ಪ್ರಶಾಂತಿ ಸಿಂಗ್

ವಿಕಿಪೀಡಿಯ ಇಂದ
Jump to navigation Jump to search
Prashanti Singh
300px
Position Small forward/Point guard
Height 5 ft 8 in (1.72 m)
Weight 60 Kg
Nationality ಭಾರತ Indian
Born (1984-05-05) May 5, 1984 (age 35)
Varanasi, Uttar Pradesh, India

ಪ್ರಶಾಂತಿ ಸಿಂಗ್ (ಜನನ ೫ ಮೇ ೧೯೮೪, ವಾರಣಾಸಿ, ಭಾರತ) ಭಾರತದ ರಾಷ್ಟ್ರೀಯ ಮಹಿಳಾ ಬ್ಯಾಸ್ಕೆಟ್ ಬಾಲ್ ತಂಡದಲ್ಲಿ ಶೂಟಿಂಗ್ ಗಾರ್ಡ್ ಆಗಿ ಆಟವಾಡುತ್ತಾರೆ. ಪ್ರಶಾಂತಿ ಸಿಂಗ್ ಭಾರತದ ಮಹಿಳಾ ಬ್ಯಾಸ್ಕೆಟ್ ಬಾಲ್ ತಂಡವನ್ನು ೨೦೦೬ರಲ್ಲಿ ಮೆಲ್ಬೊರ್ನ್ ನಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡೆಗಳಲ್ಲಿ ಪ್ರತಿನಿಧಿಸಿದ್ದರು. ಇವರು ಭಾರತದಲ್ಲಿರುವ ಅತ್ಯುತ್ತಮ ಶೂಟಿಂಗ್ ಗಾರ್ಡ್ಸ್ ಗಳಲ್ಲಿ ಒಬ್ಬರೆನಿಸಿದ್ದಾರೆ,[ಸೂಕ್ತ ಉಲ್ಲೇಖನ ಬೇಕು] ತಮ್ಮ ಕೌಶಲಭರಿತ ಆಟ, ಶೈಕ್ಷಣಿಕ ಬಲ ಹಾಗು ವ್ಯಕ್ತಿತ್ವ ಹಾಗು ಸುಂದರ ಮುಖಭಾವದಿಂದ ಹೆಸರುವಾಸಿಯಾಗಿದ್ದಾರೆ.ಅವರು ವಾರಣಾಸಿಗೆ ಸೇರಿದ, ಭಾರತದ ಪರ ಬ್ಯಾಸ್ಕೆಟ್ ಬಾಲ್ ಆಡುವ ಕುಟುಂಬ ಕ್ಕೆ ಸೇರಿವರಾಗಿದ್ದಾರೆ, ಇವರ, ಐದು ಜನ ಸಹೋದರಿಯರಲ್ಲಿ ನಾಲ್ವರು ಭಾರತದ ರಾಷ್ಟ್ರೀಯ ತಂಡದಲ್ಲಿ ಆಡಿದ್ದಾರೆ ಅಥವಾ ಆಟವಾಡುತ್ತಿದ್ದಾರೆ. ಇವರು ಪ್ರಸಕ್ತ ನವದೆಹಲಿಯ MTNLನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಶಾಂತಿ, ಭಾರತದ ಮಹಿಳಾ ಬ್ಯಾಸ್ಕೆಟ್ ಬಾಲ್ ತಂಡವನ್ನು ೨೦೦೩ರಿಂದ ಪ್ರತಿನಿಧಿಸುತ್ತಿದ್ದಾರೆ. ಅಲ್ಲದೇ ಇಂದು ಅವರು ಪ್ರತಿಯೊಂದು ಚ್ಯಾಂಪಿಯನ್ಶಿಪ್ ನಲ್ಲೂ ಅತ್ಯುತ್ತಮ ಪ್ರದರ್ಶನದೊಂದಿಗೆ ಶೋಭಿಸುತ್ತಿದ್ದಾರೆ.ಭಾರತದ ರಾಷ್ಟ್ರೀಯ ಮಹಿಳಾ ಬ್ಯಾಸ್ಕೆಟ್ ಬಾಲ್ ತಂಡ ದ ನಾಯಕಿಯಾಗಿ ಪ್ರಶಾಂತಿ ಸಿಂಗ್ ಏಶಿಯನ್ ಒಳಾಂಗಣ ಕ್ರೀಡೆಗಳಲ್ಲಿ ಭಾರತದ ತಂಡವನ್ನು ಮುನ್ನಡೆಸಿದವರಾಗಿದ್ದಾರೆ. ಜೊತೆಗೆ ೨೦೦೯ರಲ್ಲಿ ವಿಯೆಟ್ನಾಂನಲ್ಲಿ ಆಯೋಜಿಸಲಾಗಿದ್ದ ಪಂದ್ಯಾವಳಿಗಳಲ್ಲಿ ರಜತ ಪದಕ ವನ್ನು ಪಡೆದಿದ್ದಾರೆ. ಇದು ಭಾರತದ ಬ್ಯಾಸ್ಕೆಟ್ ಬಾಲ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮೈಲಿಗಲ್ಲಾಗಿದೆ.

