ವಿಷಯಕ್ಕೆ ಹೋಗು

ಬಾಷ್ಪೀಕರಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಟೊಮ್ಯಾಟೊ ಎಲೆಯ ಹೊರತೊಗಟೆಯನ್ನು ಬಣ್ಣದ ಸ್ಕ್ಯಾನ್‌ನ ಮುಖಾಂತರ ಎಲೆಕ್ಟ್ರಾನ್‌ ಮೈಕ್ರೊಸ್ಕೋಪ್‌ನಲ್ಲಿ ತೋರಿಸಲಾಗಿದೆ.
ಅಮೆಜಾನ್ ಮಳೆಕಾಡಿನ ಈ ಚಿತ್ರದಲ್ಲಿಯ ಮೋಡವು ಭಾಷ್ಪಿಭವನ ಕ್ರಿಯೆಯಿಂದಾಗಿ ಉಂಟಾದುದಾಗಿದೆ.
ಕೆಲವು ಶುಷ್ಕ ಸಸ್ಯಗಳು ನೀರಿನ ಅಭಾವ ಇದ್ದಾಗ ತಮ್ಮ ಎಲೆಯ ಮೇಲ್ಮೈಯನ್ನು ಕಡಿಮೆಗೊಳಿಸುತ್ತವೆ. (ಎಡಕ್ಕೆ)ಉಷ್ಣತೆಯು ಶೀತಲವಾಗಿದ್ದರೆ ಹಾಗೂ ನೀರಿನ ಮಟ್ಟ ಸಾಕಷ್ಟು ಇದ್ದಲ್ಲಿ ಎಲೆಗಳು ಮತ್ತಷ್ಟು ಬೆಳವಣಿಗೆಯನ್ನು ಹೊಂದುತ್ತವೆ. (ಬಲಗಡೆ)

ಬಾಷ್ಪೀಕರಣ ವೆಂದರೆ ನೀರು ಆವಿಯಾಗುವ ಇನ್ನೊಂದು ಪ್ರಕ್ರಿಯೆಯಾಗಿದೆ. ಇದೊಂದು ನೀರಿನ ರೂಪಾಂತರದ ಗತಿ ಚಕ್ರವಾಗಿದೆ ಮತ್ತು ಇದು ಗಿಡಮರಗಳ ಭಾಗಗಳಿಂದ ನೀರು ಬೆವರಿನ ರೂಪದಲ್ಲಿ ಆವಿಯಾಗುವ ಪ್ರಕ್ರಿಯೆಯಾಗಿದೆ. ಅದರಲ್ಲೂ ವಿಶೇಷವಾಗಿ ಎಲೆಗಳಿಂದ, ಕಾಂಡದಿಂದ,ಹೂವುಗಳಿಂದ ಮತ್ತು ಬೇರುಗಳಿಂದ ಆವಿಯಾಗುವುದಾಗಿದೆ. ಎಲೆಗಳ ಮೇಲ್ಭಾಗವು ರಂದ್ರಗಳ ರೀತಿಯಲ್ಲಿ ತೆರೆದು ಕೊಂಡಿರುತ್ತದೆ. ಇವುಗಳನ್ನು ಒಟ್ಟಿಗೆ ಪತ್ರರಂದ್ರಗಳು ಎಂದು ಕರೆಯುತ್ತಾರೆ. *ಹೆಚ್ಚಿನ ಗಿಡ ಮರಗಳು ಬಹು ಸಂಖ್ಯೆಯ ಪತ್ರರಂದ್ರಗಳನ್ನು ಎಲೆಗಳ ಕೆಳಭಾಗದಲ್ಲಿ ಹೊಂದಿರುತ್ತವೆ. ಈ ಪತ್ರರಂದ್ರಗಳು ಮುಚ್ಚಿ ಕೊಳ್ಳುವ ಹಾಗೂ ತೆರೆದು ಕೊಳ್ಳುವ ರಕ್ಷಾ ಕೋಶಗಳಿಂದ ಆವೃತವಾಗಿರುತ್ತವೆ.[೧]

