ಬ್ರಿಟಿಶ್ ಕೌನ್ಸಿಲ್
Founded | 1934 |
---|---|
ಸ್ಥಾಪಿಸಿದವರು | United Kingdom Government |
ಶೈಲಿ | Cultural institution |
ಪ್ರದೇಶ | Worldwide |
Product | British cultural and language education |
Key people | Vernon Ellis (Chair) Martin Davidson (Chief Executive) |
Revenue | £982 million (2007/6) |
ಅಧಿಕೃತ ಜಾಲತಾಣ | www.britishcouncil.org |
ಬ್ರಿಟನ್ ಮೂಲದ ಬ್ರಿಟಿಶ್ ಕೌನ್ಸಿಲ್ ಒಂದು ಆರ್ಮ್ಸ್ ಲೆಂಗ್ತ್ ಬಾಡಿಯಾಗಿದ್ದು (ಸಾರ್ವಜನಿಕ ಸೇವೆಗಳನ್ನು ಒದಗಿಸುವ ಸರ್ಕಾರಿ ಅನುದಾನ ಪಡೆಯುವ ಅರೆಸ್ವಾಯತ್ತ ಸಂಸ್ಥೆಗಳು) ಅಂತಾರಾಷ್ಟ್ರೀಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅವಕಾಶಗಳಲ್ಲಿ ಪರಿಣತಿಯನ್ನು ಒದಗಿಸುತ್ತದೆ. ಇದನ್ನು ರಾಜ ಸನ್ನದು (ರಾಯಲ್ ಚಾರ್ಟರ್)ವಿನಲ್ಲಿ ಸೇರಿಸಲಾಗಿದೆ ಮತ್ತು ಇಂಗ್ಲೆಂಡ್, ವೇಲ್ಸ್ ಮತ್ತು ಸ್ಕಾಟ್‌ಲ್ಯಾಂಡ್‌ನಲ್ಲಿ ದತ್ತಿನಿಧಿಯಾಗಿ ನೋಂದಾಯಿಸಲಾಗಿದೆ.
1934ರಲ್ಲಿ ಸ್ಥಾಪಿತಗೊಂಡ ಇದಕ್ಕೆ, VIನೇ ಜಾರ್ಜ್ ದೊರೆಯು 1940ರಲ್ಲಿ ರಾಜ ಸನ್ನದನ್ನು ನೀಡಿದರು.[೧] ಇದರ 'ಪ್ರಾಯೋಜಕತ್ವ ಇಲಾಖೆ'ಯು ಬ್ರಿಟನ್ ಸರ್ಕಾರದೊಳಗೆ ಇರುವ ವಿದೇಶಾಂಗ ಮತ್ತು ಕಾಮನ್‌ವೆಲ್ತ್ ಕಚೇರಿಯಾಗಿದೆ, ಜೊತೆಗೆ ಅದು ದೈನಂದಿನ ಕಾರ್ಯನಿರ್ವಹನಾ ಸ್ವಾತಂತ್ರ್ಯವನ್ನು ಹೊಂದಿದೆ. ಮಾರ್ಟಿನ್ ಡೇವಿಡ್‌ಸನ್ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದು, 2007ರ ಏಪ್ರಿಲ್‌ನಲ್ಲಿ ನೇಮಕಗೊಂಡಿದ್ದಾರೆ.[ಸೂಕ್ತ ಉಲ್ಲೇಖನ ಬೇಕು]
ಸ್ಥೂಲ ಅವಲೋಕನ
[ಬದಲಾಯಿಸಿ]ಬ್ರಿಟಿಶ್ ಕೌನ್ಸಿಲ್‌ಗೆ ಒಳಪಡುವ ಅಂಶಗಳು ಹೀಗಿವೆ, "ಬ್ರಿಟನ್ ಮತ್ತು ಇತರೆ ದೇಶಗಳ ನಡುವೆ ಪರಸ್ಪರ ಲಾಭಕರವಾದ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಬಂಧಗಳನ್ನು ನಿರ್ಮಿಸುವುದು, ಜೊತೆಗೆ ಬ್ರಿಟನ್ನಿನ ಸೃಜನಶೀಲ ವಿಚಾರಗಳ ಮತ್ತು ಸಾಧನೆಗಳ ಆಸ್ವಾದನೆ, ಮನ್ನಣೆಯನ್ನು ಹೆಚ್ಚಿಸುವುದು." ಇದರ ವಿದೇಶೀ ಸಂಪರ್ಕಜಾಲವು (ನೆಟ್‌ವರ್ಕ್) ಸುಮಾರು 100 ದೇಶಗಳಲ್ಲಿ ಮತ್ತು ರಾಜ್ಯಗಳಲ್ಲಿ 233 ಸ್ಥಳಗಳಿಗೆ ಹಬ್ಬಿದೆ. ಕೇಂದ್ರ ಲಂಡನ್‌ನಲ್ಲಿ ವೈಟ್‌ಹಾಲ್ ಬಳಿಯಿರುವ ಸ್ಪ್ರಿಂಗ್ ಗಾರ್ಡನ್ಸ್‌ನಲ್ಲಿ ಇದರ ಕೇಂದ್ರಕಚೇರಿ ಇದೆ. ಬೆಲ್‌ಫಾಸ್ಟ್, ಕಾರ್ಡಿಫ್, ಮ್ಯಾಂಚೆಸ್ಟರ್ ಮತ್ತು ಎಡಿನ್‌ಬರೊಗಳಲ್ಲಿಯೂ ಶಾಖಾ ಕಚೇರಿಗಳಿವೆ.[೨]
2006/07ರಲ್ಲಿ ತನ್ನ ಒಟ್ಟು 551 ಮಿಲಿಯನ್ ಪೌಂಡ್ ಆದಾಯದಲ್ಲಿ, ಬ್ರಿಟಿಶ್ ಕೌನ್ಸಿಲ್ ಬ್ರಿಟಿಶ್ ಸರ್ಕಾರದಿಂದ 195 ಮಿಲಿಯನ್ ಪೌಂಡ್ ಅನುದಾನವನ್ನು ಪಡೆದಿದೆ.[ಸೂಕ್ತ ಉಲ್ಲೇಖನ ಬೇಕು] ಇನ್ನುಳಿದ ಹಣವನ್ನು ವ್ಯಕ್ತಿಗಳಿಗೆ ಮತ್ತು ಸಂಸ್ಥೆಗಳಿಗೆ ಇಂಗ್ಲಿಶ್ ಕಲಿಸುವುದು, ಪರೀಕ್ಷೆಗಳು ಮತ್ತು ಸಲಹೆ-ಸಮಾಲೋಚನೆಯ ಮೂಲಕ ಗಳಿಸಿದೆ. ಇದರ ಚಟುವಟಿಕೆಗಳ ಮುಖ್ಯ ಕ್ಷೇತ್ರವೆಂದರೆ 'ಕಲಿಕೆ/ಬೋಧನೆ, ಕಲೆ, ವಿಜ್ಞಾನ ಮತ್ತು ಸಮಾಜ' ಆಗಿದೆ. ವಿದೇಶಗಳಲ್ಲಿ ಬ್ರಿಟಿಶ್ ಕೌನ್ಸಿಲ್‌ನ ಮೌಲಿಕ ಸಾರ್ವಜನಿಕ ಮುಖ ಎಂಬಂತೆ ಇದ್ದ ಹಲವಾರು ಬ್ರಿಟಿಶ್ ಕೌನ್ಸಿಲ್ ಗ್ರಂಥಾಲಯಗಳನ್ನು ಈಗ ಮುಚ್ಚಲಾಗಿದೆ.[ಸೂಕ್ತ ಉಲ್ಲೇಖನ ಬೇಕು][neutrality is disputed]
2009ರ ಜೂನ್‌ನಲ್ಲಿ ಬ್ರಿಟಿಶ್ ಕೌನ್ಸಿಲ್‌ನಲ್ಲಿ 400-500 ನೌಕರಿಯನ್ನು ಕಡಿತಗೊಳಿಸಲಾಗುವುದು ಎಂದು ಪ್ರಕಟಿಸಲಾಯಿತು. ಇದು ಸಂಸ್ಥೆಯ ವ್ಯಾಪಕ ಪುನರ್‌ರಚನೆಯ ಭಾಗವಾಗಿದ್ದು, ಬ್ಯಾಕ್-ಆಫೀಸ್ ಕೆಲಸಗಳನ್ನು ಹೊರಗುತ್ತಿಗೆ ಕೊಡುವುದನ್ನು ಮತ್ತು ಬ್ರಿಟನ್ನಿನಲ್ಲಿ ಅವರ ಪ್ರಾದೇಶಿಕ ಕಾರ್ಯಾಚರಣೆಯನ್ನು ಇನ್ನಷ್ಟು ಕೇಂದ್ರೀಕರಣಗೊಳಿಸುವುದನ್ನು ಒಳಗೊಂಡಿರುತ್ತದೆ ಎನ್ನಲಾಗಿದೆ.[೩]
2009ರ ಸೆಪ್ಟೆಂಬರ್‌ನಲ್ಲಿ ಬ್ರಿಟಿಶ್ ಕೌನ್ಸಿಲ್ ನಿರ್ದೇಶಕರಾದ ರೆಬೆಕ್ಕಾ ವಾಲ್ಟನ್ 'ಮೊನೊಕಲ್' ನಿಯತಕಾಲಿಕದಲ್ಲಿ ಹೀಗೆ ಹೇಳಿದ್ದಾರೆ: "ಬ್ರಿಟಿಶ್ ಕೌನ್ಸಿಲ್‌ನ ಮುಖ್ಯ ಉದ್ದೇಶವಾದ ಸಾಂಸ್ಕೃತಿಕ ಸಂಬಂಧಗಳ ಜೊತೆಗೇ ಕಲೆಯನ್ನೂ ಉತ್ತೇಜಿಸಲು ನಾವು ನಿಜಕ್ಕೂ ತುಂಬ ಶ್ರಮಿಸುತ್ತಿದ್ದೇವೆ. ಗಡಿಗಳ ಆಚೆ ಈಚೆ ಸಂವಾದ, ಚರ್ಚೆಯನ್ನು ಹುಟ್ಟುಹಾಕಲು ಕಲೆಗಳು ಅತ್ಯಂತ ಶಕ್ತಿಶಾಲಿ ಸಾಧನಗಳಾಗಿವೆ. ವಿದೇಶಾಂಗ ಕಚೇರಿಯ ಸದಸ್ಯರೊಬ್ಬರು ಕಲೆಗಳು ಈಗ ಟೂಲ್‌ಕಿಟ್‌ನಲ್ಲಿರುವ ಅನುಮೋದನೆಗಳಷ್ಟೇ ಮಹತ್ವದ್ದು ಎಂದು ಮೊದಲ ಬಾರಿಗೆ ಹೇಳುವುದನ್ನು ನಾನು ಇತ್ತೀಚೆಗಷ್ಟೇ ಕೇಳಿಸಿಕೊಂಡೆ. ಜನರು ಬ್ರಿಟನ್‌ನತ್ತ ಹೆಚ್ಚು ಒಲವು ಬೆಳೆಸಿಕೊಳ್ಳಬೇಕು ಮತ್ತು ವಿಶ್ವದಲ್ಲಿ ಬ್ರಿಟನ್ನಿನ ಧನಾತ್ಮಕ ಅನುಕೂಲಗಳ ಕುರಿತು ಹೆಚ್ಚು ಸಂವೇದನಾಶೀಲರಾಗಬೇಕೆಂದು ನಾವು ಬಯಸುತ್ತೇವೆ. ನಾವು ಬಿಆರ್‌ಐಸಿ (ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನಾ) ದೇಶಗಳ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸ ಬಯಸುತ್ತೇವೆ. ರಾಜಕೀಯವಾಗಿ ರಷ್ಯಾ ಸ್ವಲ್ಪ ಕಠಿಣವಾದ ಪ್ರದೇಶ. ಗಲ್ಫ್ ದೇಶಗಳಲ್ಲಿ ಕೂಡ ನಮ್ಮ ಉಪಸ್ಥಿತಿ ಈಗಷ್ಟೇ ಬೆಳೆಯುತ್ತಿದೆ. ನಾವು ಅಲ್ಲಿ ನಾಟಕರಚನೆ ಅಭಿವೃದ್ಧಿ ಕೆಲಸವನ್ನು ವಿಸ್ತರಿಸುತ್ತಿದ್ದೇವೆ, ಅದು ಯುವ ಜನರಿಗೆ ಆಸಕ್ತಿಯ ಕ್ಷೇತ್ರಗಳ ಕುರಿತು ಬರೆಯುವುದರ ಕುರಿತಾಗಿದ್ದು, ಅವರ ಆಸಕ್ತಿಯನ್ನು ಯಾವುದು ಹಿಡಿದಿಡಬಲ್ಲದು ಎಂದು ನೋಡುವುದಾಗಿದೆ. ಸಮೀಪಪ್ರಾಚ್ಯ ಮತ್ತು ಉತ್ತರ ಆಫ್ರಿಕಾಗಳಿಂದ ರಾಯಲ್ ಕೋರ್ಟ್‌ನಲ್ಲಿ ಓದುವಿಕೆಯನ್ನು ಆರಂಭಿಸಿದ್ದೇವೆ ಮತ್ತು ಇದನ್ನು ಗಲ್ಫ್‌ನಲ್ಲಿಯೂ ನಡೆಸಲು ನಾವು ಬಯಸಿದ್ದೇವೆ. ಒಂದು ದೇಶವಾಗಿ ನಾವು ದೀರ್ಘಕಾಲೀನ ವಿಷಯವನ್ನು ಹೊಂದಿದ್ದೇವೆ; ಅಬು ದಾಬಿಯಲ್ಲಿ ಫ್ರಾನ್ಸ್‌ನ ಲೋವ್‌ರೆ ಇದ್ದಂತೆ, ಒಂದು ನಗರದ ವಾತಾವರಣವನ್ನು ಸ್ವಲ್ಪ ಆಂತರಿಕವಾಗಿ ಅದು ಬದಲಿಸುವಂತಿದ್ದರೆ, ಬ್ರಿಟನ್ ಇನ್ನೂ ದೊಡ್ಡ ಯೋಜನೆಗಳನ್ನು ಮಾಡುವ ಅಗತ್ಯವಿದೆ ಎಂದು ನಾನು ಯೋಚಿಸುವ ಸಂದರ್ಭಗಳಿವೆ." (ಮೊನೊಕಲ್ ಸಂಚಿಕೆ 26, ಸಂಪುಟ 3 ಸೆಪ್ಟೆಂಬರ್ 2009).
ಮೊನೊಕಲ್ ನಿಯತಕಾಲಿಕವು 2010ರ ಡಿಸೆಂಬರ್‌ನಲ್ಲಿ ಮಾಡಿದ 'ಸಾಫ್ಟ್ ಪವರ್' ಸಮೀಕ್ಷೆಯಲ್ಲಿ ಫ್ರಾನ್ಸ್‌ನ 'ಅಲಿಯಾನ್ಸ್ ಫ್ರಾಂಕಾಯಿಸ್' ಸಂಪರ್ಕಜಾಲವನ್ನು 'ಎರಡನೆಯ' ಸ್ಥಾನದಲ್ಲಿದೆ ಎನ್ನಲಾಗಿದೆ. ಅದು ಬ್ರಿಟನ್ನಿನ 'ಸಾಫ್ಟ್ ಪವರ್' ಅನ್ನು ಫ್ರಾನ್ಸ್‌ಗೆ ಸಮನಾಗಿ ಶ್ರೇಣಿ ನೀಡುವಾಗ ಬ್ರಿಟಿಶ್ ಕೌನ್ಸಿಲ್‌ನ ಚಟುವಟಿಕೆಗಳ ಯಾವುದೇ ನಿರ್ದಿಷ್ಟ ಉಲ್ಲೇಖವನ್ನು ಕೈಬಿಟ್ಟಿದೆ. 'ಮೊನೊಕಲ್'ನ ಅದೇ ಸಂಚಿಕೆಯು ಪ್ರತ್ಯೇಕ ಲೇಖನದಲ್ಲಿ ಸ್ವೀಡನ್ನಿನ ಖಾಸಗಿ ಕಂಪನಿ ಇಎಫ್ (ಇಂಗ್ಲಿಶ್ ಫರ್ಸ್ಟ್) ಇಂಗ್ಲಿಶ್ ಭಾಷೆಯನ್ನು ಬೋಧನೆಯನ್ನು ಉತ್ತೇಜಿಸುವಲ್ಲಿ ವಹಿಸಿದ ಪ್ರಮುಖ ಪಾತ್ರವನ್ನು ಎತ್ತಿತೋರಿಸಿದೆ. ಬ್ರಿಟನ್ನಿನ 'ಸಾಫ್ಟ್ ಪವರ್' ಮೆಟ್ರಿಕ್ಸ್‌ನ ತನ್ನ ಪಟ್ಟಿಯಲ್ಲಿ ಬಿಬಿಸಿ ವರ್ಲ್ಡ್ ಸರ್ವಿಸ್‌ನ ಮುಖ್ಯ ಪಾತ್ರವನ್ನು ಸೇರಿಸಿದೆ:
http://www.monocle.com/sections/affairs/Magazine-Articles/The-new-soft-sell---Global/ Archived 2010-12-17 ವೇಬ್ಯಾಕ್ ಮೆಷಿನ್ ನಲ್ಲಿ.
ಬ್ರಿಟಿಶ್ ಕೌನ್ಸಿಲ್-ನಡೆಸುವ ಚಟುಟಿಕೆಗಳಾದ ಲಿಬಿಯಾದಲ್ಲಿ ಶಾಂತಿಪಾಲನಾ ಇಂಗ್ಲಿಶ್ ಯೋಜನೆಗಳು ಎಫ್‌ಸಿಒ, ಅಂತಾರಾಷ್ಟ್ರೀಯ ಅಭಿವೃದ್ಧಿ ಇಲಾಖೆ ಮತ್ತು ರಕ್ಷಣಾ ಇಲಾಖೆಗಳಿಂದ ಅನುದಾನ ಪಡೆಯುತ್ತವೆ - ಮತ್ತು ಬ್ರಿಟಿಶ್ ಕೌನ್ಸಿಲ್‌ನ ಖಾಸಗಿ ವಲಯದ ವಿಮರ್ಶಕರು ಈ ಕುರಿತು ಹುಬ್ಬೇರಿಸುವುದನ್ನು ಮುಂದುವರೆಸಿದ್ದಾರೆ.[೪][೫]
ಇತಿಹಾಸ
[ಬದಲಾಯಿಸಿ]1920ರ ಕೊನೆಯ ಭಾಗದಲ್ಲಿ ಫ್ರೆಂಚ್, ಜರ್ಮನ್ ಮತ್ತು ಇಟಾಲಿಯನ್ನರ ಅಧಿಕೃತ ಸಾಂಸ್ಕೃತಿಕ ಸಂಸ್ಥೆಗಳು ಸಾಕಷ್ಟು ಯಶಸ್ವಿಯಾಗಿದ್ದು ವಿದೇಶಾಂಗ ಕಚೇರಿ(ಫಾರಿನ್ ಆಫೀಸ್ ಅಥವಾ ಫಾರಿನ್ ಆಂಡ್ ಕಾಮನ್‌ವೆಲ್ತ್ ಆಫೀಸ್)ಯಲ್ಲಿ ಬ್ರಿಟಿಶ್ ಕೌನ್ಸಿಲ್ ಹುಟ್ಟುಹಾಕಲು ಪ್ರಚೋದನೆಯಾಯಿತು.[೬] ನಂತರ ಕೆಲವು ಸಮಾನ ಮನಸ್ಕ ವ್ಯಕ್ತಿಗಳೊಡನೆ ಸೇರಿ ಅವರು 1934ರಲ್ಲಿ "ಬೇರೆ ದೇಶಗಳೊಂದಿಗೆ ಸಂಬಂಧಗಳಿಗಾಗಿ ಬ್ರಿಟಿಶ್ ಸಮಿತಿ" ಎಂಬ ಸಂಸ್ಥೆಯನ್ನು ಸ್ಥಾಪಿಸಿದರು.[೭] "ಸಮಿತಿ" ಎಂಬ ಪದವನ್ನು ಬಹುಬೇಗನೆ ಕೈಬಿಡಲಾಯಿತು ಮತ್ತು ಅದು "ಬೇರೆ ದೇಶಗಳೊಂದಿಗೆ ಸಂಬಂಧಗಳಿಗಾಗಿ ಬ್ರಿಟಿಶ್ ಕೌನ್ಸಿಲ್" ಎಂದಾಯಿತು.[೮] ಆರಂಭದಲ್ಲಿ ಸಮಿತಿಯ ಕೆಲಸಗಳು ಎರಡು ಕ್ಷೇತ್ರಗಳಿಗೆ ಕೇಂದ್ರಿತವಾಗಿದ್ದವು, ವಿದೇಶಗಳಲ್ಲಿ ಇಂಗ್ಲಿಶ್ ಶಿಕ್ಷಣವನ್ನು ಬೆಂಬಲಿಸುವುದು ಮತ್ತು ಉಪನ್ಯಾಸ ಪ್ರವಾಸಗಳು, ಸಂಗೀತ ತಂಡಗಳು ಮತ್ತು ಕಲಾ ಪ್ರದರ್ಶನಗಳ ಮೂಲಕ ಬ್ರಿಟಿಶ್ ಸಂಸ್ಕೃತಿಯನ್ನು ಪ್ರಸಾರ ಮಾಡುವುದು. ಮೊದಲು ಗಮನಕೇಂದ್ರೀಕರಿಸಿದ ಭೌಗೋಳಿಕ ಪ್ರದೇಶವೆಂದರೆ ಮೆಡಿಟರೇನಿಯನ್ ಮತ್ತು ಮಧ್ಯ ಪ್ರಾಚ್ಯ, ನಂತರ ಯೂರೋಪ್‌ನಲ್ಲಿರುವ ಬಡದೇಶಗಳು ಮತ್ತು ನಂತರದಲ್ಲಿ ಲ್ಯಾಟಿನ್ ಅಮೆರಿಕಾ ಆಗಿತ್ತು. 1936ರಲ್ಲಿ, ಸಂಸ್ಥೆಯ ಹೆಸರನ್ನು ಅಧಿಕೃತವಾಗಿ "ಬ್ರಿಟಿಶ್ ಕೌನ್ಸಿಲ್(ಬ್ರಿಟಿಶ್ ಕೌನ್ಸಿಲ್)" ಎಂದು ಸಂಕ್ಷಿಪ್ತಗೊಳಿಸಲಾಯಿತು.[೮] ಕೌನ್ಸಿಲ್ ಅನೇಕ ಬ್ರಿಟಿಶ್ ದೂತಾವಾಸ(ಕಾನ್ಸುಲೇಟ್)ಗಳ ಮೂಲಕ ಕೆಲಸ ಮಾಡಿತು. ಆದರೆ ನಂತರದಲ್ಲಿ 1938ರಲ್ಲಿ ಈಜಿಪ್ತ್‌ನಲ್ಲಿ ಆರಂಭಿಸಿ, ವಿವಿಧ ದೇಶಗಳಲ್ಲಿ ತನ್ನ ಸ್ವಂತ ಕಚೇರಿಗಳನ್ನು ತೆರೆಯಲಾರಂಭಿಸಿತು. ಕೌನ್ಸಿಲ್‌ನ ಹೊರದೇಶದ ಅಂಗಸಂಸ್ಥೆಗಳು ಸ್ಥಳೀಯ ಸ್ಥಿತಿಗತಿಗಳು, ಅವಕಾಶಗಳು ಮತ್ತು ಬ್ರಿಟಿಶ್ ಪ್ರಯತ್ನಗಳ ಕುರಿತು ತೆರೆದಮನಸ್ಸು ಕುರಿತು ಮಾಹಿತಿಗಳನ್ನು ಸಂಗ್ರಹಿಸಿದವು. ಈ ಮಾಹಿತಿಗಳನ್ನು ಲಂಡನ್ನಿನಲ್ಲಿ ಕ್ರೋಡೀಕರಿಸಲಾಯಿತು. ಈ "ಮಾಹಿತಿ" ಸೌಲಭ್ಯಗಳನ್ನು ವಿಶ್ವ ಸಮರ IIರ ಆರಂಭದಲ್ಲಿ 1939ರಲ್ಲಿ ಹೊಸದಾಗಿ ರಚಿಸಲಾಗಿದ್ದ ಮಾಹಿತಿ ಸಚಿವಾಲಯಕ್ಕೆ ವರ್ಗಾಯಿಸಲಾಯಿತು.[೭]
ಯುದ್ಧದ ಅವಧಿಯಲ್ಲಿ ತಟಸ್ಥ ಸ್ವೀಡನ್, ಪೋರ್ಚುಗಲ್ ಮತ್ತು ಸ್ಪೈನ್ ದೇಶಗಳನ್ನು ಹೊರತುಪಡಿಸಿ, ಯೂರೋಪ್ ಮತ್ತು ಮಧ್ಯಪ್ರಾಚ್ಯದ ಹೆಚ್ಚಿನ ಕಚೇರಿಗಳನ್ನು ಮುಚ್ಚಲಾಯಿತು. ಬದಲಿಗೆ, ಇಂಗ್ಲೆಂಡ್‌ನಲ್ಲಿದ್ದ ನಿರಾಶ್ರಿತರ ಶಿಬಿರಗಳಲ್ಲಿ ಮತ್ತು ಅಲ್ಲಿದ್ದ ಮಿತ್ರಕೂಟದ ಸೈನಿಕರಿಗೆ ಶೈಕ್ಷಣಿಕ ಅವಕಾಶಗಳನ್ನು ಒದಗಿಸಲಾಯಿತು. 1939ರಲ್ಲಿ, ಈ ಸೇವೆಗಳನ್ನು ನಿರ್ವಹಣೆ ಮಾಡಲು "ನಿವಾಸಿ ವಿದೇಶೀಯರ ವಿಭಾಗ'ವನ್ನು ಸ್ಥಾಪಿಸಲಾಯಿತು. ಯುದ್ಧದ ಅಂತ್ಯದ ಸಮಯದಲ್ಲಿ ಲಂಡನ್, ಲಿವರ್‌ಪೂಲ್, ಮ್ಯಾಂಚೆಸ್ಟರ್, ಬರ್ಮಿಂಗ್‌ಹ್ಯಾಮ್, ಆಕ್ಸ್‌ಫರ್ಡ್, ಸ್ಟ್ರಾಟ್‌ಫೋರ್ಡ್-ಆನ್-ಅವೊನ್, ಮತ್ತು ಇಂಗ್ಲೆಂಡ್‌ನಲ್ಲಿ ವಿಲ್ಟನ್, ಎಡಿನ್‌ಬರೊ ಮತ್ತು ಸ್ಕಾಟ್‌ಲ್ಯಾಂಡ್‌ನಲ್ಲಿ ಲೀತ್ ಮತ್ತು ವೇಲ್ಸ್‌ನಲ್ಲಿ ಕಾರ್ಡಿಫ್‌ಗಳಲ್ಲಿ ಬ್ರಿಟಿಶ್ ಕೌನ್ಸಿಲ್ ಸಹಾಯ ಕೇಂದ್ರಗಳು ಇದ್ದವು. ಜೊತೆಗೆ ಅತಿಥಿ ವಿಜ್ಞಾನಿಗಳ ಸಂಘ ಮತ್ತು ಮಿತ್ರಕೂಟದ ವಕೀಲರ ವಿರಾಮಕೋಣೆಗಳ ಕೇಂದ್ರವೂ ಆಗಿದ್ದಿತು.[೯] 1940ರಲ್ಲಿ ಬ್ರಿಟಿಶ್ ಕೌನ್ಸಿಲ್‌ಗೆ VIನೇ ಜಾರ್ಜ್ ದೊರೆಯಿಂದ ಒಂದು ರಾಜ ಸನ್ನದನ್ನು ನೀಡಲಾಯಿತು. ಯುದ್ಧಾನಂತರ, ಬ್ರಿಟಿಶ್ ಕೌನ್ಸಿಲ್ ಯೂರೋಪ್‌ನ ಪುನರ್‌ನಿರ್ಮಾಣದಲ್ಲಿ ತೀವ್ರವಾಗಿ ತೊಡಗಿಸಿಕೊಂಡಿತು. ಆದರೆ ಬೇರೆ ಅನೇಕ ಸ್ಥಳಗಳಲ್ಲಿದ್ದ ತನ್ನ ಕಚೇರಿಗಳನ್ನು ಹಣಕಾಸಿನ ಕೊರತೆಯಿಂದಾಗಿ ಮುಚ್ಚಿತು.[೭] ಈ ಕ್ರಮಗಳಲ್ಲಿ ಮೊದಲನೆಯದಾಗಿ, 1944ರ ಆಗಸ್ಟ್‌ನಲ್ಲಿ, ಪ್ಯಾರಿಸ್ ವಿಮೋಚನೆ ನಂತರ, ಆಸ್ಟಿನ್ ಗಿಲ್ ಅವರನ್ನು ಪ್ಯಾರಿಸ್ ಕಚೇರಿಯನ್ನು ಪುನಾಸ್ಥಾಪಿಸಲು ಕಳುಹಿಸಿಕೊಡಲಾಯಿತು. ನಂತರ ಕೆಲವೇ ದಿನಗಳಲ್ಲಿ ಅಲ್ಲಿಗೆ ಓಲ್ಡ್ ವಿಕ್ ಕಂಪನಿ, ಜ್ಯುಲಿಯನ್ ಹಕ್ಸ್‌ಲೆ ಮತ್ತು ಟಿ.ಎಸ್. ಎಲಿಯಟ್ ಅವರ ಪ್ರವಾಸವನ್ನು ಏರ್ಪಡಿಸಲಾಯಿತು[೧೦] ನಿರಾಶ್ರಿತರು ಮನೆಗೆ ತೆರಳುತ್ತಿದ್ದಂತೆ, ದೇಶದೊಳಗಿನ ಅರ್ಧದಷ್ಟು ಸಂಸ್ಥೆಗಳು ಮುಚ್ಚಿದವು, ಆದರೆ ಇನ್ನುಳಿದವು ವಿದೇಶೀ ವಿದ್ಯಾರ್ಥಿಗಳಿಗೆ ಮತ್ತು ಕಿರು-ಭೇಟಿ ನೀಡುವ ಪ್ರವಾಸಿಗರಿಗೆ ಸಹಾಯ ಒದಗಿಸುವ ಹೊಸ ಧ್ಯೇಯವನ್ನು ಕೈಗೆತ್ತಿಕೊಂಡವು.
