ಭಾರತದಲ್ಲಿ ಬಾಕ್ಸಿಂಗ್

ವಿಕಿಪೀಡಿಯ ಇಂದ
Jump to navigation Jump to search


ವಿಜೇಂದರ್ ಸಿಂಗ್ : ಬಾಕ್ಸರ್
ವಿಜೇಂದರ್ ಸಿಂಗ್ : ಬಾಕ್ಸರ್
 • ದೇಶ: ಭಾರತ
 • ಆಡಳಿತ ಭಾರತೀಯ ಬಾಕ್ಸಿಂಗ್ ಫೆಡರೇಶನ್
 • ರಾಷ್ಟ್ರೀಯ ತಂಡ:ಭಾರತ ರಾಷ್ಟ್ರೀಯ ತಂಡ

.

 • ಭಾರತದಲ್ಲಿ, ಬಾಕ್ಸಿಂಗ್ ಆಟಕ್ಕೆ ಗಮನಾರ್ಹ ಅಭಿಮಾನಿ ಬಳಗ ಇಲ್ಲ. ಇದಕ್ಕೆ ಕಾರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಜಯ ಶಾಲಿಗಳ ಕೊರತೆ ಎಂಬುದಾಗಿ ಟೀಕಾಕಾರರು ಹೇಳುವರು. ಆದಾಗ್ಯೂ, ದೊಡ್ಡ ಜಾಗತಿಕ ಚಾಂಪಿಯನ್ಷಿಪ್ಗಳಲ್ಲಿ ಭಾರತ ಏಷ್ಯನ್ ಗೇಮ್ಸ್ ಮತ್ತು ಕಾಮನ್ವೆಲ್ತ್ ಗೇಮ್ಸ್ ಕೂಟಗಳಲ್ಲಿ ಸೀಮಿತ ಯಶಸ್ಸಿನ ಪದಕ ಹೊಂದಿರುವರು,[೧]

ಬಾಕ್ಸಿಂಗ್ ಪಟುಗಳು[ಬದಲಾಯಿಸಿ]

 • ಮೊಹಮ್ಮದ್ ಅಲಿ ಕಮರ್, ಯುನೈಟೆಡ್ ಕಿಂಗ್ಡಮ್ ನ ಮ್ಯಾಂಚೆಸ್ಟರ್ ನಲ್ಲಿ ನಡೆದ 2002 ಕಾಮನ್ವೆಲ್ತ್ ಗೇಮ್ಸ್,ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎನಿಸಿಕೊಂಡರು.
 • 2008 ರ ಬೀಜಿಂಗ್ ಒಲಿಂಪಿಕ್ಸ್‍ನಲ್ಲಿ ವಿಜೇಂದರ್ ಸಿಂಗ್, ಅಖಿಲ್ ಕುಮಾರ್ ಮತ್ತು ಜಿತೇಂದರ್ ಕುಮಾರ್ ಕ್ವಾರ್ಟರ್ಫೈನಲ್ ಅರ್ಹತೆ ಸಂದರ್ಭದಲ್ಲಿ, ಮಿಡಲ್ ಬಾಕ್ಸಿಂಗ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದರು. ಅಖಿಲ್ ಕುಮಾರ್, ಜಿತೇಂದರ್ ಕುಮಾರ್, ಎ.ಎಲ್ ಲಾಕ್ರ, ಮತ್ತು ದಿನೇಶ್ ಕುಮಾರ್ 2008 ರಲ್ಲಿ ವಿಶ್ವ ಚಾಂಪಿಯನ್ಷಿಪ್ನಲ್ಲಿ ಕಂಚಿನ ಪದಕ ಗೆದ್ದರು. [೨]
 • ವಿಜೇಂದರ್ ಸಿಂಗ್ ಮಧ್ಯಮ ತೂಕದ ವರ್ಗದಲ್ಲಿ (75 ಕೆಜಿ) 2009 ರಲ್ಲಿ ಇಂಟರ್ನ್ಯಾಷನಲ್ ಬಾಕ್ಸಿಂಗ್ ಅಸೋಸಿಯೇಷನ್ನ ((AIBA) ಭಾರತದ ಮೊದಲ ಪದಕವನ್ನು ಗೆದ್ದನು; ಮಿಲಾನ್‍ನಲ್ಲಿ ಪಟ್ಟಿ ಪರಿಷ್ಕರಿಸಿದಾಗ ಇವನು ವಿಶ್ವ ನಂ.1 ತಲುಪಿದನು.[೩]

ಮಹಿಳಾ ಪಟು[ಬದಲಾಯಿಸಿ]