ಅಂತಾರಾಷ್ಟ್ರೀಯ ಕ್ರೀಡಾ ಸಾಧನೆಗಳು[ಬದಲಾಯಿಸಿ]

ಚಿತ್ರ:Prashanti SANY3254.JPG
ವಿಯೆಟ್ನಾಂನಲ್ಲಿ ಭಾರತೀಯ ತಂಡ
 • ೨೦೦೯ರಲ್ಲಿ ವಿಯೆಟ್ನಾಂನಲ್ಲಿ ನಡೆದ ಏಶಿಯನ್ ಒಳಾಂಗಣ ಕ್ರೀಡೆಗಳು, ರಜತ ಪದಕ ಗಳಿಕೆ
 • ೨೦೦೯ರಲ್ಲಿ ಚೆನ್ನೈನಲ್ಲಿ ನಡೆದ ಮಹಿಳಾ ಸೀನಿಯರ್ ವಿಭಾಗದಲ್ಲಿ ನಡೆದ FIBA ಏಶಿಯನ್ ಬ್ಯಾಸ್ಕೆಟ್ ಬಾಲ್ ಚ್ಯಾಂಪಿಯನ್ಶಿಪ್
 • ೨೦೦೭ರ ಜೂನ್ ೩ ರಿಂದ ೧೦, ಇಂಚೆಯೋನ್, ದಕ್ಷಿಣ ಕೊರಿಯ. ಮಹಿಳೆಯರ FIBA ಏಷಿಯ ಚ್ಯಾಂಪಿಯನ್ಶಿಪ್ ನ ಪೂಲ್-Bಯಲ್ಲಿ ಜಯ
 • ೨೦೦೬ರ ಮಾರ್ಚ್ ೧೫ ರಿಂದ ೨೬, ಮೆಲ್ಬೊರ್ನ್ (ಆಸ್ಟ್ರೇಲಿಯ), ಭಾರತದ ಪಾಯಿಂಟ್ ಗಾರ್ಡ್ ಆಗಿ ಕಾಮನ್ವೆಲ್ತ್ ಕ್ರೀಡೆಗಳಲ್ಲಿ ಭಾಗಿ
 • ೨೦೦೬ರ ಮಾರ್ಚ್ ೭ ರಿಂದ ೧೨, ಆಕ್ಲಂಡ್, ನ್ಯೂಜಿಲೆಂಡ್, ಸೌಹಾರ್ದ ಪಂದ್ಯ ಸರಣಿ
 • ೨೦೦೬ರ ಸೆಪ್ಟೆಂಬರ್ ೨೨ ರಿಂದ ೨೫, ಫುಕೆಟ್, ಥೈಲ್ಯಾಂಡ್ ಮೊದಲ ಫುಕೆಟ್ ಅಂತಾರಾಷ್ಟ್ರೀಯ ಆಹ್ವಾನ ಬ್ಯಾಸ್ಕೆಟ್ ಬಾಲ್ ಚ್ಯಾಂಪಿಯನ್ಶಿಪ್ ನಲ್ಲಿ ಚಿನ್ನ
 • ೨೦೦೫ರ ಜನವರಿ ೧೩ ರಿಂದ ೧೯, ಸೆಂಡೈ, ಜಪಾನ್ ಸೀನಿಯರ್ ಮಹಿಳಾ ವಿಭಾಗದಲ್ಲಿ ೨೦ನೇ ಏಶಿಯನ್ ಬ್ಯಾಸ್ಕೆಟ್ ಬಾಲ್ ಕಾನ್ಫೆಡರೇಶನ್ ಚ್ಯಾಂಪಿಯನ್ಶಿಪ್ ನಲ್ಲಿ ರಜತ ಪದಕ
 • ಪೋರ್ಟ್ ಡಿಕ್ಶನ್ ಅಂತಾರಾಷ್ಟೀಯ ಇನ್ವಿಟೇಶನ್ ಪಂದ್ಯಾವಳಿಯಲ್ಲಿ ಕಂಚಿನ ಪದಕ.
 • ಚೈನೀಸ್ ತೈಪೆಯಲ್ಲಿ, ೨೦೦೨-೦೩ರಲ್ಲಿ ಜೂನಿಯರ್ ಮಹಿಳಾ ವಿಭಾಗದ ಫಿಬಾ ಏಶಿಯನ್ ಬ್ಯಾಸ್ಕೆಟ್ ಬಾಲ್ ಚ್ಯಾಂಪಿಯನ್ಶಿಪ್ ನಲ್ಲಿ ಭಾಗಿ.

