ಪ್ರತಿಲಿಪಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರತಿಲಿಪಿ
ಜಾಲತಾಣದ ವಿಳಾಸwww.pratilipi.com
ವಾಣಿಜ್ಯ ತಾಣಹೌದು
ಲಭ್ಯವಿರುವ ಭಾಷೆ
ಬಳಕೆದಾರರು(ನೊಂದಾಯಿತರೂ ಸೇರಿ)೨,೦೦,೦೦,೦೦೦
ಸೃಷ್ಟಿಸಿದ್ದು
  • ರಂಜಿತ್ ಪ್ರತಾಪ್ ಸಿಂಗ್
  • ಪ್ರಶಾಂತ್ ಗುಪ್ತಾ
  • ರಾಹುಲ್ ರಂಜನ್
  • ಸಹೃದಯಿ ಮೋದಿ
  • ಶಂಕರ್‌ನಾರಾಯಣ್ ದೇವರಾಜನ್
ಸಧ್ಯದ ಸ್ಥಿತಿಸಕ್ರಿಯ

ಪ್ರತಿಲಿಪಿ ಎಂಬುದು ಭಾರತೀಯ ಆನ್‌ಲೈನ್ ಸ್ವಯಂ-ಪ್ರಕಾಶನ ಮತ್ತು ಕೇಳೊತ್ತಗೆ (ಆಡಿಯೊಬುಕ್) ಪೋರ್ಟಲ್ ಆಗಿದೆ.[೧] ಇದು ಹನ್ನೆರಡು ಭಾಷೆಗಳಲ್ಲಿ ವಿಷಯವನ್ನು ಒಳಗೊಂಡಿದೆ. ಕ್ರಮವಾಗಿ ಹಿಂದಿ, ಉರ್ದು, ಇಂಗ್ಲಿಷ್, ಗುಜರಾತಿ, ಬೆಂಗಾಲಿ, ಮರಾಠಿ, ಮಲಯಾಳಂ, ತಮಿಳು, ಕನ್ನಡ, ತೆಲುಗು, ಪಂಜಾಬಿ ಮತ್ತು ಒಡಿಯಾ.[೨]

ಇತಿಹಾಸ[ಬದಲಾಯಿಸಿ]

ಪ್ರತಿಲಿಪಿ ಎಂಬುದು ಸಂಸ್ಕೃತ ಪದವಾಗಿದ್ದು, "ನೀವು ಓದಿದಂತೆಯೇ ಆಗುತ್ತೀರಿ" ಎಂಬ ಅರ್ಥವನ್ನು ಕೊಡುತ್ತದೆ.ಇದು ಕಥೆಗಳು, ಕವನಗಳು, ಪ್ರಬಂಧಗಳು ಮತ್ತು ಲೇಖನಗಳಂತಹ ಮೂಲ ಕೃತಿಗಳನ್ನು ಪ್ರಕಟಿಸಲು ಮತ್ತು ಓದಲು ಬಳಕೆದಾರರಿಗೆ ಅವಕಾಶ ನೀಡುತ್ತದೆ.[೩] ಇದು ಓದುಗರಿಗೆ ಇತರರು ಪೋಸ್ಟ್ ಮಾಡಿದ ವಿಷಯವನ್ನು ರೇಟ್ ಮಾಡಲು, ಲೇಖಕರಿಗೆ ಚಂದಾದಾರರಾಗಲು ಮತ್ತು ಸಂದೇಶ ಕಳುಹಿಸುವ ಮೂಲಕ ಅವರ ಅನುಯಾಯಿಗಳೊಂದಿಗೆ ಸಂವಹನ ನಡೆಸಲು ಅನುಮತಿಸುತ್ತದೆ.[೪]

