ಭುವನೇಶ್ವರಿ ಕುಮಾರಿ
ಭುವನೇಶ್ವರಿ ಕುಮಾರಿ ಅವರು ಭಾರತದ ಮಾಜಿ ಮಹಿಳಾ ಸ್ಕ್ವ್ಯಾಷ್ ಚಾಂಪಿಯನ್ . [೧]
ಆರಂಭಿಕ ಜೀವನ
[ಬದಲಾಯಿಸಿ]ಪ್ರಿನಸ್ಸಸ್ ಕ್ಯಾಂಡಿ ಎಂದೂ ಕರೆಯಲ್ಪಡುವ ಭುವನೇಶ್ವರಿ ಕುಮಾರಿ ರಾಜಸ್ಥಾನದ ಅಲ್ವಾರ್ ೧ ಸೆಪ್ಟೆಂಬರ್ರಾ ೧೯೮೦ ರಲ್ಲಿ ರಾಜಮನೆತನದಲ್ಲಿ ಜನಿಸಿದವರು. ತೇಜ್ ಸಿಂಗ್ ಪ್ರಭಾಕರ್ ಬಹದ್ದೂರ್ ಅವರ ಮೊಮ್ಮಗಳು. ಯಶ್ವಂತ್ ಸಿಂಗ್ ಮತ್ತು ಬೃಂದಾ ಕುಮಾರಿಯ ಮಗಳು. ಮಾಜಿ ಕ್ರಿಕೇಟ್ ಆಟಗಾರ ಎಸ್ ಶ್ರೀನಾಥ್ ರ ಪತ್ನಿ.[೨] [೩] ದೆಹಲಿ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದಿದ್ದಾರೆ.
ವೃತ್ತಿ
[ಬದಲಾಯಿಸಿ]ಭುವನೇಶ್ವರಿ ಕುಮಾರಿ 1977 ರಿಂದ 1992 ರವರೆಗೆ ಸತತವಾಗಿ 16 ವರ್ಷಗಳ ಕಾಲ ಮಹಿಳಾ ರಾಷ್ಟ್ರೀಯ ಸ್ಕ್ವಾಷ್ ಚಾಂಪಿಯನ್ ಆಗಿದ್ದರು. [೪]
ಅವರಿಗೆ 41 ರಾಜ್ಯ ಪ್ರಶಸ್ತಿಗಳು ಲಭಿಸಿವೆ. 1988 ಮತ್ತು 1989ರಲ್ಲಿ ನಡೆದ ಕೀನ್ಯಾ ಓಪನ್ ಟೂರ್ನಿಯಲ್ಲಿ ಎರಡು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಅವರ ಸಾಧನೆಗಳಿಗಾಗಿ 1982 ರಲ್ಲಿ ಅರ್ಜುನ ಪ್ರಶಸ್ತಿ ಮತ್ತು 2001 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು.
ಸೈರಸ್ ಪೊಂಚಾ ಅವರೊಂದಿಗೆ ಭಾರತೀಯ ಮಹಿಳಾ ಸ್ಕ್ವಾಷ್ ತಂಡದ ಕೋಚ್ ಕೂಡ ಆಗಿದ್ದಾರೆ. ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆದ ಏಷ್ಯನ್ ಗೇಮ್ಸ್ 2018 ಗಾಗಿ ಅವರು ತಂಡಕ್ಕೆ ತರಬೇತಿ ನೀಡಿದ್ದರು. [೫]
ಗುರುತಿಸುವಿಕೆ
[ಬದಲಾಯಿಸಿ]- 1982 ರಲ್ಲಿ ಅರ್ಜುನ ಪ್ರಶಸ್ತಿಯನ್ನು ನೀಡಲಾಗಿದೆ.