 • ಭಾರತದ ಮೇರಿ ಕೋಮ್ ಐದು ಬಾರಿ ವರ್ಲ್ಡ್ ಅಮೇಚೂರ್ ಬಾಕ್ಸಿಂಗ್ ಚಾಂಪಿಯನ್ ಆಗಿದ್ದಾರೆ, ಮತ್ತು ಆರು ವಿಶ್ವ ಚಾಂಪಿಯನ್ಷಿಪ್‍ನಲ್ಲಿ ಪ್ರತಿಯೊಂದರಲ್ಲೂ ಪದಕ ಗೆದ್ದ ಕೇವಲ ಮಹಿಳಾ ಬಾಕ್ಸರ್. ಅವರು ಸಮಯದಲ್ಲಿ 2014ರಲ್ಲಿ ದಕ್ಷಿಣ ಕೊರಿಯ ಇಂಚೆಯೋನ್‍ನ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಬಾಕ್ಸರ್.[೪]

ಡಬ್ಲ್ಯುಬಿಒ ಸೂಪರ್ ಮಿಡ್ಲ್‌ವೇಟ್ ಏಷ್ಯಾ ಪೆಸಿಫಿಕ್ ಚಾಂಪಿ ಯನ್ ಪ್ರಶಸ್ತಿ ಬಾಕ್ಸಿಂಗ್ ೨೦೧೬[ಬದಲಾಯಿಸಿ]

 • 18 Dec, 2016
 • ನವದೆಹಲಿಯ ತ್ಯಾಗರಾಜ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿಜೇಂದರ್ ಅವರು 39–37, 37–38, 39–37ರಿಂದ ಫ್ರಾನ್ಸಿಸ್ ಅವರನ್ನು ಮಣ್ಣುಮುಕ್ಕಿಸ, ಡಬ್ಲ್ಯುಬಿಒ ಸೂಪರ್ ಮಿಡ್ಲ್‌ವೇಟ್ ಏಷ್ಯಾ ಪೆಸಿಫಿಕ್ ಚಾಂಪಿ ಯನ್ ಪ್ರಶಸ್ತಿಯನ್ನು ಉಳಿಸಿಕೊಂಡರು.ಹೋದ ಜುಲೈನಲ್ಲಿ ಆಸ್ಟ್ರೇಲಿಯಾದ ಕೆರ್ರಿ ಹೋಪ್ ಅವರನ್ನು ಮಣಿಸಿದ್ದ ವಿಜೇಂದರ್ ಪ್ರಶಸ್ತಿ ಗೆದ್ದಿದ್ದರು. ಈ ವಿಭಾಗದಲ್ಲಿ ಇದುವರೆಗೆ ಅಜೇಯರಾಗುಳಿದಿರುವ ವಿಜೇಂದರ್ ಅವರಿಗೆ ಇದು ಎಂಟನೆ ಜಯ. ಕೇವಲ ಹತ್ತು ನಿಮಿಷಗಳ ಅವಧಿಯಲ್ಲಿಯೇ ಅವರು 34 ವರ್ಷದ ಫ್ರಾನ್ಸಿಸ್ ಅವರನ್ನು ಸೋಲಿಸಿದರು.ಹತ್ತು ಸುತ್ತುಗಳಲ್ಲಿ ನಡೆಯಬೇಕಿದ್ದ ಪಂದ್ಯದ ಫಲಿತಾಂಶವು ಮೂರೇ ಸುತ್ತುಗಳಲ್ಲಿ ನಿರ್ಣಯವಾಯಿತು. ಮಾಜಿ ವಿಶ್ವ ಚಾಂಪಿಯನ್ ಫ್ರಾನ್ಸಿಸ್ ಸೋತು ತಲೆತಗ್ಗಿಸಿದರು. ಫ್ರಾನ್ಸಿಸ್, 'ಶನಿವಾರ ರಾತ್ರಿ ಅವರನ್ನು ಎದುರಿಸಿದಾಗ ನಿಜವಾದ ಬಾಕ್ಸಿಂಗ್ ಅಂದರೆ ಏನು ಎಂದು ತೋರಿಸುತ್ತೇನೆ. ಭಾರತಕ್ಕೆ ಮುಖಭಂಗ ಮಾಡುತ್ತೇನೆ’ ಎಂದು ಈಚೆಗೆ ಸವಾಲು ಹಾಕಿದ್ದರು.ಆದರೆ, ವಿಜೇಂದರ್ ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
 • ಅನುಭವಿ ಬಾಕ್ಸರ್ ಸ್ಫ್ರಾನ್ಸಿಸ್ ಸೋಲಿಲ್ಲದ ಏಳು ವಿಜಯ ಸಾಧಿಸಿದ್ದರು; ಹಾಗೆಯೇ ವಿಜೇಂದರ್ ತಮ್ಮ ಎಂಟನೇ ವಿಯಕ್ಕಾಗಿ ಕಾದಿದ್ದರು.[೫]
Vijender Singh has a lot at stake at the Thyagaraj Stadium ring in New Delhi when he takes on veteran Tanzanian boxer Francis Cheka tonight. Undefeated in seven professional bouts so far, the Indian will look for his eighth victory and second at home. (HT Photo) [[೧]]

