ವಿಷಯಕ್ಕೆ ಹೋಗು

ಬೇರ್ ಗ್ರಿಲ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೇರ್ ಗ್ರಿಲ್ಸ್

ಒಬಿ‌ಇ
೨೦೧೨ ರಲ್ಲಿ ಕೋವೆಂಟ್ರಿ ಸ್ಕೌಟ್ಸ್ ಗುಂಪುಗಳ ಸಭೆಯಲ್ಲಿ ಗ್ರಿಲ್ಸ್
ಜನನ
ಎಡ್ವರ್ಡ್ ಮೈಕೆಲ್ ಬೇರ್ ಗ್ರಿಲ್ಸ್

(1974-06-07) ೭ ಜೂನ್ ೧೯೭೪ (ವಯಸ್ಸು ೫೦)
ಡೊನಾಘಡೀ, ಉತ್ತರ ಐರ್ಲೆಂಡ್
ವಿದ್ಯಾಭ್ಯಾಸಎಟನ್ ಕಾಲೇಜ್
ಶಿಕ್ಷಣ ಸಂಸ್ಥೆ
  • ಯುನಿವರ್ಸಿಟಿ ಆಫ್ ದಿ ವೆಸ್ಟ್ ಆಫ್ ಇಂಗ್ಲೆಂಡ್, ಬ್ರಿಸ್ಟಲ್
  • ಬಿರ್ಕ್‌ಬೆಕ್, ಲಂಡನ್ ವಿಶ್ವವಿದ್ಯಾಲಯ
ವೃತ್ತಿs
  • ಸಾಹಸಿ
  • ಲೇಖಕ
  • ದೂರದರ್ಶನ ನಿರೂಪಕ
  • ಪ್ರೇರಕ ಭಾಷಣಕಾರ
ಸಂಗಾತಿ
ಶಾರಾ ಕ್ಯಾನಿಂಗ್ಸ್ ನೈಟ್
(m. ೨೦೦೦)
ಮಕ್ಕಳು
ಪೋಷಕ
  • ಸರ್ ಮೈಕೆಲ್ ಗ್ರಿಲ್ಸ್ (ತಂದೆ)
Military career
ವ್ಯಾಪ್ತಿಪ್ರದೇಶಯುನೈಟೆಡ್ ಕಿಂಗ್ಡಂ ಯುನೈಟೆಡ್ ಕಿಂಗ್ಡಮ್
ಶಾಖೆ  ಬ್ರಿಟಿಷ್ ಸೈನ್ಯ
ಸೇವಾವಧಿ೧೯೯೪–೧೯೯೭
ಶ್ರೇಣಿ(ದರ್ಜೆ)ಟ್ರೂಪರ್
ಘಟಕ೨೧ ಎಸ್‌ಎ‌‌ಎಸ್
ಜಾಲತಾಣbeargrylls.com


ಎಡ್ವರ್ಡ್ ಮೈಕೆಲ್ ಬೇರ್ ಗ್ರಿಲ್ಸ್ (/ˈɡrɪlz/; ಜನನ ೭ ಜೂನ್ ೧೯೭೪) ಒಬ್ಬ ಬ್ರಿಟಿಷ್ ಎ‍ಸ್‌ಎ‌ಎಸ್ ಸೈನಿಕ, ದೂರದರ್ಶನ ನಿರೂಪಕ. ಇವರು ದೂರದರ್ಶನ ಸರಣಿ ಮ್ಯಾನ್ ವರ್ಸಸ್ ವೈಲ್ಡ್ (೨೦೦೬-೨೦೧೧)ರಲ್ಲಿ ನಿರೂಪಕರಾಗಿದ್ದರು. ಜುಲೈ ೨೦೦೯ ರಲ್ಲಿ ಗ್ರಿಲ್ಸ್ ತನ್ನ ೩೫ ನೇ ವಯಸ್ಸಿನಲ್ಲಿ ಯುನೈಟೆಡ್ ಕಿಂಗ್‌ಡಮ್ ಮತ್ತು ಸಾಗರೋತ್ತರ ಪ್ರಾಂತ್ಯಗಳ ಸ್ಕೌಟ್ ಅಸೋಸಿಯೇಷನ್‌ನ ಕಿರಿಯ ಚೀಫ್ ಸ್ಕೌಟ್ ಆಗಿ ನೇಮಕಗೊಂಡರು.

