ಪುದುಚೇರಿ ವಿಧಾನಸಭೆ ಚುನಾವಣೆ ೨೦೧೬

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Lagekarte Unionsterritorium Puducherry

ಚುನಾವಣೆ[ಬದಲಾಯಿಸಿ]

ಪಾಂಡಿಚೇರಿ-ವಿಧಾನಸಭಾ ಕ್ಷೇತ್ರಗಳು: ಯಾಣಂ ಕ್ಷೇತ್ರ 1, AC-30; ಮತ್ತು ಮಾಹೆ ಕ್ಷೇತ್ರ 1,AC-29; ಕಾರೈಕಾಲ್ AC 24-28;ಈ ಜಿಲ್ಲೆಯು 5 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ, ಪುದುಚೇರಿ AC 1-23 ;ಜಿಲ್ಲೆಯ ಪ್ರದೇಶವನ್ನು 23 ವಿಧಾನಸಭಾ ಕ್ಷೇತ್ರಗಳಾಗಿ ವಿಂಗಡಿಸಲಾಗಿದೆ.1 ರಿಂದ 30 ವಿಧಾನಸಭಾ ಕ್ಷೇತ್ರಗಳ ಸಂಖ್ಯೆಯನ್ನು ಸೂಚಿಸುತ್ತದೆ.
  • ಭಾರತದ ಕೇಂದ್ರಾಡಳಿತ ಪ್ರದೇಶ ಪುದುಚೇರಿಯ ವಿಧಾನಸಭೆಗೆ 30 ಕ್ಷೇತ್ರಗಳಿಗೆ ಸದಸ್ಯರನ್ನು ಚುನಾಯಿಸುವ ಚುನಾವಣೆ 16 ಮೇ 2016 ರಂದು ನಡೆಯಲಿದೆ. [೧]
  • ಯಾಣಂ ಕ್ಷೇತ್ರ ೧; ಮತ್ತು ಮಾಹೆ ಕ್ಷೇತ್ರ ೧;. ಕಾರೈಕಾಲ್ ಜಿಲ್ಲೆಯು 5 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ, ಅವೆಂದರೆ ನೆಡುಂಗಾಡು, ತಿರುನಲ್ಲರ್, ಕರೈಕಲ್ ಉತ್ತರ, ಕರೈಕಲ್ ದಕ್ಷಿಣ ಮತ್ತು ನೆರವ್ಯ ಟಿಆರ್ ಪಟ್ಟಿನಮ್; ಪುದುಚೇರಿ ಜಿಲ್ಲೆಯ ಪ್ರದೇಶವನ್ನು 23 ವಿಧಾನಸಭಾ ಕ್ಷೇತ್ರಗಳಾಗಿ ವಿಂಗಡಿಸಲಾಗಿದೆ.

ಹಿನ್ನೆಲೆ[ಬದಲಾಯಿಸಿ]

