ಬಾಬಾ ರಾಮ ಚಂದ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಾಬಾ ರಾಮ್ ಚಂದ್ರ (೧೮೬೪/೧೮೭೫-೧೯೫೦) [೧] [೨] [೩] ಒಬ್ಬ ಭಾರತೀಯ ಕಾರ್ಮಿಕ ಸ೦ಘವಾದಿ ಆಗಿದ್ದು, ೧೯೨೦ ಮತ್ತು ೧೯೩೦ ರ ದಶಕದಲ್ಲಿ ಭೂಮಾಲೀಕರ ದೌರ್ಜನ್ಯದ ವಿರುದ್ಧ ಹೋರಾಡಲು ಒಂದು ಸಂಘಟಿತ ವಲಯದ ಅಗತ್ಯ ವನ್ನು ಅರಿತು, ಅವಧ್ ರೈತರನ್ನು ಸಂಘಟಿಸಿದರು. ಅವರು ಫಿಜಿಯ ಇತಿಹಾಸ ದಲ್ಲಿ ಒಬ್ಬ ಪ್ರಭಾವಿ ವ್ಯಕ್ತಿಯಾಗಿದ್ದರು . ೧೨ ವರ್ಷಗಳ ಕಾಲ ಫಿಜಿ ಯಲ್ಲಿ ಒಪ್ಪ೦ದದ ಕಾರ್ಮಿಕರಾಗಿ ಬದುಕ್ಕಿದ್ದು ,ಒಪ್ಪ೦ದದ ಕಾರ್ಮಿಕರಾಗಿ ದುಡಿಯುವ ಕಾರ್ಮಿಕ ಪದ್ದತಿ ಯನ್ನುಕೊನೆಗೊಳಿಸಲು ಸ್ಫೂರ್ತಿ ಯಾಯಿತು. . ಕಮಲಾ ಕಾಂತ್ ತ್ರಿಪಾಠಿ ಅವರ ಇತಿಹಾಸ ಆಧಾರಿತ ಕಾದಂಬರಿ "ಬೇಡಖಲ್" ನಲ್ಲಿ ಅವರು ಪ್ರಮುಖ ಪಾತ್ರಗಳಲ್ಲಿ ಒಬ್ಬರು.

ರಾಮ್ ಚಂದ್ರ ಜನಿಸಿದ್ದು ಗ್ವಾಲಿಯರ್ ರಾಜ್ಯದ ಒಂದು ಸಣ್ಣ ಹಳ್ಳಿಯಲ್ಲಿ [೧] . [೨] [೩] ಅವರ ನಿಜವಾದ ಹೆಸರು ಶ್ರೀಧರ್ ಬಲವಂತ. ಅವರು ಪುರೋಹಿತ ವರ್ಗದ ವ್ಯಕ್ತಿ ಎಂದು ಗುರುತಿಸಿಕೊಳ್ಳ ಬಾರದು ಎ೦ಬ ಸಲುವಾಗಿ ತಮ್ಮ ಹೆಸರನ್ನು ರಾಮಚಂದ್ರ ರಾವ್ ಎಂದು ಬದಲಾಯಿಸಿಕೊಂಡರು. ನಂತರ ೧೯೦೪ ರಲ್ಲಿ ಅವರು ಒಪ್ಪ೦ದದ ಕಾರ್ಮಿಕ ರಾಗಿ ಫಿಜಿಗೆ ಹೊರಟರು [೪]

