ಪುಷ್ಪ ಭಾರತಿ
ಪುಷ್ಪ ಭಾರತಿ | |
---|---|
ಜನನ | 1935 (ವಯಸ್ಸು 88–89) ಮೊರಾದಾಬಾದ್, ಉತ್ತರ ಪ್ರದೇಶ |
ವೃತ್ತಿ | ಲೇಖಕಿ |
ಭಾಷೆ | ಹಿಂದಿ |
ರಾಷ್ಟ್ರೀಯತೆ | ಭಾರತೀಯರು |
ಪ್ರಕಾರ/ಶೈಲಿ | ಕಥೆಗಳು, ಜೀವನಚರಿತ್ರೆಗಳು, ಪ್ರವಾಸ ಕಥನ |
ಪ್ರಮುಖ ಪ್ರಶಸ್ತಿ(ಗಳು) | ಮಹಾರಾಷ್ಟ್ರ ರಾಜ್ಯ ಹಿಂದಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ( (೨೦೦೮) ವ್ಯಾಸ ಸಮ್ಮಾನ್ ( (೨೦೨೩) ಕಾಳಿದಾಸ ಅಕಾಡೆಮಿಯಿಂದ ಹಿಂದಿ ಸೇವಾ ಸಮ್ಮಾನ್, ಸಾಹಿತ್ಯ ಭೂಷಣದಿಂದ ಉತ್ತರ ಪ್ರದೇಶ ಹಿಂದಿ ಸಂಸ್ಥಾನ |
ಬಾಳ ಸಂಗಾತಿ | ಧರಮ್ವೀರ್ ಭಾರತಿ |
ಪುಷ್ಪ ಭಾರತಿ (೧೯೩೫) ಹಿಂದಿ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳಿಂದ ಹೆಸರುವಾಸಿಯಾದ ಭಾರತೀಯ ಬರಹಗಾರ್ತಿ ಮತ್ತು ಲೇಖಕಿ.[೧][೨][೩] ಅವರು ಹಿಂದಿ ಭಾಷೆಯಲ್ಲಿ ೧೭ ಪುಸ್ತಕಗಳನ್ನು ಬರೆದಿದ್ದಾರೆ.[೪]
ಜೀವನಚರಿತ್ರೆ
[ಬದಲಾಯಿಸಿ]ಪುಷ್ಪ ಅವರು ಉತ್ತರ ಪ್ರದೇಶ ಮೊರಾದಾಬಾದ್ ನಲ್ಲಿ೧೯೩೫ರಲ್ಲಿ ಜನಿಸಿದರು. ಅವರು ೧೯೫೫ ರಲ್ಲಿ ಅಲಹಾಬಾದ್ ವಿಶ್ವವಿದ್ಯಾಲಯದಿಂದ ಹಿಂದಿ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅವರು ಹೆಸರಾಂತ ಹಿಂದಿ ಬರಹಗಾರರಾದ ಧರಮ್ವೀರ್ ಭಾರತಿ ಅವರನ್ನು ವಿವಾಹವಾದರು.[೫] ೧೯೪೨ರ ಭಾರತ ಬಿಟ್ಟು ತೂಲಗಿ ಚಳುವಳಿಯು ಭಾರತಿಯವರನ್ನು ಕಥೆಗಳನ್ನು ಬರೆಯಲು ಪ್ರೇರೇಪಿಸಿತು.[೬]
ಪ್ರಾಧ್ಯಾಪಕರಾಗಿ, ಅವರು ೧೯೫೭ ರಿಂದ ೧೯೬೦ ರವರೆಗೆ ಕಲ್ಕತ್ತಾದ ಪದವಿ ಕಾಲೇಜುಗಳಲ್ಲಿ ಮತ್ತು ೧೯೭೫ರಲ್ಲಿ ಬಾಂಬೆಯಲ್ಲಿ ಕಲಿಸಿದರು.[೭]
ಅವರ ಸಾಹಿತ್ಯ ವೃತ್ತಿಜೀವನವು ಹಲವಾರು ದಶಕಗಳವರೆಗೆ ವ್ಯಾಪಿಸಿದೆ. ಅವರು ವಿವಿಧ ಪ್ರಕಾರಗಳ ಪುಸ್ತಕಗಳನ್ನು ಬರೆದು ಸಂಪಾದಿಸಿದ್ದಾರೆ ಮತ್ತು ವ್ಯಾಪಕ ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸಿದ್ದಾರೆ. ಶುಭಗತ, ಧಾಯ್ ಆಖರ್ ಪ್ರೇಮ್ ಕೆ, ಸರಸ್ ಸಂವಾದ್, ಸಫರ್ ಸುಹಾನೆ ಮತ್ತು ಇತರ ಅನೇಕ ಕೃತಿಗಳು ಸೇರಿದಂತೆ ಅವರ ಗಮನಾರ್ಹ ಕೃತಿಗಳು ಓದುಗರಲ್ಲಿ ಜನಪ್ರಿಯತೆಯನ್ನು ಗಳಿಸಿವೆ.[೪]
ತಮ್ಮ ವೃತ್ತಿಜೀವನದುದ್ದಕ್ಕೂ, ಪುಷ್ಪ ಭಾರತಿ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ, ಅವುಗಳಲ್ಲಿ ರೊಮಾಂಚಕ್ ಸತ್ಯ ಕಥಾಯಿನ್, ಪ್ರೇಮ್ ಪಿಯಾಲಾ ಜಿನ್ ಪಿಯಾ, ಧಾಯ್ ಅಕ್ಷರ್ ಪ್ರೇಮ್ ಕೆ, ಸರಸ್ ಸಂವಾದ್, ಸಫರ್ ಸುಹಾನೆ, ಅಧುನಿಕ್ ಸಾಹಿತ್ಯ ಬೋ, ಏಕ್ ದುನಿಯಾ ಬಚೊನ್ ಕಿ, ವಾಡೇನ್ ಮತ್ತು ಯಾದೇನ್, ಯಾದೇನ್ ಔರ್ ಯಾದೇನ್ ಸೇರಿವೆ.