 • ಎಲೆಗಳ ಬಾಷ್ಪೀಕರಣವು ಪತ್ರರಂದ್ರಗಳ ಮೂಲಕ ನಡೆಯುತ್ತದೆ ಮತ್ತು ಈ ರಂದ್ರಗಳು ಸಸ್ಯಗಳ ದ್ಯುತಿಸಂಶ್ಲೇಷಣಾಕ್ರಿಯೆ ನಡೆಸಲು ಗಾಳಿಯಿಂದ ಇಂಗಾಲದ ಡೈ ಆಕ್ಸೈಡ್ ಹೀರಿಕೊಳ್ಳಲು ಬೇಕಾದ ಅತ್ಯಾವಶ್ಯಕ ಅಂಗಾಂಗವಾಗಿರುತ್ತದೆ. ಈ ಬಾಷ್ಪೀಕರಣ ಪ್ರಕ್ರಿಯೆಯು, ಸಸ್ಯಗಳನ್ನು ತಂಪಾಗಿ ಸುತ್ತದೆ ಮತ್ತು ನೀರು ಹಾಗೂ ಖನಿಜ ಪೋಷಕಾಂಶಗಳನ್ನು ಬೇರಿನಿಂದ ರೆಂಬೆಗಳವರೆಗೆ ಪ್ರಸರಿಸಲು ನೆರವಾಗುತ್ತದೆ.
 • ಮರಗಿಡಗಳ ಮೇಲಿನ ಅಂಗಾಂಗಗಳಿಂದ(ರೆಂಬೆ ಕೊಂಬೆಗಳು) ಪತ್ರರಂದ್ರಗಳ ಮೂಲಕ ವಾತಾವರಣಕ್ಕೆ ಹೆಚ್ಚಿನ ನೀರಿನಂಶ ಬಿಡುಗಡೆಯಾಗುವುದರಿಂದ, ಮರಗಳ ಮೇಲ್ಬಾಗದಲ್ಲಿ ನೀರಿನ ಪ್ರಮಾಣ ಕುಸಿಯುವುದು ಮತ್ತು ಇದರಿಂದ ಅಧಿಕ ಪ್ರಮಾಣದಲ್ಲಿ ಬೇರಿನಿಂದ ದ್ರವ ನೀರು ಹೀರಲ್ಪಟ್ಟು ಎಲೆಗಳಿಗೆ ಸರಬರಾಜಾಗುತ್ತದೆ. ನೀರು ಬೇರುಗಳ ಅರೆ ಪಾರಕ ಪೊರೆಯ ಮೂಲಕ ಹೀರಲ್ಪಡುತ್ತದೆ ಮತ್ತು ಖನಿಜ ಪೋಷಕಾಂಶಗಳನ್ನು ವಿಭಜಿಸಿ ಅದನ್ನು ಮರದ ಊತಗಳಿಗೆ ಸಾಗಿಸಿ(ಕಾಂಡದ ಗಂಟುಗಳು) ಸಂಗ್ರಹಿಸಿಡುತ್ತವೆ.
 • ಸಸ್ಯಗಳಿಂದ ನೀರು ಬಾಷ್ಪೀಕರಣಗೊಳ್ಳುವ ಪ್ರಮಾಣವು ನೇರವಾಗಿ ನೀರು ಆವಿಯಾಗುವ ಭಾಗಗಳಾದ ಗಿಡದ ತೊಗಟೆ ಮತ್ತು ಅದರಲ್ಲೂ ಮುಖ್ಯವಾಗಿ ಎಲೆಗಳ ಮೇಲಿನ ಸೂಕ್ಷ್ಮ ರಂದ್ರಗಳ ಮೇಲೆ ಅವಲಂಬಿಸಿದೆ. ಪತ್ರ ರಂದ್ರಗಳು ಗಿಡ ಮರಗಳ ನೀರನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ಆವಿಯಾಗಿಸಲು ಕಾರಣವಾಗಿವೆ. ಆದರೆ ಎಲೆಗಳ ಹೊರ ಪದರದ ಕೋಶಗಳಿಂದಲೂ ನೇರವಾಗಿ ನೀರು ಆವಿಯಾಗುತ್ತದೆ.
 • ವಾತಾವರಣಕ್ಕೆ ಬಿಡುಗಡೆಗೊಳಿಸುವ ನೀರಿನ ಪ್ರಮಾಣವು, ಸ್ವಲ್ಪ ಮಟ್ಟಿಗೆ ಮರಗಳ ಬೇರುಗಳು ಭೂಮಿಯಿಂದ ಎಷ್ಟು ಪ್ರಮಾಣದ ನೀರನ್ನು ಹೀರಿಕೊಳ್ಳುತ್ತವೆ ಎಂಬುದನ್ನೂ ಅವಲಂಬಿಸಿರುತ್ತದೆ. ಇದೆಲ್ಲದರ ಹೊರತಾಗಿ ಆವಿಯಾಗುವ ಪ್ರಮಾಣವು ವಾತಾವರಣದ ಸ್ಥಿತಿಗತಿಗಳಾದ ಬಿಸಿಲು, ಆರ್ಧತೆ, ಗಾಳಿ ಮತ್ತು ಉಷ್ಣಾಂಶಗಳನ್ನೂ ಅವಲಂಬಿಸಿ ರುತ್ತದೆ. ಯಾವುದೇ ಒಂದು ಸಸ್ಯವು ಸೂರ್ಯನ ಬಿಸಿಲಿರುವ ದಿನ ಪೂರ್ತಿ ದ್ಯುತಿಸಂಶ್ಲೇಷಣೆ ನಡೆಸಿ ನೀರನ್ನು ಹೊರ ಹಾಕುವುದಿಲ್ಲ. ಕಾರಣ ಹೀಗೆ ಮಾಡಿದರೆ ಹಾನಿಗೊಳಗಾದ ಬೇರುಗಳು ಸಾಕಷ್ಟು ನೀರನ್ನು ಪೂರೈಸಲು ಸಾಧ್ಯವಾಗದಿದ್ದಾಗ, ಅತಿಶಯ ನೀರನ್ನು ಕಳೆದುಕೊಂಡು ಮರಗಳು ಸೊರಗಿ ಹೋಗುವ ಸಾಧ್ಯತೆಯಿರುತ್ತದೆ.
