ಭಾರತದಲ್ಲಿ ಬೆಲ್ಟ್ ಕುಸ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
 1. Numbered list item

ಬೆಲ್ಟ್ ಕುಸ್ತಿ[ಬದಲಾಯಿಸಿ]

ಜುಡೊ:ಹರಾಯಿ ಗೋಶಿ (ಚುರುಕಾಗಿ ಬಾಚಿಕೊಳ್ಳುವ ಹಿಪ್), ಒಂದು ಕೋಶಿ-ವಾಜHaraigoshi
 • ಆಲ್ ಜಪಾನ್ ಜೂಡೋ ಚಾಂಪಿಯನ್ಶಿಪ್ಸ್, 2007 ರ ಪುರುಷರ ಫೈನಲ್
 • ಬೆಲ್ಟ್ ಕುಸ್ತಿಯು ಜೂಡೊ ಮತ್ತು ಕುಸ್ತಿಯ ಮಿಶ್ರಣ.ಜೂಡೊ ಮತ್ತು ಕುಸ್ತಿಯ ಮಿಶ್ರಣದ ಈ ಕ್ರೀಡೆ ಅರಬ್‌ ರಾಷ್ಟ್ರಗಳಲ್ಲಿ ಹೆಚ್ಚು ಪ್ರಚಲಿತದಲ್ಲಿತ್ತು. 2005ರಲ್ಲಿ ಅಂತರರಾಷ್ಟ್ರಿಯ ಬೆಲ್ಟ್ ಕುಸ್ತಿ ಒಕ್ಕೂಟವೂ ರಚನೆ ಗೊಂಡಿತು. ಇರಾನ್‌, ಟರ್ಕಿ, ಜರ್ಮನಿ, ಪಾಕಿಸ್ತಾನ, ತುರ್ಕ್‌ಮೆನಿ ಸ್ತಾನ್‌, ಕಿರ್ಗಿಸ್ತಾನ್‌, ಉಕ್ರೇನ್‌, ರಷ್ಯಾ, ಲಿಥುವೇನಿಯಾ, ಉಜ್ಬೆಕಿಸ್ತಾನ್‌, ಕಜಕಿ ಸ್ತಾನ್‌, ಟೋಗೊ ಮತ್ತು ಸ್ಪೇನ್‌ನಲ್ಲಿ ಈಗಾಗಲೇ ಅಂತರರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳನ್ನು ಏರ್ಪಡಿಸಲಾಗಿದೆ. 2009ರಲ್ಲಿ ಭಾರತಕ್ಕೆ ಕಾಲಿಟ್ಟ ಈ ಕ್ರೀಡೆಯ ಭಾರತೀಯ ಒಕ್ಕೂಟದ ಕೇಂದ್ರ ಸ್ಥಾನ ಪುಣೆಯಲ್ಲಿದೆ.
 • ಕುಸ್ತಿಯ ಇತರ ಪ್ರಕಾರಗಳಿಗೂ ಬೆಲ್ಟ್ ಕುಸ್ತಿಗೂ ಭಾರಿ ವ್ಯತ್ಯಾಸವೇನೂ ಇಲ್ಲ. ಸೊಂಟಕ್ಕೆ ಕಟ್ಟಿದ ಬೆಲ್ಟ್ ಹಿಡಿದುಕೊಂಡೇ ಆಡುವುದು ಬೆಲ್ಟ್ ಕುಸ್ತಿ. ಎದುರಾಳಿಯ ಸೊಂಟದ ಬೆಲ್ಟ್ ಬಿಗಿಯಾಗಿ ಹಿಡಿದು ನೆಲಕ್ಕೆ ಬೀಳಿಸಿದರೆ ಪಾಯಿಂಟ್‌ ಗಳಿಸಬಹುದು.

