾರು 11% ಜನತೆಯನ್ನು ಇತರೆ ಧರ್ಮದ ಅಡಿಯಲ್ಲಿ ವರ್ಗೀಕರಿಸಲಾಗಿದೆ.

1945ರ ಮೇ 14ರಂದು, ಮೀತಯಿ ಮರುಪ್(ಮೀತೈ ವರ್ಗದ ಸಂಘಟನೆ)ಯನ್ನು ಮಣಿಪುರದಲ್ಲಿ ರಚಿಸಲಾಯಿತು. ಇದು ಮೀತಯಿ ಸಾಂಪ್ರದಾಯಿಕ ಸಂಸ್ಕೃತಿಗಳು, ಲಿಪಿಗಳು(ಮೀತಯಿ ಮಾಯೆಕ್), ಸಾಂಪ್ರದಾಯಿಕ ಪದ್ಧತಿಗಳು ಮತ್ತು ಮೀತಯಿ ಸಮಾಜಕ್ಕೆ ಸಂಬಂಧಿಸಿದ ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳ ಪುನಶ್ಚೇತನಕ್ಕೆ ದಾರಿಕಲ್ಪಿಸಿತು. ಹಳೆಯ ನಂಬಿಕೆಗಳು ಮತ್ತು ಧಾರ್ಮಿಕ ಬಂಧಗಳು ಬಿಚ್ಚಿಕೊಳ್ಳತೊಡಗಿದವು ಮತ್ತು ಬೆಳಕಿಗೆ ಬಂದ ಚಳವಳಿಯ ನಂಬಿಕೆಗಳು ಸ್ಥಾನ ಪಡೆಯತೊಡಗಿದವು. ಧಾರ್ಮಿಕ ವಿಧಿಗಳು ಮತ್ತು ಆಚರಣೆಗಳೊಂದಿಗೆ ಧಾರ್ಮಿಕ ಕ್ರಿಯೆಗಳನ್ನು ನಿರ್ವಹಿಸುವ ಬಗ್ಗೆ ಅನೇಕ ಪುಸ್ತಕಗಳು ಪ್ರಕಟವಾದವು. ಸನಮಾಹಿ ಧರ್ಮದ ಬಗ್ಗೆ ಪವಿತ್ರ ಪುಸ್ತಕಗಳನ್ನು ಆಯ್ಕೆಮಾಡಲಾಯಿತು. ಇನ್ನೊಂದು ಕಡೆ, ಹಿಂದು, ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳ ಪ್ರಭಾವಗಳು ಪರ್ವತಪ್ರದೇಶಗಳು ಮತ್ತು ಕಣಿವೆಗಳಲ್ಲಿ ದಿನದಿನಕ್ಕೂ ಹೆಚ್ಚಾಯಿತು. ಇವನ್ನು ಹಿಂದು ದೇವಸ್ಥಾನಗಳು, ಚರ್ಚ್ ಮತ್ತು ಮಸೀದಿಗಳ ಹೆಚ್ಚುತ್ತಿರುವ ಸಂಖ್ಯೆ ಸೂಚಿಸಿದವು. ಸನಮಾಹಿ ಪುರಾಣಸಾಹಿತ್ಯದ ಪ್ರಕಾರ, ಮೈತೆಯಿಗಳು ಬ್ರಹ್ಮಾಂಡದ ಸೃಷ್ಟಿಕರ್ತ, ಮೈತೆಯಿಗಳ ಸರ್ವಶಕ್ತ ದೇವರಾದ ಸಿದಬಾಮಪುವಿನ ಪುತ್ರರಲ್ಲಿ ಒಬ್ಬನಾದ ಭಗವಾನ್ ಪಖಾಂಕ್ಬನ ವಂಶಸ್ಥರಾಗಿದ್ದಾರೆ.

ಮೈತೆಯಿ ಹಿಂದುಗಳು ಚರ್ಚಾಸ್ಪದವಾಗಿ ಕ್ಷತ್ರಿಯ ವಿಭಾಗಕ್ಕೆ ಸೇರಿದ್ದಾರೆ(ಉಪವಿಭಾಗಗಳು-ಮೈತೆಯಿ & ಖಾಂಗಾಬಾಕ್).ಅವರು ಭಗವಾನ್ ಅರ್ಜುನನ ವಂಶಸ್ಥರೆಂದು ಭಾವಿಸಲಾಗಿದೆ.[೨] ಅಲ್ಲದೇ ಗಣನೀಯ ಸಂಖ್ಯೆಯ ಬ್ರಾಹ್ಮಣರು(ಬಾಮೋನ್ ಎಂದು ಹೆಸರು)ಮತ್ತು ಶೂದ್ರ(ಲೋಯಿ ಮತ್ತು ಯೈತಿಬಿ ಎಂದು ಹೆಸರು),ಮೂಲತಃ ಬೆಂಗಾಲಿಗಳು,ಮೈತೆಯಿ ಸಮುದಾಯದಲ್ಲಿ ಮಿಳಿತವಾಗಿದ್ದಾರೆ.[೩] 1934ರಲ್ಲಿ ತಮ್ಮ ಧಾರ್ಮಿಕ ಚಟುವಟಿಕೆಗಳನ್ನು ನಿಯಂತ್ರಿಸಲು ಹಿಂದು ಮೈತೆಯಿ ಮಹಾರಾಜ ಚುರಾಚಂದ್ ಸಿಂಗ್ ನಾಯಕತ್ವದಲ್ಲಿ ನಿಖಿಲ್ ಹಿಂದು ಮಣಿಪುರ ಮಹಾಸಭಾವನ್ನು ನಿರ್ಮಿಸಿದರು.

ಮೈತೆಯಿನ ಸುಮಾರು 8%ಜನರು ಮುಸ್ಲಿಮರಾಗಿದ್ದು(ಪಾಂಗಾಳ್), ಅವರನ್ನು ಮಣಿಪುರಕ್ಕೆ ವಲಸೆ ಬಂದ ಬೆಂಗಾಳಿ ಮುಸ್ಲಿಮರ ವಂಶಸ್ಥರೆಂದು ಭಾವಿಸಲಾಗಿದೆ.

ಹಿಂದುಗಳು ಬಹುತೇಕ ಇಂಫಾಲ್ ಪಶ್ಚಿಮ(ಜನಸಂಖ್ಯೆಯ 74.48% )ಇಂಫಾಲ್ ಪೂರ್ವ(60.87%), ವಿಷ್ಣುಪುರ್(71.46%),ತೌಬಾಲ್(60.72%) ಮತ್ತು ಸೇನಾಪತಿ(19.45%)ಭಾಗಗಳಲ್ಲಿ ಕೇಂದ್ರೀಕೃತರಾಗಿದ್ದಾರೆ.

ಮಣಿಪುರವು ಕೋಮು ಪ್ರಕ್ಷುಬ್ಧ ರಾಜ್ಯವಾಗಿದ್ದು, ಅನೇಕ ಕೋಮುಗಲಭೆಗಳಿಗೆ ಸಾಕ್ಷಿಯಾಗಿದೆ. ಅನೇಕ ಪ್ರಕ್ಷುಬ್ಧತೆಗಳು ಜನಾಂಗೀಯ ಸ್ವರೂಪಗಳಿಂದ ಕೂಡಿದ್ದು, ಬುಡಕಟ್ಟು ಜನಾಂಗಗಳಾದ ನಾಗಾ ಮತ್ತು ಕುಕಿ, ಕುಕಿ ಮತ್ತು ಜೋಮಿ ನಡುವೆ ಸಂಭವಿಸುತ್ತದೆ. ಆದಾಗ್ಯೂ, 1993ರಲ್ಲಿ ಬಹುಸಂಖ್ಯಾತ ಮೈತೆಯಿ ಮತ್ತು ಅಲ್ಪಸಂಖ್ಯಾತ ಮುಸ್ಲಿಂ ಪಾಂಗಾಳ್ ಸಮುದಾಯದ ನಡುವೆ ಕಣಿವೆಯನ್ನು ಆವರಿಸಿದ ವ್ಯಾಪಕ ಪ್ರಮಾಣದ ಗಲಭೆಗಳು ಸಂಭವಿಸಿದವು.

