ಪುಷ್ಟಿಕರ ಕೃಷಿ (Sustainable Agriculture)
Expression error: Unexpected < operator.
This article includes a list of references, but its sources remain unclear because it has insufficient inline citations. (July 2008) |
ಪುಷ್ಟಿಕರ ಕೃಷಿ ಯೆಂಬುದು, ಜೀವಿಗಳು ಮತ್ತು ಅವುಗಳ ಪರಿಸರದೊಂದಿಗಿನ ಸಂಬಂಧವನ್ನು ಅಧ್ಯಯನ ಮಾಡುವ ಪರಿಸರ ವಿಜ್ಞಾನದ ತತ್ತ್ವಗಳನ್ನು ಬಳಸಿ ಕೃಷಿ ಮಾಡುವ ವಿಧಾನ. 'ದೀರ್ಘಾವಧಿ ಉಳಿದುಕೊಳ್ಳುವ, ಸ್ಥಳಕ್ಕೆ-ನಿರ್ದಿಷ್ಟ ಬಳಕೆ(ತಂತ್ರಜ್ಞಾನ) ಹೊಂದಿರುವ ಸಸ್ಯ ಮತ್ತು ಪ್ರಾಣಿಗಳ ಉತ್ಪನ್ನ ಪದ್ಧತಿಗಳ ಏಕೀಕೃತ ವ್ಯವಸ್ಥೆ' ಎಂದು ಪುಷ್ಟಿಕರ ಕೃಷಿಯನ್ನು ವ್ಯಾಖ್ಯಾನಿಸಲಾಗಿದೆ:
- ಮಾನವನ ಆಹಾರ ಮತ್ತು ನಾರು ವಸ್ತುಗಳ ಅಗತ್ಯಗಳನ್ನು ಪೂರೈಸುತ್ತದೆ.
- ನವೀಕರಿಸಲಾಗದ ಸಂಪನ್ಮೂಲಗಳು ಮತ್ತು ಹೊಲಗಳಲ್ಲಿನ ಸಂಪನ್ಮೂಲಗಳನ್ನು ಆದಷ್ಟು ದಕ್ಷವಾಗಿ ಬಳಸಿ, ಸೂಕ್ತವಿದ್ದೆಡೆ, ನೈಸರ್ಗಿಕ ಜೈವಿಕ ಚಕ್ರಗಳು ಮತ್ತು ನಿಯಂತ್ರಣಗಳೊಂದಿಗೆ ಏಕೀಕರಿಸುತ್ತದೆ.
- ಬೇಸಾಯ ಚಟುವಟಿಕೆಗಳ ಆರ್ಥಿಕ ಕಾರ್ಯಸಾಧ್ಯತೆಗೆ ಪುಷ್ಟಿಕೊಡುತ್ತದೆ.
- ಕೃಷಿಕರ ಹಾಗೂ ಒಟ್ಟಾರೆ ಸಮಾಜದ ಜೀವನ ಗುಣಮಟ್ಟವನ್ನು ವರ್ಧಿಸುವುದು.'[೧]
1990ರಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಕೃಷಿ ಮಸೂದೆಯ ಮೂಲಕ ಪುಷ್ಟಿಕರ ಕೃಷಿಯ ವಿಚಾರವನ್ನು ಮಂಡಿಸಲಾಯಿತು.[೨] ಇನ್ನಷ್ಟು ಇತ್ತೀಚೆಗೆ, ಪುಷ್ಟಿಕರ ಉತ್ಪನ್ನಗಳಿಗೆ ಬಳಕೆದಾರರು ಹಾಗೂ ಚಿಲ್ಲರೆ ಬೇಡಿಕೆ ಹೆಚ್ಚಾದ ಕಾರಣ, ಫುಡ್ ಅಲೈಯನ್ಸ್ ಮತ್ತು ಪ್ರೊಟೆಕ್ಟೆಡ್ ಹಾರ್ವೆಸ್ಟ್‌ನಂತಹ ಸಂಸ್ಥೆಗಳು ಪುಷ್ಟಿಕರವಾಗಿ ಬೆಳೆಯುವ ಬೆಳೆಗೆ ಅಳತೆ ಮಾನದಂಡಗಳನ್ನು ಮತ್ತು ಪ್ರಮಾಣೀಕರಣ ಕಾರ್ಯಕ್ರಮಗಳನ್ನು ಒದಗಿಸಲು ಆರಂಭಿಸಿದರು.[೩]
ಕೃಷಿ ಮತ್ತು ನೈಸರ್ಗಿಕ ಸಂಪನ್ಮೂಲಗಳು
[ಬದಲಾಯಿಸಿ]ಪುಷ್ಟಿಕರ ಲಕ್ಷಣದ ಭೌತಿಕ ಅಂಶಗಳನ್ನು ಆಂಶಿಕವಾಗಿ ಅರ್ಥೈಸಿಕೊಳ್ಳಲಾಗಿದೆ.[೪] ಮಣ್ಣಿಗೆ ದೀರ್ಘಕಾಲಿಕ ಹಾನಿಯೆಸಗುವ ವಿಧಾನಗಳಲ್ಲಿ ಅತಿಯಾಗಿ ಉಳುಮೆಮಾಡುವುದು,(ಮಣ್ಣಿನಕೊರೆತಕ್ಕೆ ದಾರಿಕಲ್ಪಿಸುತ್ತದೆ) ನೀರು ಸರಿಯಾಗಿ ಹರಿದುಹೋಗಲು ಸೂಕ್ತ ವ್ಯವಸ್ಥೆಯಿಲ್ಲದೆ ನೀರಾವರಿ ಮಾಡುವುದು (ಉಪ್ಪುಗೂಡಿಕೆಗೆ ದಾರಿಯಾಗುತ್ತದೆ) ಒಳಗೊಂಡಿದೆ. ಪುಷ್ಟಿಕರ ಲಕ್ಷಣಕ್ಕೆ ಅಗತ್ಯವಾದ ಮಣ್ಣಿನ ಗುಣಗಳ ಮೇಲೆ ಈ ವಿವಿಧ ಪದ್ಧತಿಗಳು ಹೇಗೆ ಪ್ರಭಾವ ಬೀರುತ್ತವೆ ಎಂಬುದರ ಬಗ್ಗೆ ದೀರ್ಘಕಾಲಿಕ ಪ್ರಯೋಗಗಳು ಕೆಲ ಅತ್ಯುತ್ತಮ ದತ್ತಾಂಶ ಒದಗಿಸಿವೆ. ಯುಎಸ್‌ಡಿ ಎಂಬ ರಾಷ್ಟ್ರೀಯ ಸಂಪನ್ಮೂಲ ಸಂರಕ್ಷಣಾ ಸೇವೆ ಎಂಬ ಫೆಡರಲ್ ಏಜನ್ಸಿಯಿದೆ. ಇದು ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆ ಮತ್ತು ಉತ್ಪಾದನಾ ಕೃಷಿಯನ್ನು ಸೂಕ್ತ ಧ್ಯೇಯಗಳಾಗಿ ಅನುಸರಿಸುವ ಆಸಕ್ತರಿಗೆ ತಾಂತ್ರಿಕ ಮತ್ತು ಹಣಕಾಸಿನ ನೆರವು ನೀಡುತ್ತದೆ.
ಪ್ರತಿಯೊಂದು ಸ್ಥಳಕ್ಕೆ ಅತ್ಯಗತ್ಯ ಅಂಶಗಳೆಂದರೆ ಸೂರ್ಯ, ಗಾಳಿ, ಮಣ್ಣು ಮತ್ತು ನೀರು. ಈ ನಾಲ್ಕು ಅಂಶಗಳಲ್ಲಿ, ನೀರು ಮತ್ತು ಮಣ್ಣಿನ ಗುಣಮಟ್ಟ ಮತ್ತು ಪ್ರಮಾಣವು ಸಮಯ ಮತ್ತು ಶ್ರಮದ ಮೂಲಕ ಮಾನವ ಹಸ್ತಕ್ಷೇಪಕ್ಕೆ ಹೆಚ್ಚು ಒಳಪಡುತ್ತದೆ.
ಗಾಳಿ ಮತ್ತು ಸೂರ್ಯನ ಬೆಳಕು ಭೂಮಿಯಲ್ಲಿ ಸರ್ವತ್ರ ಲಭ್ಯವಿದ್ದರೂ, ಬೆಳೆಗಳು ಮಣ್ಣಿನಪೌಷ್ಟಿಕಾಂಶ ಮತ್ತು ನೀರಿನ ಲಭ್ಯತೆಯನ್ನು ಅವಲಂಬಿಸುತ್ತವೆ. ಕೃಷಿಕರು ಬೆಳೆಗಳನ್ನು ಬೆಳೆಸಿ, ಕೊಯ್ಲು ಮಾಡುವಾಗ, ಮಣ್ಣಿನಿಂದ ಇಂತಹ ಕೆಲವು ಪೌಷ್ಟಿಕಾಂಶವನ್ನು ತೆಗೆದುಬಿಡುತ್ತಾರೆ. ಭೂಮಿಯು ಮರುಪೂರಣವಿಲ್ಲದೆ, ಪೌಷ್ಟಿಕಾಂಶದ ಕೊರತೆಯಿಂದಾಗಿ ನಿರುಪಯುಕ್ತವಾಗುತ್ತದೆ ಅಥವಾ ಇಳುವರಿ ಕಡಿಮೆಯಾಗುವ ಸ್ಥಿತಿ ತಲುಪಬಹುದು. ಪುಷ್ಟಿಕರ ಕೃಷಿಯು ಮಣ್ಣಲ್ಲಿ ಪೌಷ್ಟಿಕಾಂಶದ ಮರುಪೂರಣವನ್ನು ಅವಲಂಬಿಸಿದೆ. ಇದೇ ಸಮಯದಲ್ಲಿ, ನೈಸರ್ಗಿಕ ಅನಿಲ (ಹವೆಯ ಸಾರಜನಕವನ್ನು ಸಂಶ್ಲೇಷಿತ ರಸಗೊಬ್ಬರವಾಗಿ ಪರಿವರ್ತಿಸಲು ಬಳಸಲಾಗುತ್ತದೆ), ಅಥವಾ ಖನಿಜ ಅದಿರುಗಳು (ಫಾಸ್ಫೇಟ್) ಮುಂತಾದ ನವೀಕರಿಸಲಾಗದ ಸಂಪನ್ಮೂಲಗಳ ಬಳಕೆ ಕನಿಷ್ಠಗೊಳಿಸುತ್ತದೆ. ತತ್ತ್ವತಃ, ಅನಿರ್ದಿಷ್ಟವಾಗಿ ಲಭ್ಯವಿರಬಹುದಾದ ಸಾರಜನಕದ ಸಾಧ್ಯವಾದ ಮೂಲಗಳಲ್ಲಿ ಸೇರಿವೆ:
- ಬೆಳೆ ತ್ಯಾಜ್ಯ ಮತ್ತು ಜಾನುವಾರುಗಳ ಅಥವಾ ಸಂಸ್ಕರಿಸಲಾದ ಮಾನವ ಗೊಬ್ಬರದ ಮರುಬಳಕೆ;
- ರೈಝೊಬಿಯಾ ಎಂಬ ಸಾರಜನಕ-ಸ್ಥಿರೀಕರಣ ಬ್ಯಾಕ್ಟೀರಿಯಾದೊಂದಿಗೆ ಸಹಜೀವನ ನಡೆಸುವಕಡಲೆಕಾಯಿ ಅಥವಾ ಕುದುರೆ ಮೇವಿನ ಸೊಪ್ಪು ಮುಂತಾದ ದ್ವಿದಳ ಧಾನ್ಯದ ಬೆಳೆಗಳು ಮತ್ತು ಮೇವುಗಳನ್ನು ಬೆಳೆಸುವುದು;
- ಹೇಬರ್ ಸಂಸ್ಕರಣೆ ಮೂಲಕ ಸಾರಜನಕದ ಕೈಗಾರಿಕಾ ಉತ್ಪಾದನೆಯು, ನೈಸರ್ಗಿಕ ಅನಿಲದಿಂದ ಪಡೆದಿರುವ ಜಲಜನಕವನ್ನು ಬಳಸುತ್ತದೆ (ಆದರೆ, ಇದರ ಬದಲಿಗೆ ವಿದ್ಯುತ್ ಬಳಸಿಕೊಂಡು, ನೀರಿನ ವಿದ್ಯುದ್ವಿಚ್ಛೇದನ ಮೂಲಕ ಈ ಜಲಜನಕವನ್ನು ಉತ್ಪಾದಿಸಬಹುದು (ಸೌರ ಶಕ್ತಿ ಅಥವಾ ಗಾಳಿಯಂತ್ರಗಳಿಂದ ಉತ್ಪಾದಿತ); ಅಥವಾ,
- ತಳಿ ಎಂಜಿನಿಯರಿಂಗ್(ದ್ವಿದಳ ಧಾನ್ಯರಹಿತ)ಬೆಳೆಗಳು ಸಾರಜನಕ ಸ್ಥಿರೀಕರಣ ಸಹಜೀವನವನ್ನು ರೂಪಿಸುತ್ತವೆ ಅಥವಾ ಸೂಕ್ಷ್ಮಜೀವಿಯ ಸಹಯೋಗವಿಲ್ಲದೇ ಸಾರಜನಕವನ್ನು ಸ್ಥಿರೀಕರಿಸುತ್ತವೆ.
ಕೊನೆಯ ಆಯ್ಕೆಯನ್ನು 1970ರ ದಶಕದಲ್ಲಿ ಮುಂದಿಡಲಾಯಿತು, ಆದರೆ ಇದು ಕೇವಲ ಇತ್ತೀಚೆಗೆ ಮಾತ್ರ ಕಾರ್ಯಸಾಧ್ಯವಾಗುತ್ತಿದೆ.[೫][೬] ಇತರ ಪೌಷ್ಟಿಕಾಂಶ ಮೂಲ ವಸ್ತುಗಳನ್ನು (ರಂಜಕ, ಪೊಟ್ಯಾಷಿಯಮ್ ಇತ್ಯಾದಿ)ಬದಲಿಸುವ ಪುಷ್ಠಿಕರ ಆಯ್ಕೆಗಳು ಹೆಚ್ಚು ಸೀಮಿತವಾಗಿದೆ.
ಇನ್ನಷ್ಟು ವಾಸ್ತವಿಕ ಹಾಗೂ ಆಗಾಗ್ಗೆ ಉಪೇಕ್ಷಿಸಲಾದ ಆಯ್ಕೆಗಳಲ್ಲಿ ದೀರ್ಘಾವಧಿಯ ಬೆಳೆ ಆವರ್ತನೆಗಳು, ನೈಲ್ ನದಿಯ ಪ್ರವಾಹದ ರೀತಿಯಲ್ಲಿ, ವಾರ್ಷಿಕವಾಗಿ ಉಳುಮೆಯಾದ ಜಮೀನಿಗೆ ಪ್ರವಾಹ ಉಂಟುಮಾಡುವ(ಕಳೆದುಹೋದ ಪೌಷ್ಠಿಕಾಂಶಗಳು ಅನಿರ್ದಿಷ್ಟವಾಗಿ ಹಿಂತಿರುಗುತ್ತದೆ) ನೈಸರ್ಗಿಕ ಚಕ್ರಗಳಿಗೆ ಹಿಂತಿರುಗುವುದು, ಜೈವಿಕ ಇದ್ದಿಲಿನ ದೀರ್ಘಾವಧಿಯ ಬಳಕೆ; ಹಾಗೂ, ಕೀಟಗಳು, ಬರ ಅಥವಾ ಪೌಷ್ಟಿಕಾಂಶದ ಅಭಾವ ಸೇರಿದಂತೆ, ಪ್ರತಿಕೂಲಕರ ಪರಿಸರಕ್ಕೆ ಹೊಂದಿಕೊಂಡಿರುವ ಬೆಳೆ ಮತ್ತು ಜಾನುವಾರುಗಳ ಸ್ಥಳೀಯ ಉಪಜಾತಿಗಳ ಬಳಕೆ.
ನಿರ್ದಿಷ್ಟ ರಸಗೊಬ್ಬರ ನಿರ್ವಹಣಾ ವಿಧಾನಗಳನ್ನು ಸರಿಯಾಗಿ ಪಾಲಿಸಿದಲ್ಲಿ, ಮಣ್ಣಿನಲ್ಲಿ ಹೆಚ್ಚು ಪೌಷ್ಟಿಕಾಂಶಗಳ ಅಗತ್ಯವಿರುವ ಬೆಳೆಗಳನ್ನು ಇನ್ನಷ್ಟು ಪುಷ್ಟಿಕರ ರೀತಿಯಲ್ಲಿ ಬೆಳೆಸಬಹುದಾಗಿದೆ.
ಜಲ
[ಬದಲಾಯಿಸಿ]ಕೆಲವು ಪ್ರದೇಶಗಳಲ್ಲಿ, ಸಾಕಷ್ಟು ಮಳೆಯಿಂದಾಗಿ ಬೆಳೆ ಬೆಳೆಯಬಹುದು. ಆದರೆ ಇನ್ನು ಅನೇಕ ಪ್ರದೇಶಗಳಲ್ಲಿ ನೀರಾವರಿಯ ಅಗತ್ಯವಿದೆ. ನೀರಾವರಿ ವ್ಯವಸ್ಥೆಗಳು ಸಮರ್ಥನೀಯವಾಗಬೇಕೆಂದರೆ, ಅವುಗಳನ್ನು ಸರಿಯಾಗಿ ನಿರ್ವಹಿಸುವ ಅಗತ್ಯವಿದೆ. ಇದರಿಂದ ಲವಣಾಂಶ ಹೆಚ್ಚುವುದನ್ನು ತಡೆಗಟ್ಟಬಹುದು. ಅವುಗಳ ಮೂಲದಿಂದ, ಸೈಸರ್ಗಿಕವಾಗಿ ಪುನಃಪೂರಣಗೊಂಡಿರುವ ಪ್ರಮಾಣಕ್ಕಿಂತಲೂ ಹೆಚ್ಚು ಜಲವನ್ನು ಬಳಸಬಾರದು. ಇಲ್ಲದಿದ್ದಲ್ಲಿ, ಜಲ ಮೂಲವು ನವೀಕರಿಸಲಾಗದ ಸಂಪನ್ಮೂಲವಾದೀತು. ನೀರಿನ ಕೊಳವೆಬಾವಿ ಕೊರೆಯುವ ಹಾಗೂ ಜಲದಡಿ ಪಂಪ್‌ಗಳ ತಂತ್ರಜ್ಞಾನಗಳಲ್ಲಿ ಸುಧಾರಣೆಗಳು, ಜೊತೆಗೆ, ತೊಟ್ಟಿಕ್ಕುವ ನೀರಾವರಿ ಮತ್ತು ಕಡಿಮೆ ಒತ್ತಡದ ತಿರುಗಣೆಗಳ ಅಭಿವೃದ್ಧಿ ಜತೆಗೂಡಿ, ನಿಯಮಿತವಾಗಿ ಅತಿ ಹೆಚ್ಚು ಬೆಳೆ ಇಳುವರಿ ಪಡೆಯಲು ಸಾಧ್ಯವಾಗಿದೆ. ಅದಕ್ಕೆ ಮುಂಚಿತವಾಗಿ ಕೇವಲ ಮಳೆಯನ್ನು ಅವಲಂಬಿಸಿದ ಕೃಷಿಯು ಈ ಯಶಸ್ಸಿನ ಮಟ್ಟವನ್ನು ಮುಂಗಾಣಲಾಗದಂತೆ ಮಾಡಿತ್ತು. ಆದರೂ, ಈ ಪ್ರಗತಿಯು ಬೆಲೆ ತೆರಬೇಕಾಗಿ ಬಂತು. ಉದಾಹರಣೆಗೆ, ಓಗಲ್ಲಲ ಜಲಕುಹರನಂತಹ ಪ್ರದೇಶಗಳಲ್ಲಿ ಬಳಸಿದ ಹಲವೆಡೆ, ಜಲವು ಪುನರ್ಭರ್ತಿ ಪ್ರಮಾಣಕ್ಕಿಂತಲೂ ಹೆಚ್ಚಾಗಿ ಬಳಕೆಯಾಗುತ್ತಿದೆ.
ಸಹಜ ಸ್ಥಿತಿಯಿರುವ ವರ್ಷಗಳಲ್ಲಿಯೂ ಸಹ, ಬರಗಾಲ-ನಿರೋಧಕ ಕೃಷಿ ವ್ಯವಸ್ಥೆ ಅಭಿವೃದ್ಧಿಗೊಳಿಸಲು ನೀತಿ ಮತ್ತು ನಿರ್ವಹಣ ಕ್ರಿಯೆಗಳು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಬೇಕಿದೆ: 1) ಜಲ ಸಂರಕ್ಷಣೆ ಮತ್ತು ಸಂಗ್ರಹಣೆ ಕ್ರಮಗಳಲ್ಲಿ ಸುಧಾರಣೆ ತರುವುದು; 2) ಬರಗಾಲದಲ್ಲಿ ಸಹಿಸಿಕೊಳ್ಳುವ ಬೆಳೆ ಪ್ರಭೇದದ ಆಯ್ಕೆಗೆ ಪ್ರೋತ್ಸಾಹ ಧನಗಳನ್ನು ನೀಡುವುದು; 3) ಕಡಿಮೆ ಪ್ರಮಾಣದಲ್ಲಿ ನೀರಾವರಿ ವ್ಯವಸ್ಥೆ ಬಳಸುವುದು; 4)ಜಲ ನಷ್ಟವನ್ನು ಕಡಿಮೆಗೊಳಿಸಲು ಸಮರ್ಪಕ ಬೆಳೆ ನಿರ್ವಹಣೆ; ಅಥವಾ 5) ಯಾವುದೇ ಫಸಲನ್ನು ಬೆಳಸದೇ ಇರುವುದು.[೭]
ಮಣ್ಣು
[ಬದಲಾಯಿಸಿ]ವಿಶ್ವದಲ್ಲಿನ ಅತಿದೊಡ್ಡ ಸಮಸ್ಯೆಗಳ ಪೈಕಿ ಮಣ್ಣು ಕೊರೆತವೂ ಸಹ ಒಂದು. ಆಫ್ರಿಕಾದ ದಕ್ಷಿಣ ಭಾಗದಲ್ಲಿ, ಪ್ರತಿವರ್ಷ ಸುಮಾರು ಸಾವಿರ ದಶಲಕ್ಷ ಟನ್‌ಗಳಷ್ಟು ಮಣ್ಣು ಕೊರೆತ ಉಂಟಾಗುವುದೆಂದು ಅಂದಾಜಿಸಲಾಗಿದೆ. ಈ ದರಗಳಲ್ಲಿ ಮಣ್ಣು ಕೊರೆತ ಮುಂದುವರೆದಲ್ಲಿ, ಬೆಳೆ ಇಳುವರಿಯು ಮೂವತ್ತರಿಂದ ಐವತ್ತು ವರ್ಷಗಳಲ್ಲಿ ಅರ್ಧದಷ್ಟು ಕಡಿಮೆಯಾಗುವುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.[೮] ಮಣ್ಣು ಕೊರೆತವು ಕೇವಲ ಆಫ್ರಿಕಾಗೆ ಸೀಮಿತವಾಗಿರದೆ, ವಿಶ್ವದೆಲ್ಲೆಡೆ ಸಂಭವಿಸುತ್ತಿದೆ. ಈ ವಿದ್ಯಮಾನಕ್ಕೆ ಪೀಕ್ ಸಾಯಿಲ್ (ಸವೆದುಹೋದ ಮಣ್ಣು) ಎನ್ನಲಾಗುತ್ತಿದೆ. ಏಕೆಂದರೆ, ಇಂದು ಕೈಗಾರಿಕಾ ಕೃಷಿ ತಂತ್ರಗಳು ಬೃಹತ್‌ಪ್ರಮಾಣದಲ್ಲಿ ನಡೆಯುತ್ತಿವೆ. ಇದರ ಪರಿಣಾಮವಾಗಿ, ಮಾನವನು ಇಂದು ಮತ್ತು ಮುಂದೆ ಆಹಾರ ಬೆಳೆಸುವ ಸಾಮರ್ಥ್ಯಕ್ಕೆ ಕುಂದುಂಟಾಗುತ್ತಿದೆ.[೯] ಮಣ್ಣು ನಿರ್ವಹಣಾ ಪದ್ಧತಿಯಲ್ಲಿ ಯಾವುದೇ ಸುಧಾರಣೆಯಿಲ್ಲದಿದ್ದಲ್ಲಿ, ಮುಂಬರುವ ಕಾಲದಲ್ಲಿ ಕೃಷಿ ಮಾಡಬಹುದಾದ ಮಣ್ಣಿನ ಲಭ್ಯತೆಯು ಹೆಚ್ಚು ಸಮಸ್ಯಾತ್ಮಕವಾಗಬಹುದು.[೧೦]
ಮಣ್ಣು ನಿರ್ವಹಣೆಯ ಕೆಲವು ತಂತ್ರಗಳು
- ಉಳುಮೆ-ರಹಿತ ಬೇಸಾಯ
- ಮೇಲ್ಮೈಲಕ್ಷಣದ ವಿನ್ಯಾಸ
- ಮಣ್ಣನ್ನು ಹಿಡಿದಿಡಲು ಗಾಳಿ ನಿರೋಧಕ ಗಿಡಗಳನ್ನು ಬೆಳೆಸುವುದು.
- ಹೊಲಗಳಲ್ಲಿ ಸಾವಯವ ವಸ್ತುಗಳನ್ನು ಪುನಃ ಅಳವಡಿಸುವುದು
- ಲವಣಾಂಶವಿರುವ ರಾಸಾಯನಿಕ ರಸಗೊಬ್ಬರ ಬಳಕೆ ಕೈಬಿಡುವುದು.
