ಪ್ರದೀಪ್ ಕೆಂಜಿಗೆ

ವಿಕಿಪೀಡಿಯ ಇಂದ
Jump to navigation Jump to search
ಪ್ರದೀಪ್ ಕೆಂಜಿಗೆ
ಪ್ರದೀಪ್ ಕೆಂಜಿಗೆ
ಜನನಸೆಪ್ಟೆಂಬರ್ ೨೩ ೧೯೫೯
ಕೆಂಜಿಗೆ, ಮೂಡಿಗೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ
ವೃತ್ತಿಕಾದಂಬರಿಕಾರ, ಕೃಷಿಕ, ಸಂಶೋಧಕ

www.tejaswivismaya.org

ಪ್ರದೀಪ್ ಕೆಂಜಿಗೆ ಕನ್ನಡದ ಬರಹಗಾರರು. ಹಲವು ಪುಸ್ತಕಗಳನ್ನು ಬರೆದಿದ್ದಾರೆ. ವಿಸ್ಮಯ ಪ್ರತಿಷ್ಠಾನದ ಉಪಾಧ್ಯಕ್ಷರಾಗಿದ್ದಾರೆ. ಇವರು ಲೇಖಕ ಪೂರ್ಣಚಂದ್ರ ತೇಜಸ್ವಿಯವರೊಂದಿಗೆ ಸೇರಿ ಬರೆದ/ಅನುವಾದಿಸಿದ ಮಿಲೆನಿಯಮ್ ಸರಣಿ ಮತ್ತು ಪ್ಯಾಪಿಲಾನ್ ಸರಣಿ ಪುಸ್ತಕಗಳು ಜನಪ್ರಿಯವಾಗಿವೆ. [೧]

ಸ್ವತಃ ಕಾಫಿ ಕೃಷಿಕರಾದ ಡಾ. ಪ್ರದೀಪ್ ಕೆಂಜಿಗೆ ಕೃಷಿ ವಿಜ್ಞಾನದಲ್ಲಿ ಪದವಿ ಹೊಂದಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ 'ಕೆಂಜಿಗೆ' ಇವರ ಊರು. ಇವರು ಅಮೇರಿಕಾದ ಪ್ರಸಿದ್ಧ ಕರಿಯರ ವಿಶ್ವವಿದ್ಯಾಲಯ ಟಸ್ಕ್ಗೀಯಲ್ಲಿ ಪರಿಸರ ವಿಜ್ಞಾನ ಅಭ್ಯಸಿಸಿ ಸ್ನಾತಕೋತ್ತರ ಪದವಿ ಹೊಂದಿದವರು. ಅರಿಜೋನಾದ ಮರಳುಗಾಡಿನಲ್ಲಿ ಬುಡಕಟ್ಟು ಜನಾಂಗದವರೊಡನೆ ಕೆಲಸ ಮಾಡಿದ ಅನುಭವ ಪ್ರದೀಪ್ ಅವರಿಗಿದೆ. ಪಶ್ಚಿಮ ಘಟ್ಟಗಳ ಜೀವ ವೈವಿಧ್ಯತೆ ಹಾಗೂ ಅದರ ಮೇಲೆ ಕ್ರಿಮಿ ನಾಶಕಗಳ ದುಷ್ಪರಿಣಾಮಗಳ ಅಧ್ಯಯನದಲ್ಲಿ ಪಿ ಎಚ್ ಡಿ ದೊರಕಿಸಿಕೊಂಡಿದ್ದಾರೆ. ಕಾಫಿ ಸಣ್ಣ ಬೆಳೆಗಾರರ ಒಕ್ಕೂಟದಲ್ಲಿ ಸಕ್ರಿಯ ಪಾತ್ರ ವಹಿಸಿರುವ ಪ್ರದೀಪ್ ಪ್ರಸ್ತುತ ಕಾಫಿಡೇ ಗುಂಪಿನ ಸಂಶೋಧನಾ ಕೇಂದ್ರದ ಮುಖ್ಯ ವಿಜ್ಞಾನಿಯಾಗಿ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. [೨],

ಕೃತಿಗಳು[ಬದಲಾಯಿಸಿ]

  • ಪ್ಯಾಪಿಲಾನ್‌–೧ (ಪುಸ್ತಕ ಪ್ರಕಾಶನ, ಮೈಸೂರು) (ಪೂರ್ಣಚಂದ್ರ ತೇಜಸ್ವಿ ಸಹಲೇಖಕ)
  • ಪ್ಯಾಪಿಲಾನ್‌–೨ (ಪುಸ್ತಕ ಪ್ರಕಾಶನ, ಮೈಸೂರು) (ಪೂರ್ಣಚಂದ್ರ ತೇಜಸ್ವಿ ಸಹಲೇಖಕ)
  • ಪ್ಯಾಪಿಯೋನ್–೩ (೨೦೧೪, ಪುಸ್ತಕ ಪ್ರಕಾಶನ, ಮೈಸೂರು)
  • ವಿಸ್ಮಯ ೧, ೨, ೩ (ಪುಸ್ತಕ ಪ್ರಕಾಶನ, ಮೈಸೂರು) (ಪೂರ್ಣಚಂದ್ರ ತೇಜಸ್ವಿ ಸಹಲೇಖಕ)
  • ಬರ್ಮುಡಾ ಟ್ರೈಯಾಂಗಲ್ (ನವಕರ್ನಾಟಕ ಪ್ರಕಾಶನ, ಬೆಂಗಳೂರು)
  • ಅದ್ಭುತಯಾನ, ೧೯೯೫
  • ಹೆಬ್ಬಾವಿನೊಡನೆ ಹೋರಾಟ (೨೦೧೨, ಪುಸ್ತಕ ಪ್ರಕಾಶನ, ಮೈಸೂರು)

ಪ್ರಶಸ್ತಿ/ಗೌರವಗಳು[ಬದಲಾಯಿಸಿ]

ಹೊರಕೊಂಡಿಗಳು[ಬದಲಾಯಿಸಿ]

ಇವನ್ನೂ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. ಚುಕ್ಕುಬುಕ್ಕು ತಾಣದಲ್ಲಿ ಲೇಖಕರ ಪರಿಚಯ
  2. Coffee country: Chikmagalur, ಎಕನಾಮಿಕ್ ಟೈಮ್ಸ್, Nov 24, 2011