ವೈಯಕ್ತಿಕ ಜೀವನ

[ಬದಲಾಯಿಸಿ]

ಗ್ರಿಲ್ಸ್ ಅವರು ೭ ಜೂನ್ ೧೯೭೪ ರಂದು ಉತ್ತರ ಐರ್ಲೆಂಡ್‌ನ ಡೊನಾಘಡೆಯಲ್ಲಿ ಜನಿಸಿದರು.[][] ಅವರ ಅಜ್ಜ ನೆವಿಲ್ಲೆ ಫೋರ್ಡ್ ಮತ್ತು ಮುತ್ತಜ್ಜ ವಿಲಿಯಂ ಅಗಸ್ಟಸ್ ಫೋರ್ಡ್ ಇಬ್ಬರೂ ಪ್ರಥಮ ದರ್ಜೆಯ ಕ್ರಿಕೆಟಿಗರಾಗಿದ್ದರು. ಅವರ ತಂದೆ ಕನ್ಸರ್ವೇಟಿವ್ ರಾಜಕಾರಣಿ ಸರ್ ಮೈಕೆಲ್ ಗ್ರಿಲ್ಸ್ ಮತ್ತು ತಾಯಿ ಸಾರಾ "ಸ್ಯಾಲಿ" (ನೀ ಫೋರ್ಡ್).[] ಗ್ರಿಲ್ಸ್‌ ಅವರ ಅಕ್ಕ ಲಾರಾ ಫಾಸೆಟ್. ಗ್ರಿಲ್ಸ್‌ ಅವರು ಮಗುವಾಗಿದ್ದಾಗ ಅವರ ಅಕ್ಕ ಅವರನ್ನು'ಬೇರ್' ಎಂದು ಕರೆಯುತ್ತಿದ್ದರು.[]

ಅವರು ಡೊನಾಘಡೀಯಲ್ಲಿ ನಾಲ್ಕನೇ ವಯಸ್ಸಿನವರೆಗೆ ವಾಸಿಸುತ್ತಿದ್ದರು. ನಂತರ ಅವರ ಕುಟುಂಬವು ಐಲ್ ಆಫ್ ವೈಟ್‌ನಲ್ಲಿ ರುವ ಬೆಂಬ್ರಿಡ್ಜ್‌ಗೆ ಸ್ಥಳಾಂತರಗೊಂಡರು.[][] ಗ್ರಿಲ್ಸ್ ಅವರು ಶೋಟೊಕಾನ್ ಕರಾಟೆಯಲ್ಲಿ ಎರಡನೇ ಡಾನ್ ಬ್ಲ್ಯಾಕ್ ಬೆಲ್ಟ್ ಗಳಿಸಿದರು.[]

ಗ್ರಿಲ್ಸ್ ಅವರು ೨೦೦೦ ರಲ್ಲಿ ಶಾರಾ ಕ್ಯಾನಿಂಗ್ಸ್ ನೈಟ್ ಅವರನ್ನು ವಿವಾಹವಾದರು.[] ಅವರಿಬ್ಬರಿಗೆ ಮೂವರು ಗಂಡು ಮಕ್ಕಳು ಜನಿಸಿದರು.[][೧೦]

ಶಿಕ್ಷಣ

[ಬದಲಾಯಿಸಿ]

ಗ್ರಿಲ್ಸ್ ಅವರು ಈಟನ್ ಹೌಸ್, ಲುಡ್‌ಗ್ರೋವ್ ಸ್ಕೂಲ್ ಮತ್ತು ಎಟನ್ ಕಾಲೇಜಿನಲ್ಲಿ ಶಿಕ್ಷಣವನ್ನು ಪಡೆದರು.[೧೧] ಅವರು ವೆಸ್ಟ್ ಆಫ್ ಇಂಗ್ಲೆಂಡ್, ಬ್ರಿಸ್ಟಲ್ ಮತ್ತು ಬಿರ್ಕ್‌ಬೆಕ್ ಕಾಲೇಜಿನಲ್ಲಿ ಸ್ಪ್ಯಾನಿಷ್ ಮತ್ತು ಜರ್ಮನ್ ಭಾಷೆಯನ್ನು ಅಧ್ಯಯನ ಮಾಡಿದರು.[೧೨][೧೩] ಅವರು ಪದವಿಯೊಂದಿಗೆ ೨:೨ ಸ್ನಾತಕೋತ್ತರ ಪದವಿ ಪಡೆದರು.[೧೪][೧೫]

