ಭೀಮಕುಂಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
The water shines blue in Bhimkund cave.

ಭೀಮಕುಂಡ (ನೀಲಕುಂಡ ಎಂದೂ ಕರೆಯುತ್ತಾರೆ) ಎಂಬ ಈ ನೈಸರ್ಗಿಕ ಕಲ್ಯಾಣಿಯು ಭಾರತದ ಮಧ್ಯಪ್ರದೇಶದಲ್ಲಿನ ಒಂದು ಸುಕ್ಷೇತ್ರವಾಗಿದೆ. ಛತರ್‌ಪುರ್ ಜಿಲ್ಲೆಯ ಬಾಜನಾ ಗ್ರಾಮದ ಸಮೀದಲ್ಲಿದೆ. ಇದು 77 ಆಗಿದೆ ಬುಂದೇಲಖಂಡ್ ಪ್ರದೇಶದಿಂದ ಛತರ್‌ಪುರದ [೧] ಕಡೆಗೆ ರಸ್ತೆಯ ಮೂಲಕ ಪ್ರಯಾಣಿಸುವಾಗ ೭೭ ಕಿ.ಮೀ. ದೂರದಲ್ಲಿ ಸ್ಥಿತಗೊಂಡಿದೆ.

ಭೀಮಕುಂಡವು ಒಂದು ನೈಸರ್ಗಿಕ ಜಲ ಸಂಪನ್ಮೂಲವಾಗಿದ್ದು, ಮಹಾಭಾರತ ಕಾಲದ ಒಂದು ಪವಿತ್ರ ಸ್ಥಳ ಕೂಡ ಆಗಿದೆ. ಕುಂಡದಲ್ಲಿನ (ಕಲ್ಯಾಣಿ) ನೀರು ತುಂಬಾ ಶುದ್ಧ ಮತ್ತು ಪಾರದರ್ಶಕವಾಗಿದ್ದು, ಈ ನೀರಿನಲ್ಲಿ ಈಜುತ್ತಿರುವ ಮೀನುಗಳನ್ನು ಕೂಡ ಸ್ಪಷ್ಟವಾಗಿ ಗೋಚರಿಸುತ್ತವೆ. ಕುಂಡವು ಒಂದು ಗುಹೆಯ ಪ್ರವೇಶದಿಂದ ಸುಮಾರು 3 ಮೀಟರ್ ಅಂತರದಲ್ಲಿದೆ. ಇದರ ಪ್ರವೇಶದ್ವಾರದ ಎಡಭಾಗದಲ್ಲಿ ಸಣ್ಣ ಶಿವಲಿಂಗವಿದೆ. ಕೊಳವು ಆಳವಾದ ಕಡು ನೀಲಿ ಬಣ್ಣದ್ದಾಗಿದ್ದು, ಕುಂಡದ ಸುತ್ತ ಕೆಂಪು ಕಲ್ಲಿನ ಗೋಡೆ ಆವರಿಸಿಕೊಂಡಿದೆ.

ಮಹಾಭಾರತದ ಕಥೆಯೊಂದು ಭೀಮಕುಂಡವು ಪಾಂಡವರೊಂದಿಗೆ ಹೊಂದಿದ್ದ ಒಂದು ಸಂಬಂಧವನ್ನು ಸೂಚಿಸುತ್ತದೆ . ಸುಡುವ ಸೂರ್ಯನ ಶಾಖಕ್ಕೆ ಬಸವಳಿದ ದ್ರೌಪದಿ ದಾಹದಿಂದಾಗಿ ಮೂರ್ಛೆ ಹೋದಳು. ಪಂಚ ಪಾಂಡವರಲ್ಲಿ ಬಲಿಷ್ಠನಾಗಿದ್ದ ಭೀಮ, ತನ್ನ ಗದೆಯಿಂದ ಭೂಮಿಯನ್ನು ಗುದ್ದಿದಾಗ ನೀರು ಹೊರ ಚಿಮ್ಮುತ್ತದೆ ಮತ್ತು ಈ ಕೊಳವು ಅಸ್ತಿತ್ವಕ್ಕೆ ಬಂದಿತು.

ಗುಹೆಯ ಮೇಲ್ಛಾಗವು ಕುಂಡದ ಮೇಲೆ ಸ್ವಲ್ಪ ಮಾತ್ರ ತೆರೆದುಕೊಂಡಿದೆ; ಇದೇ ಸ್ಥಳದಲ್ಲಿ ಭೀಮನು ತನ್ನ ಪ್ರಹಾರ ಮಾಡಿದನು ಎನ್ನಲಾಗುತ್ತದೆ.

ಇನ್ನೊಂದು ದಂತಕಥೆಯ ಪ್ರಕಾರ ವೇದ‍ಋಷಿ ನಾರದರುವಿಷ್ಣು ಸ್ತುತಿಗಾಗಿ ಗಂಧರ್ವ ಗಾನವನ್ನು (ಆಕಾಶಗೀತೆ) ಮಾಡಿದನು. ಅವನ ಭಕ್ತಿಗೆ ಮೆಚ್ಚಿದ ವಿಷ್ಣು ಇದೇ ಕುಂಡದಿಂದ ಉದ್ಭವಿಸಿದನು ಮತ್ತು ವಿಷ್ಣುವಿನ ಕಪ್ಪು ಬಣ್ಣದಿಂದಾಗಿ ನೀರು ಕಡುನೀಲಿ ಬಣ್ಣಕ್ಕೆ ತಿರುಗಿತು ಎನ್ನಲಾಗುತ್ತದೆ. ಈ ಕುಂಡದ ಆಳವನ್ನು ಇನ್ನೂ ಪತ್ತೆ ಮಾಡಲಾಗದೆ ನಿಗೂಢವಾಗಿಯೆ ಉಳಿದಿದೆ.

ಈ ಕೊಳವನ್ನು ನೀಲಕುಂಡ (ನೀಲಿ ಕಲ್ಯಾಣಿ) ಮತ್ತು ನಾರದ ಕುಂಡ (ಜಯ ಕೊಳ) ಎಂದೂ ಕರೆಯುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

  1. https://www.google.com/maps/place/Bhimkund,+Madhya+Pradesh+471311/@24.4384762,79.3760491,16z/data=!4m2!3m1!1s0x397881febff595e5:0x51d4e000eccf9ff0

ಬಾಹ್ಯ ಕೊಂಡಿಗಳು[ಬದಲಾಯಿಸಿ]

"https://kn.wikipedia.org/w/index.php?title=ಭೀಮಕುಂಡ&oldid=1157005" ಇಂದ ಪಡೆಯಲ್ಪಟ್ಟಿದೆ