ಪೊನ್ನಿಯನ್ ಸೆಲ್ವನ್
ಲೇಖಕರು | Kalki Krishnamurthy |
---|---|
ಮೂಲ ಹೆಸರು | பொன்னியின் செல்வன் |
ಚಿತ್ರಲೇಖಕ | Maniam |
ದೇಶ | India |
ಭಾಷೆ | Tamil |
ಪ್ರಕಾರ | Historical, Romance, Spy, Thriller, Novel |
ಪ್ರಕಾಶಕರು | Kalki |
ಪ್ರಕಟವಾದ ದಿನಾಂಕ | 1950s |
ಮಾಧ್ಯಮ ಪ್ರಕಾರ | Entertainment |
ಪುಟಗಳು | 2400 pages |
ಪೊನ್ನಿಯನ್ ಸೆಲ್ವನ್ ತಮಿಳು:பொன்னியின் செல்வன் " ಪೊನ್ನಿಯ ಪುತ್ರ" ಇದು ಕಲ್ಕಿ ಕೃಷ್ಣಮೂರ್ತಿಯವರು ಬರೆದ 20ನೇ ಶತಮಾನದ 2400 ಪುಟದ ತಮಿಳು ಐತಿಹಾಸಿಕ ಕಾದಂಬರಿ. 5 ಸಂಪುಟಗಳಲ್ಲಿ ಬರೆಯಲ್ಪಟ್ಟಿದೆ, ಇದು ಅರುಲ್ಮೋಳಿವರ್ಮನ್ ಕಥೆ. (ನಂತರ ರಾಜರಾಜ ಚೋಳನಾಗಿ ಸಿಂಹಾಸನವೇರಿದ್ದನು-ತಮಿಳು ಇತಿಹಾಸದಲ್ಲಿ ಒಬ್ಬ ಶ್ರೇಷ್ಠ ರಾಜರುಗಳಲ್ಲಿ ಒಬ್ಬನಾಗಿ ಕ್ರಿ.ಶ. 10ನೇ -11ನೇ ಶತಮಾನದಲ್ಲಿ ರಾಜ್ಯವಾಳಿದ್ದನು). ತಮಿಳಿನಲ್ಲಿ ಇದುವರೆಗೆ ಬರೆದಿರುವುದರಲ್ಲೆಲ್ಲ ಪೊನ್ನಿಯನ್ ಸೆಲ್ವನ್ ಒಂದು ಅತ್ಯುತ್ತಮ ಕಾದಂಬರಿ ಎಂದು ಭಾವಿಸಲಾಗುತ್ತದೆ. ಇದು 10ನೇ ಶತಮಾನದಲ್ಲಿ ಚೋಳ ಸಾಮ್ರಾಜ್ಯದ ಭವಿಷ್ಯದ ಕೈವಾಡವನ್ನು ತೋರಿಸುತ್ತದೆ. ಇದು ತಮಿಳಿನ ನಿಯತಕಾಲಿಕ ಕಲ್ಕಿ ಯಲ್ಲಿ ಧಾರವಾಹಿಯಾಗಿ ಬಂದಿದೆ. ಮೂರುವರೆ ವರ್ಷದಷ್ಟು ಕಾಲ ಧಾರವಾಹಿಯು ಮುಂದುವರೆಯಿತು ಮತ್ತು ಪ್ರತಿ ವಾರ ಭಾರಿ ಕುತೂಹಲದಿಂದ ಇದರ ಪ್ರಕಟಣೆಯನ್ನು ನಿರೀಕ್ಷಿಸಲ್ಪಡುತ್ತಿತ್ತು. 1950ರಲ್ಲಿ ಈ ಕಾದಂಬರಿಯು ಮೊದಲು ತಮಿಳು ವಾರಪತ್ರಿಕೆ ಕಲ್ಕಿಯಲ್ಲಿ ಸುಮಾರು 3.5 ವರ್ಷಗಳಷ್ಟು ಕಾಲ ಪ್ರಕಟಗೊಂಡಿತು.ಪುಸ್ತಕದ ಭಾರೀ ಪ್ರಖ್ಯಾತಿಯನ್ನು ಪರಿಗಣಿಸಿ, ಇದರ ಲೇಖಕನನ್ನು ತಮಿಳುನಾಡಿನ ಸರ್ಕಾರವು ರಾಷ್ಟ್ರೀಕರಿಸಿದೆ ಮತ್ತು ಇದನ್ನು ಯಾರು ಬೇಕಾದರೂ ಪ್ರಕಟಗೊಳಿಸಲು ಮುಕ್ತ ಸ್ಥಾನವನ್ನು ಕಲ್ಪಿಸಲಾಗಿದೆ.
ಐತಿಹಾಸಿಕ ಹಿನ್ನೆಲೆ
[ಬದಲಾಯಿಸಿ]ಪೊನ್ನಿಯನ್ ಸೆಲ್ವನ್ ಒಂದು ಐತಿಹಾಸಿಕ ಕಾದಂಬರಿ, ಇದರಲ್ಲಿ ಎಲ್ಲ ಐತಿಹಾಸಿಕ ಪಾತ್ರಗಳು ಬಹುಶಃ ನಿಜವಾದವು ಮತ್ತು ವಸ್ತುಶಃ ಐತಿಹಾಸಿಕ ಘಟನೆಗಳಾಗಿವೆ.[೧] ಚೋಳ ಸಾಮ್ರಾಜ್ಯದ ಬಗ್ಗೆ ಲಭ್ಯವಿರುವ ಅತಿ ಪ್ರಾಚೀನ ಸಾಕ್ಷಿಯೆಂದರೆ, ಪ್ರಸಿದ್ಧ ಚೋಳ ರಾಜ ಕರಿಕಲ್ ಪೆರುವಲಥನ್ ಬಗ್ಗೆ ಮತ್ತು ಅವನ ನಂತರ ಇನ್ನು ಕೆಲವು ಪ್ರಸಿದ್ಧ ರಾಜರೆಂದರೆ ಕಿಲ್ಲಿವಲವನ್, ನೆಡುಂಕಿಲ್ಲಿ, ಪೆರುಂಕಿಲ್ಲಿ ಇತ್ಯಾದಿ. ಇದರ ನಂತರ ಸಾಮ್ರಾಜ್ಯದ ಅವಸಾನ ಆರಂಭವಾಗುತ್ತದೆ ಮತ್ತು ವಿಜಯಲಾಯ ಚೋಳನು ಶಕ್ತಿಯುತವಾಗಿ ಹೊರಹೊಮ್ಮುತ್ತ ಪಾಂಡ್ಯರು ಮತ್ತು ಪಲ್ಲವರನ್ನು ಸೋಲಿಸಿ ಚೋಳ ಸಾಮ್ರಾಜ್ಯವನ್ನು ವಿಸ್ತರಿಸುತ್ತಾನೆ.ವಿಜಯಲಾಯ ಚೋಳ (848-871 CE)ನುಮಧ್ಯ ಕಾಲೀನ ಚೋಳ ಸಾಮ್ರಾಜ್ಯವನ್ನು ಸ್ಥಾಪಿಸಿದನು ಅವನು ಪಲ್ಲವರ ಸಾಮಂತ ಮುಖ್ಯಸ್ಥನೊಬ್ಬನಿಂದ ರಾಜ್ಯವನ್ನು ಜಯಿಸಿದನು ಮತ್ತು ಪಳಿಯಾರುವನ್ನು ಸಾಮ್ರಾಜ್ಯದ ರಾಜಧಾನಿಯಾಗಿ ಸ್ಥಾಪಿಸಿದನು, ಮುಂದೆ ಇದು ಸುಂದರ ಚೋಳನ ಕಾಲದಲ್ಲಿ ತಂಜಾವೂರ್‌ಗೆ ಸ್ಥಳಾಂತರಗೊಂಡಿತು. ಅವನ ಮಗ ಮತ್ತು ಉತ್ತರಾಧಿಕಾರಿ ಮೊದಲನೇ ಆದಿತ್ಯನು ಪಲ್ಲವರು ಮತ್ತು ಕೊಂಗು ರಾಜ್ಯವನ್ನು ಸೋಲಿಸಿದನು. ನಂತರ ಅವನ ಮಗ ಪರಂತಕ 1ನ ನಾಯಕತ್ವದಲ್ಲಿ (c 907-955 CE), ಚೋಳರು ಒಡೆತನವನ್ನು ಸ್ಥಾಪಿಸಿದರು ಅದು ಬಹುದೊಡ್ಡ ರಾಜರಾಜ ಸಾಮ್ರಾಜ್ಯ ಮತ್ತುಕುಲೋತ್ತುಂಗ ಚೋಳ 1ರ ಸ್ಥಾಪನೆಯ ಪೂರ್ವ ಚಿತ್ರಣವನ್ನು ನೀಡುತ್ತದೆ. ಪರಂತಕ 1 ನುಬಾಣರು,ಗಂಗರು, ಪಾಂಡ್ಯರು ಮತ್ತು ಸಿಲೋನ್ ರಾಜನ ಮೇಲೆ ವಿಜಯವನ್ನು ಸಾಧಿಸಿದನು.
ಈ ಘಟನೆ ಮತ್ತು ಅವನ ವಿಜಯದ ವ್ಯಾಪ್ತಿಯನ್ನು ಅವನ ಬರಹಗಳಿಂದ ತಿಳಿಯಬಹುದು. ಅವನ ಆಳ್ವಿಕೆಯ ಕೊನೆಯಲ್ಲಿ ಅಥವಾ ಅವನ ಸಾವಿಗೆ ಮೊದಲುಕೃಷ್ಣ 3 ರಾಜನ ನೇತೃತ್ವದಲ್ಲಿ ರಾಷ್ಟ್ರಕೂಟರು ತಮಿಳು ರಾಜ್ಯದ ಮೇಲೆ ಧಾಳಿ ಮಾಡಿದರು, ತಕ್ಕೋಲಮ್(ಅರಕ್ಕೋಣಮ್ ಬಳಿ)ನಲ್ಲಿ ಚೋಳ ರಾಜಕುಮಾರ ರಾಜಾದಿತ್ಯನನ್ನು ಕೊಂದರು 948CE , ಚೋಳರ ಪ್ರಭಾವದ ಮಿತಿಯಲ್ಲಿ ಅವರ ಪೂರ್ವಿಕರ ಅಧಿಪತ್ಯದ ತಂಜಾವೂರು ಮತ್ತು ತಿರುಚಿರಪಲ್ಲಿ ಜಿಲ್ಲೆಗಳಾಗಿ ಸೇರಿಸಿಕೊಳ್ಳಲಾಯಿತು ಮತ್ತು ಸುಮಾರು ಕಾಲು ಶತಮಾನದಷ್ಟು ಕಾಲ ಅವರು ರಾಜ್ಯವಾಳಿದ ತೊಂಡೈನಾಡುವನ್ನು ಸ್ವಾಧೀನಪಡಿಸಿಕೊಂಡರು
ರಾಜಾದಿತ್ಯನ ನಂತರದ ಐದು ರಾಜರುಗಳ ಹೆಸರನ್ನು ವಿವಿಧ ಐತಿಹಾಸಿಕ ಪ್ರಮಾಣಗಳಿಂದ ತಿಳಿದುಕೊಳ್ಳಬಹುದು.
ಗಂದರಾದಿತ್ಯ ಒಬ್ಬ ಶ್ರೇಷ್ಠ ಶೈವ, ಅವನ ಮಗ ಪ್ರಸಿದ್ಧ ಮಧುರಾಂತಕನಾಗುವನಿದ್ದ. . ಗಂದಾರಾದಿತ್ಯ ಒಬ್ಬ ಉತ್ತಮ ರಾಜನೇನಲ್ಲ ಮತ್ತು ಇವನ ಆಡಳಿತಾವಧಿಯ ಅಂತ್ಯದಲ್ಲಿ ಚೋಳ ಸಾಮ್ರಾಜ್ಯ ಮತ್ತೆ ಮೇಲೇಳಲಾರಂಭಿಸಿತು ಅಲ್ಲದೆ, ಅವನ ಸಹೋದರರಾದ ರಾಜಾತೀತ ಮತ್ತು ಅರಿಂಜಯ ಇಬ್ಬರೂ ಸಿಂಹಾಸನವನ್ನೇರಲಾಗಲಿಲ್ಲ, ಏಕೆಂದರೆ ಮೊದಲನೆಯವನು ಸಾವನ್ನಪ್ಪಿದ್ದ ಕಡೆಯವನು ಯಾವುದೇ ಕ್ಷಣದಲ್ಲಿ ಮೃತ್ಯುವನ್ನು ನಿರೀಕ್ಷಿಸುತ್ತಿದ್ದ. ಆದ್ದರಿಂದ ಅರಿಂಜಯನ ಮಗನಾದ ಸುಂದರ ಚೋಳ ಅಥವಾ ಮೊದಲೇ ಕರೆಸಿಕೊಳ್ಳುತ್ತಿದ್ದ ಪರಂತಕ 2 , ಗಂದರಾದಿತ್ಯನ ನಂತರ ರಾಜನಾದನು.
ಅರಿಂಜಯ ಚೋಳನು ಬಹಳ ಚಿಕ್ಕ ಪ್ರಾಯದಲ್ಲೇ ಯುದ್ಧದಲ್ಲಿ ಮೃತನಾದನು, ಅವನು ಗಂಗರಾದಿತ್ಯನ ನಂತರ ಸಿಂಹಾಸನವೇರಿದ ಪರಾಂತಕ 2 ಇವನ ತಂದೆಯಾಗಿದ್ದನು.
ಪರಾಂತಕ ಚೋಳ 2 (ಅರಿಂಜಯನ ಮಗ, ವಿಶೇಷವಾದ ಚೆಲುವನ್ನು ಹೊಂದಿದ್ದ ಮತ್ತು ಚೆನ್ನಾಗಿಯೇ ರಾಜ್ಯಭಾರ ಮಾಡುತ್ತಿದ್ದ ಇವನು ಸುಂದರ ಚೋಳನೆಂದೂ ಪ್ರಸಿದ್ದನಾಗಿದ್ದನು), ನಂತರ ಅವನ ಕಾಲಿಗೆ ಪಾರ್ಶ್ವವಾಯು ಹೊಡೆದಿದ್ದರಿಂದ ಮಾರಕ ಕಾಯಿಲೆಗೆ ತುತ್ತಾದನು. ಅವನು ರಾಜರಾಜ, ಆದಿತ್ಯ ಕರಿಕಲ ಮತ್ತು ಕುಂಡವೈಯ ಹೆಮ್ಮೆಯ ತಂದೆಯಾಗಿದ್ದನು.
ಆದಿತ್ಯ ಕರಿಕಲನ್ ಅಥವಾ ಆದಿತ್ಯ 2 , ಪರಾಂತಕ 2 ಇವನ ಮಗನಾಗಿದ್ದನು ಮತ್ತು ಪರಾಂತಕ 2 ರ ನಂತರ ಚೋಳ ಸಾಮ್ರಾಜ್ಯದ ಪ್ರಧಾನ ಉತ್ತರಾಧಿಕಾರಿಯಾಗಿದ್ದನು. ಆದರೆ ಅವನು ಸಿಂಹಾಸನವನ್ನು ಏರುವುದಕ್ಕೆ ಮೊದಲೇ ವಿಶ್ವಾಸಘಾತವು ಅವನನ್ನು ಸಾವಿನೆಡೆಗೆ ಕೊಂಡೊಯ್ದಿತ್ತು. ಅವನು ಕದಂಬುರ್‌ನಲ್ಲಿ ಕೊಲ್ಲಲ್ಪಟ್ಟನು ಮೇಲಕದಂಬುರ್ ಸಂಬುವರಯರ್ ಮಾಳಿಗೈ ಮತ್ತು ಮದುರಾಂತಕ,
ಅಧಿಕೃತವಾಗಿ ಉತ್ತಮ ಚೋಳ, ಗಂದಾರಾದಿತ್ಯ ಮತ್ತು ಸೆಂಬಿಯನ್ ಮಹಾದೇವಿಯವರ ಮಗ. ಅವನು ರಾಜ್ಯಾಧಿಕಾರಕ್ಕಾಗಿ ಆಶೆಪಡದಿದ್ದರೂ, ಅದು ಅವನ ಮೇಲೆ ರಾಜರಾಜ ಮತ್ತು ಅವನ ಸ್ನೇಹಿತನಾದ ವಂತಿಯದೇವನ ಒತ್ತಾಯವಾಗಿತ್ತು. ಅವನು ಸುಮಾರು 12ವರ್ಷಗಳ ಕಾಲ ರಾಜ್ಯಭಾರ ಮಾಡಿದನು, ಅವನ ಮೃತ್ಯುವಿನ ನಂತರ ರಾಜರಾಜನು ಸಿಂಹಾಸನವನ್ನು ಏರಿದನು.
ಆದಿತ್ಯ ಕರಿಕಲನ್ 2 ಇವನು ಕೆಲವು ವರ್ಷಗಳ ನಂತರ ಹೋರಾಡಿ ತೊಂಡೈನಾದುವನ್ನು ರಾಷ್ಟ್ರ ಕೂಟರಿಂದ ಪುನಃ ಗಳಿಸಿದನು. ಅವನೊಬ್ಬ ಶ್ರೇಷ್ಠ ಯೋಧನಾಗಿದ್ದನು. ಅವನು ಸೇವೂರ್‌ನ ಯುದ್ಧಭೂಮಿಯಲ್ಲಿ ಅನೇಕ ಧೀರೋದಾತ್ತ ಕಾರ್ಯಗಳನ್ನು ಸಾಧಿಸಿದನು ಮತ್ತು ಬಹಳ ಕಾಲ್ದಿಂದ ತಪ್ಪಿಸಿಕೊಳ್ಳುತ್ತಿದ್ದ ಪಾಂಡಿಯ ರಾಜ ವೇರಪಾಂಡಿಯನ ಶಿರಚ್ಛೇದ ಮಾಡಿದನು. ಆದಿತ್ಯನ ಸಾವಿನ ನಂತರ ಚೋಳ ಸಾಮ್ರಾಜ್ಯದ ಏಕಸ್ವಾಮ್ಯದ ಉತ್ತರಾಧಿಕಾರತ್ವವು ಚರ್ಚೆಗೊಳಗಾಯಿತು. ಹೆಚ್ಚಿನ ಸಭಾಸದರು ಮತ್ತು ಪ್ರಜೆಗಳು ಜನಾದರಣೆಯನ್ನು ಹೊಂದಿದ್ದ ಅರುಲ್ಮೋಳಿವರ್ಮನ್ (ರಾಜರಾಜ ಚೋಳ) ಸಿಂಹಾಸನವನ್ನು ಏರಬೇಕೆಂದು ಬಯಸಿದರು, ಆದರೆ ಅವನು ತಾನೇ ಸ್ವತಃ ತನ್ನ ಚಿಕ್ಕಪ್ಪನದ ಮದುರಾಂತಕ ಉತ್ತಮ ಚೋಳನು ರಾಜನಾಗುವೆಡೆಗೆ ಒಲವು ತೋರಿಸಿದ್ದನು. ಕೊನೆಗೆ ಅರುಲ್ಮೋಳಿವರ್ಮನ್, ಮದುರಾಂತಕನು ಸಿಂಹಾಸನವನ್ನು ಒಪ್ಪಿಕೊಳ್ಳುವಂತೆ ಉಪಾಯ ಮಾಡಿದನು. ಅವನ ನಂತರ ಅರುಲ್ಮೋಳಿವರ್ಮನ್ ರಾಜರಾಜನ್ 985CEಯಲ್ಲಿ ರಾಜನಾದನು. ಅವನ ಆಡಳಿತವು ಹೋಲಿಸಲಸಾಧ್ಯವಾದ ವೈಭವ ಮತ್ತು ಶ್ರೇಷ್ಠವಾದ ಕೀರ್ತಿ ಮತ್ತು ಅಭಿವೃದ್ಧಿಯನ್ನುಚೋಳ ಸಾಮ್ರಾಜ್ಯದ ಚಕ್ರಾಧಿಪತ್ಯಕ್ಕೆ ತಂದುಕೊಟ್ಟಿತು.
ಪೊನ್ನಿಯನ್ ಸೆಲ್ವನ್ ಎನ್ನುವುದು ರಾಜರಾಜ ಚೋಳನಿಗೆ ನೀಡಿದ ಅಡ್ಡ ಹೆಸರು. ಅರುಲ್ಮೋಳಿವರ್ಮನ್‌ನ ಮೂಲ ಬಿರುದು ರಾಜಕೇಸರಿ ವರ್ಮನ್ , ಮುಮ್ಮುಡಿ-ಸೋಲ-ದೇವ . ಅವನು ಪರಾಂತಕ ಚೋಳ 2 ಅಲಿಯಾಸ್ ಸುಂದರ ಚೋಳ ಮತ್ತು ವಾನಮಾದೇವಿಯರ ಎರಡನೆಯ ಮಗ. ರಾಜರಾಜ ಚೋಳನ್‌ಗೆ ಒಬ್ಬ ಹಿರಿಯ ಸೋದರಿ ಕುಂಡವೈ ಮತ್ತು ಒಬ್ಬ ಹಿರಿಯ ಸೋದರ ಆದಿತ್ಯ ಕರಿಕಲನ್ ಇದ್ದರು. ಅವನಿಗೆ ಅವನ ಸೋದರಿಯ ಮೇಲೆ ಬಹಳ ಗೌರವವಿದ್ದಿತು, ನಂತರ ಅವಳು ತಂಜಾವೂರಿನಲ್ಲಿ ತನ್ನ ಕಿರಿಯ ಸೋದರನೊಂದಿಗೆ ಜೀವಿಸಿದ್ದಳು ಮತ್ತು ತನ್ನ ಮೊದಲ ಮಗಳಿಗೆ ಅವಳ ಹೆಸರನ್ನು ಇಟ್ಟಿದ್ದನು.
