ಭಾರತದಲ್ಲಿ ಕುಸ್ತಿ

ವಿಕಿಪೀಡಿಯ ಇಂದ
Jump to navigation Jump to search
ಅಮೃತಸರದಲ್ಲಿ ಜನಿಸಿದ ಭಾರತದಾರಾ ಸಿಂಗ್, 'ಆಲ್ ಏಷ್ಯಾ ಹೆವಿವೆಯ್ಟ್ ಚಾಂಪಿಯನ್ಷಿಪ್‍'ನ ಲೀಗ್ ಪಂದ್ಯದಲ್ಲಿ ವಿಶ್ವದಲ್ಲಿ ಅಜೇಯನೆನಿಸಿದ್ದ JWA ಕಿಂಗ್ ಕಾಂಗ್ ಗೆ ಮೇಲಿನಿಂದ ಮೇಲೆ ಹೊಡೆತಗಳನ್ನು ಕೊಡುತ್ತಿರುವುದು ಮತ್ತು ವಿಜಯಿಯಾದುದು. ದಿನಾಂಕ 9 ನವೆಂಬರ್ 1955

ಭಾರತದಲ್ಲಿ ಕುಸ್ತಿ[ಬದಲಾಯಿಸಿ]

 • ವಿಶ್ವದ ಅತ್ಯಂತ ಪ್ರಾಚೀನ ಮತ್ತು ಹಳೆಯದಾದ ಕ್ರೀಡೆಗಳಲ್ಲಿ ಕುಸ್ತಿಯೂ ಒಂದು. ಕುಸ್ತಿ ಭಾರತದಲ್ಲಿ ವೈಭವಯುತ ಇತಿಹಾಸಹೊಂದಿದೆ. ಕುಸ್ತಿ ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಜನಪ್ರಿಯವಾಗಿದೆ.[೧]

ಕರ್ನಾಟಕದಲ್ಲಿ ಬಳಕೆಯಲ್ಲಿದ್ದ ಕುಸ್ತಿಯ ಪಟ್ಟುಗಳು[ಬದಲಾಯಿಸಿ]

ಇತಿಹಾಸ[ಬದಲಾಯಿಸಿ]

ಭೀಮ- ಕೀಚಕರ ಮಲ್ಲಯುದ್ಧ - ಕೀಚಕನ ವಧೆ.
ದಾವಣಗೆರೆಯಲ್ಲಿ ಕುಸ್ತಿ ಪಂದ್ಯ.
 • ಕುಸ್ತಿಯನ್ನು ಕ್ರೀಡೆಯಾಗಿ ಕ್ರಿ.ಪೂ. 708 ಯಲ್ಲಿ ಒಲಿಂಪಿಕ್ಸ್ ಗೆ ಸೇರಿಸಲಾಗಿದೆ. ಒಲಿಂಪಿಕ್‍ನಲ್ಲಿ ಕುಸ್ತಿ ಅತ್ಯಂತ ಪ್ರತಿಷ್ಠಿತ ಮತ್ತು ಹಳೆಯ ಕ್ರೀಡೆ. ಪ್ರಾಚೀನ ಕಾಲದಲ್ಲಿ, ಭಾರತದಲ್ಲಿ ಕುಸ್ತಿ ಕಲೆ ಮುಖ್ಯವಾಗಿ ದೈಹಿಕವಾಗಿ ಸದೃಢವಾಗಿ ಉಳಿಯಲು ವ್ಯಾಯಾಮವೆಂದು ಪರಿಗಣಿಸಲಾದ ಕಸರತ್ತು ಆಗಿತ್ತು. ಕುಸ್ತಿಪಟುಗಳು, ಸಾಂಪ್ರದಾಯಿಕವಾಗಿ ಧರಿಸಲು ಲುಂಗಿ, ಲಂಗೋಟಗಳನ್ನು ಕುಸ್ತಿಯಲ್ಲಿ ಬಳಸುತ್ತಿದ್ದರು. ಯಾವುದೇ ಶಸ್ತ್ರಾಸ್ತ್ರಗಳು ಇಲ್ಲದೆ ಮಿಲಿಟರಿಯ / ಸೈನಿಕ ವ್ಯಾಯಾಮವಾಗಿ ಈ ಕ್ರೀಡೆಯನ್ನು ದೊಡ್ಡ ರೀತಿಯಲ್ಲಿ ಬಳಸಲಾಗುತ್ತಿತ್ತು.[೨]
 • ಭಾರತದಲ್ಲಿ ಕುಸ್ತಿಯನ್ನು ಅತ್ಯಂತ ಪ್ರಸಿದ್ಧವಾದಸಹ ಮಲ್ಲಯುದ್ಧ ಎಂದೂ ಮತ್ತು ಮಹಾರಾಷ್ಟ್ರದಲ್ಲಿ ದಂಗಲೆ ಎಂದೂ ಕರೆಯಲಾಗುತ್ತದೆ. ಇದು ಕುಸ್ತಿ ಪಂದ್ಯಾವಳಿಯ ಒಂದು ಮೂಲ ರೂಪ. ಪ್ರಾಚೀನ ಭಾರತದಲ್ಲಿ ಅದನ್ನು ಮಲ್ಲ-ಯುದ್ಧ ಎಂದೇ ಕರೆಯಲಾಗುತ್ತದೆ. ಪ್ರಾಚೀನ ಕಾಲದಲ್ಲಿ ಕುಸ್ತಿ ಸಂಬಂದಿಸಿದ ಕಥೆ ಪುರಾಣ ಘಟನೆಗಳು ಇವೆ. ಭಾರತದ ಇತಿಹಾಸದ ಮಹಾನ್ ಮಹಾಕಾವ್ಯ ಮಹಾಭಾರತದಲ್ಲಿ ಇದನ್ನು ಕಾಣಬಹುದು; ಇದು ಭಾರತದ ಕುಸ್ತಿ ಉಲ್ಲೇಖವನ್ನು ಒಳಗೊಂಡಿದೆ.
 • 13 ನೇ ಶತಮಾನದ ಮಲ್ಲ ಪುರಾಣದಲ್ಲಿ ಶೈಲೇಶರು ಎಂದು ಕರೆಯಲಾಗುತ್ತದೆ ಜೇಷ್ಟಮಲ್ಲರು ಎಂದು ಹೇಳುವ ಕುಸ್ತಿಪಟುಗಳ ಒಂದು ಗುಂಪಿನ ಉಲ್ಲೇಖವಿದೆಹೊಂದಿದೆ. ಕರ್ನಾಟಕದಲ್ಲಿ ದಸರಾ ಕುಸ್ತಿಗಳು ಜಗತ್‍ಪ್ರಸಿದ್ಧ.

ಮೈಸೂರು ದಸರಾದಲ್ಲಿ ಕುಸ್ತಿ[ಬದಲಾಯಿಸಿ]

ಮೈಸೂರಿನಲ್ಲಿ ದಸರಾ ಕುಸ್ತಿ ನಡೆಯುವ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳ ಅಖಾಡಗಳು ಖಾಲಿ; ಕುಸ್ತಿ ತರಬೇತುದಾರರು ತಮ್ಮೂರಿನಲ್ಲಿರುವುದಿಲ್ಲ. ಯಾಕೆಂದರೆ ಅವರೆಲ್ಲರೂ ಮೈಸೂರಿನಲ್ಲಿ ಬೀಡುಬಿಟ್ಟಿರುತ್ತಾರೆ. ತಮ್ಮ ಶಿಷ್ಯಂದಿರ ಸ್ಪರ್ಧೆ ಇರಲಿ, ಇಲ್ಲದಿರಲಿ; ಅವರು ದಸರಾ ಕುಸ್ತಿಯ ಸೊಬಗು ಸವಿಯುವ ಅವಕಾಶ ಕೈಚೆಲ್ಲಲು ಸಿದ್ಧರಿಲ್ಲ. ಕುಸ್ತಿ ಮೇಲಿನ ಪ್ರೀತಿ ಇದಕ್ಕೆ ಒಂದು ಕಾರಣವಾದರೆ, ದಸರಾ ಕುಸ್ತಿಯಲ್ಲಿ ಪಾಲ್ಗೊಳ್ಳುವವರ ಪೈಕಿ ಮತ್ತು ಬಹುಮಾನ ಗೆಲ್ಲುವವರಲ್ಲಿ ಬಹುಪಾಲು ಉತ್ತರ ಕರ್ನಾಟಕದವರು ಎಂಬುದು ಮತ್ತೊಂದು ಕಾರಣ ಎಂಬುದು ಇಲ್ಲಿನವರ ವಿಶ್ಲೇಷಣೆ. ದಸರಾ ಕುಸ್ತಿಯಂತೆ ಉತ್ತರ ಕರ್ನಾಟಕದಲ್ಲಿ ಹಬ್ಬ–ಉತ್ಸವಗಳಲ್ಲಿ ಕುಸ್ತಿಗೆ ಆದ್ಯತೆ ಇದೆ. ಜಾತ್ರೆಗಳಿಗೆ ಇಲ್ಲಿ ಕುಸ್ತಿಗಳು ಕಳೆಗಟ್ಟುತ್ತವೆ. ದಶಕಗಳ ಹಿಂದೆ ಥಿಯೇಟರ್‌ ಕುಸ್ತಿ (ಟಿಕೆಟ್‌ ಇರಿಸಿ ಆಡಿಸುವ ಸ್ಪರ್ಧೆ) ನಡೆಯುತ್ತಿದ್ದ ಈ ಭಾಗದಲ್ಲಿ ನಂತರ ಕುಸ್ತಿ ಅನೇಕ ಬದಲಾವಣೆಗಳನ್ನು ಕಂಡಿದೆ. ಜಂಗೀ ಕಾಟಾ ನಿಕಾಲಿಯಲ್ಲಿನ ‘ಡಾವ್‌’ಗಳ ಸವಿಯುಂಡ ಜನರು ಪಾಯಿಂಟ್ ಕುಸ್ತಿಯ ಪಟ್ಟುಗಳಿಗೂ ಮಾರುಹೋಗಿದ್ದಾರೆ. ಮಣ್ಣಿನಲ್ಲಿ ನಡೆಯುತ್ತಿದ್ದ ‘ಮಟ್ಟಿ ಕುಸ್ತಿ’ ನಿಧಾನಕ್ಕೆ ಮ್ಯಾಟ್‌ ಮೇಲೇರಿದೆ. ಫ್ರೀ ಸ್ಟೈಲ್‌ ಕುಸ್ತಿಯಿಂದ ಗ್ರೀಕೊ ರೋಮನ್‌ ಶೈಲಿಗೂ ಪದಾರ್ಪಣೆಯಾಗಿದೆ. ಇದ್ಯಾವುದೂ ಕುಸ್ತಿ ಮೇಲಿನ ಮೋಹಕ್ಕೆ ಧಕ್ಕೆ ತರಲಿಲ್ಲ. ಮೈಯನ್ನು ಕಟ್ಟುಮಸ್ತಾಗಿಸಲು, ಹೆಸರು ಗಳಿಸಲು ಮತ್ತು ಊರ ಜನರ ಪ್ರೀತಿಗೆ ಪಾತ್ರರಾಗಲು ಕುಸ್ತಿ ಆಡುತ್ತಿದ್ದವರು ಈಗ ಪಾಯಿಂಟ್‌ ಕುಸ್ತಿಯ ಬೆನ್ನುಹತ್ತಿ ಉದ್ಯೋಗ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಈಗ ಕುಸ್ತಿ ಜೀವನೋಪಾಯ ಮಾರ್ಗವಾಗಿಯೂ ಮಾರ್ಪಟ್ಟಿದೆ. ಈ ಕ್ರೀಡೆಯ ಬಗ್ಗೆ ಕಾಳಜಿ ವಹಿಸಲು ಇದು ಕೂಡ ಒಂದು ಕಾರಣವಾಗಿದೆ. 1950ರ ಅವಧಿಯಲ್ಲೇ ಚಿನ್ನದ ಸಾಧನೆ ಮಾಡಿದ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೂ ತರಬೇತಿ ನೀಡುತ್ತಿರುವ ಭಾರತ ಕ್ರೀಡಾ ಪ್ರಾಧಿಕಾರದ (ಸಾಯ್‌) ಧಾರವಾಡ ತರಬೇತಿ ಕೇಂದ್ರ, ಬೆಳಗಾವಿ, ಬಾಗಲಕೋಟೆ, ಗದಗ, ಹಳಿಯಾಳದಲ್ಲಿ ಕುಸ್ತಿ ತರಬೇತಿಯನ್ನೂ ನೀಡುತ್ತಿರುವ ಕ್ರೀಡಾನಿಲಯಗಳು ಮುಂತಾದ ಸಂಸ್ಥೆಗಳು ಕೂಡ ಇಲ್ಲಿನ ಕುಸ್ತಿ ಪೋಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.[೩] [೪] [೫]