ಜಾತಿ ಪದ್ಧತಿ

[ಬದಲಾಯಿಸಿ]

ಪ್ರಾಚೀನ ಮಣಿಪುರದ ಜನರು ಜಾತಿಪದ್ಧತಿಯನ್ನು ಹೊಂದಿರುವುದಿಲ್ಲ. ಆದಾಗ್ಯೂ, ಮಣಿಪುರದ ಹಿಂದು ಸಮುದಾಯವು ಐದು ಜಾತಿಗಳಾಗಿ ಉಪವಿಭಜಿತವಾಗಿದೆ. ಅತೀ ದೊಡ್ಡ ಉಪವಿಭಜನೆಯಾದ ಕ್ಷತ್ರಿಯ ಜನಸಂಖ್ಯೆಯ ಬಹುತೇಕ ಮಂದಿಯಿಂದ ಕೂಡಿದೆ.[೪]

 • ಮೈತೆಯಿ ಕ್ಷತ್ರಿಯ ನಿಂಗ್‌ತೌಜಾ ಜಾತಿ ಶ್ರೇಣೀಕರಣದಲ್ಲಿ ಅತ್ಯುನ್ನತ ವಿಭಾಗವನ್ನು ಹೊಂದಿದೆ. ಅವರು ಕುಲದ ಹೊರಗೆ ವಿವಾಹವಾಗುವ ಯೇಕ್ ಸಲೈ , ನಿಂಗ್‌ತುಜಾ, ಆಂಗೋಂ, ಲುವಾಂಗ್, ಖುಮಾನ್, ಖಾಬಾ-ಜಾನಬಾ, ಮಂಗಂಗ್ & ಮೋಯಿರಂಗ್ ಹೀಗೆ ಏಳು ಕುಲಗಳಾಗಿ ವಿಭಜನೆಯಾಗಿವೆ. ಈ ಕುಲಗಳು ಅನೇಕ ಉಪಕುಲಗಳು ಅಥವಾ ಯುಮ್ನಾಕ್‌ ಗಳಾಗಿ ವಿಭಜನೆಯಾಗಿವೆ. ಪ್ರತಿ ಉಪಕುಲವು ವಂಶ ಅಥವಾ ಸಾಗೇಯ್ ಆಗಿ ಮತ್ತಷ್ಟು ವಿಭಜನೆಯಾಗಿದೆ. ಮೈತೆಯಿ ಸ್ವಯಂ ಖಾತ್ರಿಯ ಎಂದು ತಮ್ಮನ್ನು ಕರೆದುಕೊಳ್ಳುತ್ತಾರೆ ಮತ್ತು ಸಾಮಾನ್ಯವಾಗಿ ಎದೆಯ ಮೇಲೆ ಪವಿತ್ರದಾರ(ಜನಿವಾರ)ಧರಿಸುತ್ತಾರೆ. ಸಾಂಪ್ರದಾಯಿಕವಾಗಿ ಮಾಂಸದ ಭಕ್ಷ್ಯಗಳನ್ನು ಸೇವಿಸುವುದಿಲ್ಲ. ಆದರೂ ಮೀನಿನ ಖಾದ್ಯ ಸೇವನೆಗೆ ಅನುಮತಿ ನೀಡಲಾಗುತ್ತದೆ. ಆದಾಗ್ಯೂ, ಮಾಂಸದ ಸೇವನೆ ಇಂದು ಸಾಮಾನ್ಯ ಸಂಗತಿಯಾಗಿದೆ. ಸಂಪ್ರದಾಯವಾದಿ ಮೈತೆಯಿಯರು ಬ್ರಾಹ್ಮಣರಿಂದ ಅಡುಗೆ ತಯಾರಾಗಿದ್ದರೆ ಮಾತ್ರ ಹೊರಗೆ ಆಹಾರವನ್ನು ಸೇವಿಸುತ್ತಾರೆ. ಅವರು ಸಾಮಾನ್ಯವಾಗಿ ಇತರೆ ಜಾತಿಗಳಿಂದ ಬೇಯಿಸಲಾದ ಆಹಾರವನ್ನು ಸೇವಿಸಲು ನಿರಾಕರಿಸುತ್ತಾರೆ.
 • ಮೈತೆಯಿಬ್ರಾಹ್ಮಣ(ಬಾಮೋನ್/ಲೈರಿಕಿಯೆಂಗ್‌ಬಮ್ )ಉನ್ನತ ವರ್ಗದ ಜಾತಿಯಾಗಿದ್ದು,ಇವರು ಒಳಮಣಿಪುರದಾದ್ಯಂತ ಹರಡಿಕೊಂಡಿದ್ದಾರೆ. ಬಹುತೇಕ ಬಾಮೊನ್‌ರು ಜನಾಂಗೀಯ ಮಣಿಪುರಿಗಳಾಗಿದ್ದು, ಸಣ್ಣ ಭಾಗವು ಬಂಗಾಳ ಮತ್ತು ಒರಿಸ್ಸಾದ ವಲಸೆಗಾರರ ವಂಶಸ್ಥರಾಗಿದ್ದಾರೆ. ಬಹುತೇಕ ಸಾಮಾನ್ಯ ಕುಲನಾಮಗಳು ಶರ್ಮಾ, ಸಿಂಗ್, ಬಸು ಮತ್ತು ದಾಸ್.
 • ಮೈತೆಯಿನಂತರ ವಿಷ್ಣುಪ್ರಿಯ (ಮಾಯಾಂಗ್ / ಕತಚಿಯ )ಎರಡನೇ ಕ್ಷತ್ರಿಯ ಸಮುದಾಯವಾಗಿದೆ. ಮೈತೆಯಿ ರೀತಿಯಲ್ಲಿ ಅವರು ಸ್ವತಃ ತಮ್ಮನ್ನು ಖಾತ್ರಿಯ ಎಂದು ಕರೆದುಕೊಳ್ಳುತ್ತಾರೆ ಮತ್ತು ಎದೆಯಲ್ಲಿ ಪವಿತ್ರ ದಾರವನ್ನು ಧರಿಸುತ್ತಾರೆ.ಆದರೆ ಅವರು ಮೈತೆಯಿಯವರೋ ಅಲ್ಲವೋ ಎನ್ನುವುದು ವಿವಾದಾಸ್ಪದವಾಗಿದೆ.
 • ಲೋಯಿ ಚಾಕ್ಪಾ ಐವರು ಮಣಿಪುರಿ ಹಿಂದು ಜಾತಿಗಳಲ್ಲಿ ಒಂದಾಗಿದೆ. ಲೋಯಿಗಳು ಶೂದ್ರ ಎಂದು ಪರಿಗಣಿತರಾಗಿದ್ದಾರೆ ಮತ್ತು ಮೈತೆಯಿಗಿಂತ ಕಡಿಮೆ ಸ್ಥಾನಮಾನವನ್ನು ಹೊಂದಿದ್ದಾರೆ.
 • ಯಾತಿಬಿ (ಆಂದ್ರೊ ) ಅತೀ ಸಣ್ಣ ಸ್ವಗೋತ್ರ ವಿವಾಹದ ಗುಂಪಾಗಿತ್ತು,ತೌಬಾಲ್ ಮತ್ತು ವಿಷ್ಣುಪುರದಲ್ಲಿ ಕಂಡುಬರುತ್ತಾರೆ. ಯಾಯಿತಿಬಿ ಪ್ರಮುಖ ದಲಿತ ಸಮುದಾಯವಾಗಿದ್ದು, ಹೊರವಲಯದ ಪ್ರದೇಶಗಳಲ್ಲಿ ವಾಸಿಸುತ್ತಾರೆ.

