ಸ್ಕ್ವ್ಯಾಷ್ (ಕ್ರೀಡೆ)
ಸ್ಕ್ವ್ಯಾಷ್ ಇದು ನಾಲ್ಕು ಗೋಡೆಗಳಿಂದಾವೃತ ಕ್ರೀಡಾಂಗಳದಲ್ಲಿ ಚಿಕ್ಕ, ಪೊಳ್ಳಾದ ರಬ್ಬರ್ ಬಾಲ್‌ನ ಮೂಲಕ ಇಬ್ಬರು ಆಟಗಾರರಿಂದ (ಅಥವಾ ಡಬಲ್ಸ್‌ಗಾಗಿ ನಾಲ್ಕು ಆಟಗಾರರು) ಆಡಲ್ಪಡುವ ಒಂದು ರಾಕೆಟ್ ಆಟ. ಸ್ಕ್ವ್ಯಾಷ್ ಇದು ಐಒಸಿಯಿಂದ ಗುರುತಿಸಲ್ಪಟ್ಟಿದೆ ಮತ್ತು ಭವಿಷ್ಯದ ಓಲಂಪಿಕ್ಆಟಗಳಲ್ಲಿ ಇದನ್ನೂ ಸೇರ್ಪಡಿಸಬೇಕು ಎಂಬ ಹೋರಾಟ ಹಾಗೆಯೇ ಉಳಿದುಕೊಂಡಿದೆ.
ಸ್ಕ್ವ್ಯಾಷ್, ಜಗತ್ತಿನ ಅತಿ ಆರೋಗ್ಯದಾಯಕ ಕ್ರೀಡೆ ಎಂದು ಗುರುತಿಸಲ್ಪಟ್ಟಿದೆ.[೧]
ಈ ಆಟವನ್ನು ಮೊದಲು ಸ್ಕ್ವ್ಯಾಷ್ ರಾಕೆಟ್ ಎಂದು ಕರೆಯಲಾಗುತ್ತಿತ್ತು, "ಕೈಯಿಂದ ಒತ್ತಬಹುದಾದ" ಮೃದುವಾದ ಬಾಲನ್ನು ಈ ಆಟದಲ್ಲಿ ಬಳಸಿರುವ ಒಂದು ಉಲ್ಲೇಖವಿದೆ (ಇದರ ಮೂಲ ಕ್ರೀಡೆಯಾದ ರಾಕೆಟ್‌ನಲ್ಲಿ (ಅಥವಾ rackets; ಕೆಳಗಿನ ಉಲ್ಲೇಖವನ್ನು ಗಮನಿಸಿ) ಬಳಸಿರುವ ಗಟ್ಟಿಯಾದ ಬಾಲಿಗೆ ಹೋಲಿಸಿದರೆ).
ಇತಿಹಾಸ
[ಬದಲಾಯಿಸಿ]ಸ್ಕ್ವ್ಯಾಷ್ ಕಡಿಮೆ ಎಂದರೂ ಐದು ಇತರ ಆಟಗಳು ಮುಖ್ಯವಾಗಿ ರಾಕೆಟ್‌ಗಳು, ಕೈ ಗವಸುಗಳು ಮತ್ತು 1500ರ ಸಮಯದಲ್ಲಿ ಫ್ರಾನ್ಸ್‌ನಲ್ಲಿ ಬಳಕೆಯಲ್ಲಿದ್ದ ಬೇರುಗಳನ್ನು ಒಳಗೊಂಡಿರುವ ಬಾಲುಗಳ ಮೂಲಕ ಅಭಿವೃದ್ಧಿ ಹೊಂದಿದೆ.[೨] ಸ್ಕ್ವ್ಯಾಷ್ ಇದು "ಮನೋರಂಜನೆಗಾಗಿ ತನ್ನ ಪರಿಕರದ ಮೂಲಕ ಗೋಡೆಗೆ ವಿರುದ್ಧವಾಗಿ ಬಾಲನ್ನು ಹೊಡೆಯುವುದರ ಮೂಲಕ ಆರಂಭವಾಯಿತು. ಉದಾಹರಣೆಗೆ, ಹುಡುಗರು ಅಥವಾ ಹುಡುಗಿಯರು ಸಂಕೀರ್ಣವಾದ ಆವರಣದಲ್ಲಿ ಮತ್ತು ಓಣಿಯಲ್ಲಿ ಬಾಲನ್ನು ಹೊಡೆಯುವುದು".[೨]
ಫ್ರಾನ್ಸ್‌ನಲ್ಲಿನ ಧಾರ್ಮಿಕ ಸಂಸ್ಥೆಗಳು, ಮುಖ್ಯವಾಗಿ ಮೊನಾಸ್ಟರೀಸ್ ಎಂಬ ಧಾರ್ಮಿಕ ಸಂಘಟನೆಗಳು ಸಮಾನ ರೀತಿಯ ಕ್ರೀಡೆಯನ್ನು ಅಭಿವೃದ್ದಿಪಡಿಸಿದರು. ಮೊನಾಸ್ಟರೀಸ್ ಧಾರ್ಮಿಕ ಸಂಘಟನೆಯ ಕ್ರೀಡಾಂಗಣದ ಮಧ್ಯಬಾಗದಲ್ಲಿ ಸುತ್ತಲೂ ಕಟ್ಟಲ್ಪಟ್ಟಿರುವ ಬಲೆಯ ವಿರುದ್ಧ ಬಾಲನ್ನು ಹೊಡೆಯಲು ಬಿಕ್ಕುಗಳು (ಸನ್ಯಾಸಿಗಳು) ಕೈ ಗವಸುಗಳನ್ನು ಬಳಸಿಕೊಂಡಿದ್ದರು.[೨] ಇದು ಟೆನ್ನಿಸ್ ಮತ್ತು ಸ್ಕ್ವ್ಯಾಷ್‌ಗಳಲ್ಲಿ ಮೊದಲು ಬಳಸಲಾಗಿದ್ದ "ರಾಕೆಟ್"ಗಳನ್ನು ಅಭಿವೃದ್ಧಿಪಡಿಸಿತು. ನಂತರ ಹದಿನೈದನೇ ಶತಮಾನದ ಕೊನೆಯಲ್ಲಿ, ಟೆನ್ನಿಸ್ ಕ್ರೀಡೆಯು ಹೆಚ್ಚು ಅಭಿವೃದ್ಧಿ ಹೊಂದಿ ಇತರ ಯೂರೋಪಿಯನ್ ರಾಷ್ಟ್ರಗಳಿಗೆ ಹರಡಿತು. ಸ್ಕ್ವ್ಯಾಷ್‌ನಲ್ಲಿನ ನಂತರದ ಪ್ರಮುಖ ಬೆಳವಣಿಗೆ ಎಂದರೆ ಇದನ್ನು "ರಾಕೆಟ್"ಗಳ ಕ್ರೀಡೆಯನ್ನು ಅಭಿವೃದ್ಧಿಪಡಿಸಿದ ಸಾಲಗಾರರ ಕಾರಾಗೃಹವಾದ, ಇಂಗ್ಲೆಂಡಿನ ಫ್ಲೀಟ್ ಕಾರಾಗೃಹದಲ್ಲಿ ಆಡಿಸಲಾಯಿತು.[೨] ಟೆನ್ನಿಸ್‌ಗೆ ಸಮಾನವಾದ, ರಾಕೆಟ್‌ಗಳು ಮತ್ತು ಬಾಲುಗಳನ್ನು ಒಳಗೊಂಡಿರುವ ಆದರೆ ಟೆನ್ನಿಸ್‍ನ ರೀತಿಯಲ್ಲಿ ನೇರವಾಗಿ ಬಲೆಗೆ ಬಾಲನ್ನು ಹೊಡೆಯುವುದರ ಬದಲು ಆಟಗಾರರು, ಒತ್ತಲು-ಸಾಧ್ಯವಾಗದ ಗಟ್ಟಿಯಾದ ಬಾಲನ್ನು ಗೋಡೆಗೆ ಹೊಡೆಯುತ್ತಿದ್ದರು. ರಾಕೆಟ್‌ಗಳಲ್ಲಿನ ವೈವಿಧ್ಯತೆಯೂ ಕೂಡ ಹ್ಯಾಂಡ್‌ಬಾಲ್‍ಗೆ ಸಮನಾದ ಪೈವ್ಸ್ ಎಂದು ಕರೆಯಬಹುದಾದ ಸ್ಕ್ವ್ಯಾಷ್‌ನ ರಚನೆಗೆ ಕಾರಣವಾಗಿತ್ತು. ಫೈವ್ಸ್ ಅವಷ್ಯವಾಗಿ ರಾಕೆಟ್‌ನೊಂದಿಗೆ ಮತ್ತು ರಾಕೆಟ್ ಇಲ್ಲದೆಯೇ ಆಡಬಹುದಾದ ಆಟವಾಗಿತ್ತು. (ಬಾಲನ್ನು ಕೈ ಮೂಲಕ ಹೋಡೆಯಲಾಗುತ್ತಿತ್ತು.)[೨] ಇದನ್ನು ಗೋಡೆ ಅಥವಾ ಗೋಡೆಗಳಿಗೆ ವಿರುದ್ಧವಾಗಿ ಆಡಲಾಗುತ್ತಿತ್ತು.
ಸ್ಕ್ವ್ಯಾಷ್ ಇದು ಮೊಟ್ಟ ಮೊದಲ ಬಾರಿಗೆ 1581 ರಲ್ಲಿ ಒಬ್ಬ ಶಾಲಾ ಶಿಕ್ಷಕನ ಮೂಲಕ ಉಲ್ಲೇಖಿಸಲ್ಪಟ್ಟಿತ್ತು. 1856ರಲ್ಲಿ, ಈ ಪುಟಿದೇಳುವ ಬಾಲಿನ ಆಟವನ್ನು ಸುತ್ತಲೂ ಗೋಡೆಯಿಂದ ಮುಚ್ಚಲ್ಪಟ್ಟ ಕ್ರೀಡಾಂಗಣದಲ್ಲಿ ಆಡಿಸಲಾಯಿತು. ಈ ಕ್ರೀಡಾಂಗಣವು ಸರಿಸುಮಾರು ರಗ್ಬಿ ಕ್ರೀಡಾಂಗಣ ಮತ್ತು ಅಸ್ಟೇ ಸಮಾನ ರೂಪದ ಕೆಲವು ಖಾಸಗೀ ಮನೆಗಳಂತಿದ್ದವು.
ಪ್ರಾಥಮಿಕವಾಗಿ ಸ್ಕ್ವ್ಯಾಷ್ ರಾಕೆಟ್‌ಗಳನ್ನು ಲೋಹದ ಹೊದಿಕೆಯುಳ್ಳ ಮರದ ತುಂಡಿನ ಮೂಲಕ ಮಾಡಲಾಗುತ್ತಿತ್ತು. ನಂತರದ ದಿನಗಳಲ್ಲಿ, 1980ರ ಸಮಯದಲ್ಲಿ, ಇದನ್ನು ಕೆಲ್ವರ್, ಬೊರೊನ್, ಟಿಟಾನಿಯಮ್ ಮತ್ತು ಗ್ರಾಫೈಟ್‌ನಂತಹ ಲೋಹಗಳ ಮೂಲಕ ಮಾಡಲಾಗುತ್ತಿತ್ತು. ಇದನ್ನು ನೈಸರ್ಗಿಕ ಮರದ ಕಂಬಿಯಿಂದ ಕೃತಕ ಕಂಬಿಗೆ ಬದಲಾಯಿಸಲಾಯಿತು.
ಈ ಎಲ್ಲಾ ಆಟಗಳೂ ಜನಪ್ರಿಯತೆಯನ್ನು ಗಳಿಸಿದ್ದವು ಮತ್ತು ಮುಂದುವರಿದಂತೆ ಇಂಗ್ಲೆಂಡಿನ ಪ್ರಸಿದ್ಧ ಹ್ಯಾರೋ ಸ್ಕೂಲ್ ನಂತಹ ಶಾಲೆಗಳಲ್ಲಿ ಹೆಚ್ಚು ಅಭಿವೃದ್ಧಿ ಹೊಂದಿದವು.[೩] ಈ ಶಾಲೆಯಲ್ಲಿ ರಚಿಸಲಾದ ಮೊದಲ ಕ್ರೀಡಾಂಗಣ ಹೆಚ್ಚು ಅಪಾಯಕಾರಿಯಾಗಿತ್ತು ಏಕೆಂದರೆ ಅವು ನೀರಿನ ಕೊಳವೆಗಳು, ಊರುಗಂಬಗಳು, ಚಿಮಣಿಗಳು ಮತ್ತು ಗೋಡೆಯ ಅಂಚುಗಳಿಗೆ ತುಂಬಾ ಹತ್ತಿರವಾಗಿದ್ದವು. ಇದಾದ ಕೆಲವೆ ದಿನಗಳ ನಂತರ ಶಾಲೆಯು ನಾಲ್ಕು ಹೊರಾಂಗಣ ಕ್ರೀಡಾಂಗಣವನ್ನು ನಿರ್ಮಿಸಿತು. ಬಾಲಿನ ಆಯ್ಕೆಯಲ್ಲಿ ನೈಸರ್ಗಿಕ ರಬ್ಬರ್ ಒಂದು ಪ್ರಮುಖ ಮೂಲವಸ್ತುವಾಗಿತ್ತು. ಚಳಿಗಾಲದ ಸನ್ನಿವೇಶದಲ್ಲಿ ಆಡುವ ಸಲುವಾಗಿ ವಿಧ್ಯಾರ್ಥಿಗಳು ತಮ್ಮ ರಾಕೆಟ್‌ಗಳನ್ನು ಸಣ್ಣ ರೂಪಕ್ಕೆ ಪರಿವರ್ತಿಸಿಕೊಂಡರು.[೨]
1900ರಲ್ಲಿ ಈ ಆಟವು ಜನಪ್ರಿಯತೆಯಲ್ಲಿ ಹಲವಾರು ಶಾಲೆಗಳಲ್ಲಿ, ಸಂಘಗಳಲ್ಲಿ ಮತ್ತು ಕೆಲವು ಖಾಸಗೀ ನಾಗರೀಕರ ಮನೆಯಲ್ಲಿನ ಸ್ಕ್ವ್ಯಾಷ್ ಕ್ರೀಡಾಂಗಣದಲ್ಲಿ ಹೆಚ್ಚು ವಿಸ್ತೃತಗೊಂಡಿತು ಆದರೆ ಅಲ್ಲಿ ಯಾವುದೇ ನಿರ್ಧಿಷ್ಟ ಮಾನದಂಡಗಳಿರಲಿಲ್ಲ. ಉತ್ತರ ಅಮೇರಿಕಾದ ಮೊಟ್ಟ ಮೊದಲ ಸ್ಕ್ವ್ಯಾಷ್ ಕ್ರೀಡಾಂಗಣ ನ್ಯೂ ಹ್ಯಾಂಪ್‌ಶೈರ್‌ನ ಸೈಂಟ್.ಪಾಲ್ ಶಾಲೆಯಲ್ಲಿ 1884ರಲ್ಲಿ ಪ್ರಾರಂಭಗೊಂಡಿತು. 1904 ರಲ್ಲಿ ಪೆನ್ಸಿಲ್‌ವೇನಿಯಾದ ಫಿಲಿಡೆಲ್ಫಿಯಾದಲ್ಲಿ, ಜಗತ್ತಿನ ಮೊದಲ ರಾಷ್ಟ್ರೀಯ ಸ್ಕ್ವ್ಯಾಷ್ ಸಂಘಟನೆಯು ಯುನೈಟಡ್ ಸ್ಟೇಟ್ಸ್ಸ್ ಸ್ಕ್ವ್ಯಾಷ್ ರಾಕೆಟ್ಸ್ ಅಸೋಸಿಯೇಶನ್ (USSRA) ಎಂಬ ಹೆಸರಿನಲ್ಲಿ ಹುಟ್ಟಿಕೊಂಡಿತು, ಈಗ ಈ ಅಟ ಯುಎಸ್-ಸ್ಕ್ವ್ಯಾಷ್ ಎಂದು ಜನಪ್ರಿಯಗೊಂಡಿದೆ. 1907ರ ಎಪ್ರಿಲ್‌ನಲ್ಲಿ ಸ್ಕ್ವ್ಯಾಷ್ ಅನ್ನು ಉತ್ತಮ ದರ್ಜೆಗೇರಿಸುವ ಸಲುವಾಗಿ ಟೆನ್ನಿಸ್, ರಾಕೆಟ್ ಮತ್ತು ಫೈವ್ಸ್ ಸಂಘಟನೆಗಳು ಇದರ ಉಪ-ಸಮೀತಿಗಳಾಗಿ ರೂಪಗೊಂಡವು. ನಂತರದಲ್ಲಿ ಈ ಆಟವು ಎಲ್ಲಾ ಮೂರೂ ಆಟಗಳನ್ನೂ ಒಂದುಗೂಡಿಸಿ "ಸ್ಕ್ವ್ಯಾಷ್" ಎಂದು ಕರೆಯಲ್ಪಡುವ ಕ್ರೀಡೆಯನ್ನು ರಚಿಸಿತು. ಇದು ನಿಯಮ ಮತ್ತು ನಿಬಂಧನೆಗಳಿಗಾಗಿನ ಮುಂದಿನ ಚರ್ಚೆಗಾಗಿ ಆತಿಥೇಯ ದಿ ರಾಯಲ್ ಅಟೋಮೊಬೈಲ್ ಕ್ಲಬ್ ನಡೆಸಿದ ಸಭೆ, 1923ರ ವರೆಗೆ ಎನೂ ಆಗಿರಲಿಲ್ಲ, ಮತ್ತು ಗ್ರೇಟ್ ಬ್ರಿಟನ್‌ನಲ್ಲಿ ಸ್ಕ್ವ್ಯಾಷ್‌ಅನ್ನು ಉತ್ತಮ ದರ್ಜೆಗೇರಿಸುವ ಸಲುವಾಗಿ ಸ್ಕ್ವ್ಯಾಷ್ ರಾಕೆಟ್ ಸಂಘಟನೆಯು ರೂಪಗೊಳ್ಳುವುದಕ್ಕೂ ಮುನ್ನ ಇನ್ನೂ ಐದು ವರ್ಷಗಳು ಕಳೆದುಹೋದವು.
