ವಿಷಯಕ್ಕೆ ಹೋಗು

ಭ್ರಮೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Hallucination
Classification and external resources
ICD-10R44
ICD-9780.1
DiseasesDB19769
MeSHD006212

ಭ್ರಮೆ ಎಂಬುದನ್ನು ಶಬ್ದದ ವಿಶಾಲಾರ್ಥದಲ್ಲಿ ಯಾವುದೇ ಪ್ರಚೋದನೆ ಇಲ್ಲದೇ ಆಗುವ ಅನುಭವ ಎಂದು ಅರ್ಥೈಸಬಹುದು. ನಿಖರವಾಗಿ ವ್ಯಾಖ್ಯಾನ ಮಾಡಬೇಕೆಂದರೆ, "ಭ್ರಮೆ ಎಂದರೆ ಎಚ್ಚರವಾದ ಪ್ರಜ್ಞಾಪೂರ್ವಕ ಸ್ಥಿತಿಯಲ್ಲಿಯೇ ಹೊರಗಿನ ಪ್ರಚೋದನೆಯಿಲ್ಲದೆ ಆಗುವ ಅನುಭವ. ಈ ಅನುಭವವು ಸ್ಫುಟತೆ, ಸಾಕಾರತೆ, ಮತ್ತು ಹೊರಗಿನ ಚಿತ್ತಗೋಚರ ದೇಶ(space-ಸ್ಪೇಸ್‌)ದಲ್ಲಿ ಸ್ಥಿತವಾಗಿರುವಿಕೆ ಮುಂತಾದ ನಿಜ ಅನುಭವದ ಲಕ್ಷಣಗಳನ್ನು ಹೊಂದಿರುತ್ತವೆ " ಎಂದು ಹೇಳಬಹುದು . ಎರಡನೆಯ ವ್ಯಾಖ್ಯಾನವು ಭ್ರಮೆಯನ್ನು ಸಂಬಂಧಿತ ಇತರ ಸಂಗತಿಗಳನ್ನು ಬೇರ್ಪಡಿಸುತ್ತದೆ. ಅವೆಂದರೆ, ಕನಸು, ಇದರಲ್ಲಿ ಎಚ್ಚರ ಇರುವುದಿಲ್ಲ; ಇಲ್ಲ್ಯೂಶನ್ (ಭ್ರಮೆ), ಇದು ವಿಕೃತ ಅಥವಾ ತಪ್ಪಾಗಿ ಅರ್ಥೈಸಿ ಕೊಂಡ ನಿಜ ಅನುಭವ; ಇಮೇಜರಿ (ಮಾನಸಿಕ ಪ್ರತಿಮೆ), ಇದು ನಿಜಾನುಭವವನ್ನು ಮಿಮಿಕ್ರಿ ಮಾಡುವುದಿಲ್ಲ, ಜೊತೆಗೆ ಸ್ವಂತದ ನಿಯಂತ್ರಣದಲ್ಲಿರುತ್ತದೆ; ಮತ್ತು ಸುಳ್ಳುಭ್ರಮೆ, ಇದು ನಿಜ ಅನುಭವವನ್ನು ಮಿಮಿಕ್ರಿ ಮಾಡುವುದಿಲ್ಲ, ಆದರೆ ಸ್ವಂತದ ನಿಯಂತ್ರಣದಲ್ಲೂ ಇರುವುದಿಲ್ಲ.[೧] ಭ್ರಮೆಗಳು "ಭ್ರಾಂತಿಯ (delusional) ಅನುಭವ"ಗಳಿಗಿಂತಲೂ ಭಿನ್ನವಾದವು. "ಭ್ರಾಂತಿಯ (delusional) ಅನುಭವ"ಗಳಲ್ಲಿ ಸರಿಯಾಗಿ ಗ್ರಹಿಸಿದ ಮತ್ತು ಅರ್ಥೈಸಿಕೊಂಡ ಯಥಾರ್ಥ ಅನುಭವಕ್ಕೆ ಸ್ವಲ್ಪ ಹೆಚ್ಚು (ಸಾಮಾನ್ಯವಾಗಿ ಅತಿರೇಕದ) ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ.

ಭ್ರಮೆಗಳು ಯಾವುದೇ ಇಂದ್ರಿಯ ಪ್ರಕಾರದಲ್ಲಿ ಸಂಭವಿಸಬಹುದು — ದೃಷ್ಟಿ, ಧ್ವನಿ, ವಾಸನೆ, ರುಚಿ, ಸ್ಪರ್ಶಜ್ಞಾನ, ಸ್ವಶಾರೀರಕ, ಸಂತುಲಿತಗ್ರಾಹಕ, ನೋವು, ಉಷ್ಣ ಮತ್ತು ಕ್ರೋನೋಸೆಪ್ಟಿವ್.

ಭ್ರಮೆಯ ಸೌಮ್ಯ ರೀತಿಯನ್ನು ಪ್ರಕ್ಷುಬ್ಧ ಸ್ಥಿತಿ ಎಂದು ಕರೆಯಲಾಗುತ್ತದೆ. ಮೇಲೆ ಹೇಳಿದ ಯಾವುದೇ ಇಂದ್ರಿಯ ಪ್ರಕಾರದಲ್ಲಿ ಇದು ಸಂಭವಿಸಬಹುದು. ಉದಾಹರಣೆಗೆ ಗೌಣ ದೃಷ್ಟಿಯಲ್ಲಿ ಚಲನೆಯನ್ನು ಕಾಣುವುದು, ಅಥವಾ ಕೀರಲು ಶಬ್ದಗಳು ಇಲ್ಲವೇ ಧ್ವನಿಗಳನ್ನು ಕೇಳುವುದು. ಸಂಶಯಗ್ರಸ್ತತೆಯ ವಿಧದ ದ್ವಂದ್ವವ್ಯಕ್ತಿತ್ವದಲ್ಲಿ ಧ್ವನಿ ಭ್ರಮೆಗಳು ಸರ್ವೇಸಾಮಾನ್ಯ. ಇವು ಉದಾರವಾಗಿರಬಹುದು (ರೋಗಿಗೆ ತನ್ನ ಬಗ್ಗೆ ಒಳ್ಳೆಯ ವಿಷಯಗಳನ್ನು ಹೇಳುವಂತಹುವು) ಅಥವಾ ರೋಗಿಯನ್ನು ನಿಂದಿಸುವ ಮಾತ್ಸರ್ಯದವೂ ಆಗಿರಬಹುದು. ಮಾತ್ಸರ್ಯ ವಿಧದ ಧ್ವನಿ ಭ್ರಮೆಗಳು ಸಾಮಾನ್ಯವಾಗಿ ಕೇಳಿಸುತ್ತವೆ. ಉದಾಹರಣೆಗೆ, ಜನರು ತನ್ನ ಹಿಂದೆ ತನ್ನ ಬಗ್ಗೆ ಮಾತನಾಡಿಕೊಳ್ಳುವ ಹಾಗೆ. ಧ್ವನಿ ಭ್ರಮೆಗಳ ಹಾಗೆ, ದೃಷ್ಟಿ ಭ್ರಮೆಗಳ ಮೂಲವೂ ತನ್ನ ಬೆನ್ನಹಿಂದೆ ನಡೆಯುವ ಘಟನೆಗಳೇ ಆಗಿರಬಹುದು. ತಮ್ಮನ್ನು ಯಾರೋ ದುರುದ್ದೇಶಪೂರಿತವಾಗಿ ನೋಡುತ್ತಿದ್ದಾರೆ ಎಂಬ ಭಾವನೆಯೇ ಅವರಲ್ಲಿ ಇರುತ್ತದೆ. ಧ್ವನಿ ಭ್ರಮೆಗಳನ್ನು ಮತ್ತು ದೃಷ್ಟಿ ಭ್ರಮೆಗಳನ್ನು ರೋಗಿಗಳು ಒಟ್ಟಿಗೇ ಅನುಭವಿಸುವುದೂ ಸಾಮಾನ್ಯವಲ್ಲದೇ ಇಲ್ಲ.

