ಭೂರ್ಜಪತ್ರ
Betula utilis | |
---|---|
Conservation status | |
Scientific classification | |
ಸಾಮ್ರಾಜ್ಯ: | ಸಸ್ಯ |
ಏಕಮೂಲ ವರ್ಗ: | ಹೂಬಿಡುವ ಸಸ್ಯ |
ಏಕಮೂಲ ವರ್ಗ: | ಯೂಡೈಕಾಟ್‍ಗಳು |
ಏಕಮೂಲ ವರ್ಗ: | ರೋಸಿಡ್ಸ್ |
ಗಣ: | ಫ್ಯಾಗ್ಯಾಲೆಸ್ |
ಕುಟುಂಬ: | ಬೆಟ್ಯುಲೇಸಿಯೇ |
ಕುಲ: | ಬರ್ಚ್ |
ಪ್ರಜಾತಿ: | B. utilis
|
Binomial name | |
Betula utilis | |
Synonyms | |
B. bhojpatra Wall. |
ಭೂರ್ಜಪತ್ರವು ಬೆಚಲೇಸಿ ಕುಟುಂಬಕ್ಕೆ ಸೇರಿದ ಉಪಯುಕ್ತ ವೃಕ್ಷ. ಬರ್ಚಾ ಮರಗಳೆಂದು ಯೂರೋಪ್, ಅಮೆರಿಕಗಳಲ್ಲಿ ಪ್ರಸಿದ್ಧವಾಗಿರುವ ಬೆಚಲ ಜಾತಿಯ ಪ್ರಭೇದಗಳ ಪೈಕಿ ಒಂದು. ಆಲ್ಡರ್ (ಆಲ್ನಸ್), ಹಾರ್ನ್‌ಬೀಮ್ (ಕಾರ್ಪೈನಸ್), ಹೇಜ಼ಲ್‍ನಟ್ (ಕೊರೈಲಸ್) ಮುಂತಾದವುಗಳ ಸಂಬಂಧಿ. ಬೆಟುಲ ಯೂಟಿಲಿಸ್ ಅಥವಾ ಬೆ.ಭೋಜ್‍ಪತ್ರ ಇದರ ವೈಜ್ಞಾನಿಕ ಹೆಸರು. ಹಿಮಾಲಯನ್ ಸಿಲ್ವರ್ ಬರ್ಚ್ ಇದರ ಇಂಗ್ಲಿಷ್ ಹೆಸರು. ಭಾರತದ ಹಿಮಾಲಯ ಪರ್ವತ ಶ್ರೇಣಿಯಲ್ಲೂ ಕಾಶ್ಮೀರಕೊಳ್ಳ ಮತ್ತು ಪಂಜಾಬ ಪ್ರಾಂತಗಳಲ್ಲೂ ಕಂಡುಬರುತ್ತದೆ.
ವಿವರ
[ಬದಲಾಯಿಸಿ]ಇದು ಸುಮಾರು 20 ಮೀ. ಎತ್ತರ ಬೆಳೆಯುವ ಮರ. ಇದರ ಎಲೆಗಳು ಗುಂಡನೆಯ ಆಕಾರದವು. ಎಲೆಯಂಚು ದಂತಿತ. ಎಲೆಯ ಮಧ್ಯ ನಗರ ಭಾಗದಲ್ಲಿ ರೋಮಗಳುಂಟು. ಹೂಗೊಂಚಲುಗಳು ಬೆಕ್ಕಿನ ಬಾಲದ ಆಕಾರದಲ್ಲಿರುವುವು. ಗಂಡು ಮತ್ತು ಹೆಣ್ಣು ಹೂಗಳು ವಿಭಿನ್ನ ಗೊಂಚಲುಗಳಲ್ಲಿವೆ. ಕಾಯಿ ಅಷ್ಟಿಫಲ ಮಾದರಿಯದು. ಸಿಪ್ಪೆ ಚಿಕ್ಕ ರೆಕ್ಕೆಗಳಂತೆ ಚಾಚಿದೆ.
ಉಪಯೋಗಗಳು
[ಬದಲಾಯಿಸಿ]ಭೂರ್ಜಪತ್ರದ ತೊಗಟೆಯೇ ಭೂರ್ಜ ಅಥವಾ ಭೋಜಪತ್ರ. ಇದು ತೆಳುವಾದ ಕಾಗದದಂಥ ಪದರಗಳಿಂದ ಕೂಡಿದ್ದು ಸುಲಿದುಕೊಳ್ಳುತ್ತದೆ. ಬಿಳಿಬಣ್ಣದ್ದಾಗಿರುವ ಇದನ್ನೇ ಹಿಂದಿನ ಕಾಲದಲ್ಲಿ ಬರೆಯಲು ಕಾಗದವಾಗಿ ಉಪಯೋಗಿಸುತ್ತಿದ್ದರು. ಇಂದಿಗೂ ಪುರಾತನ ಕಾಲದ ಲಿಖಿತಗಳು ಭೂರ್ಜಪತ್ರಗಳಲ್ಲಿ ಇವೆ. ವಸ್ತುಗಳನ್ನು ಕಟ್ಟಲು, ಕೊಡೆಗಳಿಗೆ ಹೊದಿಕೆ ಹಾಕಲು ಮತ್ತು ಮನೆಗಳಿಗೆ ಚಾವಣೆ ಹೊದಿಸಲು ಭೂರ್ಜಪತ್ರವನ್ನು ಉಪಯೋಗಿಸುವರು. ಇದರ ಚೌಬೀನೆಯನ್ನು ಮನೆಕಟ್ಟಲು ಬಳಸುವುದಿದೆ. ಚಿಕ್ಕರೆಂಬೆಗಳಿಂದ ಸೇತುವೆ ಕಟ್ಟಬಹುದು. ಎಲೆಗಳು ದನಗಳಿಗೆ ಮೇವಾಗಿ ಉಪಯುಕ್ತ.
ಚಿತ್ರಸಂಪುಟ
[ಬದಲಾಯಿಸಿ]-
ಬಿಳಿ, ಕಾಗದದಂಥ ತೊಗಟೆ
-
ಗುಪಟೆ ರಂಧ್ರಗಳನ್ನು ತೋರಿಸುವ ನಿಕಟಚಿತ್ರ
-
ಮರವನ್ನು ಭೂದೃಶ್ಯ ತೋಟಗಾರಿಕೆಯಲ್ಲಿ ಬಳಸಿರುವುದು
ಉಲ್ಲೇಖಗಳು
[ಬದಲಾಯಿಸಿ]- ↑ Shaw, K., Roy , S. & Wilson (2014). "Betula utilis. The IUCN Red List of Threatened Species". IUCN Red List. doi:10.2305/IUCN.UK.2014-3.RLTS.T194535A2346136.en. Retrieved 2022-08-05.
{{cite journal}}
: CS1 maint: multiple names: authors list (link)
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Bhojpatra conservation in Gangotri-Gaumukh
- David Don's description in Prodromus floræ Nepalensis
- Flora of China