ಆರ್ಥಿಕತೆ
[ಬದಲಾಯಿಸಿ]ಪುಷ್ಟಿಕರ ಕೃಷಿಯ ಸಾಮಾಜಿಕ ಮತ್ತು ಆರ್ಥಿಕ ವಿಚಾರಗಳನ್ನು ಸಹ ಸಂಪೂರ್ಣವಾಗಿ ಅರ್ಥೈಸಿಕೊಂಡಿಲ್ಲ. ಅಲ್ಪ ಪ್ರಮಾಣದ ಕೇಂದ್ರೀಕೃತ ಕೃಷಿಯ ಕುರಿತು, ಇತಿಹಾಸದುದ್ದಕ್ಕೂ ಸಣ್ಣಭೂಹಿಡುವಳಿದಾರ ವ್ಯವಸ್ಥೆಗಳ ಕುರಿತು ನೆಟ್ಟಿಂಗ್‌ರ ಅಧ್ಯಯನವು ಅತಿ-ಚಿರಪರಿಚಿತ ವಿಶ್ಲೇಷಣೆಯಾಗಿದೆ.[೧೧] ಸರ್ವತೋಮುಖ ಮಾರ್ಗದಲ್ಲಿ ಎಲ್ಲ ಮಧ್ಯಸ್ಥಗಾರರಿಗೆ ಇದು ಪರಿಣಾಮ ಬೀರುವುದನ್ನು ಪರಿಗಣಿಸಿ ಆಕ್ಸ್‌ಫರ್ಡ್ ಸಸ್ಟೈನೇಬಲ್ ಗ್ರೂಪ್ ಈ ಅರ್ಥದಲ್ಲಿ ಪುಷ್ಟಿಕರ ಕೃಷಿಯನ್ನು ಹೆಚ್ಚು ಸ್ಥೂಲ ರೂಪದಲ್ಲಿ ವ್ಯಾಖ್ಯಾನಿಸಿದೆ.
ಯಾವುದೇ ನಿರ್ದಿಷ್ಟ ಬೆಲೆ ಮತ್ತು ಸ್ಥಳದಲ್ಲಿ ನೈಸರ್ಗಿಕ ಸಂಪನ್ಮೂಲಗಳ ಪರಿಮಿತ ಪೂರೈಕೆಯಿಂದಾಗಿ, ಅಗತ್ಯ ಸಂಪನ್ಮೂಲಗಳಿಗೆ ಕೃಷಿಯು ಅದಕ್ಷ ಅಥವಾ ಹಾನಿಕಾರಕವಾಗಿದ್ದಲ್ಲಿ, ತರುವಾಯ ಈ ಲಭ್ಯ ಸಂಪನ್ಮೂಲಗಳನ್ನು ನಿಸ್ಸಾರಗೊಳಿಸಬಹುದು ಅಥವಾ ಅದನ್ನು ಪಡೆಯುವ ಅಥವಾ ತಾಳಿಕೊಳ್ಳುವ ಸಾಮರ್ಥ್ಯವನ್ನು ನಿಸ್ಸಾರಗೊಳಿಸಬಹುದು. ಇದು ಕೆಲವೊಮ್ಮೆ ಮಾಲಿನ್ಯದಂತಹ ನಕಾರಾತ್ಮಕ ಬಾಹ್ಯ ಪರಿಣಾಮ ಹಾಗೂ ಹಣಕಾಸಿನ ಮತ್ತು ಉತ್ಪಾದನೆಯ ಖರ್ಚು ಹೆಚ್ಚಾಗಿಸಬಹುದು.
ಪುಷ್ಟಿಕರ ಲಕ್ಷಣದ ಸಮೀಕರಣದಲ್ಲಿ ಬೆಳೆಗಳು ಮಾರಾಟವಾಗುವ ರೀತಿಯನ್ನು ಲೆಕ್ಕಿಸಬೇಕಾಗಿದೆ. ಸ್ಥಳೀಯವಾಗಿ ಮಾರಾಟವಾಗುವ ಆಹಾರವು ಸಾಮಾನ್ಯವಾಗಿ (ಬಳಕೆದಾರರೂ ಸೇರಿದಂತೆ) ರವಾನೆಗಾಗಿ ಹೆಚ್ಚುವರಿ ಶಕ್ತಿಯ ಅಗತ್ಯವೂ ಇಲ್ಲ. ಕೃಷಿಕರ ಮಾರುಕಟ್ಟೆಯಾಗಲಿ ಅಥವಾ ದೊಡ್ಡ ಮಾರುಕಟ್ಟೆಯಾಗಲಿ, ಜನನಿಬಿಡ ಸ್ಥಳಗಳಿಂದ ಬಹಳ ದೂರದಲ್ಲಿ ಮಾರಾಟವಾಗುವ ಆಹಾರಕ್ಕೆ, ಮೂಲವಸ್ತುಗಳು, ಶ್ರಮದ ಖರ್ಚು ಮತ್ತು ರವಾನೆಗಾಗಿ ಹೆಚ್ಚುವರಿ ವೆಚ್ಚಗಳಾಗಬಹುದು.
ವಿಧಾನಗಳು (ಪದ್ದತಿಗಳು)
[ಬದಲಾಯಿಸಿ]ಎಂತಹ ಬೆಳೆ ಎಲ್ಲಿ ಹಾಗೂ ಹೇಗೆ ಬೆಳೆಯುತ್ತದೆ ಎಂಬುದು ಆಯ್ಕೆಯ ವಿಚಾರ. ಪುಷ್ಟಿಕರ ಕೃಷಿಯಲ್ಲಿ ಎರಡು ವಿಧಾನಗಳೆಂದರೆ ಬೆಳೆ ಆವರ್ತನ ಮತ್ತು ಮಣ್ಣು ಸುಧಾರಕ. ಉಳುಮೆ ಮಾಡಲಾದ ಬೆಳೆಗಳು, ಆರೋಗ್ಯಕರ ಬೆಳವಣಿಗೆಗೆ ಅಗತ್ಯ ಪೌಷ್ಟಿಕಾಂಶ ಪಡೆಯಬಹುದೆಂದು ಖಾತರಿಪಡಿಸಿಕೊಂಡು ಇವೆರಡೂ ವಿಧಾನಗಳನ್ನು ವಿನ್ಯಾಸ ಮಾಡಲಾಗಿದೆ. ಮಣ್ಣು ಸುಧಾರಣೆಗಳಲ್ಲಿ, ಸಮುದಾಯ ಮರುಬಳಕೆ ಕೇಂದ್ರದಿಂದ ಸ್ಥಳೀಯವಾಗಿ ಲಭ್ಯವಾಗಿರುವ ಮಿಶ್ರಗೊಬ್ಬರವೂ ಸೇರಿರಬಹುದು. ಸ್ಥಳೀಯ ಸಾವಯವ ಹೊಲಗಳಿಗೆ ಅಗತ್ಯವಾದ ಮಿಶ್ರಗೊಬ್ಬರವನ್ನು ಉತ್ಪಾದಿಸಲು ಈ ಸಮುದಾಯ ಮರುಬಳಕೆ ಕೇಂದ್ರಗಳು ಸಹಾಯಮಾಡುತ್ತವೆ.
ಕೃಷಿಯನ್ನು ಇನ್ನಷ್ಟು ಪುಷ್ಟಿಕರಗೊಳಿಸುವ ಬಗ್ಗೆ ಹಲವು ವಿಜ್ಞಾನಿಗಳು, ಕೃಷಿಕರು ಮತ್ತು ಉದ್ಯಮಿಗಳು ಗಹನ ಚರ್ಚೆ ನಡೆಸಿದ್ದಾರೆ. ಹಿತ್ತಲು ಮತ್ತು ಅಡುಗೆ ತ್ಯಾಜ್ಯಗಳಿಂದ ಸಮುದಾಯ ಮರುಬಳಕೆ ವಿಧಾನ ಬಳಸುವುದರ ಮೂಲಕ, ಸ್ಥಳೀಯ ಮಟ್ಟದಲ್ಲಿ ಸಾಮಾನ್ಯವಾಗಿ ಲಭ್ಯ ಸಂಪನ್ಮೂಲಗಳನ್ನು ಬಳಸಬಹುದು. ಹಿಂದೆ ಈ ಸಂಪನ್ಮೂಲಗಳನ್ನು ದೊಡ್ಡದಾದ ತ್ಯಾಜ್ಯ ವಿಲೇವಾರಿ ಸ್ಥಳಗಳಲ್ಲಿ ಬಿಸಾಡಲಾಗುತ್ತಿತ್ತು. ಇಂದು, ಸಾವಯವ ಕೃಷಿಗಾಗಿ ಕಡಿಮೆ-ವೆಚ್ಚದ ಸಾವಯವ ಮಿಶ್ರಗೊಬ್ಬರ ಉತ್ಪಾದಿಸಲು ಈ ತ್ಯಾಜ್ಯಗಳನ್ನು ಬಳಸಲಾಗುತ್ತಿದೆ. ಇತರೆ ಪದ್ಧತಿಗಳಲ್ಲಿ, ಒಂದೇ ಹೊಲದಲ್ಲಿ ವಿಭಿನ್ನ ರೀತಿಯ ಪುನರಾವರ್ತಿತ ಬೆಳೆ ಬೆಳೆಸುವುದು. ಇವುಗಳಲ್ಲಿ ಪ್ರತಿಯೊಂದೂ ಸಹ ಪ್ರತ್ಯೇಕ ಋತುಗಳಲ್ಲಿ ಬೆಳೆಯುತ್ತವೆ. ಇದರಿಂದಾಗಿ ನೈಸರ್ಗಿಕ ಸಂಪನ್ಮೂಲಕ್ಕಾಗಿ ಬೆಳೆಗಳು ಪೈಪೋಟಿ ನಡೆಸುವುದು ತಪ್ಪುತ್ತದೆ.[೧೨] ಈ ವ್ಯವಸ್ಥೆಯಿಂದ ರೋಗ-ನಿರೋಧ ಶಕ್ತಿ ಹೆಚ್ಚಾಗಿ, ಮಣ್ಣಿನ ಕೊರೆತದ ಪರಿಣಾಮಗಳು ಪೌಷ್ಟಿಕಾಂಶಗಳ ನಷ್ಟಗಳನ್ನು ಕುಂಠಿತಗೊಳಿಸುತ್ತದೆ. ದ್ವಿದಳ ಧಾನ್ಯಗಳಿಂದ ಸಾರಜನಕ ಸ್ಥಿರೀಕರಣ, ಉದಾಹರಣೆಗೆ ಬೆಳವಣಿಗೆಗಾಗಿ ಮಣ್ಣಿನ ನೈಟ್ರೇಟ್ ಅವಲಂಬಿಸಿರುವ ಸಸ್ಯಗಳ ಜತೆ ಬಳಕೆಯಿಂದ, ಭೂಮಿಯನ್ನು ವಾರ್ಷಿಕವಾಗಿ ಮರುಬಳಕೆ ಮಾಡಲು ಸಹಾಯ ಮಾಡುತ್ತದೆ. ಒಂದು ಋತುವಿನಲ್ಲಿ ಈ ದ್ವಿದಳ ಧಾನ್ಯಗಳು ಬೆಳೆದು, ಅಮೋನಿಯಮ್ ಮತ್ತು ನೈಟ್ರೇಟ್‌ಒಂದಿಗೆ ಮಣ್ಣನ್ನು ಸಮೃದ್ಧಗೊಳಿಸುತ್ತದೆ. ಮುಂದಿನ ಋತುವಿನಲ್ಲಿ ಇತರೆ ಗಿಡಗಳನ್ನು ಅದೇ ಹೊಲದಲ್ಲಿ ಕೊಯ್ಲಿನ ಸಿದ್ಧತೆಗಾಗಿ ಬೆಳೆಸಬಹುದು.