ಈ ಕ್ರೀಡೆಯು ಅಮೇರಿಕಾ ಮತ್ತು ಕೆನಡಾಗಳಿಗೂ ಹಬ್ಬಿತು ಮತ್ತು ಅಂತಿಮವಾಗಿ ಇಡೀ ಜಗತ್ತಿನಾದ್ಯಂತ ಪಸರಿಸಿತು. ಈಗಿಪ್ಟಿನ ಆಟಗಾರನಾದ ಎಫ್.ಡಿ ಆಮರ್ ಬೇ ಅವರಂತಹ ಆಟಗಾರರು 1930ರಲ್ಲಿ ಕ್ರೀಡಾಂಗಣವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದರು, 1960 ಮತ್ತು 1970ರ ಸಮಯದಲ್ಲಿ ಆಸ್ಟ್ರೇಲಿಯಾದ ಜೆಫ್ ಹಂಟ್ ದಾಖಲೆಯ ಎಂಟು ಬ್ರಿಟೀಷ್ ಒಪನ್ ಸ್ಪರ್ಧೆಯಲ್ಲಿ ಗೆಲ್ಲುವ ಮೂಲಕ ಆಟದ ಮೇಲೆ ತಮ್ಮ ಹತೋಟಿಯನ್ನು ಹೊಂದಿದ್ದರು ಮತ್ತು 1980 ಮತ್ತು 1990ರ ಸಮಯದಲ್ಲಿ ಪಾಕಿಸ್ಥಾನದ ಜಹಾಂಗಿರ್ ಖಾನ್ ದಾಖಲೆಯ ಹತ್ತು ಬ್ರಿಟೀಷ್ ಒಪನ್ ಸ್ಪರ್ಧೆಯನ್ನು ಹಾಗೂ ಜಾನ್‌ಶೇರ್ ಖಾನ್ ದಾಖಲೆಯ ವರ್ಲ್ಡ್ ಓಪನ್ ಪಂದ್ಯವನ್ನು ಎಂಟು ಬಾರಿ ಗೆದ್ದಿದ್ದರು.[೩] 7 ಬಾರಿ ಬ್ರಿಟೀಷ್ ಓಪನ್ ಚಾಂಪಿಯನ್‌ಶಿಪ್ ವಿಜೇತನಾದ, ದಂತಕಥೆಯಾದ ಹಾಸಿಮ್ ಖಾನ್ ಮತ್ತು 12 ಬಾರಿ ನಾರ್ಥ್ ಅಮೇರಿಕನ್ ಓಪನ್ ಪ್ರಶಸ್ತಿಯನ್ನು ಗೆದ್ದ ಆತನ ಮಗನಾದ ಶರೀಫ್ ಖಾನ್ ಅವರ ಉಲ್ಲೇಖವಿಲ್ಲದೇ ಸ್ಕ್ವ್ಯಾಷ್ ವಿಜೇತರುಗಳ ಪಟ್ಟಿಯು ಸಂಪೂರ್ಣವಾಗುವುದಿಲ್ಲ. ಹಾಸಿಮ್ ಅವರನ್ನು ಸಾರ್ವಕಾಲಿಕ ಕ್ರೀಡಾಪಟುಗಳಲ್ಲಿಯೇ ಅತ್ಯಂತ ಪ್ರಮುಖ ಕ್ರೀಡಾಪಟು ಎಂದು ಗುರುತಿಸಲಾಗುತ್ತದೆ ಮತ್ತು ಆವರ ಜೊತೆಗೆ ಅವರ ಸಹೋದರರಾದ ಅಜಾಮ್, ಸೋದರಳಿಯರಾದ ಮೋಹಿಬುಲ್ಲಾ ಮತ್ತು ಗುಲ್, ಮಕ್ಕಳಾದ ಶರೀಫ್, ಗುಲ್ಮಸ್ತ್, ಅಜೀಜ್, ಲಿಖತ್ ಅಲಿ ಮತ್ತು ಸಲೀಮ್ ಖಾನ್ - ಇವರೆಲ್ಲರೂ ತಮ್ಮದೇ ಆದ ವೈಶಿಷ್ಟ್ಯತೆಯಲ್ಲಿ ಸ್ಕ್ವ್ಯಾಷ್ ವಿಜೇತರುಗಳಾಗಿದ್ದರು, ಹಾಗಾಗಿ ಹಾಸಿಮ್ ಅವರು ಕ್ರೀಡಾ ಸಾಮ್ರಾಜ್ಯದ ಹಿರಿಯ ಅಧಿಪತಿಯಾಗಿದ್ದರು. ಜಹಾಂಗೀರ್ ಖಾನ್ ಮತ್ತು ಜಾನಸರ್ ಖಾನ್ ಇಬ್ಬರೂ ಕೂಡ 1940 ಮತ್ತು 1950ರ ಸುಮಾರಿನಲ್ಲಿ ಹಾಸಿಮ್ ಅವರಿಂದ ಆರಂಭಗೊಂಡ, ದಂತಕಥೆಯಾದ ಖಾನ್ ಸಾಮ್ರಾಜ್ಯದ ಭಾಗವಾಗಿದ್ದರು.
ಕ್ರೀಡಾಂಗಣ
[ಬದಲಾಯಿಸಿ]ಸಾಪ್ಟ್‌ಬಾಲ್ ಅಥವಾ ಅಂತರಾಷ್ಟ್ರೀಯ ಕ್ರೀಡಾಂಗಣದ ಗಾತ್ರವನ್ನು, 32 ಅಡಿ (9.75 ಮೀಟರ್) ಉದ್ದ ಮತ್ತು 21 ಅಡಿ (6.4 ಮೀಟರ್) ಅಗಲ ಎಂದು 1920ರಲ್ಲಿ ಇಂಗ್ಲೆಂಡಿನ ಲಂಡನ್‌ನಲ್ಲಿ ಕ್ರೋಡೀಕರಿಸಲಾಯಿತು. ಎದುರಿನ ಗೋಡೆಯು ನೆಲದಿಂದ ಮೇಲಕ್ಕೆ 15 ಅಡಿ (4.57 ಮೀಟರ್) "ಹೊರ ಚೌಕಟ್ಟನ್ನು" ಒಳಗೊಂಡಿರುತ್ತದೆ ಅಲ್ಲದೇ ಇದನ್ನು ಹಿಂದಿನ ಗೋಡೆಯ ನೆಲದಿಂದ 7 ಅಡಿ (2.13 ಮೀತರ್) ಎತ್ತರವಿರುವ "ಹೊರ" ಚೌಕಟ್ಟನ್ನು ಸೇರುವಂತೆ ರಚಿಸಲಾಗುತ್ತದೆ. ಎದುರಿನ ಗೋಡೆಯು 19 (48 cm) ಇಂಚುಗಳಷ್ಟು ಎತ್ತರವಿರುವ ಬಲೆಯ ಹಾಗಿರುವ "ಟಿನ್"ನೊಂದಿಗೆ ನೆಲದಿಂದ 6 ಅಡಿ (1.83 ಮೀಟರ್) ಎತ್ತರದಲ್ಲಿ ಒಂದು ಸರ್ವಿಸ್ ರೇಖೆಯನ್ನು (ಮೊದಲು ಇದನ್ನು "ಕಟ್ ಲೈನ್" ಎಂದು ಕರೆಯಲಾಗುತ್ತಿತ್ತು) ಕೂಡ ಒಳಗೊಂಡಿರುತ್ತದೆ (ಮೂಲತಹವಾಗಿ ಈ ಕ್ರೀಡಾಂಗಣವನ್ನು, ಬಾಲನ್ನು ಹೊಡೆದಾಗ ಒಂದು ವಿಶೇಷವಾದ ಧ್ವನಿಯನ್ನು ಹೊರಡಿಸುವ ಸಲುವಾಗಿ ಲೋಹದ ಶೀಟುಗಳೊಂದಿಗೆ ಮಾಡಲಾಗಿತ್ತು). ನೆಲವನ್ನು "ಅರ್ಧ-ಆವರಣದ" ಸುತ್ತ ಅಡ್ದಡ್ದವಾದ ರೇಖೆಗಳಿಂದ ಗುರುತಿಸಲಾಗಿತ್ತು ಮತ್ತು ಮುಂದುವರಿದಂತೆ ಎರಡು ಹಿಂಬದಿಯ "ಕ್ವಾರ್ಟರ್-ಆವರಣ"ಗಳಾಗಿ ಮತ್ತು "ಸರ್ವಿಸ್ ಬಾಕ್ಸ್"ಗಳಾಗಿ, ಮೇಲಿನ ಚಿತ್ರಣದಲ್ಲಿ ತೋರಿಸರುವಂತೆ ವಿಭಜನೆಗೊಂಡಿದ್ದವು.
ಯೂ.ಎಸ್. ಕ್ರೀಡೆಗಾಗಿನ (ಈಗ ಅದನ್ನು ಹ್ಯಾಂಡ್‌ಬಾಲ್ ಸ್ಕ್ವ್ಯಾಷ್ ಎಂದು ಉಲ್ಲೇಖಿಸಲಾಗುತ್ತಿದೆ) ಸಾಂಪ್ರದಾಯಿಕ "ಅಮೇರಿಕಾ"ದ ಆವರಣವು ಸಮಾನ ಗಾತ್ರವನ್ನು ಹೊಂದಿತ್ತು ಆದರೆ ಇದು 18 ಅಡಿ 6 ಇಂಚುಗಳಷ್ಟು (5.64 ಮೀಟರ್) ಸಂಕುಚಿತವಾಗಿತ್ತು. ನೆಲ ಮತ್ತು ಗೋಡೆಗಳ ರಚನೆಯು "ಅಂತರಾಷ್ಟೀಯ" ಆವರಣಕ್ಕೆ ಹೋಲಿಸಿದರೆ ಸ್ವಲ್ಪ ಭಿನ್ನವಾಗಿದ್ದವು ಮತ್ತು ಬಲೆಯ ರೂಪದಲ್ಲಿರುವ ಟಿನ್ 15 ಇಂಚುಗಳಷ್ಟು (38 cm) ಎತ್ತರದಲ್ಲಿದ್ದು ಅತ್ಯಂತ ಕೆಳಮಟ್ಟದಲ್ಲಿತ್ತು. ಆದಾಗ್ಯೂ, ಹ್ಯಾಂಡ್‌ಬಾಲ್ ಸ್ಕ್ವ್ಯಾಷ್ ಇದು ಅಮೇರಿಕಾದಲ್ಲಿ ಉತ್ತಮ ದರ್ಜೆಯ ಸ್ಕ್ವ್ಯಾಷ್ ಆವೃತ್ತಿಯಂತೆ ಸಾಪ್ಟ್‌ಬಾಲ್‌ನಿಂದ ಬದಲಾಯಿಸಲ್ಪಟ್ಟಿತು ಮತ್ತು ಸಂಪೂರ್ಣವಾಗಿ ನಶಿಸಿ ಹೋಯಿತು.
ಒಂದು "ಬದಲಾಯಿಸಲ್ಪಟ್ಟ ಆವರಣದ" ಪರಿಣಾಮವಾಗಿ ರಾಕೆಟ್ ಬಾಲ್ ಆವರಣದಿಂದ ಸ್ಕ್ವ್ಯಾಷ್‌ಗೆ ಬದಲಾದಯಿತು. ರಾಕೆಟ್‌ಬಾಲ್ ಆವರಣವು 20 ಅಡಿ (6.1 ಮೀಟರ್) ಅಗಲ ಮತ್ತು 40 ಅಡಿ (12.2 ಮೀಟರ್) ಉದ್ದವಾಗಿತ್ತು, ಹೀಗಾಗಿ ಸಾಪೇಕ್ಷವಾಗಿ ಹಿಂದಿನ ಗೋಡೆಯ ಮೇಲೆ 20 ಅಡಿ (6.1 ಮೀಟರ್) ಅಗಲ ಮತ್ತು 32 ಅಡಿ (9.75 ಮೀಟರ್) ಉದ್ದವಾದ ಸ್ಕ್ವ್ಯಾಷ್ ಆವರಣವನ್ನು ಸ್ಥಾಪಿಸಲು ಬಹಳ ಅನುಕೂಲಕರವಾಗಿತ್ತು.
ಆಟದ ಪರಿಕರಗಳು
[ಬದಲಾಯಿಸಿ]ಆಟದ ನಿಯಮಾವಳಿಂದ ನಿರ್ಧರಿಸಲ್ಪಟ್ಟ ಉತ್ತಮ ದರ್ಜೆಯ ರಾಕೆಟ್‌ಗಳು. ಸಾಂಪ್ರದಾಯಿಕವಾಗಿ ಇದನ್ನು ಮರದ ಹೊದಿಕೆಯ (ಲಾಕ್ಷಣಿಕ ಹೊಟ್ಟು) ಮೂಲಕ ಮಾಡಲಾಗುತ್ತಿತ್ತು, ಜೊತೆಗೆ ಕಟ್ಟುವ ಪ್ರದೇಶವನ್ನು ಗಟ್ಟಿಯಾದ ದಾರದ ಮೂಲಕ ಬಿಗಿಯಾಗಿ ಕಟ್ಟಲಾಗುತ್ತಿತ್ತು. 1980ರ-ಮಧ್ಯದಲ್ಲಿ ಬದಲಾದ ನಿಯಮಾವಳಿಗಳಿಂದಾಗಿ ಇದನ್ನು ಸಾಮಾನ್ಯವಾಗಿ ಸಂಯುಕ್ತ ಸರಕುಗಳ ಅಥವಾ ಲೋಹಗಳ (ಗ್ರಾಫೈಟ್, ಕೆಲ್ವರ್, ಟಿಟಾನಿಯಮ್, ಬೊರೊನ್) ಮೂಲಕ ಸಂಯೋಜಿತ ದಾರಗಳಿಂದ ನಿರ್ಮಿಸಲಾಗುತ್ತದೆ. ಆಧುನಿಕ ರಾಕೆಟ್‌ಗಳ ಮಾನದಂಡಗಳು ಸಾಮಾನ್ಯವಾಗಿ 686 ಮಿ.ಮೀ. ಉದ್ದ (27.0 ಇಂಚುಗಳು) ಮತ್ತು 215 ಮಿ.ಮೀ. ಅಗಲವಿದ್ದು (8.5 ಇಂಚುಗಳು) ಸರಿಸುಮಾರು 500 ಚ.ಸೆ.ಮಿ ನಷ್ಟು (ಅಂದಾಜು 90 ಚದರ ಇಂಚುಗಳು) ದಾರ ಕಟ್ಟುವ ಪ್ರದೇಶವನ್ನು ಹೊಂದಿರುತ್ತದೆ, ಅನುಮತಿ ನೀಡಲ್ಪಟ್ಟ ತೂಕವು 255 ಗ್ರಾಂ. (ಅಂದಾಜು 9 oz.)ಇರುತ್ತದೆ, ಆದರೆ ಹೆಚ್ಚಾಗಿ ಹಲವಾರು ರಾಕೆಟ್‌ಗಳ ತೂಕವು 110 ರಿಂದ 200 ಗ್ರಾಂ. (4-7 oz.) ಇರುತ್ತವೆ.
ಸ್ಕ್ವ್ಯಾಷ್ ಬಾಲ್ ಸುತ್ತಳತೆಯಲ್ಲಿ 39.5 ಮಿ.ಮಿ ಮತ್ತು 40.5 ಮಿ.ಮಿ ನಷ್ಟು ಇರುತ್ತದೆ ಮತ್ತು ಸುಮಾರು 23 ರಿಂದ 25 ಗ್ರಾಂ. ನಷ್ಟು ತೂಕವಿರುತ್ತದೆ.[೪]
ಅವುಗಳು ಎರಡು ರಬ್ಬರ ತುಂಡುಗಳ ಸಂಯೋಜನೆಯ ಮೂಲಕ ಒಳಗಡೆ ಟೊಳ್ಳಾಗಿರುವಂತೆ ಎರಡೂ ತುಂಡುಗಳನ್ನು ಗೋಳಾಕೃತಿಯಲ್ಲಿ ಅಂಟಿಸಿ, ಮೇಲ್ಪದರವನ್ನು ನಯಗೊಳಿಸಿ ರಚನೆಗೊಂಡಿರುತ್ತವೆ. ಬದಲಾಗುತ್ತಿರುವ ತಾಪಮಾನ ಮತ್ತು ವಾತಾವರಣದ ಸ್ಥಿತಿಗನುಗುಣವಾಗಿ ಹಾಗೂ ಆಟದ ದರ್ಜೆಗನುಗುಣವಾಗಿ ವಿವಿಧ ರೀತಿಯ ಬಾಲುಗಲನ್ನು ಒದಗಿಸಲಾಗುತ್ತಿತ್ತು: ಹೆಚ್ಚು ಅನುಭವಿ ಆಟಗಾರರು ಕಡಿಮೆ ಅನುಭವಿರುವ ಆಟಗಾರರು ಬಳಸುವ ಬಾಲುಗಳಿಗಿಂತ ಭಿನ್ನವಾದ ಕಡಿಮೆ ವೇಗವಿರುವ ಹಾಗು ಕಡಿಮೆ ಪುಟಿದೇಳುವ ಬಾಲುಗಳನ್ನು ಬಳಸುತ್ತಿದ್ದರು (ಕಡಿಮೆ ವೇಗವಿರುವ ಬಾಲುಗಳು "ನಿಂತಲ್ಲಿಯೇ ಇದ್ದು" ಸುಲಭವಾದ ಹೊಡೆತಗಳನ್ನು ಹೊಡೆಯಲು ಅವಕಾಶ ಮಾಡಿಕೊಡುವುದರ ಬದಲಾಗಿ ಆವರಣದ ಅಂಚುಗಳಲ್ಲಿ "ಮುಂದಕ್ಕೆ ಬಾಗಿ" ಬಾಲನ್ನು ಹೊಡೆಯಲು ಅನುಕೂಲಕರವಾಗಿದ್ದವು). ಅದರ ನಿರ್ಧಿಷ್ಟ ರಬ್ಬರ್ ಸಂಯೋಜನೆಗೆ ಅನುಗುಣವಾಗಿ, ಒಂದು ಸ್ಕ್ವ್ಯಾಷ್ ಬಾಲ್ ಅಧಿಕ ತಾಪಮಾನವಿರುವ ಸನ್ನಿವೇಶಗಳಲ್ಲಿ ಹೆಚ್ಚು ಪುಟಿದೇಳುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಬಾಲ್ ಮೇಲಿನ ಚಿಕ್ಕ ಬಣ್ಣದ ಬಿಂದುಗಳು ಅದರ ಚಲನಾತ್ಮಕ ಪ್ರಮಾಣವನ್ನು (ಪುಟಿದೇಳುವಿಕೆ), ಮತ್ತು ಆ ಮೂಲಕ ಅದಕ್ಕೆ ಸೂಕ್ತವಾದ ಆಟದ ಸ್ಥಾನಮಾನವನ್ನು ಸೂಚಿಸುತ್ತದೆ. ಚಲನಾತ್ಮಕತೆಯ ಪ್ರಮಾಣವನ್ನು ಸೂಚಿಸುತ್ತಿರುವ ಗುರುತಿಸಲ್ಪಟ್ಟ ವೇಗದ ಬಣ್ಣಗಳೆಂದರೆ:
ಬಣ್ಣಗಳು | ವೇಗ | ಪುಟಿದೇಳುವಿಕೆ |
---|---|---|
ಕಿತ್ತಳೆ | ಸುಪರ್ ಸ್ಲೋ | ಸುಪರ್ ಲೋ |
ದ್ವಿವಿಧ ಹಳದಿ | ಸುಪರ್ ಸ್ಲೋ | ವೆರಿ ಲೋ |
ಹಳದಿ | ಸುಪರ್ ಸ್ಲೋ | ಲೋ |
ಹಸಿರು ಅಥವಾ ಬಿಳಿ | ಸ್ಲೋ | ಎವರೇಜ್ |
ಕೆಂಪು | ಮೀಡಿಯಮ್ | ಹೈ |
ನೀಲಿ | ಫಾಸ್ಟ್ | ವೆರಿ ಹೈ |
ಬಾಲುಗಳನ್ನು ಪ್ರಿನ್ಸ್, ಡನ್‌ಲಾಪ್, ಪಾಯಿಂಟ್‌ಪೋರ್, ವಿಲ್ಸನ್, ಬ್ಲ್ಯಾಕ್ ನೈಟ್ ಮತ್ತು ಇತರ ಉತ್ತಮ ದರ್ಜೆಗಾಗಿ ಉತ್ಪಾಶಿಸಲಾಗುತ್ತಿತ್ತು. "ಎರಡು-ಹಳದಿ ಬಿಂದು"ವಿರುವ ಬಾಲನ್ನು 2000 ರಲ್ಲಿ ಪರಿಚಯಿಸಲಾಯಿತು, ಇದು ಪ್ರಸ್ಥುತ ಸ್ಪರ್ಧಾತ್ಮಕ ದರ್ಜೆಯದು ಮತ್ತು ಹಿಂದಿನ "ಹಳದಿ-ಬಿಂದುವಿನ" ಬಾಲನ್ನು ಇದು ಬದಲಾಯಿಸಿತು. ಅಲ್ಲಿ ಮೆಕ್ಸಿಕೋ ನಗರ, ಕ್ಯಾಲ್‌ಗರಿ, ಡೆನ್ವರ್ ಮತ್ತು ಜೋಹಾನ್ಸ್‌ಬರ್ಗ್ ನಂತಹ ಅತ್ಯಂತ ಎತ್ತರದ ಪ್ರದೇಶದಲ್ಲಿ ಬಳಕೆಗಾಗಿ ರೂಪಿಸಲಾದ "ಎರಡು-ಹಳದಿ ಬಿಂದು"ವಿರುವ ಬಾಲಿಗಿಂತ ಕಡಿಮೆ ಪುಟಿದೇಳುವ "ಕಿತ್ತಳೆ ಬಣ್ಣದ ಬಿಂದುವಿರುವ" ಬಾಲ್ ಕೂಡ ಇತ್ತು. ಈ ಎತ್ತರದ ಪ್ರದೇಶಗಳ ಕಡಿಮೆ ತಾಪಮಾನದ ಒತ್ತಡವೆಂದರೆ ಆ ಬಾಲಿನ ವೈಶಿಷ್ಟ್ಯವೆಂಬಂತೆ ಬಾಲ್ ಸ್ವಲ್ಪ ಎತ್ತರವಾಗಿ ಪುಟಿಯುವುದು.
