ಮಂಚೀಕೆರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇದು ಯಲ್ಲಾಪುರ ತಾಲ್ಲುಕಿನಲ್ಲಿ ಬರುವ ಒಂದು ಹಳ್ಳಿ.ಯಾರಾದರೂ ಒಮ್ಮೆ ಬಂದರೆ ಮತ್ತೆ ಮತ್ತೆ ಬರಬೇಕು ಅನ್ನಿಸುವಂತಿರುವ ಈ ಊರು .ಇರುವುದು ಯಲ್ಲಾಪುರದಿಂದ ಸುಮಾರು ೧೮ ಕಿ.ಮೀ.ಗಳಷ್ಟು ದೂರದಲ್ಲಿ ಸಿರಸಿಗೆ ಹೋಗುವಾಗ ಸಿಗುತ್ತದೆ.ಇಲ್ಲಿಂದ ಸಿರ್ಸಿ ಸುಮಾರು ೩೬ ಕಿ.ಮೀ.ಗಳಷ್ಟು ದೂರ. ಮಂಚೀಕೆರೆ ಒಂದು ರೀತಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಬಹುಪಾಲು ಎಲ್ಲ ಸಾಂಸ್ಕ್ರತಿಕ ಕಲೆಗಳಿಗೆ ತನ್ನ ಕೊಡುಗೆಗಳನ್ನು ನೀಡಿದೆ.ಭರತನಾಟ್ಯ, ಹಿಂದುಸ್ಥಾನಿ ಸಂಗೀತ, ಯಕ್ಷಗಾನ, ನಾಟಕ ಇತ್ಯಾದಿ ಸಾಂಸ್ಕ್ರತಿಕ ಕಲೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ.