ಭಾರತೀಯ ಉಕ್ಕು ಪ್ರಾಧಿಕಾರ
ಸಂಸ್ಥೆಯ ಪ್ರಕಾರ | State-owned enterprise Public (ಎನ್‌ಎಸ್‌ಇ: SAIL) |
---|---|
ಸ್ಥಾಪನೆ | 1954 |
ಮುಖ್ಯ ಕಾರ್ಯಾಲಯ | Ispat Bhawan, ನವ ದೆಹಲಿ, India[೧] |
ಪ್ರಮುಖ ವ್ಯಕ್ತಿ(ಗಳು) | Chandra Shekhar Verma (Chairman) |
ಉದ್ಯಮ | Steel |
ಆದಾಯ | ₹೪೧,೩೫೬.೫೦ ಕೋಟಿ (ಯುಎಸ್$೯.೧೮ ಶತಕೋಟಿ)[೨] |
ನಿವ್ವಳ ಆದಾಯ | ₹೬,೭೯೧.೦೯ ಕೋಟಿ (ಯುಎಸ್$೧.೫೧ ಶತಕೋಟಿ)[೨] |
ಒಟ್ಟು ಆಸ್ತಿ | ₹೪೬,೪೪೯.೭೮ ಕೋಟಿ (ಯುಎಸ್$೧೦.೩೧ ಶತಕೋಟಿ) |
ಉದ್ಯೋಗಿಗಳು | 131,910 (2006) |
ಜಾಲತಾಣ | www.sail.co.in |
ಭಾರತೀಯ ಉಕ್ಕು ಪ್ರಾಧಿಕಾರ (ಎಸ್ಎಐಎಲ್ ) (ಎನ್‌ಎಸ್‌ಇ: SAIL) ಎನ್ನುವುದು ಭಾರತದಲ್ಲಿನ ಸರ್ಕಾರಿ ನಿಯಂತ್ರಿತ ಅತೀ ದೊಡ್ಡ ಉಕ್ಕು ತಯಾರಿಕಾ ಕಂಪನಿಗಳಲ್ಲಿ ಒಂದಾಗಿದೆ. ₹೪೮,೬೮೧ ಕೋಟಿ (ಯುಎಸ್$೧೦.೮೧ ಶತಕೋಟಿ) ರಷ್ಟು ವಹಿವಾಟಿನೊಡನೆ, ಕಂಪನಿಯು ರಾಷ್ಟ್ರದ ಪ್ರಮುಖ ಐದು ಹೆಚ್ಚಿನ ಲಾಭದಾಯಕ ಕಾರ್ಪೊರೇಟ್ ಕಂಪನಿಗಳಲ್ಲಿ ಒಂದಾಗಿದೆ. ಇದು ಮಾರುಕಟ್ಟೆಯಲ್ಲಿ ಸಾರ್ವಜನಿಕವಾಗಿ ವಹಿವಾಟು ಮಾಡುವ ಸಾರ್ವಜನಿಕ ಉದ್ದಿಮೆಯಾಗಿದ್ದು ಇದರ ಬಹುಪಾಲನ್ನು ಭಾರತ ಸರ್ಕಾರವು ಹೊಂದಿದೆ ಮತ್ತು ಇದು ನಿರ್ವಹಣಾ ಕಂಪನಿಯಾಗಿ ಕಾರ್ಯನಿರ್ವಹಿಸುತ್ತದೆ. 1973 ರ ಜನವರಿ 24 ರಂದು ರೂಪಿತವಾದ ಎಸ್ಎಐಎಲ್ 131,910 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಸಿ.ಎಸ್. ವರ್ಮಾ ಅವರು ಕಂಪನಿಯ ಪ್ರಸ್ತುತ ಅಧ್ಯಕ್ಷರಾಗಿದ್ದಾರೆ. ವಾರ್ಷಿಕವಾಗಿ 13.5 ಮೆಟ್ರಿಕ್ ಟನ್‌ಗಳನ್ನು ಉತ್ಪಾದನೆಯೊಂದಿಗೆ, ಎಸ್ಎಐಎಲ್ ವಿಶ್ವದಲ್ಲೇ 16 ನೇ ಅತಿದೊಡ್ಡ ಉಕ್ಕು ಉತ್ಪಾದನೆ ಮಾಡುವ ಕಂಪನಿಯಾಗಿದೆ.
ಎಸ್ಎಐಎಲ್ ಅಧೀನದಲ್ಲಿರುವ ಪ್ರಮುಖ ಸ್ಥಾವರಗಳು ಭಿಲಾಯಿ, ಬೊಕಾರೋ, ದುರ್ಗಪುರ್, ರೂರ್ಕೆಲಾ, ಬರ್ನ್‌ಪುರ್ (ಅಸನ್ಸೋಲ್ ಬಳಿ) ಮತ್ತು ಸೇಲಂನಲ್ಲಿ ನೆಲೆಸಿವೆ. ಎಸ್ಎಐಎಲ್ ಸಾರ್ವಜನಿಕ ರಂಗದ ಕಂಪನಿಯಾಗಿದ್ದು, ಭಾರತ ಸರ್ಕಾರದ ಅಧೀನದಲ್ಲಿ ಕಾರ್ಯಾಚರಿಸಲ್ಪಡುತ್ತದೆ. ಎಸ್ಎಐಎಲ್‌ನ ಮೂಲವನ್ನು 1954 ರ ಜನವರಿ 19 ರಂದು ಸ್ಥಾಪಿತವಾದ ಹಿಂದೂಸ್ತಾನ್ ಸ್ಟೀಲ್ ಲಿಮಿಟೆಡ್ (ಹೆಚ್ಎಸ್ಎಲ್) ನಲ್ಲಿಗೆ ಕಾಣಬಹುದು.
ಇತಿಹಾಸ
[ಬದಲಾಯಿಸಿ]1959-1973
[ಬದಲಾಯಿಸಿ]ಎಸ್ಎಐಎಲ್‌ನ ಮೂಲವು 1954 ರ ಜನವರಿ 19 ರಂದು ಸ್ಥಾಪನೆ ಮಾಡಲಾದ ಹಿಂದೂಸ್ತಾನ್ ಸ್ಟೀಲ್ ಲಿಮಿಟೆಡ್ (ಹೆಚ್ಎಸ್ಎಲ್) ಗೆ ಸೂಚಿಸುತ್ತದೆ. ಹೆಚ್ಎಸ್ಎಲ್ ಅನ್ನು ರೂರ್ಕೆಲಾ ದಲ್ಲಿ ನಿರ್ಮಾಣವಾಗುತ್ತಿದ್ದ ಒಂದೇ ಒಂದು ಸ್ಥಾವರವನ್ನು ನಿರ್ವಹಣೆ ಮಾಡಲು ವಿನ್ಯಾಸ ಮಾಡಲಾಗಿತ್ತು.
ಭಿಲಾಯಿ ಮತ್ತು ದುರ್ಗಪುರ್ ಉಕ್ಕು ಸ್ಥಾವರಗಳಿಗಾಗಿ, ಪೂರ್ವಭಾವಿ ಕಾರ್ಯವನ್ನು ಕಬ್ಬಿಣ ಮತ್ತು ಉಕ್ಕು ಸಚಿವಾಲಯವು ಕೈಗೊಂಡಿತ್ತು. 1957 ರ ಏಪ್ರಿಲ್‌ನಿಂದ, ಈ ಎರಡು ಉಕ್ಕು ಸ್ಥಾವರಗಳ ಮೇಲ್ವಿಚಾರಣೆ ಮತ್ತು ನಿಯಂತ್ರಣವನ್ನೂ ಸಹ ಹಿಂದೂಸ್ತಾನ್ ಸ್ಟೀಲ್‌ಗೆ ವರ್ಗಾಯಿಸಲಾಯಿತು. ನೋಂದಾಯಿತ ಕಚೇರಿಯು ಮೊದಲು ನವದೆಹಲಿಯಲ್ಲಿತ್ತು. ಇದು 1956 ರಲ್ಲಿ ಕಲ್ಕತ್ತಾಗೆ ಮತ್ತು ಅಂತಿಮವಾಗಿ 1959 ರ ಡಿಸೆಂಬರ್‌ನಲ್ಲಿ ರಾಂಚಿಗೆ ವರ್ಗಾವಣೆಗೊಂಡಿತು.
ಬೊಕಾರೋದಲ್ಲಿ ಉಕ್ಕು ಸ್ಥಾವರವೊಂದನ್ನು ನಿರ್ಮಾಣ ಮಾಡಲು ಮತ್ತು ಕಾರ್ಯಾಚರಿಸಲು ಬೊಕಾರೋ ಸ್ಟೀಲ್ ಕಂಪನಿಯೆಂಬ ಹೊಸ ಉಕ್ಕು ಕಂಪನಿಯನ್ನು 1964 ರ ಜನವರಿಯಲ್ಲಿ ಹುಟ್ಟು ಹಾಕಲಾಯಿತು. ಭಿಲಾಯಿ ಮತ್ತು ರೂರ್ಕೆಲಾ ಉಕ್ಕು ಸ್ಥಾವರಗಳ 1 ಎಂಟಿ ಹಂತಗಳನ್ನು 1961 ರ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲಾಯಿತು. ಗಾಲಿ ಮತ್ತು ಅಚ್ಚು ಸ್ಥಾವರವನ್ನು ಸ್ಥಾಪನೆ ಮಾಡಿದ ನಂತರ ದುರ್ಗಪುರ್ ಉಕ್ಕು ಸ್ಥಾವರದ 1 ಎಂಟಿ ಹಂತವನ್ನು 1962 ರ ಜನವರಿಯಲ್ಲಿ ಪೂರ್ಣಗೊಳಿಸಲಾಯಿತು. ಹೆಚ್ಎಸ್‌ಎಲ್‌ನ ಕಚ್ಚಾ ಉಕ್ಕು ಉತ್ಪಾದನೆಯು 1.58 ಎಂಟಿ (1959-60) ರಿಂದ 1.6 ಎಂಟಿಗೆ ಹೆಚ್ಚಾಯಿತು. ವೈರ್ ರಾಡ್ ಮಿಲ್‌ನ ಸ್ಥಾಪನೆಯ ನಂತರ 1967 ರ ಸೆಪ್ಟೆಂಬರ್‌ನಲ್ಲಿ ಭಿಲಾಯಿ ಉಕ್ಕು ಸ್ಥಾವರವನ್ನು ಪೂರ್ಣಗೊಳಿಸಲಾಯಿತು. ರೂರ್ಕೆಲಾದ 1.8 ಎಂಟಿ ಹಂತದ ಕೊನೆಯ ಘಟಕವಾದ - ಟಾಂಡೆಮ್ ಮಿಲ್ ಅನ್ನು 1968 ರ ಫೆಬ್ರವರಿಯಲ್ಲಿ ಕಾರ್ಯಾರಂಭ ಮಾಡಲಾಯಿತು ಮತ್ತು ಎಸ್ಎಮ್ಎಸ್‌ನಲ್ಲಿ ಫರ್ನೇಸ್ ಅನ್ನು ಸ್ಥಾಪನೆ ಮಾಡಿದ ಬಳಿಕ 1969 ರ ಆಗಸ್ಟ್‌ನಲ್ಲಿ ದುರ್ಗಪುರ್ ಉಕ್ಕು ಸ್ಥಾವರದ 1.6 ಎಂಟಿ ಹಂತವನ್ನು ಪೂರ್ಣಗೊಳಿಸಲಾಯಿತು. ಹೀಗೆ ಭಿಲಾಯಿಯಲ್ಲಿನ 2.5 ಎಂಟಿ ಹಂತ, ರೂರ್ಕೆಲಾದ 1.8 ಎಂಟಿ ಹಂತ ಮತ್ತು ದುರ್ಗಪುರದ 1.6 ಎಂಟಿ ಹಂತದ ಪೂರ್ಣಗೊಳಿಸುವಿಕೆಯ ಮೂಲಕ ಹೆಚ್ಎಸ್ಎಲ್‌ನ ಒಟ್ಟು ಕಚ್ಚಾ ಉಕ್ಕು ಉತ್ಪಾದನೆಯ ಸಾಮರ್ಥ್ಯವು 1968-69 ನೇ ಸಾಲಿನಲ್ಲಿನ 3.7 ಎಂಟಿಯಿಂದ 1972-73 ರಲ್ಲಿ 4 ಎಂಟಿಗೆ ಹೆಚ್ಚಳವಾಯಿತು.
2003 ರಿಂದ–ಇಲ್ಲಿಯವರೆಗೆ
[ಬದಲಾಯಿಸಿ]ಉದ್ಯಮವನ್ನು ನಿರ್ವಹಣೆ ಮಾಡಲು ಹೊಸ ಮಾದರಿಯನ್ನು ರೂಪಿಸಲು ಉಕ್ಕು ಮತ್ತು ಗಣಿ ಸಚಿವಾಲಯವು ಹೊಸ ನೀತಿ ಹೇಳಿಕೆಯನ್ನು ಸಿದ್ಧಪಡಿಸಿತು. 1972 ರ ಡಿಸೆಂಬರ್ 2 ರಂದು ನೀತಿ ಹೇಳಿಕೆಯನ್ನು ಪಾರ್ಲಿಮೆಂಟಿನಲ್ಲಿ ಪ್ರಸ್ತುತ ಪಡಿಸಲಾಯಿತು. ಈ ಆಧಾರದಲ್ಲಿ ಒಂದೇ ಸೂರಿನಡಿಯಲ್ಲಿ ಒಳ ಮತ್ತು ಹೊರ ಹೋಗುವಿಕೆಗಳ ನಿರ್ವಹಣೆಗಾಗಿ ಹಿಡುವಳಿ ಸಂಸ್ಥೆಯೊಂದನ್ನು ರಚಿಸುವ ಕಲ್ಪನೆಯನ್ನು ಚರ್ಚಿಸಲಾಯಿತು. ಇದು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದ ರಚನೆಗೆ ಕಾರಣವಾಯಿತು. ರೂ 2000 ಕೋಟಿ ರೂಪಾಯಿಗಳ ಅಧಿಕೃತ ಬಂಡವಾಳದೊಂದಿಗೆ 1973 ರ ಜನವರಿಯಲ್ಲಿ ಪ್ರಾರಂಭವಾದ ಕಂಪನಿಯು ಭಿಲಾಯಿ, ಬೊಕಾರೋ, ದುರ್ಗಪುರ್, ರೂರ್ಕೆಲಾ ಮತ್ತು ಬರ್ನ್‌ಪುರ್‌ದ ಐದು ಏಕೀಕೃತ ಉಕ್ಕು ಸ್ಥಾವರಗಳು, ಅಲಾಯ್ ಉಕ್ಕು ಸ್ಥಾವರ ಮತ್ತು ಸೇಲಂ ಉಕ್ಕು ಸ್ಥಾವರದ ನಿರ್ವಹಣೆಗೆ ಜವಾಬ್ದಾರಿಯಾಗಿತ್ತು. 1978 ರಲ್ಲಿ ನಿರ್ವಹಣಾ ಕಂಪನಿಯಾಗಿ ಎಸ್ಎಐಎಲ್ ಅನ್ನು ಮರುರೂಪಿಸಲಾಯಿತು.
ಅದರ ಪ್ರಾರಂಭದಿಂದ, ರಾಷ್ಟ್ರದ ಕೈಗಾರಿಕಾ ಅಭಿವೃದ್ಧಿಯಲ್ಲಿ ದೃಢವಾದ ಮೂಲಭೂತ ವ್ಯವಸ್ಥೆಯನ್ನು ರೂಪಿಸುವಲ್ಲಿ ಎಸ್ಎಐಎಲ್ ಪ್ರಮುಖ ಪಾತ್ರ ವಹಿಸಿದೆ. ಈ ಜೊತೆಗೆ, ತಾಂತ್ರಿಕ ಮತ್ತು ನಿರ್ವಹಣಾ ನೈಪುಣ್ಯತೆಯ ಅಭಿವೃದ್ಧಿ ಕಾರ್ಯದಲ್ಲಿ ಇದು ಅಪಾರವಾದ ಕೊಡುಗೆಯನ್ನು ನೀಡಿದೆ. ಬಳಕೆಯೋಗ್ಯ ಉದ್ಯಮಕ್ಕೆ ಸತತವಾಗಿ ಬೆಂಬಲವನ್ನು ಒದಗಿಸುವ ಮೂಲಕ ಇದು ಆರ್ಥಿಕ ಬೆಳವಣಿಗೆಯ ದ್ವಿತೀಯ ಮತ್ತು ತೃತೀಯ ಶ್ರೇಣಿಯ ಆಂದೋಲವನ್ನು ಹುಟ್ಟು ಹಾಕಿತು.
ಇಂದು ಎಸ್ಎಐಎಲ್ ಎನ್ನುವುದು ಭಾರತದ ಅತೀ ದೊಡ್ಡ ಕೈಗಾರಿಕಾ ಸಂಸ್ಥೆಗಳಲ್ಲಿ ಒಂದಾಗಿದೆ. ದೇಶೀಯ ಮತ್ತು ರಫ್ತು ಮಾರುಕಟ್ಟೆಗಳಿಗೆ ಪೂರೈಸುವ ವೈವಿಧ್ಯ ಶ್ರೇಣಿಯ ಗುಣಮಟ್ಟದ ಉಕ್ಕು ಉತ್ಪನ್ನಗಳು ಜೊತೆಗೆ ತಾಂತ್ರಿಕ ಮತ್ತು ವೃತ್ತಿಪರ ಪರಿಣತಿಯ ಬೃಹತ್ ಪ್ರಮಾಣದ ಸಂಚಯವು ಎಸ್ಎಐಎಲ್‌ನ ಸಾಮರ್ಥ್ಯವಾಗಿದೆ.
ದೂರದೃಷ್ಟಿ
[ಬದಲಾಯಿಸಿ]ವಿಶ್ವ ಗುಣಮಟ್ಟದ ಗೌರವಪೂರ್ಣ ಸಂಸ್ಥೆಯಾಗುವುದು ಮತ್ತು ಗುಣಮಟ್ಟ, ಉತ್ಪಾದನೆ, ಲಾಭ ಮತ್ತು ಗ್ರಾಹಕ ಸಂತೃಪ್ತಿಯಲ್ಲಿ ಭಾರತೀಯ ಸ್ಟೀಲ್ ಉದ್ಯಮದದಲ್ಲಿ ಅಗ್ರಗಣ್ಯ ಸ್ಥಾನವನ್ನು ಪಡೆಯುವುದು.
ಸೂತ್ರಗಳು
• ನಂಬಿಕೆ ಮತ್ತು ಪರಸ್ಪರ ಅನುಕೂಲತೆಯ ಆಧಾರದಲ್ಲಿ ಗ್ರಾಹಕರೊಂದಿಗೆ ನಾವು ದೀರ್ಘಕಾಲದ ಸಂಬಂಧವನ್ನು ಬೆಳೆಸಿಕೊಳ್ಳುತ್ತೇವೆ.
• ನಮ್ಮ ವ್ಯವಹಾರದ ನಡವಳಿಕೆಯಲ್ಲಿ ನಾವು ಅತ್ಯುಚ್ಛ ನೈತಿಕ ಮಾನದಂಡಗಳನ್ನು ಎತ್ತಿ ಹಿಡಿಯುತ್ತೇವೆ.
• ಹೊಂದುಕೊಳ್ಳುವಿಕೆ, ಕಲಿಕೆ ಮತ್ತು ಬದಲಾವಣೆಗೆ ಪೂರ್ವಭಾವಿಯಾಗುವಂತಹ ಸಂಸ್ಕೃತಿಯನ್ನು ನಾವು ರೂಪಿಸುತ್ತೇವೆ ಮತ್ತು ಪೋಷಿಸುತ್ತೇವೆ.
• ಪ್ರಗತಿ ಮತ್ತು ಪ್ರತಿಫಲದ ಅವಕಾಶಗಳೊಂದಿಗೆ ಉದ್ಯೋಗಿಗಳಿಗೆ ನಾವು ಸವಾಲಿನ ವೃತ್ತಿಯನ್ನು ಯೋಜಿಸುತ್ತೇವೆ.
• ನಾವು ಜನರ ಬದುಕಿನಲ್ಲಿ ಅರ್ಥಪೂರ್ಣ ಬದಲಾವಣೆಯನ್ನು ತರಲು ಅವಕಾಶಗಳು ಮತ್ತು ಜವಾಬ್ದಾರಿಯನ್ನು ಗೌರವಿಸುತ್ತೇವೆ.
ಪ್ರಮುಖ ಘಟಕಗಳು
[ಬದಲಾಯಿಸಿ]ಎಸ್ಎಐಎಲ್ ಏಕೀಕೃತ ಉಕ್ಕು ಘಟಕಗಳು
[ಬದಲಾಯಿಸಿ]- ಒರಿಸ್ಸಾದಲ್ಲಿನ ರೂರ್ಕೆಲಾ ಉಕ್ಕು ಸ್ಥಾವರ (ಆರ್‌ಎಸ್‌ಪಿ) ಯನ್ನು ಜರ್ಮನಿಯ ಸಹಯೋಗದೊಂದಿಗೆ ಸ್ಥಾಪಿಸಲಾಯಿತು (1959 ರಲ್ಲಿ ಸ್ಥಾಪಿತವಾದ ಭಾರತದಲ್ಲಿ ಸಾರ್ವಜನಿಕ ಉದ್ದಿಮೆಯಲ್ಲಿನ ಮೊದಲ ಏಕೀಕೃತ ಉಕ್ಕ ಸ್ಥಾವರವಾಗಿದೆ)
- ಚತ್ತೀನ್‌ಘಡದಲ್ಲಿನ ಭಿಲಾಯಿ ಉಕ್ಕು ಸ್ಥಾವರ (ಬಿಎಸ್‌ಪಿ)ಯನ್ನು ಸೋವಿಯತ್ ಸಹಯೋಗದಲ್ಲಿ ಸ್ಥಾಪಿಸಲಾಯಿತು (1959)
- ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿನ ದುರ್ಗಾಪುರ ಉಕ್ಕು ಸ್ಥಾವರ (ಡಿಎಸ್‌ಪಿ)ಯನ್ನು ಬ್ರಿಟಿಷ್ ಸಹಯೋಗದಲ್ಲಿ ಸ್ಥಾಪಿಸಲಾಯಿತು (1965)