ಪುನರ್‌ನಿರ್ಮಾಣದ ಪ್ರಯತ್ನಗಳ ನಂತರ, ವಿದೇಶಾಂಗ ಕಚೇರಿಯಿಂದ ಬರುತ್ತಿದ್ದ ಅನುದಾನ ಕಡಿಮೆಯಾಯಿತು ಮತ್ತು ಪೂರ್ವ ಯೂರೋಪ್, ಚೀನಾ, ಮತ್ತು ಪರ್ಷಿಯಾ ಸೇರಿದಂತೆ ಅನೇಕ ದೇಶಗಳಲ್ಲಿರುವ ಬ್ರಿಟಿಶ್ ಕೌನ್ಸಿಲ್ ಕಚೇರಿಗಳನ್ನು ರಾಜಕೀಯ ಕಾರಣಗಳಿಂದಾಗಿ ಹಿಂತೆಗೆದುಕೊಳ್ಳುವುದು ಅನಿವಾರ್ಯವಾಯಿತು. ಒಟ್ಟಾರೆಯಾಗಿ ವಿಶ್ವ-ವ್ಯಾಪಿ ಸಂಪರ್ಕಜಾಲವು ಕೆಟ್ಟುಹೋಯಿತು.[೧೧] ಬ್ರಿಟಿಶ್ ಕೌನ್ಸಿಲ್ ಮೂಲೋದ್ದೇಶ (ರೆಸಾಙ ಡೆಟ್ರೆ) ಕ್ಕೆ ನಾಲ್ಕು ಸರ್ಕಾರಗಳ ವಿಶ್ಲೇಷಣಾ ಸಮಿತಿಗಳ ಸರಣಿಯಿಂದ ಆಘಾತ ಒದಗಿತು, ಅವೆಂದರೆ ಕ್ರಮವಾಗಿ ಡ್ರೊಗೆಡಾ, ಹಿಲ್, ವೊಸ್ಪರ್ ಮತ್ತು ಡಂಕನ್ ವರದಿಗಳು. ಬ್ರಿಟಿಶ್ ಕೌನ್ಸಿಲ್ ಉಳಿಯಿತು, ಆದರೆ ಸ್ವಲ್ಪ ಕೆಳಮಟ್ಟಕ್ಕಿಳಿಯಿತು.
ಖರ್ಚುಗಳ ಹಗರಣ
[ಬದಲಾಯಿಸಿ]ಮಾರ್ಕ್ ಲಾಂಕಾಸ್ಟರ್, ಮೈಕೇಲ್ ಮಾರ್ಟಿನ್ (ರಾಜಕಾರಣಿ), ಮತ್ತು ಇನ್ನಿತರ ಸಂಸದರು ತೆರಿಗೆದಾರರ ಅನುದಾನ ಪಡೆದ ಬ್ರಿಟಿಶ್ ಕೌನ್ಸಿಲ್ ಪ್ರವಾಸಗಳಿಗಾಗಿ ವ್ಯಯಿಸಿದ ಖರ್ಚುಗಳ ಗಲಭೆಯಲ್ಲಿ ಭಾಗಿಯಾಗಿದ್ದರು. 2008ರಲ್ಲಿ ಮಾರ್ಕ್ ಲಾಂಕಾಸ್ಟರ್ ಬ್ಯಾಂಕಾಕ್‌ಗೆ ಬ್ರಿಟಿಶ್ ಕೌನ್ಸಿಲ್‌ನೊಂದಿಗೆ ಎರಡು ದಿನಗಳ ವಿಚಾರಸಂಕಿರಣಕ್ಕಾಗಿ 5,018 ಪೌಂಡ್ ವೆಚ್ಚದಲ್ಲಿ ಬ್ಯುಸಿನೆಸ್ ದರ್ಜೆಯಲ್ಲಿ ವಿಮಾನಯಾನ ಮಾಡಿದ್ದರು. ಲೇಬರ್ ಪಕ್ಷದ ಸಂಸದ ಸ್ಯಾಲ್ಲಿ ಕೀಬಲ್ ಎಕಾನಮಿ ದರ್ಜೆಯಲ್ಲಿ ವಿಮಾನದಲ್ಲಿ ಪ್ರಯಾಣಿಸಿ, ನಂತರ ಬ್ಯುಸಿನೆಸ್ ದರ್ಜೆಯಲ್ಲಿ ಮರಳಿ, ಒಟ್ಟು 2,452 ಪೌಂಡ್ ಖರ್ಚು ಮಾಡಿದ್ದರು. ಸಂಸದರು ಸಾಮಾನ್ಯವಾಗಿ ಹೊರಗಿನ ಸಂಸ್ಥೆಗಳಿಂದ ಪಡೆಯುವ ಸೌಲಭ್ಯಗಳನ್ನು ಘೋಷಿಸಲೇಬೇಕು. ಜೊತೆಗೆ ಉಡುಗೊರೆಗಳಿಗೆ ಅಗತ್ಯಕ್ರಮಗಳಿಂದ ವಿನಾಯಿತಿ ಪಡೆಯುವ ಅಂಗಸಂಸ್ಥೆಗಳ ಪಟ್ಟಿಯಲ್ಲಿ ಬ್ರಿಟಿಶ್ ಕೌನ್ಸಿಲ್ ಇಲ್ಲ. ಈ ಪ್ರವಾಸಗಳ ಕುರಿತು ಮಾಹಿತಿ ಬಿಡುಗಡೆ ಮಾಡುವುದನ್ನು ತಡೆಯುವ ವಿಶೇಷ ಪ್ರಮಾಣಪತ್ರಕ್ಕೆ "ಪಾರ್ಲಿಮೆಂಟರಿ ಸೌಲಭ್ಯ" ಎಂದು ಉಲ್ಲೇಖಿಸಿ, ಶ್ರೀ. ಮಾರ್ಟಿನ್ ಅವರು ಸಹಿ ಹಾಕಿದರು. ಇದನ್ನು ಎಲ್ಲ ಪಕ್ಷಗಳ ಸಂಸದರು ಮತ್ತು ನಾಗರಿಕ ಸ್ವಾತಂತ್ರ್ಯ ವಕೀಲರುಗಳು ನಿಂದಿಸಿದರು.[೧೨]
2010ರ ಜೂನ್‌ನಲ್ಲಿ ಬ್ರಿಟಿಶ್ ಕೌನ್ಸಿಲ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾರ್ಟಿನ್ ಡೇವಿಡ್‌ಸನ್ ಘೋಷಿಸಲಾದ ಖರ್ಚುಗಳು ಸಹಜವಾಗಿಯೇ ಲಂಡನ್‌ನಲ್ಲಿ ರಾತ್ರಿ ಉಳಿಯುವುದಕ್ಕೆ ಇರುವ ಬ್ರಿಟಿಶ್ ಕೌನ್ಸಿಲ್‌ನ ಸ್ವಂತ ಆಂತರಿಕ ನಿಯಮಗಳನ್ನೇ ಉಲ್ಲಂಘಿಸಿವೆ ಎಂಬ ಮಾಧ್ಯಮಗಳ ಟೀಕೆ ಎದುರಿಸಿದರು. http://www.thisislondon.co.uk/standard/article-23835659-british-council-boss-defends-pound-4600-hotel-expenses.do Archived 2012-09-13 at Archive.is
ಉಪಕ್ರಮಗಳು
[ಬದಲಾಯಿಸಿ]ಬೋಧನೆ
[ಬದಲಾಯಿಸಿ]53 ದೇಶಗಳಲ್ಲಿ ಒಟ್ಟು 70 ಬ್ರಿಟಿಶ್ ಕೌನ್ಸಿಲ್ ಬೋಧನಾ ಕೇಂದ್ರಗಳಿವೆ. ಇವು 2006/07ರಲ್ಲಿ 1,189,000 ತರಗತಿ ಗಂಟೆಗಳನ್ನು 300,000 ಕಲಿಕಾದಾರರಿಗೆ ಕಲಿಸಿವೆ.[೧೩] ಬ್ರಿಟಿಶ್ ಕೌನ್ಸಿಲ್ 'ವಿಶ್ವದ ಅತಿದೊಡ್ಡ ಇಂಗ್ಲಿಶ್ ಭಾಷೆ ಬೋಧನಾ ಸಂಸ್ಥೆ' ಎನ್ನಲಾಗಿದೆ [೩] Archived 2011-07-07 ವೇಬ್ಯಾಕ್ ಮೆಷಿನ್ ನಲ್ಲಿ..
ಇದರ ಪರೀಕ್ಷಾ ಕೇಂದ್ರಗಳಲ್ಲಿ, ಬ್ರಿಟಿಶ್ ಕೌನ್ಸಿಲ್ ಪ್ರತಿವರ್ಷ 1.5 ದಶಲಕ್ಷ ಬ್ರಿಟನ್ನಿನ ಪರೀಕ್ಷೆಗಳನ್ನು ಸುಮಾರು ಒಂದು ದಶಲಕ್ಷ ಅಭ್ಯರ್ಥಿಗಳಿಗೆ ನಡೆಸುತ್ತದೆ. ಹೊರದೇಶಗಳಲ್ಲಿ ಲಭ್ಯವಿರುವ ವೃತ್ತಿಪರ ಅರ್ಹತೆಗಳ ಶ್ರೇಣಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಇದು ಬ್ರಿಟನ್ನಿನ ಪ್ರಶಸ್ತಿ ಅಂಗಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದೆ. ಕೌನ್ಸಿಲ್ ಸಿಒಬಿಐಎಸ್, ಎನ್‌ಎಬಿಎಸ್‌ಎಸ್, ಮತ್ತು ಅಂತಾರಾಷ್ಟ್ರೀಯ ಶಾಲೆಗಳ ಐರೋಪ್ಯ ಕೌನ್ಸಿಲ್ (ಯೂರೋಪಿಯನ್ ಕೌನ್ಸಿಲ್ ಆಫ್ ಇಂಟರ್‌ನ್ಯಾಶನಲ್ ಸ್ಕೂಲ್ಸ್) ಇತ್ಯಾದಿ ಸಂಸ್ಥೆಗಳ ಮೂಲಕ ಅಂತಾರಾಷ್ಟ್ರೀಯವಾಗಿ ಕಾರ್ಯನಿರ್ವಹಿಸುವ ಬ್ರಿಟಿಶ್ ಶಾಲೆ ಮೇಲ್ವಿಚಾರಣೆಯನ್ನೂ ಮಾಡುತ್ತದೆ.
ಜಾಗತಿಕ ಐಇಎಲ್‌ಟಿಎಸ್ ಇಂಗ್ಲಿಶ್ ಭಾಷೆ ಪ್ರಮಾಣಕ (ಸ್ಟಾಂಡರ್ಡೈಸೇಶನ್) ಪರೀಕ್ಷೆಯನ್ನು ಕೇಂಬ್ರಿಜ್ ವಿಶ್ವವಿದ್ಯಾಲಯ ಇಎಸ್‌ಒಎಲ್ ಪರೀಕ್ಷೆಗಳು ಮತ್ತು ಐಡಿಪಿ ಎಜುಕೇಶನ್ ಆಸ್ಟ್ರೇಲಿಯಾ ಜೊತೆ ಸೇರಿ ಕೌನ್ಸಿಲ್ ಜಂಟಿಯಾಗಿ ನಡೆಸುತ್ತದೆ.
ಇಂಗ್ಲೆಂಡ್‌ನಲ್ಲಿರುವ ಶಾಲೆಗಳಲ್ಲಿ, ಬ್ರಿಟಿಶ್ ಕೌನ್ಸಿಲ್ ಶಿಕ್ಷಣ ಇಲಾಖೆಯೊಂದಿಗೆ ಸೇರಿ ಮೂರು ದಶಲಕ್ಷ ಮಕ್ಕಳು ಇಂಟರ್‌ನ್ಯಾಶನಲ್ ಸ್ಕೂಲ್ ಪ್ರಶಸ್ತಿಯನ್ನು ಗಳಿಸಲು ಸಹಾಯ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ, ಈ ಪ್ರಶಸ್ತಿಯು "ಬೇರೆ ಸಂಸ್ಕೃತಿಗಳ ಅರ್ಥೈಸಿಕೊಳ್ಳುವಿಕೆ ಮತ್ತು ಆಸ್ವಾದನೆಯನ್ನು" ಹೆಚ್ಚಿಸಲು ಸಹಾಯ ಮಾಡುತ್ತದೆ. 2,700 ಬ್ರಿಟನ್ ಶಾಲೆಗಳು ಈ ಪ್ರಶಸ್ತಿ ಸಾಧಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಬ್ರಿಟನ್‌ನಲ್ಲಿರುವ ಮಕ್ಕಳನ್ನು ಕರೆತಂದು ಆ ಪ್ರದೇಶದ ಮಕ್ಕಳೊಂದಿಗೆ ಒಡನಾಡುವಂತೆ ಮಾಡುವ ಸ್ಕೂಲ್ ಲಿಂಕ್ಸ್ ಯೋಜನೆಯನ್ನು ಮಧ್ಯಪ್ರಾಚ್ಯದಲ್ಲಿ ಬ್ರಿಟಿಶ್ ಕೌನ್ಸಿಲ್ ಕಾರ್ಯಗತಗೊಳಿಸಿದೆ. ಇದು ಬ್ರಿಟನ್ ಕುರಿತ ನಕಾರಾತ್ಮಕ ಗ್ರಹಿಕೆಗಳನ್ನು ಕಡಿಮೆಗೊಳಿಸಿ, "ಅಂತರ-ಸಾಂಸ್ಕೃತಿಕ ಸಂವಾದ"ಗಳನ್ನು ಪೋಷಿಸುತ್ತದೆ. ಇಂದಿನವರೆಗೆ,ಮಧ್ಯಪ್ರಾಚ್ಯದಲ್ಲಿರುವ 153 ಶಾಲೆಗಳು 53 ಸಹಭಾಗಿತ್ವದ ಯೋಜನೆಗಳಲ್ಲಿ ಭಾಗಿಯಾಗಿವೆ.
ವಿದೇಶಗಳಲ್ಲಿ ಕೆಲಸಗಳು
[ಬದಲಾಯಿಸಿ]ಬ್ರಿಟನ್ ಒಳಗೆ ಬ್ರಿಟಿಶ್ ಕೌನ್ಸಿಲ್ ತಾಂತ್ರಿಕ ಅನುಭವಕ್ಕಾಗಿ ವಿದ್ಯಾರ್ಥಿಗಳ ವಿನಿಮಯದ ಅಂತಾರಾಷ್ಟ್ರೀಯ ಸಂಘ (ಐಎಇಎಸ್‌ಟಿಇ))ವನ್ನು ನಡೆಸುತ್ತದೆ. ಈ ಯೋಜನೆಯು ವಿಶ್ವಾದ್ಯಂತ ಸುಮಾರು 80 ದೇಶಗಳಲ್ಲಿ ಜಾರಿಯಲ್ಲಿದೆ[೧೪] ಮತ್ತು ವಿದ್ಯಾರ್ಥಿಗಳಿಗೆ ಬ್ರಿಟನ್ನಿನಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ವಿದೇಶಗಳಲ್ಲಿ ಇಂಟರ್‌ನ್ಯಾಶನಲ್ ಪ್ಲೇಸ್‌ಮೆಂಟ್ ವರ್ಕಿಂಗ್‌ನ ಭಾಗವಾಗಿ ಇಂಟರ್ನ್‌ಶಿಪ್ ತೆಗೆದುಕೊಳ್ಳುವ ಅವಕಾಶ ಒದಗಿಸುತ್ತದೆ.[೧೫]
ತಾಂತ್ರಿಕ ಪದವಿ ಅಂದರೆ ಇಂಜಿನಿಯರಿಂಗ್, ವಿಜ್ಞಾನ, ವಾಸ್ತುಶಿಲ್ಪ ಅಥವಾ ಫಾರ್ಮಸಿ ಓದುತ್ತಿರುವ ಅತ್ಯಂತ ಪ್ರತಿಭಾನ್ವಿತರಾದ ಮತ್ತು ಎರಡನೇ ವರ್ಷ ಅಥವಾ ಅದಕ್ಕಿಂತ ನಂತರದ ವರ್ಷಗಳಲ್ಲಿ ಓದುತ್ತಿರುವ, ಹಣಪಡೆದು, ಕೋರ್ಸ್‌ಗಳಿಗೆ ಸಂಬಂಧಿಸಿದ ಇಂಟರ್ನ್‌ಶಿಪ್ ಮಾಡುವ ತೀವ್ರ ಆಕಾಂಕ್ಷೆಯುಳ್ಳ ವಿದ್ಯಾರ್ಥಿಗಳನ್ನು ಈ ಯೋಜನೆಯು ತೆಗೆದುಕೊಳ್ಳುತ್ತದೆ. ಪ್ಲೇಸ್‌ಮೆಂಟ್‌ಗಳು ಸಾಮಾನ್ಯವಾಗಿ ಬೇಸಿಗೆ ತಿಂಗಳುಗಳಲ್ಲಿ 8–12 ವಾರಗಳ ಅವಧಿಗೆ ಇರುತ್ತವೆ. ಆದರೆ ತಮ್ಮ ಪ್ಲೇಸ್‌ಮೆಂಟ್ ಅಥವಾ ಗ್ಯಾಪ್ ವರ್ಷದಲ್ಲಿ ವಿದೇಶಗಳಲ್ಲಿ ಕೆಲಸ ಮಾಡುವ ಆಸಕ್ತಿಯುಳ್ಳ ವ್ಯಕ್ತಿಗಳಿಗೆ ಸರಿಹೊಂದುವ ಸ್ಥಾನಗಳು ಇದ್ದಲ್ಲಿ ಒಂದು ವರ್ಷದವರೆಗೂ ಇದು ಮುಂದುವರೆಯುವ ಅವಕಾಶಗಳೂ ಇರುತ್ತವೆ.
ಅತ್ಯುತ್ತಮ ಸಾಮರ್ಥ್ಯವುಳ್ಳ ವಿದೇಶೀ ಪದವಿಶಿಕ್ಷಣದ ವಿದ್ಯಾರ್ಥಿಗಳನ್ನು ನೇಮಿಸಿಕೊಳ್ಳಲು ಉದ್ಯೋಗದಾತರಿಗೂ ಈ ಕಾರ್ಯಕ್ರಮವು ಅವಕಾಶ ನೀಡುತ್ತದೆ.[೧೬] ಪ್ರಸ್ತುತ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವೀಧರರು ಅಥವಾ ಇನ್ನಿತರ ಕ್ಷೇತ್ರಗಳ ಪದವೀಧರರ ಕೊರತೆ ಎದುರಿಸುತ್ತಿರುವ ಉದ್ಯಮದಲ್ಲಿರುವ ಅನೇಕ ಕಂಪನಿಗಳಿಗೆ ಇದು ಕೆಲಸಗಾರರ ಒಂದು ಪ್ರಮುಖ ಮೂಲವನ್ನು ಒದಗಿಸುತ್ತದೆ.
ಕ್ರೀಡಾ ಉತ್ಸವಗಳು
[ಬದಲಾಯಿಸಿ]40 ದೇಶಗಳಲ್ಲಿರುವ ಪ್ಲೇಯಿಂಗ್ ಫೀಲ್ಡ್‌ಗಳಲ್ಲಿ ಯುವಜನರು ಹೊಸ ನಾಯಕತ್ವ ಮತ್ತು ತಂಡ-ನಿರ್ಮಾನದ ಕೌಶಲಗಳನ್ನು "ಡ್ರೀಮ್ಸ್+ಟೀಮ್ಸ್" ಕ್ರೀಡಾ ಉತ್ಸವಗಳ ಮೂಲಕ ಕಲಿತಿದ್ದಾರೆ ಎಂದು ಬ್ರಿಟಿಶ್ ಕೌನ್ಸಿಲ್ ಭರವಸೆ ಹೊಂದಿದೆ. ಈ ಯೋಜನೆಯು 5,500 "ಯುವ ನಾಯಕ"ರನ್ನು ತರಬೇತಿಗೊಳಿಸಿದೆ ಮತ್ತು 280,000 ಜನರನ್ನು ಅವರ ಶಾಲೆಗಳು ಮತ್ತು ಸಮುದಾಯಗಳಲ್ಲಿ ತಲುಪಿದೆ. "ಜಾಗತಿಕ ಪೌರತ್ವ"ಕ್ಕಾಗಿ ಸಿದ್ಧಗೊಳ್ಳಲು ಯುವ ಜನರಿಗೆ ಹೆಚ್ಚು ಸಹಾಯ ಮಾಡಲು ಬ್ರಿಟಿಶ್ ಕೌನ್ಸಿಲ್ ತನ್ನ ಚಟುವಟಿಕೆಗಳನ್ನು ವಿಸ್ತರಿಸುತ್ತಿದೆ.
ಶಾಂತಿಗಾಗಿ ಇಂಗ್ಲಿಶ್
[ಬದಲಾಯಿಸಿ]"ಶಾಂತಿಪಾಲನಾ ಇಂಗ್ಲಿಶ್" ಆಫ್ರಿಕಾ ಮತ್ತು ಇನ್ನಿತರ ದೇಶಗಳಲ್ಲಿ ಬ್ರಿಟಿಶ್ ಕೌನ್ಸಿಲ್‌ನ ಇಂಗ್ಲಿಶ್ ಭಾಷೆ ಕೆಲಸದ ಒಂದು ಪ್ರಮುಖ ಮತ್ತು ವೃದ್ಧಿಸುತ್ತಿರುವ ಅಂಶವಾಗಿದೆ. ಶಾಂತಿಪಾಲನಾ ಇಂಗ್ಲಿಶ್ ಯೋಜನೆಯು (PEP) ಸೇನಾ ಸಿಬ್ಬಂದಿಗಳ ಇಂಗ್ಲಿಶ್ ಭಾಷೆ ಕೌಶಲವನ್ನು ಉತ್ತಮಪಡಿಸಲು ವಿದೇಶಾಂಗ ಮತ್ತು ಕಾಮನ್‌ವೆಲ್ತ್ ಕಚೇರಿ ಮತ್ತು ರಕ್ಷಣಾ ಸಚಿವಾಲಯದೊಂದಿಗೆ ಕೆಲಸ ಮಾಡುತ್ತದೆ. ಪಿಇಪಿಯು ವಿಶ್ವಾದ್ಯಂತದ 28 ದೇಶಗಳ ಸುಮಾರು 50,000 ಸೇನಾ ಮತ್ತು ಪೊಲೀಸ್ ಸೇವೆಯ ಸಿಬ್ಬಂದಿಗಳನ್ನು ತರಬೇತಿಗೊಳಿಸಲು ಸಹಾಯ ಮಾಡಿದೆ. ಲಿಬಿಯಾ,[೪] ಇಥಿಯೋಪಿಯಾ ಮತ್ತು ಜಾರ್ಜಿಯಾ ಕೂಡ ಈ ದೇಶಗಳಲ್ಲಿ ಸೇರಿವೆ.[೧೭] ಶಾಂತಿಪಾಲನಾ ಇಂಗ್ಲಿಶ್ ಯೋಜನೆಯನ್ನು ಬ್ರಿಟಿಶ್ ಕೌನ್ಸಿಲ್ ನಿರ್ವಹಣೆ ಮಾಡುತ್ತದೆ ಮತ್ತು ಇದಕ್ಕೆ ಬ್ರಿಟನ್ ಸರ್ಕಾರವು ಜಾಗತಿಕ ಸಂಘರ್ಷ ತಡೆ ನಿಧಿಯಿಂದ ಹಣಕಾಸು ಒದಗಿಸುತ್ತದೆ.
ಆನ್‌ಲೈನ್ ಉಪಕ್ರಮಗಳು
[ಬದಲಾಯಿಸಿ]2007ರಲ್ಲಿ, ಬ್ರಿಟಿಶ್ ಕೌನ್ಸಿಲ್ ಚೀನಾ ರೀಜನ್ ಕಚೇರಿಯು ಚೀನಾದ ಮುಖ್ಯನಗರಗಳು ಮತ್ತು ಹಾಂಗ್‌ಕಾಂಗ್‌ಗಳಲ್ಲಿ ಇಂಗ್ಲಿಶ್ ಕಲಿಯುವವರು ಮತ್ತು ಶಿಕ್ಷಕರಿಗಾಗಿ ಒಂದು ಹೊಸ ಸಮುದಾಯ ಅಂತರ್ಜಾಲತಾಣವನ್ನು ಆರಂಭಿಸಿದೆ. ಈ ತಾಣವು ಈಗಾಗಲೇ 30,000ಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ. ಇಂಗ್ಲಿಶ್ ಆನ್‌ಲೈನ್ ಸಾಮಾಜಿಕ ಸಂಪರ್ಕಜಾಲ (ಸೋಷಿಯಲ್ ನೆಟ್‌ವರ್ಕಿಂಗ್) ಸೌಲಭ್ಯವನ್ನು ಹೊಂದಿದೆ, ಜೊತೆಗೆ ಇಂಗ್ಲಿಶ್ ಕಲಿಯುವವರಿಗೆ ಒಂದು ಶ್ರೇಣಿಯ ಪಾಡ್‌ಕಾಸ್ಟ್‌ಗಳನ್ನು ಹೊಂದಿದೆ-[೪] Archived 2009-02-04 ವೇಬ್ಯಾಕ್ ಮೆಷಿನ್ ನಲ್ಲಿ..[೧೮]
ಬ್ರಿಟಿಶ್ ಕೌನ್ಸಿಲ್ 2007ರ ಪ್ರಕಾರ ಇಂಗ್ಲಿಶ್ ಕಲಿಯುವವರಿಗೆ ಒಂದು ಶೈಕ್ಷಣಿಕ ದ್ವೀಪವನ್ನು ಹುಟ್ಟುಹಾಕಲು ಸೆಕೆಂಡ್ ಲೈಫ್ ಟೀನ್ ಗ್ರಿಡ್ ಅನ್ನು ಪ್ರವೇಶಿಸಿದೆ.[೧೯][೨೦]
ಇತರೆ ಚಟುವಟಿಕೆಗಳು
[ಬದಲಾಯಿಸಿ]ಕೆಫೇಸ್ ಸೈಂಟಿಫಿಕ್ಸ್
[ಬದಲಾಯಿಸಿ]ಬ್ರಿಟನ್ ಮತ್ತು ಇನ್ನಿತರ ದೇಶಗಳಲ್ಲಿ, ವಿಜ್ಞಾನದ ಕುರಿತು ಸೃಜನಶೀಲ ಕಲ್ಪನೆಗಳಲ್ಲಿ ಜನರನ್ನು ತೊಡಗಿಸಲು ಕೆಫೇಸ್ ಸೈಂಟಿಫಿಕ್ಸ್ ಎಂಬ, ಅನೌಪಚಾರಿಕ ಕಾರ್ಯಕ್ರಮಗಳನ್ನು ಬ್ರಿಟಿಶ್ ಕೌನ್ಸಿಲ್ ನಡೆಸುತ್ತದೆ. ಈ ಕಾರ್ಯಕ್ರಮವು ಕೆಫೆಗಳು, ಬಾರ್‌ಗಳು ಮತ್ತು ಪುಸ್ತಕದ ಅಂಗಡಿಗಳಲ್ಲಿ ನಡೆಯುತ್ತವೆ. ಇವು ಬ್ರಿಟನ್ ವಿಜ್ಞಾನಿ ಅಥವಾ ವಿಜ್ಞಾನ ಬರಹಗಾರರಿಂದ ಕಿರು ಭಾಷಣದೊಂದಿಗೆ ಆರಂಭವಾಗುತ್ತವೆ. ಈ ಕಾರ್ಯಕ್ರಮಗಳು ಭಾರತ ಮತ್ತು ಮಲೇಷಿಯದಷ್ಟು ದೂರದ ಪ್ರೇಕ್ಷಕರನ್ನು ಡಾರ್ವಿನ್‌ರಿಂದ ಡಿಎನ್‌ಎವರೆಗೆ, ಜಾಗತಿಕ ತಾಪಮಾನ ಏರಿಕೆಯಿಂದ ಕೃತಕ ಬುದ್ಧಿಮತ್ತೆಯವರೆಗೆ ವಿವಿಧ ಸಾಮಾಜಿಕ ಮತ್ತು ನೈತಿಕ ವಿಚಾರಗಳ ಕುರಿತು ಚರ್ಚಿಸಲು ಒಂದೆಡೆ ಸೇರುವಂತೆ ಮಾಡಿದೆ.
