ವಿಷಯಕ್ಕೆ ಹೋಗು

ಪ್ರವೀಣ್ ಬಕ್ಷಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರವೀಣ್ ಬಕ್ಷಿ

ವ್ಯಾಪ್ತಿಪ್ರದೇಶಭಾರತ
ಶಾಖೆ Indian Army
ಸೇವಾವಧಿ೧೭ ಡಿಸೆಂಬರ್ ೧೯೭೭ - ೩೧ ಜುಲೈ ೨೦೧೭
ಶ್ರೇಣಿ(ದರ್ಜೆ) Lieutenant General
ಸೇವಾ ಸಂಖ್ಯೆIC-34760F
ಘಟಕಸ್ಕಿನ್ನರ್ ಕುದುರೆ
ಅಧೀನ ಕಮಾಂಡ್ಪೂರ್ವ ಕಮಾಂಡ್ (ಭಾರತ)
೯ನೇ ದಳ(ಭಾರತ)
ಪ್ರಶಸ್ತಿ(ಗಳು) ಪರಮ ವಿಶಿಷ್ಟ ಸೇವಾ ಪದಕ
[ಅತಿ ವಿಶಿಷ್ಟ ಸೇವಾ ಪದಕ]][]
ವಿಶಿಷ್ಟ ಸೇವಾ ಪದಕ

ಲೆಫ್ಟಿನೆಂಟ್ ಜನರಲ್ ಪ್ರವೀಣ್ ಬಕ್ಷಿ ಪವಿಸೇಪ, ಅತಿ ವಿಶಿಷ್ಟ ಸೇವಾ ಪದಕ, ವಿಸೇಪ, ಸಹಾಯಕ-ಡಿ-ಕ್ಯಾಂಪ್, ಇವರು ಭಾರತೀಯ ಸೇನೆಯ ೨೫ ನೇ ಜನರಲ್ ಆಫೀಸರ್-ಕಮಾಂಡಿಂಗ್-ಇನ್-ಚೀಫ್ , ಈಸ್ಟರ್ನ್ ಕಮಾಂಡ್ ಆಗಿದ್ದರು. ಲೆಫ್ಟಿನೆಂಟ್ ಜನರಲ್ ಮನಮೋಹನ್ ಸಿಂಗ್ ರೈ ನಂತರ ೧ ಆಗಸ್ಟ್ ೨೦೧೫ ರಂದು ಅಧಿಕಾರ ವಹಿಸಿಕೊಂಡರು. ಇವರು ೩೧ ಜುಲೈ ೨೦೧೭ ರಂದು ನಿವೃತ್ತರಾದರು. ಮತ್ತು ಲೆಫ್ಟಿನೆಂಟ್ ಜನರಲ್ ಅಭಯ್ ಕೃಷ್ಣ ಇವರು ಉತ್ತರಾಧಿಕಾರಿಯಾದರು[] [] []. ಇದಕ್ಕೂ ಮೊದಲು ಅವರು ಉಧಂಪುರ ಮೂಲದ ಉತ್ತರ ಭಾಗದ ಕಮಾಂಡಿನ ಮುಖ್ಯಸ್ಥರಾಗಿದ್ದರು. ಅವರು ಲೆಫ್ಟಿನೆಂಟ್ ಜನರಲ್ ಮನಮೋಹನ್ ಸಿಂಗ್ ರೈ ಅವರ ಉತ್ತರಾಧಿಕಾರಿಯಾದರು, ಅವರು ನವದೆಹಲಿಯಲ್ಲಿ ಭಾರತೀಯ ಸೇನೆಯ ಪ್ರಧಾನ ಕಛೇರಿಯಲ್ಲಿ ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿ ನೇಮಕಗೊಂಡರು.

