ವಿಷಯಕ್ಕೆ ಹೋಗು

ಪಾಮ್ ಸಂಡೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಯೇಸು ಕ್ರಿಸ್ತ ಕತ್ತೆಯ ಮೇಲೆ ಜರೂಸಲಮ್ ಅನ್ನು ಪ್ರವೇಶಿಸುತ್ತಿರುವುದು, 1900 ರ ಪೂರ್ವಾರ್ಧದ ಬೈಬಲ್ ಕಾರ್ಡ್ ನಲ್ಲಿರುವ ವಿವರಣಾತ್ಮಕ ಚಿತ್ರ

ಪಾಮ್ ಸಂಡೆ ಯಾವಾಗಲು ಈಸ್ಟರ್ ಭಾನುವಾರದ ಹಿಂದಿನ ಭಾನುವಾರ ಬೀಳುವ ಕ್ರೈಸ್ತ ಮತದ ಚರಹಬ್ಬವಾಗಿದೆ. ಈ ಹಬ್ಬ ಎಲ್ಲಾ ನಾಲ್ಕು ಶಾಸ್ತ್ರಸಮ್ಮತ ಸುವಾರ್ತೆಗಳಲ್ಲಿ(ಟೆಂಪ್ಲೇಟು:Bible verse, ಟೆಂಪ್ಲೇಟು:Bible verse, ಟೆಂಪ್ಲೇಟು:Bible verse,ಮತ್ತು ಟೆಂಪ್ಲೇಟು:Bible verse) ಹೇಳಿರುವ ಘಟನೆಯನ್ನು ನೆನಪಿಗೆ ತರುತ್ತದೆ: ಯೇಸುಕ್ರಿಸ್ತ ನು ಶಿಲುಬೆಯಲ್ಲಿ ಯಾತನೆ ಪಡುವ ಮುಂಚಿನ ದಿನಗಳಲ್ಲಿ ಜರೂಸಲಮ್‌ಗೆ ಪರಮೋತ್ಸಾಹದಿಂದ ಪ್ರವೇಶ ಮಾಡುವ ಘಟನೆ. ಆದ್ದರಿಂದ ಇದನ್ನು ಲೆಂಟ್ ಉಪವಾಸ ವ್ರತದ ಐದನೆಯ ಭಾನುವಾರ ಅಥವಾ ಶಿಲುಬೆಯ ಮೇಲೆ ಯೇಸುಕ್ರಿಸ್ತನ ಯಾತನೆಯ ಪಾಮ್ ಸಂಡೆ ಎಂದು ಕರೆಯಲಾಗುತ್ತದೆ.

ಅನೇಕ ಕ್ರೈಸ್ತ ಚರ್ಚ್ ಗಳಲ್ಲಿ, ಪಾಮ್ ಸಂಡೆಯನ್ನು ಚರ್ಚ್‌ನಲ್ಲಿ ನೆರೆದಿರುವ ಭಕ್ತರಿಗೆ ತಾಳೆಎಲೆ(ಗರಿ)ಗಳನ್ನು (ಆಗಾಗ್ಗೆ ಶಿಲುಬೆಗಳಿಗೆ ಕಟ್ಟಲಾಗುತ್ತದೆ) ವಿತರಿಸುವ ಮೂಲಕ ಆಚರಿಸಲಾಗುತ್ತದೆ. ತಾಳೆಗಿಡಗಳಿಗೆ ಹಿತಕರವಲ್ಲದ ಹವಾಮಾನದಲ್ಲಿ ಆ ದಿನದ ಆಚರಣೆಗಳಿಗೆ ತಾಳೆ ಎಲೆಗಳನ್ನು ಒದಗಿಸುವುದು ಕಷ್ಟವಾದಾಗ ಇದರ ಬದಲಿಗೆ ಬಾಕ್ಸ್,ಯೂ ಮರ, ವಿಲ್ಲೊಮರ ಮತ್ತು ಇತರ ಸ್ಥಳೀಯ ಮರಗಳ ಕೊಂಬೆಗಳನ್ನು ಬಳಸುತ್ತಿದ್ದರು. ಭಾನುವಾರವನ್ನು ಯಾವಾಗಲು ಈ ಮರಗಳ ಹೆಸರುಗಳಿಂದ ಸೂಚಿಸಲಾಗುತ್ತಿತ್ತು, ಉದಾಹರಣೆಗೆ ಯೂ ಸಂಡೆ ಅಥವಾ ಸಾಮಾನ್ಯ ಪದಗಳಿಂದ ಬ್ರಾಂಚ್ ಸಂಡೆ ಎಂದು ಕರೆಯಲಾಗುತ್ತಿತ್ತು.

ಸುವಾರ್ತೆಗಳ ಪ್ರಕಾರ ಯೇಸುಕ್ರಿಸ್ತ ಜರೂಸಲಮ್ ಗೆ ಬರುವ ಮೊದಲು ಬೆಥಾನಿ ಮತ್ತು ಬೆಥಪೇಜ್ ನಲ್ಲಿ ತಂಗಿದ್ದ ಎಂದು ಹೇಳಲಾಗಿದೆ ಹಾಗು ಅಲ್ಲಿ ಯೇಸುಕ್ರಿಸ್ತ ಲಜಾರಸ್ ಮತ್ತು ಅವನ ಸಹೋದರಿಯರಾದ ಮೇರಿ ಮತ್ತು ಮಾರ್ಥಾರೊಡನೆ ರಾತ್ರಿ ಭೋಜನ ಸ್ವೀಕರಿಸಿದ್ದ ಎಂದು ಗಾಸ್ಪೆಲ್ ಆಫ್ ಜಾನ್‌ನಲ್ಲಿ ತಿಳಿಸಲಾಗಿದೆ. ಆಗ ಅಲ್ಲಿ ಯೇಸು ಕ್ರಿಸ್ತ ಇಬ್ಬರು ಶಿಷ್ಯರನ್ನು ಎಂದಿಗೂ ಪ್ರಯಾಣಕ್ಕೆ ಬಳಸದೇ ಕಟ್ಟಿಹಾಕಿರುವ ಕತ್ತೆಯನ್ನು ಹುಡುಕಿ ಕರೆದುಕೊಂಡುಬರಲು ಅವರನ್ನು ಪಕ್ಕದ ಊರಿಗೆ ಕಳುಹಿಸಿದ ಹಾಗು ಇದನ್ನು ಪ್ರಶ್ನಿಸಿದರೆ ಪ್ರಭುಗಳಿಗೆ ಕತ್ತೆ ಬೇಕಾಗಿದ್ದು, ಅದನ್ನು ಹಿಂದಿರುಗಿಸಲಾಗುವುದು ಎಂದು ಹೇಳಲು ತಿಳಿಸಿದ. ನಂತರ ಯೇಸುಕ್ರಿಸ್ತನ ಪ್ರಯಾಣವನ್ನು ಹಿತಕರವಾಗಿಸಲು ಶಿಷ್ಯಂದಿರು ಹೊದಿಕೆಗಳನ್ನು ಮೊದಲು ಕತ್ತೆಯ ಮೇಲೆ ಹಾಕುವುದರೊಂದಿಗೆ ಆ ಕತ್ತೆಯ ಮೇಲೆ ಕುಳಿತು ಜರೂಸಲಮ್‌ಗೆ ಏಸುಕ್ರಿಸ್ತ ಪ್ರಯಾಣ ಬೆಳಸಿದನೆಂದು ಸುವಾರ್ತೆಗಳು ತಿಳಿಸಿವೆ. ಈ ಸುವಾರ್ತೆಗಳು ಜರೂಸಲಮ್ ಗೆ ಯೇಸು ಕ್ರಿಸ್ತ ನ ಪ್ರಯಾಣ ಹೇಗೆ ಸಾಗಿತ್ತು ಹಾಗು ಅಲ್ಲಿಯ ಜನರು ಹೇಗೆ ಅವರ ಮೇಲಂಗಿಗಳನ್ನು ಅವನ ಮುಂದೆ ಹಾಸಿದರು ಮತ್ತು ಹೇಗೆ ಮರಗಳ ಸಣ್ಣ ಕೊಂಬೆಗಳನ್ನು ಕೂಡ ಅವನ ಮುಂದೆ ಇರಿಸಿದರು ಎಂಬುದನ್ನು ನೆನಪಿಸುತ್ತವೆ. ಜನರು ಸ್ತೋತ್ರ118 ರ ಭಾಗವನ್ನು ಹಾಡಿದರು- ... ಯಾರು ದೇವರ ಹೆಸರಿನಲ್ಲಿ ಬರುತ್ತಾನೋ ಅವನು ಧನ್ಯ. ನಮ್ಮ ತಂದೆಡೇವಿಡ್ ನ ಮುಂದೆ ಬರಲಿರುವ ಸಾಮ್ರಾಜ್ಯ ಧನ್ಯ. (Psalms 118:25-26). ಈ ಪ್ರವೇಶ ಯಾವ ಕಡೆಯಿಂದ ನಡೆಯಿತು ಎಂಬುದು ಖಚಿತವಾಗಿಲ್ಲ; ಯೆಹೂದ್ಯರ ವಿಮೋಚಕ ಜರೂಸಲಮ್ ಗೆ ಗೋಲ್ಡನ್ ಗೇಟ್ ನಿಂದ ಬಂದನೆಂದು ನಂಬಿರುವ ಕಾರಣ, ಯೇಸು ಕ್ರಿಸ್ತ ಈ ಗೇಟ್ ನ ಮೂಲಕವೇ ಬಂದಿರಬಹುದು ಎಂದು ಕೆಲವು ವಿದ್ವಾಂಸರು ವಾದಿಸಿದ್ದಾರೆ; ಮಂದಿರಕ್ಕೆ ನೇರವಾಗಿ ದಾರಿ ಕಲ್ಪಿಸುವ ಮೆಟ್ಟಿಲುಗಳನ್ನು ಹೊಂದಿರುವ ದಕ್ಷಿಣದ ಪ್ರವೇಶವಿರಬಹುದು ಎಂದು ಕೆಲವು ವಿದ್ವಾಂಸರು ಭಾವಿಸುತ್ತಾರೆ( ಕಿಲ್ ಗಲ್ಲೆನ್ 210)

ಸಾಂಕೇತಿಕತೆ[ಬದಲಾಯಿಸಿ]

ಆಸ್ಟ್ರಿಯದ ಜಿರಿಲ್‌ನ ಪ್ಯಾರಿಷ್ ಚರ್ಚ್ ನಲ್ಲಿರುವ ಜರೂಸಲಮ್‌ಗೆ ಕ್ರಿಸ್ತನ ಪ್ರವೇಶದ ಚಿತ್ರಾಲಂಕಾರ.

ಪ್ರಾಚೀನ ನಿಯರ್ ಈಸ್ಟ್‌ನ ಅನೇಕ ಪ್ರದೇಶಗಳಲ್ಲಿ ಅತ್ಯಂತ ಗೌರವಾದರಕ್ಕೆ ಪಾತ್ರರೆಂದು ಭಾವಿಸಲಾದ ವ್ಯಕ್ತಿ ಕ್ರಮಿಸುವ ಹಾದಿಯನ್ನು ಹಾಸುವುದು ಸಾಮಾನ್ಯ ಸಂಪ್ರದಾಯವಾಗಿದೆ. ಜೆಹೊಶಫತ್ ನ ಮಗನಾದ ಜೆಹುವನ್ನು ಈ ರೀತಿಯಾಗಿ ಗೌರವಿಸಲಾಯಿತು ಎಂದು ಹೀಬ್ರೂ ಬೈಬಲ್ (2Kings 9:13) ವರದಿಮಾಡಿದೆ(ತಿಳಿಸಿದೆ). ಜನರು ಯೇಸುಕ್ರಿಸ್ತನಿಗೆ ಈ ರೀತಿಯ ಗೌರವವನ್ನು ಕೊಡುತ್ತಿದ್ದರು ಎಂದು ಸಮಾನದೃಷ್ಟಿಯ ಸುವಾರ್ತೆಗಳು ಮತ್ತು ಜಾನ್ ನ ಸುವಾರ್ತೆ ಹೇಳಿವೆ. ಆದರೂ ಸುವಾರ್ತೆಗಳಲ್ಲಿ ಜನರು ರಸ್ತೆಯಲ್ಲಿರುವ ರಷಸ್ ಗಿಡವನ್ನು ಕತ್ತರಿಸಿದರು ಹಾಗೂ ಅವರ ಹೊದಿಕೆಗಳನ್ನು ಹಾಸಿದರು ಎಂದು ಹೇಳಲಾಗಿದೆ. ಆದರೆ ಜಾನ್ ಸುವಾರ್ತೆಯಲ್ಲಿ ತಾಳೆಗರಿಗಳನ್ನು ಕೂಡ ನಿರ್ದಿಷ್ಟವಾಗಿ ಹೆಸರಿಸಲಾಗಿದೆ. ಯೆಹೂದಿಗಳ ಸಂಪ್ರದಾಯದಲ್ಲಿ ತಾಳೆಮರದ ಕೊಂಬೆ ವಿಜಯೋತ್ಸವದ ಮತ್ತು ಗೆಲುವಿನ ಸಂಕೇತವಾಗಿದೆ. ಅಲ್ಲದೇ ಇವುಗಳನ್ನು ಬೈಬಲ್ ನ ಇತರ ಭಾಗಗಳಲ್ಲಿ ಹೀಗೆಯೇ ಕಾಣಲಾಗುತ್ತದೆ(ಉದಾಹರಣೆಗೆ...Leviticus 23:40 ಮತ್ತುRevelation 7:9). ಜನಸಮೂಹ ತಾಳೆಗರಿಗಳನ್ನು ಹಿಡಿದು ಕೈಬೀಸುತ್ತ ಹಾಗು ಅವನ ದಾರಿಯುದ್ದಕ್ಕೂ ಜಮಖಾನೆ ಹಾಸುತ್ತ ಯೇಸುಕ್ರಿಸ್ತನಿಗೆ ಶುಭಾಶಯ ಕೋರುತ್ತಿರುವ ದೃಶ್ಯ ಈ ಕಾರಣದಿಂದಾಗಿ ಮುಖ್ಯವಾಗಿದೆ ಮತ್ತು ಸಾಂಕೇತಿಕವಾಗಿದೆ.