Kushti (in Bharatpur March 2013)

ಆಧುನಿಕ ಯುಗ[ಬದಲಾಯಿಸಿ]

 • ಭಾರತದಲ್ಲಿ ಕುಸ್ತಿ ಕ್ರೀಡೆಯಲ್ಲಿ ವಿಶ್ವಛಾಂಪಿಯನ್‍ಗಳೂ ರಾಷ್ಟ್ರಮಟ್ಟದ ಛಾಂಪಿಯನ್‍ಗಳೂ ಇದ್ದಾರೆ. ರಾಷ್ಟ್ರಮಟ್ಟದ ಸ್ಪರ್ಧೆಗಳೂ, ರಾಜ್ಯಮಟ್ಟದ ಸ್ಪರ್ಧೆಗಳೂ ನೆದೆಯುವುವು[೬]
 • ಯು ಟ್ಯೂಬ್: [೧]

ಒಲಿಂಪಿಕ್‍ನಲ್ಲಿ ಭಾರತದ ಕುಸ್ತಿ ಪಟುಗಳು[ಬದಲಾಯಿಸಿ]

 • ಪುರುಷರು:
 • ಕುಸ್ತಿ-ರೆಸಲಿಂಗ್ (ಫ್ರೀಸ್ಟೈಲ್)ನಲ್ಲಿ ಸಂದೀಪ್ ತೋಮರ್ (ಈವೆಂಟ್: 57 ಕೆಜಿ); ಯೋಗೇಶ್ವರ್ ದತ್ (65 ಕೆಜಿ); ನರಸಿಂಗ್ ಪಂಚಮ್ ಯಾದವ್ (74 ಕೆಜಿ)(ನಿಷೇಧ ವಿಧಿಸಲಾಗಿದೆ). ಇದರಿಂದಾಗಿ ಅವರು ರಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅವಕಾಶವನ್ನೂ ಕಳೆದುಕೊಂಡಿದ್ದಾರೆ.)[೧೪]

ಕುಸ್ತಿ-ರೆಸಲಿಂಗ್ (ಫ್ರೀಸ್ಟೈಲ್) ಮಹಿಳೆಯರು:

 • 17 ಆಗಸ್ಟ್,2016ರಂದು-ಮಹಿಳಾ ಕುಸ್ತಿಯ 58 ಕೆ.ಜಿ. ವಿಭಾಗದ ಕಂಚಿನ ಪದಕಕ್ಕಾಗಿ ನಡೆದ ಹಣಾಹಣಿಯಲ್ಲಿ ಭಾರತದ ಸಾಕ್ಷಿ ಮಲಿಕ್‌ ಕಜಕಸ್ತಾನದ ಟೈನಿಬೆಕೊವಾ ಐಸುಲು ಅವರನ್ನು 8–5ರಿಂದ ಸೋಲಿಸಿದರು.ಕೊನೆಯ ಪಂದ್ಯದಲ್ಲಿ ಟೈನಿಬೆಕೊವಾ ಐಸುಲು(ಕಜಕ್) ಅವರನ್ನು 8–5 ಅಂಕಗಳಲ್ಲಿ ಸೋಲಿಸಿ ಕಂಚಿನ ಪದಕ ಪಡೆದರು.
 • ಇತರ ಮಹಿಳಾ ಕುಸ್ತಿ ಪಟುಗಳು:ವಿನೇಶ್ ಪೋಗಟ್ ಮತ್ತು ಬಬಿತಾ ಪೋಗಟ್.[೭]

ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ ಷಿಪ್‌ 2016[ಬದಲಾಯಿಸಿ]

 • ಕುತೂಹಲದಿಂದ ಕೂಡಿದ್ದ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ ಷಿಪ್‌ನಲ್ಲಿ ಸಂದೀಪ್‌ ತೋಮರ್‌, ರಿತು ಪೊಗಟ್‌, ಬಜರಂಗ್‌-ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.
 • ಉತ್ತರ ಪ್ರದೇಶದ ಗೊಂಡಾದಲ್ಲಿ ನಡೆದ ಚಾಂಪಿಯನ್‌ಷಿಪ್‌ನ 57ಕೆ.ಜಿ ವಿಭಾಗದ ಫೈನಲ್‌ನಲ್ಲಿ ಉತ್ಕರ್ಷ್‌ ಕೆಲೆ ವಿರುದ್ಧ ಗೆಲುವು ದಾಖಲಿಸಿದ ಸಂದೀಪ್‌ ತೋಮರ್‌ ಚಿನ್ನ ಗೆದ್ದರು. ಇದಕ್ಕೂ ಮೊದಲು ನಡೆದ ಉತ್ಕರ್ಷ್‌ ಮತ್ತು ಅಮಿತ್‌ ಕುಮಾರ್‌ ನಡುವಿನ ಸೆಮಿಫೈನಲ್‌ ಪಂದ್ಯ ತೀವ್ರ ಪೈಪೋಟಿಯಲ್ಲಿ ಗೆದ್ದರು.
 • ಉತ್ಕರ್ಷ್‌ ಅನುಭವಿ ಆಟಗಾರ ಅಮಿತ್‌ಗೆ ಆಘಾತ ನೀಡಿದರು. ಫೈನಲ್‌ ನಲ್ಲಿ ಸಂದೀಪ್‌ ತೋಮರ್‌ಗೆ ಉತ್ತಮ ಪೈಪೋಟಿ ನೀಡಲು ವಿಫಲರಾದರು. ಬಜರಂಗ್‌ 65ಕೆ.ಜಿ ವಿಭಾಗದ ಫೈನಲ್‌ ಪಂದ್ಯದಲ್ಲಿ ರಾಹುಲ್‌ ಮಾನ್‌ ಎದುರು ಜಯದಾಖಲಿಸಿ ಚಿನ್ನ ಗೆದ್ದರು. ಸೆಮಿಫೈನಲ್‌ನಲ್ಲಿ ಅವರು ರಜನೀಶ್‌ ಮೇಲೆ ಗೆಲುವು ಪಡೆದಿದ್ದರು.
 • ಜಿತೇಂದರ್‌: ಹರಿಯಾಣ: 74ಕೆ.ಜಿ ಫ್ರೀಸ್ಟೈಲ್‌ ವಿಭಾಗ: ಚಿನ್ನ ಗೆದ್ದರು.
 • ರವೀಂದರ್‌: - :66ಕೆ.ಜಿ ವಿಭಾಗ: ಚಿನ್ನ ಗೆದ್ದರು.
 • ಗುರುಪ್ರೀತ್‌ ಸಿಂಗ್: - :75ಕೆ.ಜಿ ವಿಭಾಗ: ಚಿನ್ನ ಜಯಿಸಿದ್ದಾರೆ.
 • ರಿತುಗೆ ಚಿನ್ನ: 48ಕೆ.ಜಿ ಮಹಿಳೆಯರ ವಿಭಾಗದ ಫೈನಲ್‌ನಲ್ಲಿ ಪ್ರಿಯಾಂಕಾ ಸಿಂಗ್‌ ಎದುರು ಗೆದ್ದ ರಿತು ಚಿನ್ನ ಪಡೆದುಕೊಂಡರು.[೮]