ಮಹಿಳೆಯರ ಬಾಕ್ಸಿಂಗ್[ಬದಲಾಯಿಸಿ]

 • 14 Jan, 2017
 • ಸರ್ಬಿಯಾದ ವರ್ಬಾಸ್‌ನಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ನಾಲ್ವರು ಮಹಿಳಾ ಬಾಕ್ಸರ್‌ಗಳು ಸೆಮಿಫೈನಲ್‌ ತಲುಪಿದ್ದಾರೆ. ಸೀಮಾ ಪೂನಿಯಾ 81 ಕೆ.ಜಿ ವಿಭಾಗದ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಟೂರ್ನಿಯಲ್ಲಿ ಒಟ್ಟು 18 ರಾಷ್ಟ್ರಗಳ ತಂಡಗಳು ಭಾಗವಹಿಸಿವೆ. 69ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಪೂಜಾ ಬೈ ಪಡೆದು ಸೆಮಿಗೆ ಲಗ್ಗೆಯಿಟ್ಟರು.
 • ಸರ್ಜುಬಾಲಾ 48ಕೆ.ಜಿ ವಿಭಾಗದಲ್ಲಿ ಸ್ಥಳೀಯ ಆಟಗಾರ್ತಿ ಕಟಾರಿನಾ ಜುರೋವಿಕ್ ವಿರುದ್ಧ ಜಯ ದಾಖಲಿಸಿದರು. 60ಕೆ.ಜಿ ವಿಭಾಗದಲ್ಲಿ ಪ್ರಿಯಾಂಕಾ 3–0ರಲ್ಲಿ ಲುಥುವೇನಿಯಾದ ವೈದಾ ಮಸಿಯೊಕೈತ್‌ ಮೇಲೆ ಗೆದ್ದರು. 75ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಕವಿತಾ ರಷ್ಯಾದ ಓಲ್ಗಾ ಲಪೆಖಾ ಅವರನ್ನು ಮಣಿಸಿದರು. ಇದರಿಂದಾಗಿ ಭಾರತಕ್ಕೆ ಮತ್ತೊಂದು ಪದಕ ಒಲಿಯಿತು.[೬]

ನೀರಜ್‍ಗೆ ಗೋಲ್ಡ್[ಬದಲಾಯಿಸಿ]

 • Jan 15, 2017;
 • ತನ್ನ ಮೊದಲ ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ಸ್ಪರ್ಧಿಸಿದ ಹರ್ಯಾಣ ಹುಡುಗಿ ನೀರಜ್, ದೇಶದ ಏಕೈಕ ಚಿನ್ನ ಗೆದ್ದರು; ಕಝಾಕಿಸ್ತಾನ್ ನ ಜೈನ ಶೆಕರಬೊವಾ (Shekerbekova)ರನ್ನು ಸೋಲಿಸಿದರು.
 • ಮಾಜಿ ವಿಶ್ವ ಚಾಂಪಿಯನ್ಶಿಪ್ ಬೆಳ್ಳಿ ಪದಕ ವಿಜೇತ ಸರ್ಜುಬಾಲಾ ದೇವಿ (Sarjubala) (48 ಕೆ.ಜಿ), ಪ್ರಿಯಾಂಕಾ ಚೌಧರಿ (60 ಕೆಜಿ), ಪೂಜಾ (69kg) ಮತ್ತು ಸೀಮಾ ಪೂನಿಯಾ (+ 81 ಕೆಜಿ) ತಮ್ಮ ಶೃಂಗೆಗುರಾಳಿಗಳ ಘರ್ಷಣೆಗಳಲ್ಲಿ ಸೋತು ನಂತರ ಬೆಳ್ಳಿ ಪದಕಗಳನ್ನು ಗಳಿಸಿದ್ದಾರೆ.
 • ಸರ್ಜುಬಾಲಾ/Sarjubala ನಿಕಟವಾಗಿ ಹೋರಾಡಿದ ಸ್ಪರ್ಧೆಯಲ್ಲಿ ರಷ್ಯಾದ ಯುಲಿಯಾ / Yulia Chumgalakova ರನ್ನು 3-2 ರಲ್ಲಿ ಸೋತರು. ಆದರೆ, ಪ್ರಿಯಾಂಕಾ ಕಝಾಕಿಸ್ತಾನ್‍ನ ರಿಮ್ಮಾ/ Rimma Volosenko ಗೆ ಸೋತರು. ಪೂಜಾ ಸಹ ವಲೆಂಟಿನಾ-Khalzova ವಿರುದ್ಧ ತಮ್ಮ ಘರ್ಷಣೆಯಲ್ಲಿ ಕಠಿಣ ಹೋರಾಟವನ್ನು ತೋರಿ ಸೋತು, ಒಂದು ಬೆಳ್ಳಿ ಪದಕ ಪಡೆದರು.[೭]