  • ಆಡಳಿತ ಪಕ್ಷವಾದ AINRS ಪ್ರಸ್ತುತ ಬಿಜೆಪಿ ಮೈತ್ರಿಕೂಟ ಎನ್ಡಿಎ (NDA) ಜೊತೆಗಿದೆ. ಆವು ಎರಡೂ ಪಕ್ಷಗಳು ಒಟ್ಟಿಗೆ ಸ್ಪರ್ಧಿಸುತ್ತವೆ. ಡಿಎಂಕೆ ಮತ್ತು ಕಾಂಗ್ರೆಸ್ ಸಹ ಮೈತ್ರಿಕೂಟ ಹೊಂದಿವೆ. ಪುದುಚೇರಿಯಲ್ಲಿ ವಿಧಾನಸಭೆ ಅಧಿಕಾರ ಅವಧಿ 2 ಜೂನ್ 2016 ಕ್ಕೆ ಕೊನೆಗೊಳ್ಳುತ್ತದೆ.
  • ಪುದುಚೇರಿಯಲ್ಲಿ ಮೂರು ವಿಧಾನಸಭೆ ಕ್ಷೇತ್ರಗಳ ಮತಗಟ್ಟೆಗಳಲ್ಲಿ (ಒಟ್ಟು 30 ವಿಭಾಗಗಳ ಪೈಕಿ) ಮತದಾರರ-ಪರಿಶೀಲಿಸಿದ ಕಾಗದದ ಆಡಿಟ್ ಟ್ರಯಲ್ (ವಿವಿಪಿಎಟಿ ) ಯಂತ್ರಗಳನ್ನು ಸಜ್ಜುಗೊಂಡಿರುವುದು. ವಿವಿಪಿಎಟಿ ವ್ಯವಸ್ಥೆಯಲ್ಲಿ 68 ಕೇಂದ್ರಗಳಲ್ಲಿ ಮತದಾನ ಆರಂಭಿಸಲಾಗುವುದು. 35 ವಿವಿಪಿಎಟಿ(VVPAT) ಯಂತ್ರಗಳನ್ನು ಪುದುಚೇರಿಯಲ್ಲಿ ಬಳಸಲಾಗುತ್ತದೆ. ವಿಧಾನಸಭಾ ಕ್ಷೇತ್ರಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳ ಜೊತೆ ಪುದುಚೇರಿ ಹೊಂದಿರುವ EVMs ಸೌಲಭ್ಯದ ಉಪಯೋಗಮಾಡಲಾಗುವುದು. [೨]
ವೇಳಾಪಟ್ಟಿ
  • ಅಧಿಸೂಚನೆ ದಿನಾಂಕ ಏಪ್ರಿಲ್ 22, 2016
  • ನಾಮನಿರ್ದೇಶನಗಳುಸಲ್ಲಿಸಲು ಕೊನೆಯ ದಿನಾಂಕ ಏಪ್ರಿ 29, 2016
  • ನಾಮನಿರ್ದೇಶನಗಳನ್ನು ಪರಿಶೀಲನೆಗೆ ದಿನಾಂಕ ಏಪ್ರಿಲ್ 30, 2016
  • ಅಭ್ಯರ್ಥಿಗಳು ವಾಪಸಾತಿಗೆ ಕೊನೆಯ ದಿನಾಂಕ ಮೇ 2, 2016
  • ಚುನಾವಣೆ 16 ಮೇ 2016 ರಂದು ನಡೆಯಲಿದೆ. [೧]
  • ಮತ ಎಣಿಕೆ ಮೇ 19 ರಂದು ನಡೆಯುವುದು.

೨೦೧೧ ರ ಸರ್ಕಾರ[ಬದಲಾಯಿಸಿ]

  • ಮುಖ್ಯಮಂತ್ರಿ :ಎನ್.ರಂಗಸ್ವಾಮಿ.
    ಎನ್.ರಂಗಸ್ವಾಮಿ- 2007
  • ವಿರೋಧಪಕ್ಷದ ನಾಯಕ;ವಿ.ವಯಿತ್ತಲಿಂಗಮ್ ಕಾಂಗ್ರೆಸ್.
    ವಿ.ವಯಿತ್ತಲಿಂಗಮ್ ಕಾಂಗ್ರೆಸ್
ನಿರ್ದೇಶ ವಿವರ
ಸಂಸದೀಯ ಚುನಾವಣಾ ಕ್ಷೇತ್ರಗಳು 1
ವಿಧಾನಸಭೆ ಕ್ಷೇತ್ರಗಳು 30
ಆಡಳಿತ ಪಕ್ಷ ಆಲ್ ಇಂಡಿಯಾ ಎನ್.ಆರ್ ಕಾಂಗ್ರೆಸ್
ವಿರೋಧ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC)
ಮುಖ್ಯಮಂತ್ರಿ ಎನ್ ರಂಗಸ್ವಾಮಿ- 6 ಮೇ 2011ರಿಂದ)
ಗವರ್ನರ್ ಎ ಕೆ ಸಿಂಗ್
ಮುಖ್ಯ ಚುನಾವಣಾ ಅಧಿಕಾರಿ ಡಾ ವಿ ಚಂದವೇಲು, I.A.S.
ಸಿಇಒ ವಿಳಾಸ ಮುಖ್ಯ ಚುನಾವಣಾ ಆಯುಕ್ತ ವಿಲ್ಲಿಯಾನೂರ್