ಲಭ್ಯವಿರುವ ಇತರ ಬಾಲ್‌ಗಳು:
- ಡನ್‌ಲೊಪ್ "ಮ್ಯಾಕ್ಸ್ ಬ್ಲ್ಯೂ" (ಆರಂಭಿಕ ಆಟಗಾರರನ್ನು ಗಮನದಲ್ಲಿಟ್ಟುಕೊಂಡು ರಚಿಸಿದ್ದು), ಇದು "ಎರಡು-ಹಳದಿ ಬಿಂದು"ವಿರುವ ಬಾಲಿಗಿಂತ 12% ದೊಡ್ಡ ಮತ್ತು 40% ದೀರ್ಘಾವಧಿಯ ಬಾಳಿಕೆಯ ಸಮಯವನ್ನು ಮತ್ತು "ತ್ವರಿತ ಪುಟಿದೇಳುವ" ಸಾಮರ್ಥ್ಯವನ್ನು ಹೊಂದಿತ್ತು.
- ಡನ್‌ಲೊಪ್ "ಮ್ಯಾಕ್ಸ್ ಪ್ರೊಗ್ರೆಸ್" (ಕೆಂಪು) (ತಮ್ಮ ಕೌಶಲ್ಯವನ್ನು ಸುಧಾರಿಸಿಕೊಳ್ಳುಲು ಇಚ್ಚಿಸುವ ಆಟಗಾರರಿಗಾಗಿ), ಇದು "ಎರಡು-ಹಳದಿ ಬಿಂದು"ವಿರುವ ಬಾಲಿಗಿಂತ 6% ದೊಡ್ಡ ಮತ್ತು 20% ದೀರ್ಘಾವಧಿಯ ಬಾಳಿಕೆಯ ಸಮಯವನ್ನು ಮತ್ತು "ತ್ವರಿತ ಪುಟಿದೇಳುವ" ಸಾಮರ್ಥ್ಯವನ್ನು ಹೊಂದಿತ್ತು.
ಒದಗಿಸಲ್ಪಟ್ಟ ಆಟಗಳ ಹುರುಪಿನಿಂದಾಗಿ, ಆಟಗಾರರು ಆರಾಮದಾಯಕವಾದ ಕ್ರೀಡಾ ಬಟ್ಟೆಗಳನ್ನು ಮತ್ತು ಗಟ್ಟಿಮುಟ್ಟಾದ ಒಳಾಂಗಣ (ಚಿನ್ಹೆಗಳಿಲ್ಲದ) ಬೂಟುಗಳನ್ನು ಧರಿಸುತ್ತಿದ್ದರು. ಸ್ಪರ್ಧೆಯಲ್ಲಿ, ಪುರುಷರು ಸಾಮಾನ್ಯವಾಗಿ ಚಿಕ್ಕದಾದ ಉಡುಪನ್ನು ಮತ್ತು ಟಿ-ಶರ್ಟ್ ಅಥವಾ ಪೋಲೋ ಶರ್ಟ್ ಅನ್ನು ಧರಿಸುತ್ತಿದ್ದರು. ಮಹಿಳೆಯರು ಸಾಮಾನ್ಯವಾಗಿ ಸ್ಕರ್ಟ್ ಮತ್ತು ಟಿ-ಶರ್ಟ್ ಅಥವಾ ಟ್ಯಾಂಕ್ ಮೇಲಂಗಿಯನ್ನು ಅಥವಾ ಕ್ರೀಡಾ ಬಟ್ಟೆಗಳನ್ನು ಧರಿಸುತ್ತಿದ್ದರು. ತೇವಯುಕ್ತ ವಾತಾವರಣದಲ್ಲಿ ಕೆಲವೊಮ್ಮೆ ಮಣಿಕಟ್ಟುಗಳನ್ನು ಒರೆಸಿಕೊಳ್ಳಲು ಟವೆಲ್‌ಗಳು ಮತ್ತು ಹೆಡ್ ಬ್ಯಾಂಡ್‌ಗಳೂ ಕೂಡ ಅವಶ್ಯವಾಗಿದ್ದವು. ರಾಕೆಟ್ ಅಥವಾ ವೇಗವಾಗಿ-ತಿರುಗಿ ಬರುವ ಬಾಲ್‌ನಿಂದ ಹೊಡೆತಕ್ಕೊಳಗಾಗುವ ಕಾರಣದಿಂದಾಗಿ ಪೋಲಿಕಾರ್ಬೋನೇಟ್ ಗಾಜಿನ ಕನ್ನಡಕಗಳನ್ನು ಧರಿಸುವಂತೆ ಹೇಳಲಾಗುತ್ತಿತ್ತು, ಅಲ್ಲದೇ ಒಮ್ಮೊಮ್ಮೆ ಅದರ ವೇಗವು ವಿಶಿಷ್ಟವಾದ 200 km/h (125 mph)ವರೆಗೂ ಮುಟ್ಟಬಹುದಾಗಿತ್ತು. 2004 ರಲ್ಲಿ ಕ್ಯಾನರಿ ವ್ಹಾರ್ಫ್ ಸ್ಕ್ವ್ಯಾಷ್ ಕ್ಲಾಸಿಕ್‌ನಲ್ಲಿ ಜಾನ್ ವೈಟ್ ಅವರು ಬಾಲನ್ನು 270 km/h (170 mph) ವೇಗದಲ್ಲಿ ಹೊಡೆಯುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದ್ದರು. ಹಲವಾರು ಸ್ಕ್ವ್ಯಾಷ್ ಪ್ರದೇಶಗಳು ಕಣ್ಣು ರಕ್ಷಣಾ ಸಾಧನಗಳ ಬಳಕೆಯನ್ನು ಅಧೀಕೃತಗೊಳಿಸಿದ್ದವು ಮತ್ತು ಕೆಲವು ಸಂಘಟನೆಗಳು ಎಲ್ಲಾ ಕಿರಿಯ ಮತ್ತು ಡಬಲ್ಸ್ ಆಟಗಾರರು ಕಡ್ಡಾಯವಾಗಿ ಕಣ್ಣು ರಕ್ಷಣಾ ಸಾಧನಗಳನ್ನು ಧರಿಸಲೇಬೇಕು ಎಂಬ ನಿಯಮಗಳನ್ನು ಹೊಂದಿರಲೇಬೇಕಿತ್ತು.
ಮೂಲ ನಿಯಮಗಳು ಹಾಗೂ ಪಂದ್ಯಆಟ
[ಬದಲಾಯಿಸಿ]ಕ್ರೀಡಾ ಆವರಣ
[ಬದಲಾಯಿಸಿ]ಸ್ಕ್ವ್ಯಾಷ್ ಆವರಣ ನಾಲ್ಕು ಗೋಡೆಗಳಿಂದ ಆವರಿಸಿದ ಒಂದು ಆಟದ ಮೇಲ್ಮೈ ಭಾಗವಾಗಿದೆ. ಆವರಣದ ಮೇಲ್ಮೈಭಾಗವು ಆವರಣದ ಮುಂಭಾಗ ಮತ್ತು ಹಿಂಭಾಗವನ್ನು ಪ್ರತ್ಯೇಕಿಸುವ ಮುಂಭಾಗದ ರೇಖೆಯನ್ನು ಹೊಂದಿದೆ ಹಾಗೂ ಆವರಣದ ಹಿಂದಿನ ಭಾಗದ ಎಡ ಮತ್ತು ಬಲಗೈ ಭಾಗಗಳನ್ನು ಪ್ರತ್ಯೇಕಿಸುವ ಅರ್ಧ ಆವರಣ ರೇಖೆಯನ್ನು ಹೊಂದಿದ್ದು್, ಮೂರು ’ಪೆಟ್ಟಿಗೆಗಳ’ ರಚನೆಯಿದೆ - ಮುಂಭಾದ ಅರ್ಧ, ಹಿಂಭಾಗದ ಎಡ ಕಾಲುಭಾಗ ಹಾಗೂ ಹಿಂಭಾಗದ ಬಲ ಕಾಲುಭಾಗ. ಹಿಂಭಾದ ಎರಡು ಪೆಟ್ಟಿಗೆಗಳು ಸಣ್ಣ ಸರ್ವಿಸ್ ಪೆಟ್ಟಿಗೆಗಳನ್ನು ಹೊಂದಿವೆ. ಸ್ಕ್ವ್ಯಾಷ್ ಆವರಣದ ಮೇಲಿನ ಎಲ್ಲ ನೆಲ-ಗುರುತುಗಳು ಸರ್ವಿಸ್‌ಗಳ(ಚೆಂಡನ್ನು ಹೊಡೆಯುವ)ಸಮಯದಲ್ಲಿ ಮಾತ್ರ ಮುಖ್ಯವಾಗುತ್ತವೆ.
ಸ್ಕ್ವ್ಯಾಷ್ ಆವರಣಕ್ಕೆ ನಾಲ್ಕು ಗೋಡೆಗಳಿವೆ. ಮುಂಭಾಗದ ಗೋಡೆಯ ಮೇಲೆ ಮೂರು ಸಮಾನಾಂತರ ರೇಖೆಗಳನ್ನು ಗುರುತಿಸಲಾಗಿದ್ದು, ಇದು ದೊಡ್ಡ ಆಟದ ಮೇಲ್ಮೈನ್ನು ಹೊಂದಿದ್ದರೆ, ಹಿಂಭಾಗದ ಗೋಡೆ ಸಾಮಾನ್ಯವಾಗಿ ಆವರಣದ ಪ್ರವೇಶವನ್ನು ಹೊಂದಿದ್ದು, ಸಣ್ಣದಾಗಿದೆ. ಹೊರ ರೇಖೆಯು ಮುಂಭಾಗದ ಗೋಡೆಯ ಮೇಲ್ಭಾಗದೊಂದಿಗೆ ಸಾಗುತ್ತದೆ, ಪಕ್ಕದ ಗೋಡೆಯೊಂದಿಗೆ ಹಿಂಭಾಗದ ಗೋಡೆಗೆ ಇಳಿಯುತ್ತಾ ಬರುತ್ತದೆ. ಪಕ್ಕದ ಅಥವಾ ಹಿಂಭಾಗದ ಗೋಡೆಗಳ ಮೇಲೆ ಇನ್ನಿತರೆ ಯಾವುದೇ ಗುರುತುಗಳಿರುವುದಿಲ್ಲ. ಎಸೆತಗಳು ಹೊರ ಗೆರೆಯ, ಆಚೆ ಅಥವಾ ಮೇಲೆ ಬೆದ್ದರೆ ಅಥವಾ ಯಾವುದೇ ಗೋಡೆಯ ಮೇಲೆ ಬಿದ್ದರೆ ಔಟ್(ಆಟ ಕಳೆದುಕೊಂಡ ಹಾಗೆ)ಆಗುತ್ತದೆ. ಮುಂಭಾಗದ ಗೋಡೆಯ ಕೆಳಗಿನ ರೇಖೆಯು ’ಟಿನ್’ನ ಮೇಲ್ಭಾಗವನ್ನು ಗುರುತಿಸುತ್ತದೆ, ಟಿನ್ ಎಂದರೆ ಒಂದು ಅರ್ಧ-ಮೀಟರ್ ಎತ್ತರದ ಲೋಹದ ಪ್ರದೇಶವಾಗಿದ್ದು, ಇದಕ್ಕೆ ಬಾಲ್ ತಾಗಿದರೆ ಇದರರ್ಥ ಔಟ್ ಆದಂತೆ. ಮುಂಭಾಗದ ಗೋಡೆಯ ಮಧ್ಯದ ರೇಖೆಯು ಸರ್ವಿಸ್ ರೇಖೆಯಾಗಿದ್ದು ಇದು ಸರ್ವ್‌ಗಳನ್ನು(ಚೆಂಡು ಎಸೆತ)ಮಾಡುವಾಗ ಮಾತ್ರ ಮುಖ್ಯವಾಗುತ್ತದೆ.
ಸರ್ವ್ ಮಾಡುವುದು
[ಬದಲಾಯಿಸಿ]ಪಂದ್ಯದ ಮುನ್ನ, ಯಾರು ಮೊದಲು ಸರ್ವ್ ಮಾಡಬೇಕೆಂಬುದನ್ನು ನಿರ್ಧರಿಸಲು ಆಟಗಾರರು ಬ್ಯಾಟನ್ನು ತಿರುಗಿಸುತ್ತಾರೆ(ಸಾಮಾನ್ಯವಾಗಿ ಲೊಗೊವಿನ ಮೇಲೆ ಅಥವಾ ಕೆಳಗೆ). ಆಟಗಾರ ಎಡ ಅಥವಾ ಬಲ ಎರಡರಲ್ಲೊಂದು ಸರ್ವಿಸ್ ಬಾಕ್ಸಿನಿಂದ ಸರ್ವ್ ಮಾಡಲು ಆಯ್ಕೆ ಮಾಡಿಕೊಂಡು ಮೊದಲ ರ್ಯಾಲಿಯನ್ನು(ಪಾಯಿಂಟ್ ಗಳಿಸಲು ಒಂದರ ಮೇಲೊಂದು ಚೆಂಡಿನ ಹೊಡೆತಗಳು)ಪ್ರಾರಂಭಿಸುತ್ತಾನೆ. ಒಂದು ನಿಯಮಬದ್ಧ ಸರ್ವ್‌ಗೆ, ಬಾಲನ್ನು ಹೊಡೆಯುವಾಗ ಸರ್ವರ್‌ನ ಪಾದಗಳಲ್ಲೊಂದು ಸರ್ವಿಸ್ ಬಾಕ್ಸ್‌ಗೆ ತಾಗಿರಬೇಕು, ಸರ್ವಿಸ್ ಬಾಕ್ಸ್ ರೇಖೆಗಳ ಯಾವುದೇ ಭಾಗವನ್ನು ತಾಗಿಸಬಾರದು. ಬ್ಯಾಟಿನಿಂದ ಬಾಲನ್ನು ಹೊಡೆದ ಮೇಲೆ, ಬಾಲು ಮುಂಭಾಗದ ಗೋಡೆಗೆ ಸರ್ವಿಸ್ ರೇಖೆಯ ಮೇಲೆ ಹಾಗೂ ಹೊರ ರೇಖೆಯ ಕೆಳಗೆ ಹೊಡೆಯಬೇಕು ಹಾಗೂ ಎದುರು ಕಾಲುಭಾಗ ಆವರಣದಲ್ಲಿ ನೆಲೆಗೊಳ್ಳಬೇಕು. ಸ್ವೀಕರಿಸುವ ಆಟಗಾರ ಸರ್ವನ್ನು, ಬಾಲು ಮುಂಭಾದ ಗೋಡೆಗೆ ಹೊಡೆದ ನಂತರ ನೆಲಕ್ಕೆ ತಗುಲುವ ಮೊದಲೇ ಚೆಂಡನ್ನು ಹೊಡೆಯುವ ಆಯ್ಕೆ ಮಾಡಬಹುದು. ಸರ್ವರ್(ಸರ್ವಿಸ್ ಮಾಡಿದವನು)ಅಂಕವನ್ನು ಗೆದ್ದರೆ, ಆಮೇಲಿನ ಅಂಕಕ್ಕೆ ಇಬ್ಬರು ಆಟಗಾರರು ಪಾರ್ಶ್ವಗಳಿಗೆ ಬದಲಾಗುತ್ತಾರೆ.
ಆಟ
[ಬದಲಾಯಿಸಿ]ಸರ್ವ್ ನಂತರ, ಮುಂಭಾಗದ ಗೋಡೆಯ ವಿರುದ್ಧ ಬಾಲನ್ನು ಹೊಡೆಯಲು ಆಟಗಾರರು ಟಿನ್ ಮೇಲೆ ಹಾಗೂ ಹೊರರೇಖೆಯ ಕೆಳಗೆ ತಿರುವುಗಳನ್ನು ತೆಗೆದುಕೊಳ್ಳುತ್ತಾರೆ. ಚೆಂಡು ಹೊರರೇಖೆಗಿಂತ ಕೆಳಗೆ ಹೊಡೆಯುತ್ತಿರುವವರೆಗೆ ಯಾವುದೇ ಸಮಯದಲ್ಲಿ ಪಕ್ಕದ ಅಥವಾ ಹಿಂಭಾಗದ ಗೋಡೆಗಳಿಗೆ ಹೊಡೆಯಬಹುದು. ಬ್ಯಾಟಿನಿಂದ ಹೊಡೆದ ನಂತರ ಹಾಗೂ ಮುಂಭಾಗದ ಗೋಡೆಗೆ ಹೊಡೆಯುವ ಮುನ್ನ ಬಾಲು ನೆಲವನ್ನು ತಾಗಬಾರದು. ಹೊರರೇಖೆ ಅಥವಾ ಟಿನ್‌ನ ಮೇಲ್ಭಾಗದೊಂದಿಗಿನ ರೇಖೆಯ ಮೇಲೆ ಚೆಂಡು ನೆಲೆಗೊಂಡರೆ ಅದನ್ನು ಔಟ್ ಎಂದು ಪರಿಗಣಿಸಲಾಗುವುದು. ಚೆಂಡು ಮುಂಭಾಗದ ಗೋಡೆಗೆ ಹೊಡೆದ ನಂತರ, ಒಬ್ಬ ಆಟಗಾರ ಇದನ್ನು ಹಿಂದಿರುಗಿಸುವ ಮುನ್ನ ನೆಲದ ಮೇಲೆ ಒಂದು ಬಾರಿ ಪುಟಿದೇಳಲು ಅವಕಾಶವಿದೆ(ಹಾಗೂ ಪಕ್ಕದ ಅಥವಾ ಹಿಂಭಾಗದ ಗೋಡೆಗಳ ವಿರುದ್ಧ ಎಷ್ಟಾದರೂ ಬಾರಿಯಾದರೂ ಪುಟಿದೇಳಬಹುದು). ಆಟಗಾರರು ಕ್ರೀಡಾ ಆವರಣದ ಸುತ್ತ ಎಲ್ಲಿಯಾದರೂ ಚಲಿಸಬಹುದು ಆದರೆ ಬೇರೆ ಆಟಗಾರನ ಚಲನೆಗಳನ್ನು ಆಕಸ್ಮಿಕವಾಗಿ ಅಥವಾ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುವುದು ನಿಷಿದ್ಧವಾಗಿದೆ. ಆಟಗಾರರು ಒಂದು ಎಸೆತವನ್ನು ಮಾಡಿದ ನಂತರ ಸಾಮಾನ್ಯವಾಗಿ ಆವರಣದ ಕೇಂದ್ರಭಾಗಕ್ಕೆ ಹಿಂದಿರುಗುತ್ತಾರೆ.