ಥಾಯ್ಲೆಂಡ್‌ ಅಂತರರಾಷ್ಟ್ರೀಯ ಬಾಕ್ಸಿಂಗ್ ಟೂರ್ನಿ 2017[ಬದಲಾಯಿಸಿ]

 • 9 Apr, 2017
 • ಭಾರತದ ಕೆ. ಶ್ಯಾಮ್‌ ಕುಮಾರ್ ಬ್ಯಾಂಕಾಕ್‌ನಲ್ಲಿ ನಡೆದ ಥಾಯ್ಲೆಂಡ್‌ ಅಂತರರಾಷ್ಟ್ರೀಯ ಬಾಕ್ಸಿಂಗ್ ಟೂರ್ನಿಯ 49 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ಇದೇ ಟೂರ್ನಿಯಲ್ಲಿ ಶ್ಯಾಮ್‌ ಎರಡು ವರ್ಷಗಳ ಹಿಂದೆಯೂ ಪದಕ ಗೆದ್ದಿದ್ದರು. ರಿಯೊ ಒಲಿಂಪಿಕ್ಸ್‌ನಲ್ಲಿ ಲೈಟ್ ಫ್ಲೈವೇಟ್‌ ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದ ಉಜ್ಬೇಕಿಸ್ತಾನದ ಹಸನ್‌ಬಾಯ್‌ ಡುಸ್ಟಮಟೋವ್ ಅವರು ಗಾಯದ ಸಮಸ್ಯೆಯಿಂದ ಬಳಲಿದ ಕಾರಣ ಭಾರತದ ಬಾಕ್ಸರ್‌ಗೆ ‘ಅದೃಷ್ಟ’ದ ಚಿನ್ನ ಲಭಿಸಿತು.
 • 64 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ರೋಹಿತ್ ಟೋಕಸ್‌ ಸೆಮಿ ಫೈನಲ್‌ನಲ್ಲಿ ಕಂಚು ಪಡೆದರು. ರೋಹಿತ್‌ 2015ರ ಟೂರ್ನಿಯಲ್ಲಿಯೂ ಪದಕ ಪಡೆದಿದ್ದರು.[೮]

ಏಷ್ಯಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ ೨೦೧೭[ಬದಲಾಯಿಸಿ]

7 May, 2017;

 • ಶಿವಥಾಪಾಗೆ ಬೆಳ್ಳಿ ಪದಕ:
 • ತಾಷ್ಕೆಂಟ್‌ ನಲ್ಲಿ ನಡೆದ ಏಷ್ಯಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನ 60 ಕೆಜಿ ವಿಭಾಗದಲ್ಲಿ ಎರಡನೇ ಶ್ರೇಯಾಂಕಿತ ಮತ್ತು ಸ್ಥಳೀಯ ಬಾಕ್ಸರ್‌ ಎಲ್ನುರ್ ಅಬ್ದುರೈಮೋವ್‌ ವಿರುದ್ಧ ಶಿವ ಥಾಪಾ ಫೈನಲ್‌ನಲ್ಲಿ ಕಣಕ್ಕಿಳಿದಿದ್ದರು. ನಾಲ್ಕನೇ ಶ್ರೇಯಾಂಕಿತ ಥಾಪಾ ಪ್ರಬಲ ಪ್ರತಿಸ್ಪರ್ಧೆಯನ್ನೂ ಒಡ್ಡಿದ್ದರು. ಆದರೆ ಮೊದಲ ಸುತ್ತಿನ ಆರಂಭದಲ್ಲೇ ಅವರ ತಲೆಗೆ ಎದುರಾಳಿ ಡಿಚ್ಚಿ ಹೊಡೆದರು. ಇದರಿಂದ ಹಣೆಯ ಮೇಲೆ ಗಂಭೀರ ಗಾಯವಾಗಿ ರಕ್ತ ಒಸರಿತು. ರೆಫರಿ ತಕ್ಷಣ ಪಂದ್ಯವನ್ನು ಸ್ಥಗಿತಗೊಳಿಸಿದರು. ಹೀಗಾಗಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟು ಕೊಂಡ ಅವರು ಏಷ್ಯಾ ಚಾಂಪಿಯನ್‌ ಷಿಪ್‌ನಲ್ಲಿ ಸತತ ಮೂರು ಬಾರಿ ಪದಕ ಗೆದ್ದ ಮೊದಲ ಭಾರತೀಯ. ಲೈಟ್‌ವೇಟ್‌ ವಿಭಾಗದಲ್ಲಿ ಸ್ಪರ್ಧಿಸಲು ಆರಂಭಿಸಿದ ನಂತರ ಥಾಪಾ ಗಳಿಸಿದ ಮೊದಲ ಪದಕ ಇದು. ಅವರು ಹಿಂದೆ 56 ಕೆ.ಜಿ. ವಿಭಾಗದಲ್ಲಿ ಸ್ವರ್ಧಿಸು ತ್ತಿದ್ದಾಗ 2013ರಲ್ಲಿ ಚಿನ್ನ ಮತ್ತು 2015ರಲ್ಲಿ ಕಂಚಿನ ಪದಕ ಗೆದ್ದಿದ್ದರು.
 • ಅವರು ವಿಶ್ವ ಚಾಂಪಿ ಯನ್‌ಷಿಪ್‌ಗೂ ಅರ್ಹತೆ ಗಳಿಸಿದರು.[೯]