ಸೇನಾ ಸೇವೆ

[ಬದಲಾಯಿಸಿ]

೧೯೯೭ ರಿಂದ ಅವರು ೨೧ ಎಸ್‌ಎ‌ಎಸ್ ನೊಂದಿಗೆ ಪ್ರಾದೇಶಿಕ ಸೈನ್ಯದಲ್ಲಿ ಸೈನಿಕರಾಗಿ ಸೇವೆ ಸಲ್ಲಿಸಿದರು.

೨೦೦೪ ರಲ್ಲಿ ಗ್ರಿಲ್ಸ್‌ ಅವರಿಗೆ ರಾಯಲ್ ನೇವಲ್ ರಿಸರ್ವ್‌ನಲ್ಲಿ ಲೆಫ್ಟಿನೆಂಟ್ ಕಮಾಂಡರ್ ಗೌರವ ಶ್ರೇಣಿಯನ್ನು ನೀಡಲಾಯಿತು.[೧೬] ನಂತರ ೨೦೧೩ ರಲ್ಲಿ ಅವರು ರಾಯಲ್ ಮೆರೀನ್ಸ್ ರಿಸರ್ವ್‌ನಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವ ಶ್ರೇಣಿಯನ್ನು ಪಡೆದರು. ಜೂನ್ ೨೦೨೧ ರಲ್ಲಿ ಗೌರವ ಕರ್ನಲ್ ಆಗಿ ಬಡ್ತಿ ಪಡೆದರು.[೧೭]

ದಂಡಯಾತ್ರೆಗಳು

[ಬದಲಾಯಿಸಿ]

ಎವರೆಸ್ಟ್

[ಬದಲಾಯಿಸಿ]

೧೬ ಮೇ ೧೯೯೮ ರಂದು, ಗ್ರಿಲ್ಸ್ ನೇಪಾಳದ ಮೌಂಟ್ ಎವರೆಸ್ಟ್ ಶಿಖರವನ್ನು ಏರಿದರು.[೧೮] ೧೯೯೭ ರಲ್ಲಿ ಗ್ರಿಲ್ಸ್ ಅವರು ಅಮಾ ಡಬ್ಲಾಮ್ ಅನ್ನು ಏರಿದ ಅತ್ಯಂತ ಕಿರಿಯ ಬ್ರಿಟನ್ ವ್ಯಕ್ತಿಯಾಗಿದ್ದರು.

ಸುದೀರ್ಘ ಒಳಾಂಗಣ ಫ್ರೀಫಾಲ್

[ಬದಲಾಯಿಸಿ]

೨೦೦೮ ರಲ್ಲಿ ಗ್ರಿಲ್ಸ್ ಅವರು ಅಲ್ ಹೊಡ್ಗ್ಸನ್ ಮತ್ತು ಸ್ಕಾಟ್ಸ್‌ಮನ್ ಫ್ರೆಡ್ಡಿ ಮ್ಯಾಕ್‌ಡೊನಾಲ್ಡ್ ಜೊತೆಗೆ ಸುದೀರ್ಘ ನಿರಂತರ ಒಳಾಂಗಣ ಫ್ರೀಫಾಲ್‌ಗಾಗಿ ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸಿದರು.