ಅವರು ಭಾರತ ಸರ್ಕಾರದ ಮಕ್ಕಳ ಚಲನಚಿತ್ರ ನಿರ್ಮಾಣ ಸಂಸ್ಥೆಗೆ ಸೇರಿದರು. ಅವರು ೧೯೮೮ ರಲ್ಲಿ ಚಲನಚಿತ್ರ ಸೆನ್ಸಾರ್ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದರು.[೮]
ಅವರು ೨೦೨೧ರಲ್ಲಿ ವಾಣಿ ಪ್ರಕಾಶನ ಪ್ರಕಟಿಸಿದ ಅಮಿತಾಭ್ ಬಚ್ಚನ್ ಜೀವನ ಗಾಥಾ ಎಂಬ ಅಮಿತಾ ಬಚ್ಚನ್ ಅವರ ಜೀವನಚರಿತ್ರೆಯನ್ನು ಬರೆದಿದ್ದಾರೆ.[೯][೧೦]
ಗ್ರಂಥಸೂಚಿ
[ಬದಲಾಯಿಸಿ]- ರೊಮಾಂಚಕ್ ಸತ್ಯ ಕಥಾಯಿನ್ (ಎರಡು ಭಾಗಗಳಲ್ಲಿ)
- ಪ್ರೇಮ್ ಪಿಯಾಲಾ ಜಿನ್ ಪಿಯಾ
- ಧಾಯ್ ಅಕ್ಷರ್ ಪ್ರೇಮ್ ಕೆ
- ಸರಸ್ ಸಂವಾದ್
- ಸಫರ್ ಸುಹಾನ್
- ಅಧುನಿಕ ಸಾಹಿತ್ಯ ಬೋಧ್
- ಏಕ್ ದುನಿಯಾ ಬಚೊಂ ಕಿ
- ವಾಡೆನ್
- ಯಾದೇನ್, ಯಾದೇನ್ ಔರ್ ಯಾದೇನ್
- ಅಕ್ಷರ್ ಅಕ್ಷರ್ ಯಜ್ಞಫ಼್ಧರಮ್ವೀರ್ ಭಾರತಿ ಸೆ ಸಾಕ್ಷತ್ಕಾರ್
- ಹಮೇರಿ ವಾಣಿ ಗಾರಿಕ್-ವಾಸನಾ
- ಸಾನ್ಸ್ ಕಿ ಕಲಾಂ ಸೇ
- ಧರಮ್ವೀರ್ ಭಾರತಿ ಕಿ ಸಾಹಿತ್ಯ-ಸಾಧನಾ
- ಹರಿವಂಶ್ ರಾಯ್ ಬಚ್ಚನ್ ಕಿ ಸಾಹಿತ್ಯ-ಸಾಧನಾ
- ಪುಷ್ಪಾಂಜಲಿ[೧೧]
ವೈಯಕ್ತಿಕ ಜೀವನ
[ಬದಲಾಯಿಸಿ]ಅವರು ಧರಮ್ವೀರ್ ಭಾರತಿ ಅವರನ್ನು ವಿವಾಹವಾದ ಮೇಲೆ ಮುಂಬೈನ ಬಾಂದ್ರಾದಲ್ಲಿ ಅಪಾರ್ಟ್‌ಮೆಂಟ್ ಕಟ್ಟಡವಾದ ಸಾಹಿತ್ಯ ಸಾಹಸ್‌ನಲ್ಲಿ ವಾಸಿಸುತ್ತಿದ್ದಾರೆ.