ನಿರ್ದಿಷ್ಟ ಹೊಲದಲ್ಲಿ ಒಂದು ಬಾರಿಗೆ ಒಂದೇ ಬೆಳೆ ಬೆಳೆಯುವ ಏಕ ಫಸಲಿನ ಕೃಷಿ ವಿಧಾನವು ವ್ಯಾಪಕವಾದ ಪದ್ಧತಿಯಾಗಿದೆ. ಆದರೆ, ಪ್ರತಿ ವರ್ಷವೂ ಅದೇ ಬೆಳೆ ಬೆಳೆಸುತ್ತಿದ್ದರೆ, ಅದರ ಪುಷ್ಟಿಕರ ಲಕ್ಷಣದ ಬಗ್ಗೆ ಪ್ರಶ್ನೆಗಳು ಏಳುತ್ತವೆ. ಇಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು, ಸ್ಥಳೀಯ ನಗರಗಳು ಮತ್ತು ಹೊಲಗಳು ಕೃಷಿಕರಿಗಾಗಿ ಅಗತ್ಯವಾದ ಮಿಶ್ರಗೊಬ್ಬರವನ್ನು ತಯಾರಿಸುವಲ್ಲಿ ಸಹಯೋಗದಿಂದ ಕೆಲಸ ಮಾಡಬಹುದು. ಇದರ ಜೊತೆಗೆ, ಮಿಳ್ರ ಬೆಳೆಗಳನ್ನು(ಬಹುವಿಧದ ಫಸಲು) ಒಟ್ಟಿಗೆ ಬೆಳೆಸುವುದರಿಂದ, ರೋಗ ಮತ್ತು ಕೀಟ ಸಮಸ್ಯೆ ಕುಂಠಿತಗೊಳಿಸುತ್ತದೆ. ಆದರೆ ಒಂದೇ ರೀತಿಯ ಒಟ್ಟಾರೆ ಬೆಳೆ ವೈವಿಧ್ಯತೆಯೊಂದಿಗೆ, ಅನುಕ್ರಮ ವರ್ಷಗಳಲ್ಲಿ ವಿಭಿನ್ನ ಬೆಳೆಗಳನ್ನು ಬೆಳೆಯುವ ವ್ಯಾಪಕ ಪದ್ಧತಿಯನ್ನು(ಬೆಳೆ ಆವರ್ತನ)[೧೩] ಬಹುವಿಧದ ಫಸಲಿನ ಕೃಷಿಯೊಂದಿಗೆ ಅಪರೂಪವಾಗಿ ಹೋಲಿಕೆ ಮಾಡಲಾಗುತ್ತದೆ. ವಿಭಿನ್ನ ಬೆಳೆಗಳನ್ನು ಒಳಗೊಂಡಿರುವ ಬೆಳೆ ವ್ಯವಸ್ಥೆಗಳು (ಬಹು ಬೆಳೆ ಕೃಷಿ ಮತ್ತು/ಅಥವಾ ಕೃಷಿ ಆವರ್ತನೆ) ಸಹ (ದ್ವಿದಳ ಧಾನ್ಯವನ್ನೂ ಒಳಗೊಂಡಲ್ಲಿ) ಸಾರಜನಕವನ್ನು ಪುನಃ ಪೂರಣಗೊಳಿಸಬಹುದು. ಜೊತೆಗೆ ಸೂರ್ಯನ ಬೆಳಕು, ಜಲ ಅಥವಾ ಪೌಷ್ಟಿಕಾಂಶಗಳನ್ನು ಇನ್ನಷ್ಟು ಸಮರ್ಪಕವಾಗಿ ಬಳಸಬಹುದು (Field Crops Res. 34:239).
ನೈಸರ್ಗಿಕ ಪರಿಸರವನ್ನು ಕೆಲ ನಿರ್ದಿಷ್ಟ ಆಯ್ದ ಸಸ್ಯ ಜಾತಿಗಳೊಂದಿಗೆ ಬದಲಾಯಿಸಿದಲ್ಲಿ, ವನ್ಯಜೀವಿಗಳಲ್ಲಿ ಕಂಡುಬರುವ ತಳೀಯ ವೈವಿಧ್ಯತೆಯನ್ನು ಕಡಿಮೆಗೊಳಿಸುತ್ತದೆ. ಜೊತೆಗೆ ಜೀವಿಗಳು ವ್ಯಾಪಕ ರೋಗಗಳಿಗೆ ತುತ್ತಾಗಬಹುದು. ಒಂದೇ ಬಗೆಯ ಬೆಳೆ ಕೃಷಿಯಿಂದ ಉಂಟಾಗುವ ಅಪಾಯಗಳಿಗೆ, ಐರ್ಲೆಂಡ್‌ನ ಮಹಾ ಕ್ಷಾಮ (1845–1849) ಚಿರಪರಿಚಿತ ಉದಾಹರಣೆ. ವಾಸ್ತವಿಕವಾಗಿ, ಪುಷ್ಟಿಕರ ಕೃಷಿಗೆ ಯಾವುದೇ ಏಕೈಕ ವಿಧಾನವಿಲ್ಲ. ಏಕೆಂದರೆ, ಇದರ ನಿಖರ ಗುರಿಗಳು ಮತ್ತು ಪದ್ಧತಿಗಳನ್ನು ಪ್ರತಿಯೊಂದು ಪ್ರಕರಣಕ್ಕೂ ಅಳವಡಿಸಬೇಕು. ಪುಷ್ಟಿಕರ ಲಕ್ಷಣದ ಕೃಷಿ ವಿಧಾನದ ಪರಿಕಲ್ಪನೆಯೊಂದಿಗೆ ಅಂತರ್ಗತವಾಗಿ ಘರ್ಷಣೆಯಾಗುವಂತಹ ಕೆಲವು ಕೃಷಿ ತಂತ್ರಗಳುಂಟು. ಆದರೆ ಕೆಲವು ಪದ್ಧತಿಗಳ ಪ್ರಭಾವಗಳ ಬಗ್ಗೆ ಬಹಳಷ್ಟು ತಪ್ಪು ಗ್ರಹಿಕೆಗಳಾಗಿವೆ. ಇಂದು ಸ್ಥಳೀಯ ಕೃಷಿಕರ ಮಾರುಕಟ್ಟೆಗಳ ಬೆಳವಣಿಗೆಯು, ಸಣ್ಣಪ್ರಮಾಣದ ಕೃಷಿಕರು ತಾವು ಮರುಬಳಕೆ ಮಿಶ್ರಿತ ಗೊಬ್ಬರ ಕೊಂಡಿರುವ ನಗರಗಳಿಗೇ ತಮ್ಮ ಹೊಲ ಉತ್ಪನ್ನಗಳನ್ನು ಮಾರುವ ಸಾಮರ್ಥ್ಯ ದೊರಕಿಸಿಕೊಟ್ಟಿದೆ. ಸ್ಥಳೀಯ ಮರುಬಳಕೆಯನ್ನು ಬಳಸುವ ಮೂಲಕ, ಕೃಷಿಕರು ಕತ್ತರಿಸಿ ಸುಡುವ(ಅರಣ್ಯಗಳನ್ನು ಕತ್ತರಿಸಿ ಸುಟ್ಟು,ಕೃಷಿ ಭೂಮಿ ಸಿದ್ಧಪಡಿಸುವುದು) ತಂತ್ರಗಳನ್ನು ಕೈಬಿಡುವಂತೆ ಮಾಡಲು ಬಹಳಷ್ಟು ಉಪಯುಕ್ತವಾಗಿದೆ. ಕತ್ತರಿಸಿ ಸುಡುವ ವಿಧಾನವು ಸ್ಥಳಾಂತರ ಬೇಸಾಯದ ಲಕ್ಷಣವಾಗಿದ್ದು, ಅಂತರ್ಗತವಾಗಿ ಹಾನಿಕಾರಕ ಎನ್ನಲಾಗಿದೆ. ಆದರೂ, ಅಮೆಜಾನ್ ಪ್ರದೇಶದಲ್ಲಿ ಕನಿಷ್ಠ ಪಕ್ಷ 6000 ವರ್ಷಗಳ ಕಾಲ ಕತ್ತರಿಸಿ ಸುಡುವ ಪದ್ಧತಿ ಜಾರಿಯಲ್ಲಿತ್ತು.[೧೪] ಬ್ರೆಜಿಲ್ ಸರ್ಕಾರದ ಕಾರ್ಯಕ್ರಮಗಳು ಮತ್ತು ನೀತಿಗಳ ಫಲವಾಗಿ, ಹೆಚ್ಚಿನ ಪ್ರಮಾಣದ ಅರಣ್ಯನಾಶವು 1970ರ ದಶಕದ ವರೆಗೆ ಆರಂಭವಾಗಿರಲಿಲ್ಲ.[೧೫] ಇದು 'ಕತ್ತರಿಸಿ-ಕರಕಲು' ಮಾಡುವಷ್ಟು ಕತ್ತರಿಸಿ-ಸುಡುವುದು ಆಗಿಲ್ಲದಿರಬಹುದು. ಕತ್ತರಿಸಿ ಕರಕಲು ಮಾಡುವುದರಿಂದ ಸಾವಯವ ವಸ್ತುವಿನ ಜತೆಗೂಡಿ, ಇಡೀ ಭೂಮಿಯಲ್ಲಿ ಅತಿ ಸಮೃದ್ಧ ಟೆರಾ ಪ್ರೆಟಾ ಮಣ್ಣು ಲಭ್ಯವಾಗುತ್ತದೆ ಮತ್ತು ಇದು ಸ್ವತಃ ಪುನಶ್ಚೇತನಗೊಳ್ಳುತ್ತದೆ.
ಪುಷ್ಟಿಕರ ಪಶುಸಂಗೋಪನೆ ಮಾಡಲು ಕೂಡ ಹಲವು ವಿಧಾನಗಳಿವೆ. ಮೇಯಿಸುವಿಕೆ ನಿರ್ವಹಣೆಯಲ್ಲಿ ಕೆಲವು ಮುಖ್ಯ ಸಾಧನಗಳೆಂದರೆ, ಮೇಯಿಸುವಿಕೆಯ ಇಡೀ ಕ್ಷೇತ್ರವನ್ನು ಸಣ್ಣ ಹುಲ್ಲುಗಾವಲುಗಳನ್ನಾಗಿ ಮಾಡಿ ಬೇಲಿ ಹಾಕುವುದು, ಜಾನುವಾರು ಸಾಂದ್ರತೆ ಕಡಿಮೆಗೊಳಿಸುವುದು, ಹಾಗೂ ಸಣ್ಣ ಹುಲ್ಲುಗಾವಲುಗಳ ನಡುವೆ ಜಾನುವಾರುಗಳನ್ನು ಸ್ಥಳಾಂತರಿಸುವುದು ಸೇರಿವೆ.[೧೬]
ಪ್ರತ್ಯೇಕ ಅಂಗಾಂಶಗಳನ್ನು ಪ್ರನಾಳೀಯವಾಗಿ ಉತ್ಪಾದಿಸುವ ಮೂಲಕ, ಕೃತಕ ಮಾಂಸ ಉತ್ಪಾದಿಸುವಲ್ಲಿ ಹಲವು ಯತ್ನಗಳು ನಡೆದಿವೆ. ನ್ಯೂ ಹಾರ್ವೆಸ್ಟ್ ಯೋಜನೆಯಲ್ಲಿ ಜೇಸನ್ ಮ್ಯಾಥೆನಿಯವರ ಕಾರ್ಯವು, ಬಹಳಷ್ಟು ವಿಮರ್ಶೆಗೆ ಒಳಗಾಗಿದೆ.[೧೭]
ಮಣ್ಣಿನ ನಿರ್ವಹಣೆ
[ಬದಲಾಯಿಸಿ]ಮಣ್ಣಿನಲ್ಲಿ ವಿಷಕ್ರಿಮಿ ನಾಶಗೊಳಿಸಲು ರಾಸಾಯನಿಕಗಳ ಬದಲು ಮಣ್ಣು ಹಬೆ ತಂತ್ರವನ್ನು ಪರಿಸರ ಪರ್ಯಾಯವಾಗಿ ಬಳಸಬಹುದು. ಮಣ್ಣಿನಲ್ಲಿ ಕೀಟಗಳನ್ನು ನಾಶಗೊಳಿಸಿ, ಅದರ ಆರೋಗ್ಯ ಹೆಚ್ಚಿಸಲು, ಮಣ್ಣಿನಲ್ಲಿ ಹಬೆ ಚಲಾಯಿಸಲು ಹಲವು ವಿಭಿನ್ನ ವಿಧಾನಗಳಿವೆ. ಅಡುಗೆಮನೆ, ಹಿತ್ತಲು ಮತ್ತು ಹೊಲಗಳಲ್ಲಿನ ಸಾವಯವ ತ್ಯಾಜ್ಯಗಳಿಂದ ಸಮುದಾಯ ಮತ್ತು ಹೊಲದ ಮಿಶ್ರಗೊಬ್ಬರವಾಗಿ ಪರಿವರ್ತಿಸುವುದರಿಂದ, ಸ್ಥಳೀಯ ಹೊಲಗಳ ಕೆಲವು ಅಗತ್ಯಗಳನ್ನು ಒದಗಿಸುತ್ತದೆ. ಈ ಮಿಶ್ರಗೊಬ್ಬರ ತಯಾರಿಕೆಯು, ಇಂಧನದ ವಿಶ್ವಸನೀಯ ಮೂಲವಾಗಬಹುದು.
