ಬೆನ್ ಸ್ಟೋಕ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೆನ್ ಸ್ಟೋಕ್ಸ್
೨೦೧೪ರಲ್ಲಿ ಸ್ಟೋಕ್ಸ್
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
ಬೆಂಜಮಿನ್ ಆಂಡ್ರೀವ್ ಸ್ಟೋಕ್ಸ್
ಜನನ (1991-06-04) ೪ ಜೂನ್ ೧೯೯೧ (ವಯಸ್ಸು ೩೨)
ಕ್ರೈಸ್ಟ್‌ಚರ್ಚ್‌, ನ್ಯೂಜಿಲೆಂಡ್
ಎತ್ತರ6 ft 0 in (1.83 m)
ಬ್ಯಾಟಿಂಗ್ಎಡಗೈ
ಚೆಂಡೆಸೆತಬಲಗೈ ವೇಗದ-ಮಧ್ಯಮ ವೇಗದ
ಪಾತ್ರಆಲ್ರೌಂಡರ್
ಅಂತರರಾಷ್ಟ್ರೀಯ ಮಾಹಿತಿ
ದೇಶ
ಪ್ರಥಮ ಟೆಸ್ಟ್5 ಡಿಸೆಂಬರ್ 2013 v [[ಆಸ್ಟ್ರೇಲಿಯಾ national cricket team|ಆಸ್ಟ್ರೇಲಿಯಾ]]
ಕೊನೆಯ ಟೆಸ್ಟ್9 ಫೆಬ್ರವರಿ 2019 v [[ವೆಸ್ಟ್ ಇಂಡೀಸ್ national cricket team|ವೆಸ್ಟ್ ಇಂಡೀಸ್]]
ಪ್ರಥಮ ಒಡಿಐ25 ಅಗಸ್ಟ್ 2011 v [[ಐರ್ಲೆಂಡ್ national cricket team|ಐರ್ಲೆಂಡ್]]
ಕೊನೆಯ ಒಡಿಐ14 ಜುಲೈ 2019 v [[ನ್ಯೂಜಿಲೆಂಡ್ national cricket team|ನ್ಯೂಜಿಲೆಂಡ್]]
ಒಡಿಐ ಅಂಗಿ ಸಂ.55
ಪ್ರಥಮ ಅಂ.ರಾ. ಟಿ೨೦23 ಸೆಪ್ಟೆಂಬರ್ 2011 v [[ವೆಸ್ಟ್ ಇಂಡೀಸ್ national cricket team|ವೆಸ್ಟ್ ಇಂಡೀಸ್]]
ಕೊನೆಯ ಅಂ.ರಾ. ಟಿ2027 ಅಕ್ಟೋಬರ್ 2018 v [[ಶ್ರೀಲಂಕಾ national cricket team|ಶ್ರೀಲಂಕಾ]]
ಅಂ.ರಾ. ಟಿ೨೦ ಅಂಗಿ ಸಂ.55 (59 ಆಗಿತ್ತು)
Career statistics
Competition ಟೆಸ್ಟ್ ಕ್ರಿಕೆಟ್ ಏಕದಿನ ಪಂದ್ಯಾಟ ಪ್ರಥಮ ದರ್ಜೆ ಕ್ರಿಕೆಟ್ ಲಿಸ್ಟ್ ಎ ಕ್ರಿಕೆಟ್
Matches 52 95 127 16
Runs scored 3,152 2,682 6,942 4,583
Batting average 33.89 40.63 33.86 37.87
100s/50s 6/17 3/20 14/36 7/27
Top score 258 102* 258 164
Balls bowled 7,328 2,912 15,101 4,587
Wickets 127 70 296 134
Bowling average 31.92 41.71 29.45 32.88
5 wickets in innings 4 1 7 1
10 wickets in match 0 0 1 0
Best bowling 6/22 5/61 7/67 5/61
Catches/stumpings 55/– 45/– 96/– 76/–
Source: ಇ ಎಸ್ ಪಿ ಎನ್, 15 ಜುಲೈ 2019