ವಿಶ್ವ ರ್ಯಾಂಕಿಂಗ್ ಯಾ ಶ್ರೇಣಿ[ಬದಲಾಯಿಸಿ]

 • ಕೆಳಗೆ ಕೊಟ್ಟಿರುವುದು, ಮಾರ್ಚ್ 1, 2014 ಎಐಬಿಎ (AIBA) ಶ್ರೇಣಿಗಳು: ಇಂಟರ್ನ್ಯಾಷನಲ್ ಬಾಕ್ಸಿಂಗ್ ಅಸೋಸಿಯೇಷನ್, ("ಅಸೋಸಿಯೇಶನ್ ಇಂಟರ್ನ್ಯಾಷನೇಲ್ ಡಿ ಬಾಕ್ಸಿಂಗ್ ಹವ್ಯಾಸಿ (ಅಮೆಚುರ್)"-Association Internationale de Boxe Amateur)
 • ಮೊದಲ ಮೂರು ಶ್ರೇಣಿಗಳು:
ರ್ಯಾಂಕ್ ಹೆಸರು ತೂಕ - ವರ್ಗ ದೇಶ
1 ಜೋಸಿ ಗಬುಕೊ 45–48 kg - ಮಹಿಳೆ ಫಿಲಿಪ್ಪೀನ್ಸ್
2 ಪಿಂಕಿ ಜಂಗ್ರೆ 45–48 kg - ಮಹಿಳೆ ಭಾರತ
3 ಶಿಕಿ ಕ್ಸು 45–48 kg -ಮಹಿಳೆ ಚೀನಾ
1 ಕನ್ಕಾನ್ ರೆನ್ (Cancan Ren) 51 kg - ಮಹಿಳೆ ಚೀನಾ
2 ನಿಕೊಲ್ ಆಡಮ್ಸ 51 kg - ಮಹಿಳೆ ಇಂಗ್ಲೆಂಡ್
3 ಎಮ್.ಸಿ.ಮೇರಿ ಕೋಮ್ 51 kg - ಮಹಿಳೆ ಭಾರತ
1 ಯೂನ್ ಫಾಐ ಲೀ (Yunfei Li) 81+ kg - ಮಹಿಳೆ [[ಚೀನಾ ]]
2 ಲಜತ್ ಕುಂಗಾಯ ಬೀವ್ಯಾ (Lazzat Kungeibaevya) 81+ kg -ಮಹಿಳೆ ಕಝಾಕಿಸ್ತಾನ್
3 ಕವಿತಾ ಚಹಲ್ 81+ kg - ಮಹಿಳೆ ಭಾರತ
1 ಬಿರ್ಜಾನ್ ಜರಿಪೊವ್ (Birzhan Zharypov) 46–48 kg -ಪುರುಷ ಕಝಾಕಿಸ್ತಾನ್
2 ಡೇವಿಡ್ ಐರಾಪೆಟನ್ (David Ayrapetan) 46–48 kg - ಪುರುಷ ರಷ್ಯಾ
3 ಎಲ್.ದೇವೇಂದ್ರೊ ಸಿಂಗ್ 46–48 kg -ಪುರುಷ ಭಾರತ
1 ರೊಬೈಸಿ ರಮಿರೆಜ್ ಕರ್ರಂನ್ಜ (Robeisy Ramirez Carranza) 56 kg - ಪುರುಷ ಕ್ಯೂಬಾ
2 ಜಾನ್ ಮೈಕೇಲ್ ಕೊನನ್ (John Michael Conlan) 56 kg - ಪುರುಷ ಐರ್ಲೆಂಡ್
3 ಶಿವ ಥಾಪಾ 56 kg - ಪುರುಷ ಭಾರತ

[೧೦]

ಮಂಗೋಲಿಯಾದ ಅಂತರರಾಷ್ಟ್ರೀಯ ಬಾಕ್ಸಿಂಗ್ ಟೂರ್ನಿ ೨೦೧೭[ಬದಲಾಯಿಸಿ]

