ಫೀನಾಂಥ್ರಿನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಫೀನಾಂಥ್ರಿನ್‍ನ ರಚನೆ
ಫೀನಾಂಥ್ರಿನ್

ಫೀನಾಂಥ್ರಿನ್ ಒಂದು ಸಾವಯವ ಸಂಯುಕ್ತ. ಇದರ ಅಣು ಸೂತ್ರ C14H10. ಇದು ಒಂದು ಆರೋಮ್ಯಾಟಿಕ್ ಹೈಡ್ರೊಕಾರ್ಬನ್ನು. ಇದು ಕಲ್ಲಿದ್ದಲು ಟಾರಿನಲ್ಲಿ ದೊರೆಯುತ್ತದೆ. ಫೀನಾಂಥ್ರಿನ್‍ನ್ನು ವರ್ಣದ್ರವ್ಯಗಳು, ಪ್ಲಾಸ್ಟಿಕ್‍ಗಳು ಹಾಗೂ ಕೀಟನಾಶಕಗಳು, ಸ್ಫೋಟಕಗಳು ಹಾಗೂ ಔಷಧಿಗಳನ್ನು ತಯಾರಿಸಲು ಬಳಸಲಾಗುತ್ತದೆ.

ತಯಾರಿಕೆ[ಬದಲಾಯಿಸಿ]

ಟಾರನ್ನು ಆಂಶಿಕವಾಗಿ ಬಟ್ಟಿ ಇಳಿಸುವಾಗ 3000 ಸೆಂ.ಗ್ರೇ.ಯಿಂದ 4000 ಸೆಂ.ಗ್ರೇ. ವರೆಗಿನ ಅವಧಿಯಲ್ಲಿ ಶೇಖರಿಸುವ ಭಾಗದಿಂದ ಇದನ್ನು ತೆಗೆಯುತ್ತಾರೆ.

ಗುಣಗಳು[ಬದಲಾಯಿಸಿ]

ಫೀನಾಂಥ್ರೀನ್ ವರ್ಣರಹಿತ ಘನಪದಾರ್ಥ. ಇದರ ಬೆಂಜೀನ್ ದ್ರಾವಣ ನೀಲಿ ಪ್ರತಿದೀಪ್ತಿಯನ್ನು ಹೊರಸೂಸುತ್ತದೆ. ಇದರ ದ್ರವಿಸುವ ಬಿಂದು 990 ಸೆಂ.ಗ್ರೇ. ಉತ್ಕರ್ಷಣಕಾರಿಗಳೊಂದಿಗೆ ವರ್ತಿಸಿದಾಗ ಫೀನಾಂಥ್ರಕ್ವಿನೊನ್ ಉಂಟಾಗುತ್ತದೆ.

ಮಾರ್ಫೀನ್ ಮೊದಲಾದ ಅಫೀಮಿನ ಆಲ್ಕಲಾಯ್ಡ್‌ಗಳು ಮತ್ತು ಕೊಲೆಸ್ಟೆರಾಲ್ ಮೊದಲಾದ ಸ್ಟೀರಾಯ್ಡ್‌ಗಳು, ಅಣುರಚನೆಯಲ್ಲಿ ಫೀನಾಂಥ್ರೀನ್ ಬಳಗಕ್ಕೆ ಸೇರಿದವು.[೧]

ಉಲ್ಲೇಖಗಳು[ಬದಲಾಯಿಸಿ]

  1. "Phenanthrene Fact Sheet" (PDF). archive.epa.gov. U.S. Environmental Protection Agency. Retrieved 19 July 2019.

ಹೊರಗಿನ ಕೊಂಡಿಗಳು[ಬದಲಾಯಿಸಿ]