ಬೆಂಜಮಿನ್ ಆಂಡ್ರ್ಯೂ ಸ್ಟೋಕ್ಸ್ ಒಬ್ಬ ಅಂತರರಾಷ್ಟ್ರೀಯ ಕ್ರಿಕೆಟಿಗ ಮತ್ತು ಇಂಗ್ಲೆಂಡ್ ಟೆಸ್ಟ್ ತಂಡದ ಮಾಜಿ ಉಪನಾಯಕ. ಸ್ಟೋಕ್ಸ್ ೨೦೧೯ ಕ್ರಿಕೆಟ್ ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡದ ಭಾಗವಾಗಿದ್ದರು.[೧]

ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್‌ನಲ್ಲಿ ಜನಿಸಿದ ಸ್ಟೋಕ್ಸ್, ೧೨ನೇ ವಯಸ್ಸಿನಲ್ಲಿ ಉತ್ತರ ಇಂಗ್ಲೆಂಡ್‌ಗೆ ತೆರಳಿದರು.[೨] ಅಲ್ಲಿ ಅವರು ಕ್ರಿಕೆಟ್ ಆಟವನ್ನು ಕಲಿತರು ಮತ್ತು ಸ್ಥಳೀಯ ತಂಡಗಳಿಗೆ ಕ್ಲಬ್ ಕ್ರಿಕೆಟ್ ಆಡಲು ಪ್ರಾರಂಭಿಸಿದರು. ಅವರು ಆಲ್-ರೌಂಡರ್ ಆಗಿದ್ದು, ಅವರು ಬಲಗೈ ವೇಗದ ಮತ್ತು ಮಧ್ಯಮ ವೇಗವನ್ನು ಬೌಲ್ ಮಾಡುತ್ತಾರೆ ಮತ್ತು ಎಡಗೈ ದಾಂಡಿಗರಾಗಿದ್ದಾರೆ.

ಆಕ್ರಮಣಕಾರಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಅಗಿರುವ ಇವರು, ಇಂಗ್ಲೆಂಡ್‌ ಪರ ಟೆಸ್ಟ್ ಕ್ರಿಕೆಟ್ಟ್ ನಲ್ಲಿ ಅತೀ ವೇಗದ ಡಬಲ್ ಸೆಂಚುರಿ,[೩] ಟೆಸ್ಟ್ ಪಂದ್ಯದ ವೇಗದ 250 ಹೊಡೆದ ದಾಖಲೆಯನ್ನು ಹೊಂದಿದ್ದಾರೆ ಮತ್ತು ಟೆಸ್ಟ್ ಪಂದ್ಯದಲ್ಲಿ ಸಾಮಾನ್ಯವಾಗಿ ಆರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಇಳಿಯುತ್ತಾರೆ. ಟೆಸ್ಟ್ ಪಂದ್ಯದ ಬೆಳಗಿನ ಅವಧಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಅವರು ಹೊಂದಿದ್ದಾರೆ. ಸ್ಟೋಕ್ಸ್ ೨೦೧೭ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ವಿದೇಶಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.[೪] ಆ ಋತುವಿನಲ್ಲಿ ಅವರು ಅತ್ಯಂತ ಮೌಲ್ಯಯುತ ಆಟಗಾರ ಪ್ರಶಸ್ತಿಯನ್ನು ಗೆದ್ದರು.