- ಜಾರ್ಖಂಡ್ನಲ್ಲಿನ ಬೊಕಾರೋ ಉಕ್ಕು ಸ್ಥಾವರ (ಬಿಎಸ್ಎಲ್) (1965) ಅನ್ನು ಸೋವಿಯತ್ ಸಹಯೋಗದಲ್ಲಿ ಸ್ಥಾಪಿಸಲಾಯಿತು (ಉಪಕರಣ, ಸಾಮಗ್ರಿಗೆ ಸಂಬಂಧಿಸಿದಂತೆ ಗರಿಷ್ಠ ದೇಶೀಯ ಸಾಮಗ್ರಿಗಳೊಂದಿಗೆ ನಿರ್ಮಿತವಾದ ಈ ಸ್ಥಾವರವು ರಾಷ್ಟ್ರದ ಮೊದಲ ಸ್ವದೇಶೀ ಉಕ್ಕು ಸ್ಥಾವರವಾಗಿದೆ)
- ಪಶ್ಚಿಮ ಬಂಗಾಳದ ಬರ್ನ್‌ಪುರ್ದಲ್ಲಿನ IIಎಸ್‌ಸಿಓ ಉಕ್ಕು ಸ್ಥಾವರ (ಐಎಸ್‌ಪಿ)
ವಿಶೇಷ ಉಕ್ಕು ಘಟಕಗಳು
[ಬದಲಾಯಿಸಿ]- ಉತ್ತರ ಪ್ರದೇಶದ ಕಾನ್ಪುರದ ಭಾರತೀಯ ಉಕ್ಕು ಪ್ರಾಧಿಕಾರ (ಎಸ್ಎಐಎಲ್)
- ಪಶ್ಚಿಮ ಬಂಗಾಳದ ದುರ್ಗಪುರದ ಅಲಾಯ್ ಸ್ಟೀಲ್ಸ್ ಸ್ಥಾವರಗಳು (ಎಎಸ್‌ಪಿ)
- ತಮಿಳುನಾಡಿನ ಸೇಲಮ್ ಉಕ್ಕು ಸ್ಥಾವರ (ಎಸ್ಎಸ್‌ಪಿ)
- ಕರ್ನಾಟಕದ ಭದ್ರಾವತಿಯಲ್ಲಿನ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ವಿಐಎಸ್‌ಎಲ್)
ಅಂಗಸಂಸ್ಥೆಗಳು
[ಬದಲಾಯಿಸಿ]- ಮಹಾರಾಷ್ಟ್ರದಲ್ಲಿ ಮಹಾರಾಷ್ಟ್ರ ಎಲೆಕ್ಟ್ರೋ-ಸ್ಮೆಲ್ಟ್ ಲಿಮಿಟೆಡ್ (ಎಂಇಎಲ್)
ಕೇಂದ್ರೀಯ ಘಟಕಗಳು
[ಬದಲಾಯಿಸಿ]- ಇಂಜಿನಿಯರಿಂಗ್ ಮತ್ತು ತಾಂತ್ರಿಕ ಕೇಂದ್ರ
- ಕಬ್ಬಿಣ ಮತ್ತು ಉಕ್ಕಿನ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ
- ಮ್ಯಾನೇಜ್‌ಮೆಂಟ್ ತರಬೇತಿ ಸಂಸ್ಥೆ
- ಎಸ್ಎಐಎಲ್ ಸುರಕ್ಷತಾ ಸಂಘ
- ಕಚ್ಚಾ ಪದಾರ್ಥಗಳ ವಿಭಾಗ
- ಸೆಂಟ್ರಲ್ ಮಾರ್ಕೆಟಿಂಗ್ ಆರ್ಗನೈಸೇಶನ್
- ಎಸ್ಎಐಎಲ್ ಸಲಹಾ ಸಂಸ್ಥೆ[೩]
ಜಂಟಿ ಉದ್ಯಮಗಳು
[ಬದಲಾಯಿಸಿ]ಎನ್‌ಟಿಪಿಸಿ ಎಸ್ಎಐಎಲ್ ಪವರ್ ಕಂಪನಿ ಪ್ರೈವೇಟ್. ಲಿಮಿಟೆಡ್ (ಎನ್ಎಸ್‌ಪಿಸಿಎಲ್)
[ಬದಲಾಯಿಸಿ]ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ (ಎಸ್ಎಐಎಲ್) ಮತ್ತು ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಎನ್‌ಟಿಪಿಸಿ ಲಿಮಿಟೆಡ್) ನಡುವಿನ50:50 ಜಂಟಿ ಸಹಯೋಗ; ಸಂಯೋಜಿತ 314 ಮೆಗಾವ್ಯಾಟ್ಸ್ (MW) ಸಾಮರ್ಥ್ಯದೊಂದಿಗೆ ರೂರ್ಕೆಲಾ, ದುರ್ಗಪುರ್ ಮತ್ತು ಭಿಲಾಯಿಯಲ್ಲಿನ ನಿಯಂತ್ರಿತ ವಿದ್ಯುತ್ ಸ್ಥಾವರಗಳನ್ನು ನಿರ್ವಹಣೆ ಮಾಡುತ್ತದೆ. ಇದು ಭಿಲಾಯಿಯಲ್ಲಿ 500 MW (2 x 250 MW ಯೂನಿಟ್‌ಗಳು) ವಿದ್ಯುತ್ ಸ್ಥಾವರದ ಕಾರ್ಯಗತಗೊಳಿಸುವಿಕೆಯೊಂದಿಗೆ ಹೆಚ್ಚುವರಿ ಸಾಮರ್ಥ್ಯವನ್ನು ಸ್ಥಾಪಿಸಿದೆ. ಮೊದಲನೆ ಘಟಕದ ವಾಣಿಜ್ಯಿಕ ಉತ್ಪತ್ತಿಯು 2009 ರ ಏಪ್ರಿಲ್‌ನಲ್ಲಿ ಮತ್ತು ಎರಡನೇ ಘಟಕದ ಉತ್ಪತ್ತಿಯು 2009 ಅಕ್ಟೋಬರ್‌ರಂದು ಪ್ರಾರಂಭಗೊಂಡಿತು
