ಅವಧ್
Awadh (Awadhi, Hindi : अवध, Urdu: اودھ
ಇದು ಪುರಾತನ 'ಕೋಸಲ'ದೇಶವಿದ್ದ ಪ್ರದೇಶ. 'ಅಯೋಧ್ಯೆ' ಇಲ್ಲಿನ ರಾಜಧಾನಿಯಾಗಿದ್ದ ಕಾರಣದಿಂದ ಇದಕ್ಕೆ,'ಅವಧ್' ಎಂಬ ಹೆಸರು ಬಂದಿದೆ. ಅವಧಿ, ಇಲ್ಲಿನ ವಿಶೇಷ ಆಡುಭಾಷೆ. ಅವಧಿ ಭಾಷೆಯಲ್ಲೇ 'ಸಂತ ತುಲಸೀದಾಸರು,' 'ರಾಮಚರಿತ ಮಾನಸ' ಮಹಾಕಾವ್ಯವನ್ನು ಬರೆದರು. ಮುಂದೆ 'ಲಖ್ನೋ' 'ಅವಧ್' ದ ರಾಜಧಾನಿಯಾಗಯಿತು. ಪ್ರಸಕ್ತ 'ಅಯೋಧ್ಯೆ' ಇರುವುದು, 'ಫೈಜಾಬಾದ್' ಜಿಲ್ಲಿಯಲ್ಲಿ. 'ಅವಧ್' ಪ್ರದೇಶದಲ್ಲಿ, 'ಲಖ್ನೋ', 'ಅಲಹಾಬಾದ್', 'ರಾಯ್ ಬರೇಲಿ,' 'ಕಾನ್ಪುರ್', ಮುಂತಾದ ಐತಿಹಾಸಿಕ ಪಟ್ಟಣಗಳಿವೆ.
’ಅವಧ್ ಪ್ರದೇಶ’ದ ವರ್ಣನೆ
[ಬದಲಾಯಿಸಿ]'ಬ್ರಿಟಿಷ್ ಚರಿತ್ರಾಕಾರರನ್ನು' ಗಣನೆಗೆ ತೆಗೆದುಕೊಂಡರೆ, ’ಅವಧ್ ಪ್ರದೇಶ’ವನ್ನು ತಾವು ಬರೆದ ಪುಸ್ತಕಗಳಲ್ಲಿ ಹಲವಾರು ಹೆಸರುಗಳಿಂದ ಕರೆದಿದ್ದಾರೆ. ಔಧ್, ಔಂಧ್, ಅಥವಾ ಔಡ್, ಉತ್ತರಪ್ರದೇಶದ ಒಂದು ರಾಜ್ಯ. ಸ್ವಾತಂತ್ರ್ಯ ಪೂರ್ವದಲ್ಲಿ ಈ ಪ್ರದೇಶವನ್ನು ’ಯುನೈಟೆಡ್ ಪ್ರಾವಿನ್ಸ್ ಆಫ್ ಔಧ್ ಅಂಡ್ ಆಗ್ರ’, ಪುರಾತನ ಔಧ್ ನ ರಾಜಧಾನಿ ಲಖ್ನೊ ಆಗಿತ್ತು. ಈಗಿನ ಉತ್ತರ ಪ್ರದೇಶದ ರಾಜಧಾನಿ, ಯೆನ್ನುತ್ತಿದ್ದರು. ಭೌಗೋಳಿಕವಾಗಿ ಇಂದಿನ ಔಧ್ ವಿವರಿಸಬೇಕೆಂದರೆ, 'ಅಂಬೇಡ್ಕರ್ ನಗರ', 'ಬಹ್ರೈಚ್', 'ಬಾಲ್ ರಾಮ್ ಪುರ್', 'ಬಾರಾಬಂಕಿ', 'ಫೈಝಬಾದ್', 'ಗೋಂಡ', 'ಹರ್ಡೋಯಿ', 'ಲಖಿಮ್ ಪುರ್ ಖೇರಿ', 'ಲಖ್ನೊ,' 'ಪ್ರತಾಪ್ ಘರ್', 'ಅಲಹಾಬಾದ್', 'ರಾಯ್ ಬರೇಲಿ', 'ಶ್ರವಸ್ತಿ', 'ಸೀತಾಪುರ್', 'ಸುಲ್ತಾನ್ ಪುರ್', 'ಉನ್ನಾವ್' ಮತ್ತು 'ಕಾನ್ ಪುರ್'. ಈಗ ನೇಪಾಲಕ್ಕೆ ಸೇರಿಕೊಂಡಿದೆ. ಇಲ್ಲಿನ ಜನರ ಆಡುಭಾಷೆ 'ಅವಧಿ', 'ಅವಧೀಯರು ಮಾತಾಡುವ ಭಾಷೆ'.