ಪಾರ್ಶ್ವದ-ಹೊರಗೆ (ಅಥವಾ ಹ್ಯಾಂಡ್-ಔಟ್)ಅಂಕಗಳಿಸುವ ವಿಧಾನ
[ಬದಲಾಯಿಸಿ]ಅಂಕಗಳಿಸುವ ವಿಧಾನವು "ಸರ್ವ್ ಮಾಡುವ" ವಿಧಾನವನ್ನು ಆಧರಿಸಿರುತ್ತದೆ, ಇಲ್ಲಿ ಒಂದು ಅಂಕವನ್ನು ಪಡೆಯಲು ಸರ್ವ್‌ನ್ನು ಪಡೆಯಬೇಕಾಗುತ್ತದೆ. ಸರ್ವ್‌ನ್ನು ಹೊಂದುವುದು ಕೆಲವೊಮ್ಮೆ ಒಂದು "ಅಪರಾಧ"ವೆಂದು ಪರಿಗಣಿಸಲಾಗುತ್ತದೆ. ಎದುರಾಳಿ(ಸರ್ವನ್ನು ಹೊಂದದೇ ಇರುವವನು)ಯನ್ನು ರಕ್ಷಣಾ ಭಾಗದಲ್ಲಿರುವಂತೆ ಪರಿಗಣಿಸಲಾಗುತ್ತದೆ ಹಾಗೂ ಆತ ಸರ್ವ್‌ನ್ನು ಗೆಲ್ಲಲು ಅಂಕವನ್ನು ಗಳಿಸಬೇಕಾಗುತ್ತದೆ ಹಾಗೂ ಆನಂತರ ಒಂದು ಅಂಕವನ್ನು ಪಡೆಯಲು ಮತ್ತೆ ಗೆಲಬೇಕಾಗುತ್ತದೆ.
ಆಟದ ಕ್ರಮದ ಸಮಯದಲ್ಲಿ ಈ ಕೆಳಕಂಡಂತೆ ಮಾಡಿದರೆ ಅಂಕಗಳನ್ನು ನೀಡಲಾಗುತದೆ:
- ಚೆಂಡನ್ನು ಸ್ವೀಕರಿಸಿದಾತ ಚೆಂಡು ಎರಡು ಬಾರಿ ಪುಟಿದೇಳುವ ಮುನ್ನ ಹೊಡೆಯಲು ಸೋತರೆ
- ಚೆಂಡು ಸ್ವೀಕರಿಸಿದಾತ ಚೆಂಡನ್ನು ಹೊರಗೆ ಹೊಡೆದರೆ(ಹೊರರೇಖೆಯ ಮೇಲೆ ಅಥವಾ ಹೊರಗೆ ಅಥವಾ ಟಿನ್ ಮೇಲೆ)
- ಸ್ವೀಕರ್ತ ಚೆಂಡನ್ನು ಇದು ಪುಟಿದೇಳುವ ಮುನ್ನ ಮುಂಭಾಗದ ಗೋಡೆಗೆ ಹೊಡೆಯಲು ಸೋತರೆ
- ಪ್ರಹಾರ: ಅಂಕ ಪಡೆಯುವಾಗ ಸ್ವೀಕರ್ತ ಸರ್ವರ್‌ನ್ನು ಅಡ್ಡಿಪಡಿಸಿದರೆ("ಮಧ್ಯೆ ಪ್ರವೇಶಿಸು" ಹಾಗೂ "ಅಡ್ಡಿಪಡಿಸು" ಇದನ್ನು ನೋಡಿ)
ಸರ್ವರ್ ಮೇಲಿನವುಗಳಲ್ಲಿ ಯಾವುದಾದರನ್ನು ಮಾಡಿದರೆ ಅಥವಾ ಸರ್ವ್‌ನ್ನು ಹೊಡೆಯಲು ಸೋತರೆ, ಆಟಗಾರರು ತಮ್ಮ ಪಾತ್ರಗಳನ್ನು ಬದಲಿಸಿ ಸ್ವೀಕರ್ತ ಆನಂತರದ ಅಂಕವನ್ನು ಸರ್ವ್ ಮಾಡುತ್ತಾನೆ, ಆದರೆ ಯಾವುದೇ ಅಂಕಗಳನ್ನು ನೀಡಲಾಗುವುದಿಲ್ಲ.
ಆಟಗಳನ್ನು 9 ಅಂಕಗಳಿಗೆ ಆಡಲಾಗುತ್ತದೆ (ಅಂಕಗಳು ಮೊದಲಿಗೆ 8-8ಕ್ಕೆ ತಲುಪಿದಾಗ ಸ್ವೀಕರ್ತ "ಎರಡು ನಿರ್ಧರಿಸು"ವುದನ್ನು ಆಯ್ಕೆ ಮಾಡಿ ಹತ್ತು ಅಂಕಕ್ಕೆ ಆಡಬಹುದು). ಸಾಮಾನ್ಯವಾಗಿ ಸ್ಪರ್ಧಾ ಪಂದ್ಯಗಳನ್ನು "ಐದರಲ್ಲಿ ಉತ್ತಮ"ದ ಆಟಕ್ಕೆ ಆಡಲಾಗುತ್ತದೆ(ಅದು, ಆಟಗಾರ 5 ಆಟಗಳಲ್ಲಿ ಹೆಚ್ಚಿನವುಗಳನ್ನು ಗೆಲ್ಲಬೇಕು). ಒಂದು ಕಾಲದಲ್ಲಿ ಈ ಅಂಕಗಳಿಸುವ ವಿಧಾನವನ್ನು ಬ್ರಿಟನ್‌ನಲ್ಲಿ ಆರಿಸಿಕೊಳ್ಳಲಾಗಿತ್ತು, ಆದರೆ ಸಾಂಪ್ರದಾಯಿಕ ಬ್ರಿಟಿಷ್ ಸಂಬಂಧಗಳನ್ನು ಹೊಂದಿದ್ದ ದೇಶಗಳೂ ಸಹ, ಉದಾ: ಆಸ್ಟ್ರೇಲಿಯಾ, ಕೆನಡಾ, ಪಾಕಿಸ್ತಾನ, ದಕ್ಷಿಣ ಆಫ್ರಿಕ, ಭಾರತದಲ್ಲಿಯೂ ಇದನ್ನು ಆರಿಸಿದ್ದವು, ಆದರೆ ಈಗ ಸ್ಪರ್ಧಾತ್ಮಕ ಮಟ್ಟಗಳಲ್ಲಿ, ಕೇವಲ PARS ರಿಂದ 11 ನ್ನು ಬಳಸಲಾಗುತ್ತಿದೆ.
ಒಂದಂಕ ರಾಲಿ ಎಣಿಕೆಯ ವಿಧಾನ
[ಬದಲಾಯಿಸಿ]ಪೂರಕವಾಗಿ, ಪಾಯಿಂಟ್-ಎ-ರಾಲಿ-ಸ್ಕೋರಿಂಗ್(ಒಂದಂಕ ರಾಲಿ ಎಣಿಕೆಯ ವಿಧಾನ)(ಪಿಎಆರ್‌ಎಸ್)ದಲ್ಲಿ, ಅವನು ಅಥವಾ ಅವಳು ಸರ್ವ್ ಮಾಡಿರಲಿ ಅಥವಾ ಬಿಟ್ಟಿರಲಿ ಪ್ರತಿ ರ್ಯಾಲಿಯನ್ನು ಗೆದ್ದವರು ಅಂಕಗಳನ್ನು ಗಳಿಸುತ್ತಾರೆ. ಸಾಂಪ್ರದಾಯಿಕವಾಗಿ, ಪಿಎಆರ್‌ಎಸ್ ಅಂಕಗಳು 15 ವರೆಗೆ ಇರುತ್ತವೆ(ಅಥವಾ ಆಟ 14-14ಗೆ ತಲುಪಿದಾಗ ಸ್ವೀಕರ್ತ 15 or 17 ರ ಆಟವನ್ನು ಆಹ್ವಾನಿಸಬಹುದು). ಆದಾಗ್ಯೂ, 2004ರಲ್ಲಿ, ವೃತ್ತಿನಿರತ ಆಟಕ್ಕೆ ಪಿಎಆರ್‌ಎಸ್ ಅಂಕವನ್ನು 11 ಅಂಕಗಳಿಗೆ ಇಳಿಸಲಾಯಿತು(ಆಟ 10-10ಕ್ಕೆ ತಲುಪಿದರೆ, ಒಬ್ಬ ಆಟಗಾರ ಎರಡು ಅಂಕಗಳಿಂದ ಗೆಲ್ಲಬೇಕು).[೫] ಪಿಎಆರ್‌ಎಸ್ ನ್ನು ಈಗ ಪುರುಷರ ವೃತ್ತಿನಿರತ ಪ್ರವಾಸಗಳಲ್ಲಿ ಬಳಸಲಾಗುತ್ತಿದೆ, ಹಾಗೂ ಪುರುಷರ ವೃತ್ತಿನಿರತ ಪಂದ್ಯಾವಳಿಗಳಿಗೆ ಟಿನ್ ಎತ್ತರವನ್ನು ಎರಡು ಇಂಚುಗಳಷ್ಟು ಕಡಿತಗೊಳಿಸಲಾಗಿದೆ(ರಾಲಿಗಳ ಉದ್ದವನ್ನು ಕಡಿಮೆ ಮಾಡಿ ಇದರಿಂದ ಪಂದ್ಯದ ಉದ್ದವನ್ನು ಕಡಿಮೆ ಮಾಡುವ ಭರವಸೆಯಲ್ಲಿ ಈ ಬದಲಾವಣೆಗಳನ್ನು ಮಾಡಲಾಗಿದೆ). ಮಹಿಳೆಯರ ವೃತ್ತಿನಿರತ ಪ್ರವಾಸ ಮೂಲ ಟಿನ್ ಎತ್ತರವನ್ನು ಬಳಸುತ್ತದೆ, ಆದರೆ 2008ರ ಜುಲೈನಿಂದ 11 ಅಂಕ ವಿಧಾನಕ್ಕೆ ಪಿಎಆರ್‌ಎಸ್‌ನ್ನು ಬಳಸಲು ಆರಂಭಿಸಿತು. ಅಂತರಾಷ್ಟ್ರೀಯ ಆಟ, ಸಂಸ್ಥೆ, ಡಬಲ್ಸ್ ಹಾಗೂ ಕ್ರೀಡಾ ಪಂದ್ಯಾವಳಿಗಳು ಸಾಮಾನ್ಯವಾಗಿ ಸಾಂಪ್ರದಾಯಿಕ ಬ್ರಿಟಿಷ್ ಅಂಕ ವಿಧಾನವನ್ನು ಬಳಸಿಕೊಂಡು ಆಡಲಾಗುತ್ತಿತ್ತು, ಆದರೆ ಯೂರೋಪಿಯನ್ ಸ್ಕ್ವ್ಯಾಷ್ ಫೆಡರೇಷನ್(ESF),ವರ್ಲ್ಡ್ ಸ್ಕ್ವ್ಯಾಷ್ ಫೆಡರೇಷನ್(WSF) ಹಾಗೂ ಅನೇಕ ರಾಷ್ಟ್ರೀಯ ಒಕ್ಕೂಟ(ಫೆಡರೇಷನ್)ಗಳು ಈಗ ಪರೀಕ್ಷೆ ಅಥವಾ ಶಾಶ್ವತ ಆಧಾರದ ಮೇಲೆ 11 ಕ್ಕೆ ಪಿಎಆರ್‌ಎಸ್‌ನ್ನು ಬಳಸುತ್ತಿವೆ. ಲಘು ಆಟದ ಸಮಯ ಅಥವಾ ವಿವಿಧ ಆಟಗಾರರಿಗಗೆ ಎಡೆಮಾಡಿಕೊಡಲು ಅಂಕ ವಿಧಾನಗಳು ಹಾಗೂ ನಿಯಮಗಳನ್ನು ಅಳವಡಿಸಿಕೊಳ್ಳಬಹುದಾಗಿದೆ. 2009ರ ಏಪ್ರಿಲ್ 1ರಿಂದ, 11 ಕ್ಕೆ ಪಿಎಆರ್‌ಎಸ್ ಮಾತ್ರ ಎಲ್ಲಾ ಮಟ್ಟದ ಸ್ಮರ್ಧಾತ್ಮಕ ಸ್ಕ್ವ್ಯಾಷ್‌ಗೆ ಅವಕಾಶ ನೀಡಿರುವ ಒಂದೇ ಅಧಿಕೃತ ಅಂಕ ವಿಧಾನವೆಂದು WSF ಘೋಷಿಸಿತು.
ತೀರ್ಪುಗಾರ
[ಬದಲಾಯಿಸಿ]ಸಾಮಾನ್ಯವಾಗಿ ತೀರ್ಪುಗಾರ, ಕ್ರೀಡಾ ಸಂಸ್ಥೆ ಅಥವಾ ನಿಯೋಜಿತ ಸ್ಕ್ವ್ಯಾಷ್ ಲೀಗ್ ಒದಗಿಸಿದ ಒಂದು ದೃಢೀಕೃತ ಸ್ಥಾನವಾಗಿದೆ. ತೀರ್ಪುಗಾರ ಸ್ಕ್ವ್ಯಾಷ್ ಆಟಗಾರರ ಮೇಲೆ ಪ್ರಧಾನವಾದ ಅಧಿಕಾರವನ್ನು ಹೊಂದಿದ್ದಾನೆ. ಯಾವುದೇ ಘರ್ಷಣೆ ಅಥವಾ ಹಸ್ತಕ್ಷೇಪವನ್ನು ತೀರ್ಪುಗಾರ ವ್ಯವಹರಿಸುತ್ತಾನೆ. ತೀರ್ಪುಗಾರ ನಡತೆ ಅಥವಾ ನಿಯಮಗಳಿಗೆ ಸಂಬಂಧಿಸಿದ ಅನುಚಿತ ಶಿಷ್ಟಾಚಾರಗಳ ಕಾರಣಕ್ಕೆ ಅಂಕಗಳು ಅಥವಾ ಆಟವನ್ನು ಕೂಡ ಕಸಿದುಕೊಳ್ಳಬಹುದು. ಹೆಚ್ಚಿನ ವಿವರಗಳಿಗಾಗಿ "ಹಸ್ತಕ್ಷೇಪ" ಮತ್ತು "ಅಡ್ಡಿಪಡಿಸುವಿಕೆ"ಯನ್ನು ಉಲ್ಲೇಖಿಸಿ.
ಆಟದ ಎಸೆತಗಳ ಬಗೆಗಳು
[ಬದಲಾಯಿಸಿ]ಅನೇಕ ರೀತಿಯ ಎಸೆಗಳನ್ನು ಆಡಲಾಗುತ್ತದೆ ಇವು ಆಟವನ್ನು ಆಸಕ್ತಿದಾಯಕ ಪಂದ್ಯಗಳು ಹಾಗೂ ತಂತ್ರದೆಡೆಗೆ ಸಾಗಿಸುತ್ತದೆ.
1. ನೇರ ಚಾಲನೆ ಅಥವಾ ’ರೈಲ್’: ಚೆಂಡು ಸಮನಾಂತರವಾಗಿ ಹಾಗೂ ಆವರಣದ ಹಿಂಭಾಗದ ಆಳಕ್ಕೆ ಸಾಗಲು ಪಕ್ಕದ ಗೋಡೆಗೆ ಹತ್ತಿರವಾಗಿ ಹೊಡೆಯುವುದು(’ಮೂಲ’ ಸ್ಕ್ವ್ಯಾಷ್ ಎಸೆತ) ಆಗಾಗ ಇದನ್ನು ’ಉತ್ತಮ ಉದ್ದ’ ಎಸೆತ ಎಂದು ಉಲ್ಲೇಖಿಸಲಾಗುತ್ತದೆ.
2. ಬೋಸ್ಟ್(ಅಥವಾ ಮೂಲೆ):ಚೆಂಡು ಮುಂಭಾಗದ ಗೋಡೆಗೆ ಹೊಡೆಯುವ ಮುನ್ನ ಒಂದು ಬದಿಯ ಗೋಡೆಯಒಂದು ಮೂಲೆಯಲ್ಲಿ , ಅಥವಾ ಹಿಂಭಾಗದ ಗೋಡೆಯ ಆಚೆಗೆ ಆಡುವುದು.
3. ವೊಲಿ(ನೆಲಕ್ಕೆ ತಗುಲುವ ಮುನ್ನ ಹೊಡೆಯುವುದು): ಚೆಂಡು ’ಸಂಪೂರ್ಣವಾಗಿ’(ಇದು ನೆಲಕ್ಕೆ ತಾಗುವ ಮುನ್ನ) ಸಾಮಾನ್ಯವಾಗಿ ಮುಂಭಾಗದ ಗೋಡೆಗೆ ನೇರವಾಗಿ ಹೊಡೆಯುವುದು.
4. ಡ್ರಾಪ್ ಎಸೆತ: ಚೆಂಡನ್ನು ಮುಂಭಾಗದ ಮೂಲೆಯ ನೆಲದ ಮೇಲೆ ಮೆಲ್ಲನೆ ಬೀಳಲು ಮುಂಭಾಗದ ಗೋಡೆಯ ವಿರುದ್ಧ ಮೆಲ್ಲನೆ ಹೊಡೆಯುವುದು.
5. ಲಾಬ್: ಆವರಣದ ಹಿಂಭಾಗದ ಮೂಲೆಯಲ್ಲಿ ಚೆಂಡು ಬೀಳಲೆಂದು ಮುಂಭಾಗದ ಗೋಡೆಯ ಮೇಲೆ ಮೆದುವಾಗಿ ಹಾಗು ಎತ್ತರಕ್ಕೆ ಹಾಗೂ ಎತ್ತರದ ಕಮಾನಿನೊಂದಿಗೆ ಬಾಲನ್ನು ಹೊಡೆಯಲಾಗುತ್ತದೆ.
6. ಕ್ರಾಸ್ ಕೋರ್ಟ್: ಬಲಭಾಗದಿಂದ ಎಡಭಾಗಕ್ಕೆ ಮುಂಭಾಗದ ಗೋಡೆಗೆ ಚೆಂಡನ್ನು ಹೊಡೆಯಲಾಗುತ್ತದೆ(ಅಥವಾ ಪ್ರತಿಯಾಗಿ).
7. ಕಿಲ್: ಚೆಂಡು ಅರ್ಧ ಆವರಣಕ್ಕಿಂತ ಹೆಚ್ಚಿಗೆ ದೂರ ಸಾಗಬಾರದೆಂದು ಮುಂಭಾಗದ ಗೋಡೆಯ ಮೇಲೆ ಚೆಂಡನ್ನು ಗಟ್ಟಿಯಾಗಿ ಹಾಗೂ ತಗ್ಗಾಗಿ ಹೊಡೆಯಲಾಗುವುದು.
8. ಟ್ರಿಕಲ್ ಬೋಸ್ಟ್: ಆವರಣದ ಮುಂಭಾಗದ ಪಕ್ಕದ ಗೋಡೆಗೆ ಚೆಂಡನ್ನು ಹೊಡೆದಾಗ ಒಂದು ’ಸಣ್ಣ’ ಬೋಸ್ಟ್ ಉಂಟಾಗುತ್ತದೆ(ಆಗಾಗ ಡ್ರೈವ್ ಅಥವಾ ಡ್ರಾಪ್ ಶಾಟ್‌ನ ಮಾರುವೇಶದಲ್ಲಿ)
9. ಸ್ಕ್ವೀಝ್ ಬೋಸ್ಟ್: ಒಂದು ಅತ್ಯಂತ ಕಠಿಣ ಎಸೆತವಾಗಿದ್ದು ಪಕ್ಕದ ಗೋಡೆಗೆ ಚೆಂಡು ಅತ್ಯಂತ ಸಮೀಪವಿದ್ದಾಗ ಆವರಣದ ಮುಂಭಾಗದಿಂದ ಹೊಡೆಯಲಾಗುತ್ತದೆ. ಇದು ಟ್ರಿಕೆಲ್ ಬೋಸ್ಟ್‌ನಂತಹದ್ದೇ ಪರಿಣಾಮವನ್ನು ಹೊಂದಿದೆ ಆದರೆ ಇದರ ಕಾಠಿಣ್ಯದಿಂದ ಇದು ಹೆಚ್ಚು ಮೋಸಗೊಳಿಸುತ್ತದೆ.
10 ಸ್ಕಿಡ್ ಬೋಸ್ಟ್: ಆವರಣವನ್ನು ದಾಟಿ ಆನಂತರ ಎದುರುಭಾಗದ ಹಿಂಭಾಗದ ಆವರಣದ ಮೂಲೆಯಲ್ಲಿ ಬೀಳಲೆಂದು ಮುಂಭಾಗದ ಗೋಡೆಯ ಬಳಿಯ ಪಕ್ಕದ ಗೋಡೆಗೆ ಎತ್ತರವಾಗಿ ಚೆಂಡನ್ನು ಹೊಡೆಯಲಾಗುತ್ತದೆ.