- 2001 ರಲ್ಲಿ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. [೬]
- 1983 ರಲ್ಲಿ ದೆಹಲಿ ಕ್ರೀಡಾ ಪತ್ರಕರ್ತ ಸಂಘವು ಅತ್ತ್ಯುತ್ತಮ ಕ್ರೀಡಾ ಮಹಿಳೆ ಪ್ರಶಸ್ತಿಯನ್ನು ನೀಡಿದೆ.
- ರಾಜಸ್ಥಾನ್ ಕ್ರೀಡಾ ಪ್ರಶಸ್ತಿ ಮಂಡಳಿಯಿಂದ 1984ರಲ್ಲಿ ಪ್ರಶಸ್ತಿ ಪ್ರಧಾನ.
- 1990 ರ ಅತ್ಯುತ್ತಮ ಕ್ರೀಡಾಪಟು ವಿಭಾಗದಲ್ಲಿ ಮಹಾರಾಣ ಮೇವಾರ್ ಫೌಂಡೇಶನ್ ನೀಡುವ "ಅರಾವಳಿ ಪ್ರಶಸ್ತಿ" ಕೂಡ ಲಭಿಸಿದೆ.
- 1991 ರಲ್ಲಿ ನೀಡಿದ ಅತ್ಯುತ್ತಮ ಪ್ರದರ್ಶನಕ್ಕಾಗಿ ಕೆಕೆ ಬಿರ್ಲಾ ಫೌಂಡೇಶನ್ ಪ್ರಶಸ್ತಿ ಲಭ್ಯ.
- 1992 ರ ಅತ್ಯುತ್ತಮ ಕ್ರೀಡಾಪಟುವಾಗಿ ಬಾಂಬೆ ಸ್ಪೋರ್ಟ್ಸ್ ಜರ್ನಲಿಸ್ಟ್ ಅಸೋಸಿಯೇಶನ್ ನಿಂದ ಪ್ರಶಸ್ತಿ.
- 1992 ರ ಕ್ರೀಡಾ ವ್ಯಕ್ತಿಗಾಗಿ ಮತ್ತು ಭಾರತೀಯ ಕ್ರೀಡೆಗಳಲ್ಲಿ ಗೆದ್ದ ಹೆಚ್ಚಿನ ಶೀರ್ಷಿಕೆಗಳಿಗಾಗಿಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಪಟ್ಟಿ ಮಾಡಲಾಗಿದೆ.
- ರಾಜಸ್ಥಾನ್ ಒಲಿಂಪಿಕ್ ಅಸೋಸಿಯೇಷನ್ ಪ್ರಶಸ್ತಿ-ಅತ್ಯುತ್ತಮ ಮಹಿಳಾ ಆಟಗಾರ 1993 – 94.
- ಕ್ರೀಡೆಯಲ್ಲಿ ಶ್ರೇಷ್ಠತೆಗಾಗಿ ಮಹಾರಾಜ ಸವಾಯಿ ಮಾಧೋ ಸಿಂಗ್ ಪ್ರಶಸ್ತಿ.
ಉಲ್ಲೇಖಗಳು
[ಬದಲಾಯಿಸಿ]- ↑ "ALWAR". web.archive.org. 2002-07-24. Archived from the original on 2002-07-24. Retrieved 2019-01-01.
{{cite web}}
: CS1 maint: bot: original URL status unknown (link) - ↑ https://www.indiatoday.in/india/south/story/sreesanth-weds-jaipur-princess-nayan-in-kerala-220502-2013-12-12
- ↑ "Alwar". Archived from the original on 2018-09-30. Retrieved 2020-01-26.
- ↑ "Squash Rackets Federation of India". Archived from the original on 2019-01-02. Retrieved 2019-01-01.
- ↑ "Indian squash players question role of coaches Cyrus Poncha and Bhuvneshwari Kumari in Asian Games contingent". The Indian Express (in Indian English). 2018-08-14. Retrieved 2019-11-23.
- ↑ "Padma Awards" (PDF). Ministry of Home Affairs, Government of India. 2015. Archived from the original (PDF) on 15 November 2014. Retrieved 21 July 2015.