ಪ್ಲ್ಯಾಸ್ಟಿಕ್ ಸರ್ಜರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Plastic surgeon
Occupation
NamesDoctor, Medical Specialist
Activity sectorsSurgery
Description
Education requiredDoctor of Medicine

ಪ್ಲ್ಯಾಸ್ಟಿಕ್ ಶಸ್ತ್ರಕ್ರಿಯೆ ಯು ಒಂದು ವೈದ್ಯಕೀಯ ವಿಶೇಷತೆಯಾಗಿದ್ದು,ದೇಹದ ಆಕಾರ ಸರಿಪಡಿಸಲು ಮತ್ತು ಉತ್ತಮ ಕಾರ್ಯ ನಿರ್ವಹಿಸುವಂತೆ ಮಾಡುವುದೇ ಇದರ ಉದ್ದೇಶವಾಗಿದೆ. ಇದು ಪ್ರಮುಖವಾಗಿ ಸೌಂದರ್ಯ ಪಡೆಯಲು ಅಲಂಕಾರಕ್ಕಾಗಿ ಪ್ರಸಿದ್ದವಾಗಿದೆ.ಇದರಲ್ಲಿ ಹಲವಾರು ಪ್ರಕಾರಗಳಿವೆ.ಮರುನಿರ್ಮಾಣದ ಶಸ್ತ್ರಕ್ರಿಯೆ,ಕೈ ಶಸ್ತ್ರಚಿಕಿತ್ಸೆ,ಸೂಕ್ಷ್ಮ ಪ್ರಮಾಣದ ಶಸ್ತ್ರಚಿಕಿತ್ಸೆ ಅಲ್ಲದೇ ಸುಟ್ಟ ಗಾಯಗಳಿಗೆ ಈ ಚಿಕಿತ್ಸೆ ಉಪಯುಕ್ತವಾಗಿದೆ. ಇಲ್ಲಿ "ಪ್ಲ್ಯಾಸ್ಟಿಕ್ "ಎನ್ನುವ ಪದವನ್ನು ಗ್ರೀಕ್ ನಲ್ಲಿರುವ ಇದನ್ನು ಪ್ಲಾಸ್ಟಿಕೊಸ್ ಮೂಲದಿಂದ ಪಡೆಯಲಾಗಿದೆ.ಇದರ್ಥವೇನೆಂದರೆ ಮೆದುಗೊಳಿಸುವುದು ಅಥವಾ ಆಕಾರಕ್ಕೆ ತರುವುದು;ಆದರೆ ಇದು ಸಿಂಥೆಟಿಕ್ ಪಾಲಿಮರ್ ವಸ್ತುವಾಗಿರುವ ಪ್ಲ್ಯಾಸ್ಟಿಕ್ ಗೆ ಸಂಬಂಧವಿರುವುದಿಲ್ಲ.

ಇತಿಹಾಸ[ಬದಲಾಯಿಸಿ]

ವಾಲ್ಟರ್ ಯೆವೊ ಎಂಬ ಬ್ರಿಟಿಶ್ ಸೈನಿಕ ಮೊದಲ ಬಾರಿಗೆ ಪ್ಲ್ಯಾಸ್ಟಿಕ್ ಶಸ್ತ್ರಚಿಕಿತ್ಸೆಯಿಂದ ಲಾಭ ಪಡೆದವನೆಂದು ಹೇಳಲಾಗುತ್ತದೆ.ಆತನ ಶಸ್ತ್ರಚಿಕಿತ್ಸೆಗೆ ಮುಂಚಿನ ಭಾವಚಿತ್ರ (ಎಡಗಡೆ) ನಂತರ ಆತ ಚರ್ಮದ ಕಶಿ ಪಡೆದಿದ್ದು ಇದನ್ನು ಸರ್ ಹೆರಾಲ್ಡ್ ಗಿಲೆಸ್ 1917 ರಲ್ಲಿ

ಪುನರ್ನಿರ್ಮಾಣದ ಶಸ್ತ್ರಚಿಕಿತ್ಸಾ ತಂತ್ರಜ್ಞಾನಗಳನ್ನು ಭಾರತದಲ್ಲಿ 2000 [೧] BC.ಯಲ್ಲಿ ಅಳವಡಿಸಲಾಯಿತು. ಶಸ್ತ್ರಚಿಕಿತ್ಸೆಯ ಪಿತಾಮಹ ಎಂದು ಕರೆಯಲ್ಪಟ್ಟಿರುವ ಶೂಶ್ರುತಾನು ಪ್ಲ್ಯಾಸ್ಟಿಕ್ ಶಸ್ತ್ರಚಿಕಿತ್ಸೆ ಮತ್ತು ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗಾಗಿ 6 ನೆಯ BC. ಶತಮಾನದಲ್ಲಿ ಮಹತ್ತರವಾದ ಕೊಡುಗೆಯನ್ನು ನೀಡಿದ [೨] ದಾಖಲೆಗಳಿವೆ. ಶೂಶ್ರುತಾ ಮತ್ತು ಚರಕ ಅವರ ವೈದ್ಯಕೀಯ ಕಾರ್ಯಗಳನ್ನು ಸುಮಾರು 750AD.ಸಮಯದಲ್ಲಿ ಅಬ್ಬಾಸಿದ್ ಕಾಲಿಫೆಟ್ ಅವಧಿಯಲ್ಲಿ ಅರೆಬಿಕ್ ಭಾಷೆಗೆ [೩] ಅನುವಾದಿಸಲಾಯಿತು. ಈ ಅರೆಬಿಕ್ ಅನುವಾದಗಳು ಮಧ್ಯವರ್ತಿಗಳ ಮೂಲಕ ಯುರೊಪ್ ನ್ನು [೩] ಪ್ರವೇಶಿಸಿದವು. ಇಟಲಿಯಲ್ಲಿ ಸಿಸಿಲಿ ಮತ್ತು ಗಾಸ್ಪೆರೆ ತಾಗ್ಲಿಯಾಕೊಜಿ (ಬೊಲೊಗ್ನಾ )ಕುಟುಂಬದ ಬ್ರಾಂಕಾ ಪಂಗಡಗಳು ಶೂಶ್ರುತನ ಈ ತಂತ್ರಜ್ಞಾನದ ಬಗ್ಗೆ ಚೆನ್ನಾಗಿ ಕರಗತ [೩] ಮಾಡಿಕೊಂಡರು.

ನಾಶಿಕದ ದೋಷಗಳನ್ನು ಸರಿಪಡಿಸುವ ದೇಶೀಯ ಪದ್ದತಿಗಳನ್ನು ನೋಡಲು ಬ್ರಿಟಿಶ್ ವೈದ್ಯರು ಭಾರತಾದ್ಯಂತ ಪ್ರವಾಸ [೪] ಕೈಗೊಂಡಿದ್ದರು. ಭಾರತೀಯ ವೈದ್ಯ ಕುಮಾರ್ ಎಂಬುವವರು ನಾಶಿಕದ ದೋಷ ಸರಿಪಡಿಸುವ ಶಸ್ತ್ರ ಚಿಕಿತ್ಸೆ ಮಾಡಿದ್ದರ ಬಗ್ಗೆ 1794 ರ ಜಂಟಲ್ ಮನ್ಸ್ ಮ್ಯಾಗ್ಜಿನ್ ನಲ್ಲಿ ವರದಿ [೪] ಪ್ರಕಟಗೊಂಡಿತ್ತು. ಜೊಸೆಫ್ ಕಾನಸ್ಟಂಟೈನ್ ಕಾರ್ಪು ಎಂಬಾತ ಪ್ಲ್ಯಾಸ್ಟಿಕ್ ಶಸ್ತ್ರ ಚಿಕಿತ್ಸೆಯ ವಿಧಾನಗಳನ್ನು ಅರಿಯಲು ಭಾರತದಲ್ಲಿ ಆತ 20 ವರ್ಷಗಳನ್ನು [೪] ಕಳೆದ. ಕಾರ್ಪು ಪಾಶ್ಚಿಮಾತ್ಯ ಜಗತ್ತಿನಲ್ಲಿ ಮೊದಲ ದೊಡ್ಡ ಶಸ್ತ್ರಚಿಕಿತ್ಸೆಯೊಂದನ್ನು 1815 ರಲ್ಲಿ [೫] ನಡೆಸಿದ. ಶೂಶ್ರುತಾ ಸಂಹಿತಾ ದಲ್ಲಿನ ಶಸ್ತ್ರಚಿಕಿತ್ಸಾ ಉಪಕರಣಗಳು ಮುಂದೆ ಪಾಶ್ಚಿಮಾತ್ಯ ಜಗತ್ತಿಗೆ ಬರುವ ಹೊತ್ತಿಗೆ ಹಲವಾರು ಸುಧಾರಣೆಗಳನ್ನು [೫] ಕಂಡವು.

