ಪುದುಚೇರಿ ವಿಧಾನಸಭೆ ಚುನಾವಣೆ ೨೦೧೬
ಗೋಚರ
ಚುನಾವಣೆ
[ಬದಲಾಯಿಸಿ]- ಭಾರತದ ಕೇಂದ್ರಾಡಳಿತ ಪ್ರದೇಶ ಪುದುಚೇರಿಯ ವಿಧಾನಸಭೆಗೆ 30 ಕ್ಷೇತ್ರಗಳಿಗೆ ಸದಸ್ಯರನ್ನು ಚುನಾಯಿಸುವ ಚುನಾವಣೆ 16 ಮೇ 2016 ರಂದು ನಡೆಯಲಿದೆ. [೧]
- ಯಾಣಂ ಕ್ಷೇತ್ರ ೧; ಮತ್ತು ಮಾಹೆ ಕ್ಷೇತ್ರ ೧;. ಕಾರೈಕಾಲ್ ಜಿಲ್ಲೆಯು 5 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ, ಅವೆಂದರೆ ನೆಡುಂಗಾಡು, ತಿರುನಲ್ಲರ್, ಕರೈಕಲ್ ಉತ್ತರ, ಕರೈಕಲ್ ದಕ್ಷಿಣ ಮತ್ತು ನೆರವ್ಯ ಟಿಆರ್ ಪಟ್ಟಿನಮ್; ಪುದುಚೇರಿ ಜಿಲ್ಲೆಯ ಪ್ರದೇಶವನ್ನು 23 ವಿಧಾನಸಭಾ ಕ್ಷೇತ್ರಗಳಾಗಿ ವಿಂಗಡಿಸಲಾಗಿದೆ.
ಹಿನ್ನೆಲೆ
[ಬದಲಾಯಿಸಿ]- ಆಡಳಿತ ಪಕ್ಷವಾದ AINRS ಪ್ರಸ್ತುತ ಬಿಜೆಪಿ ಮೈತ್ರಿಕೂಟ ಎನ್ಡಿಎ (NDA) ಜೊತೆಗಿದೆ. ಆವು ಎರಡೂ ಪಕ್ಷಗಳು ಒಟ್ಟಿಗೆ ಸ್ಪರ್ಧಿಸುತ್ತವೆ. ಡಿಎಂಕೆ ಮತ್ತು ಕಾಂಗ್ರೆಸ್ ಸಹ ಮೈತ್ರಿಕೂಟ ಹೊಂದಿವೆ. ಪುದುಚೇರಿಯಲ್ಲಿ ವಿಧಾನಸಭೆ ಅಧಿಕಾರ ಅವಧಿ 2 ಜೂನ್ 2016 ಕ್ಕೆ ಕೊನೆಗೊಳ್ಳುತ್ತದೆ.
- ಪುದುಚೇರಿಯಲ್ಲಿ ಮೂರು ವಿಧಾನಸಭೆ ಕ್ಷೇತ್ರಗಳ ಮತಗಟ್ಟೆಗಳಲ್ಲಿ (ಒಟ್ಟು 30 ವಿಭಾಗಗಳ ಪೈಕಿ) ಮತದಾರರ-ಪರಿಶೀಲಿಸಿದ ಕಾಗದದ ಆಡಿಟ್ ಟ್ರಯಲ್ (ವಿವಿಪಿಎಟಿ ) ಯಂತ್ರಗಳನ್ನು ಸಜ್ಜುಗೊಂಡಿರುವುದು. ವಿವಿಪಿಎಟಿ ವ್ಯವಸ್ಥೆಯಲ್ಲಿ 68 ಕೇಂದ್ರಗಳಲ್ಲಿ ಮತದಾನ ಆರಂಭಿಸಲಾಗುವುದು. 35 ವಿವಿಪಿಎಟಿ(VVPAT) ಯಂತ್ರಗಳನ್ನು ಪುದುಚೇರಿಯಲ್ಲಿ ಬಳಸಲಾಗುತ್ತದೆ. ವಿಧಾನಸಭಾ ಕ್ಷೇತ್ರಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳ ಜೊತೆ ಪುದುಚೇರಿ ಹೊಂದಿರುವ EVMs ಸೌಲಭ್ಯದ ಉಪಯೋಗಮಾಡಲಾಗುವುದು. [೨]
- ವೇಳಾಪಟ್ಟಿ
- ಅಧಿಸೂಚನೆ ದಿನಾಂಕ ಏಪ್ರಿಲ್ 22, 2016
- ನಾಮನಿರ್ದೇಶನಗಳುಸಲ್ಲಿಸಲು ಕೊನೆಯ ದಿನಾಂಕ ಏಪ್ರಿ 29, 2016
- ನಾಮನಿರ್ದೇಶನಗಳನ್ನು ಪರಿಶೀಲನೆಗೆ ದಿನಾಂಕ ಏಪ್ರಿಲ್ 30, 2016
- ಅಭ್ಯರ್ಥಿಗಳು ವಾಪಸಾತಿಗೆ ಕೊನೆಯ ದಿನಾಂಕ ಮೇ 2, 2016
- ಚುನಾವಣೆ 16 ಮೇ 2016 ರಂದು ನಡೆಯಲಿದೆ. [೧]
- ಮತ ಎಣಿಕೆ ಮೇ 19 ರಂದು ನಡೆಯುವುದು.
೨೦೧೧ ರ ಸರ್ಕಾರ
[ಬದಲಾಯಿಸಿ]- ಮುಖ್ಯಮಂತ್ರಿ :ಎನ್.ರಂಗಸ್ವಾಮಿ.
- ವಿರೋಧಪಕ್ಷದ ನಾಯಕ;ವಿ.ವಯಿತ್ತಲಿಂಗಮ್ ಕಾಂಗ್ರೆಸ್.
ನಿರ್ದೇಶ | ವಿವರ |
---|---|
ಸಂಸದೀಯ ಚುನಾವಣಾ ಕ್ಷೇತ್ರಗಳು | 1 |
ವಿಧಾನಸಭೆ ಕ್ಷೇತ್ರಗಳು | 30 |
ಆಡಳಿತ ಪಕ್ಷ | ಆಲ್ ಇಂಡಿಯಾ ಎನ್.ಆರ್ ಕಾಂಗ್ರೆಸ್ |
ವಿರೋಧ ಪಕ್ಷ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) |
ಮುಖ್ಯಮಂತ್ರಿ | ಎನ್ ರಂಗಸ್ವಾಮಿ- 6 ಮೇ 2011ರಿಂದ) |
ಗವರ್ನರ್ | ಎ ಕೆ ಸಿಂಗ್ |
ಮುಖ್ಯ ಚುನಾವಣಾ ಅಧಿಕಾರಿ | ಡಾ ವಿ ಚಂದವೇಲು, I.A.S. |
ಸಿಇಒ ವಿಳಾಸ | ಮುಖ್ಯ ಚುನಾವಣಾ ಆಯುಕ್ತ ವಿಲ್ಲಿಯಾನೂರ್
ರಸ್ತೆ,ರೆಡ್ಡಿಯರಪಾಳ್ಯಮ್, ಪಾಂಡಿಚೇರಿ 605010 |
ಪಕ್ಷಗಳು ಮತ್ತು ಮೈತ್ರಿಗಳು
[ಬದಲಾಯಿಸಿ]- ಐಎಡಿಎಂಕೆ ಸ್ವತಂತ್ರವಾಗಿ ಪುದುಚೇರಿಯಲ್ಲಿ ಸ್ಪರ್ಧಿಸಲು ನಿರ್ಧರಿಸಿತು, ಮತ್ತು ಸೋಮವಾರ ದಿನಾಂಕ ಏಪ್ರಿಲ್ 04,2016 ರಂದು ಎಲ್ಲಾ 30 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿತು.ಉಳಿದ ಪಕ್ಷಗಳು ಅಂತಿಮ ನಿರ್ಧಾರಕ್ಕೆ ಬಂದಿಲ್ಲ.[೩]