ವರ್ಗೀಕರಣ

[ಬದಲಾಯಿಸಿ]

ನೆರೆಯ ನಾಗಾಗಳು ಮತ್ತು ಕುಕಿಳಿಗೆ ಭಿನ್ನವಾಗಿ, ಭಾರತ ಸರ್ಕಾರ ಬುಡಕಟ್ಟು ಜನಾಂಗಗಳಿಗೆ ಕಲ್ಪಿಸಿರುವ ಪರಿಶಿಷ್ಟ ಪಂಗಡದ ಮೀಸಲಾತಿ ಅನುಕೂಲಗಳಿಗೆ ಮೈತೆಯಿ ಅರ್ಹತೆ ಪಡೆದಿಲ್ಲ. 1932ರಲ್ಲಿ ಬ್ರಿಟಿಷ್ ಅಸ್ಸಾಂ ರಾಜ್ಯ ಸರ್ಕಾರವು ಮೈತೆಯಿ ಜನಾಂಗವನ್ನು ಬುಡಕಟ್ಟು ಜನಾಂಗವೆಂದು ವರ್ಗೀಕರಿಸುವುದಕ್ಕೆ ಬದಲುಮೇಲ್ಜಾತಿಯ ಹಿಂದು ಎಂದು ವರ್ಗೀಕರಿಸಿದ ಸತ್ಯವನ್ನು ಇದು ಆಧರಿಸಿದೆ.[೫]

ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಕೈಕೊಂಡ ಜನಗಣತಿ ಸಂದರ್ಭದಲ್ಲಿ, ಮಣಿಪುರಿ ಕ್ಷತ್ರಿಯರು ಅಸ್ಸಾಂ ಪ್ರೆಸಿಡೆನ್ಸಿಯಲ್ಲಿ ಏಕೈಕ ಮನ್ನಣೆ ಪಡೆದ ಕ್ಷತ್ರಿಯ ಸಮುದಾಯವಾಗಿದ್ದು, ಅಹೋಮ್ ಮುಂತಾದ ಇತರೆ ಕ್ಷತ್ರಿಯರಿಗೆ ಜನಗಣತಿ ನಡೆಸಿದವರು ಮನ್ನಣೆ ನೀಡಲು ನಿರಾಕರಿಸಿದರು.[೬] ಬ್ರಿಟಿಷ್ ಇಂಡಿಯದ 1901ರ ಜನಗಣತಿಯು ಅಸ್ಸಾಂನಲ್ಲಿ 185,597ಕ್ಷತ್ರಿಯರನ್ನು ಲೆಕ್ಕಹಾಕಿದ್ದು,ಅವರಲ್ಲಿ ಬಹುತೇಕ ಜನರು ಮಣಿಪುರಿಗಳು.[೭]

ಇವರು ಬಳಸುವ ಭಾಷೆಗೆ ಮೈತೆಯಿ-ಲಾನ್ ಎಂದು ಕರೆಯಲಾಗುತ್ತದೆ. ಇದು ಭಾಷೆಗಳ ಟಿಬೆಟೊ-ಬರ್ಮನ್ ಕುಟುಂಬಕ್ಕೆ ಸೇರಿದ್ದಾಗಿದೆ. ವಾಚ್ಯಾರ್ಥದಲ್ಲಿ ಮೈತೆಯಿಗಳ ಭಾಷೆ ಎಂದು ಇದರರ್ಥ. ಆದರೆ ಕೆಲವು ಕಾಲದಿಂದೀಚೆಗೆ ಇದು ಈಗ ಮಣಿಪುರಿ ಎಂದು ಹೆಸರಾಗಿದೆ. 1992ರಿಂದೀಚೆಗೆ ಈ ಭಾಷೆಯು ಭಾರತದ ಸಂವಿಧಾನದ 8ನೇ ಅನುಚ್ಚೇದಲ್ಲಿದೆ. ಸಾಮಾನ್ಯವಾಗಿ ಪಠ್ಯವನ್ನು ಬಂಗಾಳಿ ಲಿಪಿಯಲ್ಲಿ ಬರೆಯಲಾಗಿದೆ. ಮೈತೆಯಿ-ಮಾಯೆಕ್ಎಂದು ಕರೆಯುವ ಮೂಲ ಲಿಪಿಯು ದೀರ್ಘಕಾಲದವರೆಗೆ ಬಳಕೆಯು ತಪ್ಪಿಹೋಗಿದ್ದು ಇತ್ತೀಚೆಗೆ ಅದನ್ನು ಪುನಶ್ಚೇತನಗೊಳಿಸಲಾಗಿದೆ. ಲಿಪಿ ಮತ್ತು ಭಾಷೆಯನ್ನು ಮಣಿಪುರದಲ್ಲಿ ಈಗ ಶಾಲೆಗಳಲ್ಲಿ ಮತ್ತು ಕಾಲೇಜುಗಳಲ್ಲಿ ಕಲಿಸಲಾಗುತ್ತಿದ್ದು, ಬಂಗಾಳಿಲಿಪಿಯನ್ನು ಕೆಲವು ವರ್ಷಗಳಲ್ಲಿ ಸಂಪೂರ್ಣವಾಗಿ ಬದಲಿಸುವ ಗುರಿಯಿಂದ ಅದನ್ನು ಕಡ್ಡಾಯವಾಗಿ ಅನುಷ್ಠಾನಕ್ಕೆ ತರಲಾಗಿದೆ.

ಮೈತೆಯಿ ನಾಯಕ ಚಿಂಗ್ಸ್‌ಹೂಬಂ ಅಕಾಬಾ ಅವರನ್ನು ಅಭಿವೃದ್ಧಿ ಮತ್ತು ಅವರ ಹೆಸರಿನ ಜನಪ್ರಿಯತೆಗೆ ಸಂಬಂಧಪಟ್ಟಂತೆ 2006 ಡಿಸೆಂಬರ್ 31ರ ಮಧ್ಯರಾತ್ರಿ ಇಂಫಾಲದ ಅವರ ನಿವಾಸದ ಗೇಟ್‌ ಬಳಿ ಹತ್ಯಮಾಡಿದ ನಂತರ ಇಷ್ಟೊಂದು ಸುಧಾರಣೆಯು ಕಂಡುಬಂದಿದೆ.

ಈ ಲಿಪಿಯು ಈಶಾನ್ಯ ಭಾರತದ ಏಕೈಕ ಲಿಪಿಯಾಗಿದ್ದು, ಇದನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತರಲು ಜನತೆ ಪ್ರಯತ್ನಿಸುತ್ತಿದೆ.

ಸಮರಕಲೆಗಳು

[ಬದಲಾಯಿಸಿ]

ಮೀತಯಿಗಳು ಮಾನವ ಸಮಾಜದಲ್ಲಿ ಎರಡು ಬಗೆಯ ಸಮರಕಲೆಗಳನ್ನು ಪರಿಚಯಿಸಿದ್ದಾರೆ. ಅವು " ಸರಿತ್ ಸರಕ್" ಮತ್ತು " ತಂಗ್-ತಾ". ಸ್ವಯಂ ರಕ್ಷಣೆಯ ಕಲೆ ಸರಿತ್-ಸರಕ್ ಸಮರಕಲೆಯಾಗಿದ್ದು,ಶತ್ರುವಿನ ದಾಳಿಯಿಂದ ರಕ್ಷಿಸಿಕೊಳ್ಳಲು ಬಯಸುವ ಮೀತಯಿ ಜನರ ನಡುವೆ ಅತೀ ಮುಖ್ಯ ಸಮರಕಲೆಯಾಗಿದೆ. ನಿಶ್ಶಸ್ತ್ರ ಸಮರ ಕಲೆಯಾಗಿರುವ ಸರಿಕ್ ಸರಕ್ ಇತರೆ ಸಮರಕಲೆಗಳ ರೂಪಗಳಿಗಿಂತ ತೀರಾ ಭಿನ್ನವಾಗಿದೆ. ಅದೇ ಶಾಲೆಯ ಯಾವುದೇ ಸಮರಕಲೆಗೆ ಹೋಲಿಸಿದರೆ,ಅದರ ತಪ್ಪಿಸಿಕೊಳ್ಳುವ ಮತ್ತು ದಾಳಿ ಮಾಡುವ ಕ್ರಿಯೆಯು ದೋಷರಹಿತವಾಗಿದೆ.[ಸೂಕ್ತ ಉಲ್ಲೇಖನ ಬೇಕು]

ತಂಗ್-ತಾಅತ್ಯಂತ ಜನಪ್ರಿಯ ಮೀತರ್ ಸಮರಕಲೆಯಾಗಿದ್ದು, ಪ್ರಸಕ್ತ ರಾಜ್ಯದ ಬಹುಭಾಗ ಮತ್ತು ರಾಜ್ಯದ ಹೊರಗೆ ಕಾಣಬಹುದು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರದರ್ಶನಗಳ ಮೂಲಕ ಇವನ್ನು ವಿಶ್ವದಾದ್ಯಂತ ಅನೇಕ ಸಮ್ಮೇಳನಗಳಲ್ಲಿ ಕಾಣಬಹುದು. ಅಸ್ತ್ರದೊಂದಿಗೆ ಹೋರಾಟವು ಕತ್ತಿ, ಈಟಿ,ಕೊಡಲಿ ಮುಂತಾದವು ಒಳಗೊಂಡಿವೆ.