ಇತಿಹಾಸ
[ಬದಲಾಯಿಸಿ]’ಪುರಾತನ ಔಧ್’ ನ ರಾಜಕೀಯ ಸಂಘಟನೆಯನ್ನು ಪುರಾತಹ ಹಿಂದೂ ಸಾಮ್ರಾಜ್ಯ ಕೋಸಲಕ್ಕೆ, ಹೋಲಿಸಬಹುದು. ಅಯೋಧ್ಯ ಅದರ ರಾಜಧಾನೆ. ೧೬ ನೆಯ ಶತಮಾನದಲ್ಲಿ ಅಕ್ಬರ್ ನ ಕಾಲದಲ್ಲಿ ಹೆಸರನ್ನು ಉಲ್ಲೇಖಿಸಿದೆ. ಅತಿ ಪುರಾತನ ಸಮಯದಲ್ಲಿ, ರಾಮರಾಜ್ಯದ ಸಮಯದಲ್ಲಿ, ೫ ಪ್ರಮುಖ ವಿಭಾಗಗಳನ್ನು ಹೊಂದಿತ್ತು. ೧. ’ಉತ್ತರ ಕೋಸಲ,’ ಅಥಾವಾ ಟ್ರಾನ್ಸ್ ಘಾಗ್ರ ಜಿಲ್ಲೆಗಳು, ’ಭಹ್ರೈಚ್’, ’ಘೊನ್ದ’, ’ಭಸ್ತಿ’ ಮತ್ತು, 'ಗೋರಖ್ ಪುರ್'. ೨. 'ಸಿಲ್ಲಿಯಾನ ಗುಡ್ಡದ ಬುಡ'ದಲ್ಲಿ ಸ್ಥಿತ ಪ್ರದೇಶ, ಉತ್ತರ ಕೋಸಲರಾಜ್ಯದ ಉತ್ತರ. ೩. 'ಪಚ್ಚಿಮ್ ರಾಥ್', 'ಘಾಗ್ರ' ಮತ್ತು 'ಗೋಮತಿ' ನದಿಗಳ ಮಧ್ಯದ ಪ್ರದೇಶ, 'ಅಯೋಧ್ಯೆ' ಯಿಂದ 'ಸುಲ್ತಾನ್ ಪುರ್' ದ ಪಶ್ಚಿಮಕ್ಕೆ. ೪. ಈ ತರಹದ ವಿಭಾಜನೆಯಿಂದ ಮೂರನೆಯ ಒಂದು ಭಾಗದಷ್ಟು 'ಫೈಸಲಾಬಾದ್' ಜಿಲ್ಲೆಯ ಉತ್ತರ 'ಸುಲ್ತಾನ್ ಪುರದ ಸ್ವಲ್ಪ ಭಾಗ ' 'ಬಾರಾಬಂಕಿ' ಪೂರ್ತಿಯಾಗಿ, ಲಖ್ನೋ ಹಾಗೂ 'ಸೀತಾಪುರ್' ಜಿಲ್ಲೆಗಳ ಕೆಲವು ನಿಗದಿಯಾದ ಜಾಗಗಳು. ೫. 'ಪುರಬ್ರಾತ್,' ಎಂದು ಕರೆಯುವ, 'ಘೋಗ್ರಾ' ಹಾಗೂ 'ಗೋಮತಿ' ನದಿಗಳ ಪೂರ್ವಭಾಗದ ಪ್ರದೇಶಗಳು 'ಫೈಸಾಬಾದ್' ನ, ಮೂರನೆಯ ಎರಡುಭಾಗ ಭೂ-ಪ್ರದೇಶವನ್ನು ಹೊಂದಿವೆ.(ಅಂಬೇಡ್ ಕರ್ ನಗರ ಸೇರಿದಂತೆ) 'ಸುಲ್ತಾನ್ ಪುರ'ದ 'ನೈರುತ್ಯಭಾಗ', ಮತ್ತು 'ಅಝಮ್ ಘರ್' ನಿಂದ 'ಸಾಯಿನದಿ'ಯವರೆವಿಗೆ, ಹಬ್ಬಿವೆ.