ಕೃಷಿ ಆಚೆಗಿನ ಪರಿಣಾಮಗಳು
[ಬದಲಾಯಿಸಿ]ಕೃಷಿ ಕ್ಷೇತ್ರವು ಒಂದೆಡೆ ನಿರಂತರ ಇಳುವರಿ ನೀಡುತ್ತಿದ್ದು ಇನ್ನೊಂದೆಡೆ ಪರಿಸರದ ಮೇಲೆ ನಕಾರಾತ್ಮಕ ಪ್ರಭಾವ ಬೀರಿದಲ್ಲಿ, ಇದನ್ನು ಪುಷ್ಟಿಕರ ಕೃಷಿ ಎನ್ನಲಾಗದು. ಜಾಗತಿಕ ಗಮನ ಸೆಳೆಯುವಂತಹ ಸೂಕ್ತ ನಿದರ್ಶನವೆಂದರೆ, ಹೊಲವೊಂದರಲ್ಲಿ ಸಂಶ್ಲೇಷಿತ ರಸಗೊಬ್ಬರ ಅಥವಾ ಪ್ರಾಣಿ ಗೊಬ್ಬರಗಳನ್ನು ಅಗತ್ಯಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಬಳಸಿದರೆ, ಆ ಹೊಲದಲ್ಲಿ ಉತ್ಪಾದನೆ ಹೆಚ್ಚಾಗುತ್ತದೆ, ಅದರೂ ಸನಿಹದಲ್ಲಿರುವ ನದಿಗಳು ಮತ್ತು ಕಡಲುತೀರಗಳು ಮಲಿನವಾಗಬಹುದು (ಯೂಟ್ರೋಫಿಕೇಷನ್-ಜಲಚರಗಳು ಆಮ್ಲಜನಕವಿಲ್ಲದೆ ಸಾಯುವಷ್ಟು ಸಸ್ಯಗಳು ಬೆಳೆಯುವಂತೆ ವಿಪರೀತವಾಗಿ ಫಲವತ್ತಾಗಿಸುವಿಕೆ). ಇನ್ನೊಂದರ ತೀವ್ರತೆಯೂ ಸಹ ಒಳ್ಳೆಯದಲ್ಲ. ಮಣ್ಣಿನಲ್ಲಿ ಪೌಷ್ಟಿಕಾಂಶಗಳು ಬರಿದಾಗುವ ಕಾರಣದಿಂದ ಕಡಿಮೆ ಪ್ರಮಾಣದ ಇಳುವರಿಯ ಸಮಸ್ಯೆಯು ಮಳೆಕಾಡಿನ ನಾಶಗೊಳಿಸುವಿಕೆಗೆ ಸಂಬಂಧಿಸಿದೆ. ಜಾನುವಾರು ಮೇವಿಗಾಗಿ ಕತ್ತರಿಸಿ-ಸುಡುವ ಕೃಷಿಯು ಇದಕ್ಕೆ ಸೂಕ್ತ ಉದಾಹರಣೆ.
ಪುಷ್ಟಿಕರ ಲಕ್ಷಣವು ಒಟ್ಟಾರೆ ಉತ್ಪಾದನೆಯ ಮೇಲೆ ಪ್ರಭಾವ ಬೀರಬಹುದು. 2050ರಷ್ಟರಲ್ಲಿ ವಿಶ್ವದ ಜನಸಂಖ್ಯೆಯು 9.30 ಶತಕೋಟಿಯ ಮಟ್ಟ ತಲುಪಬಹುದೆಂದು ಮುಂಗಾಣಲಾಗಿದೆ, ಇದಕ್ಕನುಗುಣವಾಗಿ, ಹೆಚ್ಚಾಗುತ್ತಿರುವ ಆಹಾರ ಮತ್ತು ನಾರಿನ ಬೇಡಿಕೆಯನ್ನು ಪೂರೈಸಲು ಉತ್ಪಾದನೆಯ ಪ್ರಮಾಣವೂ ಹೆಚ್ಚಬೇಕು. ಹೊಸ ಕೃಷಿಜಮೀನು ಸೃಷ್ಟಿಸುವ ಮೂಲಕ ಉತ್ಪಾದನೆ ಹೆಚ್ಚಿಸಬಹುದು. ಪ್ಯಾಲೆಸ್ಟೀನ್‌ನಲ್ಲಿ ಮರುಭೂಮಿಯ ಸುಧಾರಣೆ ಕ್ರಮದಂತೆ ಕ್ರಮ ಕೈಗೊಂಡಲ್ಲಿ, ಇಂಗಾಲ ಡಯಾಕ್ಸೈಡ್ ಹೊರಸೂಸುವಿಕೆಯನ್ನು ಉತ್ತಮಗೊಳಿಸಬಹುದು, ಅಥವಾ ಇನ್ನೊಂದೆಡೆ, ಬ್ರೆಜಿಲ್‌ನಲ್ಲಿ ಪ್ರಚಲಿತವಾಗಿರುವ ಕತ್ತರಿಸಿ-ಸುಡು ಕೃಷಿಯ ಮೂಲಕ ನಡೆಸಿದಲ್ಲಿ, ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಗಳು ಇನ್ನಷ್ಟು ಕೆಡಬಹುದು. ಜೊತೆಗೆ, ತಳೀಯವಾಗಿ ಪರಿವರ್ತಿತ ಜೀವಿ ಬೆಳೆಗಳು, ದಿಢೀರನೆ ಹೆಚ್ಚಿನ ಬೆಳೆ ಇಳುವರಿಯ ಭರವಸೆ ನೀಡುತ್ತವೆ, [ಸೂಕ್ತ ಉಲ್ಲೇಖನ ಬೇಕು] ಆದರೂ ಈ ಹೊಸ ಕೃಷಿ ವಿಧಾನದ ಬಗ್ಗೆ ಹಲವು ಜನರು ಮತ್ತು ಸರ್ಕಾರಗಳು ಇನ್ನೂ ಸಕಾರಾತ್ಮಕ ಪ್ರತಿಕ್ರಿಯೆ ತೋರಿಲ್ಲ.
ಇದೊಂದೇ ಸಮರ್ಥವಾಗಿ ಸುದೀರ್ಘ ಕಾಲ ನಡೆಯಬಲ್ಲ ಕೃಷಿ ವ್ಯವಸ್ಥೆ ಎಂದು ಪುಷ್ಟಿಕರ ಕೃಷಿಯ ಸಮರ್ಥಕರು ಹೇಳುತ್ತಾರೆ. ಆದರೂ, ಸಾವಯವ ಉತ್ಪಾದನಾ ವಿಧಾನಗಳು, ಅದರಲ್ಲೂ ವಿಶಿಷ್ಟವಾಗಿ ಪರಿವರ್ತನೆಯಲ್ಲಿರುವ ವಿಧಾನಗಳು, ಸಾಂಪ್ರದಾಯಿಕ ವಿಧಾನಗಳಿಗಿಂತಲೂ ಕಡಿಮೆ ಇಳುವರಿ ನೀಡುತ್ತವೆ. ವಿಶ್ವಾದ್ಯಂತ ಜನಸಂಖ್ಯೆಗಳ ಅವಶ್ಯಕತೆ ಪೂರೈಸುವಲ್ಲಿ ಸಮಸ್ಯೆಯುಂಟಾಗಬಹುದು. ಸಾವಯವ ಕೃಷಿ ಹೊಲಗಳು ಬರಗಾಲದ ಅವಧಿಗಳನ್ನು ಸರಿಯಾಗಿ ನಿಭಾಯಿಸುತ್ತದೆ ಎಂದು ಪುರಾವೆ ಹೇಳಿದೆ. ಈ ವಿಧಾನವು ಎಲೂರಿನಲ್ಲಿ ವಾಸಿಸುವ ಬಡ ಕೃಷಿಕರಿಗೆ ಬಹಳ ಉಪಯುಕ್ತವಾಗಿದೆ.
ನಗರ ಯೋಜನೆ
[ಬದಲಾಯಿಸಿ]ಪುಷ್ಟಿಕರ ಕೃಷಿಗೆ ಯಾವ ಸ್ವರೂಪದ ಮಾನವ ಆವಾಸಸ್ಥಾನವು ಉತ್ತಮ ಸಾಮಾಜಿಕ ಸ್ವರೂಪ ಎನ್ನುವ ಬಗ್ಗೆ ಗಣನೀಯ ಚರ್ಚೆ ನಡೆದಿದೆ.
ಕೃಷಿ ಜಮೀನಿನ ಸಂರಕ್ಷಣೆ ಮತ್ತು ಇಂಧನ ದಕ್ಷತೆಯನ್ನು ಗರಿಷ್ಠಗೊಳಿಸುವ ವಿಧಾನವಾಗಿ ಅತಿಹೆಚ್ಚು ಜನಸಾಂದ್ರತೆಯುಳ್ಳ ನಗರದ ಬೆಳವಣಿಗೆಗಳಿಗೆ ಅನೇಕ ಪರಿಸರವಾದಿಗಳು ಸಲಹೆ ಮಾಡುತ್ತಾರೆ. ಆದಾಗ್ಯೂ, ಪುಷ್ಟಿಕರ ಲಕ್ಷಣದ ಪರಿಸರೀಯ ನಗರಗಳು ಅಥವಾ ಪರಿಸರೀಯ ಗ್ರಾಮಗಳು ಆವಾಸಸ್ಥಾನ ಮತ್ತು ಕೃಷಿ ಜತೆಗೂಡಿ ಉತ್ಪಾದಕರು ಮತ್ತು ಗ್ರಾಹಕರ ನಡುವೆ ಅತೀ ಸಾಮೀಪ್ಯ ಹೊಂದಿದ್ದರೆ, ಹೆಚ್ಚಿನ ಪುಷ್ಟಿಕರ ಲಕ್ಷಣವನ್ನು ಒದಗಿಸುತ್ತದೆ ಎಂದು ಕೆಲವರು ನಂಬಿದ್ದಾರೆ.[ಸೂಕ್ತ ಉಲ್ಲೇಖನ ಬೇಕು]
ಸಹಕಾರದ ಆಹಾರ ಉತ್ಪಾದನೆಗಾಗಿ, ನಗರಗಳಲ್ಲಿ ಈಗಾಗಲೇ ಲಭ್ಯವಿರುವ ಸ್ಥಳಗಳ ಬಳಕೆ (ಉದಾಹರಣೆಗೆ, ಛಾವಣಿ ಮೇಲಿನ ತೋಟಗಳು, ಸಮುದಾಯ ತೋಟಗಳು, ತೋಟ ಹಂಚುವಿಕೆ ಮತ್ತು ನಗರವಲಯ ಕೃಷಿಯ ಇತರೆ ರೂಪಗಳು) ಹೆಚ್ಚಿನ ಪುಷ್ಟಿಕರ ಲಕ್ಷಣ ಪಡೆಯಲು ಇನ್ನಂದು ವಿಧಾನ. [ಸೂಕ್ತ ಉಲ್ಲೇಖನ ಬೇಕು]
ಆಹಾರ ಫಸಲುಗಳ ಉತ್ಪಾದನೆಯನ್ನು ದೊಡ್ಡ ಕೈಗಾರಿಕಾ ಕೃಷಿ ಕಾರ್ಯಾಚರಣೆಗಳಿಂದ ವರ್ಟಿಕಲ್ ಫಾರ್ಮಿಂಗ್(ಗಗನಚುಂಬಿ ಕಟ್ಟಡಗಳಲ್ಲಿನ ಒಳಾಂಗಣ ಕೃಷಿ)ಎಂದು ಕರೆಯುವ ದೊಡ್ಡ, ನಗರವಲಯದಲ್ಲಿರುವ ತಾಂತ್ರಿಕ ವ್ಯವಸ್ಥೆಗೆ ಸ್ಥಳಾಂತರಿಸುವ ಮೂಲಕ, ಪುಷ್ಟಿಕರ ಕೃಷಿ ವಿಧಾನ ಸಾಧನೆಗೆ ಇತ್ತೀಚೆಗಿನ ಕಲ್ಪನೆಗಳಲ್ಲಿ ಇದೂ ಒಂದಾಗಿದೆ. ಒಳಾಂಗಣ ಕೃಷಿಯ ಅನುಕೂಲಗಳಲ್ಲಿ, ವರ್ಷಪೂರ್ತಿ ಉತ್ಪಾದನೆ, ಕೀಟಗಳು ಮತ್ತು ರೋಗಗಳಿಂದ ರಕ್ಷಣೆ, ಸಂಪನ್ಮೂಲ ಮರುಬಳಕೆಯ ಸೂಕ್ತ ನಿಯಂತ್ರಣ, ಸಾರಿಗೆ ವೆಚ್ಚಗಳನ್ನು ಕಡಿಮೆಗೊಳಿಸುವಂತಹ ಸ್ಥಳೀಯ ಉತ್ಪಾದನೆಯೂ ಸೇರಿವೆ.[ಸೂಕ್ತ ಉಲ್ಲೇಖನ ಬೇಕು] ಒಳಾಂಗಣ ಕೃಷಿ(ವರ್ಟಿಕಲ್ ಫಾರ್ಮಿಂಗ್) ವಾಸ್ತವ ರೂಪವನ್ನು ಪಡೆಯಬೇಕಾಗಿದೆ. ಆದರೂ, ಬೆಳೆಯುತ್ತಿರುವ ವಿಶ್ವ ಜನಸಂಖ್ಯೆಗೆ ಆಹಾರ ಒದಗಿಸಲು ಸದ್ಯದ ಪುಷ್ಟಿಕರ ಕೃಷಿ ವಿಧಾನಗಳು ಸಾಲದಾಗಿರುವ ಕಾರಣ, ಒಳಾಂಗಣ ಕೃಷಿಯ ಕಲ್ಪನೆಗೆ ಚಾಲನೆ ಸಿಗುತ್ತಿದೆ.[೧೮]
ಇವನ್ನೂ ಗಮನಿಸಿ
[ಬದಲಾಯಿಸಿ]
|
|
ಅಡಿ ಟಿಪ್ಪಣಿಗಳು
[ಬದಲಾಯಿಸಿ]- ↑ ಗೋಲ್ಡ್, ಎಂ. (ಜುಲೈ 2009 ವಾಟ್ ಇಸ್ ಸಸ್ಟೇನಬಲ್ ಅಗ್ರಿಕಲ್ಚರ್? Archived 2015-09-05 ವೇಬ್ಯಾಕ್ ಮೆಷಿನ್ ನಲ್ಲಿ.. ಅಮೆರಿಕಾ ಸಂಯುಕ್ತ ಸಂಸ್ಥಾನ ಕೃಷಿ ಇಲಾಖೆಯ ಪರ್ಯಾಯ ಕೃಷಿ ವ್ಯವಸ್ಥೆ ಮಾಹಿತಿ ಕೇಂದ್ರ
- ↑ ಆಹಾರ, ಕೃಷಿ, ಸಂರಕ್ಷಣೆ ಮತ್ತು ವಹಿವಾಟು ಕಾಯಿದೆ 1990 (FACTA), ಸಾರ್ವಜನಿಕ ಕಾನೂನು 101-624, ಶೀರ್ಷಿಕೆ XVI, ಉಪಶೀರ್ಷಿಕೆ A, ವಿಭಾಗ 1603
- ↑ ಸಾವಯವ ಮತ್ತು GMO-ಯೇತರ ವರದಿ ಹೊಸ ಪ್ರಮಾಣೀಕೃತ ಕಾರ್ಯಕ್ರಮಗಳು ಪುಷ್ಟಿಕರ ಕೃಷಿಗೆ ಒತ್ತು ನೀಡುತ್ತವೆ Archived 2017-07-04 ವೇಬ್ಯಾಕ್ ಮೆಷಿನ್ ನಲ್ಲಿ..