ಕರ್ನಾಟಕದಲ್ಲಿ[ಬದಲಾಯಿಸಿ]

 • 2005 ರಲ್ಲಿ ದಾವಣಗೆರೆ ಭಾರತೀಯ ಕುಸ್ತಿಪಟುಗಳು.(Davangere Wrestlers)
 • ಭಾರತದಲ್ಲಿ ಇತ್ತೀಚೆಗೆ ಹೆಸರು ಮಾಡುತ್ತಿರುವ ಬೆಲ್ಟ್ ಕುಸ್ತಿಯಲ್ಲಿ ಕರ್ನಾಟಕದ ಸಾಧನೆಯ ಪಟ್ಟಿ ಹೀಗೆ ಸಾಗುತ್ತದೆ. ಐದು ಬಾರಿ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಂಡ ಬೆಳಗಾವಿಯ ಅಲ್ತಾಫ್ ಮುಲ್ಲಾ, ಭಾರತಕ್ಕೆ ಈ ಕುಸ್ತಿಯಲ್ಲಿ ಮೊದಲ ಬಾರಿ ಪದಕ (ಕಂಚು) ಗಳಿಸಿಕೊಟ್ಟ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕು ಸುಲ್ತಾನ್‌ಪುರದ ಹುಸೇನ್‌ ಮುಲ್ಲಾ, ಇದರ ಬೆನ್ನಲ್ಲೇ ಮತ್ತೊಂದು ಕಂಚು ಗೆದ್ದು ತಂದ ಬೆಳಗಾವಿಯ ಅಜಿತ್‌ ತೊನಶ್ಯಾಳ ಮುಂತಾದವರು ಕೆಲವು ವರ್ಷಗಳಿಂದ ಸಾಧನೆ ಮಾಡುತ್ತಿ ದ್ದಾರೆ. ಆದರೆ ಬೆಲ್ಟ್ ಕುಸ್ತಿಯ ಹೆಸರು ಹೆಚ್ಚು ಸದ್ದು ಮಾಡಿದ್ದು ಕಳೆದ ಎರಡು ವರ್ಷಗಳಲ್ಲಿ ರಾಜ್ಯ ತಂಡ ಅಖಿಲ ಭಾರತ ಶಾಲಾ ಕ್ರೀಡಾಕೂಟದಲ್ಲಿ ಚಾಂಪಿಯನ್‌ ಆದಾಗಿನಿಂದ.
 • ಕರ್ನಾಟಕದಲ್ಲಿ ಮೂರು ವರ್ಷಗಳಿಂದ ಇದು ಹೆಚ್ಚು ಗಮನ ಸೆಳೆಯುತ್ತಿದೆ. ಬೆಳಗಾವಿಯಲ್ಲಿ ನಿತ್ಯ ಅಭ್ಯಾಸ ಮಾಡಲಾಗುತ್ತದೆ. ರಾಜ್ಯ ಬೆಲ್ಟ್ ಕುಸ್ತಿ ಸಂಸ್ಥೆಯ ಕೇಂದ್ರ ಸ್ಥಾನವೂ ಬೆಳಗಾವಿ ಯಲ್ಲೇ ಇದೆ. ಗೋಕಾಕ, ನಿಪ್ಪಾಣಿ ಮುಂತಾದ ಕಡೆಯ ಕುಸ್ತಿಪಟುಗಳು ಕೂಡ ಇಲ್ಲಿಗೆ ಬಂದು ಅಭ್ಯಾಸ ಮಾಡುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲೂ ಬೆಲ್ಟ್ ಕುಸ್ತಿ ಕಲಿಸಲಾಗುತ್ತಿದೆ. ಅಲ್ಲಿನ ಕುಸ್ತಿ ಕೋಚ್‌ ತುಕರಾಮ್ ಅವರೇ ಈ ಪ್ರಕಾರದಲ್ಲೂ ತರಬೇತಿ ನೀಡುತ್ತಾರೆ.
 • ಕಳೆದ ಬಾರಿ ಕರ್ನಾಟಕದ ಬಾಲಕ ಮತ್ತು ಬಾಲಕಿಯರ ತಂಡಗಳು ಚಾಂಪಿಯನ್‌ಷಿಪ್‌ ಬಗಲಿಗೆ ಹಾಕಿಕೊಂಡು ಬೆಲ್ಟ್ ಕುಸ್ತಿಯ ಸಮಗ್ರ ಪ್ರಶಸ್ತಿಯನ್ನೂ ಗೆದ್ದಿದ್ದರು. ಈ ಬಾರಿ ಬಾಲಕಿಯರು ಪ್ರಶಸ್ತಿ ಬಿಟ್ಟುಕೊಡ ಲಿಲ್ಲ. ಬಾಲಕರ ವಿಭಾಗದಲ್ಲಿ ಕರ್ನಾಟಕ ರನ್ನರ್ ಅಪ್ ಆಗಿತ್ತು. ಆದರೂ ಸಮಗ್ರ ಪ್ರಶಸ್ತಿ ಯನ್ನು ರಾಜ್ಯ ಉಳಿಸಿಕೊಂಡಿತು. ತಂಡದಲ್ಲಿದ್ದವರ ಪೈಕಿ ಹೆಚ್ಚಿನವರು ಉತ್ತರ ಕರ್ನಾಟಕದವರು; ಅದರಲ್ಲೂ ಬಹುಪಾಲು ಬೆಳಗಾವಿ ಜಿಲ್ಲೆಯದು.
 • ‘ಬೆಲ್ಟ್ ಕುಸ್ತಿಗೆ ಉತ್ತಮ ಭವಿಷ್ಯವಿದೆ. ಕಳೆದ ಎರಡು ವರ್ಷ ಹಮ್ಮಿಕೊಂಡ ರಾಜ್ಯ ಚಾಂಪಿಯನ್‌ಷಿಪ್‌ಗಳಲ್ಲಿ 13ಕ್ಕೂ ಹೆಚ್ಚು ಜಿಲ್ಲೆಗಳ ತಂಡಗಳು ಪಾಲ್ಗೊಂಡಿವೆ. ಎಸ್‌ಜಿಎಫ್‌ಐ ನವರು ಅವಕಾಶ ನೀಡಿದ್ದರಿಂದ ಯುವ ಕುಸ್ತಿಪಟುಗಳ ಭರವಸೆ ಹೆಚ್ಚಿದೆ. ಮುಂದಿನ ಒಲಿಂಪಿಕ್ಸ್‌ನಲ್ಲಿ ಬೆಲ್ಟ್ ಕುಸ್ತಿಯ ಪ್ರಾತ್ಯಕ್ಷಿಕೆ ನಡೆಯಲಿದೆ. ಅದು ಒಲಿಂಪಿಕ್ಸ್ ಪ್ರವೇಶದ ಹೆಬ್ಬಾಗಿಲು ಆಗಲಿದೆ’ ಎನ್ನುತ್ತಾರೆ ರಾಜ್ಯ ಬೆಲ್ಟ್ ಕುಸ್ತಿ ಸಂಸ್ಥೆಯ ಅಧ್ಯಕ್ಷ ರಾಮರಾವ್‌.