16 ನೇಮತ್ತು 17 ನೇ ಶತಮಾನದಲ್ಲಿ ಪಾಮ್ ಸಂಡೆಯನ್ನು ಜಾಜ್-'ಓ'-ಲೆಂಟ್ ಆಕೃತಿಯನ್ನು ಸುಡುವುದು ಎಂದು ಗುರುತಿಸಲಾಗುತ್ತಿತ್ತು. ಇದು ಹುಲ್ಲಿನ ಪ್ರತಿಕೃತಿಯಾಗಿದ್ದು,ಅದಕ್ಕೆ ಕಲ್ಲು ತೂರಿ, ದೂಷಿಸಲಾಗುತ್ತಿತ್ತು. ಪಾಮ್ ಸಂಡೆಯ ದಿನದಂದು ಈ ಆಕೃತಿಯನ್ನು ಸುಡುವುದೆಂದರೆ ಕ್ರಿಸ್ತನಿಗೆದ್ರೋಹ ಮಾಡಿದ ಜೂಡಾಸ್ ಇಸ್ ಕಾರಿಟ್ ನ ಮೇಲೆ ಸೇಡುತೀರಿಸಿಕೊಳ್ಳುವುದು ಎಂದು ಭಾವಿಸಲಾಗುತ್ತದೆ. ಅಲ್ಲದೇ ಇದು ಚಳಿಗಾಲದ ದ್ವೇಷದ ಆಕೃತಿಯನ್ನು ಬಿಂಬಿಸಬಹುದು. ಅದರ ವಿನಾಶ ಮುಂದೆ ಬರಲಿರುವ ವಸಂತಕಾಲಕ್ಕೆ ಸಿದ್ಧತೆಯಾಗುತ್ತದೆ.[೧]

ಪ್ರವಾದಿಯ ಅರ್ಥಕಲ್ಪನೆಗಳು[ಬದಲಾಯಿಸಿ]

ವಿಜಯೋತ್ಸವದ ಪ್ರವೇಶದಿಂದ ನಿಜವಾದ ಭವಿಷ್ಯವಾಣಿ ಎಂದು ಕ್ರೈಸ್ತರು ಜೆಕಾರಿಯಾದ ಒಂದು ಸಾಲನ್ನು ಅರ್ಥೈಸಿದ್ದಾರೆ.

Rejoice greatly, O Daughter of Zion!
Shout, Daughter of Jerusalem!
See, your king comes to you,
righteous and having salvation,
gentle and riding on a donkey, on a colt, the foal of a donkey.
I will take away the chariots from Ephraim
and the war-horses from Jerusalem,
and the battle bow will be broken.
He will proclaim peace to the nations.
His rule will extend from sea to sea
and from the River to the ends of the earth.

ಮ್ಯಾಥಿವ್ ಜರೂಸಲಮ್ ಗೆ ಕ್ರಿಸ್ತನ ಪ್ರವೇಶದ ಕಥೆಯನ್ನು ವಿವರಿಸುವಾಗ ಜೆಕಾರಿಯಾದಿಂದ ಈ ಸಾಲನ್ನು ಉಲ್ಲೇಖಿಸಿದ್ದಾನೆ. ಹೀಬ್ರೂ ಕವಿತೆಯ ಪುನರಾವರ್ತನೆಯಲ್ಲಿ ಎರಡು ವಿಭಿನ್ನ ಕತ್ತೆಗಳನ್ನು ವಿವರಿಸಿರುವುದಾಗಿ ಅವನ ವ್ಯಾಖ್ಯಾನ: ಜೆಂಟಲ್ ಅಂಡ್ ರೈಡಿಂಗ್ ಆನ್ ಅ ಡಾಂಕಿ , ಆನ್ ಅ ಕೋಲ್ಟ್, ದಿ ಫೋಲ್ ಆಫ್ ಅ ಡಾಂಕಿ , ಯೇಸುಕ್ರಿಸ್ತ ಕತ್ತೆ ಮತ್ತು ಅದರ ಮರಿ ಎರಡರ ಮೇಲು ಸವಾರಿ ಮಾಡಿದ್ದಾನೆ ಎಂದು ಮ್ಯಾಥಿವ್ ವಿಶಿಷ್ಟವಾಗಿ ವರ್ಣಿಸಿರುವುದಕ್ಕೆ ಕಾರಣವೆಂದು ಬೈಬಲ್ಲಿನ ವಿದ್ವಾಂಸರು ತಿಳಿಸಿದ್ದಾರೆ. ಆದರೂ ಇದಕ್ಕೆ ಇದರ ಬದಲಿಗೆ ಬೇರೆಯೇ ವಿವರಣೆಯಿದೆ. ಈ ವಿಷಯದ ಬಗ್ಗೆ ಮ್ಯಾಥಿವ್ ನ ಇಡೀ ಪುಸ್ತಕದಲ್ಲಿ ಈ ಕೆಳಗಿನಂತಿದೆ:

" ಅವರು ಜರೂಸಲಮ್‌ ಹತ್ತಿರ, ಬೆಥಫೇಜ್‌ನ ಮೌಂಟ್ ಆಫ್ ಆಲೀವ್ಸ್‌ಗೆ ಬಂದಾಗ, ಏಸು ಇಬ್ಬರು ಶಿಷ್ಯರಿಗೆ, 2 . ನಿಮ್ಮ ಪಕ್ಕದಲ್ಲಿರುವ ಹಳ್ಳಿಗೆ ಹೋಗಿ. ಅಲ್ಲಿ ನೇರವಾಗಿ ತೆರಳಿದರೆ ಕಟ್ಟಿಹಾಕಿರುವ ಕತ್ತೆಯನ್ನು ಮತ್ತು ಅದರ ಜತೆಗಿರುವ ಗಂಡು ಮರಿ ಸಿಗುತ್ತದೆ. ಅವುಗಳನ್ನು ಬಿಚ್ಚಿ ನನ್ನ ಹತ್ತಿರ ತೆಗೆದುಕೊಂಡು ಬನ್ನಿ ಎಂದು ಹೇಳಿ ಅವರನ್ನು ಕಳಿಸಿದ. 3 .ಹಾಗು ಯಾರಾದರು ನಿಮ್ಮನ್ನು ಪ್ರಶ್ನಿಸಿದರೆ ಪ್ರಭುವಿಗೆ ಅವುಗಳು ಬೇಕಾಗಿವೆ ಎಂದು ನೀವು ಹೇಳಿರಿ; ನೇರವಾಗಿ ಅವನು ಅವುಗಳನ್ನು ಕಳುಹಿಸುತ್ತಾನೆ. 4 .ಇವೆಲ್ಲ ಮಾಡಿದರೆ, ಅದು ನೆರವೇರಬಹುದು ಎಂದು ಪ್ರವಾದಿ ಹೇಳುತ್ತಾ, 5 ಜಿಯಾನ್ ಜನರಿಗೆ ಹೇಳಿ: ನೋಡಿ, ಪ್ರಭು ನಿಮ್ಮಲ್ಲಿಗೆ ವಿನೀತ ಭಾವದಿಂದ ಕತ್ತೆಯ ಮೇಲೆ ಕುಳಿತುಕೊಂಡು,ಗಂಡು ಕತ್ತೆಮರಿಯೊಂದಿಗೆ ಬರುತ್ತಾನೆ. 6 ಶಿಷ್ಯರು ಹೋಗಿ ಯೇಸು ಕ್ರಿಸ್ತನ ಆದೇಶವನ್ನು ಪಾಲಿಸಿದರು, 7 ಮತ್ತು ಕತ್ತೆಯನ್ನು ಮತ್ತು ಮರಿಯನ್ನು ತಂದು ಅದರ ಮೇಲೆ ಬಟ್ಟೆಗಳನ್ನು ಹಾಕಿ ಅವನ ಪ್ರಯಾಣಕ್ಕೆ ಸಿದ್ಧತೆ ಮಾಡುತ್ತಾರೆ." (ಮ್ಯಾಥಿವ್ 21:1-7 KJV)

ಜೆಕರಾಯಾದಲ್ಲಿ ಬೈಬಲಿನ ಹಳೆಯ ಒಡಂಬಡಿಕೆಯ ಗ್ರೀಕ್ ಭಾಷಾಂತರದಲ್ಲಿ 9:9 ಹೇಳಲಾಗಿದೆ: "ಅತೀವ ಸಂತೋಷಪಡಿ, ಓ ಸಿಯಾನ್ ಜನರೇ; ಗಟ್ಟಿಯಾಗಿ ಘೋಷಿಸಿ, ಓ ಜರೂಸಲಮ್ ನ ಜನರೇ, ನೋಡಿ, ಪ್ರಭು ನಿಮ್ಮಲ್ಲಿಗೆ ಬರುತ್ತಾನೆ;ಅವನು ಸಂರಕ್ಷಕ, ಅವನು ನಮ್ರಭಾವದಿಂದ ಕತ್ತೆಯ ಮೇಲೆ ಸವಾರಿ ಮಾಡುತ್ತಾನೆ, ಜತೆಗೆ ಕತ್ತೆಯ ಮರಿ ." (ಬ್ರೆನ್ ಟಾನ್)ಇದರಲ್ಲಿರುವ ಮಾತುಗಳು ಹೀಬ್ರೂ ಪಠ್ಯದಲ್ಲಿರುವ ಮಾತುಗಳಿಗಿಂತ ಸ್ಪಲ್ಪಮಟ್ಟಿಗೆ ವಿಭಿನ್ನವಾಗಿವೆ. ಆದರೆ ಆ ಪಠ್ಯದಿಂದ ಯುಕ್ತವಾಗಿ ಹೀಗೆ ಅರ್ಥೈಸಬಹುದಾಗಿದೆ, ವಿಮೋಚಕ, ಯೇಸುಕ್ರಿಸ್ತ ಪ್ರಾಣಿಯೊಂದರ ಮೇಲೆ ಸವಾರಿ ಮಾಡಿರಬಹುದು, ಬಹುಶಃ ಕತ್ತೆ, ಮತ್ತು ಅದರ ಗಂಡು ಮರಿ ತಾಯಿಯನ್ನು ಹಿಂಬಾಲಿಸಿರಬಹುದು. ಯೇಸು ಕ್ರಿಸ್ತ ಎರಡರ ಮೇಲೆ ಏಕಕಾಲದಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿರುವ ಕಲ್ಪನೆ ವಿಚಿತ್ರವಾದ ಚಿತ್ರಣವನ್ನು ಮನಸ್ಸಿಗೆ ನೀಡುತ್ತದೆ. ಮ್ಯಾಥಿವ್‌ನ ಈ ಅಧ್ಯಾಯ ಕುರಿತಂತೆ ಹಿಲರಿ ಆಫ್ ಪಾಯಿಟಿಯರ್ಸ್ ತನ್ನ ಧರ್ಮೋಪದೇಶಗಳಲ್ಲೊಂದರಲ್ಲಿ ಹೀಗೆಂದು ಅಭಿಪ್ರಾಯ ಪಟ್ಟಿದ್ದಾರೆ. ಯೇಸುಕ್ರಿಸ್ತನಿಗಾಗಿ ಕತ್ತೆ ಮತ್ತು ಕತ್ತೆಯ ಮರಿಯನ್ನು ತರಲಾಯಿತು, ಅವನು ಜರೂಸಲಮ್ ಗೆ ಬಂದಾಗ ಬಹುಶಃ ಆ ಎರಡು ಪ್ರಾಣಿಗಳು ಬೇರ್ಪಡದಿರಬಹುದು:" ಕಟ್ಟಿಹಾಕಿರುವ ಕತ್ತೆಯನ್ನು ಮತ್ತು ಅದರ ಮರಿಯನ್ನು ಬಿಚ್ಚಿ ಕ್ರಿಸ್ತನಿಗಾಗಿ ಕರೆತರಲು ಇಬ್ಬರು ಶಿಷ್ಯರನ್ನು ಹಳ್ಳಿಗೆ ಕಳುಹಿಸಲಾಯಿತು.