ಕಲ್ಕಿಯ ಇತರ ಮೂಲಗಳೆಂದರೆ ಕಲ್ಲಿನ ಮೇಲಿನ ಬರಹಗಳು, ತಾಮ್ರ ಪತ್ರಗಳು ಮತ್ತು ಇತರ ಪುಸ್ತಕಗಳು. ತಂಜಾವೂರಿನ ಶ್ರೇಷ್ಠ ದೇವಾಲ್ಯವೊಂದರಲ್ಲಿ ಕಲ್ಲಿನ ಫಲಕದ ಮೇಲೆ ಹೀಗೆ ಬರೆಯಲ್ಪಟ್ಟಿದೆ: " ರಾಜರಾಜ ಚೋಳನ ಗೌರವಾನ್ವಿತ ಹಿರಿಯ ಸೋದರಿ ವಂಡಿಯದೇವನ್‌ನ ಪತ್ನಿ, ಅಳ್ವರ್ ಪರಂತಕರ್ ಕುಂಡವೈಯರ್"[೧]. ಹಿಸ್ಟರಿ ಆಫ್ ಲೇಟರ್ ಚೋಳಾಸ್ ಗ್ರಂಥದಲ್ಲಿ ವಂಡಿಯತೇವನ್ ಬಗ್ಗೆ ಐದು ಸಾಲುಗಳಿವೆ, ಬಾಣ ರಾಜಕುಮಾರ, ನಿಜವಾದ ಐತಿಹಾಸಿಕ ಪಾತ್ರ, ಅವನು ಈ ಕಾದಂಬರಿಯ ನಿಜವಾದ ನಾಯಕ ಒಳಸಂಚುಕಾರರ ಹೆಸರುಗಳೂ ಕಲ್ಲಿನ ಬರಹಗಳಲ್ಲಿ ಕಂಡು ಬಂದಿವೆ[೨].
ರಾಜರ ಚಟುವಟಿಕೆಗಳ ಬಗೆಗಿನ ಅನೇಕ ವಿವರಗಳು, ಅನ್‌ಬಿಲ್‌ನಲ್ಲಿ ಕಂಡುಬಂದಂತೆ ಈ ರೀತಿಯ ಶಿಲಾಶಾಸನಗಳಿಂದ ಮತ್ತು ತಾಮ್ರ ಪತ್ರಗಳಿಂದ ತಿಳಿದುಬರುತ್ತವೆ. ತಿರುವಲಂಗಾಡು ತಾಮ್ರ ಪತ್ರಗಳು ಹೇಳುತ್ತವೆ, " ಸುಂದರ ಚೋಳನ ನಂತರ ಅರುಲ್ಮೋಳಿವರ್ಮನ್‌ನೇ ಸಿಂಹಾಸನವನ್ನೇರಬೇಕು ಮತ್ತು ತಮ್ಮ ರಾಜ್ಯವನ್ನಾಳಬೇಕೆಂಬುದರ ಬಗ್ಗೆ ಚೋಳ ಪ್ರಜೆಗಳು ಕಟ್ಟಾಸೆಯುಳ್ಳವರಾಗಿದ್ದರು. ಆದರೆ ಅರುಲ್ಮೋಳಿವರ್ಮನ್ ತನ್ನ ಅಜ್ಜನ ಹಿರಿಯ ಸೋದರ ಗಂದರಾದಿತ್ಯನ ಮಗನಾದ, ತನ್ನ ಚಿಕ್ಕಪ್ಪ ಉತ್ತಮ ಚೋಳನ ಹಕ್ಕನ್ನು ಗೌರವಿಸಿದನು, ಅವನನ್ನು ರಾಜನಾಗಿ ಸಿಂಹಾಸನವನ್ನೇರಿಸಿದನು.
ಕಥಾ ಸಾರಾಂಶ
[ಬದಲಾಯಿಸಿ]ಕಥೆಯು ಸುಂದರ ಯುವಕ ವಂಡಿಯತೇವನ್‌ನ ಸುತ್ತ ತಿರುಗುತ್ತದೆ, ಚೆಲುವಾದ ಯುವಕನೊಬ್ಬ ಚೋಳ ನಾಡನ್ನು ಬಿಟ್ಟು ಒಬ್ಬ ರಾಜ ಮತ್ತು ರಾಜಕುಮಾರಿಗೆ ಪಟ್ಟದ ರಾಜಕುಮಾರನಾದ ಆದಿತ್ಯ ಕರಿಕಲನ್‌ನ ಸಂದೇಶವನ್ನು ತಲುಪಿಸಲು ಹೊರಡುತ್ತಾನೆ. ಕಥೆಯು ವಂಡಿಯತೇವನ್‌ನ ಚೋಳ ರಾಜ್ಯದ ಪ್ರವಾಸ ಮತ್ತು ಯುವ ರಾಜಕುಮಾರ ಅರುಲ್ಮೋಳಿವರ್ಮನ್‌ನ ಶ್ರೀಲಂಕಾ ಪ್ರವಾಸದ ನಡುವೆ ಸಾಗುತ್ತದೆ. . ನಿರೂಪಣೆಯು ಗೊಂದಲದೊಂದಿಗೆ ಮಾನಸಿಕ ಸ್ಥಿರತೆಯನ್ನು ಕಳೆದುಕೊಂಡಂತಿರುವ ನಾಡಿನಲ್ಲಿ ರಾಜಕೀಯ ಶಾಂತಿಯನ್ನು ಸ್ಥಾಪಿಸಲು ಮತ್ತು ಸಾಮಂತರು ಹಾಗೂ ಕೀಳು ಮನೋಭಾವದ ಮುಖ್ಯಸ್ಥರು ಸೇರಿ ಒಳಸಂಚು ನಡೆಸಿ ಕಾನೂನು ಭಂಗ ಮಾಡುವವರನ್ನು ನಿಗ್ರಹಿಸಲು, ಅರುಲ್ಮೋಳಿ(ಪಟ್ಟಕ್ಕೇರುವ ಮೊದಲು ರಾಜರಾಜನು ಹೀಗೆ ಕರೆಯಲ್ಪಡುತ್ತಿದ್ದನು)ಯನ್ನು ತಿರುಗಿ ಕರೆತರಲು ಯತ್ನಿಸುವ ಸಹೋದರಿ ಕುಂಡವೈಳನ್ನು ಕುರಿತು ಸಾಗುತ್ತದೆ,
ಪರಂತಕ ಚೋಳನ ನಂತರ ಅವನ ಎರಡನೆಯ ಮಗ ಗಂದರಾದಿತ್ಯ ಪಟ್ಟಕ್ಕೆ ಬರುತ್ತಾನೆ, ಏಕೆಂದರೆ ಮೊದಲ ಮಗ ಸಾವನ್ನಪ್ಪಿರುತ್ತಾನೆ. ಗಂದರಾದಿತ್ಯನ ಸಾವಿನ ಸಮಯದಲ್ಲಿ ಅವನ ಮಗ ಮದುರಾಂತಕ ಇನ್ನೂ ಮಗುವಾಗಿರುತ್ತಾನೆ, ಆದ್ದರಿಂದ ಗಂದರಾದಿತ್ಯನ ಸಹೋದರ ಅರಿಂಜಯ ಸಿಂಹಾಸನವನ್ನೇರುತ್ತಾನೆ. ಅರಿಂಜಯನ ಮೃತ್ಯುವಿನ ನಂತರ ಅವನ ಮಗ ಪರಂತಕ 2 , ಸುಂದರ ಚೋಳ ಅಧಿಕಾರಕ್ಕೆ ಬರುತ್ತಾನೆ. ಅವನಿಗೆ ಇಬ್ಬರು ಪುತ್ರರು, ಆದಿತ್ಯ ಕರಿಕಲನ್ ಮತ್ತು ಅರುಲ್ಮೋಳಿ ವರ್ಮನ್ ಮತ್ತು ಒಬ್ಬ ಪುತ್ರಿ ಕುಂಡವೈ ಇದ್ದರು.
ಕಥೆ ಪ್ರಾರಂಭವಾಗುವಾಗ, ಸಾಮ್ರಾಟ ಸುಂದರ ಚೋಳನು ಕಾಯಿಲೆಯಿಂದ ನರಳುತ್ತಿರುತ್ತಾನೆ ಮತ್ತು ಬಹಿಷ್ಕರಿಸಲ್ಪಟ್ಟಿರುತ್ತಾನೆ. ಆದಿತ್ಯ ಕರಿಕಲನ್ ಉತ್ತರ ಸೇನಾಪಡೆಯ ಅಧಿಕಾರಿಯಾಗಿದ್ದನು ಮತ್ತು ಕಂಚಿಯಲ್ಲಿ ವಾಸಿಸುತ್ತಿದ್ದನು ಮತ್ತು ಅರುಲ್ಮೋಳಿವರ್ಮನ್ (ಮುಂದೆ ರಾಜ ರಾಜ ಚೋಳ 1 ಎಂದು ಪ್ರಸಿದ್ಧನಾದನು)ಯುದ್ಧದಲ್ಲಿ ಶ್ರೀಲಂಕಾದಲ್ಲಿದ್ದನು ಮತ್ತು ಅವರ ಸಹೋದರಿ ಕುಂಡವೈ ಪಿರಟ್ಟಿ, ಪಳಯಾರೈ ಎಂಬ ಚೋಳ ಚಕ್ರಾಧಿಪತ್ಯದ ಕುಟುಂಬದಲ್ಲಿ ಜೀವಿಸುತ್ತಿದ್ದಳು.
ಸುಂದರ ಚೋಳ ಮತ್ತು ಅವನ ಮಕ್ಕಳ ವಿರುದ್ಧ ಒಳಸಂಚಿನ ವದಂತಿ ಆರಂಭವಾದಾಗ ಕಥೆಯು ಮುಂದುವರೆಯುತ್ತದೆ. ಒಬ್ಬ ವ್ಯಕ್ತಿ ಪಾಂಡ್ಯ ರಾಜದ್ರೋಹಿಗಳ ಕುರಿತು ಮುನ್ಸೂಚನೆಯನ್ನು ಪಡೆದಿದ್ದ ಅವನೇ ಬಾಣ ಮನೆತನಕ್ಕೆ ಸೇರಿದ ಮಹಾನ್ ಯೋಧ ವಲ್ಲವರಿಯನ್ ವಂಡಿಯತೇವನ್. ಗ್ರಂಥದ ಹೆಸರು ಪೊನ್ನಿಯನ ಸೆಲ್ವನ್ ಎಂದಾದರೂ, ಈ ಕಥಾನಕದ ನಾಯಕ ಆದಿತ್ಯ ಕರಿಕಲನ್‌ನ ಸ್ನೇಹಿತ ವಂಡಿಯತೇವನ್. ಕಾದಂಬರಿಯ ಅನೇಕ ಪಾತ್ರಗಳನ್ನು ವಂಡಿಯತೇವನ್ ಮೂಲಕವೇ ಭೇಟಿಯಾಗುತ್ತೇವೆ, ಉದಾಹರಣೆಗೆ ಎಲ್ಲ ಪ್ರಜೆಗಳ ಪ್ರೀತಿಯ ರಾಜಕುಮಾರ ಅರುಲ್ಮೋಳಿವರ್ಮನ್ ಮತ್ತು ಪ್ರಿಯ ಪಳವೆಟ್ಟುರಯರ್, ಅರವತ್ತನೆಯ ವಯಸ್ಸಿನಲ್ಲಿ ನಂದಿನಿಯನ್ನು ಮದುವೆಯಾದ ಕುಲಪತಿ. ಆದಿತ್ಯ ಕರಿಕಲನ್ ತನ್ನ ಯೌವನದಲ್ಲಿ ನಂದಿನಿಯ ಪ್ರೇಮಪಾಶದಲ್ಲಿ ಬೀಳುತ್ತಾನೆ, ಆದರೆ ಆದಿತ್ಯ ಕರಿಕೇಲನ್‌ನು ವೀರ ಪಾಂಡ್ಯನ್(ಬಹುಶಃ ಅವಳ ಪ್ರೇಮಿ)ನನ್ನು ಕೊಲ್ಲುತ್ತಾನಾದ್ದರಿಂದ ಅವಳು ಅವನ ಬಗ್ಗೆ ಪ್ರತೀಕಾರದ ಭಾವನೆಯನ್ನು ತಾಳುತ್ತಾಳೆ ಮತ್ತು ಚೋಳ ಸಾಮ್ರಾಜ್ಯ್ವವನ್ನು ನಿರ್ನಾಮ ಮಾಡುವ ಪ್ರಮಾಣವನ್ನು ಮಾಡುತ್ತಾಳೆ.ನಾವು ಕುಂಡವೈ ದೇವಿಯನ್ನು ಭೇಟಿ ಮಾಡುತ್ತೇವೆ, ಅವಳು ಈ ಪಿತೂರಿಯ ವಾರ್ತೆಯನ್ನು ತಿಳಿದು ವಂಡಿಯತೇವನ್‌ನನ್ನು ಶ್ರೀಲಂಕಾಕ್ಕೆ ಕಳಿಸಿ ಅರುಲ್ಮೋಳಿವರ್ಮನ್‌ಗೆ ತಕ್ಷಣ ತಿರುಗಿ ಬರುವಂತೆ ಸಂದೇಶ ಕಳಿಸುತ್ತಾಳೆ. ಇದೆಲ್ಲದರ ನಡುವೆ, ಬೇರೆ ಪಾತ್ರಗಳೂ ಇವೆ, ಅವು ಮದುರಾಂತಕ ತೇವರ್(ರಾಜದ್ರೋಹಿಗಳು ಇವನನ್ನು ರಾಜನನ್ನಾಗಿ ಮಾಡಬೇಕೆಂದು ಪಿತೂರಿ ಮಾಡಿರುತ್ತಾರೆ), ಗಂದರಾದಿತ್ಯನ ಮಗ ಮತ್ತು ಅನಿರುದ್ಧ ಬ್ರಹ್ಮರಾಯರ್, ಸುಂದರ ಚೋಳರ ಪ್ರಧಾನ ಮಂತ್ರಿ ಮತ್ತು ಎಲ್ಲೆಡೆಯೂ ಕಣ್ಣು ಮತ್ತು ಕಿವಿಯುಳ್ಳ ವ್ಯಕ್ತಿ.ಆದರೆ ಈ ಗ್ರಂಥದ ಅತ್ಯಂತ ವಿಶೇಷವಾದ ಪಾತ್ರವೆಂದರೆ ಬ್ರಹ್ಮರಾಯರ್‌ನ ಗೂಢಚಾರಿ ಅಳ್ವರ್ಕಡಿಯನ್ ನಂಬಿ, ಶೈವರನ್ನು ವಾಗ್ವಾದಕ್ಕೆ ಆಹ್ವಾನಿಸುವ ವೈಷ್ಣವ.ಅವನು ಯಾವಾಗಲೂ ಪ್ರಧಾನ ಮಂತ್ರಿಯಿಂದ ವಿಷಯಗಳನ್ನು ಸಂಗ್ರಹಿಸುತ್ತಾನೆಮತ್ತು ವಂಡಿಯತೇವನ್ ಸುತ್ತಲೂ ಸದಾ ಕಾಲ ಇರುತ್ತಾ, ಅವನನ್ನು ಎಲ್ಲ ರೀತಿಯ ತೊಂದರೆಗಳಿಂದ ರಕ್ಷಿಸುತ್ತಿತುತ್ತಾನೆ. ಕೆಲವು ಸುಂದರ ಸ್ತ್ರೀಯರೂ ಇದ್ದರು, ಕೊಡುಂಬಲುರ್ ರಾಜಕುಮಾರಿ ವನತಿ, ಭವಿಷ್ಯದ ರಾಜನನ್ನು ಲಂಕಾಕ್ಕೆ ಸೇರಿಸುವ ದೋಣಿ ನಡೆಸುವ ಸ್ತ್ರೀ ಪೂಂಕುಳಾಲಿ, ಕಿವುಡಿ ಮತ್ತು ಮೂಕಿ ಮಲತಾಯಿ ಮಂದಾಕಿನಿ ಮತ್ತು ಪಾಂಡ್ಯ ರಾಜದ್ರೋಹಿಗಳನ್ನು ಪ್ರೋತ್ಸಾಹಿಸುವ ಅಂಬಿಗನ ಪತ್ನಿ ರಕ್ಕಮ್ಮಳ್.
ಇವರಲ್ಲಿ ಮರೆಯಲು ಸಾಧ್ಯವಿಲ್ಲದವಳೆಂದರೆ ನಂದಿನಿ, ಅವಳ ಚೆಲುವು ಎಂತಹ ಪುರುಷನನ್ನೂ ಪ್ರಭಾವಕ್ಕೊಳಪಡಿಸುವಂಥದ್ದು ಎನ್ನಲಾಗಿದೆ.
ಪೂಂಕಳಾಲಿಯ ಸಹಾಯದಿಂದ, ವಂಡಿಯತೇವನ್ ಶ್ರೀಲಂಕಾ ತಲುಪುತ್ತಾನೆ, ಅರುಲ್ಮೋಳಿವರ್ಮನ್‌ನನ್ನು ಭೇಟಿಯಾಗಿ ಅವನ ಆಪ್ತ ಸ್ನೇಹಿತನಾಗುತ್ತಾನೆ. ಲಂಕಾದಲ್ಲಿ ಅರುಲ್ಮೋಳಿವರ್ಮನ್‌ಗೆ ಒಂದು ವಿಷಯ ತಿಳಿದು ಬರುತ್ತದೆ, ಅವನ ತಂದೆ ಲಂಕಾದ ಸಮೀಪ ಒಂದು ದ್ವೀಪದಲ್ಲಿ ಒಬ್ಬ ಹುಟ್ಟು ಕಿವುಡಿ ಮತ್ತು ಮೂಕಿ ಹುಡುಗಿಯ ಜೊತೆ ಕೆಲವು ಸಮಯ ಕಳೆದರೆಂದೂ ತಿಳಿದುಬರುತ್ತದೆ. ಅವನು ಅವಳನ್ನು ಭೇಟಿಯಾಗುತ್ತಾನೆ ಮತ್ತು ಅವಳು ಬರೆದ ಚಿತ್ರಗಳಿಂದ ಅವಳು ಮತ್ತು ಅವಳ ತಂದೆಗೆ ಇಬ್ಬರು ಮಕ್ಕಳಿದ್ದಾರೆಂದು ತಿಳಿಯುತ್ತಾನೆ. ಆ ಮಕ್ಕಳು ಯಾರು ಮತ್ತು ಅವರಿಗೆ ಸಿಂಹಾಸನದ ಮೇಲೆ ಅಧಿಕಾರವಿದೆಯೇ? ನಂತರ ಒಂದು ದಿನ ತಿರುಪುರಂಬಯಮ್ ಕಾಡಿನಲ್ಲಿ ವಂಡಿಯತೇವನ್ ನಂದಿನಿಯನ್ನು ನೋಡುತ್ತಾನೆ ಮತ್ತು ಪಾಂಡ್ಯ ರಾಜದ್ರೋಹಿಗಳು ಒಬ್ಬ ಸಣ್ಣ ಹುಡುಗನನ್ನು ಸಿಂಹಾಸನದ ಮೇಲೆ ಕೂಡಿಸುತ್ತಾರೆ ಮತ್ತು ಅವನ ಮೂಂದೆ ಪ್ರಮಾಣ ಸ್ವೀಕರಿಸುತ್ತಾರೆ. ಆ ಹುಡುಗ ಯಾರು ಮತ್ತು ಸಿಂಹಾಸನವನ್ನು ಹೊಂದಲು ಅವನಿಗೇನು ಅಧಿಕಾರವಿದೆ?