ವಾಯುವ್ಯ ಮಾರ್ಗದ ದಂಡಯಾತ್ರೆ

[ಬದಲಾಯಿಸಿ]

ಸೆಪ್ಟೆಂಬರ್ ೨೦೧೦ ರಲ್ಲಿ, ಗ್ರಿಲ್ಸ್ ಐವರ ತಂಡವನ್ನು ನೇತೃತ್ವ ವಹಿಸಿ ಐಸ್ ಬ್ರೇಕಿಂಗ್ ರಿಜಿಡ್-ಇನ್ಫ್ಲೇಟಬಲ್ ಬೋಟ್ (ಆರ್‌ಐ‌ಬಿ) ಅನ್ನು ೫,೭೦೦ ನಾಟಿಕಲ್ ಮೈಲುಗಳಷ್ಟು (೦,೬೦೦ ಕಿಮೀ) ಹಿಮದಿಂದ ಆವೃತವಾದ ವಾಯುವ್ಯ ಮಾರ್ಗದ ಮೂಲಕ ತೆಗೆದುಕೊಂಡರು.

ವೃತ್ತಿ

[ಬದಲಾಯಿಸಿ]

ಪುಸ್ತಕಗಳು

[ಬದಲಾಯಿಸಿ]

ಗ್ರಿಲ್ಸ್ ಅವರ ಮೊದಲ ಪುಸ್ತಕ ಫೇಸಿಂಗ್ ಅಪ್ (ಯುಕೆ)/ದಿ ಕಿಡ್ ಹೂ ಕ್ಲೈಂಬಡ್ ಎವರೆಸ್ಟ್ (ಯುಎಸ್). ಈ ಪುಸ್ತಕದಲ್ಲಿ ಅವರ ದಂಡಯಾತ್ರೆ ಮತ್ತು ಮೌಂಟ್ ಎವರೆಸ್ಟ್ ಶಿಖರವನ್ನು ಏರುವ ಸಾಧನೆಗಳನ್ನು ವಿವರಿಸಲಾಗಿದೆ. ಫೇಸಿಂಗ್ ದಿ ಪ್ರೊಝನ್ ಒಷಿಯನ್ ಇದು ಗ್ರಿಲ್ಸ್ ಅವರ ಎರಡನೇಯ ಪುಸ್ತಕ. ಬಾರ್ನ್ ಸರ್ವೈವರ್ ಅವರ ಮೂರನೆಯ ಪುಸ್ತಕ.[೧೯]

೨೦೧೧ ರಲ್ಲಿ ಗ್ರಿಲ್ಸ್ ಅವರ ಆತ್ಮಚರಿತ್ರೆ, ಮಡ್, ಸ್ವೆಟ್ ಅಂಡ್ ಟಿಯರ್ಸ್: ದಿ ಆಟೋಬಯೋಗ್ರಫಿ ಅನ್ನು ಬಿಡುಗಡೆ ಮಾಡಿದರು.[೨೦]

ಮಿಷನ್ ಸರ್ವೈವಲ್: ಗೋಲ್ಡ್ ಆಫ್ ದಿ ಗಾಡ್ಸ್, ಮಿಷನ್ ಸರ್ವೈವಲ್: ವೇ ಆಫ್ ದಿ ವುಲ್ಫ್, ಮಿಷನ್ ಸರ್ವೈವಲ್: ಸ್ಯಾಂಡ್ಸ್ ಆಫ್ ದಿ ಸ್ಕಾರ್ಪಿಯನ್, ಮಿಷನ್ ಸರ್ವೈವಲ್: ಟ್ರ್ಯಾಕ್ಸ್ ಆಫ್ ದಿ ಟೈಗರ್ ಮತ್ತು ಮಿಷನ್ ಸರ್ವೈವಲ್: ಕ್ಲಾಸ್ ಕ್ರೊಕೊಡೆಲ್ ಎಂಬ ಮಕ್ಕಳ ಸಾಹಸ ಸರ್ವೈವಲ್‌ಯಾದ ಮಿಷನ್ ಸರ್ವೈವಲ್ ಸರಣಿ ಪುಸ್ತಕಗಳನ್ನು ಬರೆದರು.