ಬೊಕಾರೋ ಪವರ್ ಸಪ್ಲೈ ಕಂಪನಿ ಪ್ರೈವೇಟ್ ಲಿಮಿಟೆಡ್ (ಬಿಸಿಎಸ್‌ಸಿಎಲ್)
[ಬದಲಾಯಿಸಿ]ಎಸ್ಎಐಎಲ್ ಮತ್ತು ದಾಮೋದರ್ ವ್ಯಾಲಿ ಕಾರ್ಪೊರೇಷನ್ ನಡುವಿನ 50:50 ಜಂಟಿ ಸಹಯೋಗವು 2002 ರ ಜನವರಿಯಲ್ಲಿ ರೂಪಿತವಾಯಿತು ಮತ್ತು ಇದು ಬೊಕಾರೋ ಉಕ್ಕು ಸ್ಥಾವರದಲ್ಲಿ 312 -MW ವಿದ್ಯುತ್ ಉತ್ಪಾದನೆ ಸ್ಟೇಶನ್ ಮತ್ತು ಪ್ರತಿ ಗಂಟೆಗೆ 660 ಟನ್‌ಗಳಷ್ಟು ಹಬೆ ಉತ್ಪತ್ತಿ ಸೌಲಭ್ಯಗಳನ್ನು ನಿರ್ವಹಣೆ ಮಾಡುತ್ತಿದೆ. ಬೊಕಾರೋದಲ್ಲಿ 2x250 MW ಇದ್ದಿಲು ಆಧಾರಿತ ಥರ್ಮಲ್ ಘಟಕವನ್ನು ಸ್ಥಾಪಿಸುವುದರ ಮೂಲಕ ಬಿಪಿಎಸ್‌ಸಿಎಲ್ ತನ್ನ ಸಾಮರ್ಥ್ಯವನ್ನು ವಿಸ್ತರಿಸಲು ಯೋಜಿಸಿದೆ. ಇದಕ್ಕೆ ಹೆಚ್ಚಿನದಾಗಿ, ಬೊಕಾರೋದಲ್ಲಿ 9 ನೇ ಬಾಯ್ಲರ್ (300ಟ/ಗಂ) & 36 MW ಹಿಮ್ಮುಖ ಒತ್ತಡದ ಟರ್ಬೋ ಜನರೇಟರ್ (ಬಿಪಿಟಿಜಿ) ಯೋಜನೆಯ ಸ್ಥಾಪನಾ ಚಟುವಟಿಕೆಗಳ ನಿರ್ಮಾಣ ಕಾರ್ಯವು ಪ್ರಗತಿಯಲ್ಲಿದೆ.
ಎಮ್‌ಜಂಕ್ಷನ್ ಸರ್ವೀಸಸ್ ಲಿಮಿಟೆಡ್
[ಬದಲಾಯಿಸಿ]ಎಸ್ಎಐಎಲ್ ಮತ್ತು ಟಾಟಾ ಸ್ಟೀಲ್ ನಡುವಿನ 50:50 ಜಂಟಿ ಸಹಯೋಗವು 2001 ರಲ್ಲಿ ರೂಪುಗೊಂಡಿತು. ಈ ಕಂಪನಿಯು ಉಕ್ಕು ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಇ-ಕಾಮರ್ಸ್ ಚಟುವಟಿಕೆಗಳನ್ನು ಉತ್ತೇಜಿಸುತ್ತದೆ. ಹೊಸದಾಗಿ ಸೇರ್ಪಡೆಯಾದ ಸೇವೆಗಳಲ್ಲಿ ಇ-ಆಸ್ತಿಗಳ ಮಾರಾಟ, ಕಾರ್ಯಕ್ರಮಗಳು ಮತ್ತು ಸಮಾರಂಭಗಳು, ಉಕ್ಕು ಮಾರಾಟ ಮತ್ತು ಲಾಜಿಸ್ಟಿಕ್ಸ್, ಪ್ರಕಟಣೆಗಳು ಮತ್ತು ಮುಂತಾದವುಗಳು ಸೇರಿದೆ.
ಎಸ್ಎಐಎಲ್-ಬನ್ಸಾಲ್ ಸರ್ವೀಸ್ ಸೆಂಟರ್ ಲಿಮಿಟೆಡ್
[ಬದಲಾಯಿಸಿ]ಉಕ್ಕಿಗೆ ಮೌಲ್ಯವನ್ನು ಸೇರ್ಪಡಿಸುವ ಉದ್ದೇಶದೊಂದಿಗೆ ಬೊಕಾರೋದಲ್ಲಿ ಸೇವಾ ಕೇಂದ್ರದ ಸ್ಥಾಪನೆಗೆ ಉತ್ತೇಜನ ನೀಡಲು ಬಿಎಮ್‌ಡಬ್ಲೂ ಇಂಡಸ್ಟ್ರೀಸ್‌ನೊಂದಿಗೆ ಎಸ್ಎಐಎಲ್ 40:60 ಆಧಾರದಲ್ಲಿ ಜಂಟಿ ಸಹಯೋಗವನ್ನು ರೂಪಿಸಿದೆ.