ಪ್ರಾಚೀನ ಈಜಿಪ್ತಿಯನ್ ರು ಮತ್ತು ರೋಮನ್ ರು ಕೂಡಾ ಪ್ರಸಾದನಕ್ಕಾಗಿ ಪ್ಲ್ಯಾಸ್ಟಿಕ್ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ರೊಮನ್ ರು ಸಾಧಾರಣ ತಂತ್ರಜ್ಞಾನದೊಂದಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.ಉದಾಹರಣೆಗೆ ಆಕಾರ ಕಳೆದುಕೊಂಡಿದ್ದ ಕಿವಿಗಳು,ಇದನ್ನು ಮೊದಲ ಶತಮಾನದ BC.ಯಲ್ಲಿ ಪ್ರಯೋಗ ಮಾಡಿದರು.ಅವರ ಧಾರ್ಮಿಕ ಪರಂಪರೆ ಪ್ರಕಾರ ಯಾವುದೇ ಅಂಗವನ್ನು ಛೇದಿಸುವುದು ಅವರಿಗೆ ಧರ್ಮ ಸಮ್ಮತವಲ್ಲ.ಅವರ ಎಲ್ಲ ಶಸ್ತ್ರ ಚಿಕಿತ್ಸೆಗಳು ತಮ್ಮ ಗ್ರೀಕ್ ಪೂರ್ವಿಕರು ಬರೆದಿಟ್ಟ ಸಾಹಿತ್ಯವನ್ನು ಅವಲಂಬಿಸಿವೆ. ಏನೇ ಆದರೂ ಔಲುಸ್ ಕೊರ್ನಿಲಿಯಸ್ ಸೆಲ್ಸಸ್ ಎಂಬಾತ ದೇಹದ ಜನನಾಂಗ ಮತ್ತು ತಲೆಬುರುಡೆಗೆ ಸಂಬಂಧಿಸಿದಂತೆ ಆಶ್ಚರ್ಯಕರ ಪ್ರಯೋಗಗಳನ್ನು ಮಾಡಿದ್ದು [೬] ಕಾಣುತ್ತದೆ

ಸಬುನ್ ಕುಗ್ಲುನ ಪುಸ್ತಕದಲ್ಲಿ ಮೂತ್ರಕೋಶದ ಕಾರ್ಯನಿರ್ವಹಿಸುವುದರ ಬಗೆಗಿನ 1465 ರ ಅಧ್ಯಯನವು ಇವತ್ತಿಗೂ ಬಹಳಷ್ಟು ಉತ್ತಮ ಮಾಹಿತಿಯನ್ನು ಹೊಂದಿದೆ. ಮೂತ್ರದ ಸರಾಗ ಹರಿವಿಗೆ ಅಲ್ಲಿನ ವಿಧಾನಗಳು ಹೇಗೆ ನೆರವಾಗುತ್ತವೆ ಎಂಬುದನ್ನು ವರ್ಣಿಸಲಾಗಿದೆ. ಅಲ್ಲದೇ ಸಬುಕುಗುಲು ತನ್ನ ಕೃತಿಯಲ್ಲಿ ಜನನಾಂಗದ ಸಂಕೀರ್ಣತೆಯನ್ನು ವಿವರಿಸಿ ಮತ್ತು ಅದನ್ನು ವರ್ಗೀಕರಣದ ರೂಪದಲ್ಲಿ[ಸೂಕ್ತ ಉಲ್ಲೇಖನ ಬೇಕು]ಬರೆದಿದ್ದಾನೆ. ಯುರೊಪಿನಲ್ಲಿ 15ನೆಯ ಶತಮಾನದ ಮಧ್ಯಯುಗೀನ ಸಂದರ್ಭದಲ್ಲಿ ಹೆನ್ರಿಚ್ ವೊನ್ ಫುಲದ್ಕ ಎಂಬಾತ ನಾಯಿಗಳ ಕಚ್ಚುವಿಕೆಯಿಂದ ಪೂರ್ಣ ಮೂಗೇ ಕಿತ್ತಿಹೋದರೆ ಅದನ್ನು ಬೇರೆ ಚರ್ಮದಿಂದ ದುರಸ್ತಿ ಮಾಡಲು ಸಾಧ್ಯವಿರುವುದನ್ನು ತೋರಿಸಿದನು. ಆದರೆ ಇಂತಹ ಶಸ್ತ್ರಚಿಕಿತ್ಸೆಯು ಯಾವುದೇ ಭಾಗದ್ದಾದರೂ ಅದು ಅಪಾಯಕಾರಿ ಚಿಕಿತ್ಸೆಯೇ,ಅದರಲ್ಲೂ ಮುಖ ಮತ್ತು ತಲೆಗೆ ಇದು ಬಹುಸೂಕ್ಷ್ಮ ಪ್ರಕ್ರಿಯೆಯಾಗಿದೆ.ಏನೇ ಆದರೂ ಇಂತಹ ಸಾಹಸಗಳು 19 ನೆಯ ಮತ್ತು 20ನೆಯ ಶತಮಾನದಲ್ಲಿ ಸಾಮಾನ್ಯವೆಂಬುವಂತಾದವು.ಅದುವರೆಗೆ ಇದು ತೀರ ಜವಾಬ್ದಾರಿಯದಾಗಿತ್ತು.

ಅರಿವಳಿಕೆ ನೀಡುವ ತಂತ್ರಜ್ಞಾನವು ಜಾರಿಗೆ ಬರುವ ವರೆಗೂ ಜೀವಂತ ಜೀವಕೋಶಗಳ ಶಸ್ತ್ರಹಿಕಿತ್ಸೆಯು ತುಂಬಾ ನೋವಿನಿಂದ ಕೂಡಿತ್ತು.ಬೇರೆ ರೋಗಗಳು ಬರದಂತೆ ನೋಡಿಕೊಳ್ಳಲು ಈ ಚಿಕಿತ್ಸೆ ಸಂದರ್ಭದಲ್ಲಿ ಸಾಕಷ್ಟು ಎಚ್ಚರಿಕೆ ವಹಿಸಬೇಕಾಗುತ್ತದ.ಕ್ರಿಮಿರಹಿತಗೊಳಿಸಿದ ಉಪಕರಣಗಳು ಹಾಗು ಸೋಂಕುಗಳನ್ನು ನಿಷ್ಕ್ರಿಯಗೊಳಿಸುವುದು ಇದಕ್ಕೆ ಕಾರಣವಾಗಿದೆ. ರೋಗನಿರೋಧಗಳ ಸಂಶೋಧನೆ ಮತ್ತು ಉಪಯೋಗ ಆರಂಭವಾದ ನಂತರ,ಸಲ್ಫಾ ಔಷಧಿಗಳು ಮತ್ತು ಪೆನ್ಸಿಲಿಯನ್ ಗಳ ಪರಿಚಯವಾದ ನಂತರ ಆಯ್ಕೆ ಶಸ್ತ್ರ ಚಿಕಿತ್ಸೆಯನ್ನು ಮಾಡಲು ಸಾಧ್ಯವಾಯಿತು.

ಚೊಪಾರ್ಟ್ ಎಂಬಾತ 1792 ರಲ್ಲಿ ಕುತ್ತಿಗೆ ಬಳಿ ಜೋತು ಬಿದ್ದಿದ್ದ ಚರ್ಮದಿಂದ ತುಟಿಗಳ ಮೇಲೆ ಶಸ್ತ್ರ ಚಿಕಿತ್ಸೆ ನಡೆಸಿ ಯಶಶ್ವಿಯಾದ. ಸುಮಾರು 1814ರಲ್ಲಿ ಜೊಸೆಫ್ ಕಾರ್ಪಸ್ ಎಂಬಾತ ಮಿಲಿಟರಿ ಅಧಿಕಾರಿ ಒಬ್ಬರು ವಿಷಪೂರಿತ ಪಾದರಸದ ಪರಿಣಾಮಕ್ಕೆ ತುತ್ತಾಗಿ ತಮ್ಮ ಮೂಗನ್ನೇ ಕಳೆದುಕೊಂಡಿದ್ದನ್ನು ಆತ ಚಿಕಿತ್ಸೆ ಮೂಲಕ ಸರಿಪಡಿಸಿದ. ಜರ್ಮನ್ ಶಸ್ತ್ರಚಿಕಿತ್ಸಕ ಕಾರ್ಲ್ ಫೆರ್ಡಿನಾಂಡ್ ವೊನ್ ಗ್ರೆಫೆ ಎಂಬಾತ ಮೂಗಿನ ಮೇಲೆ ಅತ್ಯಂತ ಗಂಭೀರವಾದ ಶಸ್ತ್ರ ಚಿಕಿತ್ಸೆ ನಡೆಸಿದ. ವೊನ್ ಗ್ರೆಫೆಯು ಇಟಾಲಿಯನ್ ಮಾದರಿಯನ್ನು ಸುಧಾರಣೆಗೊಳಿಸಿ,ತೋಳುಗಳಿಂದ ಚರ್ಮ ಪಡೆಯುವುದಕ್ಕಿಂತ ಜೋತು ಬಿದ್ದ ಚರ್ಮದ ಉಪಯೋಗಕ್ಕೆ ಸಲಹೆ ಮಾಡಿದ.