ತಂಗ್-ತಾ ಮತ್ತು ಸರಿಸ್-ಸರಕ್ ಇತಿಹಾಸವನ್ನು 17ನೇ ಶತಮಾನದ ಕಾಲದಲ್ಲಿ ಪತ್ತೆಹಚ್ಚಲಾಗಿದೆ. ತಂಗ್-ತಾ ಒಂದು ಅಥವಾ ಅದಕ್ಕಿಂತ ಹೆಚ್ಚು ವಿರೋಧಿಗಳ ವಿರುದ್ಧ ಕತ್ತಿ ಅಥವಾ ಈಟಿಯನ್ನು ಬಳಸುವುದನ್ನು ಒಳಗೊಂಡಿದೆ. ಸರಿತ್-ಸರಕ್ ಸಶಸ್ತ್ರ ಅಥವಾ ನಿಶ್ಶಸ್ತ್ರ ವೈರಿಗಳ ವಿರುದ್ಧ ಹೋರಾಡುವ ತಂತ್ರವಾಗಿದ್ದು,ಅನೇಕ ಸಂದರ್ಭಗಳಲ್ಲಿ ಈ ಸಮರಕಲೆಗಳ ತರಬೇತಿಯಲ್ಲಿ ಎರಡನ್ನೂ ಒಟ್ಟು ಸೇರಿಸಿ ತರಬೇತಿ ನೀಡುವ ಮಾರ್ಗವನ್ನು ಅನುಸರಿಸಲಾಗುತ್ತದೆ. ಬ್ರಿಟಿಷರ ವಿರುದ್ಧ ಸುದೀರ್ಘ ಕಾಲದವರೆಗೆ ಹೋರಾಟ ಮಾಡಲು ಈ ಸಮರಕಲೆಗಳನ್ನು ಮಣಿಪುರಿ ರಾಜರು ಅತ್ಯಂತ ಯಶಸ್ವಿಯಾಗಿ ಬಳಸಿದ್ದಾರೆ. ಈ ಪ್ರದೇಶದಲ್ಲಿ ಬ್ರಿಟಿಷರ ಸ್ವಾಧೀನದ ನಂತರ,ಸಮರಕಲೆಯನ್ನು ನಿಷೇಧಿಸಲಾಯಿತಾದರೂ, 1950ರ ದಶಕದ ನಂತರ ಈ ಕಲೆಗಳು ಮರು ಜೀವತಳೆದವು.

ತಂಗ್-ತಾವನ್ನು ಮೂರು ವಿಭಿನ್ನ ರೀತಿಯಲ್ಲಿ ಅಭ್ಯಸಿಸಲಾಗುತ್ತದೆ. ಮೊದಲ ವಿಧಾನವು ಸಂಪೂರ್ಣ ರೂಢಿಯ ಪ್ರಕಾರದ್ದಾಗಿದ್ದು, ತಂತ್ರದ ಅಭ್ಯಾಸಗಳಿಗೆ ಸಂಬಂಧಿಸಿದೆ. ಎರಡನೇ ವಿಧಾನವು ಕತ್ತಿ ಮತ್ತು ಈಟಿಯ ನೃತ್ಯವನ್ನೊಳಗೊಂಡ ಪ್ರದರ್ಶನವನ್ನು ಒಳಗೊಂಡಿರುತ್ತದೆ. ಈ ನೃತ್ಯಗಳನ್ನು ವಾಸ್ತವ ಹೋರಾಟದ ಅಭ್ಯಾಸಗಳಾಗಿ ಪರಿವರ್ತಿಸಬಹುದು. ಮೂರನೇ ವಿಧಾನವು ವಾಸ್ತವ ಹೋರಾಟದ ತಂತ್ರವಾಗಿದೆ.

ಡ್ರಾಗನ್ ದೇವರ ರಾಜ ಲೈನಿಂಗ್‌ದೋ ಪಾಕಾಂಬಾ ಖಾಗಿಯ ಅಸುರ ದೈತ್ಯ ಮೊಯಿಡಾನಾನನ್ನು ಈಟಿ ಮತ್ತು ಕತ್ತಿಯಿಂದ ಕೊಲ್ಲುವಂತೆ ಅವನ್ನು ಮುಂಗ್ಯಾಂಬಾ ರಾಜನಿಗೆ ಕೊಟ್ಟನೆಂಬ ದಂತಕಥೆಯಿದೆ. ಇನ್ನೊಂದು ದಂತಕಥೆಯ ಪ್ರಕಾರ, ದೇವರು ಜಗತ್ತಿನ ಸೃಷ್ಟಿಯೊಂದಿಗೆ ಈಟಿ ಮತ್ತು ಕತ್ತಿಯನ್ನು ತಯಾರಿಸಿದರು. ಮಣಿಪುರಿ ಸಮರಕಲೆಯ ಈ ವಿಸ್ಮಯಕರ ಸಂಪತ್ತನ್ನು ದೇವರ ರಾಜ ನಾಂಗ್ಡಾ ಲೈರೆಲ್ ಪಾಕಾಂಬಾ ದಿನಗಳಿಂದ ಚೆನ್ನಾಗಿ ರಕ್ಷಿಸಿಕೊಂಡು ಬರಲಾಗಿದೆ. ಅತ್ಯಾಕರ್ಷಕ ಮಣಿಪುರಿ ನೃತ್ಯ ಕೂಡ ಈ ಸಮರಕಲೆಗಳ ಮೂಲಗಳಿಂದ ಹುಟ್ಟಿಕೊಂಡಿದೆ.

ಆಟಗಳು ಮತ್ತು ಕ್ರೀಡೆಗಳು

[ಬದಲಾಯಿಸಿ]

ಪೋಲೊ ಮೀತಯಿಗಳು ಆಟದ ಪ್ರಪಂಚಕ್ಕೆ ಪೋಲೊ ಆಟವನ್ನು ಪರಿಚಯಿಸಿದ್ದಾರೆ. ಈ ಆಟವು ಈಶಾನ್ಯ ಭಾರತದ ಮಣಿಪುರ ಕಣಿವೆಯಲ್ಲಿ ಈಗಿನಿಂದ 1000ಕ್ಕೂ ಹೆಚ್ಚು ವರ್ಷಗಳ ಕೆಳಗೆ ಹುಟ್ಟಿಕೊಂಡಿದೆಯೆಂದು ಹೇಳಲಾಗಿದೆ.[ಸೂಕ್ತ ಉಲ್ಲೇಖನ ಬೇಕು] ಆಟದ ಮೂಲ ಹೆಸರನ್ನು ಸಾಗೋಲ್ ಕಾಂಜೇಯಿ ಎಂದು ಕರೆಯಲಾಗುತ್ತದೆ. "ಸಾಗೊಲ್" ಕುದುರೆಯನ್ನು ಸಂಕೇತಿಸುತ್ತದೆ ಮತ್ತು "ಕಾಂಜೇಯಿ" ಹಾಕಿ ದಾಂಡನ್ನು ಸಂಕೇತಿಸುತ್ತದೆ.

ಹಾಕಿ ದಾಂಡಿನೊಂದಿಗೆ ಆಡುವ ಮುಕ್ನಾ-ಕಾಂಜೇಯಿ ಕುಸ್ತಿ ಕೂಡ ಆಟವಾಗಿದ್ದು, ಇದು ಮಣಿಪುರದಲ್ಲಿ ಇನ್ನೂ ಆಡುತ್ತಿರುವ ಹಳೆಯ ಆಟವಾಗಿದೆ.ಇದು ಪಾನಾ ಎಂಬ ಗುಂಪಿನ ದೊಡ್ಡ ಸ್ಪರ್ಧೆಯಾಗಿದ್ದು, ಈ ಆಟದಲ್ಲಿ ಕ್ಲಬ್‌ಗಳ ರೀತಿಯ ಗುಂಪು ಸ್ಪರ್ಧಿಸುತ್ತದೆ.

"ಕಂಗ್-ಸನಾಬಾ" ಒಳಾಂಗಣ ಕ್ರೀಡೆಯಾಗಿದ್ದು,ಪ್ರಸಕ್ತ ಎಲ್ಲ ಸ್ಥಳಗಳಲ್ಲಿ ಆಡಲಾಗುತ್ತದೆ.