 ಅವರು ಇದನ್ನು ಏಕೆ ಮಾಡುತ್ತಿದ್ದಾರೆ ಎಂದು ಯಾರಾದರು ಕೇಳಿದರೆ ಪ್ರಭುಗಳಿಗೆ ಪ್ರಾಣಿಗಳು ಬೇಕಾಗಿದೆ ಎಂದು ಅವರು ಹೇಳಬೇಕು, ಆಗ ಅವು ತಡವಿಲ್ಲದೇ ಅವನಿಗೆ ಬಿಡುಗಡೆಯಾಗುತ್ತವೆ. ಜೆಬೆಡಿಯ ಇಬ್ಬರು ಮಕ್ಕಳು ಇಸ್ರೆಲ್ ನ ಎರಡು ದೈವಸಂಕಲ್ಪಿತ ಕಾರ್ಯವನ್ನು ಸಂಕೇತಿಸುತ್ತಾರೆ ಎಂದು ಹಿಂದಿನ ಭೋಧನೆಯಿಂದ ನಾವು ನೆನಪು ಮಾಡಿಕೊಳ್ಳುತ್ತೇವೆ. ಆದ್ದರಿಂದ ಕತ್ತೆ ಮತ್ತು ಕತ್ತೆ ಮರಿಯನ್ನು ಬಿಡಿಸಲು ಕಳಿಸಿದ ಇಬ್ಬರು ಶಿಷ್ಯಂದಿರನ್ನು ಯಹೂದ್ಯೇತರರ ಎರಡು ದೈವಸಂಕಲ್ಪವೆಂದು ಅರ್ಥೈಸುವುದು ಸೂಕ್ತವಾಗುತ್ತದೆ. ಇದು ಯಾರು ಭಿನ್ನಾಭಿಪ್ರಾಯದ ನಂತರ ಕಾನೂನನ್ನು ಪರಿತ್ಯಜಿಸಿದರೊ ಹಾಗು ಅವಲಂಬನೆ ಮತ್ತು ಗುಲಾಮರಾಗಿ ಬದುಕಿದ ಸ್ಮಾರಿಟನ್‌ರಿಗೆ ಮೊದಲು ಅನ್ವಯಿಸುತ್ತದೆ. ಅಲ್ಲದೇ ಇದು ಕ್ರಾಂತಿಕಾರಕ ಮತ್ತು ಭಯಂಕರ ಯೆಹೂದ್ಯೇತರ ವ್ಯಕ್ತಿಗಳಿಗೂ ಅನ್ವಯವಾಗುತ್ತದೆ. ಆದ್ದರಿಂದಲೇ ತಪ್ಪು ಮತ್ತು ಅಜ್ಞಾನದ ಬಂಧನಕ್ಕೆ ಸಿಲುಕಿದವರನ್ನು ಬಿಡುಗಡೆ ಮಾಡಲು ಇಬ್ಬರು ಶಿಷ್ಯರನ್ನು ಕಳುಹಿಸಲಾಯಿತು."

ಬಹುಸಂಖ್ಯಾತ ಯೆಹೂದಿಗಳ ನಂಬಿಕೆಯಲ್ಲಿ ಆಲಿವ್ ಪರ್ವತ ವಿಮೋಚಕನ ಆಗಮನವನ್ನು ನಿರೀಕ್ಷಿಸುತ್ತದೆ ಎಂದು ತಿಳಿಸಲಾಗಿದೆ. (ಜೋಸೆಫೂಸ್, ಫ್ಲೇವಿಯಸ್, ಬೆಲೂಮ್ ಜೂಡೈಕಮ್ , II,13,5 ಮತ್ತು ಆಂಟಿಕ್ವಿಟೇಟ್ಸ್ ಜೂಡೈಕೆ , XX,8,6 ಯನ್ನುನೋಡಿ). ಈ ನಂಬಿಕೆಯು ಜೆಕರಾಯಾ 14:3-4 ವನ್ನು ಆಧರಿಸಿದೆ:

ಆಗ ಪ್ರಭು ಮುನ್ನಡೆದು ಯುದ್ಧದ ದಿನಗಳಲ್ಲಿ ಅವನು ಹೋರಾಡಿದಂತೆ ಆ ರಾಷ್ಟ್ರಗಳ ವಿರುದ್ಧ ಹೋರಾಡುವನು./ ಮತ್ತು ಅವನ ಪಾದಗಳನ್ನು ಪೂರ್ವದಲ್ಲಿ ಜರೂಸಲಮ್ ಎದುರಿಗಿರುವ ಆಲಿವ್ ಪರ್ವತದ ಮೇಲೆ ಆ ದಿನ ಊರುತ್ತಾನೆ[...].

ಚೀನಾದಲ್ಲಿರುವ ನೆಸ್ಟೋರಿಯನ್ ರ ಪಾಮ್ ಸಂಡೆ ಆಚರಣೆಗಳ ಶಕ್ಯ ಚಿತ್ರಣಗಳು , ಗೋಡೆಯ ಚಿತ್ರಗಳು, ಕೂಕೋ, ನೆಸ್ಟೋರಿಯನ್ ದೇವಸ್ಥಾನ, 683–770 AD, ಟ್ಯಾಂಗ್ ಸಾಮ್ರಾಜ್ಯ (ಮ್ಯೂಸಿಯಂ ಫಾರ್ für ಇಂಡಿಸ್ಚೆ ಕ್ನೂಸ್ಟ್, ಬರ್ಲಿನ್-ದಲೆಮ್).

ವಿಜಯೋತ್ಸವದ ಪ್ರವೇಶ ಮತ್ತು ತಾಳೆ ಮರದ ಕೊಂಬೆಗಳು 1 ಮ್ಯಾಕಬೀಸ್(ಯೆಹೂದಿಚರಿತ್ರೆ)13:51 ನಲ್ಲಿ ಯೆಹೂದಿಗಳ ವಿಮೋಚನೆಯ ವಿಜಯೋತ್ಸವವನ್ನು ನೆನಪಿಸುತ್ತವೆ:

ಒಂದು ಸಾವಿರದ ಏಪ್ಪತ್ತೊಂದನೆ ವರ್ಷದ ಎರಡನೆ ತಿಂಗಳಿನ ಇಪ್ಪತ್ಮೂರನೇ ದಿನದಂದು ಯಹೂದಿಗಳು [ಸೈಮನ್ ಮ್ಯಾಕಬೀಸ್ ನೇತೃತ್ವದಲ್ಲಿ] ಸ್ತುತಿ ಮತ್ತು ತಾಳೆ ಮರದ ಕೊಂಬೆಗಳೊಂದಿಗೆ ಹಾಗು ಹಾರ್ಪ್ ವಾದ್ಯ ಮತ್ತು ಕಂಚಿನ ತಾಳದೊಂದಿಗೆ ಹಾಗು ತಂತಿ ವಾದ್ಯಗಳೊಂದಿಗೆ ಮತ್ತು ಸ್ತುತಿಗೀತೆಗಳು ಮತ್ತು ಹಾಡುಗಳೊಂದಿಗೆ ಅದನ್ನು [ಜರೂಸಲಮ್ ನ ಕೋಟೆ] ಪ್ರವೇಶಿಸಿದರು.ಏಕೆಂದರೆ ಮಹಾ ಶತ್ರುವನ್ನು ಅವರು ಸದೆಬಡಿದು ಇಸ್ರೇಲ್‌ನಿಂದ ಓಡಿಸಿದ್ದರು.

ಯೇಸು ಕ್ರಿಸ್ತನ ಕಾಲದಲ್ಲಿ ಭೂಮಿಯಲ್ಲಿದ್ದ ದೊಡ್ಡ ಶತ್ರುವೆಂದರೆ ರೋಮನ್ ಸೈನ್ಯ; ಪವಿತ್ರ ನೆಲದಿಂದ ರೋಮನ್ನರನ್ನು ಮೂಲೋತ್ಪಾಟನೆ ಮಾಡಲು ಪ್ರತೀಕಾರ ಭಾವನೆಯಿಂದ ತುಂಬಿದ ವಿಮೋಚಕನ ಮುನ್ನಡೆ ಎಂದು ಜೆರುಸಲೇಂಗೆ ವಿಜಯೋತ್ಸವದ ಪ್ರವೇಶವನ್ನು ಅನೇಕ ಯಹೂದಿಗಳು ಕಂಡರೆಂದು ಅರ್ಥೈಸಬಹುದು.

ಆದರೆ ಆಗ ಕತ್ತೆಯಲ್ಲಿ ಏಸುಕ್ರಿಸ್ತ ಸವಾರಿ ಮಾಡಿದ್ದು ಸಮಸ್ಯೆಗೆ ಎಡೆಯಾಯಿತು. ಬ್ಯಾಬಿಲೋನಿಯನ್ ಯೆಹೂದ್ಯರ ಧರ್ಮಶಾಸ್ತ್ರ ಪರ್ಶಿಯನ್ ಪ್ರಭು ಶೆವೊರ್ ಕೇಳಿರುವ ಪ್ರಶ್ನೆಯನ್ನು ರಕ್ಷಿಸಿಟ್ಟಿದೆ: ನಿಮ್ಮ ವಿಮೋಚಕನೇಕೆ ಕುದುರೆಯ ಮೇಲೆ ಸವಾರಿ ಮಾಡಿಕೊಂಡು ಬರಲಿಲ್ಲ? ಅವನ ಬಳಿ ಕುದುರೆಯ ಕೊರತೆಯಿದ್ದರೆ, ನನ್ನ ಹತ್ತಿರವಿರುವ ಉತ್ತಮಕುದುರೆಗಳಲ್ಲಿ ಒಂದನ್ನು ಅವನಿಗೆ ಸಂತೋಷದಿಂದ ಕೊಡುತ್ತಿದ್ದೆ! (ಸ್ಯಾನಿಡ್ರಿನ್ 98a). ವಾಸ್ತವವಾಗಿ, ವಿಮೋಚಕನೇಕೆ ಕತ್ತೆಯ ಮೇಲೆ ಬರಬೇಕು? ಕೆಲವು ಪಾಶ್ಚಾತ್ಯ ಸಂಪ್ರದಾಯಗಳು ಕತ್ತೆಯನ್ನು ಶಾಂತಿಯ ಪ್ರಾಣಿಯಾಗಿಯೂ ಅದರ ವಿರುದ್ಧ ಕುದುರೆಯನ್ನು ಯುದ್ಧದ ಪ್ರಾಣಿಯಾಗಿ ನೋಡುತ್ತವಾದ್ದರಿಂದ ಕತ್ತೆಯನ್ನು ಬಳಸಿದ ಸಾಂಕೇತಿಕತೆಯ ಮೇಲೆ ಉತ್ತರವು ನಿಂತಿದೆ. ಆದ್ದರಿಂದ,ಪ್ರಭುನಿಗೆ ಯುದ್ಧದಲ್ಲಿ ಒಲವಿದ್ದಾಗ ಅವನು ಕುದುರೆಯ ಮೇಲೆ ಬಂದನು ಮತ್ತು ಅವನು ಶಾಂತಿದೂತನಾಗಿ ಬರುತ್ತಿದ್ದಾನೆ ಎಂದು ಸೂಚಿಸಲು ಕತ್ತೆಯ ಮೇಲೆ ಬಂದನು ಎಂದು ಹೇಳಲಾಗುತ್ತದೆ. ಆದ್ದರಿಂದ ಪ್ರಭುವಿನಿಂದ ಗಂಡು ಕತ್ತೆಯ ಮರಿ ಮೇಲೆ ಸವಾರಿಯು ಶಾಂತ ಅಥವಾ ವಿನೀತ ಭಾವದ ವಿಶೇಷಣದಿಂದ ಕೂಡಿದೆ.(ಹೀಬ್ರೂ anî -ನರಳುತ್ತಿರುವ ಬಡವ) ಮತ್ತು ದೃಢವಾಗಿ ಶಾಂತಿಯ ಸಂದೇಶವನ್ನು ನೀಡುತ್ತದೆ. ಯೇಸು ಕ್ರಿಸ್ತನ ಜೊತೆಯಲ್ಲಿ ಈ ಶಾಂತಿಯ ಸಂದೇಶವು ಯಾವಾಗಲು ತಳಹದಿಯಾಗಿತ್ತು, ಆದರೆ ಇದನ್ನು ಆ ದಿನಗಳಲ್ಲಿ ಎಷ್ಟರ ಮಟ್ಟಿಗೆ ಅರ್ಥೈಸಿದ್ದರೂ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಒಟ್ಟಿನಲ್ಲಿ ಜಾನ್‌ಘೋಷಿಸುತ್ತದೆ:ಇದನ್ನು ಮೊದಲಿಗೆ ಅವನ ಶಿಷ್ಯರು ಅರ್ಥಮಾಡಿಕೊಳ್ಳಲಿಲ್ಲ ' (12:16). ಬಹುಶಃ ಆದಿನದ ಜನರ ಉತ್ಸಾಹವು ಜರೂಸಲಮ್ ಗೆ ಯೇಸುಕ್ರಿಸ್ತನ ವಿಜಯೋತ್ಸವದ ಪ್ರವೇಶವನ್ನು ಶಾಂತಿಯ ಸಂದೇಶಕ್ಕಿಂತ ಇಸ್ರೇಲ್ ನ ಶತ್ರುಗಳ ವಿರುದ್ಧ ಯುದ್ಧದ ಘೋಷಣೆಯನ್ನು ಮಾಡುತ್ತಿರುವಂತೆ ಕಂಡಿತು.