ಜೀರೋಕಾರ್ಬನ್‌ಸಿಟಿ (ಶೂನ್ಯಇಂಗಾಲನಗರ)
[ಬದಲಾಯಿಸಿ]ಜೀರೋಕಾರ್ಬನ್‌ಸಿಟಿ[೨೧] ಯು ವಿಶ್ವದ ನಗರಗಳು ಎದುರಿಸುತ್ತಿರುವ ಹವಾಮಾನ ಬದಲಾವಣೆ ಮತ್ತು ಶಕ್ತಿಯ ಸವಾಲುಗಳು ಕುರಿತು ಜಾಗೃತಿ ಹುಟ್ಟುಹಾಕಲು ಬ್ರಿಟಿಶ್ ಕೌನ್ಸಿಲ್ ಆಯೋಜಿಸುವ ಜಾಗತಿಕ ಆಂದೋಲನವಾಗಿದೆ. ಕೌನ್ಸಿಲ್ ತನ್ನ ವಿಜ್ಞಾನದ ಕೆಲಸಗಳಿಗೆ ಹವಾಮಾನ ಬದಲಾವಣೆಯನ್ನು ಮುಖ್ಯ ವಿಷಯವನ್ನಾಗಿ ಆರಿಸಿಕೊಂಡಿದೆ, "ಈ ಪ್ರಮುಖ ಸಮಸ್ಯೆಯನ್ನು ನಿಭಾಯಿಸುವಲ್ಲಿ ಬ್ರಿಟನ್ ತೋರಿಸುತ್ತಿರುವ ನಾಯಕತ್ವ ಮತ್ತು ಜಾಗತಿಕ ಸವಾಲುಗಳನ್ನು ಎದುರಿಸುವ ಪ್ರಯತ್ನಗಳನ್ನು ಪುನಶ್ಚೇತನಗೊಳಿಸಲು ಜಿ8 ಮತ್ತು ಇಯು ಪ್ರೆಸಿಡೆನ್ಸೀಸ್‌ಗಳನ್ನು ಬಳಸುವ ಪ್ರಧಾನ ಮಂತ್ರಿಯವರ ಬದ್ಧತೆಯನ್ನು ಎತ್ತಿಹಿಡಿಯಲು" ಕೌನ್ಸಿಲ್ ಇದನ್ನು ಆಯ್ಕೆ ಮಾಡಿಕೊಂಡಿದೆ. ಈ ಕಾರ್ಯಕ್ರಮವು ಒಂದು ಪ್ರವಾಸೀ ಪ್ರದರ್ಶನ, ಒಂದು ಆನ್‌ಲೈನ್ ಜಾಗತಿಕ ಚರ್ಚೆ ಮತ್ತು ಉಪನ್ಯಾಸಗಳು ಹಾಗೂ ವಿಚಾರಸಂಕಿರಣಗಳ ಒಂದು ಸರಣಿಗಳನ್ನು ಒಳಗೊಂಡಿದೆ. 62 ದೇಶಗಳು ಜೀರೋಕಾರ್ಬನ್‌ಸಿಟಿ ಕಾರ್ಯಕ್ರಮದಲ್ಲಿ ಭಾಗವಹಿಸಿವೆ ಮತ್ತು 2.5 ದಶಲಕ್ಷ ಜನರನ್ನು ಆಂದೋಲನದ ಮೂಲಕ ನೇರವಾಗಿ ತಲುಪಲಾಗಿದೆ.
ಪರಿಸರ, ಆಹಾರ ಮತ್ತು ಗ್ರಾಮೀಣ ವ್ಯವಹಾರಗಳ ಇಲಾಖೆಯ 2006ರ ಒಂದು ಯಶಸ್ವೀ ಯುವ ಆಂದೋಲನದ ನಂತರ, ಬ್ರಿಟಿಶ್ ಕೌನ್ಸಿಲ್ "ಹವಾಮಾನ ಬದಲಾವಣೆ ಚಾಂಪಿಯನ್ಸ್" ಕಾರ್ಯಕ್ರಮವನ್ನು ಆರಂಭಿಸಿತು. ಇದರಲ್ಲಿ ಜಿ8+5ಅನ್ನು ಪ್ರತಿನಿಧಿಸುವ 13 ದೇಶಗಳಿಂದ (ಪ್ರತಿ ದೇಶದಿಂದ ಮೂವರು) ಯುವ ಚಾಂಪಿಯನ್ನರನ್ನು ಆಯ್ಕೆ ಮಾಡಲಾಗುವುದು.[2] ಯೋಜನೆಯ ಗುರಿಯು ಈ ಯುವ ರಾಯಭಾರಿಗಳಿಗೆ ಹವಾಮಾನ ಬದಲಾವಣೆಯ ಪರಿಣಾಮಗಳು ಮತ್ತು ಅವರದೇ ಸಮುದಾಯಗಳಲ್ಲಿ ಇದಕ್ಕೆ ನಿವಾರಣೋಪಾಯಗಳ ಕುರಿತು ಜಾಗೃತಿಯನ್ನು ಹರಡಲು ಆಸ್ಪದ ಕಲ್ಪಿಸುವುದಾಗಿದೆ.
ಚಾಂಪಿಯನ್‌ಗಳು ಮೊದಲು 2008ರಲ್ಲಿ ಲಂಡನ್‌ಗೆ ಭೇಟಿ ನೀಡಿದರು. ಅಲ್ಲಿ ಅವರು ಜಿ8 ಪರಿಸರ ಸಚಿವರಿಗೆ ಮೂರು ಮಹತ್ವಾಕಾಂಕ್ಷೆಯ ಸವಾಲುಗಳನ್ನು ಅಭಿವೃದ್ಧಿಪಡಿಸಿದರು. ನಂತರ ವಿಶ್ವಾದ್ಯಂತದ ಯುವಜನರು ತಮ್ಮ ಇಷ್ಟದ ಸವಾಲಿಗೆ ಮತ ಹಾಕಿದರು. ಚಾಂಪಿಯನ್ನರು ಗೆದ್ದ ಆಯ್ಕೆಯನ್ನು ಜಪಾನಿನ ಕೋಬೆಯಲ್ಲಿ, "ಕೋಬೆ ಸವಾಲು" ಎಂದು ಪ್ರಸ್ತುತಪಡಿಸಿದರು. ಜೊತೆಗೆ ತಮ್ಮ ದೇಶಗಳಲ್ಲಿ ಒಂದು ಯೋಜನೆಯನ್ನು ಪೂರ್ಣಗೊಳಿಸಲು ಮತ್ತು ಅದರ ಪ್ರಗತಿಯ ಕುರಿತು ವರದಿಮಾಡಲು ಬದ್ಧರಾದರು.
ಆಫ್ಘಾನಿಸ್ತಾನದಲ್ಲಿ ಶೇಕ್ಸ್‌ಪಿಯರ್‌ನ ನಾಟಕ
[ಬದಲಾಯಿಸಿ]ಬ್ರಿಟಿಶ್ ಕೌನ್ಸಿಲ್-ಬೆಂಬಲಿತ ಲವ್ಸ್ ಲೇಬರ್ಸ್ ಲಾಸ್ಟ್ ನಾಟಕವು ಆಫ್ಘಾನಿಸ್ತಾನದಲ್ಲಿ 17 ವರ್ಷಗಳ ನಂತರ 2005ರಲ್ಲಿ ಪ್ರದರ್ಶಿತಗೊಂಡ ಮೊದಲ ಶೇಕ್ಸ್‌ಪಿಯರ್ ನಾಟಕವಾಗಿದೆ. ಈ ನಾಟಕವನ್ನು ಆಫ್ಘನ್ ಭಾಷೆ ದರಿಯಲ್ಲಿ ಮಾಡಲಾಯಿತು. ಶೇಕ್ಸ್‌ಪಿಯರ್‌ನ ನಾಟಕದ ಚಿರಂತನ ಮತ್ತು ಸಾರ್ವತ್ರಿಕ ವಸ್ತುಗಳಿಗೆ, ಸ್ಥಳೀಯ ಉಲ್ಲೇಖಗಳು ಮತ್ತು ಸಂಗೀತವನ್ನು ಸೇರಿಸಿದ್ದು, ಇದಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಅತ್ಯಮೋಘವಾಗಿತ್ತು.
ಯುವ ಸೃಜನಶೀಲ ವಾಣಿಜ್ಯೋದ್ಯಮಿ ಪ್ರಶಸ್ತಿ (ವೈಸಿಇ)
[ಬದಲಾಯಿಸಿ]ವಿದೇಶಗಳಲ್ಲಿ ಸೃಜನಶೀಲ ಉದ್ಯಮಗಳೊಂದಿಗೆ ಬ್ರಿಟನ್ ಅನುಭವವನ್ನು ಉತ್ತೇಜಿಸುವ ಕಾರ್ಯದಲ್ಲಿ ಬ್ರಿಟಿಶ್ ಕೌನ್ಸಿಲ್ ಕೈಗೂಡಿಸಿದೆ. ಈ ಮೂಲಕ ವರ್ಷದ ಅಂತಾರಾಷ್ಟ್ರೀಯ ಯುವ ಪ್ರಕಾಶಕ, ಬ್ರಿಟನ್ ಯುವ ಪ್ರಕಾಶಕ ಉದ್ಯಮಿ ಮತ್ತು ವರ್ಷದ ಅಂತಾರಾಷ್ಟ್ರೀಯ ಯುವ ಸಂಗೀತ ಉದ್ಯಮಿ ಪ್ರಶಸ್ತಿಗಳು ಸೇರಿದಂತೆ ವಿಶ್ವಾದ್ಯಂತ ಯುವ ಸೃಜನಶೀಲ ವಾಣಿಜ್ಯೋದ್ಯಮಿಗಳಿಗೆ ಸರಣಿಯ ಪ್ರಶಸ್ತಿಗಳನ್ನು ನೀಡಲಾಗುವುದು.[೨೨]
ವೈಸಿಇ ಪ್ರಶಸ್ತಿ ಕಾರ್ಯಕ್ರಮಗಳನ್ನು ಎರಡು ರೀತಿಯಲ್ಲಿ ವಿಭಜಿಸಲಾಗಿದೆ: ಒಂದು ಉದಯಿಸುತ್ತಿರುವ ಆರ್ಥಿಕಶಕ್ತಿ ದೇಶಗಳ ಅಂತಾರಾಷ್ಟ್ರೀಯ ಸೃಜನಶೀಲ ವಾಣಿಜ್ಯೋದ್ಯಮಿಗಳು ಮತ್ತು ಇನ್ನೊಂದು ಬ್ರಿಟನ್ನಿನ ಸೃಜನಶೀಲ ವಾಣಿಜ್ಯೋದ್ಯಮಿಗಳು.[೨೩]
ವೈಸಿಇ ಕಾರ್ಯಕ್ರಮದ ಕುರಿತು
[ಬದಲಾಯಿಸಿ]ಯುವ ಸೃಜನಶೀಲ ವಾಣಿಜ್ಯೋದ್ಯಮಿ ಕಾರ್ಯಕ್ರಮವು ವಿಶ್ವದೆಲ್ಲೆಡೆಯ ಯುವ ಉದ್ಯಮಿಗಳಿಗೆ ಸೃಜನಶೀಲ ಉದ್ಯಮದೊಳಗೆ ಸ್ಥಾಪಿಸಿರುವ ತಮ್ಮ ಉದ್ಯಮಗಳ ಅನುಭವಗಳ ಹಂಚಿಕೊಳ್ಳಲು, ಪರಸ್ಪರ ಸಂಪರ್ಕ ಬೆಳೆಸಲು ಸಾಧ್ಯಗೊಳಿಸುತ್ತದೆ. ಸೃಜನಶೀಲ ಆರ್ಥಿಕತೆಗೆ ಸೃಜನಶೀಲ ವಾಣಿಜ್ಯೋದ್ಯಮಿಗಳ ಪ್ರಾಮುಖ್ಯತೆಯನ್ನು ಗುರುತಿಸುತ್ತಾರೆ. ಜೊತೆಗೆ ಸೃಜನಶೀಲ ಪ್ರತಿಭೆ ಮತ್ತು ಗ್ರಾಹಕರ ನಡುವೆ ಸೇತುವೆಯಾಗುವ ಮಹತ್ವವನ್ನು ಗುರುತಿಸುತ್ತಾರೆ. ವೈಸಿಇ ಕಾರ್ಯಕ್ರಮವು ಯುವ ಸೃಜನಶೀಲ ವಾಣಿಜ್ಯೋದ್ಯಮಿಗಳ (25–35ರ ವಯೋಮಾನದ) ಕೌಶಲಗಳನ್ನು ಗುರುತಿಸುತ್ತದೆ, ಅವರಿಗೆ ತರಬೇತಿ ಅವಕಾಶಗಳನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ವೃತ್ತಿ ಬೆಳವಣಿಗೆಗೆ ಸಾಧನಗಳನ್ನು ಒದಗಿಸುತ್ತದೆ. ಜೊತೆಗೆ ಸಹಭಾಗಿತ್ವ ಹಾಗೂ ಹೊಸ ಯೋಜನೆಗಳ ಅವಕಾಶವನ್ನು ಉತ್ತೇಜಿಸುತ್ತದೆ.[೨೪]
ಇದು ಸೃಜನಶೀಲ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಬ್ರಿಟನ್ ಮತ್ತು ಅಂತಾರಾಷ್ಟ್ರೀಯ ವಾಣಿಜ್ಯೋದ್ಯಮಿಗಳ ನಡುವೆ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸಂಬಂಧಗಳನ್ನು ಬೆಳೆಸುತ್ತದೆ. ಜೊತೆಗೆ ಉದಯಿಸುತ್ತಿರುವ ಆರ್ಥಿಕ ಶಕ್ತಿಗಳ ಭವಿಷ್ಯದ ನಾಯಕರ ನಡುವೆ ಹೊಸ ಕ್ಷೇತ್ರಗಳ ಮತ್ತು ವಿವಿಧ ಕ್ಷೇತ್ರಗಳ ನಡುವೆ ಸಂಪರ್ಕಜಾಲವನ್ನು ಹುಟ್ಟುಹಾಕುತ್ತದೆ.
ಬ್ರಿಟಿಶ್ ಕೌನ್ಸಿಲ್, ಸಾಂಸ್ಕೃತಿಕ ಸಂಬಂಧಗಳನ್ನು ಈ ಸಂಪರ್ಕಜಾಲಗಳಲ್ಲಿ ಕಾರ್ಯನಿರ್ವಹಿಸುವ ಮತ್ತು ಸಂಪರ್ಕಜಾಲವನ್ನು ಅವಲಂಬಿಸಿರುವ ಸೃಜನಶೀಲ ವಾಣಿಜ್ಯೋದ್ಯಮಿಗಳಿಗೆ ಒಂದು ಮೂಲಕೌಶಲದ ಹಾಗೆ ನೋಡುತ್ತದೆ. ಜೊತೆಗೆ ಇದೇ ಪರಿಪಕಲ್ಪನೆಯಿಂದ ಅವರು ಕಾರ್ಯಕ್ರಮವನ್ನು ರೂಪಿಸಿದ್ದಾರೆ.
ಪ್ರತಿವರ್ಷವೂ, ಬ್ರಿಟಿಶ್ ಕೌನ್ಸಿಲ್ ಉದಯಿಸುತ್ತಿರುವ ಆರ್ಥಿಕಶಕ್ತಿ ದೇಶಗಳ ಯುವ ವಾಣಿಜ್ಯೋದ್ಯಮಿಗಳನ್ನು ಬ್ರಿಟನ್ನಿನಲ್ಲಿರುವ ಸೃಜನಶೀಲ ಉದ್ಯಮಗಳಿಗೆ ಭೇಟಿ ನೀಡಿ ಅಧ್ಯಯನ ಮಾಡಲು ಕರೆದೊಯ್ಯುತ್ತದೆ ಮತ್ತು ಬ್ರಿಟನ್ನಿನ ಯುವ ವಾಣಿಜ್ಯೋದ್ಯಮಿಗಳನ್ನು ಉದಯಿಸುತ್ತಿರುವ ಆರ್ಥಿಕಶಕ್ತಿ ದೇಶಗಳ ಉದ್ಯಮಗಳಿಗೆ ಪ್ರವಾಸಕ್ಕೆ ಕರೆದೊಯ್ಯುತ್ತದೆ. ಇದು ವಿಶ್ವಾದ್ಯಂತ ಯುವ ಸೃಜನಶೀಲ ವಾಣಿಜ್ಯೋದ್ಯಮಿಗಳ ಒಂದು ವಿಶಾಲ ಸಂಪರ್ಕಜಾಲವನ್ನು ಹುಟ್ಟಹಾಕುತ್ತದೆ. ಸಹಭಾಗಿತ್ವ, ಆಪ್ತಸಲಹಾ ಸಂಬಂಧ ಮತ್ತು ಕಲಿಕೆಗೆ ಅನುಕೂಲ ಒದಗಿಸುವ ಸಂಬಂಧಗಳು ಮತ್ತು ಸಂಪರ್ಕಜಾಲವನ್ನು ಚುರುಕುಗೊಳಿಸುತ್ತದೆ.
ಒಂಬತ್ತು ವಿಭಾಗಗಳಲ್ಲಿ ಪ್ರಶಸ್ತಿಗಳು ಇವೆ: ದೃಶ್ಯೀಯ ಕಲೆ, ವಿನ್ಯಾಸ, ಫ್ಯಾಷನ್, ಪ್ರದರ್ಶನ ಕಲೆಗಳು, ಪ್ರಕಾಶನ, ಸ್ಕ್ರೀನ್(ಟಿವಿ/ಸಿನಿಮಾ), ಸಂಗೀತ, ಪಾರಸ್ಪರಿಕ ಚಟುವಟಿಕೆಗಳು(ಇಂಟರಾಕ್ಟಿವ್) ಮತ್ತು ಸಂವಹನಗಳು.
ಅಂತಾರಾಷ್ಟ್ರೀಯ ಯುವ ಸೃಜನಶೀಲ ವಾಣಿಜ್ಯೋದ್ಯಮಿ ಪ್ರಶಸ್ತಿಗಳು
[ಬದಲಾಯಿಸಿ]ಐವೈಸಿಇ ಪ್ರಶಸ್ತಿಗಳು ಉದಯಿಸುತ್ತಿರುವ ಆರ್ಥಿಕಶಕ್ತಿ ದೇಶಗಳ ಯುವ ಸೃಜನಶೀಲ ವಾಣಿಜ್ಯೋದ್ಯಮಿಗಳ ಸಾಧನೆಗಳನ್ನು ಪ್ರಶಂಸಿಸಲು ಮತ್ತು ಅವರ ಸಾಮರ್ಥ್ಯಗಳನ್ನು ಅಭಿವೃದ್ಧಿಗೊಳಿಸಲು ಬ್ರಿಟಿಶ್ ಕೌನ್ಸಿಲ್‌ನ ಸೃಜನಶೀಲ ಆರ್ಥಿಕ ಘಟಕವು ರೂಪಿಸಿದ ಕಾರ್ಯಕ್ರಮವಾಗಿದೆ.
ಉದ್ಯಮ ವಲಯವು ಹೊಸ ಅವಕಾಶಗಳ ತಮ್ಮ ಹುಡುಕಾಟವನ್ನು ಮುಂದುವರೆದ ದೇಶಗಳಿಗಷ್ಟೇ ಸೀಮಿತಗೊಳಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ, ಐವೈಸಿಇಯು ಅಭಿವೃದ್ಧಿಶೀಲ ಆರ್ಥಿಕಶಕ್ತಿ ದೇಶಗಳ ಮೇಲೆ ಗಮನಕೇಂದ್ರೀಕರಿಸುತ್ತದೆ. ವಾಣಿಜ್ಯದ ಜಾಗತೀಕರಣಗೊಂಡ ಲಕ್ಷಣದ ಹಿನ್ನೆಲೆಯಲ್ಲಿ, ಈ ಅವಕಾಶಗಳನ್ನು ಯಶಸ್ವಿಯಾಗಿ ತಲುಪಬಹುದು ಮತ್ತು ಬಳಸಿಕೊಳ್ಳಬಹುದು ಎಂಬುದೇ ಇದರರ್ಥವಾಗಿದೆ.
ಮೊದಲ ಪ್ರಶಸ್ತಿಯನ್ನು ಪ್ರಕಾಶನ ವಿಭಾಗದಲ್ಲಿ 2004ರಲ್ಲಿ ಆರಂಭಿಸಲಾಯಿತು. ನಂತರದಲ್ಲಿ ವಿನ್ಯಾಸ (2005), ಸಂಗೀತ (2006), ತೆರೆ (ಸಿನಿಮಾ ಮತ್ತು ಟಿವಿ)(2007) ಮತ್ತು ಫ್ಯಾಷನ್ (2008) ಪ್ರಶಸ್ತಿಗಳನ್ನು ಸ್ಥಾಪಿಸಲಾಯಿತು. ನಂತರ 2008/09ರಲ್ಲಿ ಹೊಸ ಪ್ರಶಸ್ತಿಗಳನ್ನು, ಪಾರಸ್ಪರಿಕ ಚಟುವಟಿಕೆಗಳು(ಇಂಟರಾಕ್ಟಿವ್) ಮತ್ತು ಸಂವಹನಗಳು, ಪ್ರದರ್ಶನ ಕಲೆಗಳು ಮತ್ತು ದೃಶ್ಯೀಯ ಕಲೆಗಳ ವಿಭಾಗದಲ್ಲಿ ಆರಂಭಿಸಲಾಯಿತು. ಹೀಗೆ ಈಗ ಒಟ್ಟು ಒಂಬತ್ತು ಪ್ರಶಸ್ತಿಗಳನ್ನು ಸೃಜನಶೀಲ ಉದ್ಯಮಗಳಿಗೆ ಕೊಡಲಾಗುತ್ತಿದೆ.
ಈ ವಾರ್ಷಿಕ ಪ್ರಶಸ್ತಿಗಳು ಉದಯಿಸುತ್ತಿರುವ ಆರ್ಥಿಕಶಕ್ತಿ ದೇಶಗಳ ಯುವ ಸೃಜನಶೀಲ ವಾಣಿಜ್ಯೋದ್ಯಮಿಗಳಿಗಾಗಿ ಮುಕ್ತವಾಗಿದೆ. ಬ್ರಿಟಿಶ್ ಕೌನ್ಸಿಲ್‌ನ ಅಂತಾರಾಷ್ಟ್ರೀಯ ಸಂಪರ್ಕಜಾಲದ ಮೂಲಕ ದೇಶಗಳು ಭಾಗವಹಿಸುತ್ತವೆ ಮತ್ತು ಪ್ರತಿವರ್ಷ ಎಂಟರಿಂದ ಹತ್ತು ದೇಶಗಳನ್ನು ಭಾಗವಹಿಸಲು ಆಯ್ಕೆಮಾಡಲಾಗುತ್ತದೆ. ಪ್ರತಿದೇಶದಲ್ಲಿರುವ ಬ್ರಿಟಿಶ್ ಕೌನ್ಸಿಲ್ ಕಚೇರಿಗಳು ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಆ ದೇಶವನ್ನು ಪ್ರತಿನಿಧಿಸುವ ಒಬ್ಬರು ಅಂತಿಮ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತವೆ. ಅಂತಿಮ ಅಭ್ಯರ್ಥಿಗಳನ್ನು ಒಂದು ರಾಷ್ಟ್ರೀಯ ಸ್ಪರ್ಧೆಯ ಮೂಲಕ ಮತ್ತು ಅವರ ರಾಷ್ಟ್ರೀಯ ಉದ್ಯಮದಲ್ಲಿ ಪ್ರಮುಖ ವ್ಯಕ್ತಿಗಳ ತೀರ್ಪುಗಾರರಿಂದ ಆಯ್ಕೆ ಮಾಡಲಾಗುವುದು. ಪ್ರತಿ ಪ್ರಶಸ್ತಿಗೆ ಎಲ್ಲ ಅಂತಾರಾಷ್ಟ್ರೀಯ ಅಂತಿಮ ಅಭ್ಯರ್ಥಿಗಳು ಬ್ರಿಟನ್ನಿನಲ್ಲಿ ಒಂದು ವಾರದ ಪ್ರವಾಸದ ಅವಧಿಯಲ್ಲಿ ಭೇಟಿಯಾಗುತ್ತಾರೆ. ಬ್ರಿಟನ್ನಿನಲ್ಲಿ ಅವರು ತಮ್ಮ ಉದ್ಯಮ ವಲಯದ ಕುರಿತು ಹೆಚ್ಚು ಕಲಿಯುತ್ತಾರೆ. ಬ್ರಿಟಿಶ್ ಕೌನ್ಸಿಲ್ ಗುಂಪು ಮತ್ತು ವೈಯಕ್ತಿಕ ಸಭೆಗಳನ್ನು ಆಯೋಜಿಸಿ, ವಾಣಿಜ್ಯೋದ್ಯಮಿಗಳಿಗೆ ಬ್ರಿಟನ್ನಿನಲ್ಲಿ ಅವರ ಸೃಜನಶೀಲ ವಲಯದ ಕುರಿತು ಒಂದು ಪಕ್ಷಿನೋಟವನ್ನು ಒದಗಿಸುತ್ತದೆ. ಪ್ರವಾಸದ ಅವಧಿಯಲ್ಲಿ, ಎಲ್ಲರೂ ಒಟ್ಟಾರೆ ಪ್ರಶಸ್ತಿಯ ಅಂತಾರಾಷ್ಟ್ರೀಯ ವಿಜೇತರನ್ನು ಆಯ್ಕೆ ಮಾಡಲು ಒಂದು ತೀರ್ಪುಗಾರ ವಿಧಾನದಲ್ಲಿ ಭಾಗವಹಿಸುತ್ತಾರೆ. ಎಲ್ಲ ಅಂತಿಮ ಅಭ್ಯರ್ಥಿಗಳು ಅನುಭವೀ ಬ್ರಿಟನ್ ಉದ್ಯಮಿ ತೀರ್ಪುಗಾರರೆದುರು ತಮ್ಮ ಕೆಲಸಗಳು ಮತ್ತು ಅವರ ದೇಶಗಳಲ್ಲಿ ತಮ್ಮ ಸೃಜನಶೀಲ ವಲಯದ ಕುರಿತ ತಾವು ಅರ್ಥಮಾಡಿಕೊಂಡಿದ್ದನ್ನು (ಮತ್ತು ಆ ಕುರಿತ ತಮ್ಮ ದೃಷ್ಟಿಕೋನವನ್ನು) ಪ್ರಸ್ತುತಪಡಿಸುತ್ತಾರೆ. ಒಬ್ಬರು ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ ಮತ್ತು ಪ್ರಶಸ್ತಿ ಫಲಕದೊಂದಿಗೆ ವಿಜೇತರ ದೇಶ ಮತ್ತು ಬ್ರಿಟನ್‌ಮಧ್ಯೆ ಸಂಬಂಧವನ್ನು ನಿರ್ಮಿಸುವ ಒಂದು ಸಹಭಾಗಿತ್ವದ ಯೋಜನೆಯನ್ನು ಬ್ರಿಟಿಶ್ ಕೌನ್ಸಿಲ್ ಜೊತೆಗೆ ಮಾಡಲು ವ್ಯಯಿಸಬೇಕಾದ ಹಣಕಾಸು ಪುರಸ್ಕಾರವನ್ನೂ ನೀಡಲಾಗುತ್ತದೆ.
ಈ ವರೆಗೆ ಅರ್ಜೆಂಟೀನಾ, ಇಂಡೋನೇಷ್ಯಾ, ದಕ್ಷಿಣ ಆಫ್ರಿಕಾ, ಈಜಿಪ್ತ್, ಲಿಥುವೇನಿಯಾ, ಒಮನ್, ರಷ್ಯಾ, ತಾಂಜಾನಿಯಾ ಸೇರಿದಂತೆ 47 ದೇಶಗಳಿಂದ ಸುಮಾರು150 ಅಂತಿಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಬ್ರೆಜಿಲ್, ಕೊಲಂಬಿಯಾ, ಇಸ್ಟೋನಿಯಾ, ಭಾರತ, ಇಂಡೋನೇಷ್ಯಾ, ಲೆಬನಾನ್, ಮೆಕ್ಸಿಕೋ, ಮೊರೊಕ್ಕೋ, ನೈಜೀರಿಯಾ, ಪೋಲಂಡ್, ವೆನಿಜುವೆಲ ಮತ್ತು ಯೆಮನ್ ದೇಶಕ್ಕೆ ಸೇರಿದವರು ವಿಜೇತರಾಗಿದ್ದಾರೆ.