ಆರಂಭಿಕ ಜೀವನ[ಬದಲಾಯಿಸಿ]

ಸ್ಟೋಕ್ಸ್ ಒಬ್ಬ ರಗ್ಬಿ ಆಟಗಾರ ಮತ್ತು ತರಬೇತುದಾರರಾದ ಗೆರಾರ್ಡ್ ಸ್ಟೋಕ್ಸ್ ಅವರ ಪುತ್ರ. ಅವರ ತಂದೆ ವರ್ಕಿಂಗ್ಟನ್ ಟೌನ್ ನ ರಗ್ಬಿ ಲೀಗ್ ಕ್ಲಬ್‌ನ ಮುಖ್ಯ ತರಬೇತುದಾರರಾಗಿ ನೇಮಕಗೊಂಡ ಕಾರಣ ಅವರು ಚಿಕ್ಕ ವಯಸ್ಸಿನಲ್ಲಿಯೇ ಇಂಗ್ಲೆಂಡ್‌ಗೆ ತೆರಳಿದರು ಮತ್ತು ಕಾಕರ್‌ಮೌತ್‌ ನ ಸಣ್ಣ ಪಶ್ಚಿಮ ಕುಂಬ್ರಿಯನ್ ಪಟ್ಟಣದಲ್ಲಿ ಕಾಕರ್‌ಮೌತ್ ಕ್ರಿಕೆಟ್ ಕ್ಲಬ್‌ಗಾಗಿ ಕ್ರಿಕೆಟ್ ಆಡುತ್ತಾ ಬೆಳೆದರು; ೨೦೧೩ರಲ್ಲಿ ಅವರ ಪೋಷಕರು ನ್ಯೂಜಿಲೆಂಡ್‌ ನ ಕ್ರೈಸ್ಟ್‌ಚರ್ಚ್‌ಗೆ ಮರಳಿದರು.[೫]

ದೇಶೀಯ ಕ್ರಿಕೆಟ್ ವೃತ್ತಿಜೀವನ[ಬದಲಾಯಿಸಿ]

ಸ್ಟೋಕ್ಸ್ ೨೦೦೯ರಲ್ಲಿ ದಿ ಓವಲ್‌ಮೈದಾನದಲ್ಲಿ ಡರ್ಹಾಮ್‌ ತಂಡದ ಪರ ಏಕದಿನ ಪಂದ್ಯಾಟಕ್ಕೆ ಪ್ರವೇಶ ಮಾಡಿದರು.[೬] ಬಳಿಕ ಅವರು ೨೦೦೯ರಲ್ಲಿ ಬಾಂಗ್ಲಾದೇಶ U-19 ವಿರುದ್ಧ ಎರಡು ಟೆಸ್ಟ್ ಪಂದ್ಯದಲ್ಲಿ ಆಡಿದರು. ಇದರಲ್ಲಿ ಅವರು ಒಂದು ಅರ್ಧಶತಕ ಮತ್ತು ಕೆಲವು ವಿಕೆಟ್‌ಗಳನ್ನು ಪಡೆದರು. ನಂತರ ಅವರು ೨೦೧೦ರ U-19 ವಿಶ್ವಕಪ್‌ನಲ್ಲಿ ಆಡಿದರು. ಈ ಪಂದ್ಯಾವಳಿಯಲ್ಲಿ ಅವರು ಭಾರತ ತಂಡದ ವಿರುದ್ಧ ಶತಕ ಗಳಿಸಿದರು.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತ್ಯಂತ ಯಶಸ್ವಿ ಚೊಚ್ಚಲ ಋತುವನ್ನು ಹೊಂದಿದ್ದ ಅವರಿಗೆ ಇಂಗ್ಲೆಂಡ್ ಪ್ರದರ್ಶನ ಪಂದ್ಯಾವಳಿಯಲ್ಲಿ ಸ್ಥಾನ ನೀಡಲಾಯಿತು ಮತ್ತು ೨೦೧೦-೧೧ರ ಆಶಸ್ ಸರಣಿಯಲ್ಲಿ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಿದರು.[೭]

೨ ಜನವರಿ ೨೦೧೫ರಂದು, ಸ್ಟೋಕ್ಸ್ ಅವರು ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್‌ನ ಮೆಲ್ಬೋರ್ನ್ ರೆನೆಗೇಡ್ಸ್ ಗೆ ಬದಲಿ ಆಟಗಾರರಾಗಿ ಸೇರಿದರು.