ಇದನ್ನು ಸೆಪ್ಟೆಂಬರ್ ೨೦೧೪ ರಲ್ಲಿ ರಂಜೀತ್ ಪ್ರತಾಪ್ ಸಿಂಗ್, ಪ್ರಶಾಂತ್ ಗುಪ್ತಾ, ರಾಹುಲ್ ರಂಜನ್, ಸಹೃದಯಿ ಮೋದಿ ಮತ್ತು ಶಂಕರನಾರಾಯಣನ್ ದೇವರಾಜನ್ ಅವರು ಭಾರತೀಯ ಭಾಷೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಪ್ರಾರಂಭಿಸಿದರು.[೫] ಅದರ ಆರಂಭಿಕ ಹಂತದಲ್ಲಿ, ಇದು ಸ್ವಯಂ-ನಿಧಿಯ ವೇದಿಕೆಯಾಗಿತ್ತು. ನಂತರ ರಚನೆಕಾರರು ಮಾರ್ಚ್ ೨೦೧೫ ರಲ್ಲಿ ಟಿಲ್ಯಾಬ್ಸ್ (ಟೈಮ್ಸ್ ಇಂಟರ್ನೆಟ್ ಆಕ್ಸಿಲರೇಟರ್) ನಿಂದ ₹೩೦,೦೦,೦೦೦ ಹಣವನ್ನು ಸಂಗ್ರಹಿಸಿದರು ಮತ್ತು ೨೦೧೬ ರಲ್ಲಿ ನೆ‍ಕ್ಸಸ್ ವೆಂಚರ್ ಪಾಲುದಾರರ ನೇತೃತ್ವದ ಹೂಡಿಕೆದಾರರಿಂದ ಯು.ಎಸ್$೧೦,೦೦,೦೦೦ ಸಂಗ್ರಹಿಸಿದರು.

ಅದರ ಪ್ರಾರಂಭದಲ್ಲಿ, ವೇದಿಕೆಯು ಕೇವಲ ಎರಡು ಭಾಷೆಗಳಲ್ಲಿ ವಿಷಯವನ್ನು ಒಳಗೊಂಡಿತ್ತು ಕ್ರಮವಾಗಿ, ಹಿಂದಿ ಮತ್ತು ಗುಜರಾತಿ. ಇದು ನಂತರ ಆರು ಭಾಷೆಗಳಿಗೆ ವಿಸ್ತರಿಸಿತು; ಬೆಂಗಾಲಿ, ಮರಾಠಿ, ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ. ಇದು ಫೆಬ್ರವರಿ ೨೦೧೮ ರಲ್ಲಿ ಒಮಿಡಿಯಾರ್ ನೆಟ್‌ವರ್ಕ್ ನೇತೃತ್ವದ ಸರಣಿ ಎ ರೌಂಡ್‌ನಿಂದ ಯು.ಎಸ್$೪೩,೦೦,೦೦೦ ಸಂಗ್ರಹಿಸಿತು ಮತ್ತು ೨೦೨೦ ರಲ್ಲಿ ಟೆನ್ಸೆಂಟ್ ನೇತೃತ್ವದ ಸಿರೀಸ್ ಸಿ ಯ ಫಂಡಿಂಗ್ ಸುತ್ತಿನಲ್ಲಿ ₹೭೬,೦೦,೦೦,೦೦೦ ಗಳಿಸಿತು.[೬]

ಪ್ರಶಸ್ತಿ[ಬದಲಾಯಿಸಿ]

ಪ್ರತಿಲಿಪಿಗೆ ಐಐಟಿ ಬಾಂಬೆಯಿಂದ ಅತ್ಯುತ್ತಮ ವ್ಯವಹಾರ ಕಲ್ಪನೆಗಾಗಿ 'ಯುರೇಕಾ ಪ್ರಶಸ್ತಿ' ಮತ್ತು ಅತ್ಯುತ್ತಮ ಸ್ಟಾರ್ಟ್‌ಅಪ್‌ಗಾಗಿ 'ಸ್ಟಾರ್ಟ್‌ಅಪ್ ಲಾಂಚ್‌ಪ್ಯಾಡ್' ಪ್ರಶಸ್ತಿಯನ್ನು ನೀಡಲಾಯಿತು.

ಉಲ್ಲೇಖಗಳು[ಬದಲಾಯಿಸಿ]

  1. https://www.digitalvidya.com/blog/pratilipi-how-social-media-marketing-and-authentic-engagement-becomes-growth-factor/
  2. https://www.forbesindia.com/article/startups/online-selfpublishing-goes-desi/45099/1
  3. https://www.instagram.com/pratilipikannada/?hl=en
  4. https://inc42.com/buzz/pratilipi-omidyar-network-funding/
  5. https://www.thehindu.com/features/metroplus/linking-indian-languages/article7105759.ece
  6. https://techstory.in/tencent-infused-rs-76-cr-in-pratilipi-s-ongoing-series-c-round/