ಶಿಕ್ಷಣ

[ಬದಲಾಯಿಸಿ]

ಅವರು ಪುಣೆಯ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ವಿದ್ಯಾರ್ಥಿ. ಅವರು ವೆಲ್ಲಿಂಗ್ಟನ್‌ನ ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜಿನಲ್ಲಿ ಸ್ಟಾಫ್ ಕಾಲೇಜು ಕೋರ್ಸ್‌; ಮೊವ್ ದ ಆರ್ಮಿ ವಾರ್ ಕಾಲೇಜಿನಲ್ಲಿ ಸೀನಿಯರ್ ಕಮಾಂಡ್ ಕೋರ್ಸ್, ಮತ್ತು ನ್ಯಾಷನಲ್ ಡಿಫೆನ್ಸ್ ಕಾಲೇಜ್, ನವದೆಹಲಿಯಲ್ಲಿ ಹೈಯರ್ ಕಮಾಂಡ್ ಕೋರ್ಸ್ ಅನ್ನು ಮಾಡಿದರು. [] []

ವೃತ್ತಿ

[ಬದಲಾಯಿಸಿ]

ಇವರು ೧೭ ಡಿಸೆಂಬರ್ ೧೯೭೭ ರಂದು ಸ್ಕಿನ್ನರ್ಸ್ ಹಾರ್ಸ್ ರೆಜಿಮೆಂಟ್‌ಗೆ ನಿಯೋಜಿಸಲ್ಪಟ್ಟರು. ಇವರು ಭಾರತೀಯ ಸೇನೆಯ ಹಲವಾರು ಕಾರ್ಯಚರಣೆಯ ನೇತೃತ್ವ ವಹಿಸಿದ್ದರು. ಇದರಲ್ಲಿ ಮುಖ್ಯವಾಗಿ ಪಶ್ಚಿಮ ವಲಯದಲ್ಲಿಅರ್ಮರ್ ಬ್ರಿಗೆಡ್, ರಾಜಸ್ಥಾನದ ಒಂದು ವಿಭಾಗ, ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರದ ದಳಗಳು ಸೇರಿವೆ.

ಲೆಫ್ಟಿನೆಂಟ್ ಜನರಲ್ ಹುದ್ದೆಗೆ ಬಡ್ತಿ ಪಡೆದ ನಂತರ, ಅವರು ೯ನೇ ದಳ (ಧರ್ಮಶಾಲಾ) ದ ಕಮಾಂಡರ್ ಆಗಿ ನೇಮಕಗೊಂಡರು ಮತ್ತು ನಂತರ ನಾರ್ದರ್ನ್ ಕಮಾಂಡಿನ ಸಿಬ್ಬಂದಿ ಮುಖ್ಯಸ್ಥ(ಚೀಫ್ ಆಫ್ ಸ್ಟಾಫ್) ಆಗಿ ನೇಮಕಗೊಂಡರು. ೧ ಆಗಸ್ಟ್ ೨೦೧೫ ರಂದು ಪೂರ್ವ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಂಗ್ ಆಗಿ ಅಧಿಕಾರ ವಹಿಸಿಕೊಂಡರು. ಇವರು ಟಾಂಜಾನಿಯಾ ಸೇರಿದಂತೆ ಹಲವಾರು ದೇಶಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಸ್ಕಿನ್ನರ್ಸ್ ಹಾರ್ಸ್, ೧೮ ಅಶ್ವದಳ, ಮತ್ತು ೫೭ ಆರ್ಮರ್ಡ್ ರೆಜಿಮೆಂಟ್‌ನ ಕರ್ನಲ್ ಸಹಾ ಆಗಿದ್ದರು[][][][][೧೦]


ದಶಕಗಳ ಕಾಲದ ಅವರ ವೃತ್ತಿಜೀವನದಲ್ಲಿ, ಅವರ ಸೇವೆಗಾಗಿ ಅವರಿಗೆ ಪರಮ ವಿಶಿಷ್ಟ ಸೇವಾ ಪದಕ (ಜನವರಿ ೨೦೧೭), ಅತಿ ವಿಶಿಷ್ಟ ಸೇವಾ ಪದಕ (ಜನವರಿ 2015) ಮತ್ತು ವಿಶಿಷ್ಟ ಸೇವಾ ಪದಕ (ಜನವರಿ 2013) ನೀಡಲಾಯಿತು. [೧೧] [೧೨] [೧೩] [೧೪] [೧೫]

