ನರ ಅಂಗಾಂಶ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನರ ಅಂಗಾಶ[ಬದಲಾಯಿಸಿ]

ಪ್ರಾಣಿಗಳಲ್ಲಿ ಅಂಗಾಶಗಳು ಸಸ್ಯ ಅಂಗಾಂಶಗಳಿಗಿಂತ ಹೆಚ್ಚು ಸಂಕೀರ್ಣ ರಚನೆಯುಳ್ಳದಾಗಿದೆ. ಅವುಗಳು ವಿವಿಧ ಕಾರ್ಯಗಳನ್ನು ನಿರ್ವಹಿಸಲು ವಿಶಿಷ್ಟವಾದ ಮಾರ್ಪಟು ಹೊಂದಿರುತ್ತದೆ. ಜೀವಿಗಳ ಮುಖ್ಯವಾದ ಗುಣಲಕ್ಷಣಗಳಲ್ಲಿ ಸಂವೇದನೆಯು ಒಂದು ನಿರ್ದಿಷ್ಟ ಲಕ್ಷಣವಾಗಿದ್ದು ಅದನ್ನು ನಿರ್ವಹಿಸುವ ಅಂಗಾಂಶಕ್ಕೆ ನರ ಅಂಗಾಶ ಎಂದು ಹೆಸರು.

ನರ ಅಂಗಾಂಶವು ಮಾನವನ ದೇಹದ ಎರಡು ಮುಖ್ಯ ಭಾಗಗಳಾದ ಮೆದುಳು ಮತ್ತು ಬೆನ್ನುಮೂಳೆಯೊಂದಿಗೆ ಸಂಯೋಜನೆ ಹೊಂದಿದೆ.ಈ ಅಂಗಾಂಶವು ದೇಹದ ಎಲ್ಲಾ ಚಟುವಟಿಕೆಗಳನ್ನು ನಿಯಂತ್ರಿಸುವುದಲ್ಲದೆ ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ ರವಾನಿಸುತ್ತದೆ. ದೇಹದ ಎಲ್ಲ ಜೀವಕೋಶಗಳು ಜೈವಿಕ ಚಟುವಟಿಕೆಗಳನ್ನು ಸಮರ್ಪಕವಾಗಿ ನಿರ್ವಹಿಸಲು ಪ್ರೇರೆಪಿಸುವ ಅಂಗಾಂಶವೇ ನರ ಅಂಗಾಶ. ದೇಹದ ಹೊರಗಿನ ಪರಿಸರದ ಭೌತಿಕ ಕ್ರಿಯೆಗಳನ್ನು ಮತ್ತು ದೇಹದೊಳಗಿನ ರಾಸಾಯನಿಕ ಕ್ರಿಯೆಗಳ ಪರಿಣಾಮವನ್ನು ಗ್ರಹಿಸುವುದು ನರ ಅಂಗಾಶದ ಕಾರ್ಯ. ದೇಹದ ನರ ಕೇಂದ್ರಗಳಿಂದ ಮತ್ತು ಅವುಗಳಿಗೆ ತಕ್ಕೆ ಸಂದೇಶಗಳನ್ನು ಸೂಚಿಸುವ ಕಾರ್ಯವನ್ನು ಇದು ನಿರ್ವಹಿಸುತ್ತದೆ.

ನರ ಅಂಗಾಶದ ರಚನೆಯ ಹಾಗು ಕ್ರಿಯೆಯ ಮೂಲ ಘಟಕ ನರಕೋಶ ನ್ಯೂರಾನ್.

ನರಕೋಶದಲ್ಲಿ ಸ್ಟಷ್ಟವಾದ ನ್ಯೂಕ್ಲಿಯಸ್ ಇರುವ ಭಾಗಕ್ಕೆ ಕೋಶಕಾಯ ಎಂದು ಹೆಸರು.ಕೋಶಕಾಯದಿಂದ ಹೊರಟಿರುವ ಸಣ್ಣ ಕವಲುಗಳಿಗೆ ಡೆಂಡ್ರೈಟ್ಸಗಳೆಂದು ಹೆಸರು.ಕೋಶದಿಂದ ಹೊರಟ ಉದ್ದವಾದ ರಚನೆಗೆ ಆಕ್ಸಾನ್ ಎಂದು ಹೆಸರು.ಆಕ್ಸಾನಿನ ತುದಿಯಲ್ಲಿ ಕವಲುಗಳ ಗುಚ್ಛ ಇದೆ. ಆಕ್ಸಾನ್ ಮಯಲಿನ್ ಎಂಬ ಕೊಬ್ಬಿನ ಪದಾರ್ಥದಿಂದಾದ ಕವಚದಿಂದ ಆವರಿಸಲ್ಪಟ್ಟಿದೆ. ಡೆಂಡ್ರೈಟ್ಸಗಳು ಪ್ರೇರಣೆಗಳನ್ನು ಕೋಶಕಾಯದೆಡೆಗೆ ಒಯ್ಯುತ್ತದೆ.ಆಕ್ಸಾನ್ ಗಳು ಪ್ರೇರಣೆಗಳನ್ನು ಕೋಶಕಾಯದಿಂದ ಹೊರಗಡೆಗೆ ಕೊಂಡೊಯ್ಯುತ್ತದೆ. ಎರಡು ನ್ಯೂರಾನ್ ಗಳು ಸಂಧಿಸುವಾಗ ಅವುಗಳ ಮಧ್ಯೆ ಸಣ್ಣ ಅವಕಾಶ ಇರುತ್ತದೆ.ಇದಕ್ಕೆ ಸಂಸರ್ಗ ಎಂದು ಹೆಸರು. ಇದು ಒಂದು ಕೋಶದ ಆಕ್ಸಾನ್ ತುದಿ ಮತ್ತು ಇನ್ನೊಂದು ಕೋಶದ ಡೆಂಡ್ರೈಟ್ಸ ತುದಿಯ ಮಧ್ಯೆ ರಾಸಾಯನಿಕ ವಸ್ತುಗಳ ಮಧ್ಯೆಸ್ಥಿಕೆಯಿಂದ ಸಂಪರ್ಕ ಉಂಟಾಗುತ್ತದೆ. ಹಲವಾರು ಆಕ್ಸಾನ್ ತಂತುಗಳು ಸೇರಿ ಒಂದು ಹೊದಿಕೆಯಿಂದಾವೃತವಾದ ನರತಂತುಗಳಗುವುವು.ಆನೇಕ ನರಕೋಶಗಳು ಒಂದೆಡೆ ಕೂಡಿ ಗಂಟಿನಂತಗುತ್ತದೆ.ಅವುಗಳನ್ನು ನರಮುಡಿ ಎನ್ನುವರು. ಮಾನವನ ನರವ್ಯೂಹದ ಮೆದುಳು, ನರಹುರಿ ಮತ್ತು ನರಗಳಿಂದ ಕೂಡಿದ್ದು, ಉನ್ನತ ಮಟ್ಟದಲ್ಲಿ ವಿಕಾಸ ಹೊಂದಿದ ಮೆದುಳಿನಿಂದಾಗಿ ಅವನು ಆಲೋಚನ ಶಕ್ತಿ, ಕ್ರಿಯಾಶೀಲತೆ, ಜ್ಞಾಪಕ ಶಕ್ತಿ, ಇಚ್ಚಾ ಶಕ್ತಿ ಮುಂತಾದ ವಿಶೇಷ ಗುಣಗಳಿವೆ.

ಉಲ್ಲೇಖಗಳು[ಬದಲಾಯಿಸಿ]

[೧]

  1. https://en.wikipedia.org/wiki/Nervous_tissue