೨೦೧೯ ರಲ್ಲಿ ಗ್ರಿಲ್ಸ್ ಸೋಲ್ ಫ್ಯೂಲ್ ಎಂಬ ಕ್ರಿಶ್ಚಿಯನ್ ಭಕ್ತಿಗೀತೆಯನ್ನು ಪ್ರಕಟಿಸಿದರು.[೨೧]

ಅಕ್ಟೋಬರ್ ೨೦೨೧ ರಲ್ಲಿ ಗ್ರಿಲ್ಸ್ ಅವರು ನೆವರ್ ಗಿವ್ ಅಪ್ ಎಂಬ ಎರಡನೇ ಆತ್ಮಚರಿತ್ರೆಯನ್ನು ಬಿಡುಗಡೆ ಮಾಡಿದರು.[೨೨]

ಏಪ್ರಿಲ್ ೨೦೨೩ ರಲ್ಲಿ ಗ್ರಿಲ್ಸ್ ಅವರು ಯು Vs ದಿ ವರ್ಲ್ಡ್: ದಿ ಬೇರ್ ಗ್ರಿಲ್ಸ್ ಗೈಡ್ ಟು ನೆವರ್ ಗಿವಿಂಗ್ ಅಪ್ ಅನ್ನು ಬಿಡುಗಡೆ ಮಾಡಿದರು.[೨೩]

ಸೆಪ್ಟೆಂಬರ್ ೨೦೨೩ ರಲ್ಲಿ ಗ್ರಿಲ್ಸ್ ಅವರು ಹೌ ಟು ಬಿ ಎ ಸ್ಕೌಟ್ ಅನ್ನು ಬಿಡುಗಡೆ ಮಾಡಿದರು.[೨೪]

ದೂರದರ್ಶನ

[ಬದಲಾಯಿಸಿ]

೨೦೦೯ ರ ಜನವರಿಯಿಂದ ಯು.ಎಸ್‌ನಲ್ಲಿ ಪ್ರಸಾರವಾದ ಪೋಸ್ಟ್‌ನ ಟ್ರಯಲ್ ಮಿಕ್ಸ್ ಕ್ರಂಚ್ ಸೀರಿಯಲ್‌ಗಾಗಿ ಗ್ರಿಲ್ಸ್ ಎರಡು ಜಾಹೀರಾತುಗಳನ್ನು ರೆಕಾರ್ಡ್ ಮಾಡಿದರು. ೨೦೧೩ ರಲ್ಲಿ ಗ್ರಿಲ್ಸ್ ಅವರು ಏರ್ ನ್ಯೂಜಿಲೆಂಡ್‌ಗಾಗಿ ಏರ್‌ಲೈನ್ ಸುರಕ್ಷತಾ ವೀಡಿಯೊದಲ್ಲಿ ಕಾಣಿಸಿಕೊಂಡರು. ೨೦೧೪ ರಲ್ಲಿ ಪಿಯರ್ಸ್ ಮೋರ್ಗಾನ್ ಅವರ ಜೀವನ ಕಥೆಗಳಲ್ಲಿ ಗ್ರಿಲ್ಸ್ ಅವರು ಕಾಣಿಸಿಕೊಂಡರು.

ಲೀಜನ್ ಎಸ್ಕೇಪ್

[ಬದಲಾಯಿಸಿ]

ಗ್ರಿಲ್ಸ್ ಅವರು ೨೦೦೫ ರಲ್ಲಿ ಎಸ್ಕೇಪ್ ಟು ದಿ ಲೀಜನ್ ಎಂಬ ಟಿವಿ ಕಾರ್ಯಕ್ರಮವನ್ನು ಚಿತ್ರೀಕರಿಸಿದರು. ಈ ಕಾರ್ಯಕ್ರಮವನ್ನು ಮೊದಲು ಯುಕೆಯಲ್ಲಿ ಚಾನೆಲ್ ೪ ಮತ್ತು ಯುಎಸ್‌ನಲ್ಲಿ ಮಿಲಿಟರಿ ಚಾನೆಲ್‌ನಲ್ಲಿ ಪ್ರಸಾರ ಮಾಡಲಾಯಿತು.