ಹಿಪ್ನಾಗೋಗಿಕ್ ಭ್ರಮೆಗಳು ಮತ್ತು ಹಿಪ್ನೊಪಾಂಪಿಕ್ ಭ್ರಮೆಗಳನ್ನು ಸಾಮಾನ್ಯ ಘಟನೆಗಳು ಎಂದು ಪರಿಗಣಿಸಲಾಗಿದೆ. ಹಿಪ್ನಾಗೋಗಿಕ್ ಭ್ರಮೆಗಳು ನಿದ್ದೆಗೆ ಜಾರುತ್ತಿರುವಾಗ ಸಂಭವಿಸಿದರೆ ಹಿಪ್ನೊಪಾಂಪಿಕ್ ಭ್ರಮೆಗಳು ಎಚ್ಚರಗೊಳ್ಳುತ್ತಿರುವಾಗ ಸಂಭವಿಸುತ್ತದೆ.

ಭ್ರಮೆಗಳು ಡ್ರಗ್‌ನ ಬಳಕೆಗೂ ಸಂಬಂಧಿಸಿದುದಾಗಿದೆ (ನಿರ್ದಿಷ್ಟವಾಗಿ ಡಿಲಿರಿಯಂಟ್‌ಗಳು), ನಿದ್ರಾ ಹೀನತೆ, ಮಾನಸಿಕ ಅಸ್ವಸ್ಥತೆ, ನರ ದೌರ್ಬಲ್ಯತೆ, ಮತ್ತು ಡಿಲೀರಿಯಂ‌ ಟ್ರೆಮೆನ್ಸ್‌.

ವರ್ಗೀಕರಣ[ಬದಲಾಯಿಸಿ]

ಭ್ರಮೆಗಳನ್ನು ಅನೇಕ ಬಗೆಗಳಲ್ಲಿ ಪ್ರಕಟಪಡಿಸಬಹುದು.[೨] ವಿವಿಧ ರೀತಿಯ ಭ್ರಮೆಗಳು ಬೇರೆ-ಬೇರೆ ಇಂದ್ರಿಯಗಳ ಮೇಲೆ ಪ್ರಭಾವ ಬೀರುತ್ತದೆ, ಕೆಲವೊಮ್ಮೆ ಒಟ್ಟೊಟ್ಟಿಗೆಯೂ ಸಂಭವಿಸಿ ಬಹು-ಇಂದ್ರಿಯ ಭ್ರಮೆಯನ್ನು ಸೃಷ್ಟಿಸುತ್ತವೆ.

ದೃಷ್ಟಿ[ಬದಲಾಯಿಸಿ]

ಭ್ರಮೆ ಎಂದಾಗ ಜನರು ಸಾಮಾನ್ಯವಾಗಿ ಈ ಪ್ರಕಾರದ ಬಗೆಗೇ ಮಾತನಾಡುತ್ತಾರೆ. ಇಲ್ಲಿ, ಇಲ್ಲದಿರುವ ವಸ್ತುಗಳನ್ನು ನೋಡುವ ಅಥವಾ ವಸ್ತುಸ್ಥಿತಿಗೆ ಸಮನ್ವಯವಾಗದ ದೃಶ್ಯ ಗ್ರಹಣವನ್ನು ಒಳಗೊಂಡಿರುತ್ತದೆ. ಇದಕ್ಕೆ ಹಲವಾರು ಕಾರಣಗಳಿವೆ, ಅವುಗಳನ್ನು ಹೀಗೆ ವಿಂಗಡಿಸಲಾಗಿದೆ - ಮನೋದೈಹಿಕತೆಯ (ಮೆದುಳಿನ ರಚನೆಯಲ್ಲಿ ವ್ಯತ್ಯಾಸ), ಮನೋಜೀವರಾಸಾಯನಿಕ (ನರವಾಹಕಗಳಲ್ಲಿ ವ್ಯತ್ಯಾಸ), ಮತ್ತು ಮನೋವೈಜ್ಞಾನಿಕ (ಉದಾ. ಪ್ರಜ್ಞೆಯ ಒಳಗೇ ನುಗ್ಗುವ ಅರ್ಥಪೂರ್ಣ ಅನುಭವಗಳು). ಮಾನಸಿಕ ಅಸ್ವಸ್ಥತೆಯಿಂದ ಹಿಡಿದು ಡೆಮೆನ್‌ಷಿಯಾ, ಮೈಗ್ರೇನ್‌ನವರೆಗೆ ಅನೇಕ ಅಸ್ವಸ್ಥತೆಗಳ ಕಾರಣ ದೃಷ್ಟಿ ಭ್ರಮೆ ಸಂಭವಿಸಬಹುದು, ಆದರೆ ದೃಷ್ಟಿ ಭ್ರಮೆಯನ್ನು ಅನುಭವಿಸಿದ ಮಾತ್ರಕ್ಕೆ ಏನಾದರೂ ಅಸ್ವಸ್ಥತೆ ಇರಬಹುದು ಎಂದು ಹೇಳಲು ಬರುವುದಿಲ್ಲ.[೩]

ಧ್ವನಿ[ಬದಲಾಯಿಸಿ]

ಒಂದು ಅಥವಾ ಎರಡು ಮೂರು ಧ್ವನಿಗಳು ಕೇಳಿಸುವ ಧ್ವನಿ ಭ್ರಮೆಗಳು ನಿರ್ದಿಷ್ಟವಾಗಿ ಛಿದ್ರಮನಸ್ಕತೆ ಅಥವಾ ಹುಚ್ಚು ಮುಂತಾದ ಮಾನಸಿಕ ಅಸ್ವಸ್ಥತೆಗೆ ಸಂಬಂಧಿಸಿದುದಾಗಿರುತ್ತದೆ ಮತ್ತು ಈ ಲಕ್ಷಣಗಳಿಗೆ ರೋಗನಿಧಾನಮಾಡುವಾಗ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಆದರೆ, ವಾಸಿಮಾಡಬಹುದಾದ ಮಾನಸಿಕ ರೋಗಗಳನ್ನು ಉಳ್ಳವರಿಗೂ ಕೆಲವೊಮ್ಮೆ ಧ್ವನಿ ಕೇಳಬಹುದು. ಅಜೈವಿಕ ಮೂಲದ ಧ್ವನಿ ಭ್ರಮೆಗಳು ಸಾಮಾನ್ಯವಾಗಿ ಸಂಶಯಗ್ರಸ್ತ ಛಿದ್ರಮನಸ್ಕತೆದಲ್ಲಿಯೇ ಹೆಚ್ಚು ಕಾಣ ಸಿಗುತ್ತವೆ. ಈ ರೋಗದಲ್ಲಿ ಕಂಡುಬರುವ ದೃಶ್ಯ ಭ್ರಮೆಗಳು ಸತ್ಯದ ಆಧಾರವಿಲ್ಲದ-ಯಾರೋ ತಮ್ಮನ್ನು ಗಮನಿಸುತ್ತಿದ್ದಾರೆ ಅಥವಾ ದಿಟ್ಟಿಸಿ ನೋಡುತ್ತಿದ್ದಾರೆ ಎಂಬ ಭಾವನೆಯಿಂದ ಉಂಟಾಗುತ್ತವೆ.