 • ಸಸ್ಯಗಳ ದಳಗಳು ಮತ್ತು ಕಾಂಡವು ಸೂರ್ಯನ ಶಾಖಕ್ಕೆ ಬಿಸಿಯಾಗುವುದರಿಂದ ಅವುಗಳಲ್ಲಿರುವ ನೀರು ಆವಿಯಾಗುತ್ತದೆ. ಉಷ್ಣಾಂಶದಲ್ಲಿನ ಬದಲಾವಣೆಯು, ಹೆಚ್ಚಿನ ನೀರಿ ನಾಂಶ ಬಾಷ್ಪವಾಗಲು ಕಾರಣವಾಗಿದೆ. ನೀರು ಆವಿರೂಪ ತಳೆದ ನಂತರ ಪತ್ರರಂದ್ರಗಳ ಮುಖಾಂತರ ಹೊರ ಹೋಗುತ್ತದೆ. ಹೊರ ಹೋಗುವ ಆವಿಯು ಸಸ್ಯಗಳಲ್ಲಿನ ಉಷ್ಣವನ್ನು ಹೀರಿಕೊಳ್ಳುವುದರಿಂದ ಎಲೆಗಳನ್ನು ತಂಪಾಗಿಸುತ್ತವೆ.
 • ಪತ್ರರಂದ್ರಗಳ ತೆರೆದುಕೊಳ್ಳುವಿಕೆಯು ಮತ್ತು ಆವಿಯಾಗಬಹುದಾದ ನೀರಿನ ಪ್ರಮಾಣವು ಸುತ್ತಲಿನ ಹವಾಗುಣದ ಸನ್ನಿವೇಶವನ್ನು ಅವಲಂಬಿಸಿದೆ. ಮರ ಗಿಡಗಳು ನೀರನ್ನು ಕಳೆದು ಕೊಳ್ಳುವ ಪ್ರಮಾಣವು ಅವುಗಳ ಅಳತೆ, ಸುತ್ತಲಿನ ವಾತಾವರಣದಲ್ಲಿನ ಬಿಸಿಲಿನ ತೀವೃತೆ[೨], ಉಷ್ಣಾಂಶ, ಆರ್ಧತೆ, ಬೀಸುತ್ತಿರುವ ಗಾಳಿಯ ವೇಗ ಮುಂತಾದವೆಲ್ಲವನ್ನು ಅವಲಂಬಿಸಿವೆ. ಮಣ್ಣಿನಲ್ಲಿರುವ ನೀರಿನ ಪ್ರಮಾಣ ಮತ್ತು ಮಣ್ಣಿನ ಉಷ್ಣಾಂಶವು ಪತ್ರರಂದ್ರಗಳ ತೆರೆದುಕೊಳ್ಳುವಿಕೆಯ ಮೇಲೆ ಪ್ರಭಾವ ಬೀರುತ್ತವೆ. ತನ್ಮೂಲಕ ಆವಿಯಾಗುವ ಪ್ರಮಾಣವನ್ನೂ ನಿರ್ಧರಿಸುತ್ತದೆ.
 • ಒಂದು ಸಂಪೂರ್ಣ ಬೆಳೆದ ವೃಕ್ಷವು ಬಿಸಿಯೇರಿದ ಶುಷ್ಕ ದಿನವೊಂದರಲ್ಲಿ ಸುಮಾರು, ಕೆಲವು ನೂರು ಗ್ಯಾಲನ್‌ಗಳಷ್ಟು ನೀರನ್ನು ತನ್ನ ಎಲೆಗಳ ಮೂಲಕ ಕಳೆದು ಕೊಳ್ಳುತ್ತದೆ. ಬೇರುಗಳ ಮುಖಾಂತರ ಹೀರಲ್ಪಡುವ ನೀರಿನ ಶೇಕಡಾ 90 ರಷ್ಟು ಭಾಗ ಈ ಉದ್ದೇಶಕ್ಕಾಗಿಯೇ ಬಳಕೆಯಾಗುತ್ತದೆ. ಬಾಷ್ಪೀಕರಣ ಅನುಪಾತವೆಂದರೆ, ಒಂದು ನಿರ್ಧಿಷ್ಟ ಒಣ ವಸ್ತುವಿನದಲ್ಲಿ ಒಂದು ನಿರ್ಧಿಷ್ಟ ಪ್ರಮಾಣದ ನೀರು ವರ್ಗಾವಣೆಯಾಗುವ ಅನುಪಾತವಾಗಿದೆ.
 • ಇದಕ್ಕಾಗಿಯೇ ನಿರ್ಧಿಷ್ಟವಾಗಿ ಆಯ್ದುಕೊಂಡು ಪರೀಕ್ಷಿಸಿದಾಗ ಈ ಅನುಪಾತವು 200 ಮತ್ತು 1000 ಇರುವುದು ಕಂಡುಬಂದಿತು. (ಅಂದರೆ , ಆಯ್ದುಕೊಂಡ ಮರವು ಪ್ರತಿ ಕಿ ಗ್ರಾಂ ಒಣ ವಸ್ತುವಿನೊಂದಿಗೆ 200 ರಿಂದ 1000 ಕಿ ಗ್ರಾಂ ನೀರನ್ನು ವರ್ಗಾಯಿಸುವುದು ಗೋಚರವಾಯಿತು)[೩]

