ವಿಷಯಕ್ಕೆ ಹೋಗು

ಬಟರ್ ಚಿಕನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಟರ್ ಚಿಕನ್ ಅಥವಾ ಮುರ್ಗ್ ಮಖಾನಿ ಸೌಮ್ಯ ಮಸಾಲೆಭರಿತ ಕರಿ ಸಾಸ್‍ನಲ್ಲಿ ಕೋಳಿಮಾಂಸದ ಒಂದು ಭಾರತೀಯ ಖಾದ್ಯ. ಅದನ್ನು ಭಾರತ ಮತ್ತು ವಿದೇಶದಲ್ಲಿ ಬಡಿಸಲಾಗುತ್ತದೆ. ಈ ಖಾದ್ಯವು ತನ್ನ ಬೇರುಗಳನ್ನು ಪಂಜಾಬಿ ಪಾಕಪದ್ಧತಿಯಲ್ಲಿ ಹೊಂದಿದೆ ಮತ್ತು ದೆಹಲಿಯ ಮೋತಿ ಮಹಲ್ ರೆಸ್ಟೊರೆಂಟ್‍ನಿಂದ ಗೋಚರಗೊಂಡಿತು. ಕೋಳಿಮಾಂಸವನ್ನು ಹಲವು ಗಂಟೆಗಳವರೆಗೆ ಮೊಸರು ಮತ್ತು ಸಂಬಾರ ಪದಾರ್ಥ ಮಿಶ್ರಣದಲ್ಲಿ ಮ್ಯಾರನೇಟ್ ಮಾಡಲಾಗುತ್ತದೆ. ಸಂಬಾರ ಪದಾರ್ಥಗಳು ಗರಮ್ ಮಸಾಲಾ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ನಿಂಬೆ ಅಥವಾ ಲೈಮ್, ಕರಿಮೆಣಸು, ಧನಿಯಾ, ಜೀರಿಗೆ, ಅರಿಶಿನ ಮತ್ತು ಖಾರದ ಪುಡಿಯನ್ನು ಒಳಗೊಳ್ಳಬಹುದು.ಚಿಕನ್ ಅನ್ನು ಬೇಯಿಸಿಕ್ಂಡು ಅಥವಾ ಗ್ರೀಲ್ ಮಾಡಿಕೊಳ್ಳಬೇಕು.ಇದನ್ನು ಲಘು ಮೇಲೋಗರ ಸಾಸ್ ಜೊತೆಗೆ ಬಡಿಸುತ್ತಾರೆ.ಸಾಸ್ ಅನ್ನು ಹಲವು ರೀತಿಯ ಮಸಾಲೆಯನ್ನು ಬಳಸಿ ತಯಾರಿಸಬಹುದು.

ಇತಿಹಾಸ

[ಬದಲಾಯಿಸಿ]

ಕುಂದನ್ ಲಾಲ್ ಗುಜರಾಲ್,ಮೊತಿ ಮಹಲ್ ಡಿಲಕ್ಸ್ ನ ಮಾಲಿಕರನ್ನು ಬಟರ್ ಚಿಕನ್ ಸೃಷ್ಟಿಕರ್ತ ಎಂದು ಹೇಳಲಾಗುತ್ತದೆ.