ತಲೆ ಸಿಡಿತ ಮತ್ತು ಕಿವಿಗಾನ ಮುಂತಾದವು ಇತರ ರೀತಿಯ ಧ್ವನಿ ಭ್ರಮೆಗಳು. ಇವು ನಿದ್ರಾ ಪಾರ್ಶ್ವವಾಯು ಸಮಯದಲ್ಲಿ ಸಂಭವಿಸಬಹುದು. ಎರಡನೆಯದರಲ್ಲಿ, ಸಾಮಾನ್ಯವಾಗಿ ಜನರು ತಮಗೆ ಪರಿಚಯವಿರುವ ಹಾಡುಗಳು ಕೇಳಿದಂತೆ ಭಾಸವಾಗುತ್ತವೆ. ಇತ್ತೀಚಿನ ವರದಿಗಳ ಪ್ರಕಾರ, ದೀರ್ಘಕಾಲದವರೆಗೆ ಸಂಗೀತವನ್ನು ಆಲಿಸುವುದರಿಂದ ಹೀಗೆ ಆಗಬಹುದು.[೪] ಮೆದುಳು ಕಾಂಡದ ಮೇಲಾದ ಗಾಯಗಳು (ಸಾಮಾನ್ಯವಾಗಿ ಪಾರ್ಶ್ವವಾಯುವಿನಿಂದ ಆಗುತ್ತದೆ); ಟ್ಯೂಮರ್‌ಗಳು, ಮೆದುಳುಜ್ವರ, ಅಥವಾ ಬಾವುಗಳು ಇದಕ್ಕೆ ಕಾರಣವಾಗಿರಬಹುದು.[೫] ಕಿವಿ ಕೇಳಿಸದಿರುವುದು ಮತ್ತು ಅಪಸ್ಮಾರವೂ ಇದಕ್ಕೆ ಕಾರಣವಾಗಿರಬಹುದು.[೬] ಧ್ವನಿ ಭ್ರಮೆಗಳು ಸ್ಪಷ್ಟ ಕನಸುಗಳ ಜಾಗೃತ ಪ್ರಾರಂಭದಿಂದಲೂ ಸಾಧ್ಯವಾಗುತ್ತದೆ.

ವಾಸನೆ[ಬದಲಾಯಿಸಿ]

ವಾಸನೆ ಭ್ರಮೆಯೆಂದರೆ ನಿಜವಾಗಿ ಇಲ್ಲದಿರುವ ವಾಸನೆಗಳನ್ನು ಕಾಣುವ ಲಕ್ಷಣ. ಸಾಮಾನ್ಯವಾದ ವಾಸನೆಗಳೆಂದರೆ ಕೊಳೆಯುತ್ತಿರುವ ಮಾಂಸ, ವಾಂತಿ, ಮೂತ್ರ, ಮಲ, ಹೊಗೆ ಮುಂತಾದ ದುರ್ವಾಸನೆಗಳು. ವಾಸನಾ ವ್ಯವಸ್ಥೆಯ ನರ ಅಂಗಾಂಶಗಳಿಗೆ ಜಖಂ‌ ಆಗುವುದರಿಂದಲೂ ಇದು ಬರಬಹುದು. ಅಂಟು ಜಾಡ್ಯ, ಮೆದುಳಿನ ಟ್ಯೂಮರ್‌, ಟ್ರಾಮ, ಶಸ್ರ್ತಚಿಕಿತ್ಸೆ ಮತ್ತು ವಿಷಗಳು ಅಥವಾ ಡ್ರಗ್‌ಗಳ ಸಂಪರ್ಕದಿಂದಲೂ ಬರಬಹುದು.[೭] ವಾಸನೆ ಭ್ರಮೆ ವಾಸನೆ ತೊಗಟೆಯ ಮೇಲೆ ಪರಿಣಾಮ ಬೀರುವ ಅಪಸ್ಮಾರದಿಂದಲೂ ಬರಬಹುದು ಮತ್ತು ಮಾನಸಿಕ ಕಾರಣಗ್ಳು ಇರಬಹುದು.[ಸೂಕ್ತ ಉಲ್ಲೇಖನ ಬೇಕು] ವಾಸನೆ ಭ್ರಮೆಯು ತಪ್ಪು ಗ್ರಹಿಕೆ ವಾಸನೆ ಭ್ರಮೆಗಿಂತ ವಿಭಿನ್ನವಾದುದು, ಇಲ್ಲಿ ವಾಸನೆ ಇರುತ್ತದೆ ಆದರೆ ಅದನ್ನು ಬೇರೆಯದೇ ವಾಸನೆಯೆಂದು ಗ್ರಹಿಸಲಾಗುತ್ತದೆ.

ವಾಸನೆಗೆ ಸಂಬಂಧಪಟ್ಟ ಭ್ರಮೆಗಳನ್ನು ತೀವ್ರ ತಲೆಶೂಲೆಯಲ್ಲಿಯೂ ಗುರುತಿಸಲಾಗಿದೆ, ಆದರೆ ಅದು ಎಷ್ಟರಮಟ್ಟಿಗೆ ಇರುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.[೮][೯]

ಸ್ಪರ್ಶಜ್ಞಾನ[ಬದಲಾಯಿಸಿ]

ಬೇರೆ ರೀತಿಯ ಭ್ರಮೆಗಳು ಚರ್ಮ ಮತ್ತು ಇತರ ಅಂಗಗಳಿಗೆ ಅನೇಕ ರೀತಿಯ ಒತ್ತಡಗಳನ್ನು ತರುವ ಮೂಲಕ ಸಂವೇದನೆಯನ್ನುಂಟು ಮಾಡುತ್ತದೆ. ಈ ರೀತಿಯ ಭ್ರಮೆಗಳು ವಸ್ತುಗಳನ್ನು ಬಳಸುವುದರ ಮೇಲೆ ಅವಲಂಬಿಸಿರುತ್ತದೆ. ಉದಾಹರಣೆಗೆ, ದೀರ್ಘಕಾಲದವರೆಗೆ ಕೋಕೇನ್‌ ಅಥವಾ ಆಂಫೆಟಮೈನ್‌ಅನ್ನು ಬಳಸಿದ ಮೇಲೆ ಕೆಲವರಿಗೆ ತಮ್ಮ ಮೇಲೆ ಹುಳಗಳು ಓಡಾಡಿದಂತೆ ಭಾಸವಾಗುತ್ತದೆ (ಫಾರ್ಮಿಕೇಷನ್‌).[೧೦]

ಭ್ರಮೆಯ ಹಂತಗಳು[ಬದಲಾಯಿಸಿ]

 1. ಆಶ್ಚರ್ಯದಾಯಕ ಅಥವಾ ಮರೆತುಹೋದ ನೆನೆಪು ಅಥವಾ ಫ್ಯಾಂಟಸಿ ಚಿತ್ರಗಳು[೧೧] ಮೂಡುವುದು
 2. ಆಗಾಗ್ಗೆ ವಸ್ತುಸ್ಥಿತಿಯನ್ನು ಪರಿಕ್ಷಿಸುವುದು [೧೧]
 3. ಭ್ರಮೆಗಳು "ನಿಜ" ಎನಿಸತೊಡಗುವುದರಿಂದ ಒಳನೋಟದ ಕಡೆಯ ಸುಳಿವುಗಳು[೧೧]
 4. ಫ್ಯಾಂಟಸಿ ಮತ್ತು ವಿಕೃತಿಗಳು ದೊಡ್ಡದಾಗಿ ನಿಜವಾದ ಅನುಭವದೊಂದಿಗೆ ಸಂದಿಗ್ಧತೆ ಮೂಡುವುದು[೧೧]
 5. ಆಂತರಿಕ-ಬಹಿರಂಗ ಸೀಮೆಗಳು ಒಡೆದುಹೋಗಿ ಅದೈತ ಅನುಭವದ ಸಂಭವನೀಯತೆ[೧೧]

ಕಾರಣ[ಬದಲಾಯಿಸಿ]

ಭ್ರಮೆಗಳು ಅನೇಕ ಕಾರಣಗಳಿಂದ ಉಂಟಾಗಬಹುದು.