ಭಿಲಾಯಿ ಜೆಪಿ ಸಿಮೆಂಟ್ ಲಿಮಿಟೆಡ್
[ಬದಲಾಯಿಸಿ]ಭಿಲಾಯಿಯಲ್ಲಿ 2.2 MT ಸಾಮರ್ಥ್ಯದ ಕಿಟ್ಟ ಆಧಾರಿತ ಸಿಮೆಂಟ್ ಸ್ಥಾವರನ್ನು ಸ್ಥಾಪಿಸಲು ಜೈಪ್ರಕಾಶ್ ಅಸೋಸಿಯೇಟ್ಸ್‌ಯೊಂದಿಗೆ ಎಸ್ಎಐಎಲ್ ಜಂಟಿ ಸಹಯೋಗಿ ಕಂಪನಿಯೊಂದನ್ನು ರಚಿಸಿದೆ. ಕಂಪನಿಯು ಭಿಲಾಯಿಯಲ್ಲಿ ಸಿಮೆಂಟ್ ಉತ್ಪಾದನೆಯನ್ನು ಮಾರ್ಚ್ 2010 ರೊಳಗೆ ಪ್ರಾರಂಭಿಸಲಿದ್ದರೆ, 2009 ರೊಳಗೆ ಸತ್ನಾದಲ್ಲಿ ಸುಟ್ಟ ಕಲ್ಲಿದ್ದಲಿನ ಕಿಟ್ಟದ ಉತ್ಪಾದನೆಯು ಪ್ರಾರಂಭವಾಗಲಿದೆ.
ಬೊಕಾರೋ ಜೆಪಿ ಸಿಮೆಂಟ್ ಲಿಮಿಟೆಡ್
[ಬದಲಾಯಿಸಿ]ಬಿಎಸ್ಎಲ್‌ನಿಂದ ಕಿಟ್ಟವನ್ನು ಬಳಕೆ ಮಾಡಿಕೊಂಡು ಬೊಕಾರೋದಲ್ಲಿ 2.1 MT ಸಾಮರ್ಥ್ಯದ ಸಿಮೆಂಟ್ ಸ್ಥಾವರನ್ನು ಸ್ಥಾಪಿಸಲು ಜೈಪ್ರಕಾಶ್ ಅಸೋಸಿಯೇಟ್ಸ್‌ನೊಂದಿಗೆ ಮತ್ತೊಂದು ಜಂಟಿ ಸಹಯೋಗ ಕಂಪನಿಯನ್ನು ಎಸ್ಎಐಎಲ್ ಸಂಘಟಿಸಿದೆ. ಯೋಜನೆಯು ಸದ್ಯ ಜಾರಿಯ ಹಂತದಲ್ಲಿದ್ದು ಜುಲೈ 2011ರೊಳಗೆ ಸಿಮೆಂಟ್ ಉತ್ಪಾದನೆಯು ಪ್ರಾರಂಭವಾಗಲಿದೆ.
ಎಸ್ಎಐಎಲ್&ಎಮ್ಓಐಎಲ್ ಫೆರೋ ಅಲಾಯ್ಸ್ (ಪ್ರೈವೇಟ್.) ಲಿಮಿಟೆಡ್
[ಬದಲಾಯಿಸಿ]ಉಕ್ಕು ಉತ್ಪಾದನೆಗೆ ಅಗತ್ಯವಾಗಿರುವ ಫೆರೋ-ಮ್ಯಾಂಗನೀಸ್ ಮತ್ತು ಸಿಲಿಕೋ-ಮ್ಯಾಂಗನೀಸ್ ಉತ್ಪಾದನೆ ಮಾಡಲು ಮ್ಯಾಂಗನೀಸ್ ಓರ್ (ಇಂಡಿಯಾ) ಲಿಮಿಟೆಡ್ನೊಂದಿಗೆ 50:50 ಆಧಾರದಲ್ಲಿ ಎಸ್ಎಐಎಲ್ ಜಂಟಿ ಸಹಯೋಗಿ ಕಂಪನಿಯೊಂದನ್ನು ರಚಿಸಿದೆ.
ಎಸ್&ಟಿ ಮೈನಿಂಗ್ ಕಂಪನಿ ಪ್ರೈವೇಟ್ ಲಿಮಿಟೆಡ್
[ಬದಲಾಯಿಸಿ]ಕಲ್ಲಿದ್ದಲು ಬ್ಲಾಕ್‌ಗಳು/ಗಣಿಗಳ ಜಂಟಿ ಸ್ವಾಧೀನತೆ ಮತ್ತು ಅಭಿವೃದ್ಧಿಗಾಗಿ ಟಾಟಾ ಸ್ಟೀಲ್‌ನೊಂದಿಗೆ ಎಸ್ಎಐಎಲ್ ಜಂಟಿ ಸಹಯೋಗಿ ಕಂಪನಿಯೊಂದನ್ನು ರಚಿಸಿದೆ. ಕರಿಕು ಕಲ್ಲಿದ್ದಲು ಪೂರೈಕೆಗಳನ್ನು ಪಡೆಯಲು ಕರಿಕು ಕಲ್ಲಿದ್ದಲು ಅಭಿವೃದ್ಧಿಗಾಗಿ ಜಂಟಿ ಸಹಯೋಗಿ ಕಂಪನಿಯೊಂದಿಗೆ ಹೊಸ ದೇಶೀಯ ಅವಕಾಶಗಳನ್ನು ಅನ್ವೇಷಿಸಲಾಗುತ್ತದೆ.
ಇಂಟರ್‌ನ್ಯಾಷನಲ್ ಕೋಲ್ ವೆಂಚೂರ್ಸ್ ಪ್ರೈವೇಟ್ ಲಿಮಿಟೆಡ್
[ಬದಲಾಯಿಸಿ]ಕರಿಕು ಕಲ್ಲಿದ್ದಲು ಕ್ಷೇತ್ರದಲ್ಲಿ ಉಕ್ಕು ಸಾರ್ವಜನಿಕ ಉದ್ದಿಮೆಗಳು ಸ್ವತಂತ್ರವಾಗಿ ಅವಲಂಬಿತವನ್ನಾಗಿ ಮಾಡುವ ಗುರಿಯನ್ನು ಸಾಧಿಸುವತ್ತ ಐದು ಕೇಂದ್ರೀಯ ಸಾರ್ವಜನಿಕ ಉದ್ದಿಮೆ ಕಂಪನಿಗಳಾದ ಎಸ್ಎಐಎಲ್, ರಾಷ್ಟ್ರೀಯ ಇಸ್ಪಾತ್ ನಿಗಮ್ ಲಿಮಿಟೆಡ್ (ಆರ್ಐಎನ್ಎಲ್), ಕೋಲ್ ಇಂಡಿಯಾ ಲಿಮಿಟೆಡ್ ಮತ್ತು ಇತರ ಉದ್ದೇಶಿತ ರಾಷ್ಟ್ರಗಳನ್ನು ಒಳಗೊಂಡ ಜಂಟಿ ಸಹಯೋಗಿ ಕಂಪನಿಯೊಂದನ್ನು ರೂಪಿಸಲಾಗಿದೆ.