"ಕಂಗ್ ಕಾಂಜೇಯಿ:" [೧][ಶಾಶ್ವತವಾಗಿ ಮಡಿದ ಕೊಂಡಿ]

ಪೋಲೊ ರೀತಿಯಲ್ಲಿ, ಕಂಗ್ ಕಾಂಜೇಯಿ ಮಣಿಪುರಿಗಳ ಅತ್ಯಂತ ಜನಪ್ರಿಯ ಕ್ರೀಡೆಯಾಗಿದೆ. ಆ ಕ್ರೀಡೆಯನ್ನು ಪ್ರತಿಯೊಂದು ಕಡೆ ಏಳು ಆಟಗಾರರೊಂದಿಗೆ ಆಡಲಾಗುತ್ತದೆ. ಪ್ರತಿಯೊಬ್ಬ ಆಟಗಾರ 4 ಅಡಿ ಉದ್ದದ ಬಿದಿರಿನ ದಾಂಡಿನೊಂದಿಗೆ ಸಜ್ಜಾಗಿರುತ್ತಾನೆ. ಇದನ್ನು ಆಧುನಿಕ ಹಾಕಿ ದಾಂಡಿನ ಸ್ವರೂಪದಲ್ಲಿ ತಯಾರಿಸಲಾಗಿರುತ್ತದೆ. ಬಿದಿರಿನ ಬೇರಿನಿಂದ ತಯಾರಿಸಿದ ಚೆಂಡನ್ನು 200 x 80 ಗಜಗಳ ಸುತ್ತಳತೆಯ ಮೈದಾನದಲ್ಲಿ ಎಸೆಯುವ ಮೂಲಕ ಆರಂಭಿಸಲಾಗುತ್ತದೆ. ಆಟಗಾರ ಯಾವುದೇ ರೀತಿಯಲ್ಲಾದರೂ ಗೋಲ್‌ಗೆ ಚೆಂಡನ್ನು ಒಯ್ಯಬಹುದು. ಚೆಂಡನ್ನು ಕಾಲಿನಿಂದ ಹೊಡೆಯಬಹುದು. ಆದರೆ ದಾಂಡಿನಿಂದ ಚೆಂಡು ಹೊಡೆಯುವ ಮೂಲಕ ಮಾತ್ರ ಗೋಲನ್ನು ಗಳಿಸಬೇಕು. ಯಾವುದೇ ಗೋಲಿನ ಕಂಬವಿರುವುದಿಲ್ಲ ಮತ್ತು ಗೋಲಿನ ಗೆರೆಯನ್ನು ಚೆಂಡು ಪೂರ್ಣವಾಗಿ ದಾಟಿದಾಗ ಗೋಲು ಗಳಿಸಿದಂತಾಗುತ್ತದೆ. ಆಟಗಾರ ಸಾಮಾನ್ಯವಾಗಿ ಚೆಂಡನ್ನು ಒಯ್ಯುವಾಗ ಅಥವಾ ಗೋಲಿನತ್ತ ಹೊಡೆಯುವಾಗ ಎದುರಾಳಿ ಆಟಗಾರನನ್ನು ಸಂಧಿಸುತ್ತಾನೆ. ಈ ಮುಖಾಮುಖಿಯು ಬಲಪರೀಕ್ಷೆಗೆ ತಿರುಗಬಹುದು. ಇದನ್ನು ಸ್ಥಳೀಯವಾಗಿ ಮುಕ್ನಾ ಎಂದು ಕರೆಯಲಾಗುತ್ತದೆ. ಈ ಆಟಕ್ಕೆ ಹೆಚ್ಚು ದೈಹಿಕ ಬಲ, ವೇಗ ಮತ್ತು ತೀಕ್ಷ್ಣತೆ ಅವಶ್ಯಕವಾಗಿರುತ್ತದೆ. ಪ್ರಾಚೀನ ದಿನಗಳಲ್ಲಿ ಆಟದಲ್ಲಿ ಪ್ರಾವೀಣ್ಯತೆ ಸಾಧಿಸಿದ ಆಟಗಾರರು ರಾಜಪ್ರಭುತ್ವದಿಂದ ಸೌಲಭ್ಯಗಳನ್ನು ಮತ್ತು ಬಹುಮಾನಗಳನ್ನು ಪಡೆಯುತ್ತಿದ್ದರು.

ಹಿಯಾಂಗ್ ತಾನ್ನಾಬಾ: [೨][ಶಾಶ್ವತವಾಗಿ ಮಡಿದ ಕೊಂಡಿ]

ಕ್ರೀಡೆಗಳಲ್ಲಿ ಆಸಕ್ತಿ ಕೊರತೆಯಿರುವ ಪ್ರೇಕ್ಷಕರಲ್ಲಿ ಅತ್ಯಂತ ಉತ್ಸಾಹ ಮೂಡಿಸುವ, ಕ್ರೀಡೆಯು ಹಿಯಾಂಗ್ ತಾನ್ನಾಬಾ(ದೋಣಿ ಸ್ಪರ್ಧೆ)ಯಾಗಿದ್ದು, ಇದರಲ್ಲಿ ವಿವಿಧ ಪನ್ನಾಗಳು ಸಾಮಾನ್ಯವಾಗಿ ಸ್ಪರ್ಧಿಸುತ್ತಾರೆ. ಈ ಕ್ರೀಡೆಯು ನೇರ ರಾಜಮನೆತನದ ಆಶ್ರಯವನ್ನು ಪಡೆದಿದ್ದು, ರಾಜನು ಒಂದು ಬಾರಿ ದೋಣಿಯಲ್ಲಿ ಕುಳಿತುಕೊಳ್ಳುತ್ತಾರೆ. ಎರಡರ ಸಂಖ್ಯೆಯಲ್ಲಿರುವ ರಾಯಲ್ ದೋಣಿಗಳು ಚುಕ್ಕಾಣಿಯಲ್ಲಿ ಚಿಂಗ್‌ಲೈ(ಡ್ರ್ಯಾಗನ್‌ಗಳು)ಚಿಹ್ನೆಗಳನ್ನು ಹೊಂದಿರುತ್ತದೆ. ಕಾಲುವೆಯ ಎರಡೂ ಬದಿಯಲ್ಲಿ ಪ್ರೇಕ್ಷಕರು ಈ ಸ್ಪರ್ಧೆಯನ್ನು ನೋಡಲು ನೆರೆಯುತ್ತಾರೆ. ಸುಮಾರು 70 ಅಂಬಿಗರು ತಮ್ಮ ಕೌಶಲಗಳನ್ನು ಪ್ರದರ್ಶಿಸುವುದು ರೋಮಾಂಚಕಾರಿ ಅನುಭವ ಉಂಟು ಮಾಡುತ್ತದೆ. ಈ ಸ್ಪರ್ಧೆಯ ಉದ್ದೇಶವು ಒಂದು ದೋಣಿ ಇನ್ನೊಂದು ದೋಣಿಯನ್ನು ಹಿಂದೆ ಹಾಕಿ ದಡವನ್ನು ಮುಟ್ಟುವುದಾಗಿದೆ. ದೋಣಿಗಳು ಹೀಗೆ ತೀರಾ ಸಮೀಪದಲ್ಲಿರುತ್ತವೆ ಮತ್ತು ಸ್ಪರ್ಧೆಯನ್ನು ಒಂದು ಅಥವಾ ಎರಡಡಿ ಅಂತರದಿಂದ ಸಾಮಾನ್ಯವಾಗಿ ಗೆಲ್ಲಲಾಗುತ್ತದೆ. ಈ ರೀತಿಯ ಕ್ರೀಡೆಗೆ ಮಣಿಪುರದ ರಾಜರು ಆಶ್ರಯ ನೀಡಿದ್ದು, ಮಣಿಪುರದಲ್ಲಿ ಅತ್ಯಂತ ಜನಪ್ರಿಯ ಕ್ರೀಡೆಯೆಂದು ಪರಿಗಣಿಸಲಾಗಿದೆ. ' ತಂಗ್ ತಾ & ಸರಿತ್ ಸರಕ್ (ಮಣಿಪುರಿ ಸಮರಕಲೆಗಳು)[೩][ಶಾಶ್ವತವಾಗಿ ಮಡಿದ ಕೊಂಡಿ]