- ↑ ಅಲ್ಟಿಯರಿ, ಮಿಗ್ವೆಲ್ ಎ. (1995) ಅಗ್ರೊಇಕೊಲಜಿ: ದಿ ಸಯನ್ಸ್ ಆಫ್ ಸಸ್ಟೇನಬಲ್ ಅಗ್ರಿಕಲ್ಚರ್. ವೆಸ್ಟ್‌ವ್ಯೂ ಪ್ರೆಸ್, ಬೌಲ್ಡರ್, ಸಿಒ.
- ↑ [೧]
- ↑ ಅಮೆರಿಕಾ ಸಂಯುಕ್ತ ಸಂಸ್ಥಾನದ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ ಸಭೆಯ ನಡೆವಳಿಗಳು, 2008ರ ಮಾರ್ಚ್ 25, ಸಂಪುಟ 105 ಸಂ. 12 4928-4932 [೨] Archived 2015-09-24 ವೇಬ್ಯಾಕ್ ಮೆಷಿನ್ ನಲ್ಲಿ.
- ↑ [೩]
- ↑ ಮುಸೊಕೊಟ್ವಾನೆ ದಕ್ಷಿಣ ಆಫ್ರಿಕಾ ಪರಿಸರ ಸಂಶೋಧನಾ ಕೇಂದ್ರದ ಸಿಇಪಿ ಅಂಕಿಅಂಶ ಪಟ್ಟಿ. http://www.sardc.net/imercsa/Programs/CEP/Pubs/CEPFS/CEPFS01.htm Archived 2013-02-13 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಪೀಕ್ ಸಾಯಿಲ್: ಸೆಲ್ಯುಲೋಸಿಕ್ ಇಥನಾಲ್, ಜೈವಿಕ ಇಂಧನಗಳು ಅಸಮರ್ಥನೀಯ ಹಾಗೂ ಅಮೆರಿಕಾ ದೇಶಕ್ಕೆ ಅಪಾಯಕಾರಿ ಎಂದು ಘೋಷಿಸಲು ಕಾರಣವೇನು? http://culturechange.org/cms/index.php?option=com_content&task=view&id=107&Itemid=1
- ↑ ಕಾಪರ್‌ವಿಕಿ ಮಣ್ಣು ಕೊರೆತ http://www.copperwiki.org/index.php?title=Soil_erosion
- ↑ ನೆಟ್ಟಿಂಗ್, ರಾಬರ್ಟ್ ಮೆಕ್‌ಸಿ. (1993) ಸಣ್ಣಹಿಡುವಳಿದಾರರು, ಹೌಸ್ಹೋಲ್ಡರ್ಸ್(ಗೃಹವಾಸಿಗಳು): ಕೃಷಿ ಕುಟುಂಬಗಳು ಮತ್ತು ಕೇಂದ್ರೀಕೃತ, ಪುಷ್ಟಿಕರ ಕೃಷಿಯ ಪರಿಸರ. ಸ್ಟಾನ್ಫರ್ಡ್ ಯೂನಿವರ್ಸಿಟಿ ಪ್ರೆಸ್, ಪಾಲೊ ಆಲ್ಟೊ
- ↑ ಗ್ಲೋವರ್ ಮತ್ತಿತರರು2007. ಸೈಂಟಿಫಿಕ್ ಅಮೇರಿಕನ್.
- ↑ ನೇಚರ್ 406, 718-722 ಜೆನೆಟಿಕ್ ಡೈವರ್ಸಿಟಿ ಅಂಡ್ ಡಿಸೀಸ್ ಕಂಟ್ರೋಲ್ ಇನ್ ರೈಸ್, ಎನ್ವಿರಾನ್. ಎಂಟೊಮೊಲ್. 12:625)
- ↑ ಸ್ಪೊನ್ಸೆಲ್, ಲೆಸ್ಲಿ ಇ. (1986) ಅಮೆಜಾನ್ ಎಕಾಲಜಿ ಅಂಡ್ ಅಡಾಪ್ಟೇಷನ್. ಅನ್ಯೂಯಲ್ ರೆವ್ಯೂ ಆಫ್ ಆಂಥ್ರೊಪಾಲಜಿ 15: 67-97.
- ↑ ಹೆಕ್ಟ್, ಸುಸಾನಾ ಮತ್ತು ಅಲೆಕ್ಸಾಂಡರ್ ಕಾಕ್ಬರ್ನ್ (1989) ದಿ ಫೇಟ್ ಆಫ್ ದಿ ಫಾರೆಸ್ಟ್: ಡೆವೆಲಪರ್ಸ್, ಡೆಸ್ಟ್ರಾಯರ್ಸ್ ಅಂಡ್ ಡಿಫೆಂಡರ್ಸ್ ಆಫ್ ದಿ ಅಮೆಜಾನ್. ನ್ಯೂಯಾರ್ಕ್: ವರ್ಸೊ.
- ↑ "ಪ್ಯಾಶ್ಚೂರ್ಸ್: ಸಸ್ಟೇನಬಲ್ ಮ್ಯಾನೆಜ್ಮೆಂಟ್". Archived from the original on 2010-05-05. Retrieved 2011-02-03.
- ↑ "PETA’s ಲೇಟೆಸ್ಟ್ ಟ್ಯಾಕ್ಟಿಕ್: $1 ಮಿಲಿಯನ್ ಫಾರ್ ಫೇಕ್ ಮೀಟ್", ನ್ಯೂಯಾರ್ಕ್ ಟೈಮ್ಸ್ , 21 ಎಪ್ರಿಲ್ 2003
- ↑ "ವರ್ಟಿಕಲ್ ಫಾರ್ಮಿಂಗ್" (PDF). Archived from the original (PDF) on 2010-07-28. Retrieved 2011-02-03.
- ↑ Pasakarnis G, Maliene V (2010). "Towards sustainable rural development in Central and Eastern Europe: applying land consolidation". Land Use Policy. 27 (2): 545–9. doi:10.1016/j.landusepol.2009.07.008.
ಮೂಲಗಳು
[ಬದಲಾಯಿಸಿ]- ಡೋರ್, ಜೆ. 1997. ಸಸ್ಟೈನೆಬಿಲಿಟಿ ಇಂಡಿಕೇಟರ್ಸ್ ಫಾರ್ ಅಗ್ರಿಕಲ್ಚರ್: ಇಂಟರೊಡಕ್ಟರಿ ಗೈಡ್ ಟು ರೀಜನಲ್/ನ್ಯಾಷನಲ್ ಎಂಡ್ ಆನ್-ಫಾರ್ಮ್ ಇಂಡಿಕೇಟರ್ಸ್ Archived 2007-06-13 ವೇಬ್ಯಾಕ್ ಮೆಷಿನ್ ನಲ್ಲಿ. , ರೂರಲ್ ಇಂಡಸ್ಟ್ರೀಸ್ ರಿಸರ್ಚ್ ಎಂಡ್ ಡೆವಲಪ್ಮೆಂಟ್ ಕಾರ್ಪೊರೇಷನ್ Archived 2007-07-01 ವೇಬ್ಯಾಕ್ ಮೆಷಿನ್ ನಲ್ಲಿ.,ಆಸ್ಟ್ರೇಲಿಯ
- ಗೋಲ್ಡ್, ಮೇರಿ. 1999. ಸಸ್ಟೇನಬಲ್ ಅಗ್ರಿಕಲ್ಚರ್: ಡೆಫಿನಿಷನ್ಸ್ ಅಂಡ್ ಟರ್ಮ್ಸ್. Archived 2005-09-14 ವೇಬ್ಯಾಕ್ ಮೆಷಿನ್ ನಲ್ಲಿ. ವಿಶೇಷ ಲಘು ಉಲ್ಲೇಖ ಸರಣಿ ಸಂಖ್ಯೆ SRB 99-02 ನವೀಕರಣಗಳು SRB 94-5 ಸೆಪ್ಟೆಂಬರ್ 1999. ರಾಷ್ಟ್ರೀಯ ಕೃಷಿ ಗ್ರಂಥಾಲಯ, ಕೃಷಿ ಸಂಶೋಧನಾ ಸೇವಾ ಕೇಂದ್ರ, ಯು.ಎಸ್. ಕೃಷಿ ಇಲಾಖೆ.
- ಹೇಯ್ಸ್, ಬಿ. 2008. ಟ್ರಯಲ್ ಪ್ರೊಪೊಸಲ್: ಸಾಯಿಲ್ ಅಮೆಲಿಯೊರೇಷನ್ ಇನ್ ದಿ ಸೌತ್ ಆಸ್ಟ್ರೇಲಿಯನ್ ರಿವರ್ಲೆಂಡ್.
- ಜಾನ್, ಜಿಸಿ, ಬಿ. ಖೀವ್, ಸಿ. ಪೋಲ್, ಎನ್. ಛೋರ್ನ್, ಎಸ್. ಫೇಂಗ್, ಮತ್ತು ವಿ. ಪ್ರೀಪ್. 2001. ಡೆವೆಲಪಿಂಗ್ ಸಸ್ಟೇನಬಲ್ ಪೆಸ್ಟ್ ಮ್ಯಾನೆಜ್ಮೆಂಟ್ ಫಾರ್ ರೈಸ್ ಇನ್ ಕ್ಯಾಂಬೊಡಿಯಾ, ಪಿಪಿ. 243-358, ಇನ್ ಎಸ್. ಸುತಿಪ್ರದಿತ್, ಸಿ, ಕುಂಥ, ಎಸ್. ಲೊರ್ಲೊವಕರ್ನ್ ಮತ್ತು ಜೆ. ರಕ್ನಂಗನ್ (ಸಂಪಾದಕರು) “ಸಸ್ಟೇನಬಲ್ ಅಗ್ರಿಕಲ್ಚರ್ : ಪಾಸಿಬಿಲಿಟಿ ಅಂಡ್ ಡೈರೆಕ್ಷನ್” ಥಾಯ್ಲೆಂಡ್ನ ಫಿಟ್ಸಾನುಲೊಕ್ನಲ್ಲಿ 1999ರ ಅಕ್ಟೋಬರ್ 18ರಿಂದ 20ರ ತನಕ ನಡೆದ 'ಪುಷ್ಟಿಕರ ಕೃಷಿ ಬಗೆಗಿನ ಎರಡನೆಯ ಏಷ್ಯಾ-ಪೆಸಿಫಿಕ್ ಸಮ್ಮೇಳನದ ನಡೆವಳಿಗಳ ವರದಿ. ಬ್ಯಾಂಕಾಕ್(ಥಾಯ್ಲೆಂಡ್): ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿ ನಿಯೋಗ, 386 ಪಿ.
- ಲಿಂಡ್ಸೆ ಫಲ್ವೆ (2004) ಸಸ್ಟೇಯ್ನಬಿಲಿಟಿ - ಎಲುಸಿವ್ ಆರ್ ಇಲೂಷನ್: ವೈಸ್ ಎನ್ವಿರಾನ್ಮೆಂಟಲ್ ಮ್ಯಾನೆಜ್ಮೆಂಟ್. ಇಂಸ್ಟಿಟ್ಯೂಟ್ ಫಾರ್ ಇಂಟರ್ನ್ಯಾಷನಲ್ ಡೆವೆಲಪ್ಮೆಂಟ್, ಆಡಿಲೇಯ್ಡ್ ಪಿಪಿ259.
- ಹೆಕ್ಟ್, ಸುಸಾನಾ ಮತ್ತು ಅಲೆಕ್ಸಾಂಡರ್ ಕಾಕ್ಬರ್ನ್ (1989) ದಿ ಫೇಟ್ ಆಫ್ ದಿ ಫಾರೆಸ್ಟ್ ಡೆವೆಲಪರ್ಸ್, ಡೆಸ್ಟ್ರೊಯರ್ಸ್ ಅಂಡ್ ಡಿಫೆಂಡರ್ಸ್ ಆಫ್ ದಿ ಅಮೆಜಾನ್. ನ್ಯೂಯಾರ್ಕ್: ವರ್ಸೊ.