ಈ ಪ್ರಕ್ರಿಯೆಯಲ್ಲಿ, ಕ್ರಿಯಾಶೀಲ ಅಂತಾರಾಷ್ಟ್ರೀಯ ಸಂಪರ್ಕಜಾಲಗಳು ಹೊರಹೊಮ್ಮಿವೆ. ಮೊಟ್ಟಮೊದಲ ಪ್ರಮುಖ ವೈಸಿಇ ಹಳೆಸ್ಪರ್ಧಿಗಳ(ಅಲ್ಯುಮ್ನಿ) ಕಾರ್ಯಕ್ರಮವನ್ನು 2007ರಲ್ಲಿ ಆಯೋಜಿಸಲಾಗಿತ್ತು. ಆಗ ಪ್ರಕಾಶನ ಪ್ರಶಸ್ತಿಗೆ ಭಾಗವಹಿಸಿದ್ದ ಎಲ್ಲ ಅಂತಿಮ ಅಭ್ಯರ್ಥಿಗಳು ಲಂಡನ್ ಬುಕ್ ಫೇರ್ ಸಮಯದಲ್ಲಿ ಲಂಡನ್ನಿನಲ್ಲಿ ಭೇಟಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಒಂದು ಅಲ್ಯುಮ್ನಿ ನೆಟ್‌ವರ್ಕ್ ಹುಟ್ಟುಹಾಕಲಾಯಿತು. ಇದನ್ನು ಸದಸ್ಯರು ನಡೆಸುತ್ತಿದ್ದು, ಈಗ 26 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ನೆಟ್‌ವರ್ಕ್ ಲಂಡನ್ ಬುಕ್ ಫೇರ್‌ನಲ್ಲಿ ಒಂದು ಮಳಿಗೆಯನ್ನು ಹೊಂದಿದೆ. ಫ್ರಾಂಕ್‌ಫರ್ಟ್ ಬುಕ್ ಫೇರ್ ಮತ್ತು ವಿಶ್ವದ್ಯಂತ ಇನ್ನಿತರ ಪ್ರಕಾಶನ ಕಾರ್ಯಕ್ರಮಗಳಲ್ಲಿ ಅದು ಸಭೆಗಳು ಮತ್ತು ಉಪನ್ಯಾಸಗಳನ್ನು ಆಯೋಜಿಸುತ್ತದೆ. 2008ರಲ್ಲಿ, ವಿನ್ಯಾಸ ಪ್ರಶಸ್ತಿಯ ಅಂತಿಮ ಅಭ್ಯರ್ಥಿಗಳ ಮೊದಲ ಅಲ್ಯುಮ್ನಿ ಉಪನ್ಯಾಸವು ಲಂಡನ್ನಿನಲ್ಲಿ 100% ಡಿಸೈನ್ ಮತ್ತು ಲಂಡನ್ ಡಿಸೈನ್ ಫೆಸ್ಟಿವಲ್ ಜೊತೆಗೆ ನಡೆಯಿತು.
ಬ್ರಿಟನ್ ಯುವ ಸೃಜನಶೀಲ ವಾಣಿಜ್ಯೋದ್ಯಮಿ ಪ್ರಶಸ್ತಿಗಳು
[ಬದಲಾಯಿಸಿ]ಐವೈಸಿಇ ಪ್ರಶಸ್ತಿಗಳ ಯಶಸ್ಸಿನ ನಂತರ ಬ್ರಿಟನ್ನಿನ ಸೃಜನಶೀಲ ಉದ್ಯಮಗಳು ಬೆಂಬಲ ನೀಡಲಾರಂಭಿಸಿದರು. ಹಿರಿಯ ಉದ್ಯಮಿ ವ್ಯಕ್ತಿಗಳು (ಲಿಜ್ ಕಾಲ್ಡರ್, ಡಂಕನ್ ಕೆನ್‌ವರ್ದಿ ಮತ್ತು ಡೌಗ್ ಡಿ'ಆರ್ಕಿ)ಪ್ರಶಸ್ತಿಗಳನ್ನು ನಿರ್ಣಯಿಸಿದರು ಮತ್ತು ಮಾಸ್ಟರ್ ಕ್ಲಾಸ್‌ಗಳನ್ನು ನೀಡಿದರು (ಸರ್ ಟೆರೆನ್ಸ್ ಕೊನ್ರಾನ್, ಇಯಾನ್ ಲಿವಿಂಗ್‌ಸ್ಟೋನ್ ಒಬಿಇ, ಸರ್ ಪಾಲ್ ಸ್ಮಿತ್). ಬ್ರಿಟನ್ನಿನ ಯುವ ಸೃಜನಶೀಲ ವಾಣಿಜ್ಯೋದ್ಯಮಿಗಳಿಗೆ ಉದ್ಯಮದ ಸಂರಚನೆಗಳನ್ನು ಮತ್ತು ಉದಯಿಸುತ್ತಿರುವ ಮಾರುಕಟ್ಟೆಗಳನ್ನು ಅರ್ಥಮಾಡಿಕೊಳ್ಳಲು ಉದಯಿಸುತ್ತಿರುವ ಆರ್ಥಿಕಶಕ್ತಿ ದೇಶಗಳಲ್ಲಿ ಉದ್ಯಮ ಪ್ರವಾಸದಲ್ಲಿ ಭಾಗಿಯಾಗುವ ಅವಕಾಶ ಕಲ್ಪಿಸುವ ಸಹೋದರ ಬ್ರಿಟನ್ ಕಾರ್ಯಕ್ರಮಗಳಿಗೆ ಬೇಡಿಕೆ ವ್ಯಕ್ತವಾಯಿತು.
ಅಂತಾರಾಷ್ಟ್ರೀಯ ಕಾರ್ಯಕ್ರಮಗಳ ಹಾಗೆ, ಬ್ರಿಟನ್ ಪ್ರಶಸ್ತಿಗಳು ಬ್ರಿಟನ್ ಸೃಜನಶೀಲ ವಾಣಿಜ್ಯೋದ್ಯಮಿಗಳ ಅಸಾಧಾರಣ ಸಾಧನೆಯನ್ನು ಗೌರವಿಸುತ್ತವೆ ಮತ್ತು ಉದಯಿಸುತ್ತಿರುವ ಆರ್ಥಿಕಶಕ್ತಿ ದೇಶಗಳ ಸಾಮರ್ಥ್ಯವನ್ನು ಹೆಚ್ಚು ಅರ್ಥಮಾಡಿಕೊಳ್ಳಲು ಸ್ಫೂರ್ತಿ ನೀಡುತ್ತದೆ. ಈ ಕಾರ್ಯಕ್ರಮವು 2007ರಲ್ಲಿ ಬ್ರಿಟನ್ ಯುವ ಪ್ರಕಾಶಕ ಉದ್ಯಮಿ ಪ್ರಶಸ್ತಿ ನೀಡುವುದರ ಮೂಲಕ ಆರಂಭವಾಯಿತು. 2008ರಲ್ಲಿ, ಬ್ರಿಟಿಶ್ ಕೌನ್ಸಿಲ್ ಈ ಕಾರ್ಯಕ್ರಮವನ್ನು ಎನ್‌ಇಎಸ್‌ಟಿಎ ಮತ್ತು ದಿ ಕಲ್ಚರಲ್ ಲೀಡರ್‌ಶಿಪ್ ಪ್ರೋಗ್ರಾಮ್‌ನ ಪಾಲುದಾರಿಕೆಯೊಂದಿಗೆ ವಿಸ್ತಿರಿಸಿತು. ನಂತರ ಸಂಗೀತ, ವಿನ್ಯಾಸ, ಫ್ಯಾಷನ್, ತೆರೆ(ಸಿನಿಮಾ ಮತ್ತು ದೂರದರ್ಶನ) ವಿಭಾಗಗಳಿಗೆ ಪ್ರಶಸ್ತಿಯನ್ನು ಆರಂಭಿಸಿತು. ಪಾರಸ್ಪರಿಕ ಚಟುವಟಿಕೆಗಳು(ಇಂಟರಾಕ್ಟಿವ್) ಮತ್ತು ಸಂವಹನಗಳು, ಪ್ರದರ್ಶನ ಕಲೆಗಳು ಮತ್ತು ದೃಶ್ಯೀಯ ಕಲೆಗಳ ವಿಭಾಗದಲ್ಲಿ ಹೊಸ ಪ್ರಶಸ್ತಿಗಳನ್ನು 2009ರಲ್ಲಿ ಆರಂಭಿಸಲಾಯಿತು. ಹೀಗೆ ಈಗ ಒಟ್ಟು ಒಂಬತ್ತು ಬ್ರಿಟನ್ ಪ್ರಶಸ್ತಿಗಳನ್ನು ಬ್ರಿಟನ್ನಿನ ಸೃಜನಶೀಲ ಉದ್ಯಮಗಳನ್ನು ನಡೆಸುವವರಿಗೆ ಕೊಡಲಾಗುತ್ತಿದೆ.
ಒಂದು ಸಂದರ್ಶನದ ನಂತರ, ಆರು ಅಂತಿಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಇವರು ಉದಯಿಸುತ್ತಿರುವ ಆರ್ಥಿಕ ದೇಶಗಳಲ್ಲಿ ಸ್ಥಳೀಯ ಮಾರುಕಟ್ಟೆಯ ಕುರಿತು ತಮ್ಮ ಅರ್ಥೈಸಿಕೊಳ್ಳುವಿಕೆಯನ್ನು ಬೆಳೆಸಿಕೊಳ್ಳಲು ಒಂದು ಉದ್ಯಮ ಪ್ರವಾಸದಲ್ಲಿ ಭಾಗಿಯಾಗುತ್ತಾರೆ. ಅಂತಿಮ ಅಭ್ಯರ್ಥಿಗಳು ತಮ್ಮ ವ್ಯಕ್ತಿಚಿತ್ರಣವನ್ನು ಅಭಿವೃದ್ಧಿಪಡಿಸಿಕೊಳ್ಳಲು ನೆಟ್‌ವರ್ಕ್‌ಗಳನ್ನು ರೂಪಿಸುತ್ತಾರೆ. ಅವರು ಬ್ರಿಟನ್ನಿಗೆ ಮರಳಿದ ನಂತರ, ತಮ್ಮ ಅನುಭವಗಳನ್ನು ಇನ್ನಷ್ಟು ಹಂಚಿಕೊಳ್ಳುತ್ತಾರೆ ಮತ್ತು ನಂತರ ವಿದೇಶಗಳಲ್ಲಿ ಅವರ ಅನುಭವದ ಕುರಿತು ತೀರ್ಪುಗಾರರ ಒಂದು ಕೌನ್ಸಿಲ್ ಇವರನ್ನು ಸಂದರ್ಶನ ಮಾಡುತ್ತದೆ. ವಿಜೇತರು ತಾವು ಭೇಟಿ ನೀಡಿದ ದೇಶಗಳ ನಿರ್ದಿಷ್ಟ ಸೃಜನಶೀಲ ವಲಯದೊಂದಿಗೆ ಸಂಬಂಧವಿರುವ ಯೋಜನೆಗಾಗಿ ವ್ಯಯಿಸಲು ಹಣಕಾಸು ಪುರಸ್ಕಾರವನ್ನೂ ಪಡೆಯುತ್ತಾರೆ.
ವೈಸಿಇ ಕ್ಲಬ್
[ಬದಲಾಯಿಸಿ]ವೈಸಿಇ ಪ್ರಶಸ್ತಿಗಳ ಯೋಜನೆಯನ್ನು ಆರಂಭಿಸಿದಾಗಿನಿಂದ, ಅಂತಾರಾಷ್ಟ್ರೀಯ ಮತ್ತು ಬ್ರಿಟನ್ ನೆಟ್‌ವರ್ಕ್‌ಗಳು ರೂಪುಗೊಂಡಿವೆ. ಈವರೆಗೆ, 50 ದೇಶಗಳ ಸುಮಾರು 150 ಅಂತಿಮ ಅಭ್ಯರ್ಥಿಗಳು ಪ್ರಶಸ್ತಿಗಳ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಆಫ್ಟರ್ ದಿ ಕ್ರಂಚ್ Archived 2010-12-29 ವೇಬ್ಯಾಕ್ ಮೆಷಿನ್ ನಲ್ಲಿ. ಪ್ರಕಟಣೆಯ ಗುರುತಿಗಾಗಿ (ಕ್ರಿಯೇಟಿವ್ & ಕಲ್ಚರಲ್ ಸ್ಕಿಲ್ಸ್ ಆಂಡ್ ಕೌಂಟರ್‌ಪಾಯಿಂಟ್ (ಥಿಂಕ್ ಟ್ಯಾಂಕ್) ಬೆಂಬಲದಿಂದ)) ಲಂಡನ್ನಿನಲ್ಲಿ ಒಂದು ಸಭೆ ಸೇರಿ, ಬ್ರಿಟನ್ ವೈಸಿಇ ಕ್ಲಬ್ ಅನ್ನು 2009ರ ಏಪ್ರಿಲ್‌ನಲ್ಲಿ ರಚಿಸಲಾಯಿತು. ಈ ಪ್ರಕಟಣೆಯು 2007–2010ರ ಹಣಕಾಸು ಬಿಕ್ಕಟ್ಟಿನಲ್ಲಿ ಸೃಜನಶೀಲ ವಲಯಗಳ ಮಹತ್ವದ ಕುರಿತ ಅಧ್ಯಯನವಾಗಿದೆ. ಈ ಸಭೆಯು ಇಂಜೀನಿಯಸ್ ಮೀಡಿಯಾದ ಸ್ಥಾಪಕ ಮತ್ತು ಸಿಇಒ ಆಗಿರುವ ಪ್ಯಾಟ್ರಿಕ್ ಮೆಕೆನ್ನ ಅವರ ಭಾಷಣದೊಂದಿಗೆ ಕೊನೆಗೊಂಡಿತು.
ಬೇರೆ ದೇಶಗಳಲ್ಲಿ ಹೊಸ ಕ್ಲಬ್‌ಗಳನ್ನು ರಚಿಸಲಾಯಿತು. ಪೋಲಂಡ್ ಮತ್ತು ತುರ್ಕಿಯಲ್ಲಿ ಈಗಾಗಲೇ ಸಭೆಗಳು ನಡೆದಿವೆ.
ಸೃಜನಶೀಲ ವಲಯಗಳು ಎದುರಿಸುವ ಬೇಡಿಕೆಗಳು ಮತ್ತು ಒತ್ತಡಗಳನ್ನು ಗುರುತಿಸುವುದಕ್ಕಾಗಿ ಕ್ಲಬ್ ಸ್ಥಾಪಿಸಲಾಗಿದೆ. ಸೃಜನಶೀಲ ಉದ್ಯಮಗಳು – ಮುಂದುವರಿದ, ಉದಯಿಸುತ್ತಿರುವ ಮತ್ತು ಅಭಿವೃದ್ಧಿಶೀಲ ದೇಶಗಳು – ಈಗಾಗಲೇ ಸೂಕ್ಷ್ಮ-ಉದ್ಯಮಗಳಿಂದ ಮತ್ತು ಎಸ್‌ಎಂಇಗಳಿಂದ ರೂಪಿತವಾಗಿದ್ದು, ವಲಯದೊಳಗೇ ಬೆಳವಣಿಗೆಯನ್ನು ಸಾಧಿಸುವುದು ಕಷ್ಟಕರವಾಗಿದೆ.
ಸೃಜನಶೀಲ ವಾಣಿಜ್ಯೋದ್ಯಮಿಯ ವ್ಯಾಖ್ಯಾನ
[ಬದಲಾಯಿಸಿ]ಬ್ರಿಟಿಶ್ ಕೌನ್ಸಿಲ್ ಒಬ್ಬ ಸೃಜನಶೀಲ ವಾಣಿಜ್ಯೋದ್ಯಮಿಯನ್ನು ಹೀಗೆ ವ್ಯಾಖ್ಯಾನಿಸುತ್ತದೆ:[೨೫]
• ಸೃಜನಶೀಲ ವಲಯದಲ್ಲಿ ಕೆಲಸ ಮಾಡುತ್ತಿರುವ, ಉದ್ಯಮ ಬೆಳವಣಿಗೆಯ ಶಾಸ್ತ್ರೀಯ ಪದಗಳಲ್ಲಿ (ಲಾಭ, ಮಾರುಕಟ್ಟೆ ಷೇರು, ಉದ್ಯೋಗಿಗಳು) ತಮ್ಮ ಉದ್ಯಮದ ಯಶಸ್ಸನ್ನು ನಿರೂಪಿಸಬಲ್ಲ ವ್ಯಕ್ತಿ ಮತ್ತು/ಅಥವಾ ಸಹಉದ್ಯಮಿಗಳಲ್ಲಿ ತಮ್ಮ ಸ್ಥಾನಮಾನದ (ಗುಣಮಟ್ಟ ಮತ್ತು ಸೌಂದರ್ಯಪ್ರಜ್ಞೆ)ಅರ್ಥದಲ್ಲಿ ನಿರೂಪಿಸಬಲ್ಲ ವ್ಯಕ್ತಿ.
• ಸೃಜನಶೀಲ ವಲಯದಲ್ಲಿ ಕೆಲಸ ಮಾಡುತ್ತಿರುವ, ಒಂದು ಯಶಸ್ವೀ (ಪರಿಣಾಮ ಮತ್ತು ತಲುಪುವಿಕೆ ಅರ್ಥದಲ್ಲಿ) ಸಾಮಾಜಿಕ ಅಥವಾ ಲಾಭರಹಿತ ಉದ್ಯಮವನ್ನು ಆ ವಲಯದಲ್ಲಿ ಅಭಿವೃದ್ಧಿಪಡಿಸಿರುವ ವ್ಯಕ್ತಿ.
• ಸೃಜನಶೀಲ ವಲಯದಲ್ಲಿ ಕೆಲಸ ಮಾಡುತ್ತಿರುವ,ಉದ್ಯಮದಲ್ಲಿ ಅದರ ಅಭಿವೃದ್ಧಿಯನ್ನು ಸಮರ್ಥಿಸುವ ಮೂಲಕ ನಾಯಕತ್ವವನ್ನು ತೋರಿಸಿದ ವ್ಯಕ್ತಿ
• ಸೃಜನಶೀಲ ವಲಯದಲ್ಲಿ ಕೆಲಸ ಮಾಡುತ್ತಿರುವ, ಈ ವಲಯದಲ್ಲಿ ಮಾರುಕಟ್ಟೆ ಅಭಿವೃದ್ಧಿ ಮತ್ತು ಬೆಳವಣಿಗೆಗಾಗಿ ಕೆಲವು ಉಪಕ್ರಮಗಳನ್ನು ಅಭಿವೃದ್ಧಿಪಡಿಸಿರುವ (ಪ್ರದರ್ಶನಗಳು, ವ್ಯಾಪಾರ ಪ್ರದರ್ಶನಗಳು, ಉತ್ಸವಗಳು, ಇತ್ಯಾದಿ) ವ್ಯಕ್ತಿ.
ಪ್ರಶಸ್ತಿ ಕಾರ್ಯಕ್ರಮದ ಉದ್ದೇಶಕ್ಕಾಗಿ, ಸೃಜನಶೀಲ ವಾಣಿಜ್ಯೋದ್ಯಮಿಗಳು ಈ ಕೆಳಗಿನ ಗುಣಗಳನ್ನು ಹೊಂದಿರಬೇಕು:
1. ಔದ್ಯಮಿಕ ಸಾಮರ್ಥ್ಯ
[ಬದಲಾಯಿಸಿ]ಅಪಾಯಗಳನ್ನು ಎದುರಿಸುವುದು: ವಿಚಾರಗಳನ್ನು ಯಶಸ್ವಿಯಾಗಿ ಮುಂದೆ ತೆಗೆದುಕೊಂಡು ಹೋಗುವ ಕೌಶಲಗಳು/ಉಪಕ್ರಮಗಳೊಂದಿಗೆ ಅಪಾಯಗಳನ್ನು ಮೌಲ್ಯಾಂಕನ ಮಾಡಿ, ಸಮಚಿತ್ತದಿಂದ ಅನುಭವಿಸಿ, ಎದುರಿಸುವುದು. ತಮ್ಮ ಸೃಜನಶೀಲ ವಲಯದ ಕುರಿತು ತೀವ್ರವಾದ ಒಲವು: ಅತ್ಯಗತ್ಯವಾಗಿ ಅಥವಾ ಮುಖ್ಯವಾಗಿ ಸೃಜನಶೀಲ ಪ್ರತಿಭೆಯುಳ್ಳವಾಗಿರಲೇಬೇಕು ಎಂದಿರದಿದ್ದರೂ, ಸೃಜನಶೀಲ ವಾಣಿಜ್ಯೋದ್ಯಮಿಗಳು ಉತ್ಪನ್ನಗಳನ್ನು ಮಾರುಕಟ್ಟೆಗೆ ತರುವ ಮಧ್ಯವರ್ತಿಗಳು, ಹೀಗಾಗಿ ಅವರು ಸೃಜನಶೀಲತೆಯನ್ನು ಗೌರವಿಸುವ, ಅರ್ಥಮಾಡಿಕೊಳ್ಳುವ ಮತ್ತು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿರಬೇಕು. ಕಾರ್ಪೊರೇಟ್ ಕೌಶಲಗಳು: ಒಂದು ಉದ್ಯಮದ ಮುನ್ನೋಟವನ್ನು ಮತ್ತು ಕಾರ್ಯತಂತ್ರವನ್ನು ಅಭಿವ್ಯಕ್ತಿಸುವಂತಹ ಅಂತಿಮ ಉತ್ಪನ್ನದೊಂದಿಗೆ ಉದ್ಯಮ ಕುಶಾಗ್ರಮತಿ, ವ್ಯಾಪಾರ-ವಹಿವಾಟಿನ ಅರಿವು ಮತ್ತು ನಿರ್ವಹಣಾ ಸಾಮರ್ಥ್ಯ. ಅಂತರ್‌ವೈಯಕ್ತಿಕ ಕೌಶಲಗಳು: ಒಂದು ಕಲ್ಪನೆ/ವಿಚಾರವನ್ನು ಮಾರುವ, ವ್ಯವಹರಿಸುವ ಮತ್ತು ಸಂಪರ್ಕಜಾಲ ರೂಪಿಸುವ ಒಂದು ಸಾಮರ್ಥ್ಯ.
2. ನಾಯಕತ್ವ ಸಾಮರ್ಥ್ಯ/ತಮ್ಮ ವಲಯವನ್ನು ಬದಲಿಸಬಲ್ಲ ಶಕ್ತಿ
[ಬದಲಾಯಿಸಿ]ನಾಯಕತ್ವ ಸಾಮರ್ಥ್ಯ: ತಮ್ಮ ರಾಷ್ಟ್ರೀಯ ಸೃಜನಶೀಲ ಸಮುದಾಯಗಳಲ್ಲಿ ನಾಯಕನಾಗಲು ತಮ್ಮ ಸೃಜನಶೀಲ ಮತ್ತು ಔದ್ಯಮಿಕ ಕೌಶಲಗಳನ್ನು ಒಂದುಗೂಡಿಸುವ ಮುನ್ನೋಟ ಹೊಂದಿರುವುದು. ತಮ್ಮ ವೈಸಿಇ ಅನುಭವದ ಪಾಠಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವ ಸಾಮರ್ಥ್ಯ. ಬದಲಾವಣೆಯ ಏಜೆಂಟ್: ವ್ಯತ್ಯಾಸವನ್ನುಂಟು ಮಾಡುವ ಸಾಮರ್ಥ್ಯ ಹೊಂದಿರುವುದು - ಉದ್ಯಮದ ಅರ್ಥದಲ್ಲಿ ಮಾತ್ರವಲ್ಲದೇ ದೇಶೀಯ ಮಾರುಕಟ್ಟೆಯಲ್ಲಿ ಅದರ ಮೂಲಸೌಕರ್ಯವನ್ನು ಧನಾತ್ಮಕವಾಗಿ ಪರಿಣಾಮಿಸುವ ಸಾಮರ್ಥ್ಯ.
3. ಮಾರುಕಟ್ಟೆ ಜಾಗೃತಿ ಮತ್ತು ಅರ್ಥೈಸಿಕೊಳ್ಳುವಿಕೆ
[ಬದಲಾಯಿಸಿ]ಸ್ಥಳೀಯ ಮಾರುಕಟ್ಟೆಯ ಮತ್ತು ಅದರಲ್ಲಿರುವ ಪಾತ್ರಗಳ ಕುರಿತು ಜ್ಞಾನ ಹೊಂದಿರುವುದು. ಮಾರುಕಟ್ಟೆಯಲ್ಲಿರುವ ಅಂತರ/ಕೊರತೆಗಳನ್ನು ಗುರುತಿಸುವ ಮತ್ತು ಈ ಅವಕಾಶಗಳನ್ನು ಬಳಸಿಕೊಳ್ಳುವ ಸಾಮರ್ಥ್ಯ.
4. ಕಲ್ಪನೆ/ವಿಚಾರಗಳ ಅಸಲೀತನ
[ಬದಲಾಯಿಸಿ]ಅಸಲೀ ವಿಚಾರಗಳು ಮತ್ತು ಅವುಗಳನ್ನು ವಾಣಿಜ್ಯ ಸಂದರ್ಭದಲ್ಲಿ ಅಭಿವೃದ್ಧಿಗೊಳಿಸುವ ನಮ್ಯತೆ/ಹೊಂದಾಣಿಕೆ.
ಆತ್ಮವಿಶ್ವಾಸ: ಅಸಲೀ ವಿಚಾರಗಳನ್ನು ಬೆಂಬಲಿಸುವ ಏಕಾಗ್ರತೆ ಮತ್ತು ಮಹತ್ವಾಕಾಂಕ್ಷೆಯನ್ನು ಹೊಂದಿರುವುದು.
5. ಬ್ರಿಟನ್‌ಜೊತೆ/ಜಾಗತಿಕವಾಗಿ ಸಂಪರ್ಕಜಾಲ ಹುಟ್ಟುಹಾಕುವ ಅಂತಾರಾಷ್ಟ್ರೀಯ ದೃಷ್ಟಿಕೋನ ಮತ್ತು ಸಾಮರ್ಥ್ಯ
[ಬದಲಾಯಿಸಿ]ವೈಯಕ್ತಿಕ ಮತ್ತು ವೃತ್ತಿಪರ ತೊಡಗಿಸಿಕೊಳ್ಳುವಿಕೆ ಮತ್ತು ಬ್ರಿಟನ್ ಜೊತೆ ಸಹಭಾಗಿತ್ವ ಮತ್ತು ಪಾಲುದಾರಿಕೆಯ ಪರಸ್ಪರ ಅನುಕೂಲಕರವಾದ ಸಂಸ್ಕೃತಿಯನ್ನು ಬೆಳೆಸುವ ಇಚ್ಛಾಶಕ್ತಿ ಮತ್ತು ಸಾಮರ್ಥ್ಯ; ಜೊತೆಗೆ ಅಂತಾರಾಷ್ಟ್ರೀಯ ಅಭ್ಯರ್ಥಿಗಳೊಂದಿಗೆ ಸಂವಾದದಿಂದ ಲಾಭ ಪಡೆಯುವುವುದು .
ಇದರೊಂದಿಗೆ, ಭಾಗವಹಿಸುವವರು ಈ ಕೆಳಗಿನ ಅಂಶಗಳನ್ನು ಹೊಂದಿರಬೇಕು: • ಅರ್ಜಿ ನೀಡುವ ಸಮಯದಲ್ಲಿ 25ರಿಂದ 35 ವರ್ಷದೊಳಗೆ ಇರಬೇಕು. • ಸೃಜನಶೀಲ ವಲಯದಲ್ಲಿ ಈಗಾಗಲೇ ಕೆಲಸ ಮಾಡಿರಬೇಕು (ಕೆಳಗೆ ನೀಡಲಾದ ವಲಯಗಳ ವ್ಯಾಖ್ಯಾನಕ್ಕೆ ಅನುಗುಣವಾಗಿ), ಆ ವಲಯದಲ್ಲಿ ಕನಿಷ್ಠ ಮೂರು ವರ್ಷಗಳ ಅನುಭವವಿರಬೇಕು. • ವಾಣಿಜ್ಯೋದ್ಯಮಿಯಾಗಿರಬೇಕು ಮತ್ತು ತಮ್ಮ ದೇಶದಲ್ಲಿ ಆ ಸೃಜನಶೀಲ ವಲಯದ ಪ್ರಗತಿಯಲ್ಲಿ, ಒಂದು ವಾಣಿಜ್ಯಕ ಹಿನ್ನೆಲೆಯಲ್ಲಿ ಅಥವಾ ಸಾರ್ವಜನಿಕ ಹಿನ್ನೆಲೆಯಲ್ಲಿ ಅಥವಾ ಎರಡರಲ್ಲಿಯೂ ಸಾಮರ್ಥ್ಯ ತೋರಿರಬೇಕು. • ನಡತೆ, ಚಾಲಕಶಕ್ತಿ ಮತ್ತು ಸಾಮರ್ಥ್ಯಗಳ ಮೂಲಕ ಅವರ ದೇಶದಲ್ಲಿ ಆ ವಲಯದಲ್ಲಿ ಭವಿಷ್ಯದ ನಾಯಕನಾಗುವ ಶಕ್ತಿಯನ್ನು ನಿರೂಪಿಸಬೇಕು. • ಐಇಎಲ್‌ಟಿಎಸ್ 6ಕ್ಕೆ ಇಂಗ್ಲಿಶ್ ಭಾಷೆ ಕೌಶಲಗಳನ್ನು ಹೊಂದಿರಬೇಕು - 'ಸ್ಪರ್ಧಾತ್ಮಕ ಬಳಕೆದಾರ' ಅಥವಾ ಅದಕ್ಕಿಂತ ಮೇಲೆ.