ಕಾಮನ್‌ವೆಲ್ತ್ ಕುಸ್ತಿ ಚಾಂಪಿಯನ್‌ಷಿಪ್‌ 2016[ಬದಲಾಯಿಸಿ]

 • 6 Nov, 2016
 • ಭಾರತದ ನಾಲ್ವರು ಕುಸ್ತಿಪಟುಗಳು ಸಿಂಗಪುರದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಏಳು ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದಾರೆ.
 • ಪುರುಷರ ವಿಭಾಗದಲ್ಲಿ ಒಲಿಂಪಿಯನ್ ಸಂದೀಪ್ ತೋಮರ್, ಅಮಿತ್ ಧನಕರ್, ಸತ್ಯವ್ರತ್ ಕಡಿಯಾನ್ ಮತ್ತು
 • ಮಹಿಳೆಯರ ವಿಭಾಗದಲ್ಲಿ ರಿತು ಪೋಗಟ್ ಚಿನ್ನದ ಸಾಧನೆ ಮಾಡಿದ್ದಾರೆ.
 • ಪುರುಷರ 57ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಸಂದೀಪ್ ತೋಮರ್ ಅವರು 6–0 ಪಾಯಿಂಟ್‌ಗಳಿಂದ ಪಾಕಿಸ್ತಾನದ ಮೊಹಮ್ಮದ್ ಬಿಲಾಲ್ ಅವರನ್ನು ಸೋಲಿಸಿ ಚಿನ್ನದ ಪದಕ ಗೆದ್ದರು.
 • 70 ಕೆಜಿ ವಿಭಾಗದ ಫ್ರೀಸ್ಟೈಲ್ ಕುಸ್ತಿಲ್ಲಿ ಅಮಿತ್ ಧನಕರ್ ಅವರು ಚಿನ್ನದ ಪದಕ ಗೆದ್ದರು.
 • 97 ಕೆಜಿ ವಿಭಾಗದ ಫೈನಲ್‌ನಲ್ಲಿ ಸತ್ಯವ್ರತ್ ಅವರ ಎದುರಾಳಿ ರೌಬಲ್‌ ಜೀತ್ ಗಾಯಗೊಂಡು ಹಿಂದೆ ಸರಿದರು. ಸತ್ಯವ್ರತ್ ಚಿನ್ನದ ಪದಕ ವಿಜೇತರಾದರು.
 • ಗ್ರಿಕೊ ರೋಮನ್ ವಿಭಾಗದಲ್ಲಿ ಭಾರತದ ಕುಸ್ತಿಪಟುಗಳು ಮಿಂಚಿದರು. 66 ಕೆಜಿ ವಿಭಾಗದಲ್ಲಿ ಮನೀಶ್ ಚಿನ್ನದ ಪದಕ ಗೆದ್ದರು.
 • ಗ್ರಿಕೊ ರೋಮನ್ ವಿಭಾಗ85 ಕೆಜಿ ವಿಭಾಗದಲ್ಲಿ ಪ್ರಭುಪಾಲ್ ಅವರು ಉತ್ತಮ ಆಟವಾಡಿ ಮೊದಲ ಸ್ಥಾನ ಗೆದ್ದು ಚಿನ್ನ ಪಡೆದರು.

ಮಹಿಳೆಯರ 48 ಕೆಜಿ ವಿಭಾಗದಲ್ಲಿ ರಿತು ಪೋಗಟ್ ಅವರು ಅಮೋಘ ಪ್ರದರ್ಶನ ನೀಡಿದರು. ಎದುರಾಳಿ ಪ್ರಿಯಾಂಕಾ ಅವರ ಸವಾಲನ್ನು ಮೆಟ್ಟಿ ನಿಂತ ಅವರು ಚಿನ್ನದ ಪದಕ ಜಯಿಸಿದರು.

 • 63 ಕೆಜಿ ವಿಭಾಗದಲ್ಲಿ ರೇಷ್ಮಾ ಮಾನೆ, 55ಕೆಜಿ ವಿಭಾಗದಲ್ಲಿ ಲಲಿತಾ ಮತ್ತು 69ಕೆಜಿ ವಿಭಾಗದಲ್ಲಿ ಪಿಂಕಿ ಅವರು ಚಿನ್ನದ ಸಾಧನೆ ಮಾಡಿದರು.
 • ಬೆಳ್ಳಿ ಪದಕ
 • 75 ಕೆಜಿ ವಿಭಾಗದಲ್ಲಿ ನಿಕ್ಕಿ ಬೆಳ್ಳಿ ಪದಕ ಪಡೆದರು. 58 ಕೆಜಿ ವಿಭಾಗದಲ್ಲಿ ಮನು ಮತ್ತು ಸೋಮಾಲಿ ಅವರು ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನ ಪಡೆದರು.