ಮುಘಲ್ ಸಾಮ್ರಾಜ್ಯದ ಆಡಳಿತ ವಿಭಾಗಗಳು
[ಬದಲಾಯಿಸಿ]’ಪುರಬ್ರಥ್’, 'ಘಾಗ್ರ' ಮತ್ತು 'ಗೋಮತಿ' ನದಿಗಳ ಪೂರ್ವದ 'ಅಯೋಧ್ಯೆ' ಯಿಂದ 'ಸುಲ್ತಾನ್ ಪುರ್' ವರೆಗಿನ ಪ್ರದೇಶ. ಈ ವಿಭಾಗ, ಮೂರನೆಯ ಎರಡು ಭಾಗ, ಈಗಿನ ಜಿಲ್ಲೆಗಳಾದ, 'ಫೈಸಲಾಬಾದ್' ಸೇರಿದಂತೆ, ಮುಘಲ್ ಚಕ್ರವರ್ತಿ, ಅಕ್ಬರ್, ತನ್ನ ಸಾಮ್ರಾಜ್ಯವನ್ನು ದಕ್ಷಿಣಕ್ಕೆ, ಗೋಮತಿ ನದಿಯಿಂದ ಸಾಯಿ ನದಿಯ ವರೆಗೆ ವಿಸ್ತರಿಸಿದನು. ಹಿಂದಿನ ಕಾಲದಿಂದ 'ಅಕ್ಬರ್ ಚಕ್ರವರ್ತಿ'ಯ ಕಾಲದವರೆವಿಗೆ, ಸಂಸ್ಥಾನದ ಗಡಿ, ಹಾಗೂ ಒಳ ಸ್ಥಳಗಳ ಜಾಗದ ವಿಂಗಡಣೆ, ಬದಲಾಗುತ್ತಲೇ ಇತ್ತು. ಅದೇ ತರಹ ಔಧ್, ಅಥವಾ ಅವಧ್, ಯೆಂಬ ಹೆಸರು, ಹಿಂದೆ ನಮೂದಿಸಿದ ವಿಭಾಗಳು ಅಥವಾ ಸರ್ಕಾರ್ ಗಳು, ಮತ್ತು ಔಧ್ ಹೆಸರು, 'ಪಚ್ಚಿಮ್ ರಥ್' ಗೆ ಅನ್ವಯಿಸುತ್ತದೆ. 'ಅವಧ್ ನ ಸುಬೇದಾರ್' ಎಂಬ ಪದವಿ, ಕ್ರಿ. ಪೂ. ೧೨೮೦ ಕ್ಕಿಂತ ಹಿಂದೆಯೇ ನೇಮಕಮಾಡಲಾಗಿತ್ತು. ಅವಧ್ ನ ಅಕ್ಬರ್ ೧೨ ಅಥವಾ '೧೫ ಸುಬಾಗಳ ಅಧಿಪತಿ', 'ಮುಘಲ್ ಸಾಮ್ರಾಜ್ಯ', ಕ್ರಿ. ಪೂ. ೧೫೯೦ ರಲ್ಲಿ, (೧೬ ನೇ ಶತಮಾನದ ಕೊನೆಯಲ್ಲಿ ತೀರ್ಮಾನಿಸಿದಂತೆ)ಒಂದು ಸುಬಾದಲ್ಲಿ ೫ ಸರ್ಕಾರ್ ಗಳಿದ್ದವು. ಅವುಗಳ ವಿವರಗಳು ಕೆಳಗೆ ನಮೂದಿಸಿದಂತಿವೆ.
- 'ಅವಧ್',
- 'ಲಖ್ನೋ',
- 'ಬಹ್ ರೈಛ್',
- 'ಖಇರಾ ಬಾದ್',
- 'ಗೋರಖ್ ಪುರ್',