ಬಾ.ರಾ.ಗೋಪಾಲ
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |
ಬಾ.ರಾ.ಗೋಪಾಲ ಮತ್ತು ಡಾ. ಬಿ.ಆರ್.ಗೋಪಾಲ ಎಂದು ಪ್ರಾಚ್ಯ ಸಂಶೋಧನಾ ಕ್ಷೇತ್ರದಲ್ಲಿ ಪ್ರಸಿದ್ಧರಾಗಿದ್ದ ಬಾಲಕೃಷ್ಣನ್ ರಾಜಗೋಪಾಲ ಇವರು ೧೯೩೦ ಅಕ್ಟೋಬರ್ ೨೧ ರಂದು ಕೋಲಾರ ಜಿಲ್ಲೆಯ ಚಿಕ್ಕಬಳ್ಳಾಪುರ ದಲ್ಲಿ ಜನಿಸಿದರು. ಇವರ ತಂದೆ ವಿಧಾನಸಭೆಯ ಮಾಜಿ ಸದಸ್ಯರಾಗಿದ್ದ ಶ್ರೀ ಸಿ.ಕೆ.ಬಾಲಕೃಷ್ಣನ್.
ಶಿಕ್ಷಣ
[ಬದಲಾಯಿಸಿ]ಚಿಕ್ಕಬಳ್ಳಾಪುರ ದಲ್ಲಿ ತಮ್ಮ ಪ್ರಾಥಮಿಕ ಹಾಗು ಮಾಧಮಿಕ ಶಿಕ್ಷಣ ಪಡೆದ ಗೋಪಾಲರವರು ತುಮಕೂರು ಪಟ್ಟಣದಲ್ಲಿ ಇಂಟರ ಮೀಡಿಯೆಟ್ ಮುಗಿಸಿ, ಮೈಸೂರು ವಿಶ್ವವಿದ್ಯಾನಿಲಯ ದಿಂದ ಎಮ್.ಎ. ಹಾಗು ಪಿ.ಎಚ್.ಡಿ. ಪದವಿ ಪಡೆದರು.
ಉದ್ಯೋಗ ಜೀವನ
[ಬದಲಾಯಿಸಿ]ಗೋಪಾಲರವರು ಭಾರತೀಯ ಪುರಾತತ್ವ ಇಲಾಖೆಯ ಶಾಸನಶಾಸ್ತ್ರ ವಿಭಾಗ ದಲ್ಲಿ ತೆಲುಗು ಸಂಶೋಧನಾ ಸಹಾಯಕರಾಗಿ ೧೯೧೫ರಲ್ಲ್ಲಿತಮ್ಮ ವೃತ್ತಿಜೀವನ ಪ್ರಾರಂಭಿಸಿದರು.ಬಹು ಬೇಗನೆ ತೆಲುಗು ಮತ್ತು ಕನ್ನಡ ಶಾಸನಗಳ ಹೊಣೆಗಾರಿಕೆಯನ್ನು ಎತ್ತಿಕೊಂಡರು. ದಕ್ಷಿಣ ಭಾರತದಲ್ಲೆಲ್ಲ ಪ್ರವಾಸ ಮಾಡಿ ಅನೇಕ ಶಾಸನಗಳನ್ನು ಪತ್ತೆ ಮಾಡಿದ ಗೋಪಾಲರವರು ಅವುಗಳ ಅರ್ಥೈಸುವಿಕೆಯನ್ನು ಹಾಗು ಅವುಗಳ ಪ್ರಕಟಣೆಗಳನ್ನು ಆಯಾ ವಾರ್ಷಿಕ ಸಂಚಿಕೆಗಳಲ್ಲಿ ಮಾಡಿದ್ದಾರೆ. ೧೯೬೪ರ ವರೆಗೆ ಈ ಕಾರ್ಯದಲ್ಲಿ ನಿರತರಾದ ಗೋಪಾಲರವರು, ಅಲ್ಲಿಂದ ೧೯೭೨ರವರೆಗೆ ಧಾರವಾಡ ದ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಚೀನ ಭಾರತೀಯ ಇತಿಹಾಸ ಮತ್ತು ಶಾಸನ ವಿಜ್ಞಾನ ವಿಭಾಗ ದಲ್ಲಿ ಇತಿಹಾಸವನ್ನು ಬೋಧಿಸಿದರು.
೧೯೭೨ ರಿಂದ ೧೯೮೭ರವರೆಗೆ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ಯ ದಕ್ಷಿಣ ಭಾರತ ಅಧ್ಯಯನ ವಿಭಾಗದ ಎಪಿಗ್ರಾಫಿಯಾ ಕರ್ನಾಟಿಕಾ ದ ೮ ಸಂಪುಟಗಳನ್ನು ಪರಿಷ್ಕರಿಸಿ ಪ್ರಕಟಿಸಿದರು.
ಸಾಧನೆ
[ಬದಲಾಯಿಸಿ]ಡಾ. ಬಾ.ರಾ.ಗೋಪಾಲರು ಹದಿನೈದು ಶಾಸನ ಸಂಪುಟಗಳನ್ನು ಪ್ರಕಟಿಸಿದ್ದಾರೆ. ಇಂಗ್ಲಿಷದಲ್ಲಿ ೮ ಹಾಗು ಕನ್ನಡದಲ್ಲಿ ೧೭ ಗ್ರಂಥಗಳನ್ನು ಬರೆದಿದ್ದಾರೆ. ಇಂಗ್ಲಿಷದಲ್ಲಿ ೭ ಹಾಗು ಕನ್ನಡದಲ್ಲಿ ೧ ಗ್ರಂಥವನ್ನು ಸಂಪಾದಿಸಿದ್ದಾರೆ. ಇಂಗ್ಲಿಷದಲ್ಲಿ ಸುಮಾರು ೬೦ ಹಾಗು ಕನ್ನಡದಲ್ಲಿ ಸುಮಾರು ೭೮ ಲೇಖನಗಳನ್ನು ಬರೆದಿದ್ದಾರೆ.