 • ಉಲನ್‌ ಬತಾರ್‌:
 • ಭಾರತದ ಎಲ್. ದೇವೆಂದ್ರೊ ಸಿಂಗ್ ಮಂಗೋಲಿಯಾದ ಉಲನ್‌ ಬತಾರ್‌ನಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಬಾಕ್ಸಿಂಗ್ ಟೂರ್ನಿಯ ಪುರುಷರ ಸಿಂಗಲ್ಸ್‌ನ ನಾಲ್ಕನೇ ಘಟ್ಟಕ್ಕೆ ಪ್ರವೇಶಿಸಿದ್ದಾರೆ. 52 ಕೆಜಿ ವಿಭಾಗದಲ್ಲಿ ದೇವೆಂದ್ರೊ ಕ್ವಾರ್ಟರ್‌ ಫೈನಲ್‌ನಲ್ಲಿ ರಷ್ಯಾದ ದಿಮಿ ಯುಸುಪೊವ್ ಎದುರು ಗೆದ್ದರು.

ಮುಂದಿನ ಪಂದ್ಯಗಳು[ಬದಲಾಯಿಸಿ]

 • ಮಣಿಪುರದ 23 ವರ್ಷದ ದೇವೆಂದ್ರೊ ಜನವರಿಯಲ್ಲಿ ಏಷ್ಯನ್ ಚಾಂಪಿಯನ್‌ಷಿಪ್‌ನ ಅರ್ಹತಾ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದರು. ಅದರ ನಂತರ ಬಲ್ಗೇರಿಯಾದಲ್ಲಿ ನಡೆದಿದ್ದ ಸ್ಟ್ರಾಂಡ್ಜಾ ಸ್ಮಾರಕ ಟೂರ್ನಿ ಮತ್ತು ಥಾಯ್ಲೆಂಡ್‌ನಲ್ಲಿ ನಡೆದಿದ್ದ ಕಿಂಗ್ಸ್‌ ಕಪ್ ಟೂರ್ನಿಗಳಲ್ಲಿಯೂ ಸೋತಿದ್ದರು. ಆದರೆ, ಇಲ್ಲಿ ಸೆಮಿಫೈನಲ್ ತಲುಪುವ ಮೂಲಕ ಪದಕ ಖಚಿತ ಪಡಿಸಿಕೊಂಡಿದ್ದಾರೆ. ತಮ್ಮ ಎದುರಾಳಿಯ ಮೇಲೆ ಮಿಂಚಿನ ವೇಗದಲ್ಲಿ ಮುಷ್ಟಿಪ್ರಹಾರ ಮಾಡಿದ ಅವರು ಗೆಲುವು ಸಾಧಿಸಿದರು. ಇನ್ನುಳಿದ ಪಂದ್ಯಗಳಲ್ಲಿ; ಭಾರತದ ರೋಹಿತ್ ತೊಕಾಸ್ ಅವರು 64 ಕೆಜಿ ವಿಭಾಗದಲ್ಲಿ ಮಂಗೋಲಿಯಾದ ಚಿನ್‌ಜೊರಿಗ್ ಬಾತರ್‌ಸುಕ್ ವಿರುದ್ಧ ಸೋಲನುಭವಿಸಿದರು.
 • 23 Jun, 2017 - ಕ್ವಾರ್ಟರ್‌ಫೈನಲ್: ಶುಕ್ರವಾರ ನಡೆಯಲಿರುವ 51 ಕೆ.ಜಿ. ಮಹಿಳೆಯರ ಸಿಂಗಲ್ಸ್‌ ಕ್ವಾರ್ಟರ್‌ಫೈನಲ್‌ನಲ್ಲಿ ಎಂ.ಸಿ. ಮೇರಿ ಕೋಮ್ ಕಣಕ್ಕಿಳಿಯಲಿದ್ದಾರೆ.
 • ರಷ್ಯಾದ ಅನ್ನಾ ಏಡ್ಮಾ ಮತ್ತು ಕೊರಿಯಾದ ಚೋಲ್ ಮಿ ಬಾಂಗ್ ಅವರ ನಡುವೆ ನಡೆಯಲಿರುವ ಪ್ರೀ ಕ್ವಾರ್ಟರ್‌ನಲ್ಲಿ ಜಯಿಸಿದವರು ಮೇರಿ ಕೋಮ್ ಅವರಿಗೆ ಸವಾಲೊಡ್ಡಲಿದ್ದಾರೆ.
 • ಪ್ರೀಕ್ವಾರ್ಟರ್‌ನಲ್ಲಿ ಬೈ ಪಡೆದಿದ್ದ ಮೇರಿ ಎಂಟರ ಘಟ್ಟ ತಲುಪಿದ್ದರು.
 • ವನಿತೆಯರ ವಿಭಾಗದಲ್ಲಿ; ಪ್ರಿಯಾಂಕಾ ಚೌಧರಿ (60ಕೆಜಿ) ರಷ್ಯಾದ ಅಲೆಕ್ಸಾಂಡ್ರಾ ಆರ್ದಿನಾ ವಿರುದ್ಧ; ಕಲಾವಂತಿ (75ಕೆಜಿ) ರಷ್ಯಾದ ಲೂಬೊವ್ ಲುಸುಪೊವಾ ವಿರುದ್ಧ ಕಣಕ್ಕಿಳಿಯುವರು.
 • 49 ಕೆ.ಜಿ. ಪುರುಷರ ವಿಭಾಗದಲ್ಲಿ ಭಾರತದ ಕೆ. ಶ್ಯಾಮಕುಮಾರ್ ಮತ್ತು ಮಂಗೋಲಿಯಾದ ಯಂಕ್ಮಂದಕ್ ಕಾರ್ಕೂ ಅವರನ್ನು ಎದುರಿಸುವರು. 64 ಕೆಜಿ ವಿಭಾಗದಲ್ಲಿ ಅಂಕುಶ್ ದಹಿಯಾ ಅವರು ಮಂಗೋಲಿಯಾದ ದುಲ್ಗುನ್ ವಿರುದ್ಧ; 69 ಕೆ.ಜಿ. ವಿಭಾಗದಲ್ಲಿ ದುರ್ಯೋಧನ್ ಸಿಂಗ್ ಆತಿಥೇಯ ದೇಶದ ಬೈಯಂಬಾ ಎರ್ಡೆನ್ ಆಟ್ಗೊನ ಬತಾರ್ ವಿರುದ್ಧ ಸೆಣಸುವರು.[೧೧]