೧೩ ಫೆಬ್ರವರಿ ೨೦೧೭ರಂದು, ಸ್ಟೋಕ್ಸ್ ಅವರನ್ನು ಇಂಗ್ಲೆಂಡ್‌ ಟೆಸ್ಟ್ ತಂಡದ ಉಪನಾಯಕನನ್ನಾಗಿ ನೇಮಿಸಲಾಯಿತು.[೮]

೨೦ ಫೆಬ್ರವರಿ ೨೦೧೭ರಂದು, ಸ್ಟೋಕ್ಸ್ ಅವರನ್ನು ಐಪಿಎಲ್‌ನಲ್ಲಿ ರೈಸಿಂಗ್ ಪುಣೆ ಸೂಪರ್‌ಜಯಂಟ್ಸ್ ₹೧೪.೫ ಕೋಟಿಗೆ ಖರೀದಿಸಲಾಯಿತು.

೨೭ ಜನವರಿ ೨೦೧೮ರಂದು ಅವರನ್ನು ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ₹೧೨.೫ ಕೋಟಿಗಳಿಗೆ (£ 1.7 ಮಿ) ಖರೀದಿಸಿತು. ಅವರು 2018ರ ಐಪಿಎಲ್ ಹರಾಜಿನಲ್ಲಿ ಅತ್ಯಂತ ದುಬಾರಿ ಆಟಗಾರರಾಗಿದ್ದರು.

ಅಂತರಾ‍‍‍‍‌ಷ್ಟ್ರೀಯ ಕ್ರಿಕೆಟ್ ಜೀವನ[ಬದಲಾಯಿಸಿ]