ಯಹೂದಿಗಳು ವಿಮೋಚನೆಗೆ ಅರ್ಹರೆಂದು ಕಂಡುಬರದಿದ್ದಲ್ಲಿ ಮಾತ್ರ ವಿಮೋಚಕ ಕತ್ತೆಯ ಮೇಲೆ ಸವಾರಿ ಮಾಡಿಕೊಂಡು ಬರುವ ಬಡಮನುಷ್ಯನಂತೆ ಕಾಣಿಸಿಕೊಳ್ಳುತ್ತಾನೆ ಎಂದು ಬ್ಯಾಬಿಲೋನಿಯನ್ ಗೆಮಾರ(ಟ್ಯಾಲ್ ಮಡ್ ಗ್ರಂಥದ ಉತ್ತರಭಾಗ)ದ ಸ್ಯಾನಿಡ್ರಿನ್ ಪುಸ್ತಕದಲ್ಲಿ ಬರೆಯಲಾಗಿದೆ. ಇಲ್ಲವಾದಲ್ಲಿ ವಿಮೋಚಕನು ಕುದುರೆಯ ಮೇಲೆ ಬರುವನು. ಯಹೂದಿಗಳು ಒಳಗೊಂಡಂತೆ ಎಲ್ಲಾ ಮನುಷ್ಯರು ಪಾಪಿಗಳಾದಾಗ ವಿಮೋಚಕನು ನಿಸ್ಸಂಶಯವಾಗಿ ಯಾವಾಗಲು ಕತ್ತೆಯ ಮೇಲೆ ಸವಾರಿ ಮಾಡುವುದು ಸ್ಪಷ್ಟ. ಆದರೂ, ಇದು ಕ್ರೈಸ್ತಧರ್ಮದ ನಂಬಿಕೆಯಾಗಿದ್ದು, ಯೆಹೂದಿಧರ್ಮದಲ್ಲಿ ಇದನ್ನು ಬೆಂಬಲಿಸುವುದಿಲ್ಲ. (ಉದಾಹರಣೆಗೆ ಯಹೂದಿಗಳಿಗೆ ಮೂಲ ಪಾಪದಲ್ಲಿ ನಂಬಿಕೆಯಿಲ್ಲ).

ವಾರದ ದಿನ[ಬದಲಾಯಿಸಿ]

2009–2020ರ ವರೆಗೆ ಪಾಮ್ ಸಂಡೆ ಗೆ ದಿನಾಂಕಗಳು
ವರ್ಷ ಪಾಶ್ಚಾತ್ಯ ಪೌರಸ್ತ್ಯ
2009 ಏಪ್ರಿಲ್ 5 ಏಪ್ರಿಲ್ 12
2010 ಮಾರ್ಚ್‌ 28
2011 ಏಪ್ರಿಲ್ 17
2012 ಎಪ್ರಿಲ್ 1 ಏಪ್ರಿಲ್ 8
2013 ಮಾರ್ಚ್‌ 24 ಏಪ್ರಿಲ್ 28
2014 ಏಪ್ರಿಲ್ 13
2015 ಮಾರ್ಚ್‌ 29 ಏಪ್ರಿಲ್ 5
2016 ಮಾರ್ಚ್‌ 20 ಏಪ್ರಿಲ್ 24
2017 ಏಪ್ರಿಲ್ 9
2018 ಮಾರ್ಚ್‌ 25 ಎಪ್ರಿಲ್ 1
2019 ಏಪ್ರಿಲ್ 14 ಏಪ್ರಿಲ್ 21
2020 ಏಪ್ರಿಲ್ 5 ಏಪ್ರಿಲ್ 12

ಮೊಸಾಯಿಕ್ ಶಾಸನ ದ ಪ್ರಕಾರ ನಿಸಾನ್ನಿಸಾನ್‌ನ ಹತ್ತನೇ ದಿನ(ಧರ್ಮಗ್ರಂಥದಲ್ಲಿ ಅವಿವ್ ಎಂದು ಹೇಳಲಾಗಿರುವ),ಪವಿತ್ರ ದಿನ(ಪಾಸ್‌ಓವರ್)ದಂದು ಕುರಿಮರಿಗಳನ್ನು ಬಲಿಕೊಡುವುದಕ್ಕೆ ಆಯ್ಕೆಮಾಡಲಾಗುತ್ತದೆ. ಇದು ವಿಜಯೋತ್ಸವದ ಪ್ರವೇಶಕ್ಕೆ ಸಂಬಂಧಿಸಿರುವುದರಿಂದ ಈ ವಿದ್ಯಮಾನವು ಭಾನುವಾರದಂದೇ ಇರುವುದಿಲ್ಲ ಎಂದು ಕೆಲವು ವ್ಯಾಖ್ಯಾನಗಳು ಹೇಳುತ್ತವೆ. ಏಕೆಂದರೆ ಕ್ರೂಶಾರೋಹಣ(ಶಿಲುಬೆಗೇರಿಸಿದ್ದು) ಬುಧವಾರ ಅಥವಾ ಶುಕ್ರವಾರ ಹದಿನಾಲ್ಕರಂದು ನಡೆದರೆ ಅವಿವ್ 10 ಭಾನುವಾರವಾಗಿರುವುದಿಲ್ಲ. ಯೇಸುವನ್ನು ಶಿಲುಬೆಗೇರಿಸಿದ ವರ್ಷದ ಈ ದಿನದಂದು ವಿಮೋಚಕ ನನ್ನು ಬಲಿಕೊಡುವ ಕುರಿಮರಿಯಂತೆ ತೋರಿಸಲಾಗುತ್ತದೆ. ಇದು ಅವನು ಇಸ್ರೇಲ್ ನ ನರಳುವ ಸೇವಕನಾಗುವ ಸನ್ನಿಹಿತ ಪಾತ್ರವನ್ನು ಸಾರುತ್ತದೆ (ಐಸಾಯಾ 53, ಜೆಕರಾಯಾ 12:10).

ಸೃಷ್ಟಿಕರ್ತನ ಧಾರ್ಮಿಕಗ್ರಂಧದಲ್ಲಿ ಬರೆದಿರುವ ವಾರದಲ್ಲಿ ಎರಡುದಿನ ನಡೆಯುವ ಹಬ್ಬದ(ಹಳೆಯ ಒಡಬಂಡಿಕೆ ಹಬ್ಬಗಳು ಎಂದು ತಪ್ಪಾಗಿ ಕಾಣಲಾಗಿದೆ) ಮೊದಲನೆಯ ದಿನ, ಯಾವುದೇ ದಿನದಂದು ಬಂದರೂ ಕೂಡ ಅದನ್ನು ಯಾವಾಗಲು ಸಬ್ಬತ್ ದಿನವೆಂದು ಪರಿಗಣಿಸಲಾಗುತ್ತದೆ (ಉದಾಹರಣೆಗೆ ಫೀಸ್ಟ್ ಆಫ್ ಅನ್‌ಲೀವಂಡ್ ಬ್ರೆಡ್ ಮತ್ತು ಫೀಸ್ಟ್ ಆಫ್ ಬೂತ್ಸ್). ಹುದುಗಿಲ್ಲದೇ ತಯಾರಿಸಿದ ಬ್ರೆಡ್ ನ ಹಬ್ಬವು ಯಾವಾಗಲು ಅವಿವ್ 15 ನೇ ತಾರೀಖಿನಂದು ಆರಂಭವಾಗುತ್ತದೆ. ಪವಿತ್ರ ದಿನ(ಪಾಸ್‌ಓವರ್) ಸಂಜೆಯ ಮೊದಲು ಆಚರಿಸಲಾಗುತ್ತದೆ. ಅವಿವ್ 15 ನೇ ತಾರೀಖು ಸಬ್ಬತ್ ಆಗಿದ್ದರೆ ಆಗ ಸಿದ್ಧತೆಯದಿನ (ಮ್ಯಾಥಿವ್ 27:62) ಶುಕ್ರವಾರ 14 ನೇ ತಾರೀಖು ಅಥವಾ ಗುಡ್ ಫ್ರೈಡೆಯಾಗಿರುತ್ತದೆ. ಯಾವುದೇ ಹಬ್ಬದಲ್ಲಿ ಪಾಮ್ ಸಂಡೆ ಹಬ್ಬ ನಿಜವಾಗಿ (John 12:1-12) ಐದು ದಿನಕ್ಕಿಂತ ಮೊದಲು ಸೋಮವಾರ ವಾಸ್ತವವಾಗಿ ನಡೆಯಿತೆಂದು ತಿಳಿಯಲಾಗಿದೆ.

ಆದರೂ ಅವಿವ್ 15 ಶುಕ್ರವಾರ ವಾದರೆ ಆಗ ವಿಮೋಚಕ ನನ್ನು ನಿಜವಾಗಿ ಗುರುವಾರ, ಸಿದ್ಧತಾ ದಿನದಂದು(ಪ್ರಿಪರೇಶನ್ ಡೇ) ಶಿಲುಬೆಗೇರಿಸಲಾಗಿರುತ್ತದೆ. ಶುಕ್ರವಾರ ವಿಶೇಷವಾದ ಸಬ್ಬತ್ ದಿನವಾಗುವ ಮೂಲಕ ಅತ್ಯಂತ ಪವಿತ್ರವಾದ ದಿನ(ಜಾನ್ 19:31) ಮತ್ತು ಪಾಮ್ ಸಂಡೆಯ ವಿದ್ಯಮಾನಗಳು ಅವಿವ್ 10ನೇ ತಾರೀಖಿನಂದು ದಿನದ ಕೊನೆಯಲ್ಲಿ (Mark 11:11) ಸಂಭವಿಸಿರುತ್ತದೆ. ಈ ಕಾರಣದಿಂದ ಆ ವಾರದ ನಂತರದ ದಿನ ಸಿದ್ಧತಾ ದಿನವಾದ ಗುರುವಾರವಾಗಿರುತ್ತದೆ. ಶುಕ್ರವಾರ ವಿಶೇಷ ಸಿಬ್ಬತ್ ದಿನವಾಗಿದ್ದು, ವಾರದ 7ನೆಯ ದಿನವಾದ ಕಾಯಂ ಶಬ್ಬತ್ ಅನುಸರಿಸುತ್ತದೆ.

ಆದ್ದರಿಂದ ವಿಜಯೋತ್ಸವದ ಪ್ರವೇಶಕ್ಕೂ ಮತ್ತು ಹತ್ತನೇ ದಿನದಂದು ಆಯ್ಕೆಮಾಡುವ ಪಾಸೋವರ್ ದಿನ ಬಲಿಕೊಡುವ ಕುರಿಮರಿಗೂ ಸಂಬಂಧವಿದ್ದಿದ್ದರೆ ವಿಮೋಚಕನನ್ನು ಗುರುವಾರವೇ ಶಿಲುಬೆಗೇರಿಸಿರುತ್ತಿದ್ದರು ಅಥವಾ ಪಾಮ್ ಸಂಡೆ ಹಬ್ಬ ಸೋಮವಾರ ಇರುತ್ತಿತ್ತು. ಮತ್ತೊಂದು ರೀತಿಯಲ್ಲಿ ವಿಮೋಚಕನನ್ನು ಶುಕ್ರವಾರ ಅವಿವ್ 15ನೇ ತಾರೀಖಿನಂದು ಶಿಲುಬೆಗೇರಿಸಲಾಯಿತು ಎಂದು ಕೂಡ ಅರ್ಥೈಸಬಹುದು. ಲಭ್ಯವಿರುವ ಮಾಹಿತಿಗಾಗಿ ಕ್ರೋನೋಲಜಿ ಆಫ್ ಜೀಸಸ್ ಲೇಖನವನ್ನು ನೋಡಿ.