ರಸ್ತೆ,ರೆಡ್ಡಿಯರಪಾಳ್ಯಮ್, ಪಾಂಡಿಚೇರಿ 605010

ಪಕ್ಷಗಳು ಮತ್ತು ಮೈತ್ರಿಗಳು[ಬದಲಾಯಿಸಿ]

  • ಐಎಡಿಎಂಕೆ ಸ್ವತಂತ್ರವಾಗಿ ಪುದುಚೇರಿಯಲ್ಲಿ ಸ್ಪರ್ಧಿಸಲು ನಿರ್ಧರಿಸಿತು, ಮತ್ತು ಸೋಮವಾರ ದಿನಾಂಕ ಏಪ್ರಿಲ್ 04,2016 ರಂದು ಎಲ್ಲಾ 30 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿತು.ಉಳಿದ ಪಕ್ಷಗಳು ಅಂತಿಮ ನಿರ್ಧಾರಕ್ಕೆ ಬಂದಿಲ್ಲ.[೩]

ಫಲಿತಾಂಶ[ಬದಲಾಯಿಸಿ]

ಕ್ರ.ಸಂ. ಪಕ್ಷ ಸ್ಪರ್ಧೆ ಗೆಲವು ಮತ ಮತ ಶೇ. ಮತ ಬದಲಾವಣೆ/%
1 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ - INC 21 15 244886 30.6 Increase5.54
2 ದ್ರಾವಿಡ ಮುನ್ನೇತ್ರ ಕಳಗಂ -DMK 9 2 70836 8.9 Decrease1.78
3 ಅಖಿಲ ಭಾರತ ಎನ್ಆರ್ ಕಾಂಗ್ರೆಸ್- AINRC 30 8 225082 28.1 Decrease3.65
4 ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ AIADMK 30 4 134597 16.8 Increase3.05
5 ಭಾರತೀಯ ಜನತಾ ಪಾರ್ಟಿ- BJP 30 0 19303 2.4 Increase1.08
6 ಪಕ್ಷೇತರ/ರಾಜಕಾರಣಿಗಳು 1 62884 7.9
7 None of the above-NOTA 13240 1.7
ಒಟ್ಟು 30

[೪] [೫]

ಸಿ ವೋಟರ್ ಮುನ್ನೋಟ[ಬದಲಾಯಿಸಿ]

  • ೧೬-೫-೨೦೧೬: [೬]
2011 ಪಾರ್ಟಿ / ಅಲೈಯನ್ಸ್ Times Now-CVoter India Today-Axis
7/26.53+3/26.57 ಕಾಂಗ್ರೆಸ್ + ಡಿಎಂಕೆ 14 15-21
15/31.15 AINRC 09 08-12
5/15.75 ಎಐಎಡಿಎಂಕೆ 05 01-04
00 ಬಿಜೆಪಿ 00 00
3/26.57 ಇತರೆ 02 00-02
ಒಟ್ಟು ಸ್ಥಾನಗಳು 30 30

ಸರ್ಕಾರ ರಚನೆ[ಬದಲಾಯಿಸಿ]