ರಾಷ್ಟ್ರಮಟ್ಟದ ಕ್ರೀಡಾ ಸಾಧನೆಗಳು[ಬದಲಾಯಿಸಿ]

 • ರಾಜಾಸ್ಥಾನದ ಜೈಪುರದಲ್ಲಿ ನಡೆದ ೫೭ನೇ ಸೀನಿಯರ್ ನ್ಯಾಷನಲ್ ಬ್ಯಾಸ್ಕೆಟ್ ಬಾಲ್ ಚ್ಯಾಂಪಿಯನ್ಶಿಪ್ ೨೦೦೬-೦೭ರಲ್ಲಿ ರಜತ ಪದಕ
 • ೨೦೦೬ರಲ್ಲಿ ಜಾರ್ಖಂಡ್ ನ ಜಮ್ಷೆಡ್ಪುರದಲ್ಲಿ ನಡೆದ ೨೨ನೇ ಫೆಡರೇಶನ್ ಕಪ್ ಬ್ಯಾಸ್ಕೆಟ್ ಬಾಲ್ ಚ್ಯಾಂಪಿಯನ್ಶಿಪ್ ನಲ್ಲಿ ರಜತ ಪದಕ
 • ಮಹಾರಾಷ್ಟ್ರದ ಪುಣೆಯಲ್ಲಿ, ೨೦೦೬ರಲ್ಲಿ ನಡೆದ ೫೬ನೇ ಸೀನಿಯರ್ ನ್ಯಾಷನಲ್ ಬ್ಯಾಸ್ಕೆಟ್ ಬಾಲ್ ಚ್ಯಾಂಪಿಯನ್ಶಿಪ್ ನಲ್ಲಿ ರಜತ ಪದಕ
 • ನವದೆಹಲಿಯಲ್ಲಿ ಮಹಿಳೆಯರಿಗಾಗಿ ೨೦೦೫ರಲ್ಲಿ ನಡೆದ R. ವೈಕುಂಠಮ್ ಕಪ್ ಬ್ಯಾಸ್ಕೆಟ್ ಬಾಲ್ ಚ್ಯಾಂಪಿಯನ್ಶಿಪ್ ನಲ್ಲಿ ರಜತ ಪದಕ
 • ಗುಜರಾತಿನ ಭಾವನಗರದಲ್ಲಿ ನಡೆದ ೨೦೦೫ರ ೨೧ನೇ ಕಾರ್ಪ್ ಇಂಪೆಕ್ಸ್ ಫೆಡರೇಶನ್ ಕಪ್ ಬ್ಯಾಸ್ಕೆಟ್ ಬಾಲ್ ಚ್ಯಾಂಪಿಯನ್ಶಿಪ್ ನಲ್ಲಿ ರಜತ ಪದಕ
 • ಪಂಜಾಬ್ ನ ಲುಧಿಯಾನದಲ್ಲಿ ನಡೆದ ೨೦೦೫ರಲ್ಲಿನ ೫೫ನೇ ಸೀನಿಯರ್ ಬ್ಯಾಸ್ಕೆಟ್ ಬಾಲ್ ಚ್ಯಾಂಪಿಯನ್ಶಿಪ್ ನಲ್ಲಿ ರಜತ ಪದಕ
 • ನವಿ ಮುಂಬೈನ ವಾಶಿಯಲ್ಲಿ ನಡೆದ ೨೦೦೩ರ, ೨೦ನೇ ಫೆಡರೇಶನ್ ಕಪ್ ಬ್ಯಾಸ್ಕೆಟ್ ಬಾಲ್ ಚ್ಯಾಂಪಿಯನ್ಶಿಪ್ ನಲ್ಲಿ ಕಂಚಿನ ಪದಕ
 • APಯ ಹೈದರಾಬಾದ್ ನಲ್ಲಿ ನಡೆದ ೨೦೦೩ರಲ್ಲಿನ ೫೩ನೇ ಸೀನಿಯರ್ ನ್ಯಾಷನಲ್ ಬ್ಯಾಸ್ಕೆಟ್ ಬಾಲ್ ಚ್ಯಾಂಪಿಯನ್ಶಿಪ್ ನಲ್ಲಿ ಸ್ವರ್ಣ ಪದಕ