ಮೊದಲ ಅಮೆರಿಕನ್ ಪ್ಲ್ಯಾಸ್ಟಿಕ್ ಶಸ್ತ್ರಚಿಕಿತ್ಸಕ ಜೊನ್ ಪೀಟರ್ ಮ್ಯಾಟುವರ್ ಎಂಬಾತ ತಾನೇ ಆವಿಷ್ಕರಿಸಿದ ಉಪಕರಣಗಳ ಮೂಲಕ ಸೀಳು ತುಟಿಗಳನ್ನು ಸರಿಪಡಿಸಿದ ಮೊದಲ ಶಸ್ತ್ರಚಿಕಿತ್ಸಕ ಎನ್ನಲಾಗುತ್ತದೆ. ಸುಮಾರು 1845 ರಲ್ಲಿ ಜೊನನ್ ಫ್ರೆಡ್ರಿಚ್ ಡೆಫೆನ್ ಬ್ಯಾಚ್ ಮೂಗಿನ ಪ್ಲ್ಯಾಸ್ಟಿಕ್ ಶಸ್ತ್ರ ಚಿಕಿತ್ಸೆ ಬಗ್ಗೆ ವಿವರವಾಗಿ ಬರೆದಿದ್ದಾನೆ.ಆ ಕೃತಿಯನ್ನು ಆಪ್ ರೇಟಿವ್ ಚಿರುಗಿ ಎನ್ನಲಾಗುತ್ತದೆ,ಇದರ ಹಿಂದೆ ಶಸ್ತ್ರಚಿಕಿತ್ಸೆಯನ್ನು ಅಂಗಸೌಷ್ಟವದ ಪ್ರಕಾರ ಹೊಂದುವಂತೆ ಮಾಡುವ ಹೊಸ ಪದ್ದತಿಗೆ ನಾಂದಿ ಹಾಡಿದ.

ಅದೇ 1891 ರಲ್ಲಿ ಅಮೆರಿಕಾದ ಕಿವಿ,ಮೂಗು ಮತ್ತು ಗಂಟಲು ತಜ್ಞ ಜೊನ್ ರೊಯಿ ಎಂಬಾತ ಯುವತಿಯೊಬ್ಬಳ ಮೂಗಿನ ಹೊರಳೆ ಮೇಲ್ಭಾಗದಲ್ಲಿ ಬೆಳೆದಿದ್ದ ಹೆಚ್ಚುವರಿ ಮಾಂಸವನ್ನು ಶಸ್ರಚಿಕಿತ್ಸೆ ಮೂಲಕ ಹೊರತೆಗೆದ. ಆದರೆ 1892 ರಲ್ಲ್ ರಾಬರ್ಟ್ ವೇರ್ ಎಂಬಾತ ಛಿದ್ರಗೊಳಿಸುವ ಅದನ್ನು ಸರಿಪಡಿಸುವ (ಬಾತುಗೋಳಿ ಈ ಪ್ರಯೋಗಕ್ಕೆ ಬಳಸಲಾಯಿತು.)ಒಳಸೇರಿದ್ದ ಮೂಗಣ್ಣು ಸರಿಯಾಗಿ ಹೊಂದಿಸಲು ಮಾಡಿದ ಆತನ ಪ್ರಯೋಗ ಅಷ್ಟಾಗಿ ಯಶಸ್ವು ಕಾಣಲಿಲ್ಲ. ಜರ್ಮನಿಯ ಮೂತ್ರರೋಗ ತಜ್ಞ ಜೇಮ್ಸ್ ಇಸ್ರೇಲ್ 1896 ರಲ್ಲಿ ಮತ್ತು ಯುನೈಟೈಡ್ ಸ್ಟೇಟ್ಸ್ ನ ಜಾರ್ಜ್ ಮೊಂಕ್ಸ್ 1889 ರಲ್ಲಿ ಮೂಗಿನ ಹೊರಳೆಯ ಬದಿಯ ದೋಷಪೂರಿತ ಎಲುಬುಗಳನ್ನು ಸೂಕ್ತವಾಗಿ ಜೋಡಿಸಿ ಮರು ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿದರು. ಜರ್ಮನಿಯ ಎಲುಬುಕೀಲುತಜ್ಞ ಜಾಕೆಸ್ ಜೊಸೆಫ್ 1898 ರಲ್ಲಿ ತನ್ನ ತರಬೇತಿಯ ಅನುಭವದ ಮೇಲೆ ರಿನೊಪ್ಲ್ಯಾಸ್ಟಿಯ ಶ್ರಮವನ್ನು ಕಡಿಮೆಗೊಳಿಸುವ ಕುರಿತು ತನ್ನ ಕೃತಿಯಲ್ಲಿ ವಿವರಿಸಿದ್ದಾನೆ. ಇದೇ ಜಾಕೆಸ್ ಜೊಸೆಫ್ 1928 ರಲ್ಲಿ ನಾಸೇನ್ ಪ್ಲ್ಯಾಸ್ಟಿಕ್ ಮೂಗಿನ ಪ್ಲ್ಯಾಸ್ಟಿಕ್ ಶಸ್ತ್ರಚಿಕಿತ್ಸೆ ಮತ್ತು ಸಸ್ನ್ಸ್ಟಿಜೆ ಗೆಸಿಪ್ಲ್ಯಾಸ್ಟಿಕ್ ಗಳ ಕುರಿತು ವಿವರವಾಗಿ ಬರೆದಿದ್ದಾನೆ .

20 ನೇ ಶತಮಾನ[ಬದಲಾಯಿಸಿ]

ವಿಶ್ವದ ಮಹಾಯುದ್ದ I ರ ಸಮಯದಲ್ಲಿ ಲಂಡನ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಿವ್ಜಿಲ್ಯಾಂಡ್ ನ ಕಿವಿತಜ್ಞ ಹರಾಲ್ಡ್ ಗಿಲ್ಲಿಸ್,ಆಧುನಿಕ ಶಸ್ತ್ರಚಿಕಿತ್ಸೆ ಮೂಲಕ ಗಾಯಗಳಿಂದ ವಿಕಾರಗೊಂಡ ಸೈನಿಕರ ಮುಖಚಹರೆಗಳನ್ನು ಸರಿಪಡಿಸಿದನು. ಆತನ ಕೆಲಸಗಳು ವಿಶ್ವದ ಯುದ್ದ II ವರೆಗೂ ಆತನಲ್ಲದೇ ಆತನ ಸಂಬಂಧಿ ಮತ್ತು ಆತನ ಮಾಜಿ ಶಿಷ್ಯ ಆರ್ಚಿ ಬಾಲ್ಡ್ ಮೈಕೊಂಡ್ ಎಂಬೊಬ್ಬನಿಂದ ಬೆಳವಣಿಗೆ ಕಂಡವು. ಬಹುತೇಕ RAF ಸದಸ್ಯರು ಅದಲ್ಲದೇ ವಿಮಾನದ ಸಿಬಂದಿ ಅನಾಹುತಕ್ಕೆ ಬಲಿಯಾದರೆ ಅದನ್ನು ಸರಿಪಡಿಸಲು ಕೂಡಲೇ ಕಾರ್ಯತತ್ಪರರಾಗುತ್ತಿದ್ದರು. ಮಿಂಡೊಯ್ ನ ಸುಧಾರಣಾ ಪ್ರಯೋಗಗಳು ಆತನ ಚಿಕಿತ್ಸೆಯಿಂದಾಗಿ ಗೈನಾ ಪಿಗ್ ಕ್ಲಬ್ ನ್ನುನ್ ಸ್ಥಾಪಿಸಲು ಕಾರಣವಾದವೆನ್ನಬಹುದು. ಗಿಲ್ಲಿಸ್ ಎಂಬಾತ 1946 ರಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬಳು ಪುರುಷನಾದ ಶಸ್ತ್ರಚಿಕಿತ್ಸೆ ಪ್ಲ್ಯಾಸ್ಟಿಕ್ ಅದಕ್ಕೆ ಯಾವ ಯಾವ ನಿಯಮಳನ್ನು ಅನುಸರಿಸುತ್ತದೆಯೋ ಅದು ರಹಸ್ಯ.ಇದನ್ನು ಮೊದಲ ಬಾರಿಗೆ ದೊರೆತ ಮರು ಕಾರ್ಯವಾಗಿದೆ.