ಜೆಕ್ ಗ್ರ್ಯಾನ್‌ಪ್ರಿ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ ೨೦೧೭[ಬದಲಾಯಿಸಿ]

 • 31 Jul, 2017

ಶಿವಥಾಪಾ ಮತ್ತು ಮನೋಜ್‌ ಕುಮಾರ್ ಸೇರಿದಂತೆ ಭಾರತದ ಐವರು ಬಾಕ್ಸರ್‌ಗಳು ಜೆಕ್‌ ಗಣರಾಜ್ಯದಲ್ಲಿ ನಡೆಯುತ್ತಿರುವ 48ನೇ ಗ್ರ್ಯಾನ್‌ಪ್ರಿ ಉಸ್ತಿನಾಡ್ ಲೆಬೆಮ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾನುವಾರ ಚಿನ್ನದ ಪದಕ ಗೆದ್ದಿದ್ದಾರೆ.

 • ಪುರುಷರ ವಿಭಾಗ: ಚಿನ್ನದ ಸಾಧನೆ ಮಾಡಿದವರು:
 • 60 ಕೆ.ಜಿ. ವಿಭಾಗದಲ್ಲಿ ಶಿವಥಾಪಾ, X ಸ್ಲೊವಾಕಿಯಾದ ಫಿಲಿಪ್ ಮೆಸ್ಜರೊಸ್‌ (5–0)
 • 69 ಕೆ.ಜಿ. ಮನೋಜಕುಮಾರ್, X ಜೆಕ್ ಬಾಕ್ಡರ್‌ ಡೇವಿಡ್ ಕೊಟ್ಚ್ (5–0)
 • 52 ಕೆ.ಜಿ. ವಿಭಾಗದಲ್ಲಿ ಅಮಿತ್ ಪಂಗಲ್, X ಕವೀಂದರ್‌ ಭಾರತ ;(3–2 ಅಂಕ)
 • 56 ಕೆ.ಜಿ. ವಿಭಾಗದಲ್ಲಿ ಗೌರವ್ ಬಿಧುರಿ X ಪೊಲೆಂಡ್‌ನ ಇವಾನೊವ್ ಜರಸ್ಲಾವ್ (5–0)
 • 91 ಕೆ.ಜಿ.+ ವಿಭಾಗದಲ್ಲಿ ಸತೀಶ್‌ ಕುಮಾರ್ . X ಜರ್ಮನಿಯ ಮ್ಯಾಕ್ಸ್‌ ಕೆಲ್ಲರ್

ಪುರುಷರ ವಿಭಾಗ: ಬೆಳ್ಳಿದ ಸಾಧನೆ ಮಾಡಿದವರು

 • ಕವೀಂದರ್ ಬಿಷ್ತ್ (52ಕೆ.ಜಿ.),
 • ಮನೀಷ್ ಪನ್ವಾರ್ (81 ಕೆ.ಜಿ.) X ಜರ್ಮನಿಯ ಇಬ್ರಾಗಿಮ್ ಬೆಜುವೆ