- ನೆಟಿಂಗ್ ರಾಬರ್ಟ್ ಮೆಕ್‌ಸಿ. (1993) ಸ್ಮಾಲ್ಹೋಲ್ಡರ್ಸ್, ಹೌಸ್ಹೋಲ್ಡರ್ಸ್: ಫಾರ್ಮ್ ಫೆಮಿಲೀಸ್ ಅಂಡ್ ದಿ ಎಕಾಲಜಿ ಆಫ್ ಇಂಟೆನ್ಸಿವ್ ಸಸ್ಟೈನೇಬಲ್ ಅಗ್ರಿಕಲ್ಚರ್. ಸ್ಟ್ಯಾನ್ಫರ್ಡ್ ಉನಿವರ್ಸಿಟಿ ಪ್ರೆಸ್, ಪಾಲೊ ಆಲ್ಟೊ.
- ಪುಷ್ಟಿಕರ ಕೃಷಿಯ ಬಗ್ಗೆ ಎರಡು ವಿಶಿಷ್ಟ ದ್ವಿ-ಸಂಚಿಕೆ ಫಿಲೊಸೊಫಿಕಲ್ ಟ್ರಾನ್ಸಾಕ್ಷನ್ಸ್ ಬಿ . ಕೆಲವು ಲೇಖನಗಳು ಉಚಿತವಾಗಿ ಲಭ್ಯ.
ವಿಶ್ವವಿದ್ಯಾನಿಲಯ ಪಠ್ಯಕ್ರಮಗಳು
[ಬದಲಾಯಿಸಿ]- ಸೆಂಟ್ರಲ್ ಕೆರೊಲಿನಾ ಕಮ್ಯೂನಿಟಿ ಕಾಲೇಜ್, ಪಿಟ್ಸ್‌ಬರೊ, ನಾರ್ತ್ ಕೆರೊಲಿನಾ
- ಚಿಯಾಂಗ್ ಮಾಯ್ ಯುನಿವರ್ಸಿಟಿ/ ಸಸ್ಟೇನಬಲ್ ಅಗ್ರಿಕಲ್ಚರ್ ಅಂಡ್ ಇಂಟೆಗ್ರೇಟೆಡ್ ವಾಟರ್ಷೆಡ್ ಮ್ಯಾನೆಜ್ಮೆಂಟ್ MSc, ಚಿಯಾಂಗ್ ಮಾಯ್ ವಿಶ್ವವಿದ್ಯಾನಿಲಯ, ಥಾಯ್ಲೆಂಡ್
- ಕ್ಲೆಮ್ಸನ್ ವಿಶ್ವವಿದ್ಯಾನಿಲಯ, ಕ್ಲೆಮ್ಸನ್, ಸೌತ್ ಕ್ಯಾರೊಲಿನಾ
- ದಿ ಎವರ್ಗ್ರೀನ್ ಸ್ಟೇಟ್ ಕಾಲೇಜ್, ಒಲಿಂಪಿಯಾ, ವಾಷಿಂಗ್ಟನ್ ಸ್ಟೇಟ್
- ಇಂಪೀರಿಯಲ್ ಕಾಲೇಜ್, ಲಂಡನ್, ಯುನೈಟೆಡ್ ಕಿಂಗ್ಡಮ್
- ಅಯೊವಾ ಸ್ಟೇಟ್ ಯುನಿವರ್ಸಿಟಿ, ಎಮ್ಸ್, ಅಯೊವಾ
- ಮಕೆರೆರೆ ಯನಿವರ್ಸಿಟಿ, ಕಂಪಾಲಾ, ಯುಗಾಂಡಾ
- ಎಜುಕೇಷನಲ್ ಅಂಡ್ ಟ್ರೇಯ್ನಿಂಗ್ ಆಪೊರ್ಚೂನಿಟಿಸ್ ಇನ್ ಸಸ್ಟೇನಬಲ್ ಅಗ್ರಿಕಲ್ಚರ್ . 19ನೆಯ ಆವೃತ್ತಿ. 2009. ಶೈಕ್ಷಣಿಕ ಮತ್ತು ಸಾಂಘಿಕ ಪಠ್ಯಕ್ರಮಗಳ ವಿಶ್ವವ್ಯಾಪಿ ನಿರ್ದೇಶಿಕೆ. ಆಲ್ಟರ್ನೇಟಿವ್ ಫಾರ್ಮಿಂಗ್ ಸಿಸ್ಟಮ್ಸ್ ಇನ್ಫರ್ಮೇಷನ್ ಸೆಂಟರ್, ನ್ಯಾಷನಲ್ ಅಗ್ರಿಕಲ್ಚರಲ್ ಲೈಬ್ರೆರಿ. http://www.nal.usda.gov/afsic/pubs/edtr/EDTR2006.shtml Archived 2007-04-02 ವೇಬ್ಯಾಕ್ ಮೆಷಿನ್ ನಲ್ಲಿ.
- ನಾರ್ತ್ ಕೆರೊಲಿನಾ ಸ್ಟೇಟ್ ಯೂನಿವರ್ಸಿಟಿ, ರೇಲೀ, ನಾರ್ತ್ ಕೆರೊಲಿನಾ
- ಪೆನ್ಸಿಲ್ವಾನಿಯಾ ಸ್ಟೇಟ್ ಯೂನಿವರ್ಸಿಟಿ, ಯೂನಿವರ್ಸಿಟಿ ಪಾರ್ಕ್, ಪೆನ್ಸಿಲ್ವಾನಿಯಾ
- ಪರ್ಡ್ಯೂ ಯೂನಿವರ್ಸಿಟಿ, ವೆಸ್ಟ್ ಲಫಯೆಟ್, ಇಂಡಿಯಾನಾ
- ರುಟ್ಜರ್ಸ್ ಯೂನಿವರ್ಸಿಟಿ / ಸ್ಟೂಡೆಂಟ್ ಸಸ್ಟೇನಬಲ್ ಫಾರ್ಮ್ ಅಟ್ ರುಟ್ಜರ್ಸ್, ನ್ಯೂ ಬ್ರುನಸ್ವಿಕ್, ನ್ಯೂಜರ್ಸಿ
- ಸಾಂಟಾ ರೊಸಾ ಜೂನಿಯರ್ ಕಾಲೇಜ್, ಸಾಂಟಾ ರೊಸಾ, ಕ್ಯಾಲಿಫೊರ್ನಿಯಾ
- ಸ್ಟರ್ಲಿಂಗ್ ಕಾಲೇಜ್ (ವರ್ಮೊಂಟ್), ಕ್ರಾಫ್ಟ್ಸ್‌ಬ್ಯೂರಿ, ವರ್ಮಾಂಟ್
- Universidad Bolivariana de Venezuela, Caracas-Ciudad Bolivar-Coro-Maracaibo, Venezuela
- ಯೂನಿವರ್ಸಿಟಿ ಆಫ್ ಅಲಾಸ್ಕಾ, ಫೇರ್ಬ್ಯಾಂಕ್ಸ್, ಅಲಾಸ್ಕಾ
- ಯೂನಿವರ್ಸಿಟಿ ಆಫ್ ಬ್ರಿಟಿಷ್ ಕೊಲಂಬಿಯಾ, ಸೆಂಟರ್ ಫಾರ್ ಸಸ್ಟೇನಬಲ್ ಫುಡ್ ಸಿಸ್ಟಮ್ಸ್ ಅಟ್ ಯುಬಿಸಿ ಫಾರ್ಮ್ (ಅಂತರಜಾಲತಾಣ)
- ಯೂನಿವರ್ಸಿಟಿ ಆಫ್ ಕೆಲಿಫೊರ್ನಿಯಾ, ಡೇವಿಸ್, ಕೆಲಿಫೊರ್ನಿಯಾ
- ಯೂನಿವರ್ಸಿಟಿ ಆಫ್ ಫ್ಲೊರಿಡಾ, ಗೇಯ್ನ್ಸ್‌ವಿಲ್, ಫ್ಲೊರಿಡಾ
- ಯೂನಿವರ್ಸಿಟಿ ಆಫ್ ಹವಾಯ್, ಹೊನೊಲುಲು, ಹವಾಯ್
- ಯೂನಿವರ್ಸಿಟಿ ಆಫ್ ಇಲ್ಲಿನಾಯ್ಸ್, ಅರ್ಬನಾ-ಷಾಂಪೇನ್, ಇಲ್ಲಿನಾಯ್ಸ್
- ಯೂನಿವರ್ಸಿಟಿ ಆಫ್ ಕಾಸೆಲ್/ಫ್ಯಾಕಲ್ಟಿ ಆಫ್ ಆರ್ಗಾನಿಕ್ ಅಗ್ರಿಕಲ್ಚರಲ್ ಸೈನ್ಸಸ್, ವಿಟ್ಝೆನ್ಹಾಸೆನ್, ಜರ್ಮನಿ
- ಯೂನಿವರ್ಸಿಟಿ ಆಫ್ ಕೆಂಟಕಿ, ಲೆಕ್ಸಿಂಗ್ಟನ್, ಕೆಂಟಕಿ
- ಯೂನಿವರ್ಸಿಟಿ ಆಫ್ ಮೇಯ್ನ್, ಒರೊನೊ, ಮೇಯ್ನ್
- ಯೂನಿವರ್ಸಿಟಿ ಆಫ್ ಮ್ಯಾಸಚ್ಯೂಸೆಟ್ಸ್, ಆಮ್ಹರ್ಸ್ಟ್, ಮಸಾಚ್ಯೂಸೆಟ್ಸ್
- ಯೂನಿವರ್ಸಿಟಿ ಆಫ್ ಮಿಸ್ಸೋರಿ, ಕೊಲಂಬಿಯಾ, ಮಿಸ್ಸೋರಿ
- ಯೂನಿವರ್ಸಿಟಿ ಆಫ್ ವರ್ಮಾಂಟ್, ಬರ್ಲಿಂಗ್ಟನ್, ವರ್ಮಾಂಟ್
- ಯೂನಿವರ್ಸಿಟಿ ಆಫ್ ವಿಸ್ಕಾನ್ಸಿನ್-ರಿವರ್ ಫಾಲ್ಸ್, ರಿವರ್ ಫಾಲ್ಸ್, ವಿಸ್ಕಾನ್ಸಿನ್
- ವಾಗನಿಂಗೆನ್ ಯೂನಿವರ್ಸಿಟಿ, ನೆದರ್ಲೆಂಡ್ಸ್
- ವಾಷಿಂಗ್ಟನ್ ಸ್ಟೇಟ್ ಯೂನಿವರ್ಸಿಟಿ, ಪುಲ್ಮನ್, ವಾಷಿಂಗ್ಟನ್
- ವೆಸ್ಟ್ ವರ್ಜಿನಿಯಾ ಯೂನಿವರ್ಸಿಟಿ, ಮಾರ್ಗನ್ಟೌನ್, ವೆಸ್ಟ್ ವಿರ್ಜಿನಿಯಾ
- ಯೇಲ್ ಸಸ್ಟೇನಬಲ್ ಫುಡ್ ಪ್ರಾಜೆಕ್ಟ್, ಯೇಲ್ ಯೂನಿವರ್ಸಿಟಿ, ನ್ಯೂ ಹ್ಯಾವೆನ್, ಕನೆಕ್ಟಿಕಟ್
ಹೆಚ್ಚಿನ ಓದಿಗಾಗಿ
[ಬದಲಾಯಿಸಿ]- Madden, Patrick (March/April 1986). "Debt-Free Farming is Possible". Farm Economics. Pennsylvania: Cooperative Extension Service, U.S. Dept. of Agriculture [and] The Pennsylvania State University. ISSN 0555-9456.
{{cite journal}}
: Check date values in:|date=
(help) - ಪೆಂಡರ್ ಜೆ., ಪ್ಲೇಸ್ ಎಫ್., ಎಹೂಯಿ. ಎಸ್. (2006)ಸ್ಟ್ರಾಟೆಗೀಸ್ ಫಾರ್ ಸಸ್ಟೇನಬಲ್ ಲ್ಯಾಂಡ್ ಮ್ಯಾನೆಜ್ಮೆಂಟ್ ಇನ್ ದಿ ಈಸ್ಟ್ ಆಫ್ರಿಕನ್ ಹೈಲೆಂಡ್ಸ್
- ಪೊಲನ್ ಎಂ. (2007) ದಿ ಆಮ್ನಿವೊರ್ಸ್ ಡೈಲೆಮಾ: ಎ ನ್ಯಾಚುರಲ್ ಹಿಸ್ಟರಿ ಆಫ್ ಫೋರ್ ಮೀಲ್ಸ್ Archived 2008-09-07 ವೇಬ್ಯಾಕ್ ಮೆಷಿನ್ ನಲ್ಲಿ. ಲೇಖಕರು
- ರಾಬರ್ಟ್ಸ್ ಡಬ್ಲ್ಯೂ (2008) ದಿ ನೋ-ನಾನ್ಸೆನ್ಸ್ ಗೈಡ್ ಟು ವರ್ಲ್ಡ್ ಫುಡ್ ಲೇಖಕರು: ರಾಬರ್ಟ್ ಡಬ್ಲ್ಯೂ. (2008)
ಇವನ್ನೂ ಗಮನಿಸಿ
[ಬದಲಾಯಿಸಿ]- ವನ್ಯ ತೋಟಗಾರಿಕೆ ಸಹಯೋಗ
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಆಫ್ರಿಕಾ ಪ್ರಾಜೆಕ್ಟ್ 2020 Archived 2011-07-07 ವೇಬ್ಯಾಕ್ ಮೆಷಿನ್ ನಲ್ಲಿ. ಪುಷ್ಟಿಕರ ಕೃಷಿಯ ಮೂಲಕ ರೈತರಿಗೆ ಅಧಿಕಾರ ನೀಡಿ ಆಫ್ರಿಕಾದಲ್ಲಿ ಹಸಿವಿನ ಸ್ಥಿತಿಯನ್ನು ನೀಗಿಸುವ ಯತ್ನ.