11. ನಿಕ್ ಶಾಟ್: ಚೆಂಡನ್ನು ನೆಲಕ್ಕೆ ತಗುಲುವ ಮುನ್ನ ಹೊಡೆಯಲಾಗುತ್ತದೆ(ವೊಲಿ)ಅಥವಾ ಆವರಣದ ಆಚೆಗೆ ಬಲವಾಗಿ ಮುಂಭಾಗದ ಗೊಡೆಗೆ ಆಮೇಲೆ ಬದಿಯ ಗೋಡೆಯ ಸಂಧಿ ಮತ್ತು ನೆಲಕ್ಕೆ ಹೊಡೆಯುವಂತೆ (ನಿಕ್)ಒಂದು ಬೌನ್ಸ್‌ನ್ನು ದೂರಕ್ಕೆ ಹೊಡೆಯಲಾಗುವುದು. ಸರಿಯಾಗಿ ಹೊಡೆದಾಗ, ಚೆಂಡು ಒಂದು ಸಣ್ಣ ಅಥವಾ ಯಾವುದೇ ಬೌನ್ಸ್‌ನ್ನು ಹೊಡೆಯುವುದಿಲ್ಲ ಅಥವಾ ನೆಲದಲ್ಲಿ ಸುತ್ತುತ್ತದೆ (ಇದೊಂದು ಕಿಲ್ ಶಾಟ್‌ನ ಮಾರ್ಪಾಡಾದ ಮುಂದುವರಿದ ಎಸೆತವಾಗಿದೆ).
ಕೌಶಲ ಹಾಗೂ ತಂತ್ರಗಳು
[ಬದಲಾಯಿಸಿ]ಪಕ್ಕದ ಗೋಡೆಗಳ ನೇರ ಮೇಲಿಂದ ಹಿಂಭಾಗದ ಮೂಲೆಗೆಳಿಗೆ ಚೆಂಡನ್ನು ಹೊಡೆಯುವುದು ಸಾಮಾನ್ಯ ತಂತ್ರ; ಇದು ಮೂಲ ಸ್ಕ್ವ್ಯಾಷ್ ಎಸೆತವಾಗಿದ್ದು, ಒಂದು "ರೈಲ್" ನೇರ ಚಾಲಕ, ಗೋಡೆ, ಅಥವಾ "ಉದ್ದ" ಎಂದು ಉಲ್ಲೇಖಿಸಲಾಗುತ್ತದೆ. ಈ ಎಸೆತವನ್ನು ಹೊಡೆದ ನಂತರ, ಎದುರಾಳಿಯ ಪ್ರತಿಫಲವನ್ನು ಪುನಃ ಪಡೆಯಲು ಸರಿಯಾದ ಸ್ಥಳಾವಕಾಶಕ್ಕಾಗಿ ಆಟಗಾರ ಆವರಣದ ಮಧ್ಯ ಭಾಗ "ಟಿ" ಹತ್ತಿರ ಚಲಿಸುತ್ತಾನೆ. ಮುಂಭಾಗದ ಮೂಲೆಗಳಿಗೆ ಮೆದು ಅಥವಾ "ಸಣ್ಣ" ಎಸೆತಗಳೊಂದಿಗಿನ ದಾಳಿಯು("ಡ್ರಾಪ್" ಶಾಟ್ಸ್ ಎಂದು ಉಲ್ಲೇಖಿಸಲಾಗುವ)ಎದುರಾಳಿ ಆವರಣದ ಹೆಚ್ಚಿನ ಭಾಗವನ್ನು ಆವರಿಸುವಂತೆ ಮಾಡುತ್ತದೆ ಹಾಗೂ ಒಂದು ಪೂರ್ತಿ ವಿಜೇತನಾಗಿ ಪರಿಣಮಿಸಬಹುದು. ಚೆಂಡು ಮುಂಭಾಗವನ್ನು ತಲುಪುವ ಮುನ್ನ ಬೋಸ್ಟ್‌ಗಳು ಅಥವಾ ಮೂಲೆ ಎಸೆತಗಳು ಉದ್ದೇಶಪೂರ್ವಕವಾಗಿ ಪಾರ್ಶ್ವ ಗೋಡೆಗಳಲ್ಲೊಂದಕ್ಕೆ ಹೊಡೆದು ಹೋಗುತ್ತದೆ. ಇವುಗಳನ್ನು ವಂಚಿಸಲು ಅಥವಾ ಮತ್ತೆ ಎದುರಾಳಿ ಹೆಚ್ಚಿನ ಆವರಣವನ್ನು ಆವರಿಸುವಂತೆ ಮಾಡಲು ಬಳಸಲಾಗುತ್ತದೆ.
ಸ್ಕ್ವ್ಯಾಷ್‌ನಲ್ಲಿನ ಒಂದು ಪ್ರಮುಖ ತಂತ್ರವನ್ನು "ಪ್ರಬಲವಾದ ಟಿ"(ಆವರಣದ ಮಧ್ಯಬಿಂಧಿವಿನ ಹತ್ತಿರವಿರುವ ಕೆಂಪು ರೇಖೆಗಳ ವಿಭಾಜಕ ಇದು ಎದುರಾಳಿಯ ನಂತರದ ಎಸೆತವನ್ನು ಪುನಃ ಪಡೆಯಲು ಉತ್ತಮವಾದ ಸ್ಥಾನ)ಎಂದು ಕರೆಯಲಾಗುವುದು. ಕೌಶಲ್ಯ ಹೊಂದಿದ ಆಟಗಾರರು ತರುವಾಯದ ಎಸೆತಕ್ಕೆ ಆಡುವ ಮುನ್ನ ಎಸೆತವನ್ನು ಹಿಂದಿರುಗಿಸಿ, ಆನಂತರ "ಟಿ"ಯೆಡೆಗೆ ಮತ್ತೆ ಮರಳುತ್ತಾರೆ. ಈ ಸ್ಥಾನದಿಂದ, ಆಟಗಾರ ಎದುರಾಳಿಯ ತರುವಾಯದ ಎಸೆತವನ್ನು ಒಂದು ಕನಿಷ್ಟ ಚಲನೆಯಿಂದ ಪುನಃ ಪಡೆಯಲು ಆವರಣದ ಯಾವುದೇ ಭಾಗಕ್ಕೆ ವೇಗವಾಗಿ ಪ್ರವೇಶಿಸಬಹುದು.
ಅನುಭವಿ ಆಟಗಾರರ ನಡುವಿನ ರ್ಯಾಲಿಗಳು 30 ಅಥವಾ ಅಧಿಕ ಎಸೆಗಳನ್ನು ಒಳಗೊಳ್ಳಬಹುದಾಗಿದೆ, ಆದ್ದರಿಂದ ಒಂದು ಉನ್ನತ ಅಧಿಕ ಮೌಲ್ಯವನ್ನು ಫಿಟ್‌ನೆಸ್‌ಗೆ, ಏರೋಬಿಕ್ ಹಾಗೂ ಏರೋಬಿಕ್ ಅಲ್ಲದ ಎರಡಕ್ಕೂ ನೀಡಲಾಗುತ್ತದೆ. ಆಟಗಾರರು ಅತ್ಯಂತ ನೈಪುಣ್ಯರಾದಂತೆ ಹಾಗೂ ವಿಶೇಷವಾಗಿ ಎಸೆತಗಳನ್ನು ಉತ್ತಮವಾಗಿ ತಿರುಗಿ ಪಡೆಯಲು ಯೋಗ್ಯರಾದರೆ, ಅಂಕಗಳು ಅನೆಕವೇಳೆ ಒಂದು ಮಸೆದಾಟದ ಯುದ್ಧವಾಗುತ್ತದೆ ಆಟದ ಉನ್ನತ ಮಟ್ಟಗಳಲ್ಲಿ, ಸಿಂಪಿಗ(ಫಿಟ್ಟರ್)ಆಟಗಾರ ಒಂದು ಪ್ರಮುಖ ಲಾಭವನ್ನು ಹೊಂದುತ್ತಾನೆ.
ಎದುರಾಳಿಯ ಸಮತೋಲನವನ್ನು ಭಂಗಪಡಿಸಲು ಕಡೆಯ ಕ್ಷಣದಲ್ಲಿಯೂ ಚೆಂಡಿನ ದಿಕ್ಕನ್ನು ಬದಲಿಸುವ ಸಾಮರ್ಥ್ಯವೂ ಕೂಡ ತುಂಬಾ ಪ್ರಮುಖವಾಗುತ್ತದೆ. ಸಾಮಾನ್ಯ ಆಟಗಾರನ ಮುಂದೆ ಪರಿಣಿತ ಆಟಗಾರರು ಎದುರಾಳಿಯ ಎಸೆತವನ್ನು ಒಂದು ಸೆಕೆಂಡಿನ ಕೆಲವು ಹತ್ತಗಳಲ್ಲಿ ನಿರೀಕ್ಷಿಸುತ್ತಾರೆ, ಇದು ಅವರಿಗೆ ಅತಿ ಬೇಗ ಪ್ರತಿಕ್ರಿಯಿಸಲು ಅವಕಾಶ ನೀಡುತ್ತದೆ.
ಹಸ್ತಕ್ಷೇಪ ಮತ್ತು ಅಡ್ಡಿಪಡಿಸುವಿಕೆ
[ಬದಲಾಯಿಸಿ]ಇಬ್ಬರು ಆಟಗಾರರನ್ನು ಒಂದು ವಿಭಾಗಿಸ್ಪಟ್ಟ ಜಾಗದಲ್ಲಿ ನಿರ್ಬಂಧಿಸಲ್ಪಟ್ಟಿರುವುದರಿಂದ ಹಸ್ತಕ್ಷೇಪ ಮತ್ತು ಅಡ್ಡಿಪಡಿಸುವಿಕೆಗಳು ಈ ಕ್ರಿಡೆಯ ಅವಶ್ಯಕ ಅಂಶಗಳಾಗಿವೆ. ಸಾಮಾನ್ಯವಾಗಿ ನಿಯಮಗಳು ಚೆಂಡು ಮುಂಭಾಗದ ಗೋಡೆಗೆ ಹೊಡೆದ ನಂತರ ಆಟಗಾರರಿಗೆ ಅದರ ಒಂದು ಸ್ಪಷ್ಟ ನೋಟಕ್ಕೆ ಅಧಿಕಾರ ನೀಡುತ್ತವೆ, ಚೆಂಡಿಗೆ ನೇರ ನಿರ್ದೇಶಿತ ರೇಖೆ ಪ್ರವೇಶ, ಒಂದು ಸಮಂಜಸ ತೂಗಾಟಕ್ಕೆ ಅವಕಾಶ ಹಾಗೂ ಅವರು ಯುಕ್ತವಾಗಿ ಹೊಡೆಯಲು ಸಮರ್ಥವಾದ- ಮುಂಭಾಗ, ಪಕ್ಕ ಅಥವಾ ಹಿಂಭಾಗದ ಗೋಡೆ- ಆವರಣದ ಯಾವುದೇ ಭಾಗಕ್ಕೆ ಅಡ್ಡಿಗಳಿಲ್ಲದ ಎಸೆತಕ್ಕೆ ಅವಕಾಶ ನೀಡುತ್ತದೆ. ಹಸ್ತಕ್ಷೇಪ ಉಂಟಾದಾಗ, ಒಬ್ಬ ಆಟಗಾರ "ಅವಕಾಶ ಕೊಡು"("ಲೆಟ್")ಗೆ ಮನವಿ ಮಾಡಬಹುದು ಹಾಗೂ ತೀರ್ಪುಗಾರ (ಅಥವಾ ಅಲ್ಲಿ ಅಧಿಕಾರಿ ಇಲ್ಲದಿದ್ದರೆ ಆಟಗಾರರೇ ಸ್ವತಃ)ಹಸ್ತಕ್ಷೇಪದ ವ್ಯಾಪ್ತಿಯನ್ನು ವ್ಯಾಖ್ಯಾನಿಸುತ್ತಾನೆ. ತೀರ್ಪುಗಾರ ಲೆಟ್‌ಗೆ ಅವಕಾಶ ನೀಡಬಹುದು ಹಾಗು ಆಟಗಾರರು ಆಗ ಅಂಕವನ್ನು ಮತ್ತೆ ಆಡುತ್ತಾರೆ, ಅಥವಾ ಮನವಿ ಮಾಡಿಕೊಂಡ ಆಟಗಾರನಿಗೆ ಹಸ್ತಕ್ಷೇಪದ ಮಟ್ಟವನ್ನು ಅವಲಂಬಿಸಿ, ಅಂದರೆ ಹಸ್ತಕ್ಷೇಪ ಮಾಡಿದ ಆಟಗಾರ ಹಸ್ತಕ್ಷೇಪವನ್ನು ತಡೆಯಲು ಸಾಕಷ್ಟು ಪ್ರಯತ್ನ ಮಾಡಿದ್ದಾನೆಯೇ ಹಾಗೂ ಹಸ್ತಕ್ಷೇಪ ಮಾಡದಿದ್ದರೆ ಅದು ಒಂದು ಗೆಲ್ಲುವ ಎಸೆತವಾಗುವ ಸಂಭವದಿದ್ದ ಚೆಂಡಿಗೆ ಹಸ್ತಕ್ಷೇಪ ಮಾಡಿದ್ದಾನಿಯೇ ಎಂದುದನ್ನು ಅವಲೋಕಿಸಿ ಒಂದು "ಸ್ಟ್ರೋಕ್"(ಹೊಡೆತ)ನ್ನು ನೀಡಬಹುದು(ಇದರರ್ಥ ಅಂಕವನ್ನು ಗೆದ್ದವನು ಎಂದು ಘೋಷಿಸಲಾಗುವುದು), ಇದಲ್ಲಕ್ಕೆ ಹೊರತಾಗಿ, ಹಸ್ತಕ್ಷೇಪ ಮಾಡಿದ ಆಟಗಾರ ನೇರವಾಗಿ ಇನ್ನೊಬ್ಬ ಆಟಗಾರನ ತೂಗಾಟದ ಹಾದಿಯಲ್ಲಿದ್ದು, ತೂಗಾಟವನ್ನು ಪರಿಣಾಮಕಾರಿಯಾಗಿ ತೆಡೆಯುತ್ತಿದ್ದರೆ, ಇಂತಹ ಪ್ರಕರಣದಲ್ಲಿ ಯಾವಾಗಲೂ ಒಂದು ಸ್ಟ್ರೋಕ್‌ನ್ನು ನೀಡುತ್ತಾರೆ.
ಸ್ವಲ್ಪ ಅಥವಾ ಯಾವುದೇ ಹಸ್ತಕ್ಷೇಪವಿಲ್ಲವೆಂದು ಪರಿಗಣಿಸಿದಾಗ, ಅಥವಾ ಇದನ್ನು ಯಾವುದೇ ರೀತಿಯಲ್ಲಿ ಹೇಳಲು ಸಾಧ್ಯವಾಗದಿದ್ದಾಗ, ನಿಯಮವು ಆಟದ ಮುಂದುವರಿಕೆಯ ಆಸಕ್ತಿಗಳಲ್ಲಿ ಹಾಗೂ ಕಪಟದ ಲೆಟ್‌ಗಳ ಮನವಿಗಳನ್ನು ವಿರೋಧಿಸಲು ಲೆಟ್‌ಗೆ ಅವಕಾಶವಿ ನೀಡುವುದಿಲ್ಲ. ಹಸ್ತಕ್ಷೇಪದ ಸ್ವರೂಪ ಮತ್ತು ಪ್ರಮಾಣವನ್ನು ವ್ಯಾಖ್ಯಾನಿಸುವಲ್ಲಿನ ವ್ಯಕ್ತಿಗತವಾದ ಅನಿಸಿಕೆಯ ಕಾರಣದಿಂದ ಲೆಟ್‌ಗಳು ಹಾಗೂ ಸ್ಟ್ರೋಕ್‌ಗಳನ್ನು ನೀಡುವುದು(ಅಥವಾ ತಡೆಹಿಡಿಯುವುದು)ಆಗಾಗ ವಿವಾದಾತ್ಮಕವಾಗಿರುತ್ತದೆ.
ಒಬ್ಬ ಆಟಗಾರನ ಎಸೆತ ಮುಂಭಾಗದ ಗೋಡೆಗೆ ಹೊಡೆಯುವುದಕ್ಕೆ ಮುನ್ನ ಅವನ ಎದುರಾಳಿಗೆ ಹೊಡೆದಾಗ, ಹಸ್ತಕ್ಷೇಪ ಉಂಟಾಗುತ್ತದೆ. ಚೆಂಡು ಎದುರಾಳಿಗೆ ಹೊಡೆದಾಗ ಪಾರ್ಶ್ವಗೋಡೆಯ ಕಡೆಗೆ ಸಾಗುತ್ತಿದ್ದರೆ, ಅಥವಾ ಈಗಾಗಲೇ ಪಾರ್ಶ್ವ ಗೋಡೆಗೆ ಹೊಡೆದಿದ್ದು, ಈಗ ನೇರವಾಗಿ ಮುಂಭಾಗದ ಗೋಡೆಗೆ ಸಾಗುತ್ತಿದ್ದರೆ, ಇದು ಸಾಮಾನ್ಯವಾಗಿ ಲೆಟ್ ಆಗುತ್ತದೆ. ಆದಾಗ್ಯೂ, ಪಾರ್ಶ್ವಗೋಡೆಗೆ ಮೊದಲ ಹೊಡೆತವಿಲ್ಲದೆ, ಚೆಂಡು ಎದುರಾಳಿಗೆ ಹೊಡೆದಾಗ ಚೆಂಡು ನೇರವಾಗಿ ಮುಂಭಾಗದ ಗೋಡೆಗೆ ಸಾಗಿದರೆ, ಇಂತಹ ಚೆಂಡನ್ನು ಆಟಗಾರ ಹೊಡೆದರೆ ಅದು ಆತನಿಗೆ ಸ್ಟ್ರೋಕ್ ಆಗುತ್ತದೆ. ಸಾಮಾನ್ಯವಾಗಿ ಒಂದು ಚೆಂಡಿನಿಂದ ಆಟಗಾರ ಹೊಡೆತಕ್ಕೊಳಪಟ್ಟಾಗ, ಇಬ್ಬರು ಆಟಗಾರರು ನಿಶ್ಚಲವಾಗಿ ನಿಲ್ಲುತ್ತಾರೆ, ಚೆಂಡಿನಿಂದ ಹೊಡೆತಕ್ಕೊಳಗಾದ ಆಟಗಾರ ನೇರವಾಗಿ ಚೆಂಡನ್ನು ಹೊಡೆದ ಆಟಗಾರನ ಮುಂದೆ ನಿಂತಿದ್ದರೆ ಆತ ಸ್ಟ್ರೋಕ್‌ನ್ನು ಕಳೆದುಕೊಳ್ಳುತ್ತಾನೆ, ಆತ ನೇರವಾಗಿ ಮುಂದೆ ಇಲ್ಲದಿದ್ದರೆ, ಒಂದು ಲೆಟ್‌ನ್ನು ಆಡಲಾಗುತ್ತದೆ. ಆಟಗಾರ ಉದ್ದೇಶಪೂರ್ವಕವಾಗಿ ತನ್ನ ಎದುರಾಳಿಯನ್ನು ಧಕ್ಕೆ ಮಾಡಲು ಚೆಂಡನ್ನು ಹೊಡೆಯಲು ಪ್ರಯತ್ನಿಸುತ್ತಿದ್ದಾನೆಂದು ಪರಿಗಣಿಸಿದರೆ, ಆತ ಸ್ಟ್ರೋಕ್‌ನ್ನು ಕಳೆದುಕೊಳ್ಳುತ್ತಾನೆ ಚೆಂಡು ಹೊಡೆದ ಆಟಗಾರ "ತಿರುಗಿದರೆ"(ಟರ್ನಡ್), ಅಂದರೆ, ಆತನ ಒಂದು ಬದಿಯಲ್ಲಿ ಚೆಂಡನ್ನು ಹೋಗಲು ಬಿಡುವುದು, ಆದರೆ ಆಮೇಲೆ ಹಿಂಭಾಗದ ಗೋಡೆಗೆ ಹೊಡೆದು ಬಂದಾಗ ಇನ್ನೊಂದು ಬದಿಯಲ್ಲಿ ಹೊಡೆಯುವುದು, ಇದೆಲ್ಲಕ್ಕೆ ಒಂದು ಹೊರತಾಗಿದೆ. ಈ ಪ್ರಕರಣಗಳಲ್ಲಿ, ಚೆಂಡಿನ ಹೊಡೆತಕ್ಕೊಳಗಾದ ಆಟಗಾರನಿಗೆ ಸ್ಟ್ರೋಕ್‌ಗಳನ್ನು ನೀಡಲಾಗುತ್ತದೆ.
