ವಿಷಯಕ್ಕೆ ಹೋಗು

ವಿಸ್ಮಯ ಪ್ರತಿಷ್ಠಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಸ್ಮಯ ಪ್ರತಿಷ್ಠಾನ Vismaya Trust.
ಪ್ರಕಾರ: ಸಾರ್ವಜನಿಕ ಸಂಸ್ಥೆ
ಸ್ಥಾಪನೆ: ಸೆಪ್ಟೆಂಬರ್ ೦೮, ೨೦೦೭
ಕೇಂದ್ರ ಸ್ಥಳ: ಮೂಡಿಗೆರೆ, ಕರ್ನಾಟಕ, ಭಾರತ
ಅಂತರಜಾಲ:ತೇಜಸ್ವಿವಿಸ್ಮಯ.ಆರ್ಗ್

"ವಿಸ್ಮಯ ಪ್ರತಿಷ್ಠಾನ"- ಪೂರ್ಣಚಂದ್ರ ತೇಜಸ್ವಿಯವರ ವೈಚಾರಿಕ ಮೌಲ್ಯಗಳು, ಪರಿಸರ ಪ್ರಜ್ಞೆ, ಪ್ರಯೋಗಶೀಲ ಮನೋಭಾವ, ವಾಸ್ತವವಾದ, ವೈವಿಧ್ಯ ಪೂರ್ಣ ಸಾರ್ಥಕ ಬದುಕು ಎಲ್ಲರಿಗೂ ಅನುಕರಣೀಯ. ತೇಜಸ್ವಿ ವಿಚಾರಧಾರೆಯನ್ನು ಮುಂದಿನ ಪೀಳಿಗೆಯತ್ತ ಕೊಂಡೊಯ್ದು ಅವರ ಬರಹದ ಆಶಯವನ್ನು ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ವಿಸ್ಮಯ ಪ್ರತಿಷ್ಠಾನ ಟ್ರಸ್ಟ್ ಅನ್ನು ರೂಪಿಸಲಾಗಿದೆ.

ಉದ್ದೇಶ ಹಾಗೂ ಆಶಯ

[ಬದಲಾಯಿಸಿ]

"ವಿಸ್ಮಯ ಪ್ರತಿಷ್ಠಾನ"- ಪೂರ್ಣಚಂದ್ರ ತೇಜಸ್ವಿಯವರ ವೈಚಾರಿಕ ಮೌಲ್ಯಗಳು, ಪರಿಸರ ಪ್ರಜ್ಞೆ, ಪ್ರಯೋಗಶೀಲ ಮನೋಭಾವ, ವಾಸ್ತವವಾದ, ವೈವಿಧ್ಯ ಪೂರ್ಣ ಸಾರ್ಥಕ ಬದುಕು ಎಲ್ಲರಿಗೂ ಅನುಕರಣೀಯ. ಅವರ ವಿಚಾರಧಾರೆಯನ್ನು ಮುಂದಿನ ಪೀಳಿಗೆಯತ್ತ ಕೊಂಡೊಯ್ಯಲು ಅವರ ಬರಹದ ಆಶಯವನ್ನು ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ "ವಿಸ್ಮಯ ಪ್ರತಿಷ್ಠಾನ" ಟ್ರಸ್ಟ್ ಅನ್ನು ರೂಪಿಸಲಾಗಿದೆ.

ಈ ನಿಟ್ಟಿನಲ್ಲಿ ಮೂಡಿಗೆರೆಯ ಸಮೀಪದಲ್ಲಿ ಸುಸಜ್ಜಿತವಾದ ಜೈವಿಕ ಸಂಶೋಧನಾ ಕೇಂದ್ರ ಹಾಗೂ ಅಧ್ಯಯನ ಕೇಂದ್ರ ಸ್ಥಾಪನೆಗೆ ನೇಚರ್ ಕ್ಲಬ್ ಮುಂದಾಗಿದೆ. ಪರಿಸರ ಸಂವೇದಿ ಸಂಸ್ಥೆಯಾದ ನೇಚರ್ ಕ್ಲಬ್ ನಲ್ಲಿ ತೇಜಸ್ವಿಯವರು ತಮ್ಮ ಆಶಯಗಳು ಕಾರ್ಯ ರೂಪವಾಗುವ ಕನಸು ಹೊತ್ತು ಸಾಗಿದ್ದರು.ಅವರ ಆಶಯದಂತೆ ವಿವಿಧ ಸ್ತರದ ಸಮುದಾಯಕ್ಕೆ ವಿಜ್ಞಾನ, ತಂತ್ರಜ್ಞಾನ ಬೋಧನೆಯ ಜೊತೆಗೆ, ಪರಿಸರದ ಜೊತೆಗಿನ ಬಾಂಧವ್ಯ ಬೆಸೆಯುವ ಕಾಯಕವನ್ನು ಪೂರೈಸುವ ಹೊಣೆಯನ್ನು ವಿಸ್ಮಯ ಟ್ರಸ್ಟ್ ಹೊಂದಿದೆ.