ಫಿಜಿಯಲ್ಲಿ ಉದ್ಯೊಗ ದಲ್ಲಿ ತೊಡಗಿಸಿಕೊಂಡಿದ್ದ ಕಾರ್ಮಿಕರ ವಿಮೋಚನೆಗಾಗಿ ಅವರು ಹದಿಮೂರು ವರ್ಷಗಳ ಕಾಲ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಫಿಜಿಯಲ್ಲಿ ಸಾಮಾಜಿಕ ಮತ್ತು ರಾಜಕೀಯ ಚಳುವಳಿಗಳಲ್ಲಿ ತೀವ್ರ ಆಸಕ್ತಿ ಹೊಂದಿದ್ದ ವೈಧ್ಯ ಮನಿಲಾ ಲ್ ಅವರ ಸ೦ಪರ್ಕಕ್ಕೆ ರಾಮ್ ಚಂದ್ರ ಅವರು ಬ೦ದರು.ರಾಮ್ ಚಂದ್ರ ಜನರನ್ನು ಸಂಘಟಿಸಲು ಧರ್ಮವನ್ನು ಬಳಸಿದರು. ಆತನು ಫಿಜಿಯಲ್ಲಿ ರಾಮ್ ಲೀಲಾಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿದ್ದನು, ಇದು ಭಾರತೀಯ ಒಪ್ಪಂದದ ಕಾರ್ಮಿಕರಲ್ಲಿ ಒಗ್ಗಟ್ಟಿನ ಭಾವನೆಯನ್ನು ಸೃಷ್ಟಿಸಲು ಸಹಾಯ ಮಾಡಿತು. ಕಾರ್ಮಿಕರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದ್ದ ಅಧಿಕಾರಿಯನ್ನು ವಜಾಗೊಳಿಸುವುದನ್ನು ಅವರು ಖಚಿತಪಡಿಸಿದರು. ಫಿಜಿಯಲ್ಲಿ ಜನಪ್ರಿಯ ಪ್ರದರ್ಶನಗಳನ್ನು ಮುನ್ನಡೆಸುತ್ತಾ ಕಾರ್ಮಿಕರ ಕುಂದುಕೊರತೆಗಳ ಮೇಲೆ ಗಮನ ಕೇಂದ್ರೀಕರಿಸಿದರು. ಅವರು ಭಾರತಕ್ಕೆ ಕಳ್ಳಸಾಗಣೆ ಮಾಡಿದ ಕಾರ್ಮಿಕರ ಶೋಚನೀಯ ಮತ್ತು ಅಮಾನವೀಯ ಸ್ಥಿತಿಗಳ ಬಗ್ಗೆ ಒಂದು ಲೇಖನವನ್ನು ಕಲ್ಕತ್ತಾದ ಭಾರತ ಮಿತ್ರ ಪತ್ರಿಕೆಯಲ್ಲಿ ಪ್ರಕಟಿಸಿದರು. ಈ ಲೇಖನದಿಂದ ಫಿಜಿ ಸರ್ಕಾರ ಎಚ್ಚರಗೊಂಡಿತು ಮತ್ತು ಅದರ ಬರಹಗಾರರನ್ನು ಹುಡುಕಲಾರ೦ಭಿಸಿತು. ಲೇಖನವು ಎಷ್ಟು ಕೋಲಾಹಲವನ್ನು ಸೃಷ್ಟಿಸಿತು ಎಂದರೆ, ರಾಮ್ ಚಂದ್ರನಿಗೆ ಆತನ ಸ್ನೇಹಿತರು ಫಿಜಿಯನ್ನು ತೊರೆಯುವಂತೆ ಸಲಹೆ ನೀಡಿದರು. ಅವರು ೧೯೧೬ ರಲ್ಲಿ ಫಿಜಿಯನ್ನು ತೊರೆದರು.