ಪ್ಲ್ಯಾಸ್ಟಿಕ್ ಶಸ್ತ್ರ ಚಿಕಿತ್ಸಾ ಪದ್ದತಿಯು 20 ನೆಯ ಶತಮಾನದಲಿ ಯುನೈಟೈಡ್ ಸ್ಟೇಟ್ಸನಲ್ಲಿ ವಿಶೇಷವಾಗಿ ಇದು ತನ್ನ ಉತ್ತಮ ಬದಲಾವಣೆಗೆ ಸಾಕ್ಷಿಯಾಗಿದೆ. ಪ್ಲ್ಯಾಸ್ಟಿಕ್ ಶಸ್ತ್ರ ಕ್ರಿಯೆಯಲ್ಲಿ ಮುಖ್ಯ ಸಂಸ್ಥಾಪರಲ್ಲೊಬ್ಬರಾದ ವಿಲರಿ ಬ್ಲೇರ್ ಎಂಬುವವರು ವಾಷಿಂಗ್ಟನ್ ಯುನ್ವರ್ಸಿಟಿನಲ್ಲಿ ಈ ಶಸ್ತ್ರ ಕ್ರಿಯೆಯ ವಿಭಾಗವನ್ನು ಸೇಂಟ್ ಲೂಯಿಸ್ ಮಿಸೌರಿ ಎಂಬಲ್ಲಿ ವಿಶೇಷತೆ ಎಂಬಂತೆ ಸಾಧಿಸಿ ತೋರಿದ್ದರು. ವಿಲೆರಿಯು ತನ್ನ ಇತರೆ ಚಿಕಿತ್ಸಾ ವಿಭಾಗದಂತೆ ಮೊದಲ ವಿಶ್ವಯುದ್ದ I ದಲ್ಲಿ ಮುಖದ ಗಾಯಗಳಿಂದ ನೊಂದ ಸೈನಿಕರಿಗೆ ಅಗತ್ಯವಿದ್ದ ಸಂಕೀರ್ಣ ಶಸ್ರ್ತಚಿಕಿತ್ಸೆಯನ್ನು ನಿರ್ವಹಿಸಿ ಸಫಲರಾದರು.ಅಲ್ಲದೇ ಅವರ "ರಿಕನ್ಸ್ಟ್ರಕ್ಶಿವ್ ಸರ್ಜರಿ ಆಫ್ ಫೇಸ್ " ಇಂಬ ಕೃತಿ ಇಂದಿಗೂ ಮುಖ ಚಹರೆಯ ಶಸ್ತ್ರಚಿಕಿತ್ಸೆ ಬಗ್ಗೆ ಉತ್ತಮ ಮಟ್ಟದ ಪ್ರಕ್ರಿಯೆಗಳನ್ನು ಒದಗಿಸುತ್ತದೆ.

ವಿಚಿತ್ರವೆಂದರೆ ದಂತ ವಿಜ್ಞಾನದ ಯಾವುದೇ ಹಿನ್ನಲೆಯಿಲ್ಲದೇ ಅವರು ಅಮೆರಿಕನ್ ಅಸೊಸಿಯೇಶನ್ ಆಫ್ ಒರಲ್ ಅಂಡ್ ಪ್ಲ್ಯಾಸ್ಟಿಕ್ ಸರ್ಜರಿ ಸಂಸ್ಥೆಗೆ ಆಯ್ಕೆಯಾದರು,(ನಂತರ ಈ ಸಂಸ್ಥೆಯು ವಿಭಜನೆಗೊಂಡು ಅಮೆರಿಕನ್ ಅಸೊಶಿಯೇಶನ್ ಆಫ್ ಪ್ಲ್ಯಾಸ್ಟಿಕ್ ಸರ್ಜನ್ಸ್ ಅಂಡ್ ದಿ ಅಮೆರಿಕನ್ ಅಸೊಸಿಯೇಶನ್ ಆಫ್ ಒರಲ್ ಮ್ಯಾಕ್ಸಿಲೊಫೇಸಿಯಲ್ ಸರ್ಜನ್ಸ್ ಎಂದು ಮರುನಾಮಕರಣಗೊಳಿಸಲಾಯಿತು)ನಂತರ ಆತ ಶಸ್ತ್ರಚಿಕಿತ್ಸೆ ಕುರಿತು ಪಾಠ ಹೇಳಲು ಆರಂಭಿಸಿದ,ಅವನ ಗರಡಿಯಲ್ಲಿ ಬೆಳದವರು ಜಗತ್ಪ್ರಸಿದ್ದ ಸರ್ಜನರಾದರು.

ತಂತ್ರಜ್ಞಾನಗಳು ಮತ್ತು ಪ್ರಕ್ರಿಯೆಗಳು[ಬದಲಾಯಿಸಿ]

ಪ್ಲ್ಯಾಸ್ಟಿಕ್ ಶಸ್ತ್ರಚಿಕಿತ್ಸೆಯಲ್ಲಿ ಚರ್ಮದ ಕೋಶಗಳ ವರ್ಗಾವಣೆಯು (ಚರ್ಮ ಹೊಂದಾಣಿಕೆ)ಬಹು ಸಾಮಾನ್ಯವಾದ ಪ್ರಕ್ರಿಯೆಯಾಗಿದೆ. ಈ ಹೊಂದಾಣಿಕೆಯ ಚರಮವನ್ನು ಪಡೆಯುವರಿದ ಅಥವಾ ದಾನಿಗಳಿಂದ ಪಡೆಯಬಹುದು:

ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಅತ್ಯಂತ ಕಾಳಜಿಪೂರ್ವಕವಾಗಿ ಕೋಶಗಳನ್ನು ಕತ್ತರಿಸಿದರೆ ಈ ಪ್ರಕ್ರಿಯೆಯು ಅತ್ಯಂತ ಸರಳವಾಗಿರುತ್ತದೆ.ಸರಿಯಾದ ಕೋಶಕ್ಕೆ ಸರಿಯಾದ ಹೊಂದಾಣಿಕೆ,ಸೂಕ್ತ ಜೋಡಣೆ ಮತ್ತು ಆಯಾ ಸಂದರ್ಭಕ್ಕೆ ಅನುಗುಣವಾಗಿ ದೊರೆಯುವ ವಸ್ತ್ರುಗಳನ್ನು ಉಪಯೋಗಿಸಿದರೆ ಅಲ್ಲಿನ ಗಾಯಗಳೂ ಕೂಡ ಬೇಗ ಗುಣವಾಗಿ ಪ್ಲ್ಯಾಸ್ಟಿಕ್ ಶಸ್ತ್ರಚಿಕಿತ್ಸೆ ಯಶಸ್ಸಾಗುತ್ತದೆ.

ಮರುರಚನಾ ಶಸ್ತ್ರಕ್ರಿಯೆ[ಬದಲಾಯಿಸಿ]

ಸುಟ್ಟ ಗಾಯಗಳಿಂದ ಸಕ್ರಿಯ ಅಂಗಾಂಶಗಳಿಗೆ ಹಾನಿಯಾದಾಗ ಅವುಗಳನ್ನು ಪುನಃಶ್ಚೇತನಗೊಳಿಸಲು ಮರುರಚನಾ ಶಸ್ತ್ರಕ್ರಿಯೆಯ ಅಗತ್ಯವಿದೆ.ಅಪಘಾತದ ಗಾಯಗಳು,ಉದಾಹರಣೆಗೆ ಮುಖದ ಎಲುಬುಗಳಿಗೆ ಏಟು ಬಿದ್ದದ್ದು,ಮುರಿದದ್ದು;ಎಲುಗಳಲ್ಲಿನ ಸ್ಥಿಸ್ಥಾಪಕತ್ವದ ಸೀಳುವಿಕೆ,ಸೋಂಕು ಮತ್ತು ರೋಗ;ಅರ್ಬುದ ರೋಗ ಅಥವಾ ಕ್ಯಾನ್ಸರ್ ಗೆಡ್ಡೆಗಳು ಇವುಗಳಲ್ಲಿ ಮರುರಚನಾ ಸಶ್ಸ್ತ್ರಕ್ರಿಯೆ ಅನುಕೂಲವಾಗುತ್ತದೆ. ಅಂಗಾಂಶಗಳ ಮರುರಚನಾ ಶಸ್ತ್ರಚಿಕಿತ್ಸೆಯನ್ನು ಅವುಗಳ ಕಾರ್ಯಚಟುವಟಿಕೆಯನ್ನು ಚುರುಕುಗೊಳಿಸಲು ಮಾಡಿದರೂ ಇದು ಒಟ್ಟಾರೆ ಸಾಮಾನ್ಯ ನೋಡುವ ಅಂದವನ್ನೂ ಹೆಚ್ಚು ಮಾಡುತ್ತದೆ. ಚರ್ಮದ ಕಸಿ ಜೋಡಣಾ ಪ್ಲ್ಯಾಸ್ಟಿಕ್ ಶಸ್ತ್ರಚಿಕಿತ್ಸೆ ಮತ್ತು ಇತರೆ ಅಂಗಾಂಶಗಳ ಮರುಹೊಂದಾಣಿಕೆಯ ಕ್ಷೇತ್ರದಲ್ಲಿ ಹಲವಾರು ಅಡಚಣೆಗಳಿವೆ,ಅಥವಾ "ಕಿವಿ,ಮೂಗು ಮತ್ತು ಗಂಟಲು"ಶಸ್ತ್ರಚಿಕಿತ್ಸೆ ಕ್ಷೇತ್ರದಲ್ಲಿ ವಿಭಿನ್ನತೆ ಕಾಣುತ್ತದೆ.