ಕೊನೆಯದಾಗಿ Matt 12:40 ದಲ್ಲಿ ವಿಮೋಚಕ ಹೇಳಿರುವ ಭವಿಷ್ಯವಾಣಿಯನ್ನು ನಿಜವಾಗಿಸಲು (ಪೂರೈಸಲು) Matt 12:40ವಿಮೋಚಕ ಬುಧುವಾರ ಸಾವನ್ನಪ್ಪಬೇಕು. ಮಾರನೆಯ ದಿನ ಅವಿವ್ 15 ನೇ ತಾರೀಖಿನ ವಿಶೇಷ ಸಬ್ಬತ್ ನ ನಂತರ ಶುಕ್ರವಾರ ಮಹಿಳೆಯರು ಮಾರುಕಟ್ಟೆಗೆ ಹೋಗಿ, ವಿಶೇಷ ಸಬ್ಬತ್ ನಂತರ, ವಾರದ ಸಬ್ಬತ್ ನ ಮೊದಲು ಸಂಬಾರ ಪದಾರ್ಥಗಳನ್ನು ಖರೀದಿಸುತ್ತಾರೆ.Mark 16:1

ಕೊನೆಯದಾಗಿ ಅವಿವ್ 10 ನೇ ತಾರೀಖು ಹುದುಗಿಲ್ಲದ ಬ್ರೆಡ್ ಬೋಜನಕೂಟಕ್ಕೆ ಮುಂಚಿತವಾಗಿ ವಾರದ ಶಬ್ಬತ್ ದಿನ ಬೀಳುತ್ತದೆಂದು ಅರ್ಥ. ವಿಮೋಚಕ ಬುಧವಾರ ಮರಣಹೊಂದಿದ ಮತ್ತು ಶನಿವಾರ ಸಂಜೆ ಸೂರ್ಯಾಸ್ತದ ಸ್ವಲ್ಪ ನಂತರ,ಇದು ವಾರದ ಮೊದಲ ದಿನ(ಆದರೆ ಭಾನುವಾರವಲ್ಲ) ಮರುಜೀವ ಪಡೆದು,ಈ ಭವಿಷ್ಯವಾಣಿಯನ್ನು ಕೂಡ ಪೂರೈಸಿದ.

ಆರಾಧಾನ ವಿಧಾನದಲ್ಲಿ ಆಚರಣೆ[ಬದಲಾಯಿಸಿ]

ಇಂಡಿಯಾದ ಪೌರಸ್ತ್ಯ ಸಾಂಪ್ರದಾಯಿಕ ಚರ್ಚ್ ಗಳ ಸಮೂಹಗಳು ಪಾಮ್ ಸಂಡೆ ಮೆರವಣಿಗೆಗಾಗಿ ತಾಳೆಗರಿಗಳನ್ನು ಸಂಗ್ರಹಿಸುತ್ತವೆ( ಛಾಯಾಚಿತ್ರದಲ್ಲಿ ಪ್ರಧಾನ ಬಲಿಪೀಠದ ಅಂಕಣದ ಎಡಬದಿಯಲ್ಲಿರುವ ಪುರುಷರ ಸಮೂಹ; ಛಾಯಾಚಿತ್ರದ ಹೊರಗೆ ಧಾರ್ಮಿಕ ಕೂಟದ ಮಹಿಳೆಯರು ಪ್ರಧಾನ ಬಲಿಪೀಠದ ಅಂಕಣದ ಬಲಬದಿಯಲ್ಲಿ ಅವರ ಗರಿಗಳನ್ನು ಸಂಗ್ರಹಿಸುತ್ತಿರುವುದು.

ಪಾಶ್ಚಾತ್ಯ ಕ್ರೈಸ್ತಧರ್ಮ[ಬದಲಾಯಿಸಿ]

ಪಾಮ್ ಸಂಡೆ ಯ ದಿನ ರೋಮನ್ ಕ್ಯಾಥೋಲಿಕ್ ಚರ್ಚ್ ಮತ್ತು ಅನೇಕ ಅಂಗ್ಲಿಕ್ಯಾನ್ ಮತ್ತು ಲ್ಯೂತರ್ ಚರ್ಚ್ ಗಳಲ್ಲಿ ತಾಳೆಗರಿಗಳಿಗೆ (ಅಥವಾ ಚಳಿಗಾಲದ ಸಮಯದಲ್ಲಿ ಇದರ ಬದಲಿಗೆ ಬೇರೆ ರೀತಿಯವು) ಚರ್ಚ್ ಕಟ್ಟಡದ ಹಜಾರದಲ್ಲಿ(ಅಥವಾ ವರ್ಷದ ಪೂರ್ವಾರ್ಧದಲ್ಲಿ ಈಸ್ಟರ್ ಹಬ್ಬದ ಸಮಯ ಚಳಿಗಾಲದಲ್ಲಿ ಪ್ರಾಚೀನ ಚರ್ಚ್ ಗಳ ಮುಖಮಂಟಪದಲ್ಲಿ) ತೀರ್ಥಕುಂಚದಿಂದ ಪವಿತ್ರ ಗೊಳಿಸಲಾಗುತ್ತದೆ. ಮೆರವಣಿಗೆಯೂ ಕೂಡ ನಡೆಯುತ್ತದೆ. ಇದು ಪಾದ್ರಿ ಮತ್ತು ಪಾದ್ರಿಯ ಅನುಚರರನ್ನೊಳಗೊಂಡ ಸಾರ್ವಜನಿಕ ಆರಾಧನೆಗೆ ಸಂಬಂಧಿಸಿದ ಸಹಜವಾದ ಮೆರವಣಿಗೆಯನ್ನು, ಪ್ಯಾರಿಷ್ ಚರ್ಚಿನ ಗಾಯಕವೃಂದವನ್ನು, ಪ್ಯಾರಿಷ್ ನ ಮಕ್ಕಳನ್ನು ಅಥವಾ ಪೂರ್ವದ ಚರ್ಚ್‌ಗಳಂತೆ ಇಡೀ ಧಾರ್ಮಿಕ ಕೂಟಗಳನ್ನು ಒಳಗೊಂಡಿರಬಹುದು.

ಅನೇಕ ಪ್ರೊಟೆಸ್ಟೆಂಟ್ ಚರ್ಚ್ ಗಳಲ್ಲಿ, ಹಿರಿಯರು ಕುಳಿತಿರುವಾಗ ಮಕ್ಕಳಿಗೆ ತಾಳೆಗರಿಗಳನ್ನು ಕೊಡಲಾಗುತ್ತದೆ, ನಂತರ ಚರ್ಚ್ ನ ಒಳಭಾಗದ ಸುತ್ತಲೂ ಮೆರವಣಿಗೆಯಲ್ಲಿ ತೆರಳುತ್ತಾರೆ.

ತಾಳೆಗರಿಗಳನ್ನು ಆಶ್ ವೆಡ್‌ನೆಸ್‌ಡೆ ಸೇವೆಯಲ್ಲಿ ಬಳಸುವ ಬೂದಿಯ ಮೂಲವಾಗಿ ನಂತರದ ವರ್ಷದಲ್ಲಿ ಸುಡಲು ಅನೇಕ ಚರ್ಚ್‌ಗಳಲ್ಲಿ ಉಳಿಸಲಾಗುತ್ತದೆ. ರೋಮನ್ ಕ್ಯಾಥೋಲಿಕ್ ಚರ್ಚ್ ತಾಳೆಗರಿಗಳನ್ನು ಮತಸಂಸ್ಕಾರ ಆಚರಣೆಗಳೆಂದು ಪರಿಗಣಿಸುತ್ತದೆ. ಆ ದಿನದ ಉಡುಪು ದಟ್ಟವಾದ ಕಡುಕೆಂಪು ರಕ್ತದ ಬಣ್ಣದಲ್ಲಿರುತ್ತದೆ. ಜೆರುಸಲೆಂನಲ್ಲಿ ಅವನ ಶಿಲುಬೆಯಲ್ಲಿನ ಯಾತನೆ ಮತ್ತು ಪುನರುತ್ಥಾನವನ್ನು ಪೂರೈಸುವ ಸಲುವಾಗಿ ಅತ್ಯುಚ್ಚ ಉದ್ಧಾರಕ ತ್ಯಾಗಮೂರ್ತಿ ಕ್ರಿಸ್ತ ನಗರವನ್ನು ಪ್ರವೇಶಿಸುವಾಗ ಸ್ವಾಗತಿಸುವುದನ್ನು ಇದು ಸೂಚಿಸುತ್ತದೆ.

ಚಿತ್ರ:DSCF7575.JPG
ಪ್ರಾಚೀನ ಲೆವಂಟೀನ್ ಕ್ರೈಸ್ತಧರ್ಮದ ಮತಾಚಾರಣೆಯಲ್ಲಿ ಪೌರಸ್ತ್ಯ ಸಾಂಪ್ರದಾಯಿಕ ಧಾರ್ಮಿಕ ಕೂಟವು ಭಾರತದಲ್ಲಿ ಪಾಮ್ ಸಂಡೆ ಯ ದಿನದಂದು ತಾಳೆಗರಿಗಳೊಂದಿಗೆ ಅದರ ಚರ್ಚ್ ಹೊರಗೆ ಪ್ರಕ್ರಿಯೆಗಳನ್ನು ನಡೆಸುತ್ತದೆ. ನಂತರ ಪೌರಸ್ತ್ಯ ಸಂಪ್ರದಾಯ,ಪಾಶ್ಚಿಮಾತ್ಯ ಕ್ಯಾಥೋಲಿಕ್ ಮತ್ತು ಪ್ರೊಟೆಸ್ಟಂಟ್ ಮತಾಚರಣೆಗಳಲ್ಲಿ ಇದು ದುರ್ಬಲ ರೂಪದಲ್ಲಿ ಮುಂದುವರೆಯಿತು.

ಇತ್ತೀಚೆಗೆ ಬಿಷಪ್ಪುಗಳ ಮತ್ತು ಇಂಗ್ಲೀಷರ ಚರ್ಚ್ ಗಳಲ್ಲಿ ಹಾಗು ಲ್ಯೂತರ್ ಚರ್ಚ್ ಗಳಲ್ಲಿ ಈ ದಿನವನ್ನು ಅಧಿಕೃತವಾಗಿ ದಿ ಸಂಡೆ ಆಫ್ ದಿ ಪ್ಯಾಷನ್: ಪಾಮ್ ಸಂಡೆ ಎಂದು ಕರೆಯಲಾಗುತ್ತದೆ; ಆದರೂ ರೂಢಿಗತವಾಗಿ ದಿನ ನಿತ್ಯದ ಪ್ರಾರ್ಥನೆ (ಕಾಮನ್ ಪ್ರೇಯರ್)ಯ ಐತಿಹಾಸಿಕ ಪುಸ್ತಕದಲ್ಲಿ ಮತ್ತು ಲ್ಯೂತರ್ ಆರಾಧನಾ ವಿಧಾನಗಳಲ್ಲಿ ಮತ್ತು ಕ್ಯಾಲೆಂಡರ್ ಗಳಲ್ಲಿ ಕೊಟ್ಟಿರುವಂತೆ "ಪಾಮ್ ಸಂಡೆ" ಎಂದು ಕರೆಯಲಾಗುತ್ತದೆ. ಸಾಂಪ್ರದಾಯಿಕ ಕ್ಯಾಲೆಂಡರ್ ನಲ್ಲಿರುವ "ಪ್ಯಾಷನ್ ಸಂಡೆ" ಎಂದು ಕರೆಯುವ ಲೆಂಟ್‌ನ ಅಂತಿಮ ಭಾನುವಾರದ ಜತೆ ಉಂಟಾಗುವ ಅನಾವಶ್ಯಕ ಗೊಂದಲವನ್ನು ಈ ಮೂಲಕ ತಪ್ಪಿಸಲಾಗಿದೆ.

ಪಾಕಿಸ್ತಾನದ ಚರ್ಚ್ ನಲ್ಲಿ(ಆಂಗ್ಲ ಸಮಾಜದಸದಸ್ಯ) ಪಾಮ್ ಸಂಡೆಯ ದಿನದಂದು ಶ್ರದ್ಧಾವಂತರು Psalm 24 (ಸ್ತುತಿಗೀತೆ)ಯನ್ನು ಹಾಡುತ್ತ ತಾಳೆ ಗರಿಗಳನ್ನು(ಕೊಂಬೆ) ಚರ್ಚ್ ನ ಒಳಗೆ ಕೊಂಡೊಯ್ಯುತ್ತಾರೆ.