ಇವುಗಳು ಮಣಿಪುರಿ ಸಮರಕಲೆಗಳಾಗಿದ್ದು, ಇದರ ಸಂಪ್ರದಾಯಗಳು ಶತಮಾನಗಳ ಕಾಲ ಸಾಗುತ್ತಾ ಬಂದಿದೆ. ಇದು ಶಕ್ತಿಯುತ ಮತ್ತು ಕೌಶಲ್ಯಪೂರ್ಣ ಕಲೆಯಾಗಿದ್ದು, ಪ್ರಾಚೀನ ದಿನಗಳಲ್ಲಿ ಶಾಂತಿ ಕಾಲದಲ್ಲಿ ತಮ್ಮ ಸಮರಕೌಶಲವನ್ನು ಸಾಣೆಹಿಡಿಯುವ ವಿಧಾನವಾಗಿತ್ತು. ಪ್ರತಿಯೊಬ್ಬ ಮಣಿಪುರಿ ಕಾದಾಳುವಾಗಿದ್ದು, ಯುದ್ಧದ ಸಂದರ್ಭದಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸುವುದು ಅಗತ್ಯವಾಗಿತ್ತು. ಸುದೀರ್ಘ ಮತ್ತು ನಿಖರ ಅಭ್ಯಾಸಗಳು ಇದಕ್ಕೆ ಅಗತ್ಯವಾಗಿದ್ದು, ದೈರ್ಯಶಾಲಿ ಮತ್ತು ಕ್ರೀಡಾಳು ಮಾತ್ರ ಇದರಲ್ಲಿ ಪ್ರಾವೀಣ್ಯತೆ ಸಾಧಿಸಲು ಸಾಧ್ಯವಾಗುತ್ತದೆ. ಈ ಕಲೆಯು ಇಂದು ವ್ಯಾಪಕ ಆಚರಣೆಗಳು ಮತ್ತು ನಿಯಮಗಳನ್ನು ಒಳಗೊಂಡಿದ್ದು, ಇದನ್ನು ಸ್ಪರ್ಧಿಗಳು ಕಟ್ಟುನಿಟ್ಟಾಗಿ ಆಚರಿಸುತ್ತಾರೆ. ಮೇಲಿನದಲ್ಲದೇ, ಲಾಮ್ಜೆಲ್(ಓಡುವ ಸ್ಪರ್ಧೆ), ಮಾಂನ್ಜಂಗ್(ಬ್ರಾಡ್ ಜಂಪ್(ಉದ್ದ ಜಿಗಿಯುವಿಕೆ)ಇತರೆ.

ಸಾಗೋಲ್ ಕಾಂಜೇಯಿ(ಪೋಲೊ) [೪][ಶಾಶ್ವತವಾಗಿ ಮಡಿದ ಕೊಂಡಿ]

ಮಣಿಪುರಿ ಸಾಗೋಲ್ ಕಾಂಜೇಯಿಯನ್ನು ಅಂತಾರಾಷ್ಟ್ರೀಯ ಸಮುದಾಯವು ಪೋಲೊ ರೀತಿಯಲ್ಲಿ ಅಳವಡಿಸಿದ್ದು, ಇದನ್ನು ವಿಶ್ವಾದ್ಯಂತ ಈಗ ಆಡಲಾಗುತ್ತಿದೆ. ದೇವರು ಈ ಕ್ರೀಡೆಯನ್ನು ಆಡಿದ ಸಂದರ್ಭದಲ್ಲಿ 'PUYAS' ಪೌರಾಣಿಕ ಯುಗದಲ್ಲಿ ಇದರ ಮೂಲವನ್ನು ಗುರ್ತಿಸುತ್ತದೆ. ಪ್ರತಿಯೊಂದು ಕಡೆ 7 ಆಟಗಾರರೊಂದಿಗೆ ಈ ಕ್ರೀಡೆಯನ್ನು ಆಡಲಾಗುತ್ತದೆ. ಇವರು 4/5 ಅಡಿ ಎತ್ತರವಿರುವ ಕುದುರೆಗಳ ಮೇಲೆ ಹತ್ತಿ ಈ ಕ್ರೀಡೆಯನ್ನು ಆಡುತ್ತಾರೆ. ಪ್ರತಿಯೊಬ್ಬ ಆಟಗಾರ ಬಿದಿರಿನಿಂದ ತಯಾರಿಸಿದ ಪೋಲೊ ದಾಂಡಿನಿಂದ ಸಜ್ಜಾಗಿರುತ್ತಾನೆ. ಹೊಡೆಯುವ ತುದಿಯಲ್ಲಿ ಕಿರಿದಾದ ಕೋನದ ಮರದ ತಲೆಯನ್ನು ಭದ್ರಪಡಿಸಲಾಗಿರುತ್ತದೆ. 14 ಇಂಚುಗಳ ಅಗಲದ ಚೆಂಡನ್ನು ಬಿದಿರಿನ ಬೇರಿನಿಂದ ತಯಾರಿಸಲಾಗಿರುತ್ತದೆ. ಕುದುರೆಯ ಮೇಲಿರುವ ಆಟಗಾರರು ಚೆಂಡನ್ನು ಗೋಲಿನೊಳಕ್ಕೆ ಹೊಡೆಯುತ್ತಾರೆ. ತೀವ್ರ ಚಟುವಟಿಕೆಯ ಮತ್ತು ಉಲ್ಲಾಸದಾಯಕವಾದ ಈ ಕ್ರೀಡೆಯು ಎರಡು ಶೈಲಿಗಳಲ್ಲಿ ಆಡಲಾಗುತ್ತದೆ- PANA ಅಥವಾ ಮೂಲ ಮಣಿಪುರಿ ಶೈಲಿ ಮತ್ತು ಅಂತಾರಾಷ್ಟ್ರೀಯ ಶೈಲಿಯಾದ ಪೋಲೊ. ಅರವತ್ತರ ಆಸುಪಾಸಿನ ಮಣಿಪುರಿ ಆಟಗಾರರು,ಎಪ್ಪತ್ತರ ವಯಸ್ಸಿನವರು ಕೂಡ ಪೂರ್ಣ ನಾಗಾಲೋಟದಲ್ಲಿ ಕುದುರೆ ಸವಾರಿ ಮಾಡುವುದು ಮತ್ತು ಹುಮ್ಮಸ್ಸಿನಿಂದ ಸಾಗೋಲ್ ಕಾಂಜೇಯಿ ಆಡುವುದು ಆಹ್ಲಾದಕರವಾಗಿ ಕಾಣುತ್ತದೆ. ಕುದುರೆಗಳನ್ನು ಕೂಡ ಕಣ್ಣುಗಳು, ಹಣೆ ಮತ್ತು ಪಕ್ಕೆಯನ್ನು ರಕ್ಷಿಸುವ ವಿವಿಧ ಕವಚಗಳಿಂದ ಅಲಂಕರಿಸಲಾಗಿರುತ್ತದೆ. ಬ್ರಿಟೀಷರು ಸಾಗೋಲ್ ಕಾಂಜೇಯಿ ಕ್ರೀಡೆಯನ್ನು 19ನೇ ಶತಮಾನದಲ್ಲಿ ಮಣಿಪುರದಿಂದ ಕಲಿತರು. ಆ ಕ್ರೀಡೆಗೆ ಪರಿಷ್ಕರಣೆ ನಂತರ ಇದನ್ನು ಪೋಲೊ ರೀತಿಯಲ್ಲಿ ವಿವಿಧ ರಾಷ್ಟ್ರಗಳಿಗೆ ಸ್ಥಳಾಂತರಿಸಿದರು.

ಯೂಬಿ ಲಕ್ಪಿ (ಮಣಿಪುರಿ ಶೈಲಿಯ ರಗ್ಬಿ ಕ್ರೀಡೆ. ಅಡುಗೆ ಎಣ್ಣೆಯನ್ನು ಉಜ್ಜಿದ ತೆಂಗಿನಕಾಯಿಯೊಂದಿಗೆ ಅದನ್ನು ಆಡುತ್ತಿದ್ದರು. ) [೫][ಶಾಶ್ವತವಾಗಿ ಮಡಿದ ಕೊಂಡಿ]