ಫಲಿತಾಂಶ
[ಬದಲಾಯಿಸಿ]ಕ್ರ.ಸಂ. | ಪಕ್ಷ | ಸ್ಪರ್ಧೆ | ಗೆಲವು | ಮತ | ಮತ ಶೇ. | ಮತ ಬದಲಾವಣೆ/% |
---|---|---|---|---|---|---|
1 | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ - INC | 21 | 15 | 244886 | 30.6 | 5.54 |
2 | ದ್ರಾವಿಡ ಮುನ್ನೇತ್ರ ಕಳಗಂ -DMK | 9 | 2 | 70836 | 8.9 | 1.78 |
3 | ಅಖಿಲ ಭಾರತ ಎನ್ಆರ್ ಕಾಂಗ್ರೆಸ್- AINRC | 30 | 8 | 225082 | 28.1 | 3.65 |
4 | ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ AIADMK | 30 | 4 | 134597 | 16.8 | 3.05 |
5 | ಭಾರತೀಯ ಜನತಾ ಪಾರ್ಟಿ- BJP | 30 | 0 | 19303 | 2.4 | 1.08 |
6 | ಪಕ್ಷೇತರ/ರಾಜಕಾರಣಿಗಳು | 1 | 62884 | 7.9 | ||
7 | None of the above-NOTA | 13240 | 1.7 | |||
ಒಟ್ಟು | 30 |
ಸಿ ವೋಟರ್ ಮುನ್ನೋಟ
[ಬದಲಾಯಿಸಿ]- ೧೬-೫-೨೦೧೬: [೬]
2011 | ಪಾರ್ಟಿ / ಅಲೈಯನ್ಸ್ | Times Now-CVoter | India Today-Axis |
---|---|---|---|
7/26.53+3/26.57 | ಕಾಂಗ್ರೆಸ್ + ಡಿಎಂಕೆ | 14 | 15-21 |
15/31.15 | AINRC | 09 | 08-12 |
5/15.75 | ಎಐಎಡಿಎಂಕೆ | 05 | 01-04 |
00 | ಬಿಜೆಪಿ | 00 | 00 |
3/26.57 | ಇತರೆ | 02 | 00-02 |
ಒಟ್ಟು ಸ್ಥಾನಗಳು | 30 | 30 |
ಸರ್ಕಾರ ರಚನೆ
[ಬದಲಾಯಿಸಿ]- ಕಾಂಗ್ರೆಸ್‌ನ ಹಿರಿಯ ಮುಖಂಡ ಹಾಗೂ ಕೇಂದ್ರ ಮಾಜಿ ಸಚಿವ ವಿ. ನಾರಾಯಣಸ್ವಾಮಿ ಅವರು ಪುದುಚೇರಿಯ ನೂತನ ಮುಖ್ಯಮಂತ್ರಿಯಾಗಿ 06/06/2016 ಸೋಮವಾರ ಅಧಿಕಾರ ಸ್ವೀಕರಿಸಿದರು. ‘ಗಾಂಧಿ ಥಿಡಾಲ್’ನಲ್ಲಿ ಆಯೋಜಸಿದ್ದ ಕಾರ್ಯಕ್ರಮದಲ್ಲಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರು ಮುಖ್ಯಮಂತ್ರಿ ನಾರಾಯಣಸ್ವಾಮಿ ಹಾಗೂ ಇತರ ಐವರು ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.
- ಮಲ್ಲಾಡಿ ಕೃಷ್ಣ ರಾವ್, ಎಂಒಎಚ್‌ಎಫ್ ಶಹ ಜಹಾನ್, ಎಂ. ಕಂಡಸ್ವಾಮಿ ಮತ್ತು ಆರ್. ಕಮಲಾಕರನ್ ಪ್ರಮಾಣ ವಚನ ಸ್ವೀಕರಿಸಿದ ನೂತನ ಸಚಿವರು.