ನೌಕಾದಳದ ವೈದ್ಯರು 21-ವರ್ಷ ವಯಸ್ಸಿನ ಯುವಕನ ಮೇಲೆ ಮರುರಚನಾ ಶಸ್ತ್ರಚಿಕಿಸೆ ನಡೆಸಿದರು.

ಪ್ರಮುಖ ಪುನರ್ರಚನಾ ಪ್ರಕ್ರಿಯೆಗಳೆಂದರೆ ಗೆಡ್ಡೆ ತೆಗೆದು ಹಾಕುವುದು,ಲೇಸರೀಕರಣದ ಮೂಲಕ ದುರಸ್ತಿ,ಕಪ್ಪು ಪಟ್ಟೆಗಳ ತೆಗೆದು ಹಾಕುವುದು,ಕೈ ಶಸ್ತ್ರಚಿಕಿತ್ಸೆ ಮತ್ತು ಸ್ತನಗಳ ಗಾತ್ರ ಕಡಿತಗೊಳಿಸುವುದು ಇತ್ಯಾದಿ. ಅಮೆರಿಕನ್ ಸೊಸೈಟಿ ಆಫ್ ಪ್ಲ್ಯಾಸ್ಟಿಕ್ ಸರ್ಜನ್ಸ್ ಅವರ ಪ್ರಕಾರ ಮಹಿಳೆಯರ ಸ್ತನಗಳ ಗಾತ್ರ ಕಡಿಮೆಗೊಳಿಸುವ ಪ್ರಮಾಣವನ್ನು 2007 ರ ಹೊತ್ತಿಗೆ ಶೇಕಡಾ ಎರಡರಷ್ಟು ಹೆಚ್ಚಳ ಕಂಡಿದೆ. ಪುರುಷರ ಸ್ತನ ಗಾತ್ರ ಕಡಿಮೆ ಮಾಡುವ ಪ್ರಮಾಣವು ಇದೇ ವರ್ಷ ಶೇಕಡಾ 7 ರಷ್ಟು ಹೆಚ್ಚಳ ಕಂಡಿದೆ. ಇನ್ನು ಕೆಲವು ಸಾಮಾನ್ಯ ಮರುರಚನಾ ಶಸ್ತ್ರಕ್ರಿಯೆಯ ಪ್ರಕ್ರಿಯೆಯೆಂದರೆ ಸ್ತನಗಳನ್ನು ತೆಗೆದು ಹಾಕಿದ ನಂತರ ಸ್ತನಗಳ ಮರುರಚನೆ,ವಿವಿಧ ಕೋಶಗಳ ರಚನೆ ಸೀಳು ತುಟಿ ಮತ್ತು ಅಂಗುಳುದ ಶಸ್ತ್ರಚಿಕಿತ್ಸೆ,ಸುಟ್ಟುಗಾಯಗಳಾದವರಿಗೆ ಬೇರೆ ಅಂಗದ ಜೋಡಣೆ ಮತ್ತು ಪ್ರತ್ಯೇಕ ಕಿವಿ ರಚಿಸಿ ಕಾರ್ಯಾರಭಗೊಳಿಸುವುದು ಮುಖ್ಯವಾದವುಗಳು

ಶಸ್ತ್ರ ಚಿಕಿತ್ಸೆ ವೇಳೆಯಲ್ಲಿ ದೋಷಪೂರಿತ ಅಂಗಾಂಶದ ಕಸಿಗೆ ಪ್ಲ್ಯಾಸ್ಟಿಕ್ ಶಸ್ತ್ರಚಿಕಿತ್ಸಕರು ಸೂಕ್ಷ್ಮಶಸ್ತ್ರಚಿಕಿತ್ಸೆಗಳನ್ನು ಕೈಗೊಂಡು ಈ ಅಂಗಾಂಶಗಳನ್ನು ವರ್ಗಾಯಿಸುವರು. ಚರ್ಮದ ಜೋತು ಬೀಳುವಿಕೆ,ಮಾಂಸಖಂಡದ ಭಾಗ,ಎಲುಬು,ಕೊಬ್ಬು ಅಥವಾ ಇತ್ಯಾದಿಗಳನ್ನು ದೇಹದ ಬೇಡವಾದ ಭಾಗದಿಂದ ಸರಿಹೊಂದಾಣಿಕೆ ಮಾಡಬಹುದು

ಪ್ರಸಾದನ ಶಸ್ತ್ರಚಿಕಿತ್ಸೆ[ಬದಲಾಯಿಸಿ]

ಪ್ರಸಾದನದ ಅಥವಾ ಅಂಗಸೌಷ್ಟವದ ಶಸ್ತ್ರಚಿಕಿತ್ಸೆಯು ಇರುವ ಅಂದವನ್ನು "ಇನ್ನಷ್ಟು ಹೆಚ್ಚಿಸುವುದು",ಇದರಲ್ಲಿ ತಾಂತ್ರಿಕ ಮತ್ತು ವೈದ್ಯಕೀಯ ತಂತಜ್ಞಾನವನ್ನು ಬಳಸಲಾಗುತ್ತದೆ.ಸಾಮಾನ್ಯವಾದ ಶರೀರದ ಅಂದ ಕಾಯ್ದುಕೊಳ್ಳುವುದು,ಅದನ್ನು ಬಹುಕಾಲ ಕಾಯ್ದುಕೊಳ್ಳುವುದು ಇದರ ಉದ್ದೇಶವಾಗಿದೆ.

ಸುಮಾರು 2006 ರಲ್ಲಿ ಯುನೈಟೆಡ್ ಸ್ಟೇಟ್ಸ್ ಒಂದರಲ್ಲಿಯೇ ಅಂದಾಜು 11 ದಶಲಕ್ಷ ಪ್ರಸಾದನದ ಪ್ರಕ್ರಿಯೆಗಳು ವರದಿಯಾಗಿವೆ. ಈ ಶತಮಾನದ ಆರಂಭದಿಂದ ಈ ತೆರನಾದ ಪ್ರಸಾದನದ ಸಂಬಂಧಪಟ್ಟ ಶಸ್ತ್ರ ಚಿಕಿತ್ಸೆಗಳು ಸದ್ಯ ಶೇಕಡಾ 50ಕ್ಕೂ ಹೆಚ್ಚಿವೆ. ಸುಮಾರು 2007 ರಲ್ಲಿ ಅಂದಾಜು 12 ದಶಲಕ್ಷ ಪ್ರಸಾದನದ ಪ್ರಕ್ರಿಯೆಗಳು ವರದಿಯಾಗಿವೆ;ಅದರಲ್ಲಿ ಐದು ಸಾಮಾನ್ಯವಾದುವುಗಳೆಂದರೆ,ಸ್ತನಗಳ ಗಾತ್ರಗಳ ಹೆಚ್ಚು ಕಡಿಮೆ,ತುಟಿಗಳ ಸಮಜೋಡಣೆ,ಮೂಗಿನ ಹೊರಳೆಗಳ ಶಸ್ತ್ರ ಚಿಕಿತ್ಸೆ,ಕಣ್ಣಿನ ರೆಪ್ಪೆ ಶಸ್ತ್ರಚಿಕಿತ್ಸೆ ಮತ್ತು ಉದರಭಾಗದ ಸರಿಪಡಿಸುವಿಕೆಯ ಪ್ಲ್ಯಾಸ್ಟಿ ಎನ್ನಬಹುದು. ಅಂಗಸೌಷ್ಟವದ, ಪ್ರಸಾದನದ ಪ್ರಕ್ರಿಯೆಗಳು U.S.ನಲ್ಲಿ ಜನಾಂಗೀಯ ಮತ್ತು ವರ್ಣಬೇಧವನ್ನು ದಾಟಿ ಅಧಿಕಗೊಳ್ಳುತ್ತಿವೆ;ಬಹುಮುಖ್ಯವಾಗಿ ಅಫ್ರಿಕನ್ -ಅಮೆರಿಕನ್ಸ್ ಮತ್ತು ಹಿಸ್ಪಾನಿಕ್ ಅಮೆರಿಕನ್ಸ್ ಹಾಗು ಕಾಸೇಸಿಯನ್ ಅಮೆರಿಕನ್ ರ ನಡುವೆ ಇದು ಸಾಮಾನ್ಯವಾಗುತ್ತಿದೆ. ಯುರೊಪ್ ಯೊಂದರಲ್ಲೇ ಪ್ರಸಾದನ ಶಸ್ತ್ರಚಿಕಿತ್ಸೆಯಿಂದ ಒಟ್ಟು $2.2 ಬಿಲಿಯನ್ ವಹಿವಾಟು ನಡೆಯುತ್ತಿದ್ದು ಇದು ಜಗತ್ತಿನಲ್ಲೇ ಎರಡನೆಯ ಅತಿ ದೊಡ್ಡ [೭] ಮಾರುಕಟ್ಟೆಯಾಗಿದೆ. ಪ್ರಸಾದನ ಶಸ್ತ್ರಚಿಕಿತ್ಸೆಯು ಇಂದು ಯುನೈಟೆಡ್ ಕಿಂಗಡಮ್ ,ಫ್ರಾನ್ಸ್ ಮತ್ತು ಜರ್ಮನಿಗಳಲ್ಲಿ ಅತಿ ಸಾಮಾನ್ಯ ಪ್ರಕ್ರಿಯೆಯಾಗಿದೆ.