ಪೌರಸ್ತ್ಯ ಕ್ರೈಸ್ತಧರ್ಮ[ಬದಲಾಯಿಸಿ]

ಸಾಂಪ್ರದಾಯಿಕ ಚರ್ಚ್ ಗಳಲ್ಲಿ ಪಾಮ್ ಸಂಡೆ ಯನ್ನು ಯಾವಾಗಲು ಜರೂಸಲಮ್ ಗೆ ದೇವರ ಪ್ರವೇಶ ವೆಂದು ಕರೆಯಲಾಗುತ್ತದೆ. ವರ್ಷದ ಧಾರ್ಮಿಕ ಆಚರಣೆಗಳಲ್ಲಿ ನಡೆಯುವ ಹನ್ನೆರಡು ಶ್ರೇಷ್ಠ ಹಬ್ಬಗಳಲ್ಲಿ ಇದು ಕೂಡ ಒಂದಾಗಿದೆ. ಅಲ್ಲದೇ ಇದು ಧಾರ್ಮಿಕ ಹಬ್ಬದ ಪ್ರಾರಂಭವಾಗಿದೆ. ಇದರ ಹಿಂದಿನದಿನವನ್ನು ಲಜಾರಸ್ ಶನಿವಾರ ವೆಂದು ಕರೆಯಲಾಗುತ್ತದೆ ಹಾಗು ಇದು ಸಾವಿನಿಂದ ಲಜಾರಸ್ ನ ಪುನರುತ್ಥಾನವನ್ನು ನೆನಪಿಸುತ್ತದೆ. ಪಶ್ಚಿಮದಂತೆ ಪಾಮ್ ಸಂಡೆ ಯನ್ನು ಲೆಂಟ್ ನ ಭಾಗವೆಂದು ಪರಿಗಣಿಸುವುದಿಲ್ಲ. ಪೌರಾತ್ಯ ದೇಶಗಳ ಸಾಂಪ್ರದಾಯಿಕ ಶ್ರೇಷ್ಠ ಉಪವಾಸ ಶುಕ್ರವಾರದ ಮೊದಲು ಮುಗಿಯುತ್ತದೆ. ಲಜಾರಸ್ ಶನಿವಾರ, ಪಾಮ್ ಸಂಡೆ ಮತ್ತು ಧಾರ್ಮಿಕ ಹಬ್ಬವನ್ನು ಉಪವಾಸದ ಬೇರೆ ಬೇರೆ ಅವಧಿಗಳೆಂದು ಪರಿಗಣಿಸಲಾಗುತ್ತದೆ. ಲಜಾರಸ್ ಶನಿವಾರದಂದು ಶ್ರದ್ಧಾರ್ಹರು ಭಾನುವಾರ ನಡೆಯಲಿರುವ ಮೆರವಣಿಗೆಯ ಸಿದ್ಧತೆಗೆಂದು ತಾಳೆಗರಿಗಳನ್ನು ಶಿಲುಬೆಗಳಿಗೆ ಕಟ್ಟಿ ಸಿದ್ಧಪಡಿಸುತ್ತಾರೆ. ಚರ್ಚ್ ನಲ್ಲಿ ಪರದೆಗಳನ್ನು ಮತ್ತು ವಿಧ್ಯುಕ್ತ ಉಡುಪುಗಳನ್ನು ಹಬ್ಬದ ಬಣ್ಣಕ್ಕೆ ಬದಲಾಯಿಸಲಾಗುತ್ತದೆ - ಸ್ಲಾವಿಕ್ ಸಂಪ್ರದಾಯದಲ್ಲಿ ಇದು ಸಾಮಾನ್ಯವಾಗಿ ಹಸಿರುಬಣ್ಣವಾಗಿರುತ್ತದೆ.

15 ನೇ ಶತಮಾನದಲ್ಲಿ ಟ್ವೆರ್ ನಿಂದ ಜರೂಸಲಮ್ ಗೆ ಪ್ರವೇಶಿಸುವ ರಷ್ಯನ್ ಸಾಂಪ್ರದಾಯಿಕ ಶಿಲ್ಪವಾಗಿದೆ.

ಹಬ್ಬದ ಟ್ರೊಪ್ಯಾರಿಯನ್, ಲಜಾರಸ್‌ನ ಪುನರುತ್ಥಾನವು ಯೇಸು ಕ್ರಿಸ್ತನ ಪುನರುತ್ಥಾನದ ಪೂರ್ವಚಿತ್ರಣವೆಂದು ಸೂಚಿಸುತ್ತದೆ.

ಓ ನಮ್ಮ ದೇವ ಯೇಸುಕ್ರಿಸ್ತನೆ 
ನೀನು ಶಿಲುಬೆಯ ಮೇಲೆ ಯಾತನೆ ಪಡುವ ಮೊದಲು ನೀನು ಲಾಜರಸ್ ನನ್ನು ಸಾವಿನಿಂದ ಬದುಕಿಸಿದಾಗ ,
ಸರ್ವಸೃಷ್ಟಿಯ ಪುನರುತ್ಥಾನವನ್ನು ನೀನು ದೃಢ ಪಡಿಸಿದೆ .
ಕಾರಣ, ನಾವು ಮಕ್ಕಳ ರೀತಿಯಲ್ಲಿ ,
ವಿಜಯೋತ್ಸವದ ಮತ್ತು ಗೆಲುವಿನ ಪತಾಕೆಯನ್ನು ಕೊಂಡೊಯ್ಯುತ್ತೇವೆ ,
'ಮತ್ತು ನಾವು ಕೂಗುತ್ತೇವೆ, ಓ,ಸಾವನ್ನು ಜಯಿಸಿದವನೇ ,
ಉಚ್ಚಸ್ವರದಲ್ಲಿ ಹೊಸನ್ನ ಎಂದು,
ಬಂದ ಅವರು ಧನ್ಯರು,
ದೇವರ ಹೆಸರಿನಲ್ಲಿ .
ರಷ್ಯನ್ ಸಾಂಪ್ರದಾಯಿಕ ಚರ್ಚ್, ಯೂಕ್ರೇನಿಯನ್ ಸಾಂಪ್ರದಾಯಿಕ ಚರ್ಚ್, ಯೂಕ್ರೇನಿಯನ್ ಕ್ಯಾಥೊಲಿಕ್ ಚರ್ಚ್, ಮತ್ತು ರುಥೆನಿಯನ್ ಕ್ಯಾಥೊಲಿಕ್ ಚರ್ಚ್ ನಲ್ಲಿ ತಾಳೆಗರಿಗಳ ಬದಲಿಗೆ , ಪುಸಿ ವಿಲೋ ಬಳಸುವ ಸಂಪ್ರದಾಯವನ್ನು ಬೆಳೆಸಲಾಗಿದೆ. ಏಕೆಂದರೆ ತಾಳೆಗರಿಗಳು ಅಷ್ಟು ದೂರದ ಉತ್ತರದ ಪ್ರದೇಶಗಳಲ್ಲಿ ಸುಲಭವಾಗಿ ದೊರಕುತ್ತಿರಲಿಲ್ಲ. ಯಾವ ರೀತಿಯ ಕೊಂಬೆಗಳನ್ನು ಬಳಸಬೇಕೆಂಬ ನಿಯಮಗಳಿಲ್ಲದ ಕಾರಣ ಕೆಲವು ಸಾಂಪ್ರದಾಯಿಕ ನಂಬಿಕಸ್ತರು ಆಲಿವ್ ರೆಂಬೆಗಳನ್ನು ಬಳಸುತ್ತಾರೆ. ಯಾವುದೇ ರೀತಿಯಾಗಿರಲಿ, ಹಬ್ಬದ ಹಿಂದಿನ ದಿನದಂದು(ಶನಿವಾರದ ರಾತ್ರಿಯಂದು) ಅಥವಾ ಭಾನುವಾರ ಬೆಳಗ್ಗೆ ಆಚರಿಸುವ ದೇವರ ಪ್ರಭುಭೋಜನ ಸಂಸ್ಕಾರದ ಮೊದಲು ರಾತ್ರಿ ಪೂರ್ತಿ ಮಾಡುವ ಜಾಗರಣೆಯ ಸಂದರ್ಭದಲ್ಲಿ ಈ ಗರಿಗಳನ್ನು ಪವಿತ್ರೀಕರಿಸಿಮೋಂಬತ್ತಿಗಳೊಂದಿಗೆ ವಿತರಿಸಬೇಕು.  ಶ್ರೇಷ್ಠ ಪ್ರವೇಶದ ಪ್ರಭುಭೋಜನ ಸಂಸ್ಕಾರವು "ಜರೂಸಲಮ್ ಗೆ ಪ್ರಭುವಿನ ಪ್ರವೇಶವನ್ನು" ನೆನಪಿಸುತ್ತದೆ ಹಾಗು ಪಾಮ್ ಸಂಡೆಯ ದಿನ ಪ್ರತಿಯೊಬ್ಬರು ಅವರ ಗರಿಗಳನ್ನು ಹಿಡಿದುಕೊಂಡು ಎದ್ದು ನಿಂತು ಮೊಂಬತ್ತಿಯನ್ನು ಬೆಳಗಿಸುವ ಮೂಲಕ ಈ ಕ್ಷಣದ ಅರ್ಥಪೂರ್ಣತೆಯನ್ನು ಒತ್ತಿಹೇಳುತ್ತದೆ.  ಸೇವೆಯ ಬಳಿಕ ಶ್ರದ್ಧಾವಂತ ಈ ಗರಿಗಳನ್ನು ಮತ್ತು ಮೊಬಂತ್ತಿಗಳನ್ನು ಅವನ ಜೊತೆಯಲ್ಲಿ ಮನೆಗೆ ಕೊಂಡೊಯ್ಯುವನು ಮತ್ತು ಎವೊಲ್ಗಿಯ (ಅನುಗ್ರಹ) ವೆಂಬಂತೆ ಅವುಗಳನ್ನು ಅವನ ಮನೆಯ ಪೂಜಾಸ್ಥಳದ ಮೂಲೆಯಲ್ಲಿ ಇಡುವನು. 
ಚಕ್ರವರ್ತಿ ಅಲೆಕ್ಸೈ ಮಿಚಿಲೊವಿಚ್ ನೊಡನೆ ಮಾಸ್ಕೋ ನಲ್ಲಿ ಪಾಮ್ ಸಂಡೆ ಮೆರವಣಿಗೆ, (1865 ರಲ್ಲಿ ವ್ಯಚೆಸ್ಲ್ಯಾವ್ ಗ್ರೆಗೋರಿವಿಚ್ ಸ್ಚಿವಾರ್ಸ್ ನಿಂದ ಬಿಡಿಸಲಾದ ವರ್ಣಚಿತ್ರ).

ರಷ್ಯಾದಲ್ಲಿ ಕತ್ತೆಯ ನಡಿಗೆಯ ಮೆರವಣಿಗೆ ಬೇರೆ ಬೇರೆ ನಗರಗಳಲ್ಲಿ ನಡೆಯುತ್ತದೆ. ಆದರೆ ಇದು 1558 ರಿಂದ 1693 ರವರೆಗೆ ಮಾಸ್ಕೋನಲ್ಲಿ ಮತ್ತು ನೌಗೊರೋಡ್ ನಲ್ಲಿ ಅತ್ಯಂತ ಮುಖ್ಯವಾಗಿದೆ. ಇವು ವಿದೇಶಿ ಪ್ರತ್ಯಕ್ಷದರ್ಶಿಗಳ ಸಾಕ್ಷ್ಯಗಳಲ್ಲಿ ಮುಖ್ಯವಾಗಿ ಕಾಣಿಸಿಕೊಂಡಿವೆ ಮತ್ತು ನಗರದ ಸಮಕಾಲೀನ ಪಾಶ್ಚಿಮಾತ್ಯ ನಕ್ಷೆಗಳಲ್ಲಿ ಪ್ರಸ್ತಾಪಿಸಲಾಗಿದೆ. ಮಾಸ್ಕೋದ ಬಿಷಪ್ "ಕತ್ತೆಯ" (ವಾಸ್ತವವಾಗಿ ಬಿಳಿಯ ಬಟ್ಟೆಯನ್ನು ಹೊದಿಸಿರುವ ಕುದುರೆ)ಮೇಲೆ ಸವಾರಿ ಮಾಡುವ ಮೂಲಕ ಕ್ರಿಸ್ತನನ್ನು ಪ್ರತಿನಿಧಿಸುತ್ತಾನೆ; ಜಾರ್ ಆಫ್ ರಷ್ಯಾ ನಮ್ರತೆಯಿಂದ ಮೆರವಣಿಗೆಯಲ್ಲಿ ನಡೆದುಕೊಂಡುಬರುತ್ತಾನೆ. ಮಾಸ್ಕೋ ಮೆರವಣಿಗೆಗಳು ಮೂಲತಃ ಕ್ರೆಮ್ಲಿನ್ ನ(ಕೋಟೆಯ) ಒಳಗಿನಿಂದ ಪ್ರಾರಂಭವಾಗಿ ಈಗ ಸೆಂಟ್ ಬ್ಯಾಸಿಲ್ಸ್ ಕ್ಯಾಥಡ್ರಲ್ಸ್ ಎಂದು ಹೆಸರಾಗಿರುವ ಟ್ರಿನಿಟಿ ಚರ್ಚ್ ನಲ್ಲಿ ಮುಗಿಯುತ್ತದೆ. ಆದರೆ ಬಿಷಪ್ ನಿಕಾನ್ ಮೆರವಣಿಗೆಯ ಕ್ರಮವನ್ನು 1658 ರಲ್ಲಿ ಬದಲಾಯಿಸಿದ. ಪೀಟರ್ I ಚರ್ಚ್ ಗಳನ್ನು ರಾಷ್ಟ್ರೀಕರಿಸುವ ಉದ್ದೇಶಕ್ಕಾಗಿ ಈ ಸಂಪ್ರದಾಯವನ್ನು ಕೊನೆಗೊಳಿಸಿದನು; ಇದು ಸಾಂದರ್ಭಿಕವಾಗಿ 21 ನೇ ಶತಮಾನದಲ್ಲಿ ಪುನರ್‌ಸೃಷ್ಟಿಸಲಾಯಿತು.