ಹಿಪ್ನಾಗೋಗಿಕ್ ಭ್ರಮೆ[ಬದಲಾಯಿಸಿ]

ಈ ಭ್ರಮೆಗಳು ಇನ್ನೇನು ನಿದ್ದೆಗೆ ಜಾರುವಾಗ ಸಂಭವಿಸುತ್ತವೆ. ಆಶ್ಚರ್ಯ ಎನಿಸುವಂತೆ ಅನೇಕ ಜನರನ್ನು ಕಾಡುತ್ತವೆ. ಈ ಭ್ರಮೆಗಳು ಕೆಲವಾರು ಸೆಕೆಂಡುಗಳಿಂದ ಕೆಲವು ನಿಮಿಷಗಳವರೆಗೆ ಇರಬಹುದು, ಆ ಸಮಯದಲ್ಲಿ ವ್ಯಕ್ತಿಯು ಆ ಚಿತ್ರಗಳ ನೈಜ ಸ್ಥಿತಿಯ ಬಗ್ಗೆ ಎಚ್ಚರವಾಗಿಯೇ ಇರುತ್ತಾನೆ. ಇವನ್ನು ಹಗಲು-ನಿದ್ದೆಗೂ ಸಂಬಂಧಿಸಿರಬಹುದು. ಹಿಪ್ನಾಗೋಗಿಕ್ ಭ್ರಮೆಗಳನ್ನು ಕೆಲವೊಮ್ಮೆ ಮೆದುಳುಕಾಂಡದ ಅಸ್ವಸ್ಥೆಯಿಂದಲೂ ಆಗಬಹುದು ಎನ್ನಲಾಗುತ್ತದೆ, ಆದರೆ ಇದು ಬಹಳ ವಿರಳ.[೧೨]

ವೃಂತೀಯ ಭ್ರಮಾಲಕ್ಷಣ[ಬದಲಾಯಿಸಿ]

ವೃಂತೀಯ ಎಂದರೆ ವೃಂತಕ್ಕೆ ಸಂಬಂಧಿಸಿದ್ದು ಎಂದು, ಇದು ಮೆದುಳು ಕಾಂಡದ ಮೇಲೆ ponsನಿಂದಲೂ ಪಾನ್ಸ್‌ನ ಕಡೆಗೂ ಹರಿಯುವ ನರತಂತು. ಈ ಭ್ರಮೆಗಳು ಸಾಮಾನ್ಯವಾಗಿ ಸಂಜೆಯ ಸಮಯದಲ್ಲಿ ಸಂಭವಿಸುತ್ತವೆ, ಆದರೆ ಹಿಪ್ನಾಗೋಗಿಕ್ ಭ್ರಮೆಗಳಂತೆ ನಿದ್ದೆ ಬರುವ ವೇಳೆಯಲ್ಲಿ ಅಲ್ಲ. ವ್ಯಕ್ತಿಯು ಸಾಮಾನ್ಯವಾಗಿ ಸಂಪೂರ್ಣ ಪ್ರಜ್ಞಾವಸ್ಥೆಯಲ್ಲಿದ್ದು, ಭ್ರಮಾತ್ಮಕ ಪಾತ್ರಗಳೊಂದಿಗೆ ಸಂಭಾಷಿಸುತ್ತಾನೆ. ಹಿಪ್ನಾಗೋಗಿಕ್ ಭ್ರಮೆಗಳಲ್ಲಿ ಆಗುವಂತೆ ಚಿತ್ರಗಳ ಬಗೆಗಿನ ಒಳನೋಟವು ಪಕ್ಕಾ ಆಗಿರುತ್ತದೆ. ದೃಶ್ಯ-ಕ್ಷೇತ್ರದ ಯಾವುದೇ ಭಾಗದಲ್ಲಿ ಸುಳ್ಳು ಚಿತ್ರಗಳು ಕಾಣಿಸಿಕೊಳ್ಳಬಹುದು, ಅವು ಬಹು-ಇಂದ್ರಿಯ ಗೋಚರವಾಗಿರುವುದು ಬಹಳ ವಿರಳ.[೧೨]

ಡಿಲೀರಿಯಂ‌ ಟ್ರೆಮೆನ್ಸ್‌[ಬದಲಾಯಿಸಿ]

ಇದು ದೃಶ್ಯ ಭ್ರಮೆಗಳಲ್ಲಿ ಅತ್ಯಂತ ನಿಗೂಢವಾದ ಮತ್ತು ಅತಿ ಹೆಚ್ಚು ವ್ಯತ್ಯಯವಾಗುವ ಭ್ರಮೆ ಎಂದರೆ ಡಿಲೀರಿಯಂ‌ ಟ್ರೆಮೆನ್ಸ್‌. ಇದು ಬಹು ಇಂದ್ರಿಯ ಗೋಚರವೂ ಆಗಿರಬಹುದು. ಡಿಲೀರಿಯಂ‌ ಟ್ರೆಮೆನ್ಸ್‌ನಿಂದ ಬಳಲುವ ವ್ಯಕ್ತಿಗಳು ಕುಪಿತರಾಗಿರುತ್ತಾರೆ ಮತ್ತು ಸಂದಿಗ್ಧರಾಗಿರುತ್ತಾರೆ, ವಿಶೇಷವಾಗಿ ರೋಗದ ಅಂತ್ಯದ ಘಟ್ಟಗಳಲ್ಲಿ. ಈ ವಿಕೃತಿಯು ಹೆಚ್ಚಾದಂತೆ ಒಳನೋಟವು ಕಡಿಮೆಯಾಗುತ್ತದೆ. ತೀವ್ರ ಕಣ್ಣು ಚಲನಾ ನಿದ್ರೆಯಲ್ಲಿ ನಿದ್ರಾಭಂಗವಾಗುತ್ತದೆ ಮತ್ತು ಸ್ವಲ್ಪ ಹೊತ್ತು ಮಾತ್ರ ಇರುತ್ತದೆ.