ಮಾಲೀಕತ್ವ ಮತ್ತು ನಿರ್ವಹಣೆ
[ಬದಲಾಯಿಸಿ]ಭಾರತ ಸರ್ಕಾರವು ಶೇಕಡಾ 86 ರಷ್ಟು ಎಸ್ಎಐಎಲ್ ಷೇರುಗಳನ್ನು ಹೊಂದಿದೆ ಮತ್ತು ಕಂಪನಿಯ ಮತದಾನದ ನಿಯಂತ್ರಣವನ್ನು ಉಳಿಸಿಕೊಂಡಿದೆ. ಆದರೆ, ಎಸ್ಎಐಎಲ್ ತನ್ನ 'ಮಹಾರತ್ನ' ದರ್ಜೆಯ ಕಾರಣದಿಂದ ಪ್ರಮುಖ ಕಾರ್ಯಾಚರಣೆ ಮತ್ತು ಆರ್ಥಿಕ ಸ್ವಾಯತ್ತತೆಯನ್ನು ಹೊಂದಿದೆ
ಎಸ್ಎಐಎಲ್ ನೆಟ್ವರ್ಕ್ ಭೂಪಟ
[ಬದಲಾಯಿಸಿ]ದಯವಿಟ್ಟು ಮುಂದಿನದನ್ನು ಉಲ್ಲೇಖ ಮಾಡಿ ದಿ ಎಸ್ಎಐಎಲ್ ನೆಟ್ವರ್ಕ್ ಭೂಪಟ Archived 2011-07-16 ವೇಬ್ಯಾಕ್ ಮೆಷಿನ್ ನಲ್ಲಿ.
ಸಾಧನೆಗಳು
[ಬದಲಾಯಿಸಿ]- 2008 ರ ಫೋರ್ಬ್ಸ್ ಗ್ಲೋಬಲ್ 2000 ಕಂಪನಿಗಳ ಪಟ್ಟಿಯಲ್ಲಿ ಎಸ್ಎಐಎಲ್ 647 ನೇ ಸ್ಥಾನವನ್ನು ಪಡೆದಿದೆ [೪].
- ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪರ್ಸನಲ್ ಮ್ಯಾನೇಜ್‌ಮೆಂಟ್ ಸಂಸ್ಥೆಯು ಎಸ್ಎಐಎಲ್‌ಗೆ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ
ಹೆಚ್ಆರ್ ಅಭ್ಯಾಸಗಳು 2008.
- ಡೂನ್ ಮತ್ತು ಬ್ರಾಡ್‌ಸ್ಟ್ರೀಟ್-ರೋಲ್ಟಾ ಕಾರ್ಪೊರೇಟ್ 2009 ನೇ ಸಾಲಿನ ಪ್ರಶಸ್ತಿಗಳಿಗಾಗಿ
ಕಬ್ಬಿಣ ಮತ್ತು ಉಕ್ಕು ಕ್ಷೇತ್ರದಲ್ಲಿ ಎಸ್ಎಐಎಲ್ ಅನ್ನು ಅಗ್ರಗಣ್ಯ ಭಾರತೀ ಕಂಪನಿಯೆಂದು ನಿರ್ಣಯಿಸಲಾಗಿದೆ.
- ಬಿಎಸ್‌ಪಿ, ಔದ್ಯೋಗಿಕ ಕ್ಷೇತ್ರದಲ್ಲಿನ ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟಕ್ಕಾಗಿನ 2008 ನೇ ಸಾಲಿನ ಡೂನ್ ಗೋಲ್ಡನ್ ಪಿಕಾಕ್ ಪ್ರಶಸ್ತಿ
ಆರೋಗ್ಯ ಮತ್ತು ಸುರಕ್ಷತೆ – 2008 ಬಿಎಸ್ಎಲ್‌ಗೆ.[೫].
ಇವನ್ನೂ ನೋಡಿ
[ಬದಲಾಯಿಸಿ]- ಉಕ್ಕು ಉತ್ಪಾದಕರ ಪಟ್ಟಿ
- ರಾಷ್ಟ್ರದ ಉಕ್ಕು ಉತ್ಪಾದನೆ
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original (PDF) on 2018-12-24. Retrieved 2011-01-23.
- ↑ ೨.೦ ೨.೧ http://www.bseindia.com/qresann/detailedresult_cons.asp?scrip_cd=500113&qtr=65.5&compname=STEEL%20AUTHORITY%20OF%20INDIA%20LTD.&quarter=MC2009-2010&checkcons=55c
- ↑ "Steel Authority of India". SAIL. Archived from the original on 2010-10-02. Retrieved 2010-08-23.
- ↑ "The Forbes 2000". Forbes.com. Retrieved 2010-08-23.
- ↑ "Awards & Accolades". sail.co.in. Archived from the original on 2010-09-21. Retrieved 2010-08-23.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಎಸ್ಎಐಎಲ್ ಮುಖಪುಟ Archived 2010-10-02 ವೇಬ್ಯಾಕ್ ಮೆಷಿನ್ ನಲ್ಲಿ.
- ಗೂಗಲ್ನಲ್ಲಿ ಎಸ್ಎಐಎಲ್ ಪುಟ