ಸಸ್ಯಗಳ ಬಾಷ್ಪೀಕರಣದ ದರವನ್ನು ಪೋಟೋಮೀಟರ್‍, ಲಿಸಿಮೀಟರ್‍, ಪೊರೋಮೀಟರ್‍, ದ್ಯುತಿಸಂಶ್ಲೇಷಣಾ ವ್ಯವಸ್ಥೆ ಮತ್ತು ಉಷ್ಣ ಪ್ರಸರಣ ಸಮತೋಲನ ವಿಧಾನಗಳ ನ್ನೊಳಗೊಂಡು ಇನ್ನೂ ಹಲವು ವಿಧಾನಗಳ ಮೂಲಕ ಅಳೆಯಬಹುದು.

 • ಮರುಭೂಮಿ ವೃಕ್ಷಗಳು ಮತ್ತು ಶಂಖಾಕೃತಿಯ ಮರಗಳು ಆವಿಯನ್ನು ತಡೆಗಟ್ಟಲು ಮತ್ತು ನೀರಿನ ಅಂಶವನ್ನು ಉಳಿಸಿಕೊಳ್ಳುವ ಸಲುವಾಗಿ ದಪ್ಪ ತೊಗಟೆ, ಕ್ಷೀಣ ಎಲೆಗಳು, ಮುಡಿಸಿಕೊಂಡಿರುವ ಪತ್ರರಂದ್ರಗಳಂತಹ ಕೆಲವು ವಿಶೇಷ ರಚನೆಗಳನ್ನು ಹೊಂದಿರುತ್ತವೆ. ಈ ವೃಕ್ಷಗಳು ಎಲೆಗಳ ಬದಲಾಗಿ ತಮ್ಮ ದಪ್ಪ ಕಾಂಡ ಗಳ ಮೂಲಕ ದ್ಯುತಿಸಂಶ್ಲೇಷಣೆ ನಡೆಸುತ್ತವೆಯಾದ್ದರಿಂದ ಹರಡಿಕೊಂಡಿರುವ ರೆಂಬೆಕೊಂಬೆಗಳನ್ನು ತೀರಾ ಕಡಿಮೆ ಹೊಂದಿರುತ್ತವೆ.
 • ಹಲವು ಮರುಭೂಮಿ ವೃಕ್ಷಗಳು, ಕ್ರಾಸ್ಸುಲಾಸಿಯನ್ ಆಮ್ಲವನ್ನು ಪಚನಗೊಳಿಸುವಂತಹ ವಿಶೇಷ ರೀತಿಯ ದ್ಯುತಿಸಂಶ್ಲೇಷಣೆ ವ್ಯವಸ್ಥೆಯನ್ನು ಹೊಂದಿವೆ. ಇದನ್ನು ಸಿಎಎಮ್ (CAM) ದ್ಯುತಿ ಸಂಶ್ಲೇಷಣಾ ವಿಧಾನ ಎಂದೂ ಕರೆಯುತ್ತಾರೆ. ಇದರಲ್ಲಿ ಪತ್ರರಂದ್ರಗಳು ಹಗಲಿನಲ್ಲಿ ಮುಚ್ಚಿದ್ದು, ರಾತ್ರಿ ವೇಳೆಗೆ ತೆರೆದುಕೊಂಡು ನೀರು ಆವಿ ಯಾಗುವ ಪ್ರಮಾಣವನ್ನು ಕಡಿಮೆಗೊಳಿಸುತ್ತವೆ.