  • ಕಾಂಗ್ರೆಸ್‌ನ ಹಿರಿಯ ಮುಖಂಡ ಹಾಗೂ ಕೇಂದ್ರ ಮಾಜಿ ಸಚಿವ ವಿ. ನಾರಾಯಣಸ್ವಾಮಿ ಅವರು ಪುದುಚೇರಿಯ ನೂತನ ಮುಖ್ಯಮಂತ್ರಿಯಾಗಿ 06/06/2016 ಸೋಮವಾರ ಅಧಿಕಾರ ಸ್ವೀಕರಿಸಿದರು. ‘ಗಾಂಧಿ ಥಿಡಾಲ್‌’ನಲ್ಲಿ ಆಯೋಜಸಿದ್ದ ಕಾರ್ಯಕ್ರಮದಲ್ಲಿ ಲೆಫ್ಟಿನೆಂಟ್‌ ಗವರ್ನರ್‌ ಕಿರಣ್‌ ಬೇಡಿ ಅವರು ಮುಖ್ಯಮಂತ್ರಿ ನಾರಾಯಣಸ್ವಾಮಿ ಹಾಗೂ ಇತರ ಐವರು ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.
  • ಮಲ್ಲಾಡಿ ಕೃಷ್ಣ ರಾವ್‌, ಎಂಒಎಚ್‌ಎಫ್‌ ಶಹ ಜಹಾನ್, ಎಂ. ಕಂಡಸ್ವಾಮಿ ಮತ್ತು ಆರ್‌. ಕಮಲಾಕರನ್‌ ಪ್ರಮಾಣ ವಚನ ಸ್ವೀಕರಿಸಿದ ನೂತನ ಸಚಿವರು.
  • ನಾರಾಯಣ ಸ್ವಾಮಿ ಅವರು 15 ಸದಸ್ಯ ಬಲದೊಂದಿಗೆ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದರು. ಇಬ್ಬರು ಡಿಎಂಕೆ ಸದಸ್ಯರ ಬೆಂಬಲದೊಂದಿಗೆ ಒಟ್ಟು 17 ಸದಸ್ಯರನ್ನೊಳಗೊಂಡ ನೂತನ ಸರ್ಕಾರ ರಚಿಸಿದ್ದಾರೆ.[೭]

ಆದರೆ ಅವರು ವಿಧಾನ ಸಭೆ ಸದಸ್ಯರಲ್ಲ. ಇನ್ನು ಆರು ತಿಂಗಳ ವಳಗೆ ವಿಧಾನ ಸಭೆಗೆ ಆಯ್ಕೆಯಾಗಬೇಕು.

ಉಪಚುನಾವಣೆ ೨೦೧೬[ಬದಲಾಯಿಸಿ]

  • 22, 2016,:
  • ಪುದುಚೇರಿ ಮುಖ್ಯಮಂತ್ರಿ ಕಾಂಗ್ರೆಸ್ ಅಭ್ಯರ್ಥಿ ವಿ.ನಾರಾಯಣಸ್ವಾಮಿ 18.709 ಮತಗಳನ್ನು ಪಡೆದು. ನಲ್ಲಿತೊಪು ಉಪಚುನಾವಣೆಯನ್ನು 11.144 ಮತಗಳಿಂದ, ಎಐಎಡಿಎಂಕೆ ಅಭ್ಯರ್ಥಿ ಓಂಶಕ್ತಿ ಸೇಕರ್ ವಿರುದ್ಧ ಗೆದ್ದರು. ಸೇಕರ್ 7.565 ಮತಗಳನ್ನು ಪಡೆದರು. [೮]

ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. http://www.thehindu.com/news/national/election-dates-for-five-states-announced/article8313813.ece
  2. "ಆರ್ಕೈವ್ ನಕಲು". Archived from the original on 2015-11-14. Retrieved 2016-04-05.
  3. http://www.elections.in/pondicherry/#sthash.ehC77YfN.dpuf[ಶಾಶ್ವತವಾಗಿ ಮಡಿದ ಕೊಂಡಿ]
  4. "ಆರ್ಕೈವ್ ನಕಲು". Archived from the original on 2014-12-18. Retrieved 2016-05-23.
  5. http://timesofindia.indiatimes.com/elections-2016/puducherry-elections-2016/election2016comparison/state-puducherry.cms
  6. assembly-elections/may16-exitpoll[[೧]]
  7. 06/06/2016ww.prajavani.net/article/ನಾರಾಯಣಸ್ವಾಮಿ-ಪುದುಚೇರಿ-ನೂತನ-ಸಿಎಂ
  8. ಕಾಂಗ್ರೆಸ್ ಅಭ್ಯರ್ಥಿ ಗೆಲುವು.