ಪೌರಸ್ತ್ಯ ಸಾಂಪ್ರದಾಯಿಕ ಚರ್ಚ್ ಗಳಲ್ಲಿ ತಾಳೆಗರಿಗಳನ್ನು ಚರ್ಚ್ ನ ಎದುರಿಗೆ ಪ್ರಧಾನ ಬಲಿಪೀಠದ ಅಂಕಣದ ಮೆಟ್ಟಿಲುಗಳ ಮೇಲೆ ವಿತರಿಸಲಾಗುತ್ತದೆ. ಭಾರತದಲ್ಲಿ ಪ್ರಧಾನ ಅಂಕಣದಲ್ಲೇ ಚೆಂಡುಮಲ್ಲಿಗೆ ಹೂಗಳನ್ನು ಚೆಲ್ಲಲಾಗಿರುತ್ತದೆ ಹಾಗು ಧಾರ್ಮಿಕಕೂಟದ ಪ್ರಕ್ರಿಯೆಯು ಚರ್ಚ್ ಮೂಲಕ ಮತ್ತು ಹೊರಗೆ ನಡೆಯುತ್ತದೆ.

ಸಂಪ್ರದಾಯಗಳು[ಬದಲಾಯಿಸಿ]

ಪೋಲೆಂಡ್ ನ ಲಿಪ್ನಿಕ ಮರೊವನ ಹಳ್ಳಿಯ ಪಾಮ್ ಸಂಡೆ

ಪಾಮ್ ಸಂಡೆಯ ದಿನ ಆರಾಧಕರು ತಾಜಾ ತಾಳೆಗರಿ(ತಾಳೆ ಎಲೆಗಳನ್ನು)ಗಳನ್ನು ಪಡೆದುಕೊಳ್ಳಬೇಕೆಂಬುದು ಅನೇಕ ಚರ್ಚ್ ಗಳಲ್ಲಿ ಸಂಪ್ರದಾಯವಾಗಿದೆ. ಪ್ರಪಂಚದ ಭಾಗಗಳಲ್ಲಿ ಇದು ಐತಿಹಾಸಿಕವಾಗಿ ಕಾರ್ಯಸಾಧ್ಯವಲ್ಲದ ಪ್ರದೇಶದಲ್ಲಿ ಪರ್ಯಾಯ ಸಂಪ್ರದಾಯಗಳು ಉದ್ಭವಿಸಿವೆ.

ಜೋರ್ಡನ್ ಮತ್ತು ಇಸ್ರೇಲ್[ಬದಲಾಯಿಸಿ]

ಸಾಂಪ್ರದಾಯಿಕ, ಕ್ಯಾಥೊಲಿಕ್(ಲ್ಯಾಟಿನ್ ಚರ್ಚ್ ಮತ್ತು ಪ್ರಾಚ್ಯ ದೇಶಗಳ ಚರ್ಚ್), ಮತ್ತು ಆಂಗ್ಲಿಕನ್ ಚರ್ಚ್ ಗಳ ನಡುವೆಜೋರ್ಡನ್ ಮತ್ತು ಇಸ್ರೇಲ್ ನಲ್ಲಿ, ಪಾಮ್ ಸಂಡೆ ಬಹುಶಃ ಕ್ರೈಸ್ತಧರ್ಮದ ಕ್ಯಾಲೆಂಡರ್ ನಲ್ಲಿರುವ ಸೇವೆಗಳಲ್ಲೆಲ್ಲಾ ಅತ್ಯಂತ ಹೆಚ್ಚು ಜನರು ಹಾಜರಾಗುವ ಸೇವೆಯಾಗಿದೆ. ಏಕೆಂದರೆ ಬಹುಶಃ ಇದು ವಿಶೇಷವಾಗಿ ಕೌಟುಂಬಿಕ ಉತ್ಸವವಾಗಿದೆ. ಈ ದಿನದಂದು ಮಕ್ಕಳು ಆಲಿವ್ ಮತ್ತು ತಾಳೆ ಮರದ ರೆಂಬೆಗಳೊಂದಿಗೆ ಚರ್ಚ್‌ಗೆ ಹೋಗುತ್ತಾರೆ. ತಾಳೆಗರಿಗಳು ಮತ್ತು ಗುಲಾಬಿಗಳಿಂದ ನಿರ್ಮಿಸಿದ ಎಚ್ಚರಿಕೆಯಿಂದ ಹೆಣೆಯಲಾದ ಶಿಲುಬೆಗಳನ್ನು ಮತ್ತು ಇತರ ಚಿಹ್ನೆಗಳೂ ಇರುತ್ತವೆ. ಸಾಮಾನ್ಯವಾಗಿ ಸೇವಾ ಕಾರ್ಯದ ಪ್ರಾರಂಭದಲ್ಲಿ ಮೆರವಣಿಗೆ ಇರುತ್ತದೆ ಹಾಗು ಒಂದು ಹಂತದಲ್ಲಿ ಕ್ರೈಸ್ತ ಪಾದ್ರಿ ಆಲಿವ್ ಗರಿಗಳನ್ನು ತೆಗೆದುಕೊಂಡು ಭಕ್ತರ ಮೇಲೆ ಪವಿತ್ರೋದಕವನ್ನು ಸಿಂಪಡಿಸುತ್ತಾರೆ.

ಲಾಟ್ವಿಯ[ಬದಲಾಯಿಸಿ]

ಲಾಟ್ವಿಯ, ಪಾಮ್ ಸಂಡೆ ಯನ್ನು "ಪುಸ್ಸಿ ವಿಲೋ ಸಂಡೆ" ಎಂದು ಕರೆಯಲಾಗುತ್ತದೆ. ಪುಸ್ಸಿ ವಿಲೋಗಳು ಹೊಸ ಜೀವನವನ್ನು ಸಂಕೇತಿಸುತ್ತವೆ. ಅವುಗಳನ್ನು ಅನುಗ್ರಹಿಸಿ ಶ್ರದ್ಧಾವಂತನಿಗೆ ವಿತರಿಸಲಾಗುತ್ತದೆ[೧] Archived 2007-10-27 ವೇಬ್ಯಾಕ್ ಮೆಷಿನ್ ನಲ್ಲಿ.. ಮಕ್ಕಳನ್ನು ಆ ದಿನ ಬೆಳಿಗ್ಗೆ ಮತಾಚರಣೆಗೆ ಸಂಬಂಧಿಸಿದಂತೆ ವಿಲೋ ಗರಿ(ರೆಂಬೆ)ಯಿಂದ ಹೊಡೆದು ಎಬ್ಬಿಸಲಾಗುತ್ತದೆ. ಜನರು ಕೂಡ ಒಬ್ಬರು ಮತ್ತೊಬ್ಬರನ್ನು ಹಿಡಿದು ಒಬ್ಬರು ಮತ್ತೊಬ್ಬರಿಗೆ ಗರಿಗಳಿಂದ ಹೊಡೆಯುತ್ತಾರೆ[೨].

ಭಾರತ[ಬದಲಾಯಿಸಿ]

ಪಾಮ್ ಸಂಡೆ ಯ ದಿನದಂದು ಭಾರತದ ಮುಂಬೈನ ಪೌರಸ್ತ್ಯ ಸಾಂಪ್ರದಾಯಿಕ ಚರ್ಚ್ ನಲ್ಲಿ ಪ್ರಧಾನ ಬಲಿಪೀಠವಿರುವ ಅಂಕಣದ ಕಡೆಗೆ ಹೂವನ್ನು(ಈ ದೃಷ್ಟಾಂತದಲ್ಲಿ ಚೆಂಡುಮಲ್ಲಿಗೆ ಹೂಗಳು)ಚೆಲ್ಲುತ್ತಿರುವುದು.

ದಕ್ಷಿಣ ಭಾರತದ ರಾಜ್ಯವಾದ ಕೇರಳದಲ್ಲಿ ( ಮತ್ತು ಭಾರತೀಯ ಸಂಪ್ರದಾಯದ, ಸಿರೊ ಮಲಂಕರ ಕ್ಯಾಥೊಲಿಕ್ ಚರ್ಚ್ ಮತ್ತು ಸಿರಿಯನ್ ಸಾಂಪ್ರದಾಯಿಕ ಚರ್ಚ್ (ಜಾಕೋಬೈಟ್), ಭಾರತದ ಇತರ ಭಾಗಗಳಲ್ಲಿ ಮತ್ತು ಪಶ್ಚಿಮದುದ್ದಕ್ಕೂ ಇರುವ ಕೂಟಗಳು) ಪಾಮ್ ಸಂಡೆಯ ದಿನದಂದು ಸುವಾರ್ತೆಯನ್ನು ಓದುವ ಸಂದರ್ಭದಲ್ಲಿ ಯೇಸುಕ್ರಿಸ್ತನನ್ನು ಸ್ವಾಗತಿಸುತ್ತ ಜನ ಸಮೂಹ "ಹೊಸನ್ನ! ಎಂದು ಕೂಗುವ ಕೂಗಿನೊಂದಿಗೆ ಪ್ರಧಾನ ಬಲಿಪೀಠದ ಅಂಕಣಕ್ಕೆ ಹೂಗಳನ್ನು ಚೆಲ್ಲಲಾಗುತ್ತದೆ. ಬ್ಲೆಸ್ಡ್ ಈಸ್ ಹಿ ಹು ಈಸ್ ಕಮ್ ಎಂಡ್ ಈಸ್ ಟು ಕಮ್ ಇನ್ ದಿ ನೇಮ್ ಆಫ್ ದಿ ಲಾರ್ಡ್ ಗಾಡ್." ಈ ಪದಗಳನ್ನು ಸಮೂಹದಲ್ಲಿ ಮೂರು ಬಾರಿ ಓದಲಾಗುತ್ತದೆ. ನಂತರ ಸಮೂಹ "ಹೊಸನ್ನ!" ವನ್ನು ಪುನರುಚ್ಚರಿಸುತ್ತದೆ. ಹಾಗು ಹೂಗಳನ್ನು ಚೆಲ್ಲುತ್ತದೆ. ಇದು ಪೂರ್ವ-ಕ್ರೈಸ್ತ ಹಿಂದೂ ಆಚರಣೆಗಳಲ್ಲಿ ಹಬ್ಬದ ಸಂದರ್ಭಗಳಲ್ಲಿ ಹೂವುಗಳನ್ನು ಚೆಲ್ಲುವುದನ್ನು ಪ್ರತಿಧ್ವನಿಸುತ್ತದೆ; ಆದಾಗ್ಯೂ, ಇದು ಜರೂಸಲಮ್ ಗೆ ಯೇಸುಕ್ರಿಸ್ತನ ಪ್ರವೇಶದ ಬಗ್ಗೆ ಅವನಿಗೆ ಸೂಚಿಸುವ ಗೌರವವನ್ನು ಪ್ರತಿಧ್ವನಿಸುತ್ತದೆ. AD 52 ರಲ್ಲಿ ಬಂದ ಏಸುದೂತ ಸೆಂಟ್ ಥಾಮಸ್ ನ ಆಗಮನದಿಂದ (ಸಂಪ್ರದಾಯದ ಪ್ರಕಾರ) ಹಾಗು ಮಲಬಾರ್ ತೀರದ ಬ್ರಾಹ್ಮಣರಿಗೆ ಮತ್ತು ಅಲ್ಲಿದ್ದ ಪ್ರಾಚೀನ ಯೆಹೂದಿ ಸಮುದಾಯದವರಿಗೆ ಅವನು ಸುವಾರ್ತೆಯನ್ನು ಭೋಧಿಸುವ ಮೂಲಕ ಭಾರತೀಯ ಸಂಪ್ರದಾಯ ತನ್ನ ಮೂಲವನ್ನು ಕಂಡುಕೊಂಡಿದೆ. ಇದರ ಮತಾಚರಣೆಗಳು ಮತ್ತು ಆಚರಣೆಗಳು ಹಿಂದೂ ಮತ್ತು ಯೆಹೂದಿ ಎರಡೂ ಹಾಗು ಮೂಲದಲ್ಲಿ ಲೆವಂಟೇನ್ ಕ್ರೈಸ್ತಧರ್ಮದಂತಿದೆ.

ಸ್ಪೇನ್‌[ಬದಲಾಯಿಸಿ]

ಯುರೋಪ್ ನಲ್ಲೇ ಅತ್ಯಂತ ಹೆಚ್ಚಾಗಿ ತಾಳೆಮರದ ತೋಟಗಳಿರುವ ಸ್ಥಳವಾದ ಸ್ಪೇನ್ ಎಲೆಕ್ಸ್ ನಲ್ಲಿ ತಾಳೆಗರಿಗಳನ್ನು ಸೂರ್ಯನ ಬೆಳಕಿಗೆ ಬಿಳಿಯಾಗದಂತೆ ತಡೆಯಲು ಅವುಗಳನ್ನು ಕಟ್ಟಿ ಮುಚ್ಚಿಡುವುದು ಹಾಗು ನಂತರ ಅವುಗಳನ್ನು ಒಣಗಿಸಿ ದೊಡ್ಡ ಆಕಾರಗಳಲ್ಲಿ ಹೆಣೆಯುವ ಸಂಪ್ರದಾಯವಿದೆ.