[೧]

ರಾಷ್ಟ್ರೀಯ ಪದಕ ಗೆದ್ದವರು[ಬದಲಾಯಿಸಿ]

 • ಈ ಬಾರಿಯ (2016 - 17) ಅಖಿಲ ಭಾರತ ಶಾಲಾಕ್ರೀಡಾಕೂಟದಲ್ಲಿ ಪದಕ ಗೆದ್ದ ಕರ್ನಾಟಕದ ಬೆಲ್ಟ-ಕುಸ್ತಿ ಪಟುಗಳು.
ಹೆಸರು ವಿಭಾಗ ಪದಕ
ಅಜಿತ್ ತೋನಶ್ಯಾಲ. 60ಕೆಜಿ ಚಿನ್ನ
ಸುನಿಲ್ ಹೊಸತೋಟ. 70 ಕೆಜಿ ಚಿನ್ನ
ಲಕ್ಷ್ಮಿ ಪಾಟೀಲ 40ಕೆಜಿ ಚಿನ್ನ
ಮಮತಾ ಖನೋಜಿ 45 ಕೆಜಿ ಚಿನ್ನ
ಹರ್ಷಿತಾ 50ಕೆಜಿ ಚಿನ್ನ
ಶ್ರುತಿ ಮಾಲೋಚಿ 55 ಕೆಜಿ ಚಿನ್ನ
ಪೂಜಾ ದಲವಿ 60 ಕೆಜಿ ಚಿನ್ನ
ನಿಖಿಲ್ ಪವಾರ್ 70ಕೆಜಿ. ಬೆಳ್ಳಿ
ರಾಘವೇಂದ್ರ ಕಲ್ಲೋಲಿ 40ಕೆಜಿ ಬೆಳ್ಳಿ

ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

 1. "ಪ್ರವರ್ಧಮಾನಕ್ಕೆ ಬೆಲ್ಟ್ ಕುಸ್ತಿ;ವಿಕ್ರಂ ಕಾಂತಿಕೆರೆ;27 Feb, 2017". Archived from the original on 2017-02-27. Retrieved 2017-02-27.