ಪ್ರಶಸ್ತಿಗಳು ಹಾಗು ಸಾಧನೆ[ಬದಲಾಯಿಸಿ]

 • ವಾರಣಾಸಿಯ ಸೆಂಚುರಿ ಸ್ಪೋರ್ಟ್ಸ್ ಕ್ಲಬ್ ನ ವತಿಯಿಂದ ಅಕ್ಟೋಬರ್ ೨೦೦೬ರಲ್ಲಿ ಸೆಂಚುರಿ ಸ್ಪೋರ್ಟ್ಸ್ ಪ್ರಶಸ್ತಿ
 • UP ಕಾಲೇಜು ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಆಗಸ್ಟ್ ೨೦೦೬ರಲ್ಲಿ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿ
 • ಘಾಜಿಯಾಬಾದ್ ನಲ್ಲಿ ಡಿಸೆಂಬರ್ ೨೦೦೨ರಲ್ಲಿ ಆಯೋಜಿಸಲಾಗಿದ್ದ UP ರಾಜ್ಯ ಶಾಲಾ ಚ್ಯಾಂಪಿಯನ್ಶಿಪ್ ನಲ್ಲಿ ಉತ್ತಮ ಆಟಗಾರ್ತಿ ಪ್ರಶಸ್ತಿ
 • ಎಲ್ಲೆ ಮ್ಯಾಗಜಿನ್ ನ ಮುಖಪುಟದಲ್ಲಿ ೨೦೧೦ರಲ್ಲಿ ಕಾಣಿಸಿಕೊಂಡ ಮೊದಲ ಭಾರತೀಯ ಬ್ಯಾಸ್ಕೆಟ್ ಬಾಲ್ ಆಟಗಾರ್ತಿ. ಇವರು ೨೦೧೦ರ ಮೇ ಸಂಚಿಕೆಯಲ್ಲಿ ಎಲ್ಲೆ ಫ್ಯಾಶನ್ ಮ್ಯಾಗಜಿನ್ ನಲ್ಲಿ ಕಾಣಿಸಿಕೊಂಡರು.

ಶಿಕ್ಷಣ[ಬದಲಾಯಿಸಿ]

ಭಾರತದ ದೆಹಲಿ ವಿಶ್ವವಿದ್ಯಾಲಯದಿಂದ ಕಲಾ ವಿಭಾಗದಲ್ಲಿ ಪದವಿ

ಬಾಹ್ಯನೋಟ[ಬದಲಾಯಿಸಿ]