ಆಶಯಗಳು

[ಬದಲಾಯಿಸಿ]

ಮಕ್ಕಳಿಗಾಗಿ: ಜೀವ ಜಗತ್ತಿನ ಅದ್ಭುತ ರಮ್ಯಗಳನ್ನು,ಬಾಹ್ಯಾಕಾಶದ ಕೌತುಕಗಳನ್ನು ಪ್ರದರ್ಶಿಸುವ ಥಿಯೇಟರ್ ಗಳು. ಯುವ ಸಮುದಾಯಕ್ಕೆ: ಕೀಟಗಳ ವಿಸ್ಮಯ ಲೋಕವನ್ನು ಅನಾವರಣಗೊಳಿಸುವ ಕೀಟ ಸಂಗ್ರಹಾಲಯ, ಸೀತೆ ಹೂಗಳ ಆರ್ಕಿಡೊರಿಯಂ, ಪಶ್ಚಿಮ ಘಟ್ಟದ ಕಾನನಗಳಲ್ಲಿ ಟ್ರೆಕ್ಕಿಂಗ್, ಡಿಜಿಟಲ್ ಗ್ರಂಥಾಲಯ, ಪರಿಸರ ಸಂರಕ್ಷಣೆಯ ಹೊಣೆ.ಕಲೆ ,ಸಾಹಿತ್ಯ ಕೃಷಿಗೆ ಪ್ರೋತ್ಸಾಹ. ಸಂಶೋಧಕರಿಗೆ: ತಂತ್ರಾಂಶ ಬಳಕೆ, ಜಾಗತೀಕರಣದ ಪ್ರಭಾವಗಳು, ಸಹಜ ಕೃಷಿ ಮುಂತಾದ ವಿಷಯಗಳ ಬಗ್ಗೆ ಚರ್ಚೆ ಹಾಗೂ ಸಂಶೋಧನೆ

ಸಮಿತಿ ಮತ್ತು ವಿಳಾಸ

[ಬದಲಾಯಿಸಿ]
  • ಸಂಸ್ಥಾಪಕರು =ಗಂಗಯ್ಯ ಹೆಗ್ಗಡೆ
  • ಅಧ್ಯಕ್ಷರು = ಬಿ.ಎಲ್ .ಶಂಕರ್
  • ಉಪಾಧ್ಯಕ್ಷರು = ಪ್ರದೀಪ್ ಕೆಂಜಿಗೆ
  • ಕಾರ್ಯದರ್ಶಿಗಳು = ಧನಂಜಯ ಜೀವಾಳ ಬಿ.ಕೆ, ವಿನಯ ಪ್ರಸಾದ್ ಸಿ.ಡಿ
  • ಖಜಾಂಚಿಗಳು = ರಾಘವೇಂದ್ರ ಆರ್

ವಿಳಾಸ: ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಜೀವ ವೈವಿಧ್ಯ ಸಂಶೋಧನಾ ಕೇಂದ್ರ, ಕೊಟ್ಟಿಗೆಹಾರ, ಮೂಡಿಗೆರೆ (ತಾ)-577132,ಚಿಕ್ಕಮಗಳೂರು ಜಿಲ್ಲೆ

ದೂರವಾಣಿ ಸಂಖ್ಯೆ: : 08263-222288

ಮಾಧ್ಯಮಗಳಲ್ಲಿ ಪ್ರತಿಷ್ಠಾನದ ಬಗ್ಗೆ

[ಬದಲಾಯಿಸಿ]

ತೇಜಸ್ವಿ,ನಿಮ್ಮ ಹುಡುಕುತ್ತಾ .. ಮೂಡಿಗೆರೆ ಮಾಯವಿ ತೇಜಸ್ವಿನಾಡಿನಲ್ಲಿ ಚಾರಣ