ಸಿಪ್ಪೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಿತ್ತಳೆ ಹಣ್ಣಿನ ಬಹಿರ್ಫಲಭಿತ್ತಿ ಮತ್ತು ಬಿಳಿ ಸಿಗುರು

ಸಿಪ್ಪೆಯು ಹಣ್ಣು ಅಥವಾ ತರಕಾರಿಯ ಹೊರ ರಕ್ಷಾಕವಚವಾಗಿದ್ದು ಇದನ್ನು ಸುಲಿಯಬಹುದಾಗಿರುತ್ತದೆ. ಸಿಪ್ಪೆಯು ಸಾಮಾನ್ಯವಾಗಿ ಸಸ್ಯಶಾಸ್ತ್ರೀಯವಾಗಿ ಬಹಿರ್ಫಲಭಿತ್ತಿಯಾಗಿರುತ್ತದೆ.

ಸಿಟ್ರಸ್ ಹಣ್ಣಿನಂತಹ ದಪ್ಪನೆಯ ಸಿಪ್ಪೆಯನ್ನು ಹೊಂದಿರುವ ಹಣ್ಣನ್ನು ತೊಳೆ ಹಣ್ಣು ಎಂದು ಕರೆಯಲಾಗುತ್ತದೆ. ತೊಳೆ ಹಣ್ಣುಗಳಲ್ಲಿ, ಒಳಗಿನ ಪದರವನ್ನು (ಆಲ್ಬೀಡೊ ಎಂದು ಕರೆಯಲ್ಪಡುತ್ತದೆ ಅಥವಾ ಬಿಳಿ ಸಿಗುರು)[೧] ಬಾಹ್ಯ ಪದರದ (ಫ಼್ಲವೀಡೊ ಎಂದು ಕರೆಯಲ್ಪಡುತ್ತದೆ) ಜೊತೆಗೆ ಸುಲಿಯಲಾಗುತ್ತದೆ ಮತ್ತು ಇವೆರಡನ್ನು ಒಟ್ಟಾಗಿ ಸಿಪ್ಪೆ ಎಂದು ಕರೆಯಲಾಗುತ್ತದೆ.

ಉಪಯೋಗಗಳು[ಬದಲಾಯಿಸಿ]

ದಪ್ಪ ಮತ್ತು ರುಚಿಯನ್ನು ಅವಲಂಬಿಸಿ, ಹಣ್ಣಿನ ಸಿಪ್ಪೆಯನ್ನು ಕೆಲವೊಮ್ಮೆ ಹಣ್ಣಿನ ಭಾಗವಾಗಿ ತಿನ್ನಲಾಗುತ್ತದೆ, ಉದಾಹರಣೆಗೆ ಸೇಬಿನ ಹಣ್ಣುಗಳಲ್ಲಿ. ಕೆಲವು ಸಂದರ್ಭಗಳಲ್ಲಿ ಸಿಪ್ಪೆಯು ಅಹಿತಕರ ಅಥವಾ ತಿನ್ನಲರ್ಹವಿರದರಿಂದ ಅದನ್ನು ತೆಗೆದು ಬಿಸಾಡಲಾಗುತ್ತದೆ, ಉದಾಹರಣೆಗೆ ಬಾಳೆ ಹಣ್ಣುಗಳು ಅಥವಾ ಗ್ರೇಪ್ ಫ಼್ರೂಟ್‍ಗಳಲ್ಲಿ.

ದಾಳಿಂಬೆಗಳಂತಹ ಕೆಲವು ಹಣ್ಣುಗಳ ಸಿಪ್ಪೆಯು ಟ್ಯಾನಿನ್‍ಗಳು ಮತ್ತು ಇತರ ಪಾಲಿಫೀನಾಲ್‍ಗಳನ್ನು ಅಧಿಕ ಪ್ರಮಾಣದಲ್ಲಿ ಹೊಂದಿರುವುದರಿಂದ ಅದನ್ನು ವರ್ಣಗಳ ಉತ್ಪಾದನೆಯಲ್ಲಿ ಬಳಸಲಾಗುತ್ತದೆ.

ಪೋಷಣೆ[ಬದಲಾಯಿಸಿ]

೧೦೦ ಗ್ರಾಂ ಉಲ್ಲೇಖದ ಪ್ರಮಾಣದಲ್ಲಿ, ಕಚ್ಚಾ ಕಿತ್ತಳೆ ಸಿಪ್ಪೆಯು ೯೭ ಕ್ಯಾಲೊರಿಗಳನ್ನು ಪೂರೈಸುತ್ತದೆ, ಆಹಾರದ ಫೈಬರ್ ಮತ್ತು ವಿಟಮಿನ್ ಸಿ ಸಮೃದ್ಧವಾದ ಅಂಶದಲ್ಲಿ ಕ್ರಮವಾಗಿ ೪೨% ಮತ್ತು ೨೨೭% ದೈನಂದಿನ ಮೌಲ್ಯವನ್ನು (ಡಿವಿ) ಹೊಂದಿರುತ್ತದೆ. ಕ್ಯಾಲ್ಸಿಯಂ ಅಂಶವು ಡಿವಿ ಯ ೧೬% ಆಗಿದೆ, ಗಮನಾರ್ಹ ಪ್ರಮಾಣದಲ್ಲಿ ಯಾವುದೇ ಇತರ ಸೂಕ್ಷ್ಮ ಪೋಷಕಾಂಶಗಳಿಲ್ಲ.[೨] ೧ ಔನ್ಸ್ (೨೮ ಗ್ರಾಂ) ಹಸಿ ಕಿತ್ತಳೆ ಸಿಪ್ಪೆಯು ವಿಟಮಿನ್ ಸಿ ಗಾಗಿ ೬೩% ಡಿವಿ ಮತ್ತು ಆಹಾರದ ಫೈಬರ್‌ಗಾಗಿ ೧೨% ಡಿವಿ ಅನ್ನು ಒದಗಿಸುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. "pith". Oxford English Dictionary. Archived from the original on 2018-06-27. Retrieved 2020-02-02.
  2. "Orange peel, raw". Nutritiondata.com, Conde Nast from the USDA National Nutrient Database, version SR-21. 2018. Retrieved 22 June 2019.
"https://kn.wikipedia.org/w/index.php?title=ಸಿಪ್ಪೆ&oldid=1137049" ಇಂದ ಪಡೆಯಲ್ಪಟ್ಟಿದೆ