- ನಾರಾಯಣ ಸ್ವಾಮಿ ಅವರು 15 ಸದಸ್ಯ ಬಲದೊಂದಿಗೆ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದರು. ಇಬ್ಬರು ಡಿಎಂಕೆ ಸದಸ್ಯರ ಬೆಂಬಲದೊಂದಿಗೆ ಒಟ್ಟು 17 ಸದಸ್ಯರನ್ನೊಳಗೊಂಡ ನೂತನ ಸರ್ಕಾರ ರಚಿಸಿದ್ದಾರೆ.[೭]
ಆದರೆ ಅವರು ವಿಧಾನ ಸಭೆ ಸದಸ್ಯರಲ್ಲ. ಇನ್ನು ಆರು ತಿಂಗಳ ವಳಗೆ ವಿಧಾನ ಸಭೆಗೆ ಆಯ್ಕೆಯಾಗಬೇಕು.
ಉಪಚುನಾವಣೆ ೨೦೧೬
[ಬದಲಾಯಿಸಿ]- 22, 2016,:
- ಪುದುಚೇರಿ ಮುಖ್ಯಮಂತ್ರಿ ಕಾಂಗ್ರೆಸ್ ಅಭ್ಯರ್ಥಿ ವಿ.ನಾರಾಯಣಸ್ವಾಮಿ 18.709 ಮತಗಳನ್ನು ಪಡೆದು. ನಲ್ಲಿತೊಪು ಉಪಚುನಾವಣೆಯನ್ನು 11.144 ಮತಗಳಿಂದ, ಎಐಎಡಿಎಂಕೆ ಅಭ್ಯರ್ಥಿ ಓಂಶಕ್ತಿ ಸೇಕರ್ ವಿರುದ್ಧ ಗೆದ್ದರು. ಸೇಕರ್ 7.565 ಮತಗಳನ್ನು ಪಡೆದರು. [೮]
ನೋಡಿ
[ಬದಲಾಯಿಸಿ]- ಪುದುಚೇರಿ
- ಭಾರತದ ಚುನಾವಣೆಗಳು 2016
- ಪುದುಚೇರಿ ವಿಧಾನಸಭೆ ಚುನಾವಣೆ ೨೦೧೧
- ಭಾರತದಲ್ಲಿ ವಿಧಾನಸಭೆ ಚುನಾವಣೆಗಳು
- ತಮಿಳುನಾಡು-ಪಶ್ಚಿಮ ಬಂಗಾಳ-ಕೇರಳ-ಪುದುಚೇರಿ-ಅಸ್ಸಾಂ
- State Assembly elections in India
ಉಲ್ಲೇಖ
[ಬದಲಾಯಿಸಿ]- ↑ http://www.thehindu.com/news/national/election-dates-for-five-states-announced/article8313813.ece
- ↑ "ಆರ್ಕೈವ್ ನಕಲು". Archived from the original on 2015-11-14. Retrieved 2016-04-05.
- ↑ http://www.elections.in/pondicherry/#sthash.ehC77YfN.dpuf[ಶಾಶ್ವತವಾಗಿ ಮಡಿದ ಕೊಂಡಿ]
- ↑ "ಆರ್ಕೈವ್ ನಕಲು". Archived from the original on 2014-12-18. Retrieved 2016-05-23.
- ↑ http://timesofindia.indiatimes.com/elections-2016/puducherry-elections-2016/election2016comparison/state-puducherry.cms
- ↑ assembly-elections/may16-exitpoll[[೧]]
- ↑ 06/06/2016ww.prajavani.net/article/ನಾರಾಯಣಸ್ವಾಮಿ-ಪುದುಚೇರಿ-ನೂತನ-ಸಿಎಂ
- ↑ ಕಾಂಗ್ರೆಸ್ ಅಭ್ಯರ್ಥಿ ಗೆಲುವು.