ಯೂಬಿ ಲಕ್ಪಿ ಎಂದರೆ ಮಣಿಪುರಿಯಲ್ಲಿ "ತೆಂಗಿನಕಾಯಿ ಕಸಿಯುವುದು"ಎಂದರ್ಥ. ಇದನ್ನು ಅರಮನೆ ಮೈದಾನದ ಸುಂದರ ಹಸಿರು ಹುಲ್ಲಿನಲ್ಲಿ ಅಥವಾ ಬಿಜಯ್ ಗೋವಿಂದ ದೇವಸ್ಥಾನ ಮೈದಾನದಲ್ಲಿ ಆಡಲಾಗುತ್ತದೆ. ಪ್ರತಿಯೊಂದು ಕಡೆ ಮೈದಾನದಲ್ಲಿ 7 ಮಂದಿ ಆಟಗಾರರಿರುತ್ತಾರೆ. ಆ ಮೈದಾನವು 45 x 18 ಮೀಟರ್ ವಿಸ್ತರಣೆಯನ್ನು ಹೊಂದಿರುತ್ತದೆ. ಮೈದಾನದ ಒಂದು ತುದಿಯು ಆಯತಾಕಾರದ 4.5 x 3 ಮೀಟರ್ ಪೆಟ್ಟಿಗೆಯನ್ನು ಒಳಗೊಂಡಿರುತ್ತದೆ. ಅದರ ಒಂದು ಬದಿಯು ಗೋಲ್ ಗೆರೆಯ ಮಧ್ಯದ ಭಾಗವನ್ನು ಹೊಂದಿರುತ್ತದೆ. ಗೋಲು ಗಳಿಸಲು ಆಟಗಾರ ಮುಂಭಾಗದಿಂದ ಎಣ್ಣೆಲೇಪಿತ ತೆಂಗಿನಕಾಯಿಯೊಂದಿಗೆ ಗೋಲನ್ನು ಸಮೀಪಿಸಿ ಗೋಲಿನ ಗೆರೆಯನ್ನು ದಾಟಬೇಕು. ತೆಂಗಿನಕಾಯಿ ಚೆಂಡಿನ ಉದ್ದೇಶವನ್ನು ಈಡೇರಿಸುತ್ತದೆ. ಗೋಲಿನ ಗೆರೆಗೆ ಸ್ವಲ್ಪ ಹಿಂದೆ ಕುಳಿತಿರುವ ರಾಜ ಅಥವಾ ತೀರ್ಪುಗಾರರಿಗೆ ಇದನ್ನು ಅರ್ಪಿಸಲಾಗುತ್ತದೆ. ಆದಾಗ್ಯೂ, ಪ್ರಾಚೀನ ಕಾಲಗಳಲ್ಲಿ ತಂಡಗಳು ಸಮಾನ ಸ್ಪರ್ಧಿಗಳಿಂದ ಕೂಡಿರಲಿಲ್ಲ. ತೆಂಗಿನಕಾಯಿ ಕೈಯಲ್ಲಿರುವ ಆಟಗಾರ ಇನ್ನುಳಿದ ಎಲ್ಲ ಆಟಗಾರರನ್ನು ನಿಭಾಯಿಸಿಕೊಂಡು ಗೋಲು ಗಳಿಸಬೇಕಿತ್ತು.

ಮುಕ್ನಾ (ಮಣಿಪುರಿ ಕುಸ್ತಿ) [೬][ಶಾಶ್ವತವಾಗಿ ಮಡಿದ ಕೊಂಡಿ]

ಈ ಆಟವು ಮಣಿಪುರಿ ಶೈಲಿಯ ಕುಸ್ತಿಯಾಗಿದ್ದು, ಇಬ್ಪರು ಪುರುಷ ಎದುರಾಳಿಗಳ ನಡುವೆ ದೈಹಿಕ ಶಕ್ತಿ ಮತ್ತು ಕೌಶಲದ ಬಲ ಪರೀಕ್ಷೆಯಾಗಿದೆ. ಸಮಾನವಾದ ದೈಹಿಕ ದಾರ್ಢ್ಯತೆ, ತೂಕ ಮತ್ತು ವಯಸ್ಸಿನ ಅಥ್ಲೇಟ್‌ಗಳನ್ನು ಎದುರಾಳಿಗಳನ್ನಾಗಿ ಮಾಡಲಾಗುತ್ತದೆ. ಲಾಯಿ ಹಾರೋಬಾ ಉತ್ಸವದ ಸಮಾರೋಪ ಸಮಾರಂಭಗಳಲ್ಲಿ ಇದನ್ನು ಆಡಲೇಬೇಕಾದ ಕ್ರೀಡೆಯಾಗಿದೆ. ಮುಕ್ನಾ ಅತ್ಯಂತ ಜನಪ್ರಿಯ ಮತ್ತು ಪ್ರತಿಷ್ಠಿತ ಆಟವಾಗಿದೆ. ಹಿಂದಿನ ಕಾಲದಲ್ಲಿ ಈ ಆಟವು ರಾಜಾಶ್ರಯವನ್ನು ಪಡೆದಿತ್ತು.

ಕಂಗ್ [೭][ಶಾಶ್ವತವಾಗಿ ಮಡಿದ ಕೊಂಡಿ]

ದೊಡ್ಡ ಹೊರಮನೆಯ ಮಣ್ಣಿನ ನೆಲದ ಮೇಲೆ ಆಡುವ ಈ ಆಟವು, ದಂತ ಅಥವಾ ಅರಗಿನಿಂದ ನಿರ್ಮಿಸಿದ ಚಪ್ಪಟೆ ಮತ್ತು ಆಯತಾಕಾರದ ಉಪಕರಣವಾದ ಕಂಗ್‌ನಿಂದ ನಿರ್ದಿಷ್ಟ ಗುರಿಗಳನ್ನು ಹೊಡೆಯಲಾಗುತ್ತದೆ. ಸಾಮಾನ್ಯವಾಗಿ ಪ್ರತಿಯೊಂದು ತಂಡವು 7 ಪುರುಷ ಪಾಲುದಾರರನ್ನು ಹೊಂದಿರುತ್ತಾರೆ. ಆಟವನ್ನು ಮಿಶ್ರಿತ-ಡಬಲ್ಸ್ ಸ್ಪರ್ಧೆಯಾಗಿ ಕೂಡ ಆಡಲಾಗುತ್ತದೆ. ಚೈರೋಬಾ(ಮಣಿಪುರಿ ಹೊಸ ವರ್ಷದ ದಿನ)ಮತ್ತು ರಥ ಯಾತ್ರೆ ಉತ್ಸವದ ಸಂದರ್ಭದಲ್ಲಿ ಇದನ್ನು ಆಡಲಾಗುತ್ತದೆ. ಮಣಿಪುರಿಯು ಈ ಆಟದ ಕಾಲಮಿತಿಗೆ ಧಾರ್ಮಿಕವಾಗಿ ಬದ್ಧನಾಗಿರುತ್ತಾನೆ. ಆಟವನ್ನು ಕಾಲಮಿತಿಗಿಂತ ಹೆಚ್ಚು ಆಡಿದರೆ, ಕ್ಷುದ್ರ ಶಕ್ತಿಗಳು ಆಟಗಾರರು ಮತ್ತು ಪ್ರೇಕ್ಷಕರ ಮನಸ್ಸನ್ನು ಆಕ್ರಮಿಸುತ್ತವೆ ಎನ್ನುವ ಜನಪ್ರಿಯ ನಂಬಿಕೆ ಬೇರೂರಿದೆ.

ವಿಜ್ಞಾನ ಮತ್ತು ಸಾಂಪ್ರದಾಯಿಕ ಸಂಸ್ಕೃತಿ

[ಬದಲಾಯಿಸಿ]