ಫಲಿತಾಂಶದ ಸಾರಾಂಶ[ಬದಲಾಯಿಸಿ]

 • ಫಲಿತಾಂಶಗಳು ಸಂಖ್ಯೆ-1=ಚಿನ್ನ; ಸಂಖ್ಯೆ-2=ಬೆಳ್ಳಿ
 • ಪುರುಷರ ಫ್ರೀಸ್ಟೈಲ್: 57ಕೆಜಿ: ಸಂದೀಪ್ ತೋಮರ್ –1, 70 ಕೆಜಿ: ಅಮಿತ್ ಧನಕರ್ –2, ವಿನೋದ್ –2, 97ಕೆಜಿ: ಸತ್ಯವ್ರತ್ –1, ರೌಬಲ್ ಜೀತ್ –2,
 • ಗ್ರಿಕೊ ರೋಮನ್: 66ಕೆಜಿ: ಮನೀಶ್–1, ರವೀಂದರ್ –2, 75ಕೆಜಿ: ಗುರುಪ್ರೀತ್–1, ದಿನೇಶ್–2, 80ಕೆಜಿ: ಹರಪ್ರೀತ್ ಸಿಂಗ್ –1, ರವೀಂದರ್ ಖತ್ರಿ –2, 85ಕೆಜಿ: ಪ್ರಭುಪಾಲ್–1 ಯಶಪಾಲ್ –2, 130ಕೆಜಿ: ನವೀನ್–1, ಮನವೀರ್ –2

[೯]

ಕಾಮನ್‌ವೆಲ್ತ್ ಕುಸ್ತಿ ಚಾಂಪಿಯನ್‌ಷಿಪ್‌[ಬದಲಾಯಿಸಿ]

 • 7 Nov, 2016
 • ಸಿಂಗಪುರದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿರುವ ಬಾಗಲಕೋಟೆ ಜಿಲ್ಲೆ ಮುಧೋಳದ ಸಂದೀಪ ಕಾಟೆ ಮತ್ತು ಧಾರವಾಡ ತಾಲ್ಲೂಕು ಶಿಂಗನಹಳ್ಳಿಯ ರಫೀಕ್ ಹೊಳಿ ಉತ್ತರ ಕರ್ನಾಟಕದ ಗರಡಿಗಳಲ್ಲೇ ಪಟ್ಟುಗಳನ್ನು ಹಾಕಿ ಬೆಳೆದವರು.ಇವರಿಬ್ಬರ ಪೈಕಿ ರಫೀಕ್‌ಗೆ ಕಳೆದ ಬಾರಿ ಕಾಮನ್‌ವೆಲ್ತ್ ಚಾಂಪಿಯನ್‌ಷಿಪ್‌ಗೆ ಬಾಗಿಲು ತೆರೆದಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಸ್ಪರ್ಧೆಗೆ ಹೋಗಲಾಗಲಿಲ್ಲ. ಈ ಬಾರಿ ಫ್ರೀ ಸ್ಟೈಲ್ ಕುಸ್ತಿಯ 74 ಕೆಜಿ ವಿಭಾಗದಲ್ಲಿ ಸಂದೀಪ ಕಾಟೆ ಮತ್ತು 71 ಕೆಜಿ ವಿಭಾಗದಲ್ಲಿ ರಫೀಕ್ ಪಾಲ್ಗೊಳ್ಳುತ್ತಿದ್ದಾರೆ.
 • ಕರ್ನಾಠಕದಿಂದ 1974ರಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಬೆಳ್ಳಿ ತಂದುಕೊಟ್ಟ ಬೆಳಗಾವಿ ಜಿಲ್ಲೆ ಮೋದಗಿಯ ಶಿವಾಜಿ ಶಿಂಗಳೆ, 1973ರಲ್ಲಿ ಶ್ರೀಲಂಕಾದಲ್ಲಿ ನಡೆದ ವಿಶ್ವ ಸೈನಿಕರ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದ ಬೆಳಗಾವಿ ಜಿಲ್ಲೆ ಯಳ್ಳೂರಿನ ಯಲ್ಲಪ್ಪ ಪೋಟೆ, ಏಷ್ಯಾ ಚಾಂಪಿಯನ್‌ಷಿಪ್‌ನಲ್ಲಿ ಹೆಸರು ಮಾಡಿದ್ದ ಜಮಖಂಡಿಯ ರತನ್‌ ಕುಮಾರ್‌ ಮಠಪತಿ, ಬೆಳಗಾವಿಯ ವಿನಾಯಕ ದಳವಿ, ಅಂತರರಾಷ್ಟ್ರೀಯ ಮುಕ್ತ ಕುಸ್ತಿಯಲ್ಲಿ ಪಾಲ್ಗೊಂಡ ಮಹೇಶ ದುಕ್ರೆ ಮುಂತಾದವರ ಸಾಲಿಗೆ ಈಗ ಈ ಇಬ್ಬರು ಗಮನ ಸೆಳೆದಿದ್ದಾರೆ.
 • ಜೆ.ಎಸ್.ಎಸ್ ಕಾಲೇಜಿನಲ್ಲಿ ಜಿನ್ನಪ್ಪ ಅವರ ಜೊತೆಗೂಡಿದರು; ಕುಸ್ತಿ ಸಂಸ್ಕಾರ ಹೆಚ್ಚಿತು. ನಂತರ ಮುಂಬೈನ ಸಾಯ್‌ ಕೇಂದ್ರಕ್ಕೆ ತೆರಳಿದರು. ಕಳೆದ ಬಾರಿ ಪಶ್ಚಿಮ ರೈಲ್ವೆಯಲ್ಲಿ ಉದ್ಯೋಗ ಗಳಿಸಿದ ನಂತರವೂ ಕುಸ್ತಿಯ ಕಠಿಣ ಅಭ್ಯಾಸ ಮುಂದುವರಿಯಿತು. ಇದರ ಪರಿಣಾಮ ಈಗ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳುವ ಅವಕಾಶವಾಗಿ ದೊರಕಿದೆ. ಜೂನಿಯರ್ ಮತ್ತು ಸಬ್‌ ಜೂನಿಯರ್‌ ವಿಭಾಗಗಳಲ್ಲಿ ಕಾಟೆ ಒಟ್ಟು ಐದು ರಾಷ್ಟ್ರೀಯ ಪದಕಗಳನ್ನು ಹೊಂದಿದ್ದಾರೆ. ಜಮಖಂಡಿಯಲ್ಲಿ ‘ಹಿಂದ್ ಕೇಸರಿ’ಯಾಗಿಯೂ ಹೆಸರು ಮಾಡಿದ್ದಾರೆ. ಮೈಸೂರು ದಸರಾ ಸೇರಿದಂತೆ ವಿವಿಧ ಚಾಂಪಿಯನ್‌ಷಿಪ್‌ನಲ್ಲಿ ‘ಕೇಸರಿ’ಯಾಗಿ ಕಾದಾಡಿದ್ದಾರೆ.ಕಾಮನ್‌ವೆಲ್ತ್‌ನಲ್ಲಿ ಕನ್ನಡಿಗರ ಸವಾಲು;ವಿಕ್ರಂ ಕಾಂತಿಕೆರೆ;7 Nov, 2016

ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌[ಬದಲಾಯಿಸಿ]

1961 ರಲ್ಲಿ ಹರಿಯಾಣದ ಉದಯಚಂದ್ ಯೊಕೊಹಾಮಾದ ವಿಶ್ವ ಕುಸ್ತಿಯಲ್ಲಿ ಭಾರತಕ್ಕೆ ಕಂಚಿನ ಪದಕ ತಂದರು. ಅದಾಗಿ ಆರು ವರ್ಷಗಳ ನಂತರ (1967ರಲ್ಲಿ) ನವದೆಹಲಿಯಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬಿಷಂಬರ್ ಸಿಂಗ್ ಬೆಳ್ಳಿಯ ಪದಕ ತಂದರು. ಹೀಗೆ ವಿಶ್ವ ಕುಸ್ತಿಯಲ್ಲಿ ಭಾರತಕ್ಕೆ 10 ಪದಕಗಳು ಬಂದಿವೆ.

 • ವಿವರ ಪಟ್ಟಿ:
ಕ್ರ.ಸಂ. ಕುಸ್ತಿ ಪಟು ವರ್ಷ ವಿಭಾಗ ಸ್ಥಳ ಪದಕ
1 ಉದಯಚಂದ್ 1961 ಲೈಟರ್ವೇಟ್ ಯಾಕೊಹಾಮ ಕಂಚು
2 ಬಿಷಂದರ್ ಸಿಂಗ್ 1967 ಬಾಂಟಮ್‍ವೇಟ್ ನವದೆಹಲಿ ಬೆಳ್ಳಿ
3 ರಮೇಶ್‍ಕುಮಾರ 2009 ವೆಲ್ಟರ್‍ವೇಟ್ ಹರ್ನಿಂಗ್ ಕಂಚು
4 ಸುಶೀಲ್ ಕುಮಾರ್ 2010 ಲೈಟರ್‍ವೇಟ್ ಮಾಸ್ಕೊ ಚಿನ್ನ
5 ಅಮಿತ್ ಕುಮಾರ್ 2013 ಫೆದರ್ವೇಟ್ ಬುಡಾಪೆಸ್ಟ್ ಬೆಳ್ಳಿ
6 ಬಜರಂಗ್ ಪೂನಿಯ 2013 ಫೆದರ‌ವೇಟ್ ಬುಡಾಪೆಸ್ಟ್‍ ಕಂಚು
7 ನರಸಿಂಗ್ ಯಾದವ್ 2015 ವೆಲ್ಟರ್‍ವೇಟ್ ಲಾಸ್‍ವೇಗಾಸ್ ಕಂಚು
ಮಹಿಳೆಯರು
8 ಅಲ್ಕೊ ತೊಮರ್ 2006 ಮಿಡ್ಲ್‍ವೇಟ್ ಗುವಾಂಗ್‍ಜೌ ಕಂಚು
9 ಬಬಿತಾಕುಮಾರಿ 2012 ಬಾಂಟಮ್‍ವೇಟ್ ಸ್ಟ್ರಾತ್ಕೊನಾಸಿಟಿ ಕಂಚು
10 ಗೀತಾ ಪೋಗಟ್ 2012 ಲೈಟರ್‍ವೇಟ್ ಸ್ಟ್ರಾತ್ಕೊನಾಸಿಟಿ ಕಂಚು

[೧೦]

ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌[ಬದಲಾಯಿಸಿ]

 • 10 May, 2017; ಬುಧವಾರ
 • ನವದೆಹಲಿಯಲ್ಲಿ ಬುಧವಾರ ಇಲ್ಲಿ ಆರಂಭವಾದ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುವ ಪಟುಗಳು:
 • 'ತಂಡದಲ್ಲಿ 24 ಕುಸ್ತಿಪಟುಗಳು:
 • ಆತಿಥೇಯ ತಂಡವು ಈ ಬಾರಿ 24 ಪೈಲ್ವಾನರನ್ನು ಕಣಕ್ಕಿಳಿಸುತ್ತಿದೆ. ಫ್ರೀಸ್ಟೈಲ್ ವಿಭಾಗದ ಪುರುಷರು (8), ಮಹಿಳೆಯರು (8) ಮತ್ತು ಗ್ರಿಕೊ ರೋಮನ್ ವಿಭಾಗದಲ್ಲಿ (8) ತಂಡವು ಸ್ಪರ್ಧಿಸಲಿದೆ.

ಮಹಿಳೆಯರ ವಿಭಾಗದಲ್ಲಿ ಸಾಕ್ಷಿ[ಬದಲಾಯಿಸಿ]

 • ಹಾಲಿ ಚಾಂಪಿಯನ್ ಇರಾನ್, ಉಜ್ಬೇಕಿಸ್ತಾನ, ಕಜಕಸ್ತಾನ, ಕಿರ್ಗಿಸ್ತಾನ, ಜಪಾನ್, ಕೊರಿಯಾ, ಚೀನಾ ಮತ್ತು ಮಂಗೋಲಿಯಾದ ಕುಸ್ತಿಪಟುಗಳು ಪದಕಗಳಿಗಾಗಿ ಸೆಣಸುವರು. ಏಷ್ಯಾದ ಶ್ರೇಷ್ಠ ಕುಸ್ತಿಪಟುಗಳು ಕಣಕ್ಕಿಳಿಯುತ್ತಿರುವ ಮಹಿಳೆಯರ 58 ಕೆಜಿ ವಿಭಾಗದಲ್ಲಿ ಸಾಕ್ಷಿ ಮಲಿಕ್ ಸೆಣಸಲಿದ್ದಾರೆ. ಆತಿಥೇಯ ತಂಡದ ನಾಯಕತ್ವ ವಹಿಸಿರುವ ಸಾಕ್ಷಿ ಅವರ ಮುಂದೆ ಪದಕ ಜಯಿಸುವ ಸವಾಲು ಕೂಡ ಇದೆ. ಅವರ ಮೇಲೆ ಅಪಾರ ನಿರೀಕ್ಷೆ ಇದೆ. ಸಾಕ್ಷಿ ಅವರು ಹೋದ ವರ್ಷ ಆಗಸ್ಟ್‌ನಲ್ಲಿ ರಿಯೊ ಡಿ ಜನೈರೊ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ನಂತರ ಅಂತರರಾಷ್ಟ್ರೀಯ ಕುಸ್ತಿ ಟೂರ್ನಿಗಳಲ್ಲಿ ಭಾಗವಹಿಸಿಲ್ಲ. ಇತ್ತೀಚೆಗೆ ನಡೆದಿದ್ದ ಪ್ರೊ ಕುಸ್ತಿ ಲೀಗ್ (ಪಿಡಬ್ಲ್ಯುಎಲ್) ಟೂರ್ನಿಯಲ್ಲಿ ಅವರು ಕೆಲವು ಬೌಟ್‌ಗಳಲ್ಲಿ ಆಡಿದ್ದರು. ನಂತರ ಲಖನೌದಲ್ಲಿ ನಡೆದಿದ್ದ ಏಷ್ಯನ್ ಚಾಂಪಿಯನ್‌ಷಿಪ್‌ನ ಆಯ್ಕೆ ಟ್ರಯಲ್ಸ್‌ನಲ್ಲಿ ಸಾಕ್ಷಿ 10–0 ಪಾಯಿಂಟ್‌ಗಳಿಂದ ಮಂಜು ವಿರುದ್ಧ ಗೆದ್ದಿದ್ದರು.