  • ಆಗಸ್ಟ್ ೨೦೧೧ರಲ್ಲಿ ಐರ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಸ್ಟೋಕ್ಸ್ ಇಂಗ್ಲೆಂಡ್‌ ಪರ ಅಂತರಾ‍‍‍‍‌ಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು.[೯]
  • ಗಾಯಗಳು, ಸ್ಥಿರತೆಯ ಕೊರತೆ ಮತ್ತು ಶಿಸ್ತಿನ ಸಮಸ್ಯೆಗಳಿಂದಾಗಿ ಸ್ಟೋಕ್ಸ್ ೨೦೧೨ರಲ್ಲಿ ಇಂಗ್ಲೆಂಡ್ ಪರ ಆಡಲಿಲ್ಲ.
  • ಆಸ್ಟ್ರೇಲಿಯಾ ವಿರುದ್ಧದ ೨೦೧೩-೧೪ರ ಆಶಸ್ ಸರಣಿಗೆ ಇಂಗ್ಲೆಂಡ್ ತಂಡಕ್ಕೆ ಸ್ಟೋಕ್ಸ್ ಆಯ್ಕೆಯಾದರು. ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದ ೬೫೮ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
  • ೨೦೧೬ರ ಟಿ-20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಸ್ಟೋಕ್ಸ್ ದುಬಾರಿಯಾಗಿದ್ದಲ್ಲದೆ, ಫೈನಲ್ ಪಂದ್ಯದಲ್ಲೂ ಇಂಗ್ಲೆಂಡ್ ಸೋಲಿಗೆ ಹೊಣೆಯಾದರು. ವೆಸ್ಟ್ ಇಂಡೀಸ್ ವಿರುದ್ಧದ ಫೈನಲ್ ಪಂದ್ಯದ ಅಂತಿಮ ಓವರ್ ಅನ್ನು ಸ್ಟೋಕ್ಸ್ ಬೌಲ್ ಮಾಡಿದರು. ಆ ಪಂದ್ಯದಲ್ಲಿ, ವೆಸ್ಟ್ ಇಂಡೀಸ್‌ಗೆ ಅಂತಿಮ ಓವರ್‌ನಲ್ಲಿ 19 ರನ್‌ಗಳ ಅಗತ್ಯವಿತ್ತು. ಇಂಗ್ಲೆಂಡ್ ಗೆಲುವಿಗೆ ಬಹಳ ಹತ್ತಿರದಲ್ಲಿತ್ತು. ಆದರೆ ವೆಸ್ಟ್ ಇಂಡೀಸ್ ನ ಕೆಳ ಕ್ರಮಾಂಕದ ಆಲ್ರೌಂಡರ್ ಕಾರ್ಲೋಸ್ ಬ್ರಾಥ್‌ವೈಟ್ ಹೊಡೆದ ಸತತ ನಾಲ್ಕು ಸಿಕ್ಸರ್‌ಗಳಿಂದ ಇಂಗ್ಲೆಂಡ್ ಪಂದ್ಯವನ್ನು ಸೋತಿತು. ಪಂದ್ಯದಲ್ಲಿ ಸೋತ ಇಂಗ್ಲೆಂಡ್, ರನ್ನರ್ಸ್ ಅಪ್ ಆಗಿ ವಿಶ್ವಕಪ್ ಮುಗಿಸಿದರು.
  • ೨೦೧೭ ಸ್ಟೋಕ್ಸ್ ಅವರ ಕ್ರಿಕೆಟ್ ಜೀವನದ ಅತ್ಯುತ್ತಮ ವರ್ಷವಾಗಿತ್ತು. ೨೦೧೭ರಲ್ಲಿ ಅವರ ಅತ್ಯುತ್ತಮ ಪ್ರದರ್ಶನಕ್ಕಾಗಿ, ಅವರನ್ನು ವಿಶ್ವ ಟೆಸ್ಟ್ ಇಲೆವೆನ್ ಮತ್ತು ಏಕದಿನ ಇಲೆವೆನ್ ಎರಡರಲ್ಲೂ ಐಸಿಸಿ ಹೆಸರಿಸಿದೆ. ೨೦೧೮ರ ಐಸಿಸಿ ವಿಶ್ವ ಏಕದಿನ ಇಲೆವೆನ್‌ನಲ್ಲಿ ಅವರನ್ನು ಹೆಸರಿಸಿದೆ. ೨೦೧೭ರ espn cricinfo ಏಕದಿನ ಇಲೆವೆನ್‌ನಲ್ಲಿ ಮತ್ತು cricbuzzನ ಟೆಸ್ಟ್ ಇಲೆವೆನ್ ಮತ್ತು ಒಡಿಐ ಇಲೆವೆನ್‌ನಲ್ಲಿ ಆಯ್ಕೆಯಾಗಿದ್ದಾರೆ.
  • ಏಪ್ರಿಲ್ ೨೦೧೯ರಲ್ಲಿ, ಕ್ರಿಕೆಟ್ ವಿಶ್ವಕಪ್ ಗಾಗಿ ಇಂಗ್ಲೆಂಡ್ ತಂಡದಲ್ಲಿ ಸ್ಟೋಕ್ಸ್ ಸ್ಥಾನ ಪಡೆದರು.
  • ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಅವರನ್ನು "ಮ್ಯಾನ್ ಆಫ್ ದಿ ಮ್ಯಾಚ್" ಎಂದು ಹೆಸರಿಸಲಾಯಿತು. ಅದಲ್ಲದೆ ಐಸಿಸಿ ೨೦೧೯ ರ ವಿಶ್ವಕಪ್‌ ನ "ಟೀಮ್ ಆಫ್ ದಿ ಟೂರ್ನಮೆಂಟ್" ನಲ್ಲಿ ಅವರನ್ನು ಹೆಸರಿಸಲಾಯಿತು.