ಶಾಲೆಯಲ್ಲಿ ಕಲಿಕೆಯ ಸಂದರ್ಭದಲ್ಲಿ ವಿಜ್ಞಾನಕ್ಕೆ ಆದ್ಯತೆ ನೀಡುವ ಮೀತಯಿ ವಿದ್ಯಾರ್ಥಿಗಳ ಸಂಖ್ಯೆಯಿಂದ ಮಿತಯಿಗಳು ವಿಜ್ಞಾನ ಪ್ರೇಮಿಗಳೆಂದು ಸೂಚಿತವಾಗಿದೆ. ಮೀತಯಿ ಸಮುದಾಯವು ಅವರ ತವರುಪಟ್ಟಣಗಳಲ್ಲಿ ವಿಜ್ಞಾನ ಸಂಸ್ಥೆಗಳನ್ನು ಮತ್ತು ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲು ಅತ್ಯಲ್ಪ ಸಂಪನ್ಮೂಲಗಳನ್ನು ಹೊಂದಿದ್ದರೂ ಕೂಡ ವಿಜ್ಞಾನವು ಮಿತಯಿ ಸಮುದಾಯದ ಸಂಸ್ಕೃತಿಯಾಗಿದೆ. ಆಸಕ್ತಿದಾಯಕ ಸಂಗತಿಯೆಂದರೆ, ಈಶಾನ್ಯ ಭಾರತದಿಂದ ವಿಜ್ಞಾನ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಆರಿಸಿಕೊಂಡ ಜನರಲ್ಲಿ ಮೀತಯಿಗಳು ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ.[ಸೂಕ್ತ ಉಲ್ಲೇಖನ ಬೇಕು] ಅಷ್ಟೇ ಅಲ್ಲದೇ, ಅನೇಕ ವಿಜ್ಞಾನ ಆಧಾರಿತ ಶಿಕ್ಷಣತಜ್ಞರು ಮತ್ತು ವೃತ್ತಿಪರರು ವಿಶ್ವಾದ್ಯಂತ ಕೆಲಸ ಮಾಡುತ್ತಿದ್ದಾರೆ. ಗಮನಿಸಬಹುದಾದ ಅಂಕಿಅಂಶಗಳಲ್ಲಿ ಒಂದು-ದೆಹಲಿಯಲ್ಲಿ ಮಾತ್ರ(ವಿಶ್ವವಿದ್ಯಾನಿಲಯಗಳು ಮತ್ತು ಸಂಸ್ಥೆಗಳು)ವಿಜ್ಞಾನ ಕ್ಷೇತ್ರದಲ್ಲಿ 70ಕ್ಕೂ ಹೆಚ್ಚು ಮೈತೆಯಿ ಸಂಶೋಧನೆ ವಿದ್ಯಾರ್ಥಿಗಳಿದ್ದಾರೆ. ಮೈತೆಯಿ ಸಂಶೋಧಕರು/ವಿಜ್ಞಾನಿಗಳಲ್ಲಿ ಅನೇಕ ಮಂದಿ ಪರಿಣತರಿಂದ ವಿಮರ್ಶೆಗೊಳಗಾದ ಅತ್ಯಂತ ಪ್ರಭಾವಶಾಲಿ ಪತ್ರಿಕೆಗಳಿಗೆ ಕೊಡುಗೆ ನೀಡಿದ್ದಾರೆ.[ಸೂಕ್ತ ಉಲ್ಲೇಖನ ಬೇಕು] ದೊಡ್ಡ ಸಂಖ್ಯೆಯ ವೈದ್ಯರು, ದಾದಿಯರು ಮತ್ತು ಎಂಜಿನಿಯರುಗಳು ವಿಶ್ವದ ವಿವಿಧ ಭಾಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ವ್ಯಕ್ತಿಗಳು ರಾಜ್ಯ ಮತ್ತು ಪ್ರದೇಶಕ್ಕೆ ಒಳ್ಳೆಯ ಹೆಸರು ತಂದಿರುವುದಕ್ಕೆ ಶ್ಲಾಘನೀಯರಾಗಿದ್ದಾರೆ. ಈಶಾನ್ಯ ಪ್ರದೇಶದ ಇತರೆ ಸಮುದಾಯಗಳಿಗೆ ವಿಜ್ಞಾನ ಕ್ಷೇತ್ರದಲ್ಲಿ ಮತ್ತು ವಿಜ್ಞಾನ ಬೋಧನೆಗಳಲ್ಲಿ ಮೈತೆಯಿ ಪಾತ್ರಗಳು ಮತ್ತು ಕೊಡುಗೆಗಳು ಕೂಡ ಪ್ರಸ್ತಾಪಿಸಲು ಯೋಗ್ಯವಾಗಿದೆ.[೮] ಸಾಮಾನ್ಯ ಮಾನವಪೀಳಿಗೆಯ, ವಿಶೇಷವಾಗಿ ಈಶಾನ್ಯ ಪ್ರದೇಶದ ಅಭಿವೃದ್ಧಿಗೆ ಮೈತೆಯಿ ವೈಜ್ಞಾನಿಕ ಮನಸ್ಸುಗಳನ್ನು ಚಾಲಕಶಕ್ತಿಯಾಗಿ ಬಳಸಿಕೊಂಡು, ಪ್ರಸರಣ ಮಾಡಬೇಕಾಗಿದೆ.

ಉಡುಪಿನ ಶೈಲಿ

[ಬದಲಾಯಿಸಿ]

ಮೀತಿಯ ಪುರುಷರು ಮತ್ತು ಮಹಿಳೆಯರು ಖಾಮೆನ್ ಚಾತ್ಪಾ ಫಿ(ಏಳು ವಿವಿಧ ಬಣ್ಣಗಳಿಂದ ಮುದ್ರಿತ ಉಡುಪುಗಳು)ಯನ್ನು ಬಳಸುತ್ತಾರೆ. ಮತಕ್ರಿಯಾ ವಿಧಿಗಳ ಆಚರಣೆಯಲ್ಲಿ ಇದು ಸಾಂಪ್ರದಾಯಿಕವಾಗಿ ಅತೀ ಮುಖ್ಯವಾದ ಉಡುಪಾಗಿದೆ. ಈ ಉಡುಪುಗಳು ಶರ್ಟುಗಳು-(ಕುರ್ತಾ)ಮತ್ತು ಬಟ್ಟೆಗಳು-(ಕುಮಿಸ್) ರೂಪದಲ್ಲಿರುತ್ತವೆ. ಕಾಮೇನ್‌ಚಾತ್ಪಾದ ಏಳು ವಿಭಿನ್ನ ಬಣ್ಣಗಳಿದ್ದು, ಪ್ರತಿಯೊಂದು ಉಡುಪಿನ ಆಯಾ ಬಣ್ಣವು ಮೀತೈನ ಏಳು ಕುಲಗಳ ಬಣ್ಣದ ಸಂಕೇತವನ್ನು ಆಧರಿಸಿದೆ. ಈ ರೀತಿಯ ಉಡುಪುಗಳು ಅಪರೂಪವಾಗಿದ್ದು, ಎಚ್ಚರಿಕೆಯಿಂದ ರಕ್ಷಿಸಬೇಕಾಗುತ್ತದೆ.

ಸಾಮಾನ್ಯ ಉಡುಪಿಗಾಗಿ ಮೀತಯಿ ಮಹಿಳೆಯರು ವಾಂಗ್‌ಕೇ ಫಿ, ಮೊಯಿರಕಾಂಗ್ ಫಿ ಮುಂತಾದ ವಿನ್ಯಾಸಗಳನ್ನು ಸೃಷ್ಟಿಸಿದ್ದಾರೆ.

ಪ್ರಮುಖ ಮೈತೆಯಿಗಳು

[ಬದಲಾಯಿಸಿ]
 • ಖೈವೈರಕ್ಪಮ್ ಚಾವೋಬಾ
 • ಆಂಗೋಂ ಗೋಪಿ
 • ರಾಜ್‌ಕುಮಾರ್ ಸಿಂಗಜಿತ್ ಸಿಂಗ್
 • ಹಿಜಾಂ ಇರಾಬೊತ್ ಸಿಂಗ್
 • ರತನ್ ಥಿಯಾಮ್
 • ಸನಮಾಚಾ ಚಾನು

ಉಲ್ಲೇಖಗಳು

[ಬದಲಾಯಿಸಿ]
 1. Ethnologue.com
 2. http://www.e-pao.net/epSubPageExtractor.asp?src=news_section.opinions.Opinion_on_ಮಣಿಪುರ_Integrity_Issue.The_ಮೈತೆಯಿs_Question[ಶಾಶ್ವತವಾಗಿ ಮಡಿದ ಕೊಂಡಿ]
 3. http://books.google.co.in/books?id=-CzSQKVmveUC&pg=RA1-PA315&lpg=RA1-PA315&dq=manipuri+kshatriya&source=bl&ots=4MRROwdQfn&sig=gceQska3SsiiblOmTVxptc8_7NQ&hl=en&ei=GVbuStyRPNLakAXb3cWSDw&sa=X&oi=book_result&ct=result&resnum=10&ved=0CCAQ6AEwCQ#v=onepage&q=manipuri%20kshatriya&f=false
 4. http://books.google.co.in/books?id=bQQNCU-QWBAC ಮಣಿಪುರದ ಪಂಗಡಗಳು ಮತ್ತು ಜಾತಿಗಳು: ಸಿಪ್ರಾ ಸೇನ್ ಅವರಿಂದ ವಿವರಣೆ ಮತ್ತು ಆಯ್ದ ಗ್ರಂಥಸೂಚಿ
 5. http://mahasabha.org/index.php?option=com_content&view=article&id=47&Itemid=53
 6. https://books.google.com/books?id=z64JAAAAIAAJ&pg=PA566
 7. https://books.google.com/books?id=z64JAAAAIAAJ&pg=PA332
 8. Khwairakpam Gajananda. "Science and Technology (S&T) in Manipur".

ಹೊರಗಿನ ಕೊಂಡಿಗಳು

[ಬದಲಾಯಿಸಿ]