ಒಟ್ಟು ಪದಕ[ಬದಲಾಯಿಸಿ]

 • ಪುರುಷರ ಫ್ರೀಸ್ಟೈಲ್ ವಿಭಾಗದಲ್ಲಿ 112, ಗ್ರಿಕೊ ರೋಮನ್ ವಿಭಾಗದಲ್ಲಿ 103 ಮತ್ತು ಮಹಿಳೆಯರ ವಿಭಾಗದಲ್ಲಿ 83 ಸ್ಪರ್ಧಿಗಳು ಕಣಕ್ಕಿಳಿದ್ದರು. 24 ಚಿನ್ನ, 24 ಬೆಳ್ಳಿ ಮತ್ತು 48 ಕಂಚಿನ ಪದಕಗಳು.

ಬಲಿಷ್ಠ ಇರಾನ್ ಸವಾಲು[ಬದಲಾಯಿಸಿ]

 • ಹೋದ ಸಲದ ಚಾಂಪಿಯನ್ ಇರಾನ್ ತಂಡವು ಈ ಬಾರಿಯೂ ತನ್ನ ಉತ್ತಮ ಕುಸ್ತಿಪಟುಗಳ ಪಡೆಯನ್ನು ಕಣಕ್ಕಿಳಿಸಿತ್ತು. ಹೋದ ವರ್ಷ ಫ್ರೀಸ್ಟೈಲ್, ಗ್ರಿಕೊ ರೋಮನ್ ವಿಭಾಗಗಳಲ್ಲಿ ಇರಾನ್ ಚಾಂಪಿಯನ್ ಆಗಿತ್ತು. ಏಷ್ಯನ್ ಚಾಂಪಿಯನ್‌ಷಿಪ್‌ ಇತಿಹಾಸದಲ್ಲಿ ಇರಾನ್ ಒಟ್ಟು 344 ಪದಕಗಳನ್ನು (175ಚಿನ್ನ, 75 ಬೆಳ್ಳಿ, 94 ಕಂಚು) ಗೆದ್ದಿದೆ. ಉಳಿದೆಲ್ಲ ದೇಶಗಳಿಗೂ ಇರಾನ್ ತಂಡವು ಕಠಿಣ ಸವಾಲು ಒಡ್ಡಿತು.

ಭಾರತ ತಂಡಗಳು[ಬದಲಾಯಿಸಿ]

 • ಪುರುಷರ ಫ್ರೀಸ್ಟೈಲ್: ಸಂದೀಪ್ ತೋಮರ್ (57ಕೆಜಿ), ಹರ್ಫುಲ್ (61ಕೆಜಿ), ಬಜರಂಗ್ (65ಕೆಜಿ), ವಿನೋದ್ (70ಕೆಜಿ), ಜಿತೇಂದರ್ (74ಕೆಜಿ), ಸೋಮವೀರ್ (86ಕೆಜಿ), ಸತ್ಯವ್ರತ್ ಕಡಿಯಾನ್ (97ಕೆಜಿ), ಸುಮಿತ್ (125ಕೆಜಿ).
 • ವರ್ಷ ೨೦೧೬ ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದಿದ್ದ ಟೂರ್ನಿಯಲ್ಲಿ ಭಾರತ ತಂಡವು ಒಂದು ಚಿನ್ನ, ಮೂರು ಬೆಳ್ಳಿ, ಐದು ಕಂಚಿನ ಪದಕಗಳನ್ನು ಗೆದ್ದಿತ್ತು. ಅದರಲ್ಲಿ ಸಂದೀಪ್ ಅವರು ಪುರುಷರ ಫ್ರೀಸ್ಟೈಲ್ ಕುಸ್ತಿಯ 57 ಕೆಜಿ ವಿಭಾಗದಲ್ಲಿ ಚಿನ್ನದ ಸಾಧನೆ ಮಾಡಿದ್ದರು. 75ಕೆಜಿ ವಿಭಾಗದಲ್ಲಿ ಸುಶೀಲ್ ಮತ್ತು ಅಮಾನತುಗೊಂಡಿರುವ ನರಸಿಂಗ್ ಯಾದವ್ ಅವರು ಇಲ್ಲ. ಆದ್ದರಿಂದ ನವಪ್ರತಿಭೆ ಜಿತೇಂದರ್ ಅವರು ಅಖಾಡಕ್ಕೆ ಇಳಿದರು.[೧೧]

೧೩ -೫-೨೦೧೭ರ ಫಲಿತಾಂಶ[ಬದಲಾಯಿಸಿ]