ಪಾರ್ಕಿನ್‌ಸನ್‌ ಖಾಯಿಲೆ ಮತ್ತು ಲೆವಿ ಬಾಡಿ ಡೆಮೆನ್ಷಿಯ[ಬದಲಾಯಿಸಿ]

ಪಾರ್ಕಿನ್‌ಸನ್‌ ಖಾಯಿಲೆ ಮತ್ತು ಲೆವಿ ಬಾಡಿ ಡೆಮೆನ್ಷಿಯ ಖಾಯಿಲೆಗಳು ಒಂದೇ ರೀತಿಯ ಭ್ರಮಾ ಲಕ್ಷಣಗಳನ್ನು ಹೊಂದಿರುವುದರಿಂದ, ಇವೆರಡರ ನಡುವೆ ಸಂಬಂಧ ಏರ್ಪಡಿಸಲಾಗಿದೆ. ಸಂಜೆಯ ವೇಳೆಯಲ್ಲಿ ದೃಶ್ಯ-ಕ್ಷೇತ್ರದ ಯಾವ ಭಾಗದಲ್ಲಿಯಾದರೂ ಈ ಲಕ್ಷಣಗಳು ಕಾಣಿಸಬಹುದು. ಇವು ಬಹು-ಇಂದ್ರಿಯ ಗೋಚರವಾಗಿರುವುದು ಬಹಳ ವಿರಳ. ಭ್ರಾಂತಿಯಿಂದಲೇ ವ್ಯಕ್ತಿಯು ಭ್ರಮೆಗೆ ಸಾಗುತ್ತಾನೆ[೧೩], ಇಲ್ಲಿ ಇಂದ್ರಿಯ ಗ್ರಹಿಕೆ ಅತಿ ಹೆಚ್ಚು ವಿಕೃತವಾಗಿರುತ್ತದೆ, ಆದರೆ ಯಾವುದೇ ವಿಲಕ್ಷಣ ಇಂದ್ರಿಯ ಮಾಹಿತಿ ಇರುವುದಿಲ್ಲ. ಇವು ಸಾಮಾನ್ಯವಾಗಿ ಕೆಲವಾರು ನಿಮಿಷಗಳವರೆಗೆ ಇರುತ್ತವೆ, ಈ ಸಮಯದಲ್ಲಿ ವ್ಯಕ್ತಿಯು ಪ್ರಜ್ಞಾವಸ್ಥೆಯಲ್ಲಿ, ಸಾಮಾನ್ಯ ಸ್ಥಿತಿಯಲ್ಲಿ ಅಥವಾ ತೂಕಡಿಕೆಯ ಸ್ಥಿತಿಯಲ್ಲಿ ಇರುತ್ತಾನೆ. ಈ ಭ್ರಮೆಗಳ ಒಳನೋಟವು ಪರಿಮಿತವಾಗಿರುತ್ತದೆ ಮತ್ತು ತೀವ್ರ ಕಣ್ಣು ಚಲನೆ ನಿದ್ದೆಯು ಸಾಮಾನ್ಯವಾಗಿ ಕಡಿಮೆಯಾಗುತ್ತದೆ. ಪಾರ್ಕಿನ್‍ಸನ್ಸ್‌ ಖಾಯಿಲೆಯನು ಸಾಮಾನ್ಯವಾಗಿ ಸಬ್ಸ್‌ಟ್ಯಾನ್ಷಿಯ ನೈಗ್ರಾ ಪಾರ್ಸ್‌ ಕಾಂಪ್ಯಾಕ್ಟಗೆ ಸಂಬಂಧಿಸಿದುದೆಂದು ಹೇಳಲಾಗುತ್ತಿತ್ತು, ಆದರೆ ಇತ್ತೀಚಿನ ಸಾಕ್ಷ್ಯಾಧಾರಗಳ ಪ್ರಕಾರ ಪಾರ್ಕಿನ್‌ಸನ್‌ ಖಾಯಿಲೆಯು ಮೆದುಳಿನ ಇತರ ಹಲವು ಭಾಗಗಳ ಮೇಲೂ ಪರಿಣಾಮ ಬೀರುತ್ತದೆಂಬುದು ತಿಳಿದುಬಂತು. ಗುರುತಿಸಲಾದ ಕೆಲವು ಭಾಗಗಳೆಂದರೆ ಮೀಡಿಯನ್ ರಾಫೆ ಕೇಂದ್ರಗಳು, ಲೋಕಸ್ ಕೋರುಲಸ್ನೋರಾಡ್ರೆನರ್ಜಿಕ್ ಭಾಗಗಳು, ಮತ್ತು ಪ್ಯಾರಾಬ್ರಾಕಿಯಲ್‌ ದಲ್ಲಿನ ಕೋಲಿನೆರ್ಜಿಕ್ ನ್ಯೂರಾನುಗಳು ಮತ್ತು ಟೆಗ್ಮೆಂಟಮ್ಪೆಡುಂಕ್ಯುಲೊಪೊಂಟಿನ್ ಕೇಂದ್ರಗಳು.[೧೨]

ಮೈಗ್ರೇನ್‌ ಕೋಮಾ[ಬದಲಾಯಿಸಿ]

ಸಾಮಾನ್ಯವಾಗಿ, ಈ ರೀತಿಯ ಭ್ರಮೆಯನ್ನು ಕೋಮಸ್ಥಿತಿಯಿಂದ ಗುಣಮುಖರಾಗುತ್ತಿರುವಾಗ ಅನುಭವಿಸುತ್ತಾರೆ. ಮೈಗ್ರೇನ್‌ ಕೋಮ ಎರಡು ದಿನಗಳವರೆಗೆ ಇರಬಹುದು, ಖಿನ್ನತೆಯೂ ಕೆಲವೊಮ್ಮೆ ಜೊತೆಜೊತೆಗೆ ಸಂಭವಿಸುತ್ತದೆ. ಪೂರ್ಣ ಪ್ರಜ್ಞಾವಸ್ಥೆಯಲ್ಲಿ ಈ ಭ್ರಮೆಗಳು ಸಂಭವಿಸುತ್ತವೆ, ಮತ್ತು ಭ್ರಮಾತ್ಮಕ ಚಿತ್ರಗಳ ಒಳನೋಟವು ಪರಿಮಿತವಾಗಿರುತ್ತವೆ. ಏಟಾಕ್ಸಿಕ್‌ ಗಾಯಗಳು ಮೈಗ್ರೇನ್‌ ಕೋಮಾ ಜೊತೆಗೂಡುತ್ತವೆ ಎಂಬುದನ್ನೂ ಗಮನಿಸಲಾಗಿದೆ.[೧೨]

ಚಾರ್ಲ್ಸ್‌ ಬಾನೆಟ್‌ ಲಕ್ಷಣಗಳು[ಬದಲಾಯಿಸಿ]

ಅಂಧ ರೋಗಿಗಳು ಅನುಭವಿಸುವ ದೃಶ್ಯ ಭ್ರಮೆಗಳಿಗೆ ಚಾರ್ಲ್ಸ್‌ ಬಾನೆಟ್‌ ಸಹಲಕ್ಷಣ ಎಂದು ಕರೆಯಲಾಗುತ್ತದೆ. ಚಿತ್ರಗಳು ಮರೆಯಾಗುವವರೆಗೆ ಕಣ್ಣನ್ನು ಮುಚ್ಚಿ-ತೆಗೆದು ಮಾಡುವುದರಿಂದ ಈ ಭ್ರಮೆಗಳನ್ನು ಹೋಗಲಾಡಿಸಬಹುದು. ಈ ಭ್ರಮೆಗಳು ಸಾಮಾನ್ಯವಾಗಿ ಬೆಳಿಗ್ಗೆ ಅಥವಾ ಸಂಜೆಯ ಸಮಯದಲ್ಲಿ ಸಂಭವಿಸುತ್ತವೆ, ಆದರೆ ಕಡಿಮೆ ಬೆಳಕಿನ ಪರಿಸ್ಥಿತಿಗಳ ಮೇಲೆ ಅಂವಲಂಬಿತವೇನೂ ಅಲ್ಲ. ಈ ದೀರ್ಘ ಭ್ರಮೆಗಳು ರೋಗಿಗಳಿಗೆ ಹೆಚ್ಚು ತೊಂದರೆ ಕೊಡುವುದಿಲ್ಲ, ಏಕೆಂದರೆ ತಾವು ಭ್ರಮೆಯಲ್ಲಿದ್ದೇವೆಂದು ಅವರಿಗೆ ತಿಳಿದಿರುತ್ತದೆ.[೧೨] ಸಾಂದರ್ಭಿಕ ವ್ಯಾಧಿ ನಿರ್ಣಯಗಳು ಆಫ್ತಮೊಪ್ಯಾಥಿಕ್ ಹ್ಯಾಲುಸಿನೇಶನ್ಸ್ ಆಗಿರುತ್ತವೆ.[೧೪]