ಬಾರ್ನ್ ಸರ್ವೈವರ್/ಮ್ಯಾನ್ ವರ್ಸಸ್ ವೈಲ್ಡ್

[ಬದಲಾಯಿಸಿ]

ಗ್ರಿಲ್ಸ್ ಅವರು ಬ್ರಿಟಿಷ್ ಚಾನೆಲ್ ೪ ಗಾಗಿ ಬಾರ್ನ್ ಸರ್ವೈವರ್ ಎಂಬ ಶೀರ್ಷಿಕೆಯ ಸರಣಿಯನ್ನು ಆಯೋಜಿಸುತ್ತಾರೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಕೆನಡಾ, ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮ್ಯಾನ್ ವರ್ಸಸ್ ವೈಲ್ಡ್ ಎಂಬ ಹೆಸರಿನಲ್ಲಿ ಪ್ರಸಾರ ಮಾಡುತ್ತಾರೆ. ಯುರೋಪ್, ಏಷ್ಯಾದಲ್ಲಿ ಡಿಸ್ಕವರಿ ಚಾನೆಲ್‌ನಲ್ಲಿ ಅಲ್ಟಿಮೇಟ್ ಸರ್ವೈವಲ್ ಎಂಬ ಹೆಸರಿನಲ್ಲಿ ಪ್ರಸಾರ ಮಾಡಿದರು. ೨೦೦೬ ರಲ್ಲಿ ಮ್ಯಾನ್ ವರ್ಸಸ್ ವೈಲ್ಡ್ ಅನ್ನು ಪ್ರಾರಂಭಿಸಲಾಯಿತು.

ಬೇರ್ಸ್ ವೈಲ್ಡ್ ವೀಕೆಂಡ್

[ಬದಲಾಯಿಸಿ]

೨೦೧೧ ರ ಕ್ರಿಸ್ಮಸ್ ರಜಾದಿನಗಳಲ್ಲಿ ಗ್ರಿಲ್ಸ್ ಅವರು ಯುಕೆಯಲ್ಲಿ ಚಾನೆಲ್ ೪ನಲ್ಲಿ ಬೇರ್ಸ್ ವೈಲ್ಡ್ ವೀಕೆಂಡ್ ಎಂಬ ಶೀರ್ಷಿಕೆಯಡಿಯಲ್ಲಿ ಎರಡು ವಿಶೇಷ ಸಂಚಿಕೆಯನ್ನು ಪ್ರಸಾರ ಮಾಡಿದರು.

ಗೆಟ್ ಔಟ್ ಅಲೈವ್

[ಬದಲಾಯಿಸಿ]

ಗೆಟ್ ಔಟ್ ಅಲೈವ್ ನ್ಯೂಜಿಲೆಂಡ್‌ನಲ್ಲಿ ಚಿತ್ರೀಕರಿಸಲಾದ ರಿಯಾಲಿಟಿ ಸ್ಪರ್ಧೆಯ ಸರಣಿಯಾಗಿದೆ. ಇದು ೮ ಜುಲೈ ೨೦೧೩ ರಂದು ಎನ್‌ಬಿಸಿಯಲ್ಲಿ ಪ್ರಥಮ ಪ್ರದರ್ಶನಗೊಂಡಿತು.

ದಿ ಐಲ್ಯಾಂಡ್

[ಬದಲಾಯಿಸಿ]

೫ ಮೇ ೨೦೧೪ ರಂದು ದಿ ಐಲ್ಯಾಂಡ್ ಅನ್ನು ಮೊದಲು ಚಾನೆಲ್ ೪ ನಲ್ಲಿ ಪ್ರದರ್ಶಿಸಲಾಯಿತು. ಇದು ೨೫ ಮೇ ೨೦೧೫ ರಂದು ಎನ್‌ಬಿಸಿಯಲ್ಲಿ ಪ್ರಥಮ ಪ್ರದರ್ಶನಗೊಂಡಿತು. ಅಮೇರಿಕನ್ ಆವೃತ್ತಿಯನ್ನು ಸಹ ಮಾಡಲಾಯಿತು. ಇದನ್ನು ೨೫ ಮೇ ೨೦೨೫ ರಂದು ಎನ್‌ಬಿಸಿಯಲ್ಲಿ ಪ್ರಥಮ ಪ್ರದರ್ಶನಗೊಂಡಿತು.