ಸಾಂಸ್ಕೃತಿಕ, ಸಾಮಾಜಿಕ, ಹಾಗೂ ಆರೋಗ್ಯ ಅಂಶಗಳು
[ಬದಲಾಯಿಸಿ]ಜಗತ್ತಿನಾದ್ಯಂತ ಸ್ಕ್ವ್ಯಾಷ್‌ನ್ನು ಅನೇಕ ಮಾರ್ಪಾಡುಗಳಿಂದ ಆಡಲಾಗುತ್ತಿದೆ. Iು.ಎಸ್.ನಲ್ಲಿ ಹ್ಯಾಂಡ್‌ಬಾಲ್ ಸಿಂಗಲ್ಸ್ ಮತ್ತು ಡಬಲ್ಸ್‌ನ್ನು ಒಂದು ಅತ್ಯಂತ ಗಟ್ಟಿಯಾದ ಚೆಂಡಿನಿಂದ ಹಾಗೂ ಭಿನ್ನವಾದ ಅಳತೆಯ ಆವರಣದಲ್ಲಿ ಆಡಲಾಗುತ್ತದೆ(ಮೇಲೆ ತಿಳಿಸಿದಂತೆ). ಉತ್ತರ ಅಮೇರಿಕಾದಲ್ಲಿ ಹ್ಯಾಂಡ್‌ಬಾಲ್ ಸಿಂಗಲ್ಸ್ ತನ್ನ ಹೆಚ್ಚಿನ ಜನಪ್ರಿಯತೆಯನ್ನು ಕಳೆದುಕೊಂಡಿದೆ(ಅಂತರಾಷ್ಟ್ರೀಯ ಆವೃತ್ತಿಯ ಪರವಾಗಿ), ಆದರೆ ಹ್ಯಾಂಡ್‌ಬಾಲ್ ಡಬಲ್ಸ್ ಈಗಲೂ ಸಕ್ರಿಯವಾಗಿದೆ. ಒಂದುಪ್ರಮಾಣದ ಚೆಂಡಿನೊಂದಿಗೆ ಡಬಲ್ಸ್ ಆವೃತ್ತಿಯ ಸ್ಕ್ವಾಷ್‌ನ್ನು ಕೂಡ ಆಡಲಾಗುತ್ತದೆ, ಕೆಲವೊಮ್ಮೆ ಅಗಲವಾದ ಆವರಣದಲ್ಲಿ, ಹಾಗೂ ಟೆನ್ನಿಸ್-ರೀತಿ ಮಾರ್ಪಾಡಾದ ಸ್ಕ್ವಾಷ್ ಟೆನ್ನಿಸ್ ಎಂದು ಕರೆಯಲಾಗುವ ಆಟ ಆಡಲಾಗುತ್ತದೆ.
ಚೆಂಡನ್ನು ಆವರಣದ ಎಲ್ಲ ನಾಲ್ಕು ಮೂಲೆಗಳಲ್ಲಿ ಆಡಬಹುದಾದ್ದರಿಂದ, ತುಲನಾತ್ಮಕವಾಗಿ ಚಿಕ್ಕದಾದ ಆವರಣ ಹಾಗು ಕೆಡಿಮೆ-ಪುಟಿದೇಳುವ ಚೆಂಡು ಅಂಕಗಳು ಪಡೆಯುವುದನ್ನು ಅಮೆರಿಕಾದ ಕಸಿನ್, ರಾಕೆಟ್‌ಬಾಲ್‌ನಲ್ಲಿ ಪಡೆಯುವುದಕ್ಕಿಂತ ಕಠಿಣ ಮಾಡುತ್ತದೆ. ಪ್ರತಿ ಚೆಂಡು ಮುಂಭಾಗದ ಗೋಡೆ ಟಿನ್‌ನ ಮೇಲೆ ಹೊಡೆಯಬೇಕಾದ್ದರಿಂದ(ರಾಕೆಟ್‌ಬಾಲ್‌ನಂತಲ್ಲದೆ), ಚೆಂಡನ್ನು ಸುಲಭವಾಗಿ "ಕಿಲ್" ಮಾಡಲಿಕ್ಕಾಗುವುದಿಲ್ಲ. ಪರಿಣಾಮವಾಗಿ, ರಾಲಿಗಳು ರಾಕೆಟ್‌ಬಾಲ್‌ನಲ್ಲಿ ಆಡಿದ್ದಕ್ಕಿಂತ ಧೀರ್ಘವಾಗಿ ಎಳೆಯುತ್ತವೆ.
ಸ್ಕ್ವ್ಯಾಷ್ ಹೃದಯ ಮತ್ತು ರಕ್ತನಾಳಗಳಿಗೆ ಒಂದು ಅದ್ಭುತವಾದ ವ್ಯಾಯಾಮವನ್ನು ಒದಗಿಸುತ್ತದೆ. ಸ್ಕ್ವ್ಯಾಷ್‌ನ ಒಂದು ಗಂಟೆ ಆಟದಲ್ಲಿ, ಒಬ್ಬ ಆಟಗಾರ ಸುಮಾರು 600 ರಿಂದ 1000 ಕ್ಯಾಲರಿಗಳನ್ನು(3,000 to 4,000 kJ)ಖರ್ಚು ಮಾಡಬಹುದು, ಇದು ಇತರೆ ಆಟಗಳಿಗಿಂತ ಗಮನಾರ್ಹವಾಗಿ ಹೆಚ್ಚಿದೆ ಹಾಗೂ ಸಾಮಾನ್ಯ ಟೆನ್ನಿಸ್ ಅಥವಾ ರಾಕೆಟ್‌ಬಾಲ್‌ಗಿಂತ 70% ಕ್ಕೂ ಅಧಿಕ ಹೆಚ್ಚಿದೆ.[೬] ಈ ಕ್ರೀಡೆಯು ಆವರಣದ ಸುತ್ತ ಓಡುವ ಮೂಲಕ ಎರಡು ಕಾಲುಗಳನ್ನು ಬಳಸಿಕೊಳ್ಳುವುದರಿಂದ ಹಾಗೂ ರಾಕೆಟ್‌ನ್ನು ತೂಗಾಡಿಸಲು ಕೈಗಳು ಮತ್ತು ದೇಹದ ಇಡಿ ಭಾಗವನ್ನು ಬಳಸಿಕೊಳ್ಳುದರಿಂದ ದೇಹದ ಮೇಲ್ಭಾಗ ಮತ್ತು ಕೆಳಭಾಗಕ್ಕೆ ಉತ್ತಮವಾದ ವ್ಯಾಯಾಮವನ್ನು ಒದಗಿಸುತ್ತದೆ. 2003ರಲ್ಲಿ ಫೋರ್ಬ್ಸ್ ಸ್ಕ್ವ್ಯಾಷ್‌ನ್ನು ನಂಬರ್ ಒನ್ ಆರೋಗ್ಯಕರ ಕ್ರೀಡೆಯೆಂದು ಹೇಳಿದೆ.[೬][೭] ಆದಾಗ್ಯೂ, ಕೆಲವೊಂದು ಅಧ್ಯಯನಗಳು ಸ್ಕ್ವ್ಯಾಷ್ ಸಂಭಾವ್ಯ ಮಾರಕ ಹೃದಯ ಸ್ತಂಭನಕ್ಕೆ(ಅರ್ರ್ಹಯ್ತ್ಹ್ಮಿಯ) ಕಾರಣವೆಂದು ಹಾಗು ಹೃದಯ ಬೇನೆಯಿರುವ ವಯಸ್ಸಾದವರಿಗೆ ಸ್ಕ್ವ್ಯಾಷ್ ತಕ್ಕುದಾದ ವ್ಯಾಯಾಮ ಎಂದು ದೋಷಾರೋಪಣೆಗಳನ್ನು ಮಾಡಿವೆ.[೭]
ಸಾಂದರ್ಭಿಕ ಉತ್ಸಾಹಿಗಳಲ್ಲಿ ಸ್ಕ್ವ್ಯಾಷ್ ಅತ್ಯಂತ ಜನಪ್ರಿಯವಾಗುತ್ತಿದೆ. ಧನಾತ್ಮಕ ಆರೋಗ್ಯ ಪರಿಣಾಮವಲ್ಲದೆ, ಪುರುಷರು ಮತ್ತು ಮಹಿಳೆಯರಿಗೆ ಎರಡರಲ್ಲಿ ಯಾವುದಾದರು ಒಂದು ಲಿಂಗಗಳಿಗೆ ಹೆಚ್ಚೆನ ಲಾಭವಿಲ್ಲದೆ ಪ್ರತಿಯಾಗಿ ಆಡಲು ಅವಕಾಶ ನೀಡುತ್ತದೆ.[೮]
ಜಗತ್ತಿನ ಸುತ್ತ ಸ್ಕ್ವ್ಯಾಷ್
[ಬದಲಾಯಿಸಿ]ವರ್ಲ್ಡ್ ಸ್ಕ್ವ್ಯಾಷ್ ಫೆಡರೇಶನ್(ಒಕ್ಕೂಟ) ಪ್ರಕಾರ June 2009ರಲ್ಲಿ, 188 ರಾಷ್ಟ್ರಗಳು ಮತ್ತು ಪ್ರದೇಶಗಳು ಕನಿಷ್ಟ ಒಂದು ಆವರಣದೊಂದಿಗೆ ಜಗತ್ತಿನಲ್ಲಿ 49,908 ಸ್ಕ್ವ್ಯಾಷ್ ಆವರಣಗಳಿದ್ದವು. ಇಂಗ್ಲೆಂಡ್ ಅತ್ಯಂತ ಹೆಚ್ಚಿನ ಸಂಖ್ಯೆಯ ಅಂದರೆ 8,500ಆವರಣವನ್ನು ಹೊಂದಿತ್ತು. 1,000 ಕ್ಕಿಂತ ಹೆಚ್ಚು ಆವರಣಗಳನ್ನು ಹೊಂದಿರುವ ದೇಶಗಳ ಹೆಸರು ಇಳಿಕೆಯ ಕ್ರಮದಲ್ಲಿ, ಜರ್ಮನಿ, ಈಜಿಪ್ಟ್, ಅಮೇರಿಕಾದ ಸಂಯುಕ್ತ ರಾಷ್ಟ್ರಗಳು, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕ, ಕೆನಡಾ, ಮಲೇಷಿಯಾ, ಫ್ರಾನ್ಸ್, ನೆದರ್‌ಲ್ಯಾಂಡ್ಸ್ ಹಾಗು ಸ್ಪೇನ್.[೯]
ಜೂನ್ 2009ರಲ್ಲಿ, ಈಜಿಪ್ಟ್ ಮತ್ತು ಇಂಗ್ಲೆಂಡ್ ತಲಾ ಹನ್ನೊಂದು ಆಟಗಾರರ ಮುಂಚೂಣಿ ಹೊಂದಿದ್ದು,ಪುರುಷರ ವಿಶ್ವ ಶ್ರೇಣಿಗಳ ಉನ್ನತ ಐವತ್ತು ಆಟಗಾರರಲ್ಲಿ ಹತ್ತೊಂಬತ್ತು ರಾಷ್ಟ್ರಗಳ ಆಟಗಾರರಿದ್ದರು.[೧೦] ವಿಶ್ವ ಮಹಿಳಾ ಶ್ರೇಣಿಯು ಹದಿನಾರು ರಾಷ್ಟ್ರಗಳಿಂದ ಆಟಗಾರರನ್ನು ಮುಖ್ಯವಾಗಿ ಹೊಂದಿದ್ದು,ಮುಂಚೂಣಿಯ ಇಂಗ್ಲೆಂಡ್‌ನಿಂದ ಹನ್ನೊಂದು ಆಟಗಾರರಿದ್ದರು.
ಪ್ರೊಫೆಷನಲ್ ಸ್ಕ್ವ್ಯಾಷ್ ಅಸೋಸಿಯೇಷನ್ (ಪಿಎಸ್‌ಎ)ಪುರುಷರ ವೃತ್ತಿನಿರತ ಸ್ಕ್ವ್ಯಾಷ್ ಪ್ರವಾಸ ಹಾಗೂ ಶ್ರೇಣಿಗಳನ್ನು ನಡೆಸುತ್ತದೆ. ವಿಮೆನ್ಸ್ ಇಂಟರ್‌ನ್ಯಾಷನಲ್ ಸ್ಕ್ವ್ಯಾಷ್ ಪ್ಲೇಯರ್ಸ್ ಅಸೋಸಿಯೇಷನ್ (WISPA)ಮಹಿಳೆಯರ ಸಮಾನಾಂತರ ಸಂಸ್ಥೆಯಾಗಿದೆ.
ಆಟಗಾರರು ಮತ್ತು ದಾಖಲೆಗಳು
[ಬದಲಾಯಿಸಿ](ಬ್ರಿಟಿಷ್) ಸ್ಕ್ವ್ಯಾಷ್ ರಾಕೆಟ್ಸ್ ಅಸೋಸಿಯೇಷನ್ ಒಂದು "ಸವಾಲು" ವ್ಯವಸ್ಥೆಯನ್ನು ಬಳಸಿಕೊ೦ಡು, ಗ೦ಡಸರಿಗಾಗಿ 1930 ರಲ್ಲಿ ಇದರ ಮೊದಲ ಬ್ರಿಟಿಷ ಓಪನ್ ಚಾ೦ಪಿಯನ್‌ಷಿಪ್ ಅನ್ನು ಆಯೋಜಿಸಿತು. ಚಾರ್ಲ್ಸ್ ರೀಡ್ 1930 ರಲ್ಲಿ ಸರ್ವಶ್ರೇಷ್ಠ ಕ್ರೀಡಾಪಟು (ಚಾ೦ಪಿಯನ್) ಆಗಿ ನಿಯೋಜಿಸಲ್ಪಟ್ಟನು, ಆದರೆ ದೇಶದ ಮತ್ತು ಹೊರಗಿನ ಪ೦ದ್ಯಗಳಲ್ಲಿ ಡೊನ್ ಬುಚರ್‌ನಿ೦ದ ಸೋಲಿಸಲ್ಪಟ್ಟನು, ಡೊನ್ ಬುಚರನು ನಂತರ 1931 ರ ಸರ್ವಶ್ರೇಷ್ಠ ಕ್ರೀಡಾಪಟು (ಚಾ೦ಪಿಯನ್)ಆಗಿ ಹೆಸರಿಸಲ್ಪಟ್ಟನು. ಚಾ೦ಪಿಯನ್‌ಷಿಪ್ ಈ ದಿನಗಳಿಗೂ ಕೂಡ ಮು೦ದುವರೆದಿದೆ, ಆದರೆ 1947 ರಿಂದ, ಒಂದು "ನಾಕ್‌ಔಟ್" ಜೊತೆ ಇದು ನಿರ್ವಹಿಸಲ್ಪಟ್ಟಿತು.
ಇದರ ಪ್ರಾರ೦ಭದ ಅನಂತರ, ಗ೦ಡಸರ ಬ್ರಿಟಿಷ ಓಪನ್ ಇದು ತುಲನಾತ್ಮಕವಾಗಿ ಕೆಲವೇ ಆಟಗಾರರಿಂದ ನಿಯ೦ತ್ರಿಸಲ್ಪಟ್ಟಿತ್ತು: ಎಫ್.ಡಿ. ಅಮ್ರ್ ಬೇ (ಈಜಿಪ್ತ್) 1930 ರಲ್ಲಿ; ಮೆಹಮೂದ್ ಕರೀಮ್ (ಈಜಿಪ್ತ್) 1940 ರಲ್ಲಿ; ಹಷಿನ್ ಖಾನ್ ಮತ್ತು ಅಜಮ್ ಖಾನ್ ಸಹೋದರರು (ಪಾಕಿಸ್ತಾನ) 1950 ಮತ್ತು 1960 ರಲ್ಲಿ; ಜೊನಾಹ್ ಬ್ಯಾರಿ೦ಗ್‌ಟನ್ (ಗ್ರೇಟ್ ಬ್ರಿಟನ್ ಮತ್ತು ಐರ್ಲೆ೦ಡ್) ಮತ್ತು ಜಿಯೋಫ್ ಹ೦ಟ್ (ಆಸ್ಟ್ರೇಲಿಯಾ) 1960 ಮತ್ತು 1970 ರಲ್ಲಿ; ಜಹಾ೦ಗೀರ್ ಖಾನ್ (ಪಾಕಿಸ್ತಾನ) 1980 ರಲ್ಲಿ; ಮತ್ತು ಜನ್‌ಷೇರ್ ಖಾನ್ (ಪಾಕಿಸ್ತಾನ) 1990 ರಲ್ಲಿ.
ಮಹಿಳಾ ಚಾ೦ಪಿಯನ್‌ಷಿಪ್ 1921 ರಲ್ಲಿ ಶುರುವಾಯಿತು, ಮತ್ತು ಅದೇ ರೀತಿಯಲ್ಲಿ ಕೆಲವೇ ಆಟಗಾರರಿಂದ ನಿಯ೦ತ್ರಿಸಲ್ಪಟ್ಟಿತು: ಜೊಯ್ಸ್ ಕೇವ್ ಮತ್ತು ನ್ಯಾನ್ಸಿ ಕೇವ್ (ಇ೦ಗ್ಲೆ೦ಡ್) 1920 ರಲ್ಲಿ; ಮಾರ್ಗೋಟ್ ಲ೦ಬ್ (ಯುಎಸ್‌ಎ) 1930 ರಲ್ಲಿ; ಜಾನೆಟ್ ಮೊರ್ಗಾನ್ (ಇ೦ಗ್ಲೆ೦ಡ್) 1950 ರಲ್ಲಿ; ಹೀದರ್ ಎಮ್‌ಕೆ (ಆಸ್ಟ್ರೇಲಿಯಾ) 1960 ಮತ್ತು 1970 ರಲ್ಲಿ; ವಿಕಿ ಕಾರ್ಡ್‌ವೆಲ್ (ಆಸ್ಟ್ರೇಲಿಯಾ) ಮತ್ತು ಸುಸನ್ ಡಿವೋಯ್ (ನ್ಯೂಜಿಲೆ೦ಡ್) 1980 ಯಲ್ಲಿ; ಮಿಚೆಲ್ ಮಾರ್ಟಿನ್ (ಆಸ್ಟ್ರೇಲಿಯಾ) 1990 ರಲ್ಲಿ; ಮತ್ತು ಸರಾಹ್ ಫಿಟ್ಸ್ ಗೆರಾಲ್ಡ್ (ಆಸ್ಟ್ರೇಲಿಯಾ)1990 ಮತ್ತು 2000 ರಲ್ಲಿ.
ಹೆದರ್ ಎಮ್‌ಕೆ, ಅವಳ ಅತಿ ದೀರ್ಘವಾದ ಮತ್ತು ಆಟದ ಸಂಪೂರ್ಣ ಪ್ರಾಬಲ್ಯವನ್ನು ಹೊ೦ದಿದ್ದಳು (ಅವಳು 1960 ಮತ್ತು 1970 ರ ಸಮಯದಲ್ಲಿ 18 ವರ್ಷಗಳ ಕಾಲ ಅಪರಾಜಿತಳಾಗಿ ಉಳಿದಿದ್ದಳು), ಇವಳು ನಿಸ್ಸಂದೇಹವಾಗಿ ಎಲ್ಲಾ ಕಾಲದ ಅತ್ಯುತ್ತಮ ಮಹಿಳಾ ಆಟಗಾರಳಾಗಿದ್ದಳು.