ಕೇಂದ್ರೀಯ ಅಪಸ್ಮಾರ[ಬದಲಾಯಿಸಿ]

ಕೇಂದ್ರೀಯ ಅಪಸ್ಮಾರದಿಂದ ಉಂಟಾಗುವ ದೃಶ್ಯ ಭ್ರಮೆಯು ಚಿಕ್ಕದಾಗಿದ್ದು ಒಂದೇ ರೀತಿಯದ್ದಾಗಿರುತ್ತದೆ. ದೃಶ್ಯ-ಕ್ಷೇತ್ರದ ಒಂದೇ ಭಾಗದಲ್ಲಿದ್ದು, ಕೆಲವೇ ಸೆಕೆಂಡುಗಳವರೆಗೆ ಇರುತ್ತವೆ. ಬೇರೆ ಬೇರೆ ದೃಶ್ಯ ಭಾಗಗಳ ನಡುವೆ ಇತರ ಅಪಸ್ಮಾರದ ಲಕ್ಷಣಗಳೂ ಇರಬಹುದು. ಒಂದಲ್ಲ ಒಂದು ರೀತಿಯಲ್ಲಿ ಪ್ರಜ್ಞೆ ಸ್ವಲ್ಪ ತಪ್ಪುತ್ತದೆ, ಆದರೆ ಭ್ರಮೆಯ ಒಳನೋಟ ಪಕ್ಕಾ ಇರುತ್ತದೆ. ಸಾಮಾನ್ಯವಾಗಿ, ಈ ರೀತಿಯ ಕೇಂದ್ರೀಯ ಅಪಸ್ಮಾರವು ಹಿಂಭಾಗದ ಟೆಂಪರೋಪೆರೈಟಲ್‌ಗೆ ಆಗುವ ಗಾಯದಿಂದ ಉಂಟಾಗುತ್ತದೆ.[೧೨]

ಜಿಜೋಫ್ರೆನಿಯಾದ ಭ್ರಮೆ[ಬದಲಾಯಿಸಿ]

ಜಿಜೋಫ್ರೆನಿಯಾದಿಂದಾದ ಭ್ರಮೆಗಳು.

ಡ್ರಗ್‌ನಿಂದಾದ ಭ್ರಮೆ[ಬದಲಾಯಿಸಿ]

ಸೈಕೋಆ‍ಯ್‌ಕ್ಟಿವ್‌ ವಸ್ತುಗಳನ್ನು ಸೇವಿಸುವುದರಿಂದ ಉಂಟಾಗುವ ಭ್ರಮೆಗಳು.

ರೋಗ-ಜೀವಶಾಸ್ತ್ರ[ಬದಲಾಯಿಸಿ]

ಭ್ರಮೆಗಳು ಹೇಗೆ ಸಂಭವಿಸುತ್ತವೆ ಎಂಬುದನ್ನು ವಿವರಿಸಲು ಅನೇಕ ವಾದಗಳನ್ನು ಮುಂದಿಡಲಾಗಿದೆ. ಮನೋವಿಜ್ಞಾನದಲ್ಲಿ ಮನೋಕ್ರಿಯಾ (ಫ್ರೂಡಿಯನ್‌) ವಾದಗಳು ಜನಪ್ರಿಯವಾಗಿದ್ದಾಗ, ಭ್ರಮೆಗಳನ್ನು ಸುಪ್ತಾವಸ್ಥೆಯ ಬಯಕೆಗಳು, ವಿಚಾರಗಳು ಮತ್ತು ಅಪೇಕ್ಷೆಗಳು ಎಂಬಂತೆ ಕಾಣಲಾಗುತ್ತದೆ. ಜೈವಿಕ ವಾದಗಳು ಸಂಪ್ರದಾಯವಾಗಿಬಿಟ್ಟಿರುವುದರಿಂದ, ಭ್ರಮೆಗಳನ್ನು ಮೆದುಳಿನ ಕಾರ್ಯಗಳಲ್ಲಿನ ನ್ಯೂನತೆಗಳಿಂದ ಉಂಟಾಗುತ್ತದೆ ಎಂದು (ಕಡೆಯ ಪಕ್ಷ ಮನೋವಿಜ್ಞಾನಿಗಳು) ನಂಬಲಾಗಿದೆ. ಮಾನಸಿಕ ಅಸ್ವಸ್ಥತೆಗೆ ಸಂಬಂಧಿಸಿದಂತೆ, ನರವಾಹಕಗಳಾದ ಗ್ಲೂಟಮೇಟ್‌ ಮತ್ತು ಡೋಪಮೈನ್‌ಗಳ ಕಾರ್ಯಗಳನ್ನು (ಅಥವಾ ನಿಷ್ಕಾರ್ಯಗಳನ್ನು) ನಿರ್ದಿಷ್ಟವಾಗಿ ಪ್ರಮುಖವಾದವು ಎಂದು ಪರಿಗಣಿಸಲಾಗಿದೆ.[೧೫] ಫ್ರೂಡಿಯನ್‌ನ ವ್ಯಾಖ್ಯಾನಗಳು ಸ್ವಲ್ಪಮಟ್ಟಿಗೆ ಸತ್ಯಾಂಶವನ್ನು ಹೊಂದಿರಬಹುದು, ಜೈವಿಕ ಕಲ್ಪಿತ ಸಿದ್ಧಾಂತವು ಮೆದುಳಿನಲ್ಲಿ ನಡೆಯುವ ಭೌತಿಕ ಕ್ರಿಯೆಗಳನ್ನು ವಿವರಿಸಿದರೆ, ಫ್ರೂಡಿಯನ್‌ ಸಿದ್ಧಾಂತವು ಭ್ರಮೆಯ ಮೂಲದ ಬಗೆಗೆ ವಿಚಾರ ಮಾಡುತ್ತದೆ. ಮನೋವೈಜ್ಞಾನಿಕ ಸಂಶೋಧನೆಯು ಮೆಟಾಜ್ಞಾನ ಎನಿಸಿಕೊಳ್ಳುವ ಸಾಮರ್ಥ್ಯಗಳಲ್ಲಾಗುವ ಏರುಪೇರಿನಿಂದ ಉಂಟಾಗುತ್ತದೆ ಎನ್ನುತ್ತದೆ.[೧೬] ಇವು ನಮ್ಮದೇ ಆಂತರಿಕ ಮನಃಸ್ಥಿತಿಗಳನ್ನು ನಿಯಂತ್ರಿಸಲು ಅಥವಾ ಅವುಗಳಿಂದ ಒಂದು ನಿರ್ಣಯಕ್ಕೆ ಬರಲು ಸಹಾಯ ಮಾಡುವ ಸಾಮರ್ಥ್ಯಗಳು. ಉದಾಹರಣೆಗೆ ಆಶಯಗಳು, ನೆನಪುಗಳು, ನಂಬಿಕೆಗಳು ಮತ್ತು ವಿಚಾರಗಳು). ಮಾಹಿತಿಯ ಆಂತರಿಕ (ಸ್ವ-ಪ್ರೇರಿತ) ಮತ್ತು ಬಹಿರಂಗ (ಪ್ರಚೋದನೆ) ಮೂಲಗಳನ್ನು ಗುರುತಿಸುವ ಸಾಮರ್ಥ್ಯವನ್ನು ಮೆಟಾಜ್ಞಾನದ ಒಂದು ಪ್ರಮುಖ ಸಾಮರ್ಥ್ಯ ಎಂದು ಪರಿಗಣಿಸಲಾಗಿದೆ, ಆದರೆ ಇದು ವಿಫಲವಾದಲ್ಲಿ ಭ್ರಮಾತ್ಮಕ ಅನುಭವಗಳು ಸಂಭವಿಸುತ್ತವೆ. ಆಂತರಿಕ ಸ್ಥಿತಿಯ ಪ್ರಕ್ಷೇಪಣೆ (ಅಥವಾ ಮತ್ತೊಬ್ಬರಿಗೆ ವ್ಯಕ್ತಿಯೊಬ್ಬನ ಪ್ರತಿಕ್ರಿಯೆ) ಭ್ರಮೆಯ ರೂಪದಲ್ಲಿ ಹುಟ್ಟಿಕೊಳ್ಳಬಹುದು, ವಿಶೇಷವಾಗಿ ಧ್ವನಿ ಭ್ರಮೆಗಳು. ಇತ್ತೀಚೆಗಿನ ಕಲ್ಪಿತ ಸಿದ್ಧಾಂತದ ಪ್ರಕಾರ ಸ್ವಾಭಾವಿಕ ಗ್ರಾಹ್ಯಕತೆಯ ಪ್ರತಿಕ್ರಿಯೆಯನ್ನು (ಅಂದರೆ, ಭ್ರಮೆಯನ್ನು) ಸೃಷ್ಟಿಸುವಂತಹ ಮಿತಿಮೀರಿದ ವಿರುದ್ಧ ಪ್ರಕ್ರಿಯೆ, ಅಥವಾ ಬಲವಾದ ಗ್ರಹಿಸುವ ಅಪೇಕ್ಷೆಗಳು.[೧೭]