- ಯುಸಿ ಡೇವಿಸ್ನಲ್ಲಿ ಕೃಷಿ ಪುಷ್ಟಿಕರಣ ಸಂಸ್ಥೆ
- ಬಯೊಡೈನಮಿಕ್ ಅಗ್ರಿಕಲ್ಚರ್ ಆಸ್ಟ್ರೇಲಿಯಾ ಪುಷ್ಟಿಕರ ಕೃಷಿಯ ಜೈವಿಕ-ಕ್ರಿಯಾಸಂಬದ್ಧ ವ್ಯವಸ್ಥೆಯ ತಿಳಿವಳಿಕೆ ಮತ್ತು ಪದ್ಧತಿಯ ಉತ್ತೇಜನ.
- ಸೆಂಟರ್ ಫಾರ್ ಎನ್ವೈರಾನ್ಮೆಂಟಲ್ ಫಾರ್ಮಿಂಗ್ ಸಿಸ್ಟಮ್ಸ್
- ಸೆಂಟರ್ ಫಾರ್ ಸಸ್ಟೈನಿಂಗ್ ಅಗ್ರಿಕಲ್ಚರ್ % ನ್ಯಾಚುರಲ್ ರಿಸೋರ್ಸಸ್ (ಡಬ್ಲ್ಯೂಎಸ್ಯು)
- ಫುಡ್ ಅಲಾಯನ್ಸ್ ಉತ್ತರ ಅಮೆರಿಕಾದಲ್ಲಿ ಪುಷ್ಟಿಕರ ಕೃಷಿ ಮತ್ತು ಆಹಾರ ನಿರ್ವಹಣೆಯ ಬಗ್ಗೆ ಅತಿ ವಿಶ್ವಸನೀಯ ಮತ್ತು ವ್ಯಾಪಕ ಪ್ರಮಾಣಪತ್ರ ಪಠ್ಯಕ್ರಮ.
- ಜರ್ನಲ್ ಆಫ್ ಎನ್ವಿರಾನ್ಮೆಂಟಲ್ ಮ್ಯಾನೇಜ್ಮೆಂಟ್ Archived 2011-04-17 ವೇಬ್ಯಾಕ್ ಮೆಷಿನ್ ನಲ್ಲಿ. ವಿಶೇಷ ಸಂಚಿಕೆಯು ಹೊಲ ನಿರ್ವಹಣೆ ಮತ್ತು ಪುಷ್ಟಿಕರ ಕೃಷಿ ವಿಷಯಗಳ ಮೇಲೆ ಕೇಂದ್ರೀಕರಿಸಿದೆ.
- ಗ್ರೀನ್ಪೀಸ್ ಪುಷ್ಟಿಕರ ಕೃಷಿ ಅಭಿಯಾನ
- ದಿ ಲ್ಯಾಂಡ್ ಇನ್ಸ್ಟಿಟ್ಯುಟ್ ಪುಷ್ಟಿಕರ ಪುನರಾವರ್ತಿತ ಬೆಳೆ ವ್ಯವಸ್ಥೆಗಳ ಕುರಿತು ಸಂಶೋಧನೆ
- ರಾಷ್ಟ್ರೀಯ ಪುಷ್ಟಿಕರ ಕೃಷಿ ಮಾಹಿತಿ ಸೇವೆ.
- ಪುಷ್ಟಿಕರ ಕೃಷಿಗಾಗಿ ರಾಷ್ಟ್ರೀಯ ಅಭಿಯಾನ
- ವಾಟ್ ಇಸ್ ಸಸ್ಟೇನಬಲ್ ಅಗ್ರಿಕಲ್ಚರ್? (SAREP: ಕ್ಯಾಲಿಫೊರ್ನಿಯಾ ವಿಶ್ವವಿದ್ಯಾನಿಲಯದ 'ಪುಷ್ಟಿಕರ ಕೃಷಿ ಸಂಶೋಧನೆ ಮತ್ತು ಶಿಕ್ಷಣಾ ವ್ಯವಸ್ಥೆ'ಯಿಂದ)
- ಸಸ್ಟೈನೇಬಲ್ ಅಗ್ರಿಕಲ್ಚರ್ ರಿಸರ್ಚ್ ಎಂಡ್ ಎಜುಕೇಷನ್ (SARE)
- SAREP: ಕ್ಯಾಲಿಫೊರ್ನಿಯಾ ವಿಶ್ವವಿದ್ಯಾನಿಲಯದ 'ಪುಷ್ಟಿಕರ ಕೃಷಿ ಸಂಶೋಧನೆ ಮತ್ತು ಶಿಕ್ಷಣಾ ವ್ಯವಸ್ಥೆ
- ಪುಷ್ಟಿಕರ ಉತ್ಪನ್ನ ಅಭಿಯಾನ Archived 2019-09-27 ವೇಬ್ಯಾಕ್ ಮೆಷಿನ್ ನಲ್ಲಿ.
- ಮುಖ್ಯವಾಹಿನಿಯ ಕೃಷಿ ವಸ್ತುಗಳ ಉತ್ಪಾದನೆಗಾಗಿ ಪುಷ್ಟಿಕರ ಕೃಷಿ ಉತ್ತೇಜಿಸುವ ಕೈಗಾರಿಕಾ-ಆಧಾರಿತ ಉಪಕ್ರಮ.
- ರೇನ್ಫಾರೆಸ್ಟ್ ಅಲಾಯನ್ಸ್ ಪುಷ್ಟಿಕರ ಕೃಷಿ ಕಾರ್ಯಕ್ರಮ.
- ದಿ ವರ್ಟಿಕಲ್ ಫಾರ್ಮ್ ಪ್ರಾಜೆಕ್ಟ್ ಪರಿಸರೀಯ ಪುನಃಸ್ಥಾಪನೆಯ ಕಾರ್ಯವಿಧಾನ,ಸಾಂಕ್ರಾಮಿಕ ರೋಗಗಳಿಂದ ರಕ್ಷಣೆ ಹಾಗೂ ಪುಷ್ಟಿಕರ ಶಕ್ತಿಯ ಮೂಲ ಎಂದು ಮಾನವ ಆಹಾರ ಉತ್ಪಾದನೆಯ ಭವಿಷ್ಯವನ್ನು ಮುಂಗಾಣುವುದು.
- SANREM CRSP Archived 2010-09-07 ವೇಬ್ಯಾಕ್ ಮೆಷಿನ್ ನಲ್ಲಿ. ವಿರ್ಜಿನಿಯಾ ಟೆಕ್ನಲ್ಲಿ ಪುಷ್ಟಿಕರ ಕೃಷಿ ಮತ್ತು ನೈಸರ್ಗಿಕ ಸಂಪನ್ಮೂಲ ವ್ಯವಸ್ಥಾಪನಾ ಸಹಯೋಗ ಸಂಶೋಧನಾ ಬೆಂಬಲ ಕಾರ್ಯಕ್ರಮ.
- ಸೆಲ್ಫ್ ಹೆಲ್ಪ್ ಡೆವೆಲಪ್ಮೆಂಟ್ ಇಂಟರ್ನ್ಯಾಷನಲ್ Archived 2018-09-03 ವೇಬ್ಯಾಕ್ ಮೆಷಿನ್ ನಲ್ಲಿ. SHDI ಒಂದು ಐರಿಷ್ ನಿಯೋಗ. ಆಫ್ರಿಕಾದಲ್ಲಿ ದೀರ್ಘಾವಧಿಯ ಪುಷ್ಟಿಕರ ಕೃಷಿ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುವಲ್ಲಿ ಭಾಗಿಯಾಗಿದೆ.
- ಸ್ಪೇಡ್ & ಸ್ಪೂನ್: ಪಾಶ್ಚಾತ್ಯರ ಭೋಜನಾ ರೀತಿಯನ್ನು ಸ್ಥಳೀಯಗೊಳಿಸುವುದು
- SAFECROP ಕಡಿಮೆ ಪರಿಸರ ಮತ್ತು ಗ್ರಾಹಕ ಆರೋಗ್ಯ ಪರಿಣಾಮದೊಂದಿಗೆ ಬೆಳೆ ರಕ್ಷಣೆಯ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ
- ಅಂತರರಾಷ್ಟ್ರೀಯ ಪರಿಸರ ಮತ್ತು ಅಭಿವೃದ್ಧ ಸಂಸ್ಥೆ (IIED)ಯ 'ನೈಸರ್ಗಿಕ ಸಂಪನ್ಮೂಲ ಸಮೂಹ'ದ ಭಾಗವಾಗಿರುವ 'ಪುಷ್ಟಿಕರ ಕೃಷಿ, ಜೀವವೈವಿಧ್ಯ ಮತ್ತು ಜೀವನೋಪಾಯಗಳ ಕಾರ್ಯಕ್ರಮ Archived 2008-05-09 ವೇಬ್ಯಾಕ್ ಮೆಷಿನ್ ನಲ್ಲಿ.
- ಕಡಲಾಚೆಯ ಅಭಿವೃದ್ಧಿ ಸಂಸ್ಥೆ ನಡೆಸಿದ, ರಿಸರ್ಚ್ ಆನ್ ಅಗ್ರಿಕಲ್ಚರ್ Archived 2007-10-28 ವೇಬ್ಯಾಕ್ ಮೆಷಿನ್ ನಲ್ಲಿ. ಹಾಗೂ ಅಂತಾರಾಷ್ಟ್ರೀಯ ಅಭಿವೃದ್ಧಿಯಲ್ಲಿ ಅದರ ಪಾತ್ರ
- ಎ ನ್ಯಾಚುರಲ್ ಸ್ಟೆಪ್ ಕೇಸ್ ಸ್ಟಡಿ: ಮುಂದಿನ ಕೊಯ್ಲಿಗಾಗಿ ಯೋಜನೆ: ಆಹಾರ ಉದ್ದಿಮೆಯಲ್ಲಿ ಪುಷ್ಟಿಕರ ಲಕ್ಷಣ - ಸಾವಯವವಾಗಿ ಬೆಳೆಸಲಾದ ಉದ್ದಿಮೆ Archived 2011-07-27 ವೇಬ್ಯಾಕ್ ಮೆಷಿನ್ ನಲ್ಲಿ.
- ವೈಸರ್ಅರ್ಥ್ ಅಂತರಜಾಲಪುಟದಲ್ಲಿ ಪುಷ್ಟಿಕರ ಕೃಷಿ ಜಾಲಪುಟ Archived 2010-09-20 ವೇಬ್ಯಾಕ್ ಮೆಷಿನ್ ನಲ್ಲಿ.
- ವೈಸರ್ಅರ್ಥ್ನಲ್ಲಿ ಪುಷ್ಟಿಕರ ಕೃಷಿ ಸಂಘಗಳ ಪಟ್ಟಿ Archived 2008-08-30 ವೇಬ್ಯಾಕ್ ಮೆಷಿನ್ ನಲ್ಲಿ.
- ಪುಷ್ಟಿಕರ ಶಕ್ತಿ ಕೃಷಿ ಕೇಂದ್ರ Archived 2018-03-14 ವೇಬ್ಯಾಕ್ ಮೆಷಿನ್ ನಲ್ಲಿ.
- Pages using the JsonConfig extension
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Articles lacking in-text citations from July 2008
- All articles lacking in-text citations
- Articles with unsourced statements from December 2009
- Articles with unsourced statements from February 2007
- CS1 errors: dates
- ಅಸಮಂಜಸ ಉಲ್ಲೇಖ ಕ್ರಮವ್ಯವಸ್ಥೆಗಳನ್ನು ಹೊಂದಿರುವ ಲೇಖನಗಳು
- ಪುಷ್ಟಿಕರ ಕೃಷಿ
- ಕೃಷಿ ಪರಿಸರ ವಿಜ್ಞಾನ
- ಸಾವಯವ ಬೇಸಾಯ
- ಸಾವಯವ ತೋಟಗಾರಿಕೆ
- ಸಮರ್ಥನೀಯ ತಂತ್ರಜ್ಞಾನಗಳು
- ಪರಾಗಸ್ಪರ್ಶ ನಿರ್ವಹಣೆ
- ಪುಷ್ಟಿಗೊಳಿಸುವ ಆಹಾರ ವ್ಯವಸ್ಥೆ