ಪ್ರಾಸಬದ್ಧ ಸ್ಪ್ಯಾನಿಷ್ ಗಾದೆ ಈ ಕೆಳಕಂಡಂತೆ ಹೇಳಿದೆ: ಡಾಮಿನೊ ದೆ ರಾಮೋಸ್ , ಕ್ವೀನ್ ನೋ ಈಸ್ಟರ್ನ್ ಅಲ್ಗೊ, ಸೆ ಲೆ, ಕೇನ್ ಲಾಸ್ ಮನೂಸ್ (" ಪಾಮ್ ಸಂಡೆ ಯ ದಿನದಂದು, ಯಾರು ಹೊಸದನ್ನು ಧರಿಸಲು ವಿಫಲರಾಗುತ್ತಾರೊ ಅಂಥವರ ಕೈ ಗಳು ಕೆಳಗಿಳಿಯುತ್ತವೆ").

ಮಾಲ್ಟಾ[ಬದಲಾಯಿಸಿ]

ಮಾಲ್ಟಾ ಮತ್ತು ಗೋಜೋದಲ್ಲಿನ ಎಲ್ಲಾ ಪ್ಯಾರಿಷ್‌ಗಳು(ಪಾದ್ರಿಹೋಬಳಿಗಳು) ಪಾಮ್ ಸಂಡೆಯ ದಿನದಂದು (ಮಾಲ್ಟೀಸ್ Ħadd ಇಲ್-ಪಾಮ್ ನಲ್ಲಿ) ತಾಳೆಗರಿಗಳನ್ನು ಮತ್ತು ಆಲಿವ್ ಗರಿಗಳನ್ನು ಪವಿತ್ರಗೊಳಿಸುತ್ತಾರೆ. ಗುಡ್ ಫ್ರೈಡೆಯ ಪ್ರತಿಮೆಗಳನ್ನು ಹೊಂದಿರುವ ಪ್ಯಾರಿಷ್‌ಗಳು ಆಲಿವ್ ಮರವನ್ನು ಪವಿತ್ರಗೊಳಿಸಿ ಅದರ ಗರಿಗಳನ್ನು ಆಲಿವ್ ಗಾರ್ಡನ್(ತೋಟ) ನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ಯೇಸುಕ್ರಿಸ್ತ ನ ಪ್ರತಿಮೆ ಯ (Ġesù fl-Ort)ಮೇಲೆ ಮತ್ತು ಜೂಡಾಸ್ ನಂಬಿಕೆದ್ರೋಹ ದ ಪ್ರತಿಮೆಯ (il-Bewsa ta' Ġuda)ಮೇಲೆ ಹಾಕುತ್ತಾರೆ. ಅಲ್ಲದೇ ಪವಿತ್ರಗೊಳಿಸಿದ ಆಲಿವ್ ಗರಿಗಳು ಕಾಯಿಲೆಗಳನ್ನು ಮತ್ತು ಕೆಟ್ಟ ದೃಷ್ಟಿಗಳಿಂದ(l-għajn ħażina or is-seħta) ದೂರವಿರಿಸುತ್ತವೆ ಎಂದು ಅನೇಕ ಜನರು ಆಲಿವ್ ನ ಸ್ವಲ್ಪ ಗರಿಗಳನ್ನು ತಮ್ಮ ಮನೆಗೆ ಕೊಂಡೊಯ್ಯುತ್ತಾರೆ.

ನೆದರ್ಲೆಂಡ್ಸ್[ಬದಲಾಯಿಸಿ]

ನೆದರ್ಲೆಂಡ್ಸ್‌ನ ಸ್ಯಾಕ್ಸಾನ್ ಪ್ರದೇಶದಲ್ಲಿ ಶಿಲುಬೆಗಳನ್ನು ಹುಂಜದ ರೂಪದಲ್ಲಿ ನಿರ್ಮಿಸಿ ಸಕ್ಕರೆ ಮಿಠಾಯಿ ಮತ್ತು ಬ್ರೆಡ್ ನಿಂದ ಅಲಂಕರಿಸಲಾಗುತ್ತದೆ. ಗ್ರೊನೈನ್ ಜೆನ್-ಲೀವಾರ್ಡನ್‌ ನ ಬಿಷಪ್ ಆಡಳಿತ ಪ್ರದೇಶದಲ್ಲಿ ಪಾಮ್ ಸಂಡೆ ಯ ಮುಂಚಿನ ದಿನ ರಾತ್ರಿ ವಾರ್‌ಫುಯಿಜೆ‌ನ್‌ನ ಶೋಕತಪ್ತ ತಾಯಿಯ ಗೌರವಾರ್ಥವಾಗಿ ಎಣ್ಣೆಯ ದೀಪಗಳೊಂದಿಗೆ ಮಹಾ ಮೆರವಣಿಗೆ ನಡೆಸಲಾಗುತ್ತದೆ.

ಪೊಲೆಂಡ್[ಬದಲಾಯಿಸಿ]

ಅನೇಕ ಪಾಲಿಷ್ ನಗರಗಳು ಮತ್ತು ಹಳ್ಳಿಗಳು (ಮಲೊಪೊಲ್ಸ್ಕಲಿಪ್ನಿಕ ಮುರೊವನ ಮತ್ತು ಪೊಡಲೈಸೆಯ ಲಿಸೆ ಇದಕ್ಕೆ ಹೆಸರುವಾಸಿಯಾಗಿವೆ) ಕೃತಕ ತಾಳೆಮರಗಳ ಸ್ಪರ್ಧೆಗಳನ್ನು ಆಯೋಜಿಸುತ್ತದೆ. ಅವುಗಳಲ್ಲಿ ಸುಮಾರು 30 ಮೀಟರ್ ನಷ್ಟು ಎತ್ತರವನ್ನು ಮುಟ್ಟುವ ತಾಳೆಮರಗಳು ಅತ್ಯಂತ ದೊಡ್ಡ ತಾಳೆಮರಗಳಾಗಿರುತ್ತವೆ;ಉದಾಹರಣೆಗೆ 2008 ರ ಅತ್ಯಂತ ಎತ್ತರದ ತಾಳೆಮರ 33.39 ಮೀಟರ್ ನಷ್ಟು ಉದ್ದವನ್ನು ಹೊಂದಿತ್ತು.

ರೊಮೇನಿಯ[ಬದಲಾಯಿಸಿ]

ರೋಮೆನಿಯಾದಲ್ಲಿ ಪಾಮ್ ಸಂಡೆ ಯನ್ನು ಡ್ಯುಮಿನಿಕ ಫ್ಲೋರಿಲೋರ್ ಎಂದು ಕರೆಯಲಾಗುತ್ತದೆ.

ಬಲ್ಗೇರಿಯ[ಬದಲಾಯಿಸಿ]

ಬಲ್ಗೇರಿಯಾದಲ್ಲಿ ಪಾಮ್ ಸಂಡೆ ಯನ್ನು ಸ್ವೆಟ್ ನಿಸ್ಟ ಎಂದು ಕರೆಯಲಾಗುತ್ತದೆ. ಹೂವಿಗೆ ಸಂಬಂಧಿಸಿದ ಹೆಸರನ್ನು ಹೊಂದಿರುವವರು (ಉದಾಹರಣೆಗೆ ಜವೈಟಕೊ, ಮಾರ್ಗರೀಟ, ಲಿಲಿಯ, ವಯಲೆಟ, ಯಾವೊರ್, ಡ್ರ್ಯಾವೊಕ್, ಜುಂಬ್ ಜುಲ್, ನೆವೆನ, ಟೆಮೆನ್ಯುಜೆಕ, ಇತ್ಯಾದಿ.) ಈ ದಿನವನ್ನು ಅವರ ನೇಮ್ ಡೇ ಯಾಗಿ ಆಚರಿಸಿಕೊಳ್ಳುತ್ತಾರೆ.

ದಿ ಫಿಲಿಪೈನ್ಸ್[ಬದಲಾಯಿಸಿ]

ಫಿಲಿಫೈನ್ಸ್ ನ ಕೆಲವು ಸ್ಥಳಗಳಲ್ಲಿ ಯೇಸುಕ್ರಿಸ್ತನ ವಿಜಯೋತ್ಸವದ ಪ್ರವೇಶವನ್ನು ಪುನರಭಿನಯಿಸಲಾಗುತ್ತದೆ. ಕ್ಯಾಥೊಲಿಕ್ ಪಾದ್ರಿ ಕುದುರೆಯ ಮೇಲೆ ಸವಾರಿ ಮಾಡುತ್ತಾನೆ ಹಾಗು ತಾಳೆಗರಿಗಳನ್ನು ಇಟ್ಟುಕೊಂಡಿರುವ ಸಮೂಹ ಅವನನ್ನು ಸುತ್ತುವರೆದಿರುತ್ತದೆ. ಕೆಲವೊಮ್ಮೆ ಮಹಿಳೆ ದೊಡ್ಡ ಬಟ್ಟೆಗಳನ್ನು ಅಥವಾ ಹೊದಿಕೆಗಳನ್ನು ಮೆರವಣಿಗೆಯ ಹಾದಿಯುದ್ದಕ್ಕೂ ಹಾಸುತ್ತಾಳೆ. ಪಾಲಸ್ಪಾಸ್ ಎಂದು ಕರೆಯಲಾಗುವ ತಾಳೆಗರಿಗಳನ್ನು (ತಾಳೆರೆಂಬೆಗಳನ್ನು) ಮಾಸ್(ಪ್ರಭುಭೋಜನ) ನಂತರ ಮನೆಗೆ ಕೊಂಡೊಯ್ಯಲಾಗುತ್ತದೆ ಅಥವಾ ಬಾಗಿಲಿನ ಮೇಲೆ ಅಥವಾ ಕಿಟಕಿಗಳ ಮೇಲೆ ತೂಗುಹಾಕಲಾಗುತ್ತದೆ.

ತಾಳೆಗರಿಗಳನ್ನು ಪವಿತ್ರಗೊಳಿಸಿದ ನಂತರ ಜನರು ಅವುಗಳನ್ನು ಅವರ ಮನೆಯ ಮುಂದೆ ಹಾಕುತ್ತಾರೆ. ಗರಿಗಳನ್ನು ಮನೆಯ ಮುಂದೆ ಇಟ್ಟುಕೊಳ್ಳುವ ನಿಜವಾದ ಕಾರಣ ಯೇಸುಕ್ರಿಸ್ತನನ್ನು ಸ್ವಾಗತಿಸುವುದಾದರೂ ಕೆಲವು ಫಿಲಿಫಿಯನ್ನರು ತಾಳೆಗರಿಗಳು ದುಷ್ಟಶಕ್ತಿಗಳನ್ನು ದೂರವಿರಿಸುತ್ತವೆ ಎಂದು ಹೇಳುತ್ತಾರೆ.

ಫಿನ್ಲೆಂಡ್[ಬದಲಾಯಿಸಿ]

ಫಿನ್ಲೆಂಡ್ ನಲ್ಲಿ ಮಕ್ಕಳು ಈಸ್ಟರ್ ನ ಮಾಟಗಾತಿಯರಂತೆ ವೇಷಧರಿಸಿ ನಾಣ್ಯಗಳಿಗಾಗಿ ಮತ್ತು ಸಕ್ಕರೆ ಮಿಠಾಯಿಗಳಿಗಾಗಿ ಸುತ್ತಮುತ್ತಲಿನ ಮನೆ ಮನೆಗೆ ಹೋಗುವುದಕ್ಕೆ ಈ ಹಬ್ಬವು ಜನಪ್ರಿಯವಾಗಿದೆ. "ವಿರ್ಪೊಮೆನೆನ್" ಎಂದು ಕರೆಯಲಾಗುವ ಹಳೆಯ ಕ್ಯಾರೆಲಿಯನ್ ಪದ್ಧತಿ ಇದಾಗಿದೆ.

ಇವನ್ನೂ ಗಮನಿಸಿ[ಬದಲಾಯಿಸಿ]

ಟಿಪ್ಪಣಿಗಳು[ಬದಲಾಯಿಸಿ]

 1. ಫ್ರೂಡ್ ಅಂಡ್ ಗ್ರೇವ್ಸ್ p.10

ಉಲ್ಲೇಖಗಳು[ಬದಲಾಯಿಸಿ]

 • ಫ್ರೂಡ್, J.D. ಅಂಡ್ ಗ್ರೇವ್ಸ್, M.A.R. ಸೀಸನ್ಸ್ ಅಂಡ್ ಸೆರಮನೀಸ್: ಟ್ಯೂಡರ್-ಸ್ಟ್ಯುವರ್ಟ್ ಇಂಗ್ಲೆಂಡ್. ಎಲಿಜಬೆತನ್ ಪ್ರಮೋಷನ್, 1992

ಬಾಹ್ಯ ಕೊಂಡಿಗಳು[ಬದಲಾಯಿಸಿ]

 •  Herbermann, Charles, ed. (1913). "Palm Sunday" . Catholic Encyclopedia. New York: Robert Appleton Company. {{cite encyclopedia}}: Cite has empty unknown parameters: |HIDE_PARAMETER4=, |HIDE_PARAMETER2=, |HIDE_PARAMETERq=, |HIDE_PARAMETER20=, |HIDE_PARAMETER5=, |HIDE_PARAMETER8=, |HIDE_PARAMETER7=, |HIDE_PARAMETER6=, |HIDE_PARAMETER9=, |HIDE_PARAMETER1=, and |HIDE_PARAMETER3= (help)