ಬಹುತೇಕ ಅಂಗಸೌಷ್ಟವ/ಪ್ರಸಾದನ ಪ್ರಕ್ರಿಯೆಗಳೆಂದರೆ:

ಉಪ-ವಿಶೇಷತೆಗಳು[ಬದಲಾಯಿಸಿ]

ಪ್ಲ್ಯಾಸ್ಟಿಕ್ ಶಸ್ತ್ರಚಿಕಿತ್ಸೆಯು ವಿಶಾಲ ವ್ಯಾಪ್ತಿಯನ್ನು ಹೊಂದಿದ್ದು ಇದನ್ನು ಮತ್ತೆ ಉಪವಿಭಾಗಗಳಾಗಿ ವಿಂಗಡಿಸಬಹುದು. ಪ್ಲ್ಯಾಸ್ಟಿಕ್ ಶಸ್ತ್ರಚಿಕಿತ್ಸೆಯ ತರಬೇತಿ ಮತ್ತು ಅದನ್ನು ಅಮೆರಿಕನ್ ಬೋರ್ಡ್ ಆಫ್ ಪ್ಲ್ಯಾಸ್ಟಿಕ್ ಸರ್ಜರಿಯು ತನ್ನ ಸಮ್ಮತಿಯನ್ನು ಒಳಗೊಂಡಿರುತ್ತದೆ,ಇದೂ ಅಲ್ಲದೇ ಈ ಕೆಳಗಿನ ಸ್ನಾತಕಕೋತರವನ್ನೂ ಒಳಗೊಂಡಿರಬೇಕು:

ಬರ್ನ್!

ಸುಟ್ಟ ಗಾಯಗಳ ಶಸ್ತ್ರಚಿಕಿತ್ಸೆಯು ಸಾಮಾನ್ಯವಾಗಿ ಎರಡು ಹಂತಗಳಲ್ಲಿ ನಡೆಯುತ್ತದೆ. ಸುಟ್ಟ ತಕ್ಷಣದಿಂದಲೇ ತೀವ್ರತರವಾದ ಶಸ್ತ್ರಚಿಕಿತ್ಸಾ ಪ್ರಕ್ರಿಯೆಗೆ ಮುಂದಾಗಬೇಕಾಗುತ್ತದೆ. ಸುಟ್ಟ ಗಾಯಗಳ ಮರುರಚನಾ ಶಸ್ತ್ರಚಿಕಿತ್ಸೆಯು ಸುಟ್ಟಗಾಯಗಳು ವಾಸಿಯಾದ ನಂತರ ನಡೆಯುತ್ತದೆ. ಮರುರಚನಾ ಶಸ್ತ್ರಕ್ರಿಯೆಯೇ ಪ್ಲ್ಯಾಸ್ಟ್ಕಿಕ್ ಶಸ್ತ್ರಚಿಕಿತ್ಸೆಯನ್ನು ಒಳಗೊಂಡಿರುತ್ತದೆ.

ಸೌಂದರ್ಯವರ್ಧಕ

ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆಯು ಪ್ಲ್ಯಾಸ್ಟಿಕ್ ಶಸ್ತ್ರಚಿಕಿತ್ಸೆಯ ಬಹುಮುಖ್ಯವಾಗಿದೆ. ಪ್ಲ್ಯಾಸ್ಟಿಕ್ ಶಸ್ತ್ರಚಿಕಿತ್ಸಕರು ಎಲ್ಲಾ ಮರುರಚನಾ ಶಸ್ತ್ರಚಿಕಿತ್ಸೆಯಲ್ಲಿ ಪ್ರಸಾದನ ಶಸ್ತ್ರಕ್ರಿಯೆಯ ತತ್ವಗಳನ್ನೇ ಪಾಲಿಸುತ್ತಾರೆ.ಇದರಿಂದ ಒಟ್ಟಾರೆ ಚರ್ಮದ ಅಂದವನ್ನು [೯] ಪರಿಗಣಿಸಲಾಗುತ್ತದೆ.

ಮುಖಸೌಂದರ್ಯದ ಪ್ರಕ್ರಿಯೆ

ಕ್ರ್ಯಾನಿಯೊಫೇಸಿಯಲ್ ಸರ್ಜರಿಯನ್ನು ಪ್ರೌಢ ಮತ್ತು ಬಾಲಕರ ಶಸ್ತ್ರಚಿಕಿತ್ಸೆ ಎಂಬೆರಡು ವಿಭಾಗಗಳಲ್ಲಿ ವಿಂಗಡಿಸಬಹುದು. ಪಿಡಿಯಟ್ರಿಕ್ ಕ್ರ್ಯಾನಿಫೇಸಿಯಲ್ ಶಸ್ತ್ರಚಿಕಿತ್ಸೆಯು ಸಾಮಾನ್ಯವಾಗಿ ಮುಖದ ಸುತ್ತಲಿನ ಎಳೆಯದಾದ ಸ್ನಾಯುಗಳ ಸರಿಹೊಂದಿಸಲು ಮಾಡಲಾಗುತ್ತದೆ,ಅಂದರೆ ಅತ್ಯಂತ ಮೃದು ಸ್ನಾಯುಗಳು ಉದಾಹರಣೆಗೆ ಸೀಳು ತುಟಿ ಮತ್ತು ಮೃದ್ವಂಗಿಗಳು ಕ್ರ್ಯಾನಿಯೊಸ್ಟೊಯ್ಸಿಸ್ ಮತ್ತು ಪಿಡಿಯಾಟ್ರಿಕ್ ಮೂಳೆ ಮುರಿತಗಳನ್ನು ಸರಿ ಮಾಡುವ ವಿಧಾನವಾಗಿದೆ. ಪ್ರೌಢ ಪದ್ದತಿಯ ಕ್ರ್ಯಾನಿಯೊಫೇಸಿಯಲ್ ಶಸ್ತ್ರಚಿಕಿತ್ಸೆಯು ಬಹುತೇಕ ಮೂಳೆ ಮುರಿತ ಮತ್ತು ದ್ವೀತಿಯ ಹಂತದ ಶಸ್ತ್ರಚಿಕಿತ್ಸೆ ಒಳಗೊಂಡಿರುತ್ತದೆ.(ಅಂದರೆ ದವಡೆ ಮೂಳೆಯ ಮರುರಚನೆ)ಇದರ ಶಸ್ತ್ರಚಿಕ್ಕ್ತ್ಸೆಯು ಇತರೆ ಪ್ರಕ್ರಿಯೆಯಂತೆ ನಡೆಯುತ್ತದೆ. ಎಲ್ಲಾ ಶಸ್ತ್ರಚಿಕಿತ್ಸೆಗಳ ತರಬೇತಿಗಳಲ್ಲಿ ಕ್ರ್ಯಾನಿಯೊಫೇಸಿಯಲ್ ಸರ್ಜರಿ ಪ್ರಮುಖ ಪಾತ್ರ ವಹಿಸುತ್ತದೆ.ಕ್ರ್ಯಾನಿಯೊಫೇಸಿಯಲ್ ಫೆಲೊಶಿಪ್ ನೊಂದಿಗೆ ಹೆಚ್ಚುವರಿ ತರಬೇತಿ ಪಡೆದು ಇದರಲ್ಲಿ ಪ್ರಾಮುಖ್ಯತೆ ಸಾಧಿಸಬಹುದಾಗಿದೆ.