ಚಿಕಿತ್ಸೆಗಳು[ಬದಲಾಯಿಸಿ]

ವಿವಿಧ ರೀತಿಯ ಭ್ರಮೆಗಳಿಗೆ ಇರುವ ಚಿಕಿತ್ಸೆಗಳು ಕಡಿಮೆಯೇ. ಆದಾಗ್ಯೂ, ಮಾನಸಿಕ ಅಸ್ವಸ್ಥತೆಯಿಂದ ಉಂಟಾಗುವ ಭ್ರಮೆಗಳನ್ನು ಒಬ್ಬ ಮನೋವಿಜ್ಞಾನಿ ಅಥವಾ ಮ್ಳನೋವೈದ್ಯರ ಗಮನಕ್ಕೆ ತರಬೇಕು. ಆ ವೈದ್ಯರ ಅಧ್ಯಯನ-ಅಭಿಪ್ರಾಯಗಳ ಆಧಾರದ ಮೇಲೆಯೇ ಚಿಕಿತ್ಸೆ ನೀಡಲಾಗುತ್ತದೆ. ಈ ರೋಗವನ್ನು ನಿವಾರಿಸಲು ಬುದ್ಧಿವಿಕಲ್ಪತೆಯನ್ನು ಹೋಗಲಾಡಿಸುವ ಔಷಧಿಗಳನ್ನೂ ಬಳಸಿಕೊಳ್ಳಬಹುದು.[೧೮] ಇತರ ಕಾರಣಗಳಿಂದುಂಟಾಗುವ ಭ್ರಮೆಗಳಿಗೆ, ವೈಜ್ಞಾನಿಕವಾಗಿ ಒಂದು ಚಿಕಿತ್ಸೆಯನ್ನು ಪರೀಕ್ಷಿಸಿ, ಸಾಬೀತು ಮಾಡಲಾಗಿದೆ ಎಂಬುದಕ್ಕೆ ಯಾವ ಆಧಾರವೂ ಇಲ್ಲ. ಆದಾಗ್ಯೂ, ಭ್ರಮಾಜನಕ ಡ್ರಗ್‌ಗಳಿಂದ ದೂರವಿರುವುದು, ಒತ್ತಡಗಳನ್ನು ನಿರ್ವಹಿಸುವುದು, ಆರೋಗ್ಯಕರ ಜೀವನ ನಡೆಸುವುದು, ಮತ್ತು ಸಾಕಷ್ಟು ನಿದ್ದೆ ಮಾಡುವುದು - ಇವುಗಳಿಂದ ಭ್ರಮೆಯನ್ನು ಸಾಕಷ್ಟು ತಡೆಗಟ್ಟಬಹುದು. ಭ್ರಮೆಯ ಎಲ್ಲ ಸಂದರ್ಭದಲ್ಲಿಯೂ, ವೈದ್ಯಕೀಯ ಸಲಹೆಯನ್ನು ಪಡೆದುಕೊಳ್ಳಬೇಕು ಮತ್ತು ತನ್ನ ಭ್ರಮೆಯ ಪ್ರತ್ಯೇಕ ಲಕ್ಷಣಗಳ ಬಗ್ಗೆ ಮಾಹಿತಿ ಪಡೆದುಕೊಂಡಿರಬೇಕು.

ಸಾಂಕ್ರಾಮಿಕಶಾಸ್ತ್ರ[ಬದಲಾಯಿಸಿ]

1895[೧೯] ರಷ್ಟು ಹಳೆಯ ಒಂದು ಅಧ್ಯಯನದ ಪ್ರಕಾರ ಜನಸಂಖ್ಯೆಯಲ್ಲಿ ಸುಮಾರು 10% ಜನ ಭ್ರಮೆಯನ್ನು ಅನುಭವಿಸಿದ್ದರು. 1996-1999ರಲ್ಲಿ 13,000 ಜನರ ಮೇಲೆ ನಡೆಸಿದ ಸಮೀಕ್ಷೆಯು ಇನ್ನೂ ಹೆಚ್ಚಿನ ಶೇಕಡಾವಾರು [೨೦] ಅಂದರೆ ಸುಮಾರು 39% ಜನರು ಭ್ರಮೆಯನ್ನು ಅನುಭವಿಸುತ್ತಾರೆ ಎಂದು ತೋರಿಸಿತು. 27% ಜನ ಹಗಲಿನ ಭ್ರಮೆಯನ್ನು ಅನುಭವಿಸುತ್ತಿದ್ದರು, ಬಹುತೇಕ ರೋಗ ಅಥವಾ ಡ್ರಗ್‌ ಬಳಕೆಯನ್ನು ಹೊರತುಪಡಿಸಿ. ಈ ಸಮೀಕ್ಷೆಯಿಂದ, ವಾಸನೆ ಮತ್ತು ರುಚಿ ಭ್ರಮೆಗಳು ಸಾಮಾನ್ಯ ಜನರಲ್ಲಿ ಸರ್ವೇ ಸಾಮಾನ್ಯ ಎಂದೆನಿಸುತ್ತದೆ.

ಇವನ್ನೂ ನೋಡಿ[ಬದಲಾಯಿಸಿ]

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

ಜಾನ್ಸನ್ ಎಫ್ ಹೆಚ್ (1978). ಭ್ರಮೆಯ ದೇಹರಚನೆ ಚಿಕಾಗೊ: ನೆಲ್ಸನ್ - ಹಾಲ್ ಕಂ. ಐಎಸ್‌ಬಿಎನ್ 0-88229-155-6.

ಬೆನ್‌ಟಲ್ ಆರ್‌ಪಿ, ಸ್ಲೆಡ್ ಪಿಡಿ (1988).