ತಂಡದ ಶೂಟಿಂಗ್ ಗಾರ್ಡ್ ಆಗಿ ತಂಡದ ಅಂಕವನ್ನು ದುಪ್ಪಟ್ಟು ಮಾಡುವ ಸಾಮರ್ಥ್ಯವಿರುವ ಅತ್ಯುತ್ತಮ ಪಾಯಿಂಟ್ ಗಾರ್ಡ್. ತಮ್ಮ ತಂಡವನ್ನು ಪರಿಣಾಮಕಾರಿಯಾಗಿ ಕ್ವಾರ್ಟರ್ ಬ್ಯಾಕ್(ಆಕ್ರಮಣಕಾರಿ ಆಟವನ್ನು ನಿರ್ದೇಶಿಸುವ ಆಟಗಾರ್ತಿ) ಮಾರ್ಗದರ್ಶನ ಮಾಡುತ್ತಾರೆ; ಆಟದ ೩ ಕೌಶಲಗಳನ್ನು ಶೂಟ್ ಮಾಡುವಾಗ ಬಳಸುತ್ತಾರೆ.(ಸುತ್ತೊಂದಕ್ಕೆ ನಿರ್ದಿಷ್ಟ ಸಂಖ್ಯೆಯ ಸ್ಕೋರ್ ಗಳಿಕೆ); ಒಂದು ಉತ್ತಮ ಮಧ್ಯಮ ಶ್ರೇಣಿಯ ಪುಲ್ ಅಪ್ ಹಾಗು ದೂರವ್ಯಾಪ್ತಿಯ ಎಸೆತವನ್ನು ಯಶಸ್ವಿಯಾಗಿ ನಿರ್ವಹಿಸುತ್ತಾರೆ. ನಿಯಂತ್ರಣದೊಂದಿಗೆ ಬ್ಯಾಸ್ಕೆಟ್ ಗೆ ಚೆಂಡನ್ನು ಎಸೆಯುವುದರ ಜೊತೆಗೆ ತಮ್ಮ ತಂಡದ ಇತರ ಸದಸ್ಯರು ಇದರಲ್ಲಿ ಭಾಗವಹಿಸುವಂತೆ ನೋಡಿಕೊಳ್ಳುತ್ತಾರೆ. ಆಟದಲ್ಲಿ ನಿಯಮದ ಉಲ್ಲಂಘನೆಯಾಗಿದ್ದಾರೂ ಉತ್ತಮ ರೀತಿಯಲ್ಲಿ ಎಸೆತವನ್ನು ಪೂರ್ಣಗೊಳಿಸುತ್ತಾರೆ. ಉತ್ತಮ ನೇರ ಹೊಡೆತಗಳ ರಕ್ಷಕಿಯಾಗಿದ್ದಾರೆ. ನಿರ್ಬಂಧಿತ ಪರಿಸ್ಥಿತಿಗಳಲ್ಲೂ ಉತ್ತಮ ಪ್ರದರ್ಶನ ತೋರುವ ಆಟಗಾರ್ತಿ ಜೊತೆಗೆ ತಂಡಕ್ಕೆ ಉತ್ತಮ ಅಂಕ ಗಳಿಸಿಕೊಡುವಲ್ಲಿ ಕ್ವಾರ್ಟರ್ ಬ್ಯಾಕ್ ಸಹ ಮಾಡುತ್ತಾರೆ. ಆಸ್ಟ್ರೇಲಿಯ, ಚೀನಾ, ಜಪಾನ್, ನ್ಯೂಜಿಲ್ಯಾಂಡ್ ನಂತಹ ಅಂತಾರಾಷ್ಟ್ರೀಯ ತಂಡಗಳೊಂದಿಗೆ ಸೆಣಸಿ ಅಗಾಧ ಅನುಭವವುಳ್ಳ ಒಬ್ಬ ಪರಿಪಕ್ವ, ಪ್ರೌಢ ಆಟಗಾರ್ತಿ.

ಕುಟುಂಬ[ಬದಲಾಯಿಸಿ]

ಇವರು ಭಾರತೀಯ ತಂಡದ ಪರ ಬ್ಯಾಸ್ಕೆಟ್ ಬಾಲ್ ಆಡುವ ಕುಟುಂಬದಿಂದ ಬಂದಿದ್ದಾರೆ, ಇವರ ಮೂವರು ಸಹೋದರಿಯರು ಪ್ರಸಕ್ತ ಭಾರತದ ಮಹಿಳಾ ರಾಷ್ಟ್ರೀಯ ಬ್ಯಾಸ್ಕೆಟ್ ಬಾಲ್ ತಂಡದ ಸದಸ್ಯರಾಗಿದ್ದಾರೆ.

 • ಸಹೋದರಿ ದಿವ್ಯಾ ಸಿಂಗ್(ಪ್ರಸಕ್ತದಲ್ಲಿ ವಿದ್ಯಾರ್ಥಿನಿ ಹಾಗು ಡೆಲವೇರ್ ವಿಶ್ವವಿದ್ಯಾಲಯದ ಮಹಿಳಾ ಬ್ಯಾಸ್ಕೆಟ್ ಬಾಲ್ ತಂಡದಲ್ಲಿ ಕಾರ್ಯ ನಿರ್ವಹಿಸುತ್ತಾರೆ.)
 • ಸಹೋದರಿ ಆಕಾಂಕ್ಷಾ ಸಿಂಗ್(ಪ್ರಸಕ್ತ ಭಾರತದ ಮಹಿಳಾ ರಾಷ್ಟ್ರೀಯ ಬ್ಯಾಸ್ಕೆಟ್ ಬಾಲ್ ತಂಡದ ಸದಸ್ಯೆ)
 • ಸಹೋದರಿ ಪ್ರತಿಮಾ ಸಿಂಗ್(ಪ್ರಸಕ್ತ ಭಾರತದ ಮಹಿಳಾ ರಾಷ್ಟ್ರೀಯ ಬ್ಯಾಸ್ಕೆಟ್ ಬಾಲ್ ಜೂನಿಯರ್ ತಂಡದ ನಾಯಕಿ)

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]