ಲಂಕಾದಿಂದ ತಿರುಗಿ ಬರುವಾಗ ಅರುಲ್ಮೋಳಿವರ್ಮನ್ ಚಂಡಮಾರುತಕ್ಕೆ ಸಿಲುಕುತ್ತಾನೆ ಮತ್ತು ಕಣ್ಮರೆಯಾಗುತ್ತಾನೆ. ಅವನು ಮರಣ ಹೊಂದಿರುವನೆಂದು ವದಂತಿಗಳು ಹಬ್ಬುತ್ತವೆ, ಆದರೆ ಅವನು ಬದುಕುಳಿಯುತ್ತಾನೆ, ನಾಗಪಟ್ಟಣದ ಬೌದ್ಧ ಸನ್ಯಾಸಿಗಳ ಮಠವಾದ ಚೂಡಾಮಣಿ ವಿಹಾರಮ್‌ನಲ್ಲಿ ತಂಗಿರುತ್ತಾನೆ. ನಂತರ ನಿದಾನವಾಗಿ ಚದುರಿಹೋದ ಕುಟುಂಬ ಮತ್ತೆ ಸೇರಲು ಪ್ರಾರಂಭವಾಗುತ್ತದೆ. ಈ ನಡುವೆ ರಾಜದ್ರೋಹಿಗಳು ಒಂದು ದಿನವನ್ನು ಗೊತ್ತು ಮಾಡಿಕೊಂಡು ರಾಜ ಮತ್ತು ಅವನ ಮಕ್ಕಳನ್ನು ಕೊಲ್ಲಲು ಸಂಚು ಮಾಡುತ್ತಾರೆ.
ರಾಜದ್ರೋಹಿಗಳು ಸುಂದರ ಚೋಳನನ್ನು ಕೊಲ್ಲಲು ಸಾಧ್ಯವಾಯಿತೆ? ಮತ್ತು ಮಧುರಾಂತಕನನ್ನು ರಾಜನನ್ನಾಗಿ ಮಾಡಿದರೆ ಅಥವಾ ಅರುಲ್ಮೋಳಿವರ್ಮನ್ ರಾಜನಾಗಿ ಸಿಂಹಾಸನವೇರಿದನೆ? ಇದು ಈ ಕಥೆಯ ಸುತ್ತ ತಿರುಗುವ ಅತಿ ಮುಖ್ಯವಾದ ಪ್ರಶ್ನೆಗಳಲ್ಲೊಂದು ಇದು ಗ್ರಂಥದ ಐದನೆಯ ಭಾಗದಲ್ಲಿ ಮಧುರಾಂತಕ ಚೋಳನ ಬಗ್ಗೆ ಸತ್ಯ ತೆರೆದುಕೊಳ್ಳುವುದರೊಂದಿಗೆ ನಾಟಕೀಯವಾಗಿ ಅಂತಿಮಘಟ್ಟ ಪಡೆದು ಕೊನೆಗೊಳ್ಳುತ್ತದೆ.
ಪಾತ್ರಗಳು
[ಬದಲಾಯಿಸಿ]- ವಲ್ಲವರಾಯನ್ ವಂದಿಯಾದೇವನ್ (ವಲ್ಲವರಾಯನ್) - ಕಥೆಯ ನಾಯಕ. ಒಬ್ಬ ಧೈರ್ಯವಂತ, ತುಂಟತನದ, ಅದೃಷ್ಟವಂತ ಮತ್ತು ಆಕರ್ಷಕ ಯುವಕ.
- ಅರುಲ್ಮೊಝಿವರ್ಮನ್ (ಪೊನ್ನಿಯಿನ್ ಸೆಲ್ವನ್ ನಂತರದಲ್ಲಿ ರಾಜರಾಜ ಚೋಳ Iನಾದನು.)
- ಸುಂದರ ಚೋಳ
- ಕುಂಡವಯ್ ಪಿರಟ್ಟಿಯಾರ್
- ನಂದಿನಿ (ಪಝುವುರ್ ಇಲಯರಾಣಿ)
- ಆದಿತ್ಯ ಕರಿಕಾಲರ್ (ವೀರಾ ಪಂಡಿಯನ್ ಥಲಾಯಿ ಕೊಂಡ ಕೊಪರ ಕೇಸರಿ)
- ವನತಿ-ಅರುಲ್ಮೊಝಿವರ್ಮನ್‌ನ ಪತ್ನಿ
- ಅನಿರುಧ ಬ್ರಹ್ಮರಾಯರ್ - ಮಹಾರಾಜ ಸುಂದರ ಚೋಳನ ಮುಖ್ಯಮಂತ್ರಿ
- ಸೆಂಥನ್ ಅಮುಧನ್
- ಪೂಂಕುಝಲಿ (ಸಮುಧಿರಾಕುಮಾರಿ) - ಒಬ್ಬ ಸುಂದರವಾದ, ಧೈರ್ಯವಂತೆ, ಬಡ ಹುಡುಗಿ, ಒಳ್ಳೆಯ ಹಾಡುಗಾತಿ ಮತ್ತು ಕಡೆಗೆ ಆಕೆ ಚೋಳ ಸಾಮ್ರಾಜ್ಯದ ಮಹಾರಾಣಿಯಾಗುತ್ತಾಳೆ.
- ಅಝವಾರ್ಕದಿಯನ್ (ತಿರುಮಲಾಯ್ ಅಪ್ಪನ್) - ಮುಖ್ಯಮಂತ್ರಿಯ ಗೂಢಚಾರ. ಭಗವಾನ್ ವಿಷ್ಣುವಿನ ಮಹಾಭಕ್ತ.
- ಪೆರಿಯಾ ಪಝುವೆಟ್ಟರಾಯರ್
- ಚಿನ್ನ ಪಝುವೆಟ್ಟರಾಯರ್ (ಕಾಲಂಧಗ ಕಾಂದರ್)
- ಸುಂದರ ಚೋಳರ್
- ಮಂಧಾಗಿನಿ ದೇವಿ (ಊಮಾಯ್ ರಾಣಿ)
- ಮದುರಂಥಕರ್ (ಪರಕೇಸರಿ ಉಥಮ ಚೋಳನ್)
- ಸೆಂಬಿಯಾನ್ ಮಾ ದೇವಿ
- ಕಂದಮಾರನ್ - ಸಂಬುವರಯ್ಯರ್‌ನ ಮಗ
- ಮನಿಮೇಕಲಾ - ಕಂದಮಾರನ್‌ನ ಸಹೋದರಿ ಆಕೆ ವಂದಿಯಾದೇವನ್ ಅನ್ನು ಪ್ರೀತಿಸುತ್ತಾಳೆ
- ರವಿದಾಸನ್ (ಮಂದಿರಾವಧಿ)
- ಸೋಮನ್ ಸಾಂಭವನ್
- ಇದುಂಬಂಕರಿ
- ದೇವರಾಲನ್ (ಪರಮೇಶ್ವರನ್)
- ಸಾಂಬುವರಾಯರ್
- ಕೊಡುಂಬಲೂರ್ ವಿಕ್ರಮ ಪೂಧಿ ಕೇಸರಿ
- ಮಝಾವರಾಯರ್
- ಪಾರ್ಥಿವೇಂದ್ರ ಪಲ್ಲವನ್
- ಕುದಂತಾಯ್ ಸೋತಿದರ್
- ಈಸನ ಸಿವಬಟ್ಟರ್
- ಪಿನಾಗಪನಿ
- ಮುರುಗಾಯನ್
- ರಾಕಮಾಲ್
- ಕರುತಿರುಮನ್
ನಂತರದ ಪ್ರಕರಣಗಳು
[ಬದಲಾಯಿಸಿ]ಕಾಪಿರೈಟ್ ನಿಯಮಗಳು ಮತ್ತು ಕಲ್ಕಿ ಸಂಘದ ಕಟ್ಟುನಿಟ್ಟಾದ ಮಿತಿಗಳು ಅನೇಕ ಲೇಖಕರನ್ನು ಮುಂದಿನ ಪ್ರಕರಣಗಳನ್ನು ಬರೆಯದಂತೆ ತಡೆಯೊಡ್ಡಿದೆ(ಕಲ್ಕಿಯೇ ವಿಶಾಲ ಮನೋಭಾವದಿಂದ ತಾನೇ ಲೇಖಕರಿಗೆ ಪುಸ್ತಕದ ಬಗ್ಗೆ ಮುಂದೆ ತೀರ್ಮಾನ ತೆಗೆದುಕೊಳ್ಳಲು ಸಲಹೆ ನೀಡಿದ್ದರೂ) ವೆಂಬು ವಿಕಿರಮನ್‌ರವರ ನಂದಿಪುರತ್ತು ನಯಗಿ ಇದು ಒಂದು ಕಾದಂಬರಿಯ ಮುಂದಿನ ಪ್ರಕರಣಕ್ಕೆ ಸಂಬಂಧಿಸಿದ ಗ್ರಂಥ, ಇಲ್ಲಿ ಲೇಖಕನು ಸಂದೇಹಾಸ್ಪದ ಉಲ್ಲಂಘನೆಯನ್ನು ತಪ್ಪಿಸಲು ಎಲ್ಲ ಮುಖ್ಯ ಪಾತ್ರಗಳಿಗೆ ಬೇರೆ ಬೇರೆ ಕಾಗುಣಿತಗಳನ್ನು ಉಪಯೋಗಿಸುತ್ತಾನೆ.