ಇಂದ್ರಿಯಗಳಿಗೆ ಸಂಬಂಧಿಸಿದ ವಂಚನೆ: ಭ್ರಮೆಯ ವೈಜ್ಞಾನಿಕ ವಿಶ್ಲೇಷಣೆ. ಲಂಡನ್: ಕ್ರೂಮ್‌ ಹೆಲ್ಮ್. ಐಎಸ್‌ಬಿಎನ್ 0-674-44301-2

ಅಲೆಮನ್ ಎ, ಲ್ಯಾರೊರಿ ಎಫ್ (2008). ಭ್ರಮೆಗಳು: ಐಡಿಯೊಸಿನ್‌ಕ್ರೆಟಿಕ್ ಗ್ರಹಿಕೆಗಳ ವಿಜ್ಞಾನ ಅಮೆರಿಕಾದ ಮನೋವೈಜ್ಞಾನಿಕ ಕೂಟ (ಎಪಿಎ). ISBN 1-59474-023-2

ಟಿಪ್ಪಣಿಗಳು[ಬದಲಾಯಿಸಿ]

 1. Leo P. W. Chiu (1989). "Differential diagnosis and management of hallucinations" (PDF). Journal of the Hong Kong Medical Association. 41 (3): 292–7.
 2. ಚೆನ್ ಇ. ಬೆರ್ರಿಯೊಸ್ ಜಿ.ಇ.( 1996)ಭ್ರಮೆಯನ್ನು ಗುರುತಿಸುವಿಕೆ: ಅನೇಕ ಅಳತೆಗೋಲುಗಳ ಮಾದರಿ ಮತ್ತು ವಿಧಾನಶಾಸ್ತ್ರ ಸೈಕೊಪ್ಯಾಥಲಾಜಿ 29: 54-63.
 3. ವಿಶುವಲ್ ಹ್ಯಾಲೂಸಿನೇಶನ್ಸ್: ಡಿಫರೆನ್ಶಿಯಲ್ ಡಯಾಗ್ನೋಸಿಸ್ ಅಂಡ್ ಟ್ರೀಟ್‌ಮೆಂಟ್ (2009)
 4. Young, Ken (July 27, 2005). "IPod hallucinations face acid test". Vnunet.com. Archived from the original on 2007-12-20. Retrieved 2008-04-10.
 5. "Rare Hallucinations Make Music In The Mind". ScienceDaily.com. August 9, 2000. Retrieved 2006-12-31.
 6. ಇಂಗ್‌ಮ್ಯಾನ್, ಬಿರ್ಕ್; ರೈಟರ್, ಮೈಕ್: ಇಂಪಾದ ಸಂಗೀತದ ಸಹಜ ಗ್ರಹಿಕೆ- ಭ್ರಮೆ ಅಥವಾ ಮೂರ್ಛೆರೋಗ? ನೆರ್ವೆನ್‌ಹಿಲ್‌ಕುಂಡೆ 2009 28: 217-221. ISSN 0722-1541
 7. "Phantom smells". Archived from the original on 2010-10-19. Retrieved 2010-07-26.
 8. Wolberg FL, Zeigler DK (1982). "Olfactory Hallucination in Migraine". Archives of Neurology. 39 (6): 382.
 9. Sacks, Oliver (1986). Migraine. Berkeley: University of California Press. pp. 75–76. ISBN 9780520058897.
 10. ಬೆರ್ರಿಯೊಸ್ ಜಿಇ (1982) ಸ್ಪರ್ಶ ಭ್ರಮೆ ನರವಿಜ್ಞಾನದ ಪತ್ರಿಕೆ, ನರ ಚಿಕಿತ್ಸೆ ಮತ್ತು ಮನೋರೋಗ ಚಿಕಿತ್ಸೆ 45: 285-293
 11. ೧೧.೦ ೧೧.೧ ೧೧.೨ ೧೧.೩ ೧೧.೪ Horowitz MJ (1975). "Hallucinations: An Information Processing Approach". In West LJ, Siegel RK (ed.). Hallucinations; behavior, experience, and theory. New York: Wiley. ISBN 0-471-79096-6.
 12. ೧೨.೦ ೧೨.೧ ೧೨.೨ ೧೨.೩ ೧೨.೪ ೧೨.೫ Manford M, Andermann F (1998). "Complex visual hallucinations. Clinical and neurobiological insights". Brain. 121 ((Pt 10)): 1819–40. doi:10.1093/brain/121.10.1819. PMID 9798740. {{cite journal}}: Unknown parameter |month= ignored (help)
 13. ಮಾರ್ಕ್ ಡೆರ್ (2006) ಮ್ಯಾರಿಲಿನ್ ಮತ್ತು ಮಿ, ದಿ "ನ್ಯೂಯಾರ್ಕ್ ಟೈಮ್ಸ್" ಫೆಬ್ರವರಿ 14, 2006
 14. Engmann, Birk (2008). "Phosphenes and photopsias - ischaemic origin or sensorial deprivation? - Case history". Z Neuropsychol. (in German). 19 (1): 7–13. doi:10.1024/1016-264X.19.1.7.{{cite journal}}: CS1 maint: unrecognized language (link)[ಶಾಶ್ವತವಾಗಿ ಮಡಿದ ಕೊಂಡಿ]
 15. Kapur S (2003). "Psychosis as a state of aberrant salience: a framework linking biology, phenomenology, and pharmacology in schizophrenia". Am J Psychiatry. 160 (1): 13–23. doi:10.1176/appi.ajp.160.1.13. PMID 12505794. {{cite journal}}: Unknown parameter |month= ignored (help)
 16. Bentall RP (1990). "The illusion of reality: a review and integration of psychological research on hallucinations". Psychol Bull. 107 (1): 82–95. doi:10.1037/0033-2909.107.1.82. PMID 2404293. {{cite journal}}: Unknown parameter |month= ignored (help)
 17. Grossberg S (2000). "How hallucinations may arise from brain mechanisms of learning, attention, and volition". J Int Neuropsychol Soc. 6 (5): 583–92. doi:10.1017/S135561770065508X. PMID 10932478. {{cite journal}}: Unknown parameter |month= ignored (help)
 18. "ಭ್ರಮೆಗಳು: ಚಿಕೆತ್ಸೆ: ಅನ್ಸರ್ಸ್.ಕಾಮ್ ನಿಂದ ಮಾಹಿತಿ" Answers.com: ಉಚಿತ ಅನ್‌ಲೈನ್ ನಿಘಂಟಿನೊಂದಿಗೆ ವಿಕಿ ಕ್ಯೂ ಮತ್ತು ಎ ಅನ್ನು ಸಂಯೋಜಿಸಲಾಗಿದೆ. http://www.answers.com/topic/hallucinations-treatment (ಜನವರಿ 20, 2010 ರಂದು ನೋಡಲಾಗಿದೆ).
 19. Francis Nagaraya, Myers FWH; et al. (1894). "Report on the census of hallucinations". Proceedings of the Society for Psychical Research. 34: 25–394. {{cite journal}}: Explicit use of et al. in: |author= (help)
 20. Ohayon MM (2000). "Prevalence of hallucinations and their pathological associations in the general population". Psychiatry Res. 97 (2–3): 153–64. doi:10.1016/S0165-1781(00)00227-4. PMID 11166087. {{cite journal}}: Unknown parameter |month= ignored (help)

ಹೊರಗಿನ ಕೊಂಡಿಗಳು[ಬದಲಾಯಿಸಿ]

"https://kn.wikipedia.org/w/index.php?title=ಭ್ರಮೆ&oldid=1126036" ಇಂದ ಪಡೆಯಲ್ಪಟ್ಟಿದೆ