ಪ್ರಶಸ್ತಿಗಳು

[ಬದಲಾಯಿಸಿ]
ಪರಮ ವಿಶಿಷ್ಟ ಸೇವಾ ಪದಕ ಅತಿ ವಿಶಿಷ್ಟ ಸೇವಾ ಪದಕ ವಿಶಿಷ್ಟ ಸೇವಾ ಪದಕ ವಿಶೇಷ ಸೇವಾ ಪದಕ
ಆಪರೇಷನ್ ವಿಜಯ್ ಪದಕ ಆಪರೇಷನ್ ಪರಾಕ್ರಮ್ ಪದಕ ಸೈನ್ಯ ಸೇವಾ ಪದಕ ವಿದೇಶ್ ಸೇವಾ ಪದಕ
ಸ್ವಾತಂತ್ರ್ಯ ಪದಕದ 50 ನೇ ವಾರ್ಷಿಕೋತ್ಸವ 30 ವರ್ಷಗಳ ಸುದೀರ್ಘ ಸೇವಾ ಪದಕ 20 ವರ್ಷಗಳ ಸುದೀರ್ಘ ಸೇವಾ ಪದಕ 9 ವರ್ಷಗಳ ಸುದೀರ್ಘ ಸೇವಾ ಪದಕ

ಉಲ್ಲೇಖಗಳು

[ಬದಲಾಯಿಸಿ]
  1. "ATI VISHISHT SEVA MEDAL". NET INDIAN. Retrieved 4 October 2015.
  2. ೨.೦ ೨.೧ "Lt Gen Praveen Bakshi takes charge of army's Eastern Command". Economic Times. Retrieved 4 October 2015.
  3. "Army's Eastern Command gets new chief". News X. Archived from the original on 6 ಅಕ್ಟೋಬರ್ 2015. Retrieved 4 October 2015.
  4. "Lt Gen Abhay Krishna new chief of Eastern Command".
  5. "» Lt General Praveen Bakshi". www.spsmilitaryyearbook.com. Archived from the original on 2017-10-27. Retrieved 2017-10-28.
  6. "Lt Gen Praveen Bakshi takes charge of army's Eastern Command". Economic Times. Retrieved 4 October 2015.
  7. "Army's Eastern Command gets new chief". News X. Archived from the original on 6 ಅಕ್ಟೋಬರ್ 2015. Retrieved 4 October 2015.
  8. "» Lt General Praveen Bakshi". www.spsmilitaryyearbook.com. Archived from the original on 2017-10-27. Retrieved 2017-10-28.
  9. "374 defence personnel decorated, Ashok Chakra posthumously for Neeraj Kumar Singh | NetIndian". netindian.in (in ಇಂಗ್ಲಿಷ್). 2015-01-26. Retrieved 2017-10-28.
  10. "Tewari likely to be new GOC". Jammu Kashmir Latest News | Tourism | Breaking News J&K (in ಅಮೆರಿಕನ್ ಇಂಗ್ಲಿಷ್). 2014-10-26. Retrieved 2017-10-28.
  11. "Lt Gen Bakshi, Hariz get PVSM medal - Times of India". The Times of India. Retrieved 2017-01-27.
  12. "Press Information Bureau". Retrieved 2017-10-28.
  13. "Press Information Bureau". Retrieved 2017-10-28.
  14. "President Confers Gallantry and Distinguished Service Awards". Press Information Bureau. Govt.. of India. Retrieved 4 October 2015. Release Id 117559
  15. "Army plans succession at highest ranks". Retrieved 2017-10-28.
Military offices
Preceded by General Officer-Commanding-in-Chief Eastern Command
1 August 2015 - 31 July 2017
Succeeded by
Preceded by
General Officer Commanding IX Corps
- 30 October 2014
Succeeded by
Rajeev Tewari