ಬೇರ್ ಗ್ರಿಲ್ಸ್ ಸರ್ವೈವಲ್ ಸ್ಕೂಲ್

[ಬದಲಾಯಿಸಿ]

೨೦೧೬ ರಲ್ಲಿ ಗ್ರಿಲ್ಸ್ ಅವರು ಬೇರ್ ಗ್ರಿಲ್ಸ್ ಸರ್ವೈವಲ್ ಸ್ಕೂಲ್ ಎಂಬ ಸಿಐಟಿವಿ ಸರಣಿಯನ್ನು ಪ್ರಸ್ತುತಪಡಿಸಿದರು. ೨೦೧೫ ಆಗಸ್ಟ್‌ರಲ್ಲಿ ಚಿತ್ರೀಕರಣವು ಪ್ರಾರಂಭವಾಯಿತು. ಸರಣಿಯು ೧೦ ಜನವರಿ ೨೦೧೬ ರಂದು ಪ್ರಸಾರವಾಯಿತು. ಎರಡನೇ ಸರಣಿಯು ೭ ಜನವರಿ ೨೦೧೭ ರಂದು ಪ್ರಾರಂಭವಾಯಿತು.

ಸ್ಕೌಟಿಂಗ್‌ ಹುದ್ದೆಗಳು

[ಬದಲಾಯಿಸಿ]

ವಿಶ್ವ ಸ್ಕೌಟಿಂಗ್‌ನ ಮುಖ್ಯ ರಾಯಭಾರಿ ಹುದ್ದೆ

[ಬದಲಾಯಿಸಿ]

೧೬ ನವೆಂಬರ್ ೨೦೧೮ ರಂದು ಸ್ಕೌಟ್ ಚಳುವಳಿಯ ವಿಶ್ವ ಸಂಸ್ಥೆಯು ತನ್ನ ಮೊದಲ ಮುಖ್ಯ ರಾಯಭಾರಿಯಾಗಿ ಬೇರ್ ಗ್ರಿಲ್ಸ್ ಅವರನ್ನು ನೇಮಕ ಮಾಡಿತು. ೨೪ ನೇ ವಿಶ್ವ ಸ್ಕೌಟ್ ಜಾಂಬೋರಿಯಲ್ಲಿ ರಾಯಭಾರಿಯಾಗಿದ್ದರು.

ಸ್ಕೌಟ್ ಸಂಘದ ಮುಖ್ಯ ಸ್ಕೌಟ್

[ಬದಲಾಯಿಸಿ]

೧೭ ಮೇ ೨೦೦೯ ರಂದು ಸ್ಕೌಟ್ ಅಸೋಸಿಯೇಷನ್ ​​ಜುಲೈ ೨೦೦೯ ರಲ್ಲಿ ಪೀಟರ್ ಡಂಕನ್ ಅವರ ಐದು ವರ್ಷಗಳ ಅವಧಿಯ ಅಂತ್ಯದ ನಂತರ ಗ್ರಿಲ್ಸ್ ಅವರನ್ನು ಮುಖ್ಯ ಸ್ಕೌಟ್ ಆಗಿ ನೇಮಿಸಿದರು.

ಯುನೈಟೆಡ್ ೨೪ರಲ್ಲಿ ರಾಯಭಾರಿ

[ಬದಲಾಯಿಸಿ]

೨೯ ಮಾರ್ಚ್ ೨೦೨೩ ರಂದು ಬೇರ್ ಗ್ರಿಲ್ಸ್ ಯುನೈಟೆಡ್ ೨೪ ಪ್ಲಾಟ್‌ಫಾರ್ಮ್‌ಗೆ ರಾಯಭಾರಿಯಾಗಿದ್ದರು.