ಭಾರತಕ್ಕೆ ಹಿಂದಿರುಗಿದ ನಂತರ ಅವರು ಅಯೋಧ್ಯೆಯಲ್ಲಿ ನೆಲೆಸಿದರು ಮತ್ತು ಸಾಧು (ಪವಿತ್ರ ವ್ಯಕ್ತಿ) ಆದರು. ರೈತರಲ್ಲಿ ಅಸಮಾಧಾನವನ್ನು ಹರಡಿದ್ದಾರೆ ಎಂದು ಸ್ಥಳೀಯ ಪೊಲೀಸರು ಅವರನ್ನು ಆರೋಪಿಸಿದರು. ಅವರು ಮಧ್ಯಮ ಜಾತಿಯ ಮಹಿಳೆಯನ್ನು ವಿವಾಹವಾದರು ಮತ್ತು ತಮ್ಮನ್ನು "ಬಾಬಾ ರಾಮ ಚಂದ್ರ" ಎಂದು ಕರೆಯಲು ಪ್ರಾರಂಭಿಸಿದರು. ಅವರು ಈ ಪ್ರದೇಶದ ಸುತ್ತಮುತ್ತ ರಾಮಾಯಣದ ಪ್ರತಿಯನ್ನು ತಮ್ಮ ಜೊತೆ ಹಿಡಿದು ತಿರುಗಾಡಿದರು, ಬ್ರಿಟಿಷ್ ರಾಜ್ ಮತ್ತು ಭೂಮಾಲೀಕರ ಖಂಡನೆಯನ್ನು ಮಾಡುತ್ತಾ ರೈತರು ತಮ್ಮ ಶೋಷಕರ ವಿರುದ್ಧ ಒಟ್ಟಾಗಿ ಕಾರ್ಯನಿರ್ವಹಿಸುವಂತೆ ಮನವಿ ಮಾಡಿದರು. ಬಾಡಿಗೆದಾರ-ಭೂಮಾಲೀಕರ ಸಂಬಂಧವನ್ನು ಸಮನ್ವಯಗೊಳಿಸಲು ಅವರು ಪ್ರಾರಂಭಿಸಿದರೂ,ಇಧು ವ್ಯರ್ಥ ಪ್ರಯತ್ನವೆಂದು ಪರಿಗಣಿಸಿದರು ಮತ್ತು ರೈತರನ್ನು ಸಜ್ಜುಗೊಳಿಸಲು ಪ್ರಾರಂಭಿಸಿದರು. ಅವರು ರೈತರಿಗೆ ಅಗತ್ಯವಾದ ಬಾಡಿಗೆಯನ್ನು ಮಾತ್ರ ಪಾವತಿಸುವಂತೆ ಪ್ರೋತ್ಸಾಹಿಸಿದರು ಮತ್ತು ಸಾಂಪ್ರದಾಯಿಕ ದೇಣಿಗೆಗಳಿಂದ ದೂರವಿರುವ೦ತೆ ಮನವಿ ಮಾದಡಿದರು. ೧೯೧೯ ರಲ್ಲಿ ಅವರು ಭೂಮಾಲೀಕರ ವಿರುದ್ಧ ಮೊದಲ ರೈತ ಪ್ರತಿಭಟನೆಯನ್ನು ಮುನ್ನಡೆಸಿದರು ಮತ್ತು ೧೯೨೦ ರ ಹೊತ್ತಿಗೆ ಔಧ್ ನಲ್ಲಿ ಎಲ್ಲಾ ರೈತ ಸಂಘಗಳನ್ನು ಸಂಘಟಿಸಿದರು, ಔಧ್ ಕಿಸಾನ್ ಸಭೆಯನ್ನು (ಔಧ್ ರೈತರ ಸಂಘ) ರಚಿಸಿದರು. [೫] ಸಾರ್ವಜನಿಕ ಪ್ರತಿಭಟನೆಗಳನ್ನು ಆಯೋಜಿಸಿದ್ದಕ್ಕಾಗಿ ಅವರನ್ನು ಹಲವಾರು ಸಂದರ್ಭಗಳಲ್ಲಿ ಬಂಧಿಸಲಾಯಿತು.

ಜೂನ್ ೧೯೨೦ ರಲ್ಲಿ, ನೆಹರು ಅವಧ್ ಗ್ರಾಮಗಳಲ್ಲಿ ಪ್ರವಾಸ ಮಾಡಿದರು. ಅಕ್ಟೋಬರ್ ವೇಳೆಗೆ ಸಭೆಯ ನೇತೃತ್ವವನ್ನು ಬಾಬಾ ರಾಮಚಂದ್ರ, ನೆಹರು ಮತ್ತು ಇತರ ಕೆಲವರು ವಹಿಸಿದ್ದರು. ಒಂದು ತಿಂಗಳೊಳಗೆ ಅದು ೩೦೦ ಕ್ಕೂ ಹೆಚ್ಚು ಶಾಖೆಗಳನ್ನು ಸ್ಥಾಪಿಸಿತು. ಇದು NCM (ಅಸಹಾಕಾರ ಚಳುವಳಿ) ನಲ್ಲಿ ರೈತರನ್ನು ಸಂಯೋಜಿಸಲು ಸಹಾಯ ಮಾಡಿತು. [೫]