ಇದರ ಸ೦ಪ್ರದಾಯಗಳ ಕಾರಣದಿ೦ದ, ಬ್ರಿಟಿಷ್ ಓಪನ್ ಇದು ವರ್ಲ್ಡ್ ಓಪನ್‌ಗಿ೦ತ ಹೆಚ್ಚು ಪ್ರತಿಷ್ಠೆಯದ್ದಾಗಿದೆ ಎಂದು ಹಲವರಿಂದ ಪರಿಗಣಿಸಲ್ಪಟ್ಟಿತು, ಅದು 1970 ರ ಮಧ್ಯದಲ್ಲಿ ಶುರುವಾಗಲ್ಪಟ್ಟಿತು. ಆದಾಗ್ಯೂ, ಕೆಲವರು ಇದರ ಪ್ರಾಧಾನ್ಯತೆಯನ್ನು ಉಳಿಸಿಕೊ೦ಡು ಹೋಗಲು ಮೊದಲಿನದರ ಸಾಮರ್ಥ್ಯದ ಬಗೆಗೆ ಕಾಳಜಿಯನ್ನು ತೋರಿಸಿದರು, ಮೇಲ್ಮಟ್ಟದ ಆಟಗಾರರನ್ನು ಆಕರ್ಷಿಸಲು 2005 ರಲ್ಲಿ ಇದರ ವೈಫಲ್ಯವನ್ನು ಹೇಳುತ್ತಾ, ಬಹುಶಃ ಬಹುಮಾನದ ಹಣದಲ್ಲಿನ ಅಸಮಾನತೆಗೆ ಭಾಗಶಃ ಕಾರಣ. $270,000 ಎಂದು ಅ೦ದಾಜು ಮಾಡಬಹುದಾದ 2005 ರ ವರ್ಲ್ಡ್ ಓಪನ್‌ನ ಬಹುಮಾನದ ಮೊತ್ತದ ಜೊತೆ ಹೋಲಿಸಿದಾಗ, 2005 ರಲ್ಲಿ ಬ್ರಿಟಿಷ್ ಓಪನ್ ಗ೦ಡಸರ ಮತ್ತು ಮಹಿಳೆಯರ ಮಿಶ್ರ ಆಟದ ಬಹುಮಾನದ ಮೊತ್ತವು $71,000 ಕ್ಕೆ ಬ೦ದಿತು.
ಮು೦ಚಿನ ಜಗತ್ತಿನ ಮೊದಲನೇ ಶ್ರೇಯಾ೦ಕದ ಪಿಟರ್ ನಿಕೋಲಿ ಹೇಳಿದ್ದೇನೆ೦ದರೆ ಅವನು ಸ್ಕ್ವ್ಯಾಷ್ ಇದು 2006ರ ಓಲಿ೦ಪಿಕ್ ಆಟಗಳಿಗೆ[೧೧] ಓಲಿ೦ಪಿಕ್ ಸ್ಪೋರ್ಟ್ಸ್‌ನ ಯಾದಿಗಳಿಗೆ ಸೇರಿಕೊಳ್ಳಲು ಒಂದು "ಅತ್ಯ೦ತ ವಾಸ್ತವಿಕ ಅವಕಾಶ" ಎಂದು ನ೦ಬಿದನು, ಆದರೆ ಇದು ಕಟ್ಟ ಕಡೆಯದಾಗಿ ಗೋಲ್ಫ್‌ಗೆ ಮತ್ತು ರಗ್‌ಬಿ ಸೆವೆನ್ಸ್ ಸೋಲಲ್ಪಟ್ಟಿತು.
ಪ್ರಸ್ತುತ ನ೦ಬರ್ 1 ಸ್ಥಾನವು ಗ೦ಡಸರ ಸ್ಪರ್ದೆಯಲ್ಲಿ[೧೨] ಈಜಿಪ್ತ್ನ ರೆಮಿ ಅಶೋರ್‌ನಿ೦ದ ಮತ್ತು ಮಹಿಳಾ ಸ್ಪರ್ದೆಯಲ್ಲಿ [೧೨]ಮಲೇಷಿಯಾದ ನಿಕೋಲ್ ಡೇವಿಡ್‌ಳಿ೦ದ ಹಿಡಿದಿಟ್ಟುಕೊಳ್ಳಲ್ಪಟ್ಟಿದೆ. ಆಟಗಾರ ಕೌಶಲ್ಯದ ಮಟ್ಟವನ್ನು ನಿರ್ಧರಿಸುವ ಸಲುವಾಗಿ ಪ್ರಸ್ತುತವಾಗಿ ಅಲ್ಲಿ ಅ೦ತರಾಷ್ಟ್ರೀಯ ಮಾನದ೦ಡ ವಿಧಾನ (ವೃತ್ತಿನಿರತ ಆಟಗಾರರನ್ನು ಹೊರತುಪಡಿಸಿ)ಇಲ್ಲ
ವಿಶಾಲ ಅ೦ಗೀಕಾರ
[ಬದಲಾಯಿಸಿ]ಸ್ಕ್ವ್ಯಾಷ್ ಆಟಗಾರರು ಮತ್ತು ಸ೦ಘಟನೆಗಳು ದಿನಾ೦ಕಕ್ಕೆ ಫಲವಿಲ್ಲದರ ಜೊತೆ, ಓಲಿ೦ಪಿಕ್ ಆಟಗಳಲ್ಲಿ ಸ್ಪೋರ್ಟ್ ಅನ್ನು ಅ೦ಗೀಕರಿಸಬೇಕು ಎಂದು ಬಹಳ ವರ್ಷಗಳ ಕಾಲ ಪ್ರಭಾವ ಬೀರಿದರು ಸ್ಕ್ವ್ಯಾಷ್ 2002 ರ ಲ೦ಡನ್ ಆಟಗಳಲ್ಲಿ ಪ್ರತಿಷ್ಠಾಪಿಸುವುದರಲ್ಲಿ ಸ್ವಲ್ಪದರಲ್ಲಿ ತಪ್ಪಿಸಿಕೊ೦ಡಿತು. ಇದು ಮತ್ತೆ ಬೇಸ್‌ಬಾಲ್, ಸೊಫ್ಟ್‌ಬಾಲ್, ರಗ್‌ಬಿ ಸೆವೆನ್ಸ್, ಕರಾಟೆ, ಗೋಲ್ಫ್, ಮತ್ತು ರೋಲರ್ ಸ್ಪೋರ್ಟ್ಸ್‌ಗಳ ಜೊತೆ 2006 ರ ಬೇಸಿಗೆ ಆಟಗಳಲ್ಲಿ ಗಣನೆಗೆ ತೆಗೆದುಕೊಳ್ಳಲ್ಪಟ್ಟಿದೆ, ಆದರೆ ಸ್ಕ್ವ್ಯಾಷ್ ಮತ್ತೆ ಈ ಅವಕಾಶವನ್ನು ಕಳೆದುಕೊ೦ಡಿತು ಏಕೆ೦ದರೆ ಐಓಸಿ ವಿಧಾನಸಭೆಯು ಓಲಿ೦ಪಿಕ್ ಆಟಗಳಲ್ಲಿ ಗೋಲ್ಫ್ ಮತ್ತು ರಗ್‌ಬಿ ಸೆವೆನ್ಸ್‌ಗಳನ್ನು ಸೇರಿಸಲು ನಿರ್ಧಾರ ಮಾಡಿದೆ[೧೩]
ಸ್ಕ್ವ್ಯಾಷ್ ಇದು ದೇಶದುದ್ದಕ್ಕೂ ಆಡಲ್ಪಡುತ್ತದೆ, ಮತ್ತು ಕೌಶಲಗಳು ಮತ್ತು ಹೊ೦ದಿಕೆ ಅವಶ್ಯಕತೆಗಳಲ್ಲಿ ಟೆನ್ನಿಸ್‌ಗೆ ಸರಿಸಮವಾಗಿದೆ, ಆದರೆ ಆಟವನ್ನು ವೀಕ್ಷಕರಾಗಿ, ವೈಯುಕ್ತಿಕವಾಗಿ ಅಥವಾ ದೂರದರ್ಶನದಲ್ಲಿ ಪರೀಕ್ಷಿಸುವುದರಲ್ಲಿನ ಕ್ಲಿಷ್ಟತೆಯು ಯಾವಾಗಲೂ ಕೂಡ ಬಹು ಮುಖ್ಯವಾದ ಒಂದು ಎಲ್ಲೆ (ಮಿತಿ). ಚೆ೦ಡು ಬಹಳ ವೇಗವಾಗಿ ಚಲಿಸುತ್ತದೆ ಆದ್ದರಿಂದ ಪ್ರೇಕ್ಷಕರು ಈ ಕ್ರಿಯೆಯನ್ನು ಹಿ೦ಬಾಲಿಸುವುದು ಬಹಳ ಕ್ಲಿಷ್ಟ-ಒತ್ತಡವೆ೦ದೆನಿಸುತ್ತದೆ, ಆದಾಗ್ಯೂ ಕೂಡ ಕೆಲವು ಪಂದ್ಯಾವಳಿಗಳು ವಿಶೇಷವಾಗಿ ಲೇಪನ ಮಾಡಿದ ಹೆಚ್ಚಿನ ಕಣ್ಣಿಗೆ ಕಾಣುವ ಗುಣವನ್ನು ಹೊ೦ದಿರುವ ಚೆ೦ಡನ್ನು ಬಳಸಿಕೊ೦ಡು ಈ ಸಮಸ್ಯೆಯನ್ನು ಗುಣಪಡಿಸಲು ಪ್ರಯತ್ನವನ್ನು ನಡೆಸಿದರು. . ಪ೦ದ್ಯಾವಳಿಗಳಲ್ಲಿ ನೋಡುವ ಸಭಿಕರನ್ನು ಹೆಚ್ಚಿಸಲು, ಪ್ರೋತ್ಸಾಹಕರು ಅನೇಕ ವೇಳೆ ಎಲ್ಲಾ-ಗಾಜಿನ ಕ್ರೀಡಾಂಗಣವನ್ನು ಬಳಸುತ್ತಾರೆ ಅದು ವೀಕ್ಷಕರಿಗೆ ಎಲ್ಲ್ ನಾಲ್ಕು ಗೋಡೆಗಳಲ್ಲಿಯೂ ಕುಳಿತುಕೊಳ್ಳಲು ಅವಕಾಶವನ್ನು ನಿಡುತ್ತದೆ ಆದರೆ ಗೋಡೆಗಳು ಆಟಗಾರರನ್ನು ಗೊ೦ದಲಗೊಳಿಸಲಾಗದ೦ತಹ ತಿಳಿಬಣ್ಣವನ್ನು ಹೊ೦ದಿರುತ್ತವೆ. ಈ ನೋಡುಗರ ಪರಿಮಿತಿಗಳ ಕಾರಣದಿ೦ದ, ವೃತ್ತಿನಿರತ ಸ್ಕ್ವ್ಯಾಷ್ ಆಟಗಾರರು ಅವರ ಇತರ ಟೆನ್ನಿಸ್ ಜಗತ್ತಿನ ಸಮಸ್ಥಾನಿಕಗಳಿಗಿ೦ತ ಕಡಿಮೆ ವಿಶಾಲತೆಯನ್ನು ಗಳಿಸಿವೆ.
ಜನಪ್ರಿಯ ಸಂಸ್ಕೃತಿ
[ಬದಲಾಯಿಸಿ]198೦ ರ ಮೈಲ್ಸ್ ಡೋನಾಲ್ಡ್‌ನಿ೦ದ ರಚಿತವಾದ ಬೋಸ್ಟ್ ಕಾದ೦ಬರಿ ಸಾಹಿತ್ಯವು ಸ್ಕ್ವ್ಯಾಷ್ ಆಟದ ಸುತ್ತ ಸುತ್ತುತ್ತದೆ
ಡೇವಿಡ್ ಲೀನ್ನ ಲಾರೆನ್ಸ್ ಆಫ್ ಅರೇಬಿಯಾ ದಲ್ಲಿ, ಯಾವಾಗ ಅವನು ಮರುಭೂಮಿಯಲ್ಲಿ ಅರಬ್ ರಿವೋಲ್ಟ್ ಅನ್ನು ನಡೆಸುತ್ತಿರುತ್ತಾನೋ ಆಗ ಲಾರೆನ್ಸ್ ಅಡಿಪಾಯದಲ್ಲಿ ಏನು ನಡೆಯುತ್ತಿದೆ ಎಂದು ಕೇಳಿದಾಗ ಒಬ್ಬ ಸ೦ಸ್ಥೆಯ ಸಿಬ್ಬ೦ದಿಯ ಅಧಿಕಾರಿಯು ಲಾರೆನ್ಸ್‌ಗೆ ಜಿಎಚ್‌ಕ್ಯೂದಲ್ಲಿ ಕಾರಿಯೋನಲ್ಲಿ ಹೊಸ ಸ್ಕ್ವ್ಯಾಷ್ ಕ್ರೀಡಾ೦ಗಣದ ಬಗೆಗೆ ಹೇಳುತ್ತಾರೆ.
ಟಿವಿ ಪರದೆಯ ಫ್ರೇಸಿಯರ್ ನಲ್ಲಿ, ಸ್ಕ್ವ್ಯಾಷ್ ಒಂದು ಸಮಾನ ಹಿತಾಸಕ್ತಿಯ ಆಟವಾಗಿತ್ತು ಮತ್ತು ಅವನ ಸಹೋದರನ ನೈಲ್ಸ್‌ನು ಆಡಬಹುದಿತ್ತು.
ವಾಲ್ ಸ್ಟ್ರೀಟ್ ಸಿನೇಮಾದಲ್ಲಿ, ಗೊರ್ಡನ್ ಜೆಕೋ (ಮೈಕೆಲ್ ಡೊಗ್ಲಾಸ್) ಮತ್ತು ಬಡ್ ಫೊಕ್ಸ್ (ಚಾರ್ಲಿ ಶೀನ್) ಸ್ಕ್ವ್ಯಾಷ್‌ನ ಒಂದು ಆಟವನ್ನು ಆಡುತ್ತಾರೆ.
ದೂರದರ್ಶನದ ಫ್ರೈಡೇ ನೈಟ್ ಲೈಟ್ಸ್ ಸರಣಿಗಳಲ್ಲಿ, ತರಬೇತುದಾರ ಎರಿಕ್ ಟೇಲರ್ ಮತ್ತು "ಸ್ಮಾಶ್" ವಿಲಿಯಮ್ಸ್ ಸ್ಕ್ವ್ಯಾಷ್‌ನ ಒಂದು ಆಟವನ್ನು ಆಡುತ್ತಾರೆ, ಅದರಲ್ಲಿ ಸ್ಮಾಶ್ ಸ್ಕ್ವ್ಯಾಷ್ ಅನ್ನು "ಯಾವಾಗಲೂ ಬಿಳಿಯ ಆಟ" ಎಂದು ವರ್ಣಿಸಿದ್ದಾನೆ.
ಗ್ರೀನ್ ವಿ೦ಗ್ ದೂರದರ್ಶನ ಸರಣಿಗಳಲ್ಲಿ, ಮ್ಯಾಕ್ ಮತ್ತು ಗೈ ಸೆಕ್ರೆಟೀನ್ "ಎಮರ್ಜೆನ್ಸಿ" ಎ೦ಬ ಒಂದು ಪ್ರಕರಣದಲ್ಲಿ ಸ್ಕ್ವ್ಯಾಷ್ ಆಟವನ್ನು ಆಡುತ್ತಾರೆ. ಗೈ ಇವನು ಸರಿಯಾದ ಸ್ಕ್ವ್ಯಾಷ್ ಸಾಮಗ್ರಿಗಳಿ೦ದ ಸಜ್ಜುಗೊ೦ಡಿದ್ದನು, ಆದರೆ ಮ್ಯಾಕ್ ಇವನು ಶಸ್ತ್ರಚಿಕಿತ್ಸೆಗೆ ಸ೦ಬ೦ಧಿಸಿದ ಕು೦ಠಿತತೆಯ ಕಾರಣದಿ೦ದ ಪಿ೦ಗ್-ಪೊ೦ಗ್ ಪೆಡಲ್‌ನ ಜೊತೆ ಆಟ ಆಡುವುದನ್ನು ಬಿಟ್ಟನು.
ಡಿಜಿಟಲ್ ಫೊರ್ಟ್ರೆಸ್ ಕಾದ೦ಬರಿ ಸಾಹಿತ್ಯವನ್ನು ರಚಿಸಿದ ಡಾನ್ ಬ್ರೌನ್ ಡೇವಿಡ್ ಬೆಕರ್‌ನ ಹವ್ಯಾಸವೂ ಕೂಡ ಸ್ಕ್ವ್ಯಾಷ್ ಆಡುವುದಾಗಿತ್ತು.
ದ ಗೇಮ್ ಸಿನೆಮಾದಲ್ಲಿ ಮೈಕೆಲ್ ಡೊಗ್ಲಾಸ್‌ನ ಪಾತ್ರವು, ನಿಕೊಲಾಸ್ ವ್ಯಾನ್ ಒರ್ಟನ್ ತನ್ನಷ್ಟಕ್ಕೇ ತಾನೆ ಗ೦ಡಸರ ಕ್ಲಬ್‌ನಲ್ಲಿ ಸ್ಕ್ವ್ಯಾಷ್ ಆಡುವುದಾಗಿತ್ತು. ಕ್ರೀಡಾ೦ಗಣದ ಗೋಡೆಗಳು ದಟ್ಟ ಬಣ್ಣದ ಕಟ್ಟಿಗೆಗಳಿ೦ದ ಮಾಡಲ್ಪಟ್ಟಿದ್ದವು.
ಶಾಲೋ ಗ್ರೇವ್ ಸಿನೆಮಾದಲ್ಲಿ ಮುಖ್ಯ ಪಾತ್ರಗಳು ಪರಸ್ಪರರಲ್ಲಿ ಸ್ಕ್ವ್ಯಾಷ್ ಆಟವನ್ನು ಆಡುತ್ತಾರೆ.
ಇರಾನ್ ಮ್ಯಾಕ್‌ವಾನ್ ನಿ೦ದ 2005 ರಲ್ಲಿ ರಚಿತವಾದ ಸ್ಯಾಟರ್ಡೆ ಕಾದ೦ಬರಿ ಸಾಹಿತ್ಯದಲ್ಲಿ, ಹೆನ್ರಿ ಪೆರೋನ್ ನಿಯಮಿತ ವಾರದ ಸ್ಕ್ವ್ಯಾಷ್ ಆಟವನ್ನು ಆಡುತ್ತಾನೆ.
1981 ರ ಸಿನೇಮಾ ಔಟ್‌ಲ್ಯಾ೦ಡ್ ನಲ್ಲಿ, ಮಾರ್ಶಲ್ ವಿಲಿಯಮ್ ಟಿ. ಓನಿಯಲ್ (ಸೀನ್ ಕೊನ್ನೆರಿ ಇಂದ ನಟಿಸಲ್ಪಟ್ಟಿತು)ಏಕಾ೦ಗಿಯಾಗಿ ಸ್ಕ್ವ್ಯಾಷ್ ಆಟವನ್ನು ಆಡುತ್ತಾನೆ ಮತ್ತು ಅವನ ಮಹಿಳಾ ಸ್ನೇಹಿತೆ, ಡಾಕ್ಟರ್ ಲಜಾರಸ್ ಫ್ರಾನ್ಸಸ್ ಸ್ಟ್ರೆನ್‌ಹೆಗನ್ ವಿರುದ್ಧ ಆಡುತ್ತಾನೆ.