ಪುರುಷರ ವಿಭಾಗ: ಕಂಚಿನ ಪದಕ ಸಾಧನೆ ಮಾಡಿದವರು

 • ಸುಮಿತ್ ಸಂಗ್ವಾನ್ (91 ಕೆ.ಜಿ.)
 • ಆಗಸ್ಟ್ 25 ರಿಂದ ಸೆಪ್ಟೆಂಬರ್ 2ರವರೆಗೆ ನಡೆಯಲಿರುವ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಅವಕಾಶ ಪಡೆದವರು:
 • ಅಮಿತ್, ಕವಿಂದರ್, ಗೌರವ್, ಶಿವ ಥಾಪಾ, ಮನೋಜಕುಮಾರ್, ಸುಮಿತ್ ಮತ್ತು ಸತೀಶ್
 • 75 ಕೆ.ಜಿ. ವಿಭಾಗದಲ್ಲಿ ವಿಕಾಸ್ ಕೃಷ್ಣನ್ .
 • [೧೨]

ಹ್ಯಾಂಬರ್ಗ್‌ ವಿಶ್ವ ಭಾಕ್ಸಿಂಗ್ ಚಾಂಪಿಯನ್‌ಷಿಪ್‌ ೨೦೧೭[ಬದಲಾಯಿಸಿ]

 • ಭಾರತದ ಗೌರವ್ ಬಿಧೂರಿ ಅವರು 56 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗಳಿಸಿದ್ದಾರೆ. ಚಾಂಪಿಯನ್‌ಷಿಪ್‌ನಲ್ಲಿ ವೈಲ್ಡ್ ಕಾರ್ಡ್ ಪ್ರವೇಶ ಪಡೆದಿದ್ದ ಅವರು ೩೧-೮-೨೦೧೭ ಗುರುವಾರ ರಾತ್ರಿ ನಡೆದ ಸೆಮಿಫೈನಲ್‌ ಬೌಟ್‌ನಲ್ಲಿ ಅಮೆರಿಕದ ಡ್ಯೂಕ್‌ ರಗಾನ್‌ ವಿರುದ್ಧ ಸೋತು ಕಂಚನ ಪದಕ ಪಡೆದರು. ಇದು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಈ ವರೆಗೆ ಭಾರತಕ್ಕೆ ಲಭಿಸಿದ ನಾಲ್ಕನೇ ಕಂಚು.
 • ಪದಕಗಳ ಪಟ್ಟಿ: ಕಂಚಿನ ಪದಕ:
 • ವಿಜೇಂದರ್ ಸಿಂಗ್‌ (2009)
 • ವಿಕಾಸ್ ಕೃಷ್ಣನ್‌ (2011)
 • ಶಿವ ಥಾಪ (2015)
 • ಗೌರವ್ ಬಿಧೂರಿ (2017)

[೧೩]

ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

 1. Boxing in India
 2. 2008 Summer Olympics Results - Boxing
 3. V ijender becomes world number one; PTI | Sep 29, 2009,
 4. MC Mary Kom delivers first boxing gold at Asian Games 2014;Mary Kom defeated Shekerbekova 2-0 in a evenly-contested battle in which the Kazakh had the initial advantage.
 5. ಚಾಂಪಿಯನ್ ಪಟ್ಟ ಉಳಿಸಿಕೊಂಡ ವಿಜೇಂದರ್;18 Dec, 2016
 6. ಬಾಕ್ಸಿಂಗ್: ಪದಕದತ್ತ ಸರ್ಜುಬಾಲಾ
 7. Gold for Neeraj as India women pugilists shine at Nations Cup;PTI | Updated: Jan 15, 2017,
 8. ಬಾಕ್ಸಿಂಗ್‌: ಶ್ಯಾಮ್‌ ಕುಮಾರ್‌ಗೆ ಚಿನ್ನ;ಪಿಟಿಐ;9 Apr, 2017
 9. ನೋವಲ್ಲೂ ಪದಕ ಗೆದ್ದ ಶಿವ;7 May, 2017
 10. The Hindu;March 6, 2014; Nandakumar
 11. ಮೇರಿ ಕೋಮ್ ಸ್ಪರ್ಧೆ ಇಂದು;ಬಾಕ್ಸಿಂಗ್: ಸೆಮಿಫೈನಲ್‌ಗೆ ದೇವೆಂದ್ರೊ
 12. ಜೆಕ್ ಗ್ರ್ಯಾನ್‌ಪ್ರಿ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಬಾಕ್ಸ್‌ರ್‌ಗಳಿಗೆ ಐದು ಚಿನ್ನ ;ಶಿವ ಥಾಪಾ, ಮನೋಜ್‌ಕುಮಾರ್‌ಗೆ ಚಿನ್ನ;ಪಿಟಿಐ;31 Jul, 2017
 13. ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌;ದೇಶಕ್ಕೆ ಏಕೈಕ ಪದಕದ ’ಗೌರವ’;2 Sep, 2017