ಪ್ರಶಸ್ತಿಗಳು ಮತ್ತು ಮನ್ನಣೆ
[ಬದಲಾಯಿಸಿ]ಅವರ ಸಾಹಿತ್ಯಿಕ ಕೊಡುಗೆಗಳನ್ನು ಗುರುತಿಸಿ, ೨೦೦೮ ರಲ್ಲಿ ಮಹಾರಾಷ್ಟ್ರ ರಾಜ್ಯ ಹಿಂದಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಧ್ಯಪ್ರದೇಶ ಸರ್ಕಾರದ ಕಾಳಿದಾಸ ಅಕಾಡೆಮಿಯಿಂದ ಹಿಂದಿ ಸೇವಾ ಸಮ್ಮಾನ್ ಮತ್ತು ಉತ್ತರ ಪ್ರದೇಶ ಹಿಂದಿ ಸಂಸ್ಥಾನದಿಂದ ಸಾಹಿತ್ಯ ಭೂಷಣ್ ಸೇರಿದಂತೆ ವಿವಿಧ ಗೌರವಗಳನ್ನು ಪಡೆದರು.[೪]
ಗಮನಾರ್ಹವಾಗಿ, ಅವರ ಆತ್ಮಚರಿತ್ರೆ, ಯಾದೀನ್, ಯಾದೀನ್ ಔರ್ ಯಾದೀನ್ (೨೦೧೬) ಕೆ. ಕೆ. ಬಿರ್ಲಾ ಫೌಂಡೇಶನ್ ನಿಂದ ೨೦೨೩ ರಲ್ಲಿ ೩೩ ನೇ ವ್ಯಾಸ್ ಸಮ್ಮಾನ್ ಅನ್ನ ನೀಡಿ ಗೌರವಿಸಿತು. ಈ ಪ್ರಶಸ್ತಿಯು ರೂ. ೪ ಲಕ್ಷ ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ಫಲಕವನ್ನು ಒಳಗೊಂಡಿದೆ.[೪]
ಅವರು ರಾಮ ಪ್ರಶಸ್ತಿ, ಸ್ವಜನ್ ಪ್ರಶಸ್ತಿ, ಭಾರತಿ ಗೌರವ್ ಪ್ರಶಸ್ತಿ, ಆಶೀರ್ವಾದ ಸರಸ್ವತ್ ಪ್ರಶಸ್ತಿ ಮತ್ತು ಉತ್ತರ ಹಿಂದಿ ಶಿರೋಮಣಿ ಪ್ರಶಸ್ತಿಗಳಂತಹ ಇತರ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ.[೧೨][೧೩]
ಉಲ್ಲೇಖಗಳು
[ಬದಲಾಯಿಸಿ]- ↑ "Writer Pushpa Bharati's memoir selected for Vyas Samman award". Hindustan Times. December 12, 2023.
- ↑ Dr. Chandra Mukherjee. Comparative study of Hindi and English women's writing (in Hindi). Book Bazooka. p. 19. ISBN 9789386895776.
{{cite book}}
: CS1 maint: unrecognized language (link) - ↑ Anil Kumar (2007). Svātantryottara yātrā-sāhitya kā viśleshanātmaka adhyayana. Hindi Book Center. p. 84, 85.
- ↑ ೪.೦ ೪.೧ ೪.೨ ೪.೩ "Writer Pushpa Bharati's memoir selected for Vyas Samman award". Hindustan Times. December 12, 2023."Writer Pushpa Bharati's memoir selected for Vyas Samman award". Hindustan Times. December 12, 2023.
- ↑ Saxena, Poonam (March 15, 2015). "Why a 66-year-old Hindi love story needed to be translated into English". Scroll.in.
- ↑ Dharam Paul Sarin (1967). Influence of Political Movements on Hindi Literature, 1960-1947. Panjab University Publication Bureau. p. 212.
- ↑ "संपादित... यादें यादें और यादें... के लिए पुष्पा भारती को व्यास सम्मान-2023" (in Hindi). Hindustan. December 11, 2023.
{{cite news}}
: CS1 maint: unrecognized language (link) - ↑ "संपादित... यादें यादें और यादें... के लिए पुष्पा भारती को व्यास सम्मान-2023" (in Hindi). Hindustan. December 11, 2023.
{{cite news}}
: CS1 maint: unrecognized language (link)"संपादित... यादें यादें और यादें... के लिए पुष्पा भारती को व्यास सम्मान-2023" (in Hindi). Hindustan. December 11, 2023. - ↑ Tiwari, Aarti (October 1, 2022). "किताबघर व मयूरपंख की अगली किस्त में पढि़ए सदी के महानायक की जीवनगाथा और स्वयं से संवाद की जिरह" (in Hindi). Dainik Jagran.
{{cite news}}
: CS1 maint: unrecognized language (link) - ↑ "पुष्पा भारती की अमिताभ बच्चन पर किताब" (in Hindi). DNA India. February 10, 2022.
{{cite news}}
: CS1 maint: unrecognized language (link) - ↑ "Pushpa Bharati". Vani Prakashan.
- ↑ "पुष्पा भारती". Hindisamay.
- ↑ "Pushpa Bharati". Vani Prakashan."Pushpa Bharati". Vani Prakashan.