ಪ್ಯಾಲಸ್ಟೈನ್ ಸಾಹಿತ್ಯೋತ್ಸವ
[ಬದಲಾಯಿಸಿ]ಬ್ರಿಟಿಶ್ ಕೌನ್ಸಿಲ್ 2008ರಲ್ಲಿ ಈ ಉತ್ಸವ ಆರಂಭವಾದಾಗಿನಿಂದ ಪ್ರಮುಖ ಪಾಲುದಾರ ಆಗಿದೆ. 2009ರಲ್ಲಿ, ಇಸ್ರೇಲಿ ಪಡೆಗಳು ಉತ್ಸವದ ಸಮಾರೋಪ ಸಮಾರಂಭವನ್ನು ನಡೆಸಲು ಯೋಜಿಸಲಾಗಿದ್ದ ಸ್ಥಳವನ್ನು ಮುಚ್ಚಿದವು, ಆದರೆ ಬ್ರಿಟಿಶ್ ಕೌನ್ಸಿಲ್ ಈ ವಿಚಾರದಲ್ಲಿ ಒಳಪ್ರವೇಶಿಸಿ, ಸಂಜೆಯ ಸಮಾರಂಭವನ್ನು ತನ್ನ ಮೈದಾನಕ್ಕೆ ಸ್ಥಳಾಂತರಿಸಿದ್ದು ಸ್ಮರಣಾರ್ಹವಾಗಿದೆ.[೨೬]
ಪ್ರಧಾನ ಮಂತ್ರಿಯವರ ಜಾಗತಿಕ ಫೆಲೋಶಿಪ್
[ಬದಲಾಯಿಸಿ]ಈ ಯೋಜನೆಗೆ ಮಕ್ಕಳು, ಶಾಲೆಗಳು ಮತ್ತು ಕುಟುಂಬಗಳ ಇಲಾಖೆಯು ಅನುದಾನ ನೀಡುವುದಾದರೂ, ಬ್ರಿಟಿಶ್ ಕೌನ್ಸಿಲ್ ಇದನ್ನು ನಡೆಸಲು ಜವಾಬ್ದಾರವಾಗಿದೆ. ಬ್ರಿಟಿಶ್ ಕೌನ್ಸಿಲ್ ಪ್ರತಿ ವರ್ಷ 100 ಫೆಲೋ ವ್ಯಕ್ತಿಗಳಿಗೆ ತರಬೇತಿ ನೀಡುತ್ತದೆ, ಪ್ರತಿ ದೇಶದಲ್ಲಿ ಕಾರ್ಯಕ್ರಮವನ್ನು ನೀಡುತ್ತದೆ ಮತ್ತು ಅವರು ಮರಳಿದ ನಂತರ ಅವರ ಚಟುವಟಿಕೆಗಳ ಸಂಯೋಜನೆಯಲ್ಲಿ ತೊಡಗಿಸಿಕೊಳ್ಳುತ್ತದೆ.[೨೭] (ಹೆಚ್ಚಿನ ಮಾಹಿತಿಗೆ ದಿ ಪ್ರೈಮ್ ಮಿನಿಸ್ಟರ್ಸ್ ಗ್ಲೋಬಲ್ ಫೆಲೋಶಿಪ್ ಪ್ರಧಾನ ಲೇಖನ ನೋಡಿ.)
ರಷ್ಯಾದಲ್ಲಿ ಸಂಕಷ್ಟಗಳು
[ಬದಲಾಯಿಸಿ]ಇತ್ತೀಚಿನ ವರ್ಷಗಳಲ್ಲಿ ರಷ್ಯಾದಲ್ಲಿ ಕಾರ್ಯನಿರ್ವಹಣೆ ಮಾಡಲು ಕೌನ್ಸಿಲ್ ಕಷ್ಟಗಳನ್ನು ಎದುರಿಸಿದೆ, ಕೆಲವೊಮ್ಮೆ ಬ್ರಿಟನ್-ರಷ್ಯಾ ಸಂಬಂಧವು ಉದ್ವಿಗ್ನತೆಯಿಂದ ಕೂಡಿರುವುದು ಇದಕ್ಕೆ ಕಾರಣವಾಗಿದೆ. ಇದು ಶಿಕ್ಷಣ, ವಿಜ್ಞಾನ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿ ಸಹಕಾರದ ಕುರಿತ 1994ರ ಅಂತರಸರ್ಕಾರಿ ಒಪ್ಪಂದದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ರಷ್ಯಾದಲ್ಲಿ ಬ್ರಿಟಿಶ್ ಕೌನ್ಸಿಲ್‌ನ ಸ್ಥಾನಮಾನವನ್ನು ವಿಧ್ಯುಕ್ತಗೊಳಿಸಲು ಒಂದು ಹೊಸ ಸಾಂಸ್ಕೃತಿಕ ಕೇಂದ್ರಗಳ ಒಪ್ಪಂದ(ಸಿಸಿಎ)ಕ್ಕಾಗಿ ಕೆಲವು ವರ್ಷಗಳಿಂದ ಬ್ರಿಟಿಶ್ ಸರ್ಕಾರವು ಪ್ರಯತ್ನಿಸುತ್ತಲೇ ಇದೆ[೨೮] ಬ್ರಿಟಿಶ್ ಕೌನ್ಸಿಲ್ ಈಗ ರಷ್ಯಾದಲ್ಲಿ ತೆರಿಗೆಗಾಗಿ ನೋಂದಾಯಿತವಾಗಿದೆ ಮತ್ತು ತನ್ನ "ಶುಲ್ಕ ಗಳಿಸುವ ಕೆಲಸ"ಕ್ಕೆ ತೆರಿಗೆಯನ್ನು ನೀಡುತ್ತದೆ. ವಾಣಿಜ್ಯಕ ಭಾಷೆ ಬೋಧನಾ ಕೋರ್ಸ್‌ಗಳು ಮತ್ತು ರಾಜಕೀಯವಾಗಿವೆ ಎಂದು ಗ್ರಹಿಸಲಾದ ರಷ್ಯಾದ ಎನ್‌ಜಿಒಗಳಿಗೆ ಬ್ರಿಟಿಶ್ ಕೌನ್ಸಿಲ್‌ನ ಬೆಂಬಲದ ಮೇಲೆ ಸ್ಥಳೀಯ ತೆರಿಗೆಯನ್ನು ಪಾವತಿಸುವುದರಿಂದ ಈ ಹಿಂದೆ ವಿನಾಯಿತಿ ನೀಡಲಾಗಿದೆ ಎಂದು ರಷ್ಯಾ ಸರ್ಕಾರವು ಪ್ರತಿಪಾದಿಸುತ್ತಿದೆ.[original research?]
2007ರ ಕೊನೆಯಲ್ಲಿ ರಷ್ಯಾದಲ್ಲಿ ತನ್ನೆಲ್ಲ ಇಎಸ್‌ಒಎಲ್ ಮತ್ತು ಇತರೆ ಇಂಗ್ಲಿಶ್ ಭಾಷೆ ಪರೀಕ್ಷೆಗಳನ್ನು ನಡೆಸುವುದನ್ನು ನಿಲ್ಲಿಸುವುದಾಗಿ, 2008ರ ಜನವರಿಯಿಂದ ಅದು ಕಾರ್ಯಗತವಾಗುವುದಾಗಿ ಬ್ರಿಟಿಶ್ ಕೌನ್ಸಿಲ್ ಪ್ರಕಟಿಸಿತು. "ಸನ್ನಿವೇಶಗಳು ನಮ್ಮ ನಿಯಂತ್ರಣ ಮೀರಿರುವುದು" ಇದಕ್ಕೆ ಕಾರಣ ಎಂದು ಅದು ಉಲ್ಲೇಖಿಸಿತು ಮತ್ತು ಅದಾಗಲೇ ಬುಕ್ ಆಗಿದ್ದ ಕೆಲವು ಪರೀಕ್ಷೆಗಳನ್ನು ರದ್ದುಪಡಿಸಲಾಯಿತು.[೨೯] ಇದರೊಂದಿಗೆ, ಮಾಸ್ಕೋ, ಸೇಂಟ್ ಪೀಟರ್ಸ್‌ಬರ್ಗ್ ಮತ್ತು ಎಕಟೆರಿನ್‌ಬರ್ಗ್ ಹೊರತುಪಡಿಸಿ, ರಷ್ಯಾದ ಎಲ್ಲ ಕಚೇರಿಗಳನ್ನು 2007ರ ಕೊನೆಯ ಒಳಗೆ ಮುಚ್ಚಲಾಗುವುದು ಎಂದು ಬ್ರಿಟಿಶ್ ಕೌನ್ಸಿಲ್ ಪ್ರಕಟಿಸಿತು. ಮುಚ್ಚುವಿಕೆ ಕುರಿತ ದೃಢೀಕರಣಗಳು ಇಲ್ಲಿ ವರದಿಯಾಗಿವೆ.[೩೦]
2007ರ ಡಿಸೆಂಬರ್ 12ರಂದು ಇನ್ನಷ್ಟು ಬೆಳವಣಿಗೆಗಳು ನಡೆದವು. ರಷ್ಯಾದ ವಿದೇಶಾಂಗ ಸಚಿವಾಲಯದಿಂದ ಮಾಸ್ಕೋ ಹೊರಗಿನ ಇನ್ನೆರಡು ಕಚೇರಿಗಳನ್ನು ಜನವರಿಯ ಆರಂಭದಲ್ಲಿ ಮುಚ್ಚುವಂತೆ ಬ್ರಿಟಿಶ್ ಕೌನ್ಸಿಲ್‌ಗೆ ಆದೇಶ ನೀಡಲಾಗಿದೆ ಎಂದು ವರದಿಯಾಯಿತು. ಬ್ರಿಟಿಶ್ ಕೌನ್ಸಿಲ್ ರಷ್ಯಾದೊಳಗೆ "ಕಾನೂನುಬಾಹಿರವಾಗಿ" ಕಾರ್ಯನಿರ್ವಹಣೆ ಮಾಡುತ್ತಿತ್ತು ಮತ್ತು "ಕೌನ್ಸಿಲ್ ಬೇರೆ ಕಾಯಿದೆಗಳ ಜೊತೆ ತೆರಿಗೆ ನಿಯಮಗಳನ್ನೂ ಉಲ್ಲಂಘಿಸಿದೆ" ಎಂಬ ತನ್ನ ಮೊದಲಿನ ಹೇಳಿಕೆಯನ್ನೇ ಸಚಿವಾಲಯವು ಮುಂದುವರೆಸಿತು.[೩೧] ಮಾಸ್ಕೋ ನ್ಯೂಸ್ ಅಂತರ್ಜಾಲತಾಣದಲ್ಲಿ ಪ್ರಕಟವಾದ ಒಂದು ಲೇಖನದಲ್ಲಿ ರಷ್ಯಾದ ನಿಲುವನ್ನು ಸಾರಾಂಶಗೊಳಿಸಲಾಗಿದೆ.[೩೨]
ಸೇಂಟ್ ಪೀಟರ್ಸ್‌ಬರ್ಗ್ ಮತ್ತು ಎಕಟೆರಿನ್‌ಬರ್ಗ್‌ನಲ್ಲಿ ಕೌನ್ಸಿಲ್ ಕಚೇರಿಗಳನ್ನು ಜನವರಿ-ಮಧ್ಯದಲ್ಲಿ ಪುನಾಆರಂಭಿಸಿದ ನಂತರ, ರಷ್ಯಾದ ಅಧಿಕಾರಿಗಳು ಬ್ರಿಟನ್ ಉದ್ದೇಶಪೂರ್ವಕ ಪ್ರಚೋದನೆ ನಡೆಸುತ್ತಿದೆ ಎಂದು ಆರೋಪಿಸಿದರು, ಏಕೆಂದರೆ ಇದೊಂದು ಕಾನೂನುಬಾಹಿರ ಕ್ರಮವಾಗಿತ್ತು. ಆದರೆ, ಬ್ರಿಟಿಶ್ ರಾಯಭಾರಿ ಸರ್ ಟೋನಿ ಬ್ರೆಂಟನ್ ತಾವು ರಷ್ಯಾದ ವಿದೇಶಾಂಗ ಉಪಸಚಿವರಾದ ವ್ಲಾದಿಮಿರ್ ಟಿಟೊವ್, ಅವರಿಗೆ ಕೌನ್ಸಿಲ್ ಕಚೇರಿಗಳು ತೆರೆದಿರುತ್ತವೆ ಎಂದು ತಿಳಿಸಿರುವುದಾಗಿ ಹೇಳಿದರು. "ಬ್ರಿಟಿಶ್ ಕೌನ್ಸಿಲ್ ಸಂಪೂರ್ಣ ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ, ಆದ್ದರಿಂದ ಅದು ಕೆಲಸ ಮಾಡುವುದನ್ನು ಮುಂದುವರೆಸುತ್ತದೆ, ಇದರ ವಿರುದ್ಧ ರಷ್ಯಾದ ಯಾವುದೇ ಕ್ರಮವೂ ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗುತ್ತದೆ" ಎಂದು ಬ್ರಿಟನ್ ರಾಯಭಾರಿ ಹೇಳಿದ್ದರು.[೩೩] 2008ರ ಜನವರಿ 15ರಂದು, ಬ್ರಿಟಿಶ್ ಕೌನ್ಸಿಲ್‌ನ ಆಗಿನ ಅಧ್ಯಕ್ಷರಾದ ನೀಲ್ ಕಿನ್ನಾಕ್ ಅವರ ಮಗ, ಸೇಂಟ್ ಪೀಟರ್ರ್ಸ್‌ಬರ್ಗ್ ಕಚೇರಿಯ ಮುಖ್ಯಸ್ಥ ಸ್ಟೀಫನ್ ಕಿನ್ನಾಕ್ ಅವರನ್ನು ಟ್ರಾಫಿಕ್ ಅಪರಾಧ ಎಸಗಿದ್ದಾರೆ ಮತ್ತು ಮದ್ಯಪಾನ ಮಾಡಿ ಚಾಲನೆ ಮಾಡಿದ್ದಾರೆ ಎಂಬ ಆರೋಪದಲ್ಲಿ ಬಂಧನದಲ್ಲಿಡಲಾಯಿತು; ಆದರೆ ತಮ್ಮ ರಾಜತಾಂತ್ರಿಕ ಸ್ಥಾನಮಾನದ ಹಿನ್ನೆಲೆಯಲ್ಲಿ ಅವರು ಆಲ್ಕೋಹಾಲ್-ಮಟ್ಟ ಅಳೆಯುವ ಉಸಿರಾಟದ ಪರೀಕ್ಷೆ ತೆಗೆದುಕೊಳ್ಳಲು ನಿರಾಕರಿಸಿದರು. ಬ್ರಿಟಿಶ್ ಕಾನ್ಸುಲ್-ಜನರಲ್ ಅಲ್ಲಿಗೆ ಒಂದು ಗಂಟೆ ನಂತರ ಬಂದ ಮೇಲೆ ಅದು ಮೌಲಿಕ ಕಾರಣ ಎಂದು ದೃಢಪಟ್ಟಿತು. ನಂತರ ಅವರನ್ನು ಬಿಡುಗಡೆ ಮಾಡಲಾಯಿತು.[೩೪] ಸ್ಟೀಫನ್ ಕಿನ್ನಾಕ್ ಮರುದಿನ ರಷ್ಯಾವನ್ನು ಬಿಟ್ಟರು ಮತ್ತು ನಂತರ ಅವರನ್ನು ಬೇರೆಡೆಗೆ ವರ್ಗಾಯಿಸಲಾಯಿತು.[೩೫]
ಕಚೇರಿಯನ್ನು ಪುನಾ ತೆರದ ನಂತರ ಎಫ್‌ಎಸ್‌ಬಿ ಅಧಿಕಾರಿಗಳು ಬ್ರಿಟಿಶ್ ಕೌನ್ಸಿಲ್ ಸಿಬ್ಬಂದಿಗಳನ್ನು ಸೇಂಟ್ ಪೀಟರ್ಸ್‌ಬರ್ಗ್ ಮತ್ತು ಎಕಟೆರಿನ್‌ಬರ್ಗ್ ಎರಡೂ ಕಡೆ ಪರಿಶೀಲಿಸಿದರು ಮತ್ತು ಅವರು ಒಂದು ಕಾನೂನುಬಾಹಿರ ಸಂಸ್ಥೆಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಇದರಿಂದಾಗಿ ಎರಡೂ ಕಚೇರಿಗಳನ್ನು ಮತ್ತೆ ಮುಚ್ಚಬೇಕಾಯಿತು, ಹೀಗಾಗಿ 2008 ಜನವರಿ 17ರಂದು ಅವು ಮುಚ್ಚಿದ್ದವು.[೩೬] ತಮ್ಮ ಸಿಬ್ಬಂದಿಯೊಂದಿಗಿನ ತೊಂದರೆಗಳ ಹಿನ್ನೆಲೆಯಲ್ಲಿ ಕಚೇರಿಗಳನ್ನು ಪುನಾ ತೆರೆಯುವ ಸಂಭವ ಕಡಿಮೆ ಎಂದು ಬ್ರಿಟಿಶ್ ಸರ್ಕಾರ ಭಾವಿಸಿತು. ಲಂಡನ್‌ನಲ್ಲಿದ್ದ ರಷ್ಯಾದ ರಾಯಭಾರಿ ಯೂರಿ ಫೆದೊತೊವ್ ಮಾಸ್ಕೋ ನಿಲುವಿನ ಕುರಿತು ಬ್ರಿಟನ್ ಹೆಚ್ಚು ಗೌರವ ತೋರಿದರೆ ವಿವಾದಕ್ಕೆ ಪರಿಹಾರವನ್ನು ತಲುಪಬಹುದು ಎಂದು ಪತ್ರಕರ್ತರಿಗೆ ಹೇಳಿದರು: "ಪರಿಹಾರ ಸಾಧ್ಯವಿದೆ, ಆದರೆ ನಮಗೆ ಹೆಚ್ಚು ಗೌರವ ತೋರುವ ಅಗತ್ಯವಿದೆ ಮತ್ತು ಸಾರ್ವಜನಿಕ ಚರ್ಚೆಗಳನ್ನು ತಪ್ಪಿಸಬೇಕಿದೆ, ಆದರೆ ಸದ್ಯದ ಸನ್ನಿವೇಶಗಳಲ್ಲಿ ಅಸಹಾಯಕ ಸ್ಥಿತಿ ಇದೆ" ಎಂದು ಆತ ವಿವರಿಸಿದರು.[೩೭]
2008ರ ಜೂನ್‌ನಲ್ಲಿ ರಷ್ಯಾದ ತೆರಿಗೆ ಅಧಿಕಾರಿಗಳಿಂದ ತೆರಿಗೆ ಪಾವತಿ ಮಾಡದೇ ಇರುವುದಕ್ಕಾಗಿ ಬ್ರಿಟಿಶ್ ಕೌನ್ಸಿಲ್‌ಅನ್ನು ಇನ್ನಷ್ಟು ವಿಚಾರಣೆ ಮಾಡಲಾಗುತ್ತಿದೆ ಎಂದು ಪ್ರಕಟಿಸಲಾಯಿತು. ಇದು 2008 ಮೇನಲ್ಲಿ ನೀಡಲಾಗಿದ್ದ, ಆದರೆ 2007ಕ್ಕೆ ಸಂಬಂಧಿಸಿದ ತೆರಿಗೆ ನಿರ್ಧರಣೆ ಕುರಿತಾದ ವಿವಾದಾತ್ಮಕ ತೆರಿಗೆ ಮಸೂದೆಯನ್ನು ಅವಲಂಬಿಸಿತ್ತು. [ಸೂಕ್ತ ಉಲ್ಲೇಖನ ಬೇಕು]
ಬ್ರಿಟಿಶ್ ಕೌನ್ಸಿಲ್ ಒಂದು ಇ-ಮೇಲ್ ಮಾಡಿದ ಹೇಳಿಕೆಯಲ್ಲಿ, “ಬ್ರಿಟಿಶ್ ಕೌನ್ಸಿಲ್ ತೆರಿಗೆ ಕಚೇರಿಗಳೊಂದಿಗೆ ನೋಂದಾಯಿಸಿಕೊಂಡಿದೆ, ಅದು ನಿಯಮಿತವಾಗಿ ತೆರಿಗೆಗಳನ್ನು ಪಾವತಿಸುತ್ತಿದೆ... ಮತ್ತು ರಷ್ಯಾದ ತೆರಿಗೆ ಅಧಿಕಾರಿಗಳ ಎಲ್ಲ ಬೇಡಿಕೆಗಳನ್ನು ಪೂರೈಸಿದೆ” ಎಂದು ಹೇಳಿತು. [ಸೂಕ್ತ ಉಲ್ಲೇಖನ ಬೇಕು]
ಆದರೆ ತೆರಿಗೆ ಮಸೂದೆಯಡಿಯಲ್ಲಿ ನಮೂದಿಸಲಾದ ಬಾಕಿ ಇರುವ ಎಲ್ಲ ತೆರಿಗೆಯನ್ನು ಕೌನ್ಸಿಲ್ ಪಾವತಿಸಲು ವಿಫಲವಾಗಿದೆ ಎಂದು ಆರೋಪಿಸಲಾಗಿದ್ದು, ಕೇಳಲಾದ ತೆರಿಗೆ ಮೊತ್ತವು "ಪ್ರತೀಕಾರರೂಪದ್ದು ಮತ್ತು ಬಹಳಷ್ಟು ಅಸಮಂಜಸವಾಗಿದೆ” ಎಂದು ವಿವರಿಸಿದೆ.[original research?] ಪೂರ್ಣ ಮೊತ್ತವು ಪಾವತಿಸದೆಯೇ ಹಾಗೆಯೇ ಉಳಿದರೆ, ಆಗ ರಷ್ಯಾದ ತೆರಿಗೆ ಅಧಿಕಾರಿಗಳು ಸಂಭಾವ್ಯ ಕ್ರಮಗಳನ್ನು ತೆಗೆದುಕೊಳ್ಳಬಹುದಾಗಿದೆ. ಮಾಸ್ಕೋದಲ್ಲಿ ಉಳಿದಿರುವ ಬ್ರಿಟಿಶ್ ಕೌನ್ಸಿಲ್‌ನ ಏಕೈಕ ರಷ್ಯಾದ ಕಚೇರಿಯಿಂದ ಪುಸ್ತಕಗಳು, ಪೀಠೋಪಕರಣಗಳು, ಕಂಪ್ಯೂಟರ್‌ಗಳು ಇತ್ಯಾದಿಗಳನ್ನು ಒಳಗೊಂಡಂತೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದನ್ನು ಸಂಭಾವ್ಯ ಕ್ರಮವು ಒಳಗೊಂಡಿರುತ್ತದೆ. ಅಧಿಕಾರಿಯೊಬ್ಬರು ವಿವರಿಸಿದಂತೆ, ಅಂತಹ ಕ್ರಮವು "ಇನ್ನೂ ಬರಬೇಕಾದ ತೆರಿಗೆ ಮೊತ್ತ ಅಪಾರವಿದೆ ಎಂದು ತೆರಿಗೆ ಅಧಿಕಾರಿಗಳು ನಂಬಿದಲ್ಲಿ ಸಮಂಜಸ ಕಾರ್ಯವಿಧಾನವಾಗಿದೆ".[೩೮]
2008ರ ಡಿಸೆಂಬರ್‌ನಲ್ಲಿ ರಷ್ಯಾದ ಒಂದು ನ್ಯಾಯಾಲಯವು ಬ್ರಿಟಿಶ್ ಕೌನ್ಸಿಲ್ ವಿರುದ್ಧದ ತೆರಿಗೆ ಪ್ರಕರಣವನ್ನು ಪುನಾ ವಿಚಾರಣೆಗೆ ತೆಗೆದುಕೊಂಡು, 2.3 ದಶಲಕ್ಷ ಪೌಂಡ್ ಬಾಕಿ ಉಳಿದಿದೆ ಎಂದು ತೀರ್ಪುನೀಡಿತು. ಕೆಳಗಿನ ನ್ಯಾಯಾಲಯವು ಈ ಪ್ರಕರಣವನ್ನು ಪರಿಹರಿಸಿದೆ ಎಂದು ಬ್ರಿಟನ್ ರಾಜತಾಂತ್ರಿಕರು ಆಶಿಸಿದ್ದು, ತಲೆಕೆಳಗಾಗಿತ್ತು.[೩೯] ಕೌನ್ಸಿಲ್ ಈಗ ಸ್ಟೀಫನ್ ಕಿನ್ನಾಕ್ ಅವರೊಡನೆ ಸಂಬಂಧ ಕಡಿದುಕೊಂಡಿದೆ. ಆತ 2009ರ ಜನವರಿಯಿಂದ ಸ್ವಿಟ್ಜರ್‌ಲ್ಯಾಂಡ್‌ನ ದಾವೋಸ್‌ನಲ್ಲಿ ವಿಶ್ವ ಆರ್ಥಿಕ ವೇದಿಕೆ (ವರ್ಲ್ಡ್ ಎಕಾನಾಮಿಕ್ ಫೋರಮ್)ಯಲ್ಲಿ ಹೊಸ ಹುದ್ದೆಯಲ್ಲಿದ್ದಾನೆ.[೪೦]
ಚೀನಾದಲ್ಲಿ ಬ್ರಿಟಿಶ್ ಕೌನ್ಸಿಲ್
[ಬದಲಾಯಿಸಿ]ಕೌನ್ಸಿಲ್ ಹಾಂಗ್‌ಕಾಂಗ್‌ನಲ್ಲಿ 1948ರಲ್ಲಿ ತನ್ನ ಕೆಲಸವನ್ನು ಆರಂಭಿಸಿತು. ಬ್ರಿಟಿಶ್ ಕೌನ್ಸಿಲ್‌ನ ಕೆಲಸಗಳು ಇಂಗ್ಲಿಶ್ ಬೋಧನೆ; ಬ್ರಿಟನ್ ಕುರಿತು ಇತ್ತೀಚಿನ ಮಾಹಿತಿ ಒದಗಿಸುವುದು; ಬ್ರಿಟಿಶ್ ಶಿಕ್ಷಣ ಮತ್ತು ತರಬೇತಿಯನ್ನು ಉತ್ತೇಜಿಸುವುದು; ಸುಧಾರಣೆ ಮತ್ತು ಆಡಳಿತದ ಕುರಿತು ಹಾಂಗ್‌ಕಾಂಗ್ ಸರ್ಕಾರದೊಂದಿಗೆ ಹತ್ತಿರದಿಂದ ಕೆಲಸ ಮಾಡುವುದು ಮತ್ತು ಬ್ರಿಟಿಶ್ ವಿಜ್ಞಾನ, ಕಲೆ, ಸಾಹಿತ್ಯ ಹಾಗೂ ವಿನ್ಯಾಸವನ್ನು ಪ್ರದರ್ಶಿಸುವುದು; ಇವುಗಳನ್ನು ಒಳಗೊಂಡಿದೆ.[೪೧]
ಟೀಕೆಗಳು
[ಬದಲಾಯಿಸಿ]2007ರ ಮಾರ್ಚ್, ಬ್ರಿಟಿಶ್ ಕೌನ್ಸಿಲ್ ಮಧ್ಯಪ್ರಾಚ್ಯ, ಉತ್ತರ ಆಫ್ರಿಕಾ ಮತ್ತು ಕೇಂದ್ರ ಮತ್ತು ದಕ್ಷಿಣ ಏಷ್ಯಾದಲ್ಲಿ 'ತನ್ನ ಹೂಡಿಕೆಯನ್ನು ಹೆಚ್ಚಿಸುವ ಉದ್ದೇಶವನ್ನು' ಪ್ರಕಟಿಸಿತು. ಇದಕ್ಕೆ ಯೂರೋಪ್‌ನಾದ್ಯಂತ ಇತರೆ ಸೇವೆಗಳ ಕಡಿತ ಮತ್ತು ಗ್ರಂಥಾಲಯಗಳು ಮತ್ತು ಕಚೇರಿಗಳನ್ನು ಮುಚ್ಚುವುದರಿಂದ ಹಣಕಾಸು ಒದಗಿಸುವುದಾಗಿತ್ತು. [ಸೂಕ್ತ ಉಲ್ಲೇಖನ ಬೇಕು] 2007ರ ಜೂನ್‌ನಲ್ಲಿ, ಟೆಲ್ ಅವಿವ್ ಮತ್ತು ಜೆರುಸಲೆಂ (ಇಲ್ಲಿ ಬ್ರಿಟಿಶ್ ಕೌನ್ಸಿಲ್ ಗ್ರಂಥಾಲಯಗಳು 1946ರಿಂದ ಇದ್ದವು)ನಲ್ಲಿಯೂ ಕೌನ್ಸಿಲ್‌ಅನ್ನು ಮುಚ್ಚಲಾಗುವುದು ಎಂದು ಸಂಸದರು ಹೇಳಿದರು. ಅಥೆನ್ಸ್[೪೨] ಮತ್ತು ಬೆಲ್‌ಗ್ರೇಡ್[೪೩] ನಲ್ಲಿದ್ದ ಬ್ರಿಟಿಶ್ ಕೌನ್ಸಿಲ್ ಗ್ರಂಥಾಲಯಗಳನ್ನೂ ಮುಚ್ಚಲಾಗುತ್ತಿತ್ತು. ಹಾಗೆಯೇ ಭಾರತದಲ್ಲಿ, ಭೋಪಾಲ್ ಮತ್ತು ತ್ರಿವೆಂಡ್ರಮ್‌ನಲ್ಲಿದ್ದ ಬ್ರಿಟಿಶ್ ಕೌನ್ಸಿಲ್ ಗ್ರಂಥಾಲಯಗಳನ್ನು ಈ ವರ್ಷ ಮಾರ್ಚ್ ವೇಳೆಗೆ ಮುಚ್ಚಲಾಗುವುದು.[೪೪] ಇದು ದೇಶದಲ್ಲಿ "ತನ್ನ ಭೌತಿಕ ಉಪಸ್ಥಿತಿಯನ್ನು ಕಡಿಮೆಗೊಳಿಸುವುದು" ಮತ್ತು ಆ ಹಣಕಾಸನ್ನು ಸಂಸ್ಕೃತಿ, ಶಿಕ್ಷಣ, ವಿಜ್ಞಾನ ಮತ್ತು ಸಂಶೋಧನೆಯ ಬೃಹತ್ ಯೋಜನೆಗಳಿಗೆ ತಿರುಗಿಸುವ" ಕೌನ್ಸಿಲ್‌ನ ನೀತಿಯ ಭಾಗವಾಗಿದೆ.[ಸೂಕ್ತ ಉಲ್ಲೇಖನ ಬೇಕು]
2009ರ ಡಿಸೆಂಬರ್ ಕೊನೆಯಲ್ಲಿ ಮುಂಬಯಿಯಲ್ಲಿರುವ ಬ್ರಿಟಿಶ್ ಕೌನ್ಸಿಲ್ ಗ್ರಂಥಾಲಯವು ಕೊನೆಯ ಬಾರಿಗೆ ಮುಚ್ಚಿತು.[೪೫] ಭಾರತದ ವ್ಯಾಖ್ಯಾನಕಾರರು ಆನ್‌ಲೈನ್ ಪರ್ಯಾಯಗಳ ಕುರಿತು ಅಷ್ಟೇನೂ ಪ್ರಭಾವಿತರಾಗಿಲ್ಲ.