ಕೈ

ಕೈ ಶಸ್ತ್ರಚಿಕಿತ್ಸೆಯ ವಿಧಾನವು ತೀವ್ರತರ ಗಾಯಗಳು ಮತ್ತು ಬಹುಕಾಲದ ಕೈಗೆ ತಗುಲಿದ ಗಾಯಗಳಿಂದ ಅಥವಾ ಮುಂಗೈಗೆ ಆದ ಪೆಟ್ಟುಗಳ ದುರಸ್ತಿಗೆ ಇದನ್ನು ನಡೆಸಲಾಗುತ್ತದೆ.ಕೈ ಅಥವಾ ಸಮೀಪದ ಅಂಗಗಳಿಗೆ ಗಾಯಗಳಾದಾಗ ಅವುಗಳನ್ನು ಸೂಕ್ತ ಆಕಾರಕ್ಕೆ ತರಲಾಗುತ್ತದೆ.(ಉದಾಹರಣೆಗೆ ಬ್ರಾಚಿಲ್ ಪ್ಲೆಸ್ಕಿಸ್ ಗಾಫ್ಯಗಳು ಅಥವಾ ಎಲುವಿನ ಸಂದಿ ಮಟ್ಟದ ಗಾಯದ ಲಕ್ಷಣ) ಕೈ ಶ್ಸಸ್ತ್ರಚಿಕಿತ್ಸೆ ಕೂಡಾ ಪ್ಲ್ಯಾಸ್ಟಿಕ್ ಶಸ್ತ್ರಚಿಕಿತ್ಸೆಯ ಪ್ರಮುಖವಾದ ಭಾಗವಾಗಿದೆ.ಇದಲ್ಲದೇ ಮೈಕ್ರೊ ಸರ್ಜಾರಿ ಕೂಡಾ ಅತ್ಯಂತ ಸೂಕ್ಷ್ಮ ಶಸ್ತ್ರಚಿಕಿತ್ಸೆಯಲ್ಲಿ ಅಗತ್ಯವಾಗಿ ಬೇಕಾಗುತ್ತದೆ. ಬಹುತೇಕ ಕೈ ಶಸ್ತ್ರಚಿಕಿತ್ಸಕರು ಹ್ಯಾಂಡ್ ಸರ್ಜರಿಯಲ್ಲಿ ಒಂದು ಸಂಪೂರ್ಣ ಫೆಲೊಶಿಪ್ ನ್ನು ಬಯಸುತ್ತಾರೆ. ಈ ಕೈ ಶಸ್ತ್ರ ಚಿಕಿತ್ಸಾ ಕ್ಷೇತ್ರವು ಬಹಳಷ್ಟು ಮೂಳೆರೋಗ ಶಸ್ತ್ರತಜ್ಞರಿಂದ ನಡೆಸಲ್ಪಡುತ್ತದೆ,ಅಲ್ಲದೇ ಸಾಮಾನ್ಯ ಶಸ್ತ್ರಚಿಕಿತ್ಸಕರು ಇದನ್ನು ನೆರವೇರಿಸುತ್ತಾರೆ.(ಹ್ಯಾಂಡ್ ಸರ್ಜನ್ ನೋಡಿ) ಕೆಲವು ಬಾರಿ ಸೂಕ್ಷ್ಮ ಕೈಗಳ ಮೇಲೆ ಶಸ್ತ್ರಚಿಕಿತ್ಸೆ ನಡೆದಾಗ ಅದು ಮುಂದೆ ಗೆರೆ ಅಥವಾ ಮಡಿಕೆಗಳನ್ನು ಬಿಡುವ ಸಾಧ್ಯತೆ ಇದೆ ಇದರಿಂದ ಅದರ ಕ್ರಿಯೆ ಮತ್ತು ಪ್ರಕ್ರಿಯೆಗಳು ಸಂದರ್ಭಕ್ಕನುಗುಣವಾಗಿ ನಡೆಯುವಂತೆ ನೋಡಬೇಕಾಗಿದೆ.

ಮೈಕ್ರೊ

ಮೈಕ್ರೊ ಸರ್ಜರಿ ಎಂದರೆ ಸಾಮಾನ್ಯವಾಗಿ ಕಳೆದು ಹೋದ ಅಂಗಾಂಶಗಳನ್ನು ಬೇರೆ ಭಾಗದಿಂದ ಪಡೆದು ಅದನ್ನು ಮರುಹೊಂದಾಣಿಕೆ ಮಾಡುವ ಕ್ರಿಯೆಯಾಗಿದೆ.ಇದರ ಮೂಲಕ ಅಂಗಾಂಶಗಳನ್ನು ಜೋಡಿಸಿ ಸೂಕ್ತ ರಕ್ತ ಪರಿಚಲನೆಗೆ ದಾರಿ ಮಾಡಿಕೊಡಲಾಗುತ್ತದೆ. ಇದರಲ್ಲಿ ಜನಪ್ರಿಯ ಉಪವಿಭಾಗಗಳೆಂದರೆ ಸ್ತನ ಮರುಜೋಡಣೆ,ಕತ್ತು ಮತ್ತು ತಲೆ ಮರುರಚನೆ,ಕೈ ಶಸ್ತ್ರಚಿಕಿತ್ಸೆ/ಮರುಅಂಗಾಂಗ ಜೋಡಣೆ ಮತ್ತು ಬ್ರಾಚಿಯಲ್ ಪ್ಲೆಕ್ಶಿಸ್ ಸರ್ಜರಿ ಇತ್ಯಾದಿ ಸೇರಿವೆ.

ಪೆಡಿಯಾಟ್ರಿಕ್

ಪ್ರೌಢರಿಗಿಂತ ಮಕ್ಕಳ ವೈದ್ಯಕೀಯ ಸಮಸ್ಯೆಗಳು ಬಹುತೇಕ ವಿಭಿನ್ನವಾಗಿರುತ್ತವೆ.ಅವುಗಳು ದೊಡ್ಡವರಿಗಿಂತ ವಿಚಿತ್ರ ಅನುಭವಕ್ಕೆ ಒಳಗಾಗುತ್ತಾರೆ. ಕೆಲವು ಹುಟ್ಟುದೋಷಗಳನ್ನು ಅಥವಾ ಅಂತಹ ಲಕ್ಷಣಗಳನ್ನು ಮಕ್ಕಳಿದ್ದಾಗಲೇ ಸರಿಯಾಗಿ ಸರಿಪಡಿಸಲು ಸಾಧ್ಯವಿದೆ,ಪಿಡಿಯಾಟ್ರಿಕ್ ಪ್ಲ್ಯಾಸ್ಟಿಕ್ ಸರ್ಜನ್ ರು ಇಂತಹ ದೋಷಗಳಿಗೆ ಸುಲಭವಾಗಿ ಚಿಕಿತ್ಸೆ ನೀಡಲು ಸಾಧ್ಯವಿದೆ. ಪಿಡಿಯಾಟ್ರಿಕಗಳು ಸಾಮಾನ್ಯವಾಗಿ ಕ್ರ್ಯಾನಿಯೊಫೇಸಿಯಲ್ ದೋಷಗಳು,ಸೀಳು ತುಟಿ ಮತ್ತು ಕೈ ಆಕಾರ ಮತ್ತು ಕೈಯನ ಅಸಂಬಂಧ ಬೆಳವಣಿಗೆಯನ್ನು ತಡೆಯಬಹುದು.