 • ಬಜರಂಗ್ ಪೂನಿಯಾ: ಚಿನ್ನ
 • ಪುರುಷರ 65ಕೆ.ಜಿ ಫ್ರೀಸ್ಟೈಲ್‌ ವಿಭಾಗದ ಫೈನಲ್‌ ಪಂದ್ಯದಲ್ಲಿ ಬಜರಂಗ್ ಪೂನಿಯಾ 6–2ರಲ್ಲಿ ಕೊರಿಯಾದ ಸೆವುಂಗ್‌ ಚಲ್ ಲೀ ಅವರನ್ನು ಮಣಿಸುವ ಮೂಲಕ ಚಿನ್ನ ಗೆದ್ದರು.
 • ಕ್ವಾರ್ಟರ್‌ಫೈನಲ್‌ನಲ್ಲಿ ಅತ್ಯುತ್ತಮ ಸಾಮರ್ಥ್ಯ ತೋರಿದ್ದ ಬಜರಂಗ್ 7–5ರಲ್ಲಿ ಹಿಂದಿನ ಏಷ್ಯನ್ ಚಾಂಪಿಯನ್‌ ಷಿಪ್‌ನಲ್ಲಿ ಚಿನ್ನ ಜಯಿಸಿದ್ದ ಇರಾನ್‌ನ ಸಾಸಿರಿ ಮೈಸಮ್ ಅವರನ್ನು ಸೋಲಿಸಿದರು.
 • ಸೆಮಿಫೈನಲ್‌ನಲ್ಲಿ ಬಜರಂಗ್‌ 3–2 ರಲ್ಲಿ ಕುಕವಾಂಗ್ ಕಿಮ್ ಎದುರು ಪ್ರಯಾಸದ ಗೆಲುವು ದಾಖಲಿಸಿ ಫೈನಲ್ ತಲುಪಿದ್ದರು.
 • ಸರಿತಾಗೆ : ಬೆಳ್ಳಿ
 • ಮಹಿಳೆಯರ 58ಕೆ.ಜಿ ವಿಭಾಗದ ಫೈನಲ್‌ನಲ್ಲಿ ಸರಿತಾ 0–6ರಲ್ಲಿ ಕಿರ್ಗಿಸ್ತಾನದ ಅಸುಲು ತನೆಬೆಕೊವಾ ಎದುರು ಸೋಲು ಕಂಡು ಬೆಳ್ಳಿ ಪದಕ ಪಡೆದರು.
 • ಸೆಮಿಫೈನಲ್‌ನಲ್ಲಿ ಅವರು 12–0 ರಲ್ಲಿ ವಿಯೆಟ್ನಾಮ್‌ನ ಹುವಾಂಗ್ ಡುಯೊ ಎದುರು ಗೆದ್ದು ಚಿನ್ನದ ಪದಕದ ಸುತ್ತಿಗೆ ಮುಟ್ಟಿದ್ದರು.
 • ಕ್ವಾರ್ಟರ್‌ಫೈನಲ್‌ನಲ್ಲಿ ಸರಿತಾ 10–0ರಲ್ಲಿ ಉಜ್ಬೇಕಿಸ್ತಾನದ ಅಸೆಮ್‌ ಸೆಡ ಮೆಟೋವಾ ಎದುರು ಗೆದ್ದು ಸೆಮಿ ಫೈನಲ್ ಪ್ರವೇಶಿಸಿದ್ದರು.[೧೨]

ಪ್ಯಾರಿಸ್ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ ೨೦೧೭[ಬದಲಾಯಿಸಿ]

 • ೨೦೧೭ ಆಗಸ್ಟ್ ೨೧ರಿಂದ ಪ್ಯಾರಿಸ್‍ನಲ್ಲಿ :
 • ಭಾರತ: ಸ್ಪರ್ದಾಪಟುಗಳು:ಸಾಕ್ಷಿ ಮಲ್ಲಿಕ್ 58ಕೆ.ಜಿ ವಿಭಾಗ,ಹಾಗೂ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಜಯಿಸಿದ್ದ ಬಜರಂಗ್‌ ಪೂನಿಯಾ.ವಿನೇಶ್‌ ಪೊಗಟ್ ಇಲ್ಲಿ 48ಕೆ.ಜಿ ವಿಭಾಗ;ಬಜರಂಗ್ 65ಕೆ.ಜಿ ವಿಭಾಗ;ಸಂದೀಪ್ ತೋಮರ್‌ 57ಕೆ.ಜಿ ವಿಭಾಗ;ಫ್ರೀಸ್ಟೈಲ್ ಕುಸ್ತಿಪಟುಗಳಾದ ಅಮಿತ್ ಧನಕರ್‌ (70ಕೆ.ಜಿ), ಪ್ರವೀಣ್‌ ರಾಣಾ (74ಕೆ.ಜಿ), ಸತ್ಯವ್ರತ್‌ ಕಡಿಯಾನ್ (97ಕೆ.ಜಿ) [೧೩]

ನೋಡಿ[ಬದಲಾಯಿಸಿ]

ಹೆಚ್ಚಿನ ಓದಿಗೆ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

 1. [ಮಹಾಭಾರತ ವಿರಾಟ ಪರ್ವ]
 2. [ಆದಿಪುರಾಣ ಭರತ ಬಾಹುಬಲಿ ಮಲ್ಲಯುದ್ಧ]
 3. ಜಾತ್ರೆ, ಅಖಾಡದಲ್ಲೇ ಹಬ್ಬ
 4. SPORTS IN INDIA SPORTS IN INDIA
 5. Author:Mr.R.Venkatachalam
 6. Official Webiste of Wrestling Federation of India
 7. ಕುಸ್ತಿ: ಕಂಚಿನ ಪದಕಕ್ಕೆ ಮುತ್ತಿಕ್ಕಿದ ಭಾರತದ ಸಾಕ್ಷಿ
 8. ನವದೆಹಲಿ;;ರಾಷ್ಟ್ರೀಯ ಕುಸ್ತಿ;25 Oct, 2016
 9. ಕಾಮನ್‌ವೆಲ್ತ್ ಕುಸ್ತಿ: ಭಾರತಕ್ಕೆ ಏಳು ಚಿನ್ನದ ಪದಕ;6 Nov, 2016
 10. ಕನಸು ನನಸಾಗುವುದು ಯಾವಾಗ?;ಗಿರೀಶ ದೊಡ್ಡಮನಿ;12 Dec, 2016
 11. ಸಾಕ್ಷಿ ಮೇಲೆ ನಿರೀಕ್ಷೆಯ ಭಾರ;10 May, 2017
 12. ಬಜರಂಗ್‌ ಪೂನಿಯಾಗೆ ಚಿನ್ನದ ಸಂಭ್ರಮ:ಸರಿತಾಗೆ ಬೆಳ್ಳಿ;14 May, 2017
 13. ಕುಸ್ತಿ ಚಾಂಪಿಯನ್‌ಷಿಪ್‌ ಸಾಕ್ಷಿ, ಬಜರಂಗ್ ಮೇಲೆ ನಿರೀಕ್ಷೆ;21 Aug, 2017