ದಾಖಲೆಗಳು ಮತ್ತು ಸಾಧನೆಗಳು[ಬದಲಾಯಿಸಿ]

  • ೨೦೧೯ರ ಕ್ರಿಕೆಟ್ ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ "ಮ್ಯಾನ್ ಆಫ್ ದಿ ಮ್ಯಾಚ್"
  • ಎದುರಿಸಿದ ಚೆಂಡುಗಳ ವಿಷಯದಲ್ಲಿ ಎರಡನೇ ಅತಿ ವೇಗದ ಟೆಸ್ಟ್ ದ್ವಿಶತಕ.[೧೦]
  • ಟೆಸ್ಟ್ ಪಂದ್ಯಗಳಲ್ಲಿ ಅತಿ ವೇಗದ ೨೫೦. ಅವರು ೧೯೬ ಎಸೆತಗಳನ್ನು ಎದುರಿಸಿದರು.[೧೧][೧೨]
  • ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಎರಡನೇ ಅತಿ ಹೆಚ್ಚು ಸಿಕ್ಸರ್‌ಗಳು - ೧೧ ಸಿಕ್ಸರ್‌ಗಳು.
  • ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಆರನೇ ಹೆಚ್ಚಿನ ವೈಯಕ್ತಿಕ ರನ್ - ೨೫೮ ರನ್
  • ಟೆಸ್ಟ್‌ನಲ್ಲಿ ಒಂದು ದಿನದ ಮೊದಲ ಸೆಷನ್‌ನಲ್ಲಿ ಹೆಚ್ಚಿನ ರನ್ - ೧೩೦ ರನ್[೧೩]
  • ಆರನೇ ವಿಕೆಟ್‌ಗೆ ಗರಿಷ್ಠ ಟೆಸ್ಟ್ ಜೊತೆಯಾಟ. ದಕ್ಷಿಣ ಆಫ್ರಿಕಾ ವಿರುದ್ಧ ಜಾನಿ ಬೈರ್‌ಸ್ಟೋವ್‌ರೊಂದಿಗೆ ೩೯೯ ರನ್‌ಗಳ ಪಾಲುದಾರಿಕೆ ಮಾಡಿದಾಗ, ಈ ಸಾಧನೆ ಮಾಡಿದರು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ಬೆನ್ ಸ್ಟೋಕ್ಸ್

ಉಲ್ಲೇಖ[ಬದಲಾಯಿಸಿ]

  1. https://www.standard.co.uk/sport/cricket/england-cricket-world-cup-player-ratings-how-every-star-fared-on-the-road-to-glory-a4189706.html
  2. https://www.telegraph.co.uk/sport/cricket/international/england/10345278/England-all-rounder-Ben-Stokes-sees-star-rise-still-further-as-he-puts-Australia-shame-behind-him.html
  3. http://www.fastcricket.com/entry/1500/
  4. https://indianexpress.com/article/sports/cricket/ipl-2017-10/ben-stokes-becomes-the-most-valuable-player-in-tenth-edition-of-indian-premier-league-4668212/
  5. https://www.telegraph.co.uk/sport/cricket/international/england/10345278/England-all-rounder-Ben-Stokes-sees-star-rise-still-further-as-he-puts-Australia-shame-behind-him.html
  6. http://www.espncricinfo.com/countycricket2010/content/story/457967.html
  7. "ಆರ್ಕೈವ್ ನಕಲು". Archived from the original on 2015-09-23. Retrieved 2019-07-29.
  8. https://www.ecb.co.uk/news/332540
  9. http://news.bbc.co.uk/sport1/hi/cricket/14600842.stm
  10. http://stats.espncricinfo.com/ci/content/records/284135.html
  11. http://stats.espncricinfo.com/ci/engine/stats/index.html?class=1;filter=advanced;orderby=batting_strike_rate;runsmin1=250;runsval1=runs;template=results;type=batting;view=innings
  12. https://www.bbc.com/sport/cricket/35216886
  13. http://www.espncricinfo.com/south-africa-v-england-2015-16/content/story/957573.html