ಬ್ರಿಟಿಶ್ ಕೌನ್ಸಿಲ್ ಗ್ರಂಥಾಲಯಗಳು ಮತ್ತು ಕಚೇರಿಗಳನ್ನು ಬೇರೆ ಅನೇಕ ದೇಶಗಳಲ್ಲಿಯೂ ಮುಚ್ಚಲಾಗಿದೆ. ಇವು ತನ್ನ ಕಾರ್ಯತಂತ್ರಕ್ಕೆ ಅನುಗುಣವಾಗಿಲ್ಲ ಅಥವಾ ವಾಣಜ್ಯಕವಾಗಿ ಪ್ರಾಮುಖ್ಯವಿಲ್ಲ, ಕೌನ್ಸಿಲ್ ತನ್ನ ಚಟುವಟಿಕೆಗಳನ್ನು ಚೀನಾ ಮತ್ತು ಗಲ್ಫ್ ದೇಶಗಳಲ್ಲಿ ಪುನಾಕೇಂದ್ರೀಕರಿಸಿದ್ದು, ಅಲ್ಲಿ 'ತನ್ನ ಹಣಕ್ಕೆ ತಕ್ಕ ಮೌಲ್ಯವನ್ನು ಪಡೆಯಬಹುದು' ಎಂದು ಬ್ರಿಟಿಶ್ ಕೌನ್ಸಿಲ್ ಸಮರ್ಥಿಸಿಕೊಂಡಿದೆ.[ಸೂಕ್ತ ಉಲ್ಲೇಖನ ಬೇಕು][original research?] ಲೆಸತೋ, ಸ್ವಾಜಿಲ್ಯಾಂಡ್, ಇಕ್ವೆಡಾರ್ ಮತ್ತು ಜರ್ಮನಿಯ ಪ್ರಾಂತ್ಯವಾದ ಲಾಂಡರ್‌ಗಳಲ್ಲಿದ್ದ ಮತ್ತು ಬೆಲಾರಸ್‌ಗಳಲ್ಲಿದ್ದ ಕೌನ್ಸಿಲ್ ಕಚೇರಿಗಳನ್ನು 2000–2001ರಲ್ಲಿ ಮುಚ್ಚಲಾಗಿದೆ. ಇದು ಸಂಸತ್ತಿನ ಟೀಕೆಯನ್ನು ಎದುರಿಸಿದೆ. ನಂತರದಲ್ಲಿ ಬೆಲಾರಸ್ ಮುಚ್ಚುವಿಕೆಯು "ತಾತ್ಕಾಲಿಕ" ಹಿಂತೆಗೆದುಕೊಳ್ಳುವಿಕೆ ಮಾತ್ರ ಎಂದು ಎಡಿನ್‌ಬರೊದ ಒಂದು ವಿಚಾರಸಂಕಿರಣದಲ್ಲಿ[೪೬] ಬ್ರಿಟಿಶ್ ಕೌನ್ಸಿಲ್ ಅಧ್ಯಕ್ಷ ನೀಲ್ ಕಿನ್ನಾಕ್ ನೀಡಿದ ಭರವಸೆಯು ಹುಸಿ ಎಂಬುದು ರುಜುವಾತಾಗಿದೆ. ಲ್ಯಾಟಿನ್ ಅಮೆರಿಕಾದಲ್ಲಿ ತನ್ನ ಕಾರ್ಯತಂತ್ರವನ್ನು ಮರುಆಲೋಚನೆ ಮಾಡುವುದರ ಭಾಗವಾಗಿ 2006ರ ಸೆಪ್ಟೆಂಬರ್‌ನಲ್ಲಿ ಪೆರುವಿನಲ್ಲಿದ್ದ ಬ್ರಿಟಿಶ್ ಕೌನ್ಸಿಲ್ ಕಚೇರಿಯನ್ನೂ ಮುಚ್ಚಲಾಯಿತು.[೪೭]
ದಿ ಚಾಂಪಿಯನ್ ಟು ದಿ ಬ್ರಿಟಿಶ್ ಹಿಸ್ಟರಿ ಕೃತಿಯ ಲೇಖಕ ಚಾರ್ಲ್ಸ್ ಅರ್ನಾಲ್ಡ್- ಬೇಕರ್, ಬ್ರಿಟಿಶ್ ಕೌನ್ಸಿಲ್‌ನ ಆದ್ಯತೆಗಳು ಬದಲಾಗಿರುವುದನ್ನು ಹೇಳಿದ್ದಾರೆ: 'ಮೇಲಿನಿಂದ ಕೆಳಗಿನವರೆಗೆ ಇಡೀ ನೀತಿಯನ್ನು ತಪ್ಪಾಗಿ ರಚಿಸಲಾಗಿದೆ. ನಾವು ಯಶಸ್ವಿಯಾಗದ ಕಡೆಯಲ್ಲಿ ಹೋಗುತ್ತಿದ್ದೇವೆ ಮತ್ತು ನಮಗೆ ಒಳ್ಳೆಯದನ್ನು ಹಾರೈಸುವ ಯೂರೋಪ್‌ನಲ್ಲಿರುವ ನಮ್ಮ ಗೆಳೆಯರನ್ನು ನಿರ್ಲಕ್ಷಿಸುತ್ತಿದ್ದೇವೆ. ಬೈರೂತ್ ಅಥವಾ ಬಾಗ್ದಾದ್‌ನಲ್ಲಿ ನಮ್ಮ ಪುಸ್ತಕಗಳನ್ನು ಓದಲು ಹೋಗುವ ಜನರು ಕೂಡ ಈಗಾಗಲೇ ಪರಿವರ್ತಿರಾಗಿದ್ದಾರೆ.[೪೮]
ಬ್ರಿಟಿಶ್ ಕೌನ್ಸಿಲ್‌ನಂತೆ ಅಲ್ಲದೇ, ಅಲಿಯಾನ್ಸ್ ಫ್ರಾಂಕಾಯಿಸ್ ಮತ್ತು ಗಯಟೆ ಇನ್‌ಸ್ಟಿಟ್ಯುಟ್ಗಳು ಯೂರೋಪ್‌ನಾದ್ಯಂತ ಗ್ರಂಥಾಲಯಗಳನ್ನು ವಿಸ್ತರಿಸುತ್ತಿವೆ ಮತ್ತು ಪುಸ್ತಕಗಳಿಂದ ಪುನಾ ಭರ್ತಿಮಾಡುತ್ತಿವೆ ಎಂಬುದನ್ನು ಲೇಖನದಲ್ಲಿ ಎತ್ತಿತೋರಿಸಲಾಗಿದೆ. ಫ್ರಾನ್ಸ್ ತನ್ನ ಹೊಸ ಗ್ರಂಥಾಲಯವನ್ನು ಟೆಲ್ ಅವಿವ್‌ನಲ್ಲಿ 2007ರಲ್ಲಿ ಆರಂಭಿಸಿದೆ - ಬ್ರಿಟಿಶ್ ಕೌನ್ಸಿಲ್ ಅಲ್ಲಿ ಗ್ರಂಥಾಲಯ ಮುಚ್ಚಿದ ಮತ್ತು ಪಶ್ಚಿಮ ಜೆರುಸಲೆಂನಲ್ಲಿದ್ದ ಬ್ರಿಟಿಶ್ ಕೌನ್ಸಿಲ್ ಗ್ರಂಥಾಲಯವನ್ನು ಮುಚ್ಚಿದ ಕೆಲವೇ ತಿಂಗಳುಗಳ ನಂತರ ಆರಂಭಿಸಿದೆ.[೪೯] ಗಾಜಾದಲ್ಲಿ, ಇನ್‌ಸ್ಟಿಟ್ಯುಟ್ ಫ್ರಾಂಕಾಯಿಸ್ ಗಾಜಾ ಮುನ್ಸಿಪಲ್ ಗ್ರಂಥಾಲಯಕ್ಕೆ ಸ್ಥಳೀಯ ಸಂಸ್ಥೆಯೊಂದಿಗೆ ಪಾಲುದಾರಿಕೆಯಲ್ಲಿ ಬೆಂಬಲ ಒದಗಿಸುತ್ತಿದೆ ಮತ್ತು ಗಾಜಾ ನಗರ ಮತ್ತು ಫ್ರೆಂಚ್ ಬಂದರು ಡಂಕರ್‌ಕ್ವೆ ನಡುವೆ ಅವಳಿ ಮುನ್ಸಿಪಲ್ ಸಂಬಂಧ ರೂಪಿಸಲಾಗಿದೆ.[೫೦][೫೧] ಓಸ್ಲೋದಲ್ಲಿ ಬ್ರಿಟಿಶ್ ಕೌನ್ಸಿಲ್ ನಾರ್ವೇ ಜನರು ಕರೆ ಮಾಡಿದಾಗ, 'ನಮ್ಮ ಕಚೇರಿ ಸಾರ್ವಜನಿಕರಿಗೆ ತೆರೆದಿರುವುದಿಲ್ಲ ಮತ್ತು ಯಾವುದೇ ವಿಚಾರಣಾ ಸೇವೆಯನ್ನು ಹೊಂದಿರುವುದಿಲ್ಲ' ಎಂದು ತಿಳಿಸುತ್ತಿದೆ.[೫೨] ಗಯಟೆ ಇನ್ಸ್‌ಟಿಟ್ಯುಟ್ ಕೂಡ ಗ್ಲಾಸ್ಗೋದಲ್ಲಿ ಬ್ರಿಟಿಶ್ ಕೌನ್ಸಿಲ್‌ಗಿಂತ ಹೆಚ್ಚು ಎದ್ದುಕಾಣುವ ಉಪಸ್ಥಿತಿ ಹೊಂದಿದೆ.[೫೩] ಇದಕ್ಕೆ ಪ್ರತಿಯಾಗಿ, ಈಗ ಜರ್ಮನಿಯಲ್ಲಿ ಒಂದೇ ಒಂದು ಬ್ರಿಟಿಶ್ ಕೌನ್ಸಿಲ್ ಕಚೇರಿ ಉಳಿದಿದೆ ಮತ್ತು ಅದು ಪಶ್ಚಿಮ ಬರ್ಲಿನ್‌ನಲ್ಲಿದೆ.[೫೪]
ಸಂಸತ್ತಿನ ಸದಸ್ಯರು ಮತ್ತು ಇನ್ನಿತರರು ಬ್ರಿಟಿಶ್ ಕೌನ್ಸಿಲ್‌ಗೆ ಸಂಸತ್ತಿನ ಬಲವಾದ ಹೊಣೆಗಾರಿಕೆಯ ಕೊರತೆ ಇದೆ ಎಂದು ಮತ್ತು ಸಂಸ್ಥೆಯು ಸಂಸದರೊಂದಿಗೆ ವೈಯಕ್ತಿಕ ಲಾಬಿ ಸಂಬಂಧಗಳನ್ನು ಹೊಂದಿದೆ ಎಂದು ಟೀಕಿಸಿದರು.[ಸೂಕ್ತ ಉಲ್ಲೇಖನ ಬೇಕು] ಕನ್ಸ್‌ರ್ವೇಟಿವ್ ಪಕ್ಷದ ಶ್ಯಾಡೋ ಕಲ್ಚರ್ ವಕ್ತಾರ, ಸಂಸದರಾದ ಜೆರೆಮಿ ಹಂಟ್ ಅವರ ಹಾಟ್‌ಕೋರ್ಸ್‌ಸ್ ಕಂಪನಿಯು ಬ್ರಿಟಿಶ್ ಕೌನ್ಸಿಲ್ ಜೊತೆ ಶೆಫೀಲ್ಡ್ ಡಾಟಾ ಸರ್ವಿಸ್‌ಸ್ ಮೂಲಕ ಆಪ್ತ ಸಂಬಂಧ ಹೊಂದಿರುವುದೂ ಈ ಲಾಬಿಗಳಲ್ಲಿ ಸೇರಿದೆ.[೫೫]
ಸಂಸತ್ತಿನ ಯಾವುದೇ ಪ್ರಶ್ನೆಗಳನ್ನು ಬ್ರಿಟನ್ ಪಾರ್ಲಿಮೆಂಟರಿ ಟೇಬಲ್ ಆಫೀಸ್ ಮೊದಲು ಕೌನ್ಸಿಲ್‌ನ ಪ್ರಾಯೋಜಕ ಇಲಾಖೆಯಾದ ವಿದೇಶಾಂಗ ಮತ್ತು ಕಾಮನ್‌ವೆಲ್ತ್ ಕಚೇರಿಗೆ ಉಲ್ಲೇಖದೊಂದಿಗೆ ಕಳುಹಿಸುತ್ತದೆ.[೫೬]
ಚೀನಾದಲ್ಲಿ ಉನ್ನತ ಶಿಕ್ಷಣವನ್ನು ಉತ್ತೇಜಿಸುವ ಬ್ರಿಟಿಶ್ ಕೌನ್ಸಿಲ್ ಪ್ರಯತ್ನಗಳ ಪರಿಣಾಮಕಾರತೆಯನ್ನು ಕೂಡ ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ಹೌಸ್ ಆಫ್ ಕಾಮನ್ಸ್‌ನ ಶಿಕ್ಷಣ ಮತ್ತು ಕೌಶಲಗಳ ಕುರಿತ ಆಯ್ದ ಸಮಿತಿಯು ಪರೀಕ್ಷಿಸಿದ್ದು, 2007ರ ಆಗಸ್ಟ್ 5ರಂದು ವರದಿ ನೀಡಿದೆ.[೫೭] ಚೀನೀ ವಿಶ್ವವಿದ್ಯಾಲಯಗಳನ್ನು ಒಳಗೊಂಡ ಬೇರೆ ದೇಶಗಳ ಜಂಟಿ ಶೈಕ್ಷಣಿಕ ಕಾರ್ಯಕ್ರಮಗಳ ಕುರಿತು ಈ ಸಮಿತಿ ಆತಂಕವನ್ನು ವ್ಯಕ್ತಪಡಿಸಿದೆ. ಜೊತೆಗೆ ಈ ವಿಚಾರದಲ್ಲಿ ಆಸ್ಟ್ರೇಲಿಯಾ, ಯುಎಸ್‌ಎ, ಹಾಂಗ್‌ಕಾಂಗ್ ಚೀನಾ, ಕೆನಡಾ ಮತ್ತು ಫ್ರಾನ್ಸ್‌ಗಿಂತ ಬ್ರಿಟನ್ ಹಿಂದಿದೆ ಎನ್ನಲಾಗಿದೆ. ಸಮಿತಿಗೆ ಸಾಕ್ಷ್ಯ ಒದಗಿಸುತ್ತ, ಬ್ರಿಟಿಶ್ ಕೌನ್ಸಿಲ್ "ಬ್ರಿಟನ್ ಪದವಿಗಳು ಜಾಗತಿಕ ಮಾನ್ಯತೆ ಹೊಂದಿರುವುದರಿಂದ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಈ ಪದವಿಗಳಿಗೆ ಹೆಚ್ಚಿನ ಬೆಲೆ ನೀಡುತ್ತಾರೆ. ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಕುರಿತು ಪ್ರಯೋಜನ ತತ್ವದ ದೃಷ್ಟಿಕೋನ ಹೊಂದಿರುತ್ತಾರೆ, ಇದು ಹಣಕ್ಕೆ ತಕ್ಕ ಮೌಲ್ಯದ ಪರಿಗಣನೆ, ಭಾಗಶಃ ವಿದೇಶಗಳಲ್ಲಿ ನೀಡಲಾಗುವ ಕಾರ್ಯಕ್ರಮಗಳಿಗೆ ಆದ್ಯತೆಯನ್ನೂ ಒಳಗೊಂಡಿರುತ್ತದೆ" ಎಂದು ಪ್ರತಿಪಾದಿಸಿದೆ. ತಮ್ಮ ಆದ್ಯತೆಯ ಮಾರುಕಟ್ಟೆ 'ಮಾದರಿ'ಗೆ ಉದಾಹರಣೆಯಾಗಿ, ಬ್ರಿಟಿಶ್ ಕೌನ್ಸಿಲ್ ಭಾರತದ ಉದಾಹರಣೆಯನ್ನು ನೀಡಿದೆ. ಯುಕೆ ಭಾರತ ಶಿಕ್ಷಣ ಮತ್ತು ಸಂಶೋಧನೆ ಉಪಕ್ರಮ[೫೮] ಕ್ಕೆ ಬ್ರಿಟಿಶ್ ಬಹುರಾಷ್ಟ್ರೀಯ ತೈಲ ಕಂಪನಿಗಳಾದ ಬಿಪಿ ಮತ್ತು ಶೆಲ್, ಬೃಹತ್ ಔಷಧಿಕಂಪನಿ ಜಿಎಸ್‌ಕೆ ಮತ್ತು ಶಸ್ತ್ರಾಸ್ತ್ರ ಕಂಪನಿ ಬಿಎಇ ಸಿಸ್ಟಮ್ಸ್ 'ಸಮರ್ಥನೆ' ನೀಡಿವೆ ಎಂದು ಕೌನ್ಸಿಲ್ ಪ್ರತಿಪಾದಿಸಿದೆ.[೫೯]
ಈ ಕ್ಷೇತ್ರದಲ್ಲಿ ಬ್ರಿಟಿಶ್ ಕೌನ್ಸಿಲ್‌ನ ಮಾರುಕಟ್ಟೆ ಪ್ರಯತ್ನಗಳಿಗೆ ಸ್ಕಾಟ್‌ಲ್ಯಾಂಡ್‌ನಿಂದಲೂ ಟೀಕೆ ವ್ಯಕ್ತವಾಗಿದೆ. ಅಲ್ಲಿಯ ದಿ ಸಂಡೇ ಹೆರಾಲ್ಡ್ ಪತ್ರಿಕೆಯು ಮಾಹಿತಿಯ ಸ್ವಾತಂತ್ರ್ಯ ಕಾಯಿದೆಯಡಿ ಕೆಲವು ದಾಖಲೆಗಳನ್ನು ಪಡೆದುಕೊಂಡಿದ್ದು, ಅವು ಅಮೆರಿಕದಲ್ಲಿ ಬ್ರಿಟಿಶ್ ಕೌನ್ಸಿಲ್‌ನ ಮಾರುಕಟ್ಟೆ ಸಂಯೋಜಕರು ಸ್ಟರ್ಲಿಂಗ್ ವಿಶ್ವವಿದ್ಯಾಲಯವನ್ನು (University of Stirling) "ವಿಶ್ವಾಸನೀಯ ವಿಶ್ವವಿದ್ಯಾಲಯ (University of Sterling)' ಎಂದು ಉಲ್ಲೇಖಿಸಿರುವುದನ್ನು ತೋರಿಸಿವೆ. ಜೊತೆಗೆ ಸ್ಕಾಟ್‌ಲ್ಯಾಂಡ್‌ನಲ್ಲಿ ಶಿಕ್ಷಣ ಒಂದು ಅಭಿವೃದ್ಧಿಪಡಿಸಲಾದ ಜವಾಬ್ದಾರಿಯಾಗಿದ್ದು, ಸ್ಕಾಟಿಶ್ ಎಕ್ಸ್‌ಕ್ಯೂಟಿವ್ ನಾಗರಿಕ ಸಿಬ್ಬಂದಿಗಳು ಮತ್ತು ಭಾರತ ಮತ್ತು ಚೀನಾದಲ್ಲಿರುವ ಬ್ರಿಟಿಶ್ ಕೌನ್ಸಿಲ್ ನಡುವೆ ಸ್ಕಾಟ್‌ಲ್ಯಾಂಡ್‌ನಲ್ಲಿರುವ ವಿಶ್ವವಿದ್ಯಾಲಯಗಳಿಗೆ ವಿದೇಶೀ ಉತ್ತೇಜನ ನೀಡುವುದಕ್ಕೆ ಸಂಬಂಧಿಸಿ "ಉದ್ವಿಗ್ನ ಸ್ಥಿತಿ' ಇದೆ ಎಂದು ಹೇಳಿದ್ದನ್ನು ಅದು ದಾಖಲಿಸಿದೆ. ದಿ ಸಂಡೇ ಹೆರಾಲ್ಡ್ ಈ ಸಂಘರ್ಷವು ಸ್ಕಾಟಿಶ್ ಅಧಿಕಾರಿಗಳ ಮುಖ್ಯಆದ್ಯತೆಯ ಫ್ರೆಶ್ ಟ್ಯಾಲೆಂಟ್ ನೀತಿಯನ್ನು ಒಳಗೊಳಗೆ ಹಾಳುಮಾಡುತ್ತಿದೆ ಎಂದು ವರದಿಮಾಡಿದೆ.[೬೦]
1998ರ ನಂತರ ಸ್ಕಾಟ್‌ಲ್ಯಾಂಡ್‌ನಲ್ಲಿ ಶಿಕ್ಷಣ ಮತ್ತು ಸಂಸ್ಕೃತಿಯನ್ನು ಸ್ಕಾಟಿಶ್ ಪಾರ್ಲಿಮೆಂಟ್‌ಗೆ ವರ್ಗಾಯಿಸಲಾಯಿತು. ಇಂಗ್ಲೆಂಡ್‌ನಲ್ಲಿ ನೋಂದಾಯಿತಗೊಂಡ ದತ್ತಿಸಂಸ್ಥೆಗಳು (ಬ್ರಿಟಿಶ್ ಕೌನ್ಸಿಲ್‌ನ ರೀತಿಯ ಸಂಸ್ಥೆಗಳು) ಸ್ಕಾಟ್‌ಲ್ಯಾಂಡ್‌ನಲ್ಲಿ ಕಾರ್ಯನಿರ್ವಹಿಸಲು ಬಯಸಿದರೆ, 2007 ಫೆಬ್ರವರಿಯಿಂದ ಸ್ಕಾಟ್‌ಲ್ಯಾಂಡ್‌ನಲ್ಲಿ ಕ್ರಾಸ್-ಬಾರ್ಡರ್ ದತ್ತಿಸಂಸ್ಥೆಗಳು ಎಂದು ನೋಂದಾಯಿಸುವ ಅಗತ್ಯವಿರುತ್ತದೆ.[ಸೂಕ್ತ ಉಲ್ಲೇಖನ ಬೇಕು]
ಬ್ರಿಟಿಶ್ ಕೌನ್ಸಿಲ್‌ನ ಕೆಲವು ಚಟುವಟಿಕೆಗಳನ್ನು ಯುಬಿ 2007/08 ರಾಷ್ಟ್ರೀಯ ತಃಖ್ತೆ ಕಚೇರಿ (ನ್ಯಾಶನಲ್ ಆಡಿಟ್ ಆಫೀಸ್) (ಎನ್‌ಎಒ) ಪರಿಶೀಲಿಸಿದೆ. ಎನ್‌ಎಒದ ದಿ ಬ್ರಿಟಿಶ್ ಕೌನ್ಸಿಲ್: ಅಚೀವಿಂಗ್ ಇಂಪ್ಯಾಕ್ಟ್ ಎಂಬ ವರದಿಯು, 'ಬ್ರಿಟಿಶ್ ಕೌನ್ಸಿಲ್‌ನ ಕಾರ್ಯನಿರ್ವಹಣೆ ಸಮರ್ಥವಾಗಿದೆ ಮತ್ತು ಅದರ ಗ್ರಾಹಕರು ಹಾಗೂ ಭಾಗೀದಾರರಿಂದ ಮನ್ನಣೆ ಪಡೆದಿದೆ’ ಎಂದು ನಿರ್ಣಯಿಸಿದೆ.[೬೧] ಆದರೆ ಕೌನ್ಸಿಲ್‌ನ ಇಂಗ್ಲಿಶ್ ತರಗತಿಗಳು ತುಂಬ ಎಲೀಟಿಸ್ಟ್ ಆಗಿದೆ ಮತ್ತು ವ್ಯಾಪಾರೀ ಸೌಲಭ್ಯ ಒದಗಿಸುವವರಿಗೆ ನ್ಯಾಯೋಚಿತವಲ್ಲದ ಅನುಕೂಲಗಳನ್ನು ಹೊಂದಿದೆ ಎಂದು ನಿರ್ಣಯಿಸಿದೆ. ಜೊತೆಗೆ ಮತ್ತು ಬ್ರಿಟಿಶ್ ಕೌನ್ಸಿಲ್ ಸಾವಿರಾರು ದೂರವಾಣಿ ಕರೆಗಳನ್ನು ಮತ್ತು ಇಮೇಲ್‌ಗಳಿಗೆ ಉತ್ತರಿಸದೇ ಇರುವುದನ್ನು ಪ್ರಶ್ನಿಸಿದೆ.[೬೨]
ಎನ್‌ಎಒ ವರದಿಯು ಪುಟ 5ರಲ್ಲಿ ಬ್ರಿಟಿಶ್ ಕೌನ್ಸಿಲ್‌ನ ಗುತ್ತಿಗೆ ಕೆಲಸವನ್ನು ಪರಿಶೀಲನೆ ಮತ್ತು ಪರೀಕ್ಷಣೆಯಿಂದ ಹೊರಗಿಟ್ಟಿರುವುದಾಗಿ ಹೇಳಿರುವ ಒಂದು ಅಡಿಟಿಪ್ಪಣಿಯನ್ನು ಹೊಂದಿದೆ: "ಅಧ್ಯಯನದ ವ್ಯಾಪ್ತಿಯಿಂದ ಈ ಅಂಶವನ್ನು ಹೊರಗಿಡಲು ಮುಖ್ಯ ಕಾರಣವೆಂದರೆ ಕೌನ್ಸಿಲ್‌ನ ಗುತ್ತಿಗೆಯಡಿಯ ಕೆಲಸವು ವಿವಿಧ ಬ್ರಿಟನ್ ಮತ್ತು ಅಂತಾರಾಷ್ಟ್ರೀಯ ಏಜೆನ್ಸಿಗಳಿಗಾಗಿ ಇದೆ, ಅದು ಮುಖ್ಯವಾಗಿ ಅಂತಾರಾಷ್ಟ್ರೀಯ ಅಭಿವೃದ್ಧಿ ಯೋಜನೆಗಳನ್ನು ಬೆಂಬಲಿಸಲು ಇದೆ" ಎಂದು ಹೇಳಿದೆ. ಈ ಕುರಿತು ಪರೀಕ್ಷೆ ಮಾಡುವುದು ಅನಗತ್ಯ ಎಂದು ಅದು ಹೇಳಿದೆ, ಏಕೆಂದರೆ: "ಅಂತಹ ಕೆಲಸವನ್ನು ಸ್ಪರ್ಧೆಯಲ್ಲಿ ಪಡೆದುಕೊಳ್ಳಲಾಗಿರುತ್ತದೆ ಮತ್ತು ಕೊನೇಪಕ್ಷ ಅದರೆಲ್ಲ ಖರ್ಚುಗಳನ್ನು ಭರಿಸುತ್ತದೆ. ಕೆಲಸದ ಹಣಕ್ಕೆ ತಕ್ಕ ಮೌಲ್ಯದ ಪ್ರಾಥಮಿಕ ಜವಾಬ್ದಾರಿಯು ಅದನ್ನು ಹೊಂದುವ ಏಜೆನ್ಸಿಗಳ ಮೇಲೆ ಇರುತ್ತದೆ".
ವಿದೇಶಾಂಗ ಕಚೇರಿಯ ವಾರ್ಷಿಕ ವರದಿಯ ತನ್ನ ಪರಿಶೀಲನೆ ಭಾಗವಾಗಿ, ವಿದೇಶಾಂಗ ವ್ಯವಹಾರಗಳ ಸಮಿತಿಯು ಬ್ರಿಟಿಶ್ ಕೌನ್ಸಿಲ್‌ನ ಸಾಕ್ಷಿಗಳನ್ನು ಪರೀಕ್ಷಿಸಲು ಪ್ರತಿ ವರ್ಷ ಒಂದು ಗಂಟೆ ವ್ಯಯಿಸುತ್ತದೆ. ಆದರೆ ಈ ಮಟ್ಟದ ಪರಿಶೋಧನೆಯನ್ನು ಕೂಡ ಬ್ರಿಟಿಶ್ ಕೌನ್ಸಿಲ್‌ನಿಂದ ಹಣಪಾವತಿಸಲಾದ ವಿದೇಶಗಳ ಪ್ರವಾಸಗಳ ಕುರಿತು ಘೋಷಿಸುವುದಕ್ಕೆ ಸಂಸದರಿಗೆ ವಿನಾಯಿತಿ ನೀಡುವ ಕಾಮನ್ಸ್ ರೂಲಿಂಗ್‌ನಿಂದ ದುರ್ಬಲಗೊಳಿಸಲಾಗಿದೆ.[೬೩]
ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಇಬ್ಬರು ಸದಸ್ಯರು (ಸಂಸದ ನಿಗೆಲ್ ಗ್ರಿಫಿತ್ಸ್ ಮತ್ತು ಸಂಸದ ಇಯಾನ್ ಡೇವಿಡ್‌ಸನ್ ) ಬ್ರಿಟಿಶ್ ಕೌನ್ಸಿಲ್ ಅಸೋಸಿಯೇಟ್ ಪಾರ್ಲಿಮೆಂಟರಿ ಗ್ರೂಪ್‌ನಲ್ಲಿ ಅಧಿಕಾರಿ ಹುದ್ದೆಯಲ್ಲಿದ್ದಾರೆ.[೬೪] ಸಂಸದ ನಿಗೆಲ್ ಗ್ರಿಫಿತ್ ಬ್ರಿಟಿಶ್ ಕೌನ್ಸಿಲ್ ಲಾಬಿ ಗುಂಪಿನ ಉಪಾಧ್ಯಕ್ಷ ಕೂಡ.[೬೫]
2008ರಲ್ಲಿ ರಾಷ್ಟ್ರೀಯ ತಃಖ್ತೆ ಕಚೇರಿ ಹಿಂದಿನ ವರದಿಯ ಪ್ರಕಟಣೆಯ ನಂತರದಲ್ಲಿ ಬ್ರಿಟಿಶ್ ಕೌನ್ಸಿಲ್‌ಅನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿಯು (ಪಿಎಸಿ) ವಿಚಾರಣೆಗೆ ಕರೆದಿತ್ತು. ನಂತರದ ಪಿಎಸಿ ವರದಿಯು ಬ್ರಿಟಿಶ್ ಕೌನ್ಸಿಲ್ ಅಸೋಸಿಯೇಟ್ ಪಾರ್ಲಿಮೆಂಟರಿ ಗ್ರೂಪ್‌ನ ಉಪಾಧ್ಯಕ್ಷ - ಸಂಸದ ನಿಗೆಲ್ ಗ್ರಿಫಿತ್ ಸಣ್ಣ ಸಂಖ್ಯೆಯ ಪಿಎಸಿ ಸದಸ್ಯರ ಭಾಗವಾಗಿದ್ದು, ಬ್ರಿಟಿಶ್ ಕೌನ್ಸಿಲ್ ಕುರಿತ ಈ ವರದಿಯನ್ನು ಅನುಮೋದಿಸಿದ್ದಾರೆ ಎಂಬುದನ್ನು ದೃಢಪಡಿಸಿತು. ಬ್ರಿಟಿಶ್ ಕೌನ್ಸಿಲ್‌ನ ಸಿಇಒ ಅವರನ್ನು ಪಾಟಿಸವಾಲು ಮಾಡಿದಾಗ - ಜೂನ್ 2008ರಲ್ಲಿ - ಸಾಕ್ಷಿ ಸೆಶನ್‌ನಲ್ಲಿ ನಿಗೆಲ್ ಉಪಸ್ಥಿತರಿದ್ದೂ, ಅದನ್ನು ದಾಖಲಿಸಿರಲಿಲ್ಲ ಎಂಬುದರ ಹೊರತಾಗಿಯೂ ಪಿಎಸಿಯು ಮೇಲಿನಂತೆ ದೃಢಪಡಿಸಿತು.[೬೬] ಶ್ರೀ. ಗ್ರಿಫಿತ್ ಮೊದಲು ರಷ್ಯಾಗೆ ಭೇಟಿ ನೀಡಿದ್ದರು ಮತ್ತು ಅಲ್ಲಿ 1998ರ ಜನವರಿಯಲ್ಲಿ ಬ್ರಿಟಿಶ್ ಕೌನ್ಸಿಲ್ ಚಟುವಟಿಕೆಗಳ ಪರವಾಗಿ ಮಾತನಾಡಿದ್ದರು, ಸುಮಾರು ಅದೇ ವೇಳೆಗೆ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿದ್ದ ಕೌನ್ಸಿಲ್‌ನ ಅಧಿಕಾರಿ (ಸ್ಟೀಫನ್ ಕಿನ್ನಾಕ್)ಯನ್ನು ಹೊರಹಾಕಲಾಗಿತ್ತು.[೬೨][೬೭][೬೮][೬೯]
2009ರ ಏಪ್ರಿಲ್‌ನಲ್ಲಿ ಬ್ರಿಟಿಶ್ ಕೌನ್ಸಿಲ್ ತನ್ನ ಚಟುವಟಿಕೆಗಳನ್ನು ಸರಿಪಡಿಸಿಕೊಳ್ಳಬೇಕೆಂದು ಮಾಹಿತಿ ಆಯುಕ್ತರು ಸೂಚಿಸಿದರು. ಕೌನ್ಸಿಲ್‌ನ ಟ್ರೇಡ್ ಯೂನಿಯನ್ ಅಫಿಲಿಯೇಶನ್‌ಗಳ ವಿವರಗಳನ್ನು ಒಳಗೊಂಡಿದ್ದ ಸಿಬ್ಬಂದಿಗಳ ಮಾಹಿತಿ ನಷ್ಟವಾದ ನಂತರ ಮತ್ತು ಕಂಪ್ಯೂಟರ್ ಡಿಸ್ಕ್ ಹಾಳಾಗಿರುವ ಕುರಿತು ಕೌನ್ಸಿಲ್ ಸುಳ್ಳು ಹೇಳಿದ ನಂತರ ಅವರು ಹೀಗೆ ಸೂಚಿಸಿದರು.[೭೦]
ಐತಿಹಾಸಿಕ ವೃತ್ತಾಂತಗಳು
[ಬದಲಾಯಿಸಿ]ಬೇರೆ ದೇಶಗಳೊಂದಿಗೆ ಸಂಬಂಧ ರೂಪಿಸಲು ಬ್ರಿಟಿಶ್ ಸಮಿತಿಯಾಗಿ 1934ರಲ್ಲಿ ಹುಟ್ಟುಹಾಕಲಾದ ಬ್ರಿಟಿಶ್ ಕೌನ್ಸಿಲ್, ಸರ್ ರೆಜಿನಾಲ್ಡ್(ರೆಕ್ಸ್ ) ಲೀಪರ್ ಅವರು ಬ್ರಿಟಿಶ್ ಆಸಕ್ತಿಗಳನ್ನು ಉತ್ತೇಜಿಸುವಲ್ಲಿ "ಸಾಂಸ್ಕೃತಿಕ ಪ್ರಚಾರ"ದ ಮಹತ್ವವನ್ನು ಗುರುತಿಸಿದ ವಿಚಾರದಿಂದ ಸ್ಫೂರ್ತಿಪಡೆದಿತ್ತು.
ಬ್ರಿಟಿಶ್ ಕೌನ್ಸಿಲ್ ವಿರುದ್ಧ ರಷ್ಯಾದಲ್ಲಿ ಮಾಡಲಾದ ಆಪಾದನೆಗಳ ನಂತರ (ಮೇಲೆ ನೋಡಿ), ದಿ ಸಂಡೇ ಹೆರಾಲ್ಡ್‌ನ ಅನುಭವಿ ರಾಜತಾಂತ್ರಿಕ ಸಂಪಾದಕ ಟ್ರೆವರ್ ರಾಯ್ಲ್ 'ಬ್ರಿಟಿಶ್ ರಾಜತಾಂತ್ರಿಕ ಮೂಲ' ಒಂದು ಹೀಗೆ ಒಪ್ಪಿಕೊಂಡಿದ್ದನ್ನು ಉಲ್ಲೇಖಿಸಿದ್ದರು: "ಬ್ರಿಟಿಶ್ ಕೌನ್ಸಿಲ್ ನಮ್ಮ ರಹಸ್ಯ ಬೇಹುಗಾರಿಕೆ ಸೇವೆಗಳ ಒಂದು ಭಾಗ -ಅದು ಎಷ್ಟೇ ಕನಿಷ್ಠವಾದರೂ- ಎಂಬ ವ್ಯಾಪಕವಾದ ಭಾವನೆ ಇದೆ. ಅಧಿಕೃತವಾಗಿ ಹಾಗೇನೂ ಇಲ್ಲ, ಆದರೆ ಸಂಬಂಧಗಳು ಇವೆ. ಇಲ್ಲವಾದಲ್ಲಿ ಹಾಗೇಕೆ ಇರುತ್ತದೆ, ಏಕೆಂದರೆ ಎಲ್ಲ ಮಾಹಿತಿಗಳು ಅಮೂಲ್ಯವಾಗಿದೆ ಎಂದೇ? ಇಷ್ಟಾಗಿ, ಬ್ರಿಟಿಶ್ ಕೌನ್ಸಿಲ್ ಕೂಡ ಟ್ರೇಡ್ ಮಿಶನ್‌ಗಳೊಂದಿಗೆ ವ್ಯವಹರಿಸುತ್ತದೆ ಮತ್ತು ಅನಿವಾರ್ಯವಾಗಿ ಅದೂ ಕೆಳ-ಮಟ್ಟದ ಬೇಹುಗಾರಿಕೆ ಸಂಗ್ರಹವನ್ನು ಒಳಗೊಂಡಿರುತ್ತದೆ."[೭೧]
ಆಸ್ಟ್ರೇಲಿಯಾದ ವಿದೇಶಾಂಗ ಸಚಿವರ ಮಗಳಿಗೆ ಒಂದು ಸ್ಕಾಲರ್‌ಶಿಪ್‌ಅನ್ನು ಬ್ರಿಟಿಶ್ ಕೌನ್ಸಿಲ್ ನೀಡಿದಾಗ ಎಲ್ಲರ ಹುಬ್ಬೂ ಮೇಲೇರಿತು.[೭೨]
ಲೇಬರ್ ವರಿಷ್ಠೆ ಬ್ಯಾರನೆಸ್(ಬ್ಯಾರನ್ ಪದವೀಧರೆ) ಹೆಲೆನಾ ಕೆನೆಡಿ ಕ್ಯುಸಿ QC ಬ್ರಿಟಿಶ್ ಕೌನ್ಸಿಲ್‌ನ ಅಧ್ಯಕ್ಷರಾಗಿದ್ದ 1998-2004ವರೆಗಿನ ಅವಧಿಯಲ್ಲಿ ಲೀಶೆಸ್ಟರ್‌ನ ಡೆ ಮಾಂಟ್‌ಫೋರ್ಟ್ ವಿಶ್ವವಿದ್ಯಾಲಯ, ಗ್ಲಾಸ್ಗೋ ಕ್ಯಾಲೆಂಡೊನಿಯನ್ ವಿಶ್ವವಿದ್ಯಾಲಯ, ಮಿಡಲ್‌ಸೆಕ್ಸ್ ವಿಶ್ವವಿದ್ಯಾಲಯ, ರಾಬರ್ಟ್ ಗೋರ್ಡನ್ ವಿಶ್ವವಿದ್ಯಾಲಯ, ಅಬೆರ್ದೀನ್ ವಿಶ್ವವಿದ್ಯಾಲಯ, ಡರ್ಬಿ ವಿಶ್ವವಿದ್ಯಾಲಯ, ಯಾರ್ಕ್ ವಿಶ್ವವಿದ್ಯಾಲಯ , ಟಾಮ್ಸ್ಕ್ ಪಾಲಿಟೆಕ್ನಿಕ್ ವಿಶ್ವವಿದ್ಯಾಲಯ ಮತ್ತು ರಷ್ಯಾದ ಜ್ಯುಡಿಷಿಯಲ್ ಅಕಾಡೆಮಿಗಳ ಗೌರವ ಪದವಿಗಳನ್ನು ಪಡೆದಿದ್ದಾರೆ. ಇಂದಿನವರೆಗೆ ಅವರು ಒಟ್ಟು 28 ಗೌರವ ಪದವಿಗಳನ್ನು ಸ್ವೀಕರಿಸಿದ್ದಾರೆ.[೭೩][೭೪]
ಕಾಲ್ಪನಿಕ ಕಥೆಗಳಲ್ಲಿ ಬ್ರಿಟಿಶ್ ಕೌನ್ಸಿಲ್
[ಬದಲಾಯಿಸಿ]ಜಾನ್ ಲೆ ಕ್ಯಾರೇಯ (ಮಾಜಿ ಕಾನ್ಸುಲರ್ ಅಧಿಕಾರಿ ಡೇವಿಡ್ ಕಾರ್ನ್‌ವೆಲ್) ದಿ ರಷ್ಯಾ ಹೌಸ್ ಕಾದಂಬರಿ ಬ್ರಿಟಿಶ್ ಕೌನ್ಸಿಲ್ ಕುರಿತ ಒಂದು ಉಲ್ಲೇಖದೊಂದಿಗೆ ಆರಂಭವಾಗುತ್ತದೆ ಎಂಬುದನ್ನು ರಾಯ್ಲ್ ಗಮನಿಸಿದ್ದಾರೆ. ಸಂಸ್ಥೆಯ "ಇಂಗ್ಲಿಶ್ ಭಾಷೆ ಬೋಧನೆಯನ್ನು ಮತ್ತು ಬ್ರಿಟಿಶ್ ಸಂಸ್ಕೃತಿಯನ್ನು ಹರಡಲು ಆಯೋಜಿಸಿದ ಮೊಟ್ಟಮೊದಲ ಆಡಿಯೋ ಫೇರ್" ಯಾತನಾಮಯ ಅಂತ್ಯ ಕಂಡಿತು. ರಷ್ಯಾದ ಆಕರ್ಷಕ ಯುವತಿಯೊಬ್ಬಳು ಈ ಸಂಸ್ಥೆಯ ಅಧಿಕಾರಿಯೊಬ್ಬನನ್ನು ಸಂಪರ್ಕಿಸಿ, ಹಸ್ತಪ್ರತಿಯೊಂದನ್ನು ಗುಪ್ತವಾಗಿ ನೀಡುವಂತೆ ಹೇಳುತ್ತಾಳೆ, ಅದೊಂದು ಕಾದಂಬರಿಯ ಹಸ್ತಪ್ರತಿಯೆಂದೂ, ಅದನ್ನು 'ತನ್ನ ಗೆಳೆಯ!'ನಾದ ಇಂಗ್ಲಿಷ್ ಪ್ರಕಾಶಕನಿಗೆ ತಲುಪಿಸಬೇಕೆಂದು ಅವಳು ಹೇಳಿದಾಗ ಈತ ತನ್ನೆಲ್ಲ ಸಾಮಗ್ರಿಗಳನ್ನು ಗಂಟು ಕಟ್ಟಿ ಹೊರಡುತ್ತಾನೆ.[೭೧]
ಗ್ರಹಾಂ ಗ್ರೀನ್‌ನ ದಿ ಧರ್ಡ್ ಮ್ಯಾನ್ ಸಿನಿಮಾದಲ್ಲಿ ಕ್ರಬ್ಬಿನ್ ಪಾತ್ರವು ಬ್ರಿಟಿಶ್ ಕೌನ್ಸಿಲ್‌ಗೆ ಕೆಲಸ ಮಾಡಿದ ಕೆಲವು ದೃಶ್ಯಗಳಿವೆ. ಈ ಪಾತ್ರವನ್ನು ವಿಲ್‌ಫ್ರೆಡ್ ಹೈಡ್-ವೈಟ್ ಮಾಡಿದ್ದನು. 1946ರಲ್ಲಿ, ಬರಹಗಾರ ಜಾರ್ಜ್ ಆರ್ವೆಲ್ ಗಂಭೀರ ಲೇಖಕರಿಗೆ ಬ್ರಿಟಿಶ್ ಕೌನ್ಸಿಲ್‌ಗೆ ಪೂರ್ಣಾವಧಿ ಇಡೀದಿನ ಕೆಲಸ ಮಾಡಬಾರದೆಂದು ಸಲಹೆ ನೀಡಿದ್ದರು. "ಬ್ರಿಟಿಶ್ ಕೌನ್ಸಿಲ್‌ನಂತಹ ಸಂಸ್ಥೆಗಳ ಅರೆ-ಸೃಜನಶೀಲ ಕೆಲಸಗಳಾದ ಬೋಧನೆ, ಬಾನುಲಿಪ್ರಸಾರ ಅಥವಾ ಪ್ರಚಾರ ಸಂಯೋಜನೆ ಕೆಲಸಗಳನ್ನು ಮಾಡುವುದರಲ್ಲಿ ಶಕ್ತಿಯನ್ನು ದುಂದುವ್ಯಯ ಮಾಡಬಾರದು, ಏಕೆಂದರೆ (ಬರೆಯುವ) ಪ್ರಯತ್ನವೇ ಬಹಳ ಪರಿಶ್ರಮದ್ದು" ಎಂದು ಆರ್ವೆಲ್ ಚರ್ಚಿಸಿದ್ದರು.[೭೫] ಎಂಐ5(ಮಿಲಿಟರಿ ಇಂಟೆಲಿಜೆನ್ಸ್ ಸೆಕ್ಷನ್ 5)ನ ಮೊದಲ ಮಹಿಳಾ ಮುಖ್ಯಸ್ಥೆ ಡೇಮ್ ಸ್ಟೆಲ್ಲಾ ರಿಮಿಂಗ್ಟನ್ ತನ್ನ ಆತ್ಮಚರಿತ್ರೆಯನ್ನು ತಾನು ಬ್ರಿಟಿಶ್ ಬೇಹುಗಾರಿಕೆ ಸೇವೆಯನ್ನು ಸೇರುವ ಮೊದಲು ಭಾರತದಲ್ಲಿ ಬ್ರಿಟಿಶ್ ಕೌನ್ಸಿಲ್‌ಗಾಗಿ ಕೆಲಸ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಬ್ರಿಟಿಶ್ ಕೌನ್ಸಿಲ್‌ನ ಅಸ್ಪಷ್ಟ, ಸಂದಿಗ್ಧ ಸ್ಥಾನಮಾನ ಮತ್ತು ರಷ್ಯಾದಂತಹ ದೇಶಗಳಲ್ಲಿ ಸಾಮಾನ್ಯವಾಗಿ ರಾಜತಾಂತ್ರಿಕರಿಗೆ ತೋರುವ ವಿನಾಯಿತಿಗಳಿಗೆ ಕೌನ್ಸಿಲ್‌ನ ಅಧಿಕಾರಿಗಳು ಬಾಧ್ಯರೇ ಎಂಬ ಅನುಮಾನಗಳಿದ್ದರೂ, ಬ್ರಿಟನ್ ಆನರ್ ಪಟ್ಟಿ (ಗೌರವಾರ್ಹರ ಪಟ್ಟಿ)ಯ ವಿಶೇಷ ವಿಭಾಗದಲ್ಲಿ ಬ್ರಿಟಿಶ್ ಕೌನ್ಸಿಲ್ ಉದ್ಯೋಗಿಗಳು ನಿಯಮಿತವಾಗಿ ಕಾಣಿಸಿಕೊಳ್ಳುತ್ತಿದ್ದರು. ಈ ವಿಶೇಷ ವಿಭಾಗವು ವಿದೇಶಗಳಲ್ಲಿ ರಾಜತಾಂತ್ರಿಕ ಹುದ್ದೆಗಳಲ್ಲಿರುವವರಿಗೆ ಮೀಸಲಾಗಿರುತ್ತಿತ್ತು. ಜೆರುಸಲೆಂನಲ್ಲಿ ಮೊದಲು ಬ್ರಿಟಿಶ್ ಕೌನ್ಸಿಲ್ ಅಧಿಕಾರಿಯಾಗಿದ್ದ, ಎಮ್ಮಾ ಸ್ಕೈ ಕೆಲವು ವರ್ಷಗಳ ನಂತರ ಇರಾಕ್‌ನಲ್ಲಿ ಅಮೆರಿಕದ ಜನರಲ್ ರೇಮಂಡ್ ಒಡೈರ್ರ್ನೊಗೆ 'ರಾಜಕೀಯ ಮತ್ತು ಸಾಂಸ್ಕೃತಿಕ ಸಲಹಾಕಾರ'ಳಾಗಿ ನೇಮಕಗೊಂಡಳು. ಪ್ಯಾಲಸ್ಟೈನಿನಲ್ಲಿ ಅವಳ ಬ್ರಿಟಿಶ್ ಕೌನ್ಸಿಲ್‌ನ ಪಾತ್ರದ ಕುರಿತು ಸಾಕಷ್ಟು ತೀಕ್ಷ್ಣವಾದ ಟೀಕೆಗಳಿದ್ದರೂ ಅವಳು ನೇಮಕಗೊಂಡಿದ್ದಳು. ಅವಳ ಬ್ರಿಟಿಶ್ ಕೌನ್ಸಿಲ್ 'ಪೇಯ್ಡ್(PAID)' ಯೋಜನೆ 'ಅಸ್ತಿತ್ವರಹಿತ' ಎಂದು ತೀವ್ರ ಪರಿಶೀಲನೆ ಮಾಡಿದ ನಂತರ ಗೊತ್ತಾಯಿತು. ಲಂಚನಿಧಿ (ಸ್ಲಶ್ ಫಂಡ್)ಯನ್ನು ಹೆಚ್ಚಿಸಲು ಇನ್ನಷ್ಟು ಅನುದಾನಕ್ಕಾಗಿ ಮನವಿಯ ಹೊರತಾಗಿಯೂ, ಸ್ಕೈ ಮತ್ತು ಬ್ರಿಟಿಶ್ ಕೌನ್ಸಿಲ್ ಪಿಎನ್‌ಎ ವಿತ್ತ ಸಚಿವಾಲಯದ ಹಿಂಬಾಗಿಲಿನಿಂದ ರಾಜಕೀಯ ಬೆಂಬಲದ ಪ್ರಭಾವವನ್ನು ಬಳಸಿಕೊಳ್ಳುತ್ತಿದ್ದರು ಮತ್ತು ಪಾಲಸ್ಟೈನಿಯನ್ ಶಾಸಕಾಂಗವು ದತ್ತಿಸಂಸ್ಥೆಯ ಭ್ರಷ್ಟಾಚಾರದ ಕುರಿತು ಚಿಂತೆಗೀಡಾಗಿತ್ತು. ಬ್ರಿಟಿಶ್ ಕೌನ್ಸಿಲ್‌ಅನ್ನು(ಮತ್ತು ಅದರ ಕಚೇರಿ ಸಿಬ್ಬಂದಿ, ಗೂಲ್ ) ಲಾರೆನ್ಸ್ ಡರೆಲ್ ಹಾಸ್ಯಮಯ ರೀತಿಯಲ್ಲಿ ಆಗಾಗ ತನ್ನ ಆಂಟ್ರೋಬಸ್ ಕಂಪ್ಲೀಟ್ ಎಂಬ ಕಥಾಸಂಕಲನದಲ್ಲಿ ಉಲ್ಲೇಖಿಸಿದ್ದಾನೆ. ಈ ಸಂಕಲನವು ವಿದೇಶಾಂಗ ಮತ್ತು ಕಾಮನ್‌ವೆಲ್ತ್ ಕಚೇರಿಯಲ್ಲಿ ರಾಜತಾಂತ್ರಿಕನಾಗಿದ್ದ ವ್ಯಕ್ತಿಯೊಬ್ಬನ ವಿದೇಶೀ ಹುದ್ದೆಗಳ ಬದುಕಿನ ಕುರಿತಾಗಿದೆ.[೭೬]
ಕೀತ್ ಜೆಫರಿ ಬರೆದಿರುವ 'ಎಂಐ6: ದಿ ಹಿಸ್ಟರಿ ಆಫ್ ದಿ ಸೀಕ್ರೆಟ್ ಇಂಟೆಲಿಜೆನ್ಸ್ ಸರ್ವಿಸ್ 1909-1949' ಎಂಬ ಅಧಿಕೃತ ಇತಿಹಾಸ ಕೃತಿಯಲ್ಲಿ 'ಸಂಭಾವ್ಯ ರಕ್ಷಾಕವಚವಾಗಿ, ಬ್ರಿಟಿಶ್ ಕೌನ್ಸಿಲ್'ನ ಪಾತ್ರವನ್ನು ವಿಷಯಸೂಚಿಯಲ್ಲಿ 1944ರ ಬ್ಲಾಂಡ್ ಕಮಿಶನ್ ಮತ್ತು ಬ್ರಿಟಿಶ್ ಕೌನ್ಸಿಲ್‌ನ ಸ್ಥಾಪಕ ರೆಕ್ಸ್ ಲೀಪರ್‌ನೊಂದಿಗಿನ ಪತ್ರವ್ಯವಹಾರಗಳ ಉಲ್ಲೇಖದೊಂದಿಗೆ ಸೂಚಿಸಲಾಗಿದೆ: http://www.britishcouncil.org/history-who-leeper.htm
ಅದ್ಯಕ್ಷರು
[ಬದಲಾಯಿಸಿ]ಬ್ರಿಟಿಶ್ ಕೌನ್ಸಿಲ್‌ನ ಹಿಂದಿನ ಅಧ್ಯಕ್ಷರ ಹೆಸರುಗಳು ಈ ಕೆಳಕಂಡಂತೆ ಇದೆ:
- 1934–1937 ಲಾರ್ಡ್ ಟಿರ್ರೆಲ್
- 1937–1941 ಲಾರ್ಡ್ ಲಾಯ್ಡ್
- 1941–1945 ಸರ್ ಮಾಲ್ಕಮ್ ರಾಬರ್ಟ್‌ಸನ್
- 1946–1955 ಸರ್ ರೊನಾಲ್ಡ್ ಆಡಂ
- 1955–1959 ಸರ್ ಡೇವಿಡ್ ಕೆಲ್ಲಿ
- 1959–1967 ಲಾರ್ಡ್ ಬ್ರಿಜ್ಸ್
- 1968–1971 ಲಾರ್ಡ್ ಪ್ಯುಲ್ಟನ್
- 1971–1972 ಸರ್ ಲೆಸ್ಲೀ ರೋವನ್
- 1972–1976 ಲಾರ್ಡ್ ಬಲಂಟ್ರೆ
- 1977–1984 ಸರ್ ಚಾರ್ಲ್ಸ್ ಟ್ರಫ್‌ಟನ್
- 1985–1992 ಸರ್ ಡೇವಿಡ್ ಒರ್
- 1992–1998 ಸರ್ ಮಾರ್ಡಿನ್ ಜಕೊಂಬ್
- 1998–2004 ಬೊರೆನೆಸ್ ಕೆನೆಡಿ ಆಫ್ ದಿ ಶಾಸ್
- 2004–2009 ಲಾರ್ಡ್ ಕಿನ್ನಾಕ್[೭೭]
- 2010–ಪ್ರಸ್ತುತ) ಸರ್ ವರ್ನನ್ ಎಲ್ಲಿಸ್
ಮಾನ್ಯತೆ
[ಬದಲಾಯಿಸಿ]2005ರಲ್ಲಿ, ಅಲಿಯಾನ್ಸ್ ಫ್ರಾಂಕಯಿಸ್, ಸೊಸೈತ ಡಾಂಟೆ ಅಲಿಗೆರಿ, ಗಯಟೆ ಇನ್‌ಸ್ಟಿಟ್ಯುಟ್, ಇನ್‌ಸ್ಟಿಟ್ಯುಟೊ ಕರ್ವಂಟಿಸ್ ಮತ್ತು ಇನ್‌ಸ್ಟಿಟ್ಯುಟೊ ಕ್ಯಮೋಸ್ ಸಂಸ್ಥೆಗಳ ಜೊತೆಗೆ ಬ್ರಿಟಿಶ್ ಕೌನ್ಸಿಲ್ ಪ್ರಿನ್ಸ್ ಆಫ್ ಅಸ್ತುರಿಯಸ್ ಅವಾರ್ಡ್ ಅನ್ನು ಸಂವಹನ ಮತ್ತು ಮಾನವತೆ ಕ್ಷೇತ್ರಗಳಲ್ಲಿ ಪಶ್ಚಿಮ ಯೂರೋಪ್‌ನ ರಾಷ್ಟ್ರೀಯ ಸಾಂಸ್ಕೃತಿಕ ಸಂಸ್ಥೆಗಳ ಅತ್ಯಮೋಘ ಸಾಧನೆಗಾಗಿ ಪಡೆದುಕೊಂಡಿದೆ. ಈ ಜಂಟಿ ಪ್ರಶಸ್ತಿ ನೀಡಿದ ಸಮಯದಲ್ಲಿ ಯೂರೋಪ್‌ನಲ್ಲಿ ತನ್ನ ಕಚೇರಿಗಳನ್ನು ಸಂಪೂರ್ಣವಾಗಿ ಮುಚ್ಚುವ ಬ್ರಿಟಿಶ್ ಕೌನ್ಸಿಲ್‌ನ ನೀತಿಯು ಇನ್ನೂ ಸಾರ್ವಜನಿಕರ ಅರಿವಿಗೆ ಬಂದಿರಲಿಲ್ಲ.
ಇವನ್ನೂ ಗಮನಿಸಿ
[ಬದಲಾಯಿಸಿ]- ಇಯುನಿಕ್
- ಫೆಸ್ಟಿವಲ್ ಆಫ್ ಮುಸ್ಲಿಂ ಕಲ್ಚರ್ಸ್ (ಮುಸ್ಲಿಂ ಸಂಸ್ಕೃತಿಗಳ ಉತ್ಸವ)
- ವಿದೇಶೀ ಭಾಷೆಯಾಗಿ ಇಂಗ್ಲಿಶ್ ಬೋಧನೆ (ಟಿಇಎಫ್‌ಎಲ್)
- ದಿ ಬ್ರಿಟಿಶ್ ಕೌನ್ಸಿಲ್ ಇಂಗ್ಲಿಶ್ ಕ್ಲಬ್
ಉಲ್ಲೇಖಗಳು
[ಬದಲಾಯಿಸಿ]- ↑ ಬ್ರಿಟಿಶ್‌ಕೌನ್ಸಿಲ್.ಆರ್ಗ್
- ↑ ಬ್ರಿಟಿಶ್‌ಕೌನ್ಸಿಲ್.ಆರ್ಗ್
- ↑ "ಪರ್ಸೊನೆಲ್‌ಟುಡೇ.ಕಾಂ". Archived from the original on 2010-11-04. Retrieved 2011-02-11.
- ↑ ೪.೦ ೪.೧ ಬ್ರಿಟಿಶ್‌ಕೌನ್ಸಿಲ್.ಆರ್ಗ್
- ↑ ವರ್ಡ್‌ಪ್ರೆಸ್.ಕಾಂ
- ↑ ಲೀ, ಮ್ಯುನ 9, ಕೊಹೆನ್, ಜೊನಾಥನ್ ಅವರಿಂದ ಸಂಪಾದಿತ) (2004) ಎ ಪ್ಯಾನ್ ಅಮೆರಿಕನ್ ಲೈಫ್: ಸೆಲೆಕ್ಟೆಡ್ ಪೊಯೆಟ್ರಿ ಆಂಡ್ ಪ್ರೋಸ್ ಆಫ್ ಮ್ಯುನ ಲೀ ವಿಸ್ಕಾನ್ಸಿನ್ ವಿಶ್ವವಿದ್ಯಾಲಯ ಮುದ್ರಣಾಲಯ, ಮ್ಯಾಡಿಸನ್, ವಿಸ್ಕಾನ್ಸಿನ್. ಪುಟ 268, ಐಎಸ್‌ಬಿಎನ್ 0-299-20230-5
- ↑ ೭.೦ ೭.೧ ೭.೨ "1930ರ ಮತ್ತು 1940ರ - ಬ್ರಿಟಿಶ್ ಕೌನ್ಸಿಲ್ - ಇತಿಹಾಸ" ಬ್ರಿಟಿಶ್ ಕೌನ್ಸಿಲ್ ಅಂತರ್ಜಾಲತಾಣದ ಪುಟ
- ↑ ೮.೦ ೮.೧ ಡೊನಾಲ್ಡ್‌ಸನ್, ಫ್ರಾನ್ಸಸ್ ಲಾನ್ಸ್‌ಡೇಲ್ (1984) ದಿ ಬ್ರಿಟಿಶ್ ಕೌನ್ಸಿಲ್: ದಿ ಫರ್ಸ್ಟ್ ಫಿಫ್ಟಿ ಈಯರ್ಸ್ ಜೆ. ಕೇಪ್, ಲಂಡನ್, ಪುಟ 1, ಐಎಸ್‌ಬಿಎನ್ 0-224-02041-2
- ↑ "ಅಲೈಡ್ ಸೆಂಟರ್ಸ್ - 1940ರ -ಯಾವಾಗ - ಬ್ರಿಟಿಶ್ ಕೌನ್ಸಿಲ್ - ಇತಿಹಾಸ" ಬ್ರಿಟಿಶ್ ಕೌನ್ಸಿಲ್ ಅಂತರ್ಜಾಲಪುಟ
- ↑ ಸಿ.ಎ.ಎಚ್. (1990) "ಆಸ್ಟಿನ್ ಗಿಲ್ (1906–1990)" ಫ್ರೆಂಚ್ ಸ್ಟಡೀಸ್ 44(4): ಪುಟಗಳು. 501–502, ಪುಟ 501, ಡಿಒಐ; 10.1093/ಎಫ್‌ಎಸ್/XLIV.4.501
- ↑ "1950ರ ಮತ್ತು 1960ರ - ಬ್ರಿಟಿಶ್ ಕೌನ್ಸಿಲ್ - ಇತಿಹಾಸ" ಬ್ರಿಟಿಶ್ ಕೌನ್ಸಿಲ್ ಅಂತರ್ಜಾಲಪುಟ
- ↑ ಸ್ಪೀಕರ್ ಮೈಕೇಲ್ ಮಾರ್ಟಿನ್ ಇನ್ ಸೀಕ್ರೆಸಿ ರೋ ಓವರ್ ಬ್ರಿಟಿಶ್ ಕೌನ್ಸಿಲ್ ಟ್ರಿಪ್ಸ್ Archived 2010-07-12 ವೇಬ್ಯಾಕ್ ಮೆಷಿನ್ ನಲ್ಲಿ., ಟೆಲಿಗ್ರಾಫ್
- ↑ ಬ್ರಿಟಿಶ್ ಕೌನ್ಸಿಲ್ ವಾರ್ಷಿಕ ವರದಿ 2006/2007. 13 ಡಿಸೆಂಬರ್ 2009ರಂದು ಪುನಾಸಂಪಾದಿಸಲಾಗಿದೆ. Archived ಫೆಬ್ರವರಿ ೨೭, ೨೦೦೮ at the Wayback Machine
- ↑ ಐಎಇಎಸ್‌ಟಿಇ ಅಧಿಕೃತ ಅಂತರ್ಜಾಲತಾಣ
- ↑ "ಐಎಇಎಸ್‌ಟಿಇ.ಆರ್ಗ್.ಯುಕೆ". Archived from the original on 2008-10-23. Retrieved 2011-02-11.
- ↑ "ಐಎಇಎಸ್‌ಟಿಇ.ಆರ್ಗ್". Archived from the original on 2008-10-23. Retrieved 2011-02-11.
- ↑ ಬ್ರಿಟಿಶ್‌ಕೌನ್ಸಿಲ್.ಆರ್ಗ್
- ↑ "ಇಂಗ್ಲಿಶ್ ಆನ್‌ಲೈನ್". Archived from the original on 2009-02-04. Retrieved 2011-02-11.
- ↑ ಬ್ರಿಟಿಶ್ ಕೌನ್ಸಿಲ್ ಐಸ್ಲ್ ಟು ಓಪನ್ ಬೀಟಾ ಟೀನ್ ಗ್ರಿಡ್ ಟುಮಾರೋ. Archived 2009-02-09 ವೇಬ್ಯಾಕ್ ಮೆಷಿನ್ ನಲ್ಲಿ. 13 ಡಿಸೆಂಬರ್ 2007ರಂದು ಪುನಾಸಂಪಾದಿಸಲಾಗಿದೆ.
- ↑ "ಯುಟ್ಯೂಬ್ ವಿಡಿಯೋ - ಬ್ರಿಟಿಶ್ ಕೌನ್ಸಿಲ್ ಐಸ್ಲ್, ಸೆಕೆಂಡ್ ಲೈಫ್". Archived from the original on 2011-12-09. Retrieved 2021-07-13.
- ↑ "ಬ್ರಿಟಿಶ್ ಕೌನ್ಸಿಲ್.ಆರ್ಗ್". Archived from the original on 2009-01-21. Retrieved 2011-02-11.
- ↑ "ಮೇಕಿಂಗ್ ಎ ವರ್ಲ್ಡ್ ಆಫ್ ಡಿಫರೆನ್ಸ್". Archived from the original on 2007-09-06. Retrieved 2011-02-11.
- ↑ "ಕ್ರಿಯೇಟಿವ್ಎಕಾನಮಿ.ಆರ್ಗ್.ಯುಕೆ/". Archived from the original on 2007-07-17. Retrieved 2011-02-11.
- ↑ [೧]
- ↑ "ಆರ್ಕೈವ್ ನಕಲು". Archived from the original on 2009-02-13. Retrieved 2009-02-13.
- ↑ ಯುಟ್ಯೂಬ್.ಕಾಂ
- ↑ ಬ್ರಿಟಿಶ್ ಕೌನ್ಸಿಲ್ ಅಂತರ್ಜಾಲತಾಣ "ಪ್ರಧಾನ ಮಂತ್ರಿಯವರ ಗ್ಲೋಬಲ್ ಫೆಲೋಶಿಪ್ ಎಂದರೇನು?" ನವೆಂಬರ್ 10, 2009ರಂದು ಪ್ರವೇಶ ಕಂಡಿದೆ.
- ↑ ವಿದೇಶಾಂಗ ವ್ಯವಹಾರಗಳ ಸಮಿತಿ ವರದಿ, ನವೆಂಬರ್ 2007, ಪ್ಯಾರಾ. 137
- ↑ ಬ್ರಿಟಿಶ್ ಕೌನ್ಸಿಲ್, ರಷ್ಯಾ. Archived 2010-06-21 ವೇಬ್ಯಾಕ್ ಮೆಷಿನ್ ನಲ್ಲಿ.[೨] Archived 2010-06-21 ವೇಬ್ಯಾಕ್ ಮೆಷಿನ್ ನಲ್ಲಿ. 12 ಡಿಸೆಂಬರ್ 2007ರಂದು ಪುನಾಸಂಪಾದಿಸಲಾಗಿದೆ.
- ↑ ಬ್ರಿಟಿಶ್ ಕೌನ್ಸಿಲ್ - ಲೈಬ್ರರೀಸ್ ಹ್ಯಾಂಡೋವರ್ Archived 2011-06-06 ವೇಬ್ಯಾಕ್ ಮೆಷಿನ್ ನಲ್ಲಿ.2008ರ ಫೆಬ್ರವರಿ 7ರಂದು ಮರುಸಂಪಾದಿಸಿದ್ದು Archived 2011-06-06 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ರಷ್ಯಾ ಸಸ್ಪೆಂಡ್ಸ್ ಬ್ರಿಟಿಶ್ ಕೌನ್ಸಿಲ್ ರೀಜನಲ್ ಆಫೀಸಸ್, ರಾಯಿಟರ್ಸ್.13 ಡಿಸೆಂಬರ್ 2007ರಂದು ಪುನಾಸಂಪಾದಿಸಲಾಗಿದೆ.
- ↑ ಮಾಸ್ಕೋ ನ್ಯೂಸ್ ನಂ. 49, 2007: ಬ್ರಿಟಿಶ್ ಕೌನ್ಸಿಲ್ ಟು ಕ್ಲೋಸ್ ಇನ್ ರೀಜನ್ಸ್. 13 ಡಿಸೆಂಬರ್ 2009ರಂದು ಪುನಾಸಂಪಾದಿಸಲಾಗಿದೆ.
- ↑ ಬ್ರಿಟನ್-ರಷ್ಯಾ ಡಿಪ್ಲೋಮ್ಯಾಟಿಕ್ ರೊ ವರ್ಸನ್ಸ್, ಬಿ.ಬಿ.ಸಿ. ನ್ಯೂಸ್, 14 ಜನವರಿ.
- ↑ ದಿ ಟೈಮ್ಸ್ ಅನ್‌ಲೈನ್: ನೀಲ್ ಕಿನ್ನಾಕ್ಸ್ ಸನ್ ಹೆಲ್ಡ್ ಬೈ ಪೊಲೀಸ್.
- ↑ ಹೌಸ್ ಆಫ್ ಕಾಮನ್ಸ್ ಪಬ್ಲಿಕೇಶನ್ಸ್ ಆಂಡ್ ರೆಕಾರ್ಡ್ಸ್: 20ನೇ ಮಾರ್ಚ್, 2008.
- ↑ ರಷ್ಯಾ ರೋ ಆಫೀಸಸ್ 'ಟು ಸ್ಟೇ ಶಟ್', ಬಿಬಿಸಿ ನ್ಯೂಸ್, 17 ಜನವರಿ 2008.
- ↑ ಬ್ರಿಟಿಶ್ ಕೌನ್ಸಿಲ್ ಸಸ್‌ಪೆಂಡ್ಸ್ ವರ್ಕ್ ಇನ್ ಸೇಂಟ್ ಪೀಟರ್ಸ್‌ಬರ್ಗ್ - 2, ಆರ್‌ಐಎ ನೊವೊಸ್ತಿ, 16 ಜನವರಿ 2008.
- ↑ ಬ್ರಿಟಿಶ್ ಕೌನ್ಸಿಲ್ ಇನ್ ಕೋರ್ಟ್ ಓವರ್ ಟ್ಯಾಕ್ಸ್ ಬಿಲ್ - ಸೇಂಟ್ ಪೀಟರ್ಸ್‌ಬರ್ಗ್ ಟೈಮ್ಸ್, 20 ಜೂನ್, 2008.
- ↑ "British Council hit by Russia tax bill". London: Daily Telegraph. 27 December 2008. Retrieved 27 April 2010.
- ↑ "Press Release". World Economic Forum. Archived from the original on 2009-02-12. Retrieved 2011-02-11.
- ↑ ಬ್ರಿಟಿಶ್‌ಕೌನ್ಸಿಲ್.ಆರ್ಗ್
- ↑ ಅಥೆನ್ಸ್ ಗ್ರಂಥಾಲಯ, ಹ್ಯಾನ್ಸರ್ಡ್ 27 ಜೂನ್ 2007
- ↑ ನ್ಯೂ ಪ್ರೊಫೈಲ್
- ↑ "British Library writes its epilogue". The Hindu. Chennai, India. 7 December 2007. Archived from the original on 8 ಡಿಸೆಂಬರ್ 2007. Retrieved 11 ಫೆಬ್ರವರಿ 2011.
- ↑ ಇಂಡಿಯಾಟೈಮ್ಸ್.ಕಾಂ
- ↑ Neil Kinnock Archived 2007-11-29 at Archive-It at the ಎಡಿನ್‌ಬರೊ ಫೆಸ್ಟಿವಲ್ ಆಫ್ ಪಾಲಿಟಿಕ್ಸ್, (ಸುಮಾರು 36-42 ನಿಮಿಷಗಳ ಸ್ಟ್ರೀಮಿಂಗ್ ವಿಡಿಯೋ ಕ್ಲಿಪ್‌ಗಳಿಂದ ಮತ್ತು ಸುಮಾರು 62 ನಿಮಿಷಗಳ ಪ್ರಶ್ನೆ/ಉತ್ತರದಿಂದ)
- ↑ ಲಾರ್ಡ್ಸ್ ಹ್ಯಾನ್ಸರ್ಡ್ ಟೆಕ್ಸ್ಟ್, ಪೆರುವಿನಲ್ಲಿದ್ದ ಇಂಗ್ಲಿಶ್ ಭಾಷೆ ಸಲಹಾ ಸೇವೆಗಳನ್ನು ಮೊದಲು ಬ್ರೆಜಿಲ್‌ನ ರಿಯೊ ಡಿ ಜನೈರೋಗೆ, ನಂತರ ಲಂಡನ್ ಕೇಂದ್ರಕಚೇರಿಗೆ ಸ್ಥಳಾಂತರಿಸಲಾಯಿತು. ಹ್ಯಾನ್ಸರ್ಡ್ ಕಾಲಮ್ ಡಬ್ಲ್ಯುಎ130, 26 ಜೂನ್ 2006
- ↑ 'ಔಟ್‌ಕ್ರೈ ಆಸ್ ಬ್ರಿಟಿಶ್ ಕೌನ್ಸಿಲ್ ಕ್ವಿಟ್ಸ್ ಯೂರೋಪ್ ಟು ವೂ ಮುಸ್ಲಿಂ ವರ್ಲ್ಡ್' ಬೈ ಹೆಲೆನಾ ಸ್ಮಿತ್, ಅಥೆನ್ಸ್ ದಿ ಅಬ್ಸರ್ವರ್ , 5 ಆಗಸ್ಟ್ 2007
- ↑ ಪಶ್ಚಿಮ ಜೆರುಸಲೆಂ Archived 2007-08-19 ವೇಬ್ಯಾಕ್ ಮೆಷಿನ್ ನಲ್ಲಿ. ಗ್ರಂಥಾಲಯ ಮುಚ್ಚಲಾಯಿತು
- ↑ ಗಾಜಾ ಗ್ರಂಥಾಲಯ Archived 2007-09-27 ವೇಬ್ಯಾಕ್ ಮೆಷಿನ್ ನಲ್ಲಿ. ಪವರ್‌ಪಾಯಿಂಟ್ ಪ್ರಸಂಟೇಶನ್
- ↑ ಫ್ರಮ್ ಕ್ವಿಟಿಂಗ್, ಬ್ರಿಟಿಶ್ ಕೌನ್ಸಿಲ್ ಈಸ್ ಬ್ರಿಡ್ಜಿಂಗ್ ಗ್ಯಾಪ್ಸ್, ದಿ ಅಬ್ಸರ್ವರ್ ಗೆ 2007ರ ಆಗಸ್ಟ್ 12ರಂದು ಬರೆದ ಪತ್ರ
- ↑ ಬ್ರಿಟಿಶ್‌ಕೌನ್ಸಿಲ್.ಆರ್ಗ್
- ↑ ಗಯಟೆ.ಡೆ
- ↑ "ಅದರ್ ಲ್ಯಾಂಡರ್ ಆಫೀಸಸ್ ಕ್ಲೋಸ್ಡ್". Archived from the original on 2008-09-30. Retrieved 2011-02-11.
- ↑ ಯುಸಿಎಎಸ್.ಎಸಿ.ಬ್ರಿಟನ್, ಉದಾಹರಣೆ
- ↑ ಸ್ಪಾನ್ಸರಿಂಗ್ ಡಿಪಾರ್ಟ್‌ಮೆಂಟ್ ಹ್ಯಾನ್ಸರ್ಡ್‌ನಲ್ಲಿ, 25 ಜೂನ್ 2007
- ↑ ಚೀನಾದಲ್ಲಿ ಪ್ರಮೋಟಿಂಗ್ ಹೈಯರ್ ಎಜುಕೇಶನ್
- ↑ "ಯುಕೆ ಇಂಡಿಯಾ ಎಜುಕೇಶನ್ ಆಂಡ್ ರಿಸರ್ಚ್ ಇನಿಶೀಯೇಟಿವ್". Archived from the original on 2007-08-22. Retrieved 2011-02-11.
- ↑ ಬಿಎಇ ಸಿಸ್ಟಮ್ಸ್ ಇನ್‌ವೆಸ್ಟಿಗೇಶನ್ ದಿ ಬೋಸ್ಟನ್ ಗ್ಲೋಬ್ 27 ಜೂನ್ 2007
- ↑ ಫ್ಯೂಡ್ಸ್ ಆಂಡ್ ಟರ್ಫ್ ವಾರ್ಸ್ ಪುಟ್ ಫ್ರೆಶ್ ಟ್ಯಾಲೆಂಟ್ ಫ್ಲಾಗ್‌ಶಿಪ್ ಪ್ಲಾನ್ ಇನ್ ಜಿಯೊಪಾರ್ಡಿ ದಿ ಸಂಡೇ ಹೆರಾಲ್ಡ್ 30 ಅಕ್ಟೋಬರ್ 2005
- ↑ ದಿ ಬ್ರಿಟಿಶ್ ಕೌನ್ಸಿಲ್: ಅಚೀವಿಂಗ್ ಇಂಪಾಕ್ಟ್ Archived 2008-10-23 ವೇಬ್ಯಾಕ್ ಮೆಷಿನ್ ನಲ್ಲಿ. ನ್ಯಾಶನಲ್ ಆಡಿಟ್ ಆಫೀಸ್ 9 ಜೂನ್ 2008
- ↑ ೬೨.೦ ೬೨.೧ ಗಾರ್ಡಿಯನ್.ಕೋ.ಯುಕೆ
- ↑ "ಟೆಲಿಗ್ರಾಫ್.ಕೋ.ಬ್ರಿಟನ್". Archived from the original on 2010-07-12. Retrieved 2011-02-11.
- ↑ "ಬ್ರಿಟಿಶ್‌ಕೌನ್ಸಿಲ್.ಆರ್ಗ್". Archived from the original on 2009-06-09. Retrieved 2011-02-11.
- ↑ ನ್ಯೂಸ್‌ಆಫ್‌ದಿವರ್ಲ್ಡ್.ಕೊ.ಯುಕೆ
- ↑ ಪಾರ್ಲಿಮೆಂಟ್.ಯುಕೆ
- ↑ ಪಾರ್ಲಿಮೆಂಟ್.ಯುಕೆ
- ↑ ಗಾರ್ಡಿಯನ್.ಕೊ.ಯುಕೆ
- ↑ ಪಾರ್ಲಿಮೆಂಟ್.ಯುಕೆ
- ↑ ಐಟಿಪ್ರೊ.ಕೊ.ಯುಕೆ
- ↑ ೭೧.೦ ೭೧.೧ ಸಂಡೇಹೆರಾಲ್ಡ್.ಕಾಮ್
- ↑ ಟೈಮ್ಸ್‌ಆನ್‌ಲೈನ್.ಕೊ.ಯುಕೆ
- ↑ "ಹೆಲೆನಾಕೆನೆಡಿ.ಕೊ.ಯುಕೆ". Archived from the original on 2009-04-30. Retrieved 2011-02-11.
- ↑ "ಡಫ್ಟಿಸ್ಟ್ರೀಟ್.ಕೊ.ಯುಕೆ". Archived from the original on 2013-04-07. Retrieved 2011-02-11.
- ↑ "ಹೊರಿಜನ್ ಕ್ವಶ್ಚನೇರ್: ದಿ ಕಾಸ್ಟ್ ಲೆಟರ್ಸ್", ಇನ್ ಹೊರಿಜನ್ , 1946
- ↑ ಡರ್ರೆಲ್ ಎಲ್ (1985) ಆಂಟ್ರೋಬಸ್ ಕಂಪ್ಲೀಟ್ , 202 ಪುಟಗಳು, ಫೇಬರ್ & ಫೇಬರ್, ಐಎಸ್‌ಬಿಎನ್ 0-571-13603-6.
- ↑ ಬ್ರಿಟಿಶ್‌ಕೌನ್ಸಿಲ್.ಆರ್ಗ್
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಬ್ರಿಟಿಶ್ ಕೌನ್ಸಿಲ್ ಅಧಿಕೃತ ಅಂತರ್ಜಾಲತಾಣ
- ಐಎಇಎಸ್‌ಟಿಇ ಬ್ರಿಟನ್ ಅಧಿಕೃತ ಅಂತರ್ಜಾಲತಾಣ
- ಬ್ರಿಟಿಶ್ ಕೌನ್ಸಿಲ್ - ಲರ್ನ್ ಇಂಗ್ಲಿಶ್ ಗೇಟ್ವೇ
- ಬ್ರಿಟಿಶ್ ಕೌನ್ಸಿಲ್ - ಲರ್ನ್ ಇಂಗ್ಲಿಶ್ ಕಿಡ್ಸ್
- ಬ್ರಿಟಿಶ್ ಕೌನ್ಸಿಲ್ - ಐಇಎಲ್‌ಟಿಎಸ್ - ಅಂತಾರಾಷ್ಟ್ರೀಯ ಇಂಗ್ಲಿಶ್ ಭಾಷೆ ಪರೀಕ್ಷೆ
- ಬ್ರಿಟಿಶ್ ಕೌನ್ಸಿಲ್ - ಟೀಚಿಂಗ್ ಇಂಗ್ಲಿಶ್ ಗೇಟ್ವೇ
- ದಿ ಬ್ರಿಟಿಶ್ ಕೌನ್ಸಿಲ್ ಇಂಗ್ಲಿಶ್ ಕ್ಲಬ್ Archived 2016-10-02 ವೇಬ್ಯಾಕ್ ಮೆಷಿನ್ ನಲ್ಲಿ.
ವಿಡಿಯೋಗಳು
[ಬದಲಾಯಿಸಿ]- ಬ್ರಿಟಿಶ್ ಕೌನ್ಸಿಲ್ ಹಾಂಗ್‌ಕಾಂಗ್
- ಬ್ರಿಟಿಶ್ ಕೌನ್ಸಿಲ್ ಭಾರತ
- ಬ್ರಿಟಿಶ್ ಕೌನ್ಸಿಲ್ ಮಲೇಷಿಯ
- ಬ್ರಿಟಿಶ್ ಕೌನ್ಸಿಲ್ ಉತ್ತರ ಐರ್ಲೆಂಡ್
- ಬ್ರಿಟಿಶ್ ಕೌನ್ಸಿಲ್ ಅನ್ ಸೆಕೆಂಡ್ ಲೈಫ್
- ಬ್ರಿಟಿಶ್ ಕೌನ್ಸಿಲ್ ಸಿಂಗಾಪುರ್
- ಬ್ರಿಟಿಶ್ ಕೌನ್ಸಿಲ್ ವೇಲ್ಸ್
- ಎಜುಕೇಶನ್ ಯುಕೆ
- ಟೀಚಿಂಗ್ ಇಂಗ್ಲಿಶ್
- 2009ರ ಪ್ಯಾಲಸ್ಟೈನ್ ಸಾಹಿತ್ಯೋತ್ಸವದ ಸಮಾರೋಪ ಸಂಜೆಯ ಕಾರ್ಯಕ್ರಮದ ರಕ್ಷಣೆಗಾಗಿಬ್ರಿಟಿಶ್ ಕಾನ್ಸುಲ್ ಜನರಲ್ ಮಧ್ಯಪ್ರವೇಶ
- Pages using the JsonConfig extension
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Webarchive template other archives
- Articles with unsourced statements from July 2009
- All articles with minor POV problems
- Articles with minor POV problems from November 2010
- Articles with invalid date parameter in template
- Webarchive template archiveis links
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- All articles that may contain original research
- Articles that may contain original research from July 2009
- 1934ರಲ್ಲಿ ಸ್ಥಾಪಿತವಾದ ಸಂಘಟನೆಗಳು
- ಬ್ರಿಟಿಷ್ ಸಂಸ್ಕೃತಿ
- ಅಂತಾರಾಷ್ಟ್ರೀಯ ಸಾಂಸ್ಕೃತಿಕ ಸಂಸ್ಥೆಗಳು
- ಇಂಗ್ಲಿಶ್-ಭಾಷೆ ಶಿಕ್ಷಣ
- ಬ್ರಿಟನ್ನಿನಲ್ಲಿರುವ ದತ್ತಿನಿಧಿ ಸಂಸ್ಥೆಗಳು
- ವಿದೇಶಾಂಗ ಮತ್ತು ಕಾಮನ್‌ವೆಲ್ತ್ ಕಚೇರಿ
- ಬ್ರಿಟನ್ ಸರ್ಕಾರದ ಇಲಾಖೆಗೆ ಸೇರದ ಸಾರ್ವಜನಿಕ ಸಂಸ್ಥೆಗಳು
- ಬ್ರಿಟನ್ನಿನಲ್ಲಿ 1934ರಲ್ಲಿ ಸ್ಥಾಪಿತವಾದವುಗಳು
- ಬ್ರಿಟೀಷ್ ಸಾಮ್ರಾಜ್ಯ