ಇವನ್ನೂ ಗಮನಿಸಿ[ಬದಲಾಯಿಸಿ]

 • ಭಾಷ್ಪಿಭವನ ವಿರೋಧಿ - ಭಾಷ್ಪಿಭವನ ಕ್ರಿಯೆಗೆ ತಡೆಯೊಡ್ಡುವ ಒಂದು ವಸ್ತು
 • ಎಡ್ಡಿ ಸಹಭಿನ್ನಾಭಿಪ್ರಾಯ ಹೊರಸೂಸುವಿಕೆ (ಅಥವಾ ಎಡ್ಡಿ ಸಹ ಸಂಬಂಧಿ, ಎಡ್ಡಿ ಹೊರ ಸೂಸುವಿಕೆ.)
 • ಹೈಡ್ರಾಲಜಿ (ಕೃಷಿ)
 • ಸುಪ್ತ ಉಷ್ಣದ ಹೊರಬರುವಿಕೆ
 • ವಾಟರ್ ಇವ್ಯಾಲ್ಯೂವೇಷನ್ ಆಂಡ್ ಪ್ಲಾನಿಂಗ್ ಸಿಸ್ಟಮ್ (WEAP)
 • ಮಣ್ಣು, ಗಿಡ ಮತ್ತು ಪರಿಸರದ ಪರಸ್ಪರ ಹೊಂದಾಣಿಕೆ

ಉಲ್ಲೇಖಗಳು[ಬದಲಾಯಿಸಿ]

 1. Benjamin Cummins (2007), Biological Science (3 ed.), Freeman, Scott, p. 215
 2. ಡೆಬ್ಬಿ ಸ್ವಾರ್ಥೌಟ್‌ ಮತ್ತು ಸಿ.ಮೈಕೆಲ್ ಹೊಗನ್‌ 2010) ಸ್ಟೊಮಾಟಾ.ಎನ್‌ಸೈಕ್ಲೊಪಿಡಿಯಾ ಆಫ್‌ ಅರ್ಥ್‌.
  • ನ್ಯಾಷನಲ್ ಕೌನ್ಸಿಲ್ ಫಾರ್ ಸೈನ್ಸ್ ಅಂಡ್ ದಿ ಎನ್ವಿರಾನ್‌ಮೆಂಟ್‌, ವಾಷಿಂಗ್ಟನ್ ಡಿಸಿ
 3. Martin, J.; Leonard, W.; Stamp, D. (1976), Principles of Field Crop Production (Third Edition), New York: Macmillan Publishing Co., Inc., ISBN 0-02-376720-0

ಬಾಹ್ಯ ಕೊಂಡಿಗಳು‌[ಬದಲಾಯಿಸಿ]