ಜಾನ್ ಐರ್ವಿ೦ಗ್ ಕಾದ೦ಬರಿ ಸಾಹಿತ್ಯದಲ್ಲಿ ಒಂದು ವರ್ಷಕ್ಕಾಗಿ ವಿಧವೆ ಪಾತ್ರವನ್ನು ನಿರ್ವಹಿಸಿದ ರುಥ್ ಕೋಲ್ ಸ್ಕ್ವ್ಯಾಷ್ ಆಡುತ್ತಾಳೆ ಮತ್ತು ಸ್ಕ್ವ್ಯಾಷ್ ಕ್ರೀಡಾ೦ಗಣದಲ್ಲಿ ಅವಳು ತನ್ನನ್ನು ಒಂದು ಆಕ್ರಮಣದಿ೦ದ ಕಾಪಾಡಿಕೊಳ್ಳುತ್ತಾಳೆ.
ಜಾನ್ ಐರ್ವಿ೦ಗ್ ಕಾದ೦ಬರಿ ಸಾಹಿತ್ಯದಲ್ಲಿ ಗಾರ್ಪ್‌ಗೆ ಅನುಗುಣವಾಗಿ ಜಗತ್ತು ಪಾತ್ರಧಾರಿ ಟಿ.ಎಸ್.ಗಾರ್ಪ್ ರೊಬರ್ಟಾ ಜೊತೆಗೆ ಸ್ಕ್ವ್ಯಾಷ್ ಆಡುತ್ತಾನೆ.
2009 ರಲ್ಲಿ, ಮೊದಲ ಮತ್ತು ಏಕೈಕ [ಸೂಕ್ತ ಉಲ್ಲೇಖನ ಬೇಕು] ಸ್ಕ್ವ್ಯಾಷ್ 3ಡಿ ವೀಡಿಯೋ ಗೇಮ್, ಟಚ್ ಸ್ಕ್ವ್ಯಾಷ್ , ಐಫೊನ್‌ಗೆ ಮತ್ತು ಐಪೋಡ್ ಟಚ್‌ಗೆ ಐಫೊನ್ ಆಪ್ ಸ್ಟೋರ್ ಪ್ರಾರ೦ಭಿಸಲ್ಪಟ್ಟಿತು.
ಸ್ಕ್ವ್ಯಾಷ್ ಒಂದು ಸಣ್ಣ ಆಟದ ವಿಧ Super Monkey Ball: Banana Blitz , ಡಿಸೆ೦ಬರ್ 2006 ರಲ್ಲಿ ವೀ ಯ ಮೇಲಿನಶೀರ್ಷಿಕೆಯಾಗಿ ಪ್ರಾರ೦ಭಿಸಲ್ಪಟ್ಟಿತು.
ಸ್ಕ್ವ್ಯಾಷ್ ಆಟದ ಸರಳೀಕೃತ ಆವೃತ್ತಿಯು ಬೋನಸ್ ಮಿಮಿಗೇಮ್‌ನಲ್ಲಿ ಕ೦ಡುಬರುತ್ತದೆ.Tiny Toon Adventures: Buster Busts Loose!
ಬ್ರಿಟಿಷ್‌ನ ಹಾಸ್ಯ ಜೋಡಿಕಲಾವಿದರು ದ ಟು ರೊನ್ನಿಸ್ 1982 ರಲ್ಲಿ ಒಂದು ರೇಖಾಚಿತ್ರವನ್ನು ಮಾಡಿದರು ಅಲ್ಲಿ ರೋನ್ನಿ ಕೊರ್ಬೆಟ್ ಒಂದು ಪರಿಣಿತ ಸ್ಕ್ವ್ಯಾಷ್ ಆಟಗಾರನ ಪಾತ್ರವನ್ನು ನಿರ್ವಹಿಸುತ್ತಾನೆ ಅವನು ಹೊಸ ಆಟಗಾರ ರೊನ್ನಿ ಬಾರ್ಕರ್‌ನಿ೦ದ ಸೋಲಿಸಲ್ಪಡುತ್ತಾನೆ.
ಅಮೇರಿಕನ್ ಸೈಕೋ ಎ೦ಬ 2000 ದಲ್ಲಿನ ಸಿನೆಮಾದಲ್ಲಿ, ಟಿಮೊಥಿ ಬ್ರೈಸ್ (ಜಸ್ಟಿನ್ ಥೆರೊಕ್ಸ್‌ನಿ೦ದ ಮಾಡಲ್ಪಟ್ಟ ಪಾತ್ರ) ಪಾತ್ರವು ಅವನ ಸಹೋದ್ಯೋಗಿಯನ್ನು ಸ್ಕ್ವ್ಯಾಷ್ ಆಟ ಆಡಲು ಆಹ್ವಾನಿಸುತ್ತದೆ.
ಹಾಸ್ಯ ಗು೦ಪು ದ ಕಿಡ್ಸ್ ಇನ್ ದ ಹಾಲ್ ಇದು ಎರಾಡಿಕೇಟರ್ ಎಂದು ಕರೆಯಲ್ಪಟ್ಟ ಒಂದು ವೇಷಭೂಷಣದ ಪಾತ್ರವನ್ನು ಪರಿಚಯಿಸುವುದರ ಮೂಲಕ ಆಟದ ಸ್ಪರ್ಧಾತ್ಮಕತೆಯನ್ನು ಗೇಲಿ ಮಾಡಿತು.
2೦೦5 ರ ಸಿನೆಮಾ ಸಿರಿಯಾನಾ ದಲ್ಲಿ, ಸಿಡ್ನಿ ಹೆವಿಟ್‌ನ ಪಾತ್ರವು ಬೆನೆಟ್ ಹೊಲಿಡೇ ಜೊತೆ ಸ್ಕ್ವ್ಯಾಷ್ ಆಡುತ್ತದೆ.
ಇವನ್ನೂ ಗಮನಿಸಿ
[ಬದಲಾಯಿಸಿ]- ಸ್ಕ್ವ್ಯಾಷ್ ಆಟಗಾರರ ಪಟ್ಟಿ
- ವರ್ಲ್ಡ್ ಸ್ಕ್ವ್ಯಾಷ್ ಫೆಡರೆಶನ್
- ಹಾರ್ಡ್ ಬಾಲ್ ಸ್ಕ್ವ್ಯಾಷ್
- ಡಬ್ಲ್ಯೂ ಐ ಎಸ್ ಪಿ ಎ ಯ ನಂಬರ ಒನ್ ರ್ಯಾಂಕ್ ಆಟಗಾರರ ಪಟ್ಟಿ
- ವರ್ಲ್ಡ್ ಒಪನ್
- ಬ್ರಿಟೀಶ್ ಒಪನ್ ಸ್ಕ್ವ್ಯಾಷ್ ಚಾಂಪಿಯನ್‌ಶಿಪ್
- ವರ್ಲ್ಡ್ ಡಬಲ್ಸ್ ಸ್ಕ್ವ್ಯಾಷ್ ಚಾಂಪಿಯನ್‌ಶಿಪ್
- ಯು.ಎಸ್.ಇಂಟರ್ಕಾಲೇಜಿಯೆಟ್ ಸ್ಕ್ವ್ಯಾಷ್ ಚಾಂಪಿಯನ್ಸ್
ಟಿಪ್ಪಣಿಗಳು
[ಬದಲಾಯಿಸಿ]- ↑ "Forbes Delves into Sporting Scene". Squashtalk.com. October 8, 2003. Archived from the original on 30 ಮೇ 2009. Retrieved 8 March 2010.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ ೨.೦ ೨.೧ ೨.೨ ೨.೩ ೨.೪ ೨.೫ ಜಗ್,ಜೇಮ್ಸ್. “ಸ್ಕ್ವ್ಯಾಷ್ ಇತಿಹಾಸ” Archived 2011-07-17 ವೇಬ್ಯಾಕ್ ಮೆಷಿನ್ ನಲ್ಲಿ., "ಯು.ಎಸ್ ಸ್ಕ್ವ್ಯಾಷ್", ಸೆಪ್ಟೆಂಬರ್ 2003. 21 ನವೆಂಬರ್ 2007
- ↑ ೩.೦ ೩.೧ “ಸ್ಕ್ವ್ಯಾಷ್ ಇತಿಹಾಸ” Archived 2009-08-31 ವೇಬ್ಯಾಕ್ ಮೆಷಿನ್ ನಲ್ಲಿ., "ಹೈ-ಟೆಕ್ ವರ್ಲ್ಡ್ ಸ್ಕ್ವ್ಯಾಷ್ ಚಾಂಪಿಯನ್‌ಶಿಪ್ಸ್ ಮ್ಯಾಂಚೆಸ್ಟರ್ 2008", 16 ನವೆಂಬರ್ 2008.
- ↑ "Squash Balls". Squashplayer.co.uk. Retrieved 2009-06-03.
- ↑ ಮ್ಯಾಕ್‌ಕೆಂನ್ಜಿ.ಇಯಾನ್ ಸ್ಕ್ವ್ಯಾಷ್ ಸ್ಕೋರಿಂಗ್ -ಹೂ ರೂಲ್ಸ್ ಸ್ಕ್ವ್ಯಾಷ್? Archived 2010-03-29 ವೇಬ್ಯಾಕ್ ಮೆಷಿನ್ ನಲ್ಲಿ.. ಪಡೆದ ದಿನಾಂಕ 23 ಏಪ್ರಿಲ್ 2010.
- ↑ ೬.೦ ೬.೧ ಸಂಟೇಲ್‌ಮ,ಎನ್ 2003. ಹತ್ತು ಆರೋಗ್ಯಕರ್ ಆಟಗಳು-ಫೋರ್ಬ್ಸ್.ಕಾಮ್
- ↑ ೭.೦ ೭.೧ "ಸ್ಪರ್ಧೆಯಲ್ಲಿ ಪರಿಣತ ಸ್ಕ್ವ್ಯಾಷ್ ಆಟಗಾರರ ಹಾರ್ಟ್ ರೇಟ್ ಮತ್ತು ಜೀವರಾಸಾಯನಿಕ ಕ್ರಿಯೆ ಪ್ರತಿಕ್ರಿಯೆ: ಆಕಸ್ಮಿಕ ಹೃದಯ ಸಂಬಂಧಿ ಸಾವಿನ ಅಪಾಯಕಾರಿ ಅಂಶಗಳು" ಯುರೋಪಿಯನ್ ಹಾರ್ಟ್ ಜರ್ನಲ್,ಸಂಪುಟ 10 ನವೆಂಬರ್ 11,ಪುಟ.1029-1035, ಸಾರಾಂಶ
- ↑ "ಸ್ಕ್ವ್ಯಾಷ್_ ಆಡಲು_ ಐದು_ಪ್ರಮುಖ_ಕಾರಣಗಳು". Archived from the original on 2010-12-19. Retrieved 2010-06-16.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "ವರ್ಲ್ಡ್ ಸ್ಕ್ವ್ಯಾಷ್ ಫೆಡರೆಶನ್ - ಸ್ಕ್ವ್ಯಾಷ್ ಆಡುವ ರಾಷ್ಟ್ರಗಳು ಮತ್ತು ಒಟ್ಟು ಸ್ಕ್ವ್ಯಾಷ್ ಅಂಗಣಗಳು". Archived from the original on 2012-01-11. Retrieved 2010-06-16.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "Dan Ackman, "Egyptians Have Cornered the Squash Racket"". The Wall Street Journal, October 3, 2007.
- ↑ ಸ್ಕ್ವ್ಯಾಷ್ 'ಒಲಂಪಿಕ್‌ನಲ್ಲಿ ಸ್ಥಾನ ಪಡೆಯಲು ಅರ್ಹತೆ ಹೊಂದಿದೆ', ಬಿಬಿಸಿ ಲೇಖನ
- ↑ ೧೨.೦ ೧೨.೧ {1ಡಬ್ಲ್ಯೂಎಸ್‌ಎಫ್ ಪ್ರಸ್ತುತ ರ್ಯಾಂಕಿಂಗ್, ಅಧೀಕೃತ ಡಬ್ಲ್ಯೂಎಸ್‌ಎಫ್ ಸೈಟ್{/1}
- ↑ "Golf & rugby voted into Olympics". BBC.co.uk. October 9, 2009. Retrieved 2 March 2010.
ಆಕರಗಳು
[ಬದಲಾಯಿಸಿ]- Bellamy, Rex (1978). The Story of Squash. Cassell Ltd, London. ISBN 0-304-29766-6.
- Palmer, Michael (1984). Guinness Book of Squash. Guinness Superlatives Ltd, London. ISBN 0-85112-270-1.
- Hickok, Ralph (25 September 2008). "Squash Rackets Rules". Hickok Sports. Archived from the original on 3 ಜನವರಿ 2013. Retrieved 17 November 2008.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - "Squash Site". Archived from the original on 2019-04-25. Retrieved 2010-06-16.
- "Learn Sport". Archived from the original on 2019-02-01. Retrieved 2021-08-09.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help)
ಹೆಚ್ಚಿನ ಮಾಹಿತಿಗಾಗಿ
[ಬದಲಾಯಿಸಿ]- Satterthwaite, Frank (1979). The three-wall nick and other angles : a squash autobiography. New York: Holt, Rinehart, and Winston. ISBN 0030166667.
- ಜಗ್, ಜೇಮ್ಸ್; ಪ್ಲಿಮ್ಟನ್, ಜಾರ್ಜ್ , ಸ್ಕ್ವ್ಯಾಷ್ : ಆಟದ ಇತಿಹಾಸ , ನ್ಯೂಯಾರ್ಕ್ : ಸ್ಕ್ರಿಬ್ನರ್, 2003. ISBN 0-8247-9755-8.
ಬಾಹ್ಯ ಕೊಂಡಿಗಳು
[ಬದಲಾಯಿಸಿ]Find more about ಸ್ಕ್ವ್ಯಾಷ್ (ಕ್ರೀಡೆ) at Wikipedia's sister projects | |
Definitions and translations from Wiktionary | |
Media from Commons | |
Learning resources from Wikiversity | |
Quotations from Wikiquote | |
Source texts from Wikisource | |
Textbooks from Wikibooks |
- ಸ್ಕ್ವ್ಯಾಷ್ ನಿಯಮಗಳು Archived 2011-11-23 ವೇಬ್ಯಾಕ್ ಮೆಷಿನ್ ನಲ್ಲಿ.
- ಡಬಲ್ಸ್ ಸ್ಕ್ವ್ಯಾಷ್ ನಿಯಮಗಳು ಜನವರಿ 2010 Archived 2010-09-02 ವೇಬ್ಯಾಕ್ ಮೆಷಿನ್ ನಲ್ಲಿ.
- [೧]
- ವರ್ಲ್ಡ್ ಸ್ಕ್ವ್ಯಾಷ್ ಅಸೊಸಿಯೇಷನ್
- ಸ್ಕ್ವ್ಯಾಷ್ ಕ್ಲಬ್ -ಸ್ಥಳೀಯ ಸ್ಕ್ವ್ಯಾಷ್ ಆಟಗಾರರ ಹುಡುಕಲು ಮೂಲಸಂಪತ್ತು
- ಸ್ಕ್ವ್ಯಾಷ್ ಬ್ಲಾಗ್ - ಸ್ಕ್ವ್ಯಾಷ್ ಪತ್ರಿಕೋದ್ಯಮ ಮತ್ತು ಚರ್ಚೆ
- ಸ್ಕ್ವ್ಯಾಷ್ ರಾಕೆಟ್ Archived 2014-12-18 ವೇಬ್ಯಾಕ್ ಮೆಷಿನ್ ನಲ್ಲಿ. - ನೆದರ್ಲ್ಯಾಂಡ್ನಿಂದ ಹೊಸ ಸ್ಕ್ವ್ಯಾಷ್ ಬ್ಲಾಗ್
- ಬ್ರಿಟೀಶ್ ಸ್ಕ್ವ್ಯಾಷ್ Archived 2010-01-26 ವೇಬ್ಯಾಕ್ ಮೆಷಿನ್ ನಲ್ಲಿ. - ಬ್ರಿಟನ್‌ನಲ್ಲಿ ಸ್ಕ್ವ್ಯಾಷ್ ಉತ್ತೇಜಿಸಲು ಮೀಸಲಿಡಲಾಗಿದೆ.
- ಯು.ಎಸ್.ಸ್ಕ್ವ್ಯಾಷ್ನಿಂದ ಸ್ಕ್ವ್ಯಾಷ್ ಶಬ್ದಸಂಗ್ರಹ Archived 2012-05-01 ವೇಬ್ಯಾಕ್ ಮೆಷಿನ್ ನಲ್ಲಿ.
- ರಷ್ಯಾ ಮತ್ತು ಮೊದಲಿನ-ಯುಎಸ್ಎಸ್ಆರ್ ದೇಶಗಳಲ್ಲಿ ಸ್ಕ್ವ್ಯಾಷ್
- ಜಾಗತಿಕ ಸ್ಕ್ವ್ಯಾಷ್ ಒಕ್ಕೂಟ Archived 2009-08-12 ವೇಬ್ಯಾಕ್ ಮೆಷಿನ್ ನಲ್ಲಿ. - ಜಗತ್ತಿನಾದ್ಯಂತ ಸ್ಕ್ವ್ಯಾಷ್ ಆಟವನ್ನು ಉತ್ತೇಜಿಸಲು
- ಅಂತರಾಷ್ಟೀಯ ಸ್ಕ್ವ್ಯಾಷ್ ಅಕಾಡೆಮಿ
- ಹಾಂಗ್ ಕಾಂಗ್ ಸ್ಕ್ವ್ಯಾಷ್ (ಎ ಮೆಂಬರ್ ಏಜನ್ಸಿ ಆಫ್ ಸ್ಪೋರ್ಟ್ಸ್ ಫೆಡರೆಶನ್ ಆಯ್೦ಡ್ ಒಲಂಪಿಕ್ ಕಮಿಟಿ ಆಫ್ ಹಾಂಗ್ ಕಾಂಗ್,ಚೈನಾ) (English) (Chinese)
- ಸ್ಕ್ವ್ಯಾಷ್ 2016ಕ್ಕೆ Archived 2018-08-08 ವೇಬ್ಯಾಕ್ ಮೆಷಿನ್ ನಲ್ಲಿ.
- ವರ್ಲ್ಡ್ ಸ್ಕ್ವ್ಯಾಷ್ ಫೆಡರೆಶನ್
- ಇನ್ಸೈಡ್ ಸ್ಕ್ವ್ಯಾಷ್ Archived 2013-09-26 ವೇಬ್ಯಾಕ್ ಮೆಷಿನ್ ನಲ್ಲಿ. - ಸ್ಕ್ವ್ಯಾಷ್ ಅಭ್ಯಾಸದ ಸಂಪೂರ್ಣ ಪಟ್ಟಿ
- ಭಾರತೀಯ ಸ್ಕ್ವ್ಯಾಷ್ ವೃತ್ತಿಪರರು (ಮಹೆಂದ್ರ ಅಗರ್ವಾಲ್ರಿಂದ ಎನ್ಸೈಕ್ಲೋಪಿಡಿಯಾ ಆಫ್ ಸ್ಕ್ವ್ಯಾಷ್ ನ್ ಇಂಡಿಯಾ)
- ಸ್ಪೇನ್ನಿಂದ ಸ್ಕ್ವ್ಯಾಷ್
- ಸ್ಕ್ವ್ಯಾಷ್: ಫಿಟ್ನೆಸ್ಗಾಗಿ ಆಟ
- ಸ್ವೀಡನ್ ರಾಜಧಾನಿಯಲ್ಲಿ ಸ್ಕ್ವ್ಯಾಷ್,ಸ್ಟಾಕ್ಹೋಮ್ Archived 2017-09-18 ವೇಬ್ಯಾಕ್ ಮೆಷಿನ್ ನಲ್ಲಿ.
- Pages using the JsonConfig extension
- CS1 errors: redundant parameter
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Pages with unresolved properties
- Articles with unsourced statements from October 2009
- Articles with Chinese-language external links
- ಗೋಡೆ ಮತ್ತು ಚೆಂಡು ಆಟಗಳು
- ರಾಕೆಟ್ ಆಟಗಳು
- ಸ್ಕ್ವ್ಯಾಷ್
- Pages using ISBN magic links