ರೈತರ ಹಕ್ಕುಗಳಿಗಾಗಿ ಹೋರಾಡಲು ನೆಹರು ಮತ್ತು ಇತರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಾಯಕರ ಬೆಂಬಲವನ್ನು ಪಡೆಯಲು ಪ್ರಯತ್ನಿಸಿದಾಗ, ಕಾಂಗ್ರೆಸ್ ತನ್ನ ನಗರ-ಆಧಾರಿತ ನಾಯಕತ್ವದೊಂದಿಗೆ, ಕೇವಲ ಸ್ವಾತಂತ್ರ್ಯದ ಬಗ್ಗೆ ಮಾತ್ರ ಕಾಳಜಿ ಹೊಂದಿದೆ ಮತ್ತು ರೈತರ ಅಗತ್ಯತೆಗಳನ್ನು ಅರ್ಥಮಾಡಿಕೊ೦ಡಿಲ್ಲ ಎಂದು ಕಂಡುಕೊಂಡಾಗ ನಿರಾಶೆಗೊಂಡರು

ಹೆಚ್ಚಿನ ಓದು[ಬದಲಾಯಿಸಿ]

  • ಔಧ್ ನಲ್ಲಿ ರೈತರ ಆಂದೋಲನದ ಮೂಲಗಳು
  • ಬಾಬಾ ಮತ್ತು ಸಹಕಾರೇತರ ಕಾಂಗ್ರೆಸ್
  • ಎಂಎಚ್ ಸಿದ್ದಿಕಿ, ಉತ್ತರ ಭಾರತದಲ್ಲಿ ಕೃಷಿ ಅಶಾಂತಿ 1918-1922, ವಿಕಾಸ್ ಪಬ್ಲಿಷಿಂಗ್ ಹೌಸ್, ನವದೆಹಲಿ, 1978
  • ಕೆ. ಕುಮಾರ್, ದಂಗೆಯಲ್ಲಿ ರೈತರು: ಬಾಡಿಗೆದಾರರು, ಭೂಮಾಲೀಕರು, ಕಾಂಗ್ರೆಸ್ ಮತ್ತು ಔದ್ ನಲ್ಲಿ ರಾಜ್, 1886-1922, ಮನೋಹರ್ ಪಬ್ಲಿಕೇಷನ್ಸ್, ದೆಹಲಿ, 1984.
  • ಕಪಿಲ್ ಕುಮಾರ್, ದಿ ರಾಮಚರಿತ್ಮಾನಸ್ ಒಂದು ಮೂಲಭೂತ ಪಠ್ಯ: ಬಾಬಾ ರಾಮ್ ಚಂದ್ರ ಔದ್ ನಲ್ಲಿ, 1920-1950, ಸಾಮಾಜಿಕ ಪರಿವರ್ತನೆ ಮತ್ತು ಸೃಜನಶೀಲ ಕಲ್ಪನೆ, 1984 ರಲ್ಲಿ.

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ S.K. Mitral and Kapil Kumar, Baba Ram Chandra and Peasant Upsurge in Oudh, 1920-21, Social Scientist, No. 71 (June 1978)
  2. ೨.೦ ೨.೧ Ram Chandra (Baba in Indian History, 26th edition, ed. V.K. Agnihotri, Allied Publishers, 1988
  3. ೩.೦ ೩.೧ Dictionary of National Biography, Vol I (A-D), ed. S.P. Sen, Institute of Historical Studies, Kolkata, 1972 pp. 452-53.
  4. "Nationalism in India" (PDF). India and the contemporary world-II : Textbook in history for class X. New Delhi: NCERT. 2011. p. 35. ISBN 81-7450-707-8. OCLC 750383036.
  5. ೫.೦ ೫.೧ "Nationalism in India" (PDF). India and the contemporary world-II : Textbook in history for class X. New Delhi: NCERT. 2011. p. 35. ISBN 81-7450-707-8. OCLC 750383036."Nationalism in India" (PDF). India and the contemporary world-II : Textbook in history for class X. New Delhi: NCERT. 2011. p. 35. ISBN 81-7450-707-8. OCLC 750383036.