ಕಲ್ಕಿ ಕೃಷ್ಣಮೂರ್ತಿಯವರ ಗ್ರಂಥಗಳು ರಾಷ್ಟ್ರೀಕರಣಗೊಂಡ ನಂತರ ಪೊನ್ನಿಯನ್ ಸೆಲ್ವನ್‌ನ ಕಾಪಿರೈಟ್ ಅಸ್ತಿತ್ವವು ಕೊನೆಗೊಂಡಿತು. ಅನೇಕ ಪ್ರಕಾಶಕರು ಇದೇ ಗ್ರಂಥವನ್ನು ಸಂಭಾವನಾ ಬೆಲೆಯಿಲ್ಲದೇ ಮುದ್ರಿಸಿಕೊಡುತ್ತಾರೆ.
ಬಾಲಕುಮಾರನ್‌ರವರ ಉದಯರ್ ಮತ್ತು ಅನೂಶಾ ವೆಂಕಟೇಶ್‌ರವರ ಕಾವಿರಿ ಮೈಂಥನ್ , ಸುಮಾರು 2000 ಮತ್ತು 2007ರಲ್ಲಿ ಪ್ರಕಟವಾದ ಪೊನ್ನಿಯನ್ ಸೆಲ್ವನ್‌ನ ಮುಂದಿನ ಪ್ರಕರಣಗಳು
ಬಾಲಕುಮಾರನ್‌ರವರ ಕದಿಗೈ ಸಹ ಪೊನ್ನಿಯನ್ ಸೆಲ್ವನ್‌ನ ಜೊತೆಜೊತೆಗೇ ಮುಂದುವರೆಯುತ್ತಾ ರವಿದಾಸನ್, ನಂದಿನಿಯ ಜೀವನವನ್ನು ತೋರಿಸುತ್ತಾ, ಆದಿತ್ಯನ ಹತ್ಯೆಯೊಂದಿಗೆ ಕೊನೆಗೊಳ್ಳುತ್ತದೆ.
ಅಳವಡಿಕೆಗಳು ಮತ್ತು ಸಾಂಸ್ಕೃತಿಕ ಆಕರಗಳು
[ಬದಲಾಯಿಸಿ]- 2009ರಲ್ಲಿ ಸ್ಯಾನ್ ಫ್ರಾನ್ಸಿಸ್ಕೊ ಬೇ ಏರಿಯಾ ತಮಿಳು ಮನ್ರಂ[೩]. ಸ್ಯಾನ್ ರ್ಯಾಮನ್, ಸಿಎ
ಇದನ್ನೂ ನೋಡಿ
[ಬದಲಾಯಿಸಿ]ಆಕರಗಳು
[ಬದಲಾಯಿಸಿ]- ↑ ೧.೦ ೧.೧ Nilakanta Sastri, K.A. The Cholas.
- ↑ Sadasiva Pandarathar, T.V. History of Later Cholas.
- ↑ "ಆರ್ಕೈವ್ ನಕಲು". Archived from the original on 2010-04-17. Retrieved 2010-07-22.
- ಬಾಲಸುಬ್ರಮಣಿಯಂ ಕುಡವಾಯಿಲ್. "ಉದಯರ್ಕುಗಿ ಇನ್ಕ್ರಿಪ್ಷನ್", ವಾರಲಾರು
- ಶೇಷಾದ್ರಿ, ಗೋಕುಲ್. "ಪೊನ್ನಿಯಿಸೆಲ್ವನ್ ಫ್ಯಾಕ್ಟ್ಸ್ ಅಂಡ್ ಫಿಕ್ಷನ್" Archived 2009-07-22 ವೇಬ್ಯಾಕ್ ಮೆಷಿನ್ ನಲ್ಲಿ.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Ponniyin Selvan - ತಮಿಳು ವಿಕಿಸೋರ್ಸ್ನಲ್ಲಿ ಸಂಪೂರ್ಣ ಕಾದಂಬರಿ (ಯೂನಿಕೋಡ್)
- ಪೊನ್ನಿಯಿನ್ ಸೆಲ್ವನ್ Archived 2011-02-02 ವೇಬ್ಯಾಕ್ ಮೆಷಿನ್ ನಲ್ಲಿ. - KZSU ಸ್ಟ್ಯಾನ್ಫೋರ್ಡ್ 90.1 FM ರೇಡಿಯೋ ಶೋ ನಲ್ಲಿ ಈ ಕಾದಂಬರಿ ಧ್ವನಿ ಆವೃತ್ತಿಯನ್ನು ಶ್ರಿ ಅವರಿಂದ ಪ್ರತಿ ವಾರ ಧ್ವನಿ ಮುದ್ರಣ ಮಾಡಲಾಯಿತು.
- Pages using the JsonConfig extension
- Books with missing cover
- Wikipedia articles with plot summary needing attention from July 2010
- Articles with invalid date parameter in template
- All Wikipedia articles with plot summary needing attention
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ತಮಿಳು ಇತಿಹಾಸ
- ತಮಿಳು ಕಾದಂಬರಿಗಳು
- ತಮಿಳು ಸಾಹಿತ್ಯ
- ಭಾರತೀಯ ಕಾದಂಬರಿಗಳು
- ಐತಿಹಾಸಿಕ ಕಾದಂಬರಿಗಳು
- ದಾರವಾಹಿಯಾದ ಮೊದಲ ಕಾದಂಬರಿಗಳು
- ಪ್ರೇಮ ಕಾದಂಬರಿಗಳು
- ಕಾದಂಬರಿಗಳು