ಪ್ಲ್ಯಾಸ್ಟಿಕ್ ಸರ್ಜರಿಯ ಗೀಳು[ಬದಲಾಯಿಸಿ]

ಪ್ರಸಾದನಗಳ ಕುರಿತಾದ ಮಾಧ್ಯಮಗಳಲ್ಲಿನ ಭರಾಟೆಯ ಪ್ರಚಾರ ಮತ್ತು ಸೆಲೆಬ್ರಟಿಗಳು ಇದಕ್ಕೆ ಮುಗಿ ಬೀಳುತ್ತಿರುವುದು (ಸಿನೆಮಾ,ಕ್ರಿಕೆಟ್ ತಾರೆಯರು,ಉನ್ನತವರ್ಗದ ಶ್ರೀಮಂತರು) ಇತರರೂ ಇದರ ಗೀಳು ಹಚ್ಚಿಕೊಂಡಿದ್ದರಿಂದ ಪ್ಲ್ಯಾಸ್ಟಿಕ್ ಶಸ್ತ್ರಚಿಕಿತ್ಸೆಯು ಹೆಚ್ಚು ಜನಪ್ರಿಯಗೊಳ್ಳುತ್ತಿದೆ. ಯಾರಿಗೆ ತಮ್ಮ ವೃತ್ತಿ ಜೀವನದಲ್ಲಿ ವೇತನದ ಮೇಲೆ ಅವಲಂಬಿತವಾಗಿಲ್ಲವೋ ಅವರು ಇದಕ್ಕಾಗಿ ಸಾಲವನ್ನೂ ಮಾಡುತ್ತಾರೆ.ಅವರು ಒಟ್ಟು $83,000 ಹಣವನ್ನು 14 ಶಸ್ತ್ರಚಿಕಿತ್ಸೆಗಳ ಮೇಲೆ ವೆಚ್ಚ [೧೦] ಮಾಡುತ್ತಾರೆ.

ಏನೆಯಾದರೂ ಮಾಧ್ಯಮಗಳು ಮತ್ತು ಜಾಹಿರಾತುಗಳು ಎಷ್ಟೇ ಆಕರ್ಷಿಸಿದರೂ ಈ ಪ್ಲ್ಯಾಸ್ಟಿಕ್ ಶಸ್ತ್ರಚಿಕಿತ್ಸೆಯು ಮಾನಸಿಕ ಅಸಮತೋಲನಕ್ಕೂ ಸಹ ಒಮ್ಮೊಮ್ಮೆ ತನ್ನ ಕೊಂಡಿಯನ್ನು ಬೆಸೆಯುತ್ತದೆ,ಇದರ ಬಗೆಗಿನ ಗೀಳು ವಯಸ್ಸಾದಂತೆ ಆಸೆಗಳು ಮೊದಲಿನಂತೆ ಉಳಿಯದಾದಾಗ ಮನುಷ್ಯ ಇದರೆಡೆಗೆ ವಾಲುತ್ತಾನೆಂದೂ ತಜ್ಞರು [೧೧] ಹೇಳುತ್ತಾರೆ. ದೈಹಿಕ ನೈಸರ್ಗಿಕ ಬದಲಾವಣೆಗೆ ಒಗ್ಗಿಕೊಳ್ಳದ ಕೆಲವರು ತಮ್ಮ ಶರೀರವನ್ನು ಚಾಕುವಿನಿಂದ ಕತ್ತರಿಸಿ ಅದಕ್ಕೆ ಸರಿಯಾದ ಆಕಾರ ಕೊಡುವ ಹುಚ್ಚು ಹವ್ಯಾಸಕ್ಕೆ ಬೀಳುತ್ತಾರೆ,ಅದು ಅವರಿಗೆ ಭೌತಿಕ ಶರೀರದ ಪರಿಪೂರ್ಣತೆ ತರುತ್ತದೆ ಎಂಬ ಭ್ರಮೆ ಮೂಡಿಸುತ್ತದೆ. ಇವರಲ್ಲಿ ತಮ್ಮ ಅಂಗಸೌಷ್ಟವದ ಬಗ್ಗೆ ಇರುವ ಗೀಳು ಇಂಥ ಸಂದರ್ಭಗಳಲ್ಲಿ ಅತಿಯಾಗಿ ಜೀವಕ್ಕೂ ಮುಳುವಾಗಬಹುದು.

ಹಲವಾರು ವೈದ್ಯರು ಇಂತಹ ವಯಸ್ಸಾದ ಶರೀರದ ಮೇಲೆ ಶಸ್ತ್ರಚಿಕಿತ್ಸೆ ನಡೆಸಲು ನಯವಾಗಿ ನಿರಾಕರಿಸಿ ಅಗತ್ಯವಿರುವವರೇ ಮಾಡಿಕೊಳ್ಳಲಿ ಎಂದು ಸಲಹೆಯನ್ನೂ ಮಾಡಿದ ಉದಾಹರಣೆ ಇದೆ.

ಇವನ್ನೂ ನೋಡಿ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

  1. MSN Encarta (2008). ಪ್ಲ್ಯಾಸ್ಟಿಕ್ ಸರ್ಜರಿ Archived 2008-09-22 ವೇಬ್ಯಾಕ್ ಮೆಷಿನ್ ನಲ್ಲಿ..
  2. ಸೇವೇದಿ, ಗಿರೀಶ್& ದ್ವೆವಿದೆ, ಶ್ರೀಧರ (2007). ಹಿಸ್ಟರಿ ಆಫ್ ಮೆಡಿಸಿನ್ of Medicine: ಶೂಶ್ರುತಾ– ದಿ ಕ್ಲಿನಿಸಿಯನ್– ಟೀಚರ್ ಪಾರ್ ಎಕ್ಸೆಲೆನ್ಸ್ Archived 2008-10-10 ವೇಬ್ಯಾಕ್ ಮೆಷಿನ್ ನಲ್ಲಿ.. ನ್ಯಾಶನಲ್ ಇನ್ ಫಾರ್ಮೆಟಿಕ್ ಸೆಂಟರ್ (ಗವರ್ನ್ ಮೆಂಟ್ ಆಫ್ ಇಂಡಿಯಾ ).
  3. ೩.೦ ೩.೧ ೩.೨ ಲಾಕ್, ಸ್ಟೆಫೆನ್ ಇ. (2001). ದಿ ಆಕ್ಸ್ಫರ್ಡ್ ಇಲ್ಸ್ಟ್ರೇಟೆಡ್ ಕಂಪಾನಿಯನ್ ಟು ಮೆಡಿಸಿನ್ . USA: ಆಕ್ಸಫೊರ್ಡ್ ಯುನ್ವರ್ಸಿಟಿ ಪ್ರೆಸ್. ISBN 1845110579, ಪುಟ 288
  4. ೪.೦ ೪.೧ ೪.೨ ಲಾಕ್, ಸ್ಟೆಫೆನ್ ಇ.. (2001). ದಿ ಆಕ್ಸ್ಫರ್ಡ್ ಇಲ್ಸ್ಟ್ರೇಟೆಡ್ ಕಂಪಾನಿಯನ್ ಟು ಮೆಡಿಸಿನ್ . USA: ಆಕ್ಸಫೊರ್ಡ್ ಯುನ್ವರ್ಸಿಟಿ ಪ್ರೆಸ್. ISBN 1845110579, ಪುಟ 288
  5. ೫.೦ ೫.೧ ಲಾಕ್, ಸ್ಟೆಗೆನ್ etc. (2001). ದಿ ಆಕ್ಸ್ಫರ್ಡ್ ಇಲ್ಸ್ಟ್ರೇಟೆಡ್ ಕಂಪಾನಿಯನ್ ಟು ಮೆಡಿಸಿನ್ . USA: ಆಕ್ಸಫೊರ್ಡ್ ಯುನ್ವರ್ಸಿಟಿ ಪ್ರೆಸ್. ISBN 1845110579, ಪುಟ 288
  6. ಪಿ. ಸಟೊನಿ-ರುಗಿಯು, ಎ ಹಿಸ್ಟರಿ ಆಫ್ ಪ್ಲ್ಯಾಸ್ಟಿಕ್ ಸರ್ಜರಿ (2007)
  7. "ಫ್ರೊಸ್ಟ್ ಅಂಡ್ ಸಲ್ಲಿವನ್"
  8. ಕಾಸ್ಮೆಟಿಕ್ ಸರ್ಜರಿ 101 ಫೇಸಿಯಲ್ ಕಾಸ್ಮೆಟಿಕ್ ಸರ್ಜರಿಸರ್ಜರಿ ಸೆಂಟರ್ Archived 2010-08-02 ವೇಬ್ಯಾಕ್ ಮೆಷಿನ್ ನಲ್ಲಿ.
  9. Description of Plastic Surgery American Board of Plastic Surgery Archived 2010-10-15 ವೇಬ್ಯಾಕ್ ಮೆಷಿನ್ ನಲ್ಲಿ.
  10. http://abcnews.go.com/Health/Cosmetic/story?id=125835&page=1
  11. "ಆರ್ಕೈವ್ ನಕಲು". Archived from the original on 2015-09-23. Retrieved 2010-07-27.

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

ಹೊರಗಿನ ಕೊಂಡಿಗಳು[ಬದಲಾಯಿಸಿ]

Media related to Plastic surgery at Wikimedia Commons