ಉಲ್ಲೇಖಗಳು

[ಬದಲಾಯಿಸಿ]
  1. Bain, Mark (23 ಮೇ 2023). "NI-born Bear Grylls to learn family history on BBC show: 'I'm doing it for my mum'". Archived from the original on 23 ಮೇ 2023. Retrieved 28 ಜೂನ್ 2023.
  2. Tiwari, Anuj (6 ಜೂನ್ 2023). "7 June What Happened On This Day In History". IndiaTimes (in Indian English). Archived from the original on 15 ಜೂನ್ 2023. Retrieved 28 ಜೂನ್ 2023.
  3. "Obituary: Sir Michael Grylls" Archived 25 May 2018 ವೇಬ್ಯಾಕ್ ಮೆಷಿನ್ ನಲ್ಲಿ., Telegraph.co.uk, 13 February 2001.
  4. Dudman, Jane (12 ಜನವರಿ 2011). "Leading questions: Bear Grylls, chief Scout". The Guardian. London. Archived from the original on 6 ಜನವರಿ 2017. Retrieved 14 ಡಿಸೆಂಬರ್ 2016.
  5. "Sunday Life reclaims the celebs with Ulster ties". 1 ನವೆಂಬರ್ 2009. Archived from the original on 17 ಜುಲೈ 2010. Retrieved 31 ಆಗಸ್ಟ್ 2010.
  6. "My Life In Travel: Bear Grylls", Independent.co.uk, 17 April 2004.
  7. Snape, Joel (13 ಮೇ 2015). "Bear Grylls: 'I'm 40, and fitter than I've ever been'". Daily Telegraph (in ಬ್ರಿಟಿಷ್ ಇಂಗ್ಲಿಷ್). ISSN 0307-1235. Archived from the original on 11 ಜನವರಿ 2022. Retrieved 25 ಮೇ 2018.
  8. "Out of the Wild: Bear Grylls survives the urban jungle". mensvogue.com. Archived from the original on 16 ಮಾರ್ಚ್ 2008. Retrieved 14 ಜುಲೈ 2008.
  9. Bear Grylls Welcomes Son Huckleberry Archived 17 February 2010 ವೇಬ್ಯಾಕ್ ಮೆಷಿನ್ ನಲ್ಲಿ. Celebrity Baby Blog, 15 January 2009
  10. "Biography". BearGrylls.com. Archived from the original on 13 ಜುಲೈ 2018. Retrieved 7 ಫೆಬ್ರವರಿ 2012.
  11. Kate Mikhail (11 ನವೆಂಬರ್ 2001). "Life support". Guardian. London. Archived from the original on 23 ಅಕ್ಟೋಬರ್ 2013. Retrieved 17 ಅಕ್ಟೋಬರ್ 2012.
  12. Tianna Graham (7 ಜುಲೈ 2016). "Did you know these celebrities studied in Bristol?". The University Paper. London. Archived from the original on 27 ಆಗಸ್ಟ್ 2017. Retrieved 27 ಆಗಸ್ಟ್ 2017.
  13. "History of Birkbeck: 1900s". Birkbeck. Archived from the original on 15 ಜೂನ್ 2011. Retrieved 3 ಡಿಸೆಂಬರ್ 2007.
  14. "Notable alumni". Birkbeck. Archived from the original on 2 ಸೆಪ್ಟೆಂಬರ್ 2014. Retrieved 3 ಡಿಸೆಂಬರ್ 2007.
  15. Peston, Robert and Lynda La Plante (7 ಮೇ 2013). "You may have a first-class degree – but Lord Winston doesn't want you". The Daily Telegraph. London. Archived from the original on 11 ಜನವರಿ 2022.
  16. "Bear Grylls (Edward Michael Grylls): A lifetime of adventure" (PDF). The Scout Association. Archived from the original (PDF) on 6 ಜುಲೈ 2016. Retrieved 21 ಜುಲೈ 2013.
  17. "Royals' Bear Force as Adventurer Joins Cadets at Lympstone and Dartmouth". News & Events. 14 ನವೆಂಬರ್ 2013. Archived from the original on 15 ಏಪ್ರಿಲ್ 2014. Retrieved 17 ನವೆಂಬರ್ 2013.
  18. https://www.telegraph.co.uk/news/1426523/A-Boys-Own-adventure.html
  19. Grylls, Bear (2008). Bear Grylls great outdoor adventures. London: Channel 4 Books. ISBN 978-1905026524.
  20. Mud, sweat, and tears: the autobiograph. New York: William Morrow. 2012. p. 408. ISBN 978-0-06-212419-7.
  21. Soul Fuel. Grand Rapids, MI: Zondervan. 2019. ISBN 9780310453642.
  22. Never Give Up. London. 2021. ISBN 978-1787634190.{{cite book}}: CS1 maint: location missing publisher (link)
  23. You Vs the World: The Bear Grylls Guide to Never Giving Up.
